Friday, October 24, 2008

ಸುಷ್ಮಸಿಂಧುರವರ ಕನಸು

ಕನಸುಗಳಿಗಾಗಿಯೇ ಮೀಸಲಾಗಿಟ್ಟ ಕನ್ನಡ ತಾಣವೆಂದರೆ ಸುಷ್ಮಸಿಂಧುರವರ
ಕಂಡೆನೊಂದು ಕನಸು.
ಹಾಗೆಂದು ಇದು ಹಗಲುಗನಸಿನ ತಾಣವಲ್ಲ. ಅವರ ನೈಜ ಕನಸುಗಳ ತಾಣವಿದು.

ಕನಸುಗಳ ವೈಜ್ಞಾನಿಕ ಸಂಶೋಧನೆ ಖ್ಯಾತ ಮನೋವಿಜ್ಞಾನಿ ಫ್ರಾಯ್ಡ್‌ನಿಂದ ಆರಂಭವಾಯಿತೆನ್ನಬಹುದು. ಮನದ ಆಳದಲ್ಲಿ ಸರಿಸಿದ (repressed) ಅಥವಾ ಹುದುಗಿದ (suppressed) ಭಾವನೆಗಳು ಕನಸುಗಳನ್ನು ಹೇಗೆ ರಚಿಸುತ್ತವೆ ಎನ್ನುವದಕ್ಕೆ ಫ್ರಾಯ್ಡ್ ಅನೇಕ ವಿವರಣೆಗಳನ್ನು ನೀಡಿದರು.

ಸುಷ್ಮಸಿಂಧುರವರ ಕನಸುಗಳು ಸಾಮಾನ್ಯ ಕನಸುಗಳಿಗಿಂತ ಭಿನ್ನವಾಗಿವೆ ಎನ್ನುವದನ್ನು ಅವರ ತಾಣಕ್ಕೆ ಭೆಟ್ಟಿಯಿತ್ತವರೆಲ್ಲ ಕಂಡಿದ್ದಾರೆ.
ಈ ಕನಸುಗಳನ್ನು ಆಧರಿಸಿ, ಸುಷ್ಮಸಿಂಧುರವರು “ಪಯಣ ಸಾಗಿದಂತೆ” ಎನ್ನುವ ಒಂದು ಕಥಾಸಂಕಲನವನ್ನೇ ಬರೆದರು (೨೦೦೫).
ಇಲ್ಲಿಯ ಕತೆಗಳೂ ಸಹ ಸಾಮಾನ್ಯ ಕತೆಗಳಿಗಿಂತ ಭಿನ್ನವಾಗಿಯೇ ಇವೆ.

ಈ ಕತೆಗಳನ್ನು ನಾನು ‘ಅಂತರಂಗದ ತೊಳಲಾಟದ ಕತೆಗಳು’ ಎಂದು ಕರೆಯಲು ಬಯಸುತ್ತೇನೆ.
ಪ್ರತಿವ್ಯಕ್ತಿಯ ಮನಸ್ಸಿನಲ್ಲಿಯೂ ಅನೇಕ ದ್ವಂದ್ವಗಳು ಉದ್ಭವಿಸುತ್ತವೆ.
ಈ ದ್ವಂದ್ವಗಳು ಜೊತೆಜೊತೆಯಾಗಿಯೇ ಸಹವಾಸ ಮಾಡುತ್ತವೆ, ಹೋರಾಡುತ್ತವೆ;
ಕೆಲವೊಮ್ಮೆ ಒಂದು normal ಭಾವನೆಯ ಕೈ ಮೇಲಾಗಬಹುದು, ಕೆಲವೊಮ್ಮೆ ಅಸ್ವಾಭಾವಿಕ ಭಾವನೆಯೇ ಮೇಲೇರಬಹುದು.
ಈ ಭಾವನೆಗಳಿಗೆ ವ್ಯಕ್ತಿರೂಪ ನೀಡಿ ಬರೆದ ಕತೆಗಳು ಈ ಸಂಕಲನದಲ್ಲಿವೆ.

ಈ ಸಂಕಲನದ ಮೊದಲ ಕತೆ “ಅನ್ಯ” ಕಸ್ತೂರಿ ಮಾಸಪತ್ರಿಕೆಯಲ್ಲಿ ಪ್ರಕಟವಾಗಿತ್ತು.
ಶವಾಗಾರದ ರಾತ್ರಿ-ಕಾವಲುಗಾರನೊಬ್ಬನ ಕತೆಯಿದು.
ಈ ಕಾವಲುಗಾರನ inter action ಇರುವದು ಅಲ್ಲಿಯ ಶವಗಳ ಜೊತೆಗೆ ಮಾತ್ರ.
ಆತನಿಗೆ real ವ್ಯಕ್ತಿಗಳ ಜೊತೆಗೆ ಸಂಬಂಧ ಸಾಧ್ಯವಿಲ್ಲ.
ತನ್ನ ಅಂತರಂಗದಲ್ಲಿಯೇ ಬಂದಿಯಾದ ವ್ಯಕ್ತಿಯ ಚಿತ್ರಣ ಇಲ್ಲಿ ಸಮರ್ಥವಾಗಿ ಬಂದಿದೆ.

“ಬೆಳಕನ್ನರಸುತ್ತಾ” ಹಾಗು “ಶೋಧನಾ” ಕತೆಗಳಲ್ಲಿ ಕಾಣುವ ಮನೋಸ್ಥಿತಿ ಬೇರೆ ಬಗೆಯದು.
ಅಂತಿಮ ಸತ್ಯ ಏನು ಎನ್ನುವದನ್ನು ಅರಿತುಕೊಳ್ಳಲು ಸಿದ್ಧಾರ್ಥನು ಮಧ್ಯರಾತ್ರಿಯಲ್ಲಿ ಎದ್ದು ಹೋದನಲ್ಲ----ಆ ಬಗೆಯ ತೊಳಲಾಟದ ಕತೆಗಳಿವು.

ಈ ಕಥಾಸಂಕಲನದ ವಿವಿಧ ಕತೆಗಳಲ್ಲಿ ನಾವು ಕಾಣುವದು ಈ ತೊಳಲಾಟವನ್ನು ;
ಪಂಜರದಲ್ಲಿ ಸಿಲುಕಿದ ಹಕ್ಕಿ ಹೊರಹಾರಲೆಂದು ರೆಕ್ಕೆ ಬಡೆಯುವ ಯತ್ನವನ್ನು.

ಉತ್ತಮ ಲೇಖಕಿಯೂ ಆದ ಸುಷ್ಮಸಿಂಧು ತಮ್ಮ ಕನಸುಗಳಿಂದಾಗಿ ನಮ್ಮೆಲ್ಲರ ಕುತೂಹಲ ಕೆರಳಿಸಿದ್ದಾರೆ.
ಅವರ ಮನೋಪಕ್ಷಿಯ ಪಯಣ ಸಫಲವಾಗಲಿ.

12 comments:

Anonymous said...

Sir,
I need your mail address.

Raghavendra

sunaath said...

raghavendra,
It is sunaath@gmail.com

Sushma Sindhu said...

ಹಾಯ್ ಸುನಾಥ ಕಾಕಾ,
ನನ್ನ ಕನಸುಗಳು ಹಾಗೂ 'ಪಯಣ ಸಾಗಿದಂತೆ' ಯನ್ನು ಇಷ್ಟು ವಿಶಿಷ್ಠವಾಗಿ ವಿಶ್ಲೇಷಿಸಿ, ನಿಮ್ಮ ಬ್ಲಾಗಿನಲ್ಲಿ ಪ್ರಕಟಿಸಿ, ಪರಿಚಯಿಸಿದಕ್ಕಾಗಿ ತು೦ಬಾ ಧನ್ಯವಾದಗಳು.

sunaath said...

ಸುಷ್ಮಸಿಂಧು,
ಕನ್ನಡಕ್ಕೊಂದು ಅನನ್ಯ ತಾಣ ಕೊಟ್ಟಿದ್ದಕ್ಕಾಗಿ ನಿನಗೇ ಧನ್ಯವಾದಗಳನ್ನು ನಾವೆಲ್ಲ ಹೇಳಬೇಕು.
-ಸುನಾಥ ಕಾಕಾ

Ittigecement said...

ಸುನಾಥ್ ಸರ್...
ಮಠಗಳಿಗೆ ದೇವಾಲಯಗಳನ್ನು ಕೊಡುವದು ಸರಿಯೆ..? ದಯವಿಟ್ಟು ಲೇಖನ ಬರೆದು ಉಪಕರಿಸುವಿರಾ? ಒಂದು ಆರೋಗ್ಯ ಪೂರ್ಣವಾದ ಚರ್ಚೆ ಮಾಡೊಣವೇ..? ನೀವೆ ಬರೆಯಲು ಸೂಕ್ತ ಅನಿಸುತ್ತಿದೆ ದಯವಿಟ್ಟು ಬರೆಯಿರಿ..
please...

sunaath said...

ಪ್ರಕಾಶ ಹೆಗಡೆಯವರೆ,
ಈ ವಿಷಯದ ಬಗೆಗೆ ನನಗೆ ಏನೇನೂ ತಿಳಿವಳಿಕೆ ಇಲ್ಲ. ದಯವಿಟ್ಟು ಕ್ಷಮಿಸಿರಿ.
ಇತ್ತೀಚೆಗೆ ಗೋಕರ್ಣ ದೇವಾಲಯವನ್ನು ಒಂದು ಮಠಕ್ಕೆ ಹಸ್ತಾಂತರಿಸಿದ್ದನ್ನು ಪತ್ರಿಕೆಗಳಲ್ಲಿ ಓದಿದ್ದೇನೆ. ಆದರೆ ಅದರ ಸಾಧಕ ಬಾಧಕಗಳನ್ನಾಗಲೀ, ಕಾನೂನಿನ ಸಮಸ್ಯೆಯನ್ನಾಗಲೀ ನಾನು ಅರಿತಿಲ್ಲ.

Anonymous said...

ಶ್ರೀ ವಸುಧೇಂದ್ರರ ಪುಸ್ತಕಗಳು 'ಮಿಂಚು-ಮಾಧ್ಯಮ'ದಲ್ಲಿ ಲಭ್ಯವೆ ? ಹೌದಾದರೆ, ಮಿಂಚು-ಮಾಧ್ಯಮದ ವಿಳಾಸ ಏನು ?

sunaath said...

ಕಟ್ಟಿಯವರೆ,
ವಸುಧೇಂದ್ರರ ಕೃತಿಗಳ ಪ್ರತಿಗಳಿಗಾಗಿ ಕೆಳಗಿನ ವಿಳಾಸಕ್ಕೆ ಬರೆಯಿರಿ:
"ಛಂದ ಪುಸ್ತಕ
ಐ-೦೦೪, ಮಂತ್ರಿ ಪ್ಯಾರಡೈಸ್,
ಬನ್ನೇರುಘಟ್ಟ ರಸ್ತೆ,
ಬೆಂಗಳೂರು-೭೬"
ಸೆಲ್: ೯೮೪೪೪ ೨೨೭೮೨
email: chandapustaka@yahoo.com

Shriniwas M Katti said...

ವಿಳಾಸಕ್ಕೆ ಧನ್ಯವಾದಗಳು. ಮರಳಿ ಭಾರತಕ್ಕೆ ಬಂದನಂತರವೇ ಓದಲು ಸಾಧ್ಯ. ತಂತ್ರಾಂಶದಲ್ಲಿ ಲಭ್ಯವಿಲ್ಲವೆ?

ಶ್ರೀನಿವಾಸ ಮ.ಕಟ್ಟಿ, ಡಬ್ಲಿನ್, ಓಹೈಒ,ಅಮೆರಿಕ.

shivu.k said...

ಸುನಾಥ್ ಸಾರ್,
ನೀವು ಈ ರೀತಿ ಬೇರೆಯವರ ಒಳ್ಳೇ ಕೆಲಸಗಳನ್ನು ಹಾಗೂ ಅವರ ಸಾದನೆಗಳನ್ನು ನಮಗೆಲ್ಲಾ ಪರಿಚಯಿಸುವುದು ನಿಮ್ಮ ಸೇವಾಮನೋಭಾವನೆಯನ್ನು ಪ್ರತಿಬಿಂಬಿಸುತ್ತದೆ. ನಾನು ಒಮ್ಮೆ ಸುಷ್ಮಾ ಸಿಂಧು ಅವರ ಬ್ಲಾಗಿಗೆ ಬೇಟಿ ಕೊಡುತ್ತೇನೆ.
thanks.

sunaath said...

ಕಟ್ಟಿಯವರೆ,
ವಸುಧೇಂದ್ರರ ಕತೆಗಳು ಅಂತರ್ಜಾಲದಲ್ಲಿ ಲಭ್ಯವಿಲ್ಲ ಎಂದು ನನ್ನ ಭಾವನೆ. "ಸೀಳು ಲೋಟ" ಕತೆಯನ್ನು ಜಾಲದಲ್ಲಿ ನೀಡಿದ 'ಅಪಾರ'ರು, ವಸುಧೇಂದ್ರರ ಸಂಕಲನಕ್ಕೆ ಮುಖಪುಟ ವಿನ್ಯಾಸ ಮಾಡಿದ್ದಾರೆ. ಅವರು"ಸೀಳು ಲೋಟ"ವನ್ನು ತಮ್ಮ blogದಲ್ಲಿ ನೀಡಿದ್ದರು.

sunaath said...

ಶಿವು,
ನಮ್ಮ ಸಹಪ್ರಯಾಣಿಕರ ವೈಶಿಷ್ಟ್ಯಪೂರ್ಣ blogಗಳಿಗೆ ಭೆಟ್ಟಿ ಇತ್ತು, ಖುಶಿ ಪಟ್ಟಿದ್ದರಿಂದಲೇ, ಕೆಲವೊಮ್ಮೆ ಅವರ blogಗಳ
ಬಗೆಗೆ ಬರೆಯಲು ಪ್ರೇರಣೆ ದೊರೆಯುವದು.
In fact ನಮ್ಮಲ್ಲಿ ಅನೇಕ ಒಳ್ಳೆಯ blogs ಇವೆ.(ನಿಮ್ಮದೂ ಸೇರಿದಂತೆ.) ಇವುಗಳಿಗೆ ಭೇಟಿ ನೀಡುವದು ಒಂದು ಉಲ್ಲಾಸ ಪಯಣವಾಗಿದೆ.