tag:blogger.com,1999:blog-5939841257923965225.post6502034161852927518..comments2024-02-29T07:14:52.690+05:30Comments on ಸಲ್ಲಾಪ: ಮೃಚ್ಛಕಟಿಕಮ್-೨sunaathhttp://www.blogger.com/profile/13386371953472087631noreply@blogger.comBlogger20125tag:blogger.com,1999:blog-5939841257923965225.post-83313256654886433972020-02-08T20:34:32.984+05:302020-02-08T20:34:32.984+05:30‘ಮೃಚ್ಛಕಟಿಕಮ್’ ಎನ್ನುವ ಪದವು ‘ಮೃತ್’ ಹಾಗು ‘ಶಕಟಿಕಮ್’ ಎನ...‘ಮೃಚ್ಛಕಟಿಕಮ್’ ಎನ್ನುವ ಪದವು ‘ಮೃತ್’ ಹಾಗು ‘ಶಕಟಿಕಮ್’ ಎನ್ನುವ ಎರಡು ಪದಗಳ ಕೂಡುರೂಪ. ಮೃತ್ ಎಂದರೆ ಮಣ್ಣು. ಶಕಟಿಕಾ ಎಂದರೆ ಮಣ್ಣಿನಿಂದ ಮಾಡಿದ ಆಟದ ಬಂಡಿ. ಮೃತ್+ಶಕಟಿಕಾ = ಮೃಚ್ಛಕಟಿಕಾ. ಮೃಚ್ಛಕಟಿಕಾಕ್ಕೆ ಸಂಬಂಧಿಸಿದ ಸಂಗತಿ ‘ಮೃಚ್ಛಕಟಿಕಮ್’. ಚಾರುದತ್ತನ ಮಗನು ಮಣ್ಣಿನಿಂದ ಮಾಡಿದ ಆಟದ ಬಂಡಿಯೊಂದಿಗೆ ಆಡುತ್ತಿರುತ್ತಾನಷ್ಟೆ? ಆ ಎಳೆಯ ಮೇಲೆಯೇ ನಾಟಕ ಮುಂದುವರಿದಿದೆ. ಆದುದರಿಂದ ನಾಟಕದ ಹೆಸರು ಮೃಚ್ಛಕಟಿಕಮ್. ಆದರೆ ಸಣ್ಣ ಎಳೆಯಿಂದ ಪ್ರಾರಂಭವಾದ ಈ ನಾಟಕವು ಸಂಕೀರ್ಣವಾಗಿ ಬೆಳೆಯುತ್ತ ಹೋಗುತ್ತದೆ. sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-17748458227532079582020-02-07T22:35:50.969+05:302020-02-07T22:35:50.969+05:30ಮೃಚ್ಛಕಟಿಕ ಪದದ ಅರ್ಥ ಏನು? ಮೃಚ್ಛಕಟಿಕ ಪದದ ಅರ್ಥ ಏನು? ಮಹಾಂತೇಶ ಹಾಲಶೆಟ್ಟಿ ಇಲಕಲ್https://www.blogger.com/profile/17851347610541009370noreply@blogger.comtag:blogger.com,1999:blog-5939841257923965225.post-54874797483591972672017-07-29T14:42:04.422+05:302017-07-29T14:42:04.422+05:30ರಾಮಪ್ರಸಾದರೆ,
ಈ ವಿವರಕ್ಕಾಗಿ ಧನ್ಯವಾದಗಳು. ಆದರೆ, ಸಂಸ್ಕೃ...ರಾಮಪ್ರಸಾದರೆ,
ಈ ವಿವರಕ್ಕಾಗಿ ಧನ್ಯವಾದಗಳು. ಆದರೆ, ಸಂಸ್ಕೃತ ನಾಟಕದಲ್ಲಿ, ಶ್ಯಾಲಕನನ್ನು ‘ಶಕಾರ’ ಎಂದು ಹೆಸರಿಸಿದ್ದರ ಔಚಿತ್ಯ ತಿಳಿಯಲಿಲ್ಲ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-67193444585816461482017-07-29T03:48:38.270+05:302017-07-29T03:48:38.270+05:30ಅಂದ ಹಾಗೆ ವಸಂತ ಸೇನೆ ಅನ್ನುವ ಪದವನ್ನ "ವಸಂತಶೇನೆ&qu...ಅಂದ ಹಾಗೆ ವಸಂತ ಸೇನೆ ಅನ್ನುವ ಪದವನ್ನ "ವಸಂತಶೇನೆ" ಎಂದು ಉಚ್ಚರಿಸುವುದು ಕೇವಲ ಕನ್ನಡ ಅನುವಾದದಲ್ಲಿ ಮಾತ್ರ. ಮೂಲದಲ್ಲಿ ಹಾಗಿಲ್ಲ/hamsanandihttps://www.blogger.com/profile/15560853535208005782noreply@blogger.comtag:blogger.com,1999:blog-5939841257923965225.post-35043156467418087002016-05-26T17:35:38.756+05:302016-05-26T17:35:38.756+05:30ಸಿಂಧು,
ಶೂದ್ರಕನ ‘ಮೃಚ್ಛಕಟಿಕಮ್’ ಸುಧಾರಸವಿದ್ದಂತೆ. ನನ್ನ ...ಸಿಂಧು,
ಶೂದ್ರಕನ ‘ಮೃಚ್ಛಕಟಿಕಮ್’ ಸುಧಾರಸವಿದ್ದಂತೆ. ನನ್ನ ವ್ಯಾಖ್ಯಾನ ಬರೀ ನೀರುಮಜ್ಜಿಗೆ. ಆದರೆ, ನಾಟಕವೇ ಅಷ್ಟು ಚೆನ್ನಾಗಿ ಇರುವಾಗ, ವ್ಯಾಖ್ಯಾನವು ಅಲ್ಪಸ್ವಲ್ಪವಾದರೂ ಸವಿಯಾಗದಿದ್ದೀತೆ? ನೀನಾಸಂದಲ್ಲಿ ನಟರಾಜರ ತರಬೇತಿಯನ್ನು ನೋಡಿದ ನೀವು ಅದೃಷ್ಟವಂತರು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-76532667660634193122016-05-25T14:26:37.904+05:302016-05-25T14:26:37.904+05:30ಪ್ರೀತಿಯ ಸುನಾಥ ಕಾಕಾ..
ಲೇಟ್ ಎಂಟ್ರಿ..
ಎಂಥಹ ರಸಗವಳ ಉಣ...ಪ್ರೀತಿಯ ಸುನಾಥ ಕಾಕಾ..

ಲೇಟ್ ಎಂಟ್ರಿ..
ಎಂಥಹ ರಸಗವಳ ಉಣಬಡಿಸಿದ್ದೀರಿ.
ಏಣಗಿ ನಟರಾಜರ ಶಕಾರನನ್ನು ಒಂದಾನೊಂದು ಕಾಲದಲ್ಲಿ ನಾನು ಚಿಕ್ಕವಳಿದ್ದಾಗ ನೋಡಿದ್ದೆ. ಅವರು ನೀನಾಸಂನಲ್ಲಿ ಕಲಿಯುತ್ತಿದ್ದರು ಆಗ.
ನಾವು ಮಕ್ಕಳ ಬೇಸಿಗೆ ತಂಡದಲ್ಲಿದ್ದು ಅವರಿಗೆ ಸ ಹೇಳಲು ಬರುವದೋ ಇಲ್ಲವೋ ಅಂತ ಅವರಿಗೆ ಆ ಥರದ ಪದಗಳನ್ನು ಹೇಳಿಸುತ್ತಿದ್ದುದು ಈಗೊಂದು ಮಧುರ ನೆನಪು. ಎಂಥ ಕಲಾವಿದ ಅವರು!

ನಿಮ್ಮ ಮೃಚ್ಛಕಟಿಕ ರಸಪಾನದ ಬಗ್ಗೆ ನನ್ನ ಮಾತು ಬೇಡವೇ ಬೇಡ. ಸವಿದಷ್ಟೂ ಸವಿಯು.
ಓದುತ್ತಾ ಇದ್ದೇನೆ, ಒಂದೊಂದಾಗಿ...
ದಿವ್ಯಾನುಭವ.

ಪ್ರೀತಿಯಿಂದ,ಸಿಂಧುಸಿಂಧು sindhuhttps://www.blogger.com/profile/11363295766940671498noreply@blogger.comtag:blogger.com,1999:blog-5939841257923965225.post-61621428046831965222016-04-05T23:30:45.135+05:302016-04-05T23:30:45.135+05:30ಅನಿಲರೆ,
ಶೂದ್ರಕನಂತಹ ನಾಟಕಕಾರನನ್ನು, ಚಾರ್ವಾಕನಂತಹ ದಾರ್ಶ...ಅನಿಲರೆ,
ಶೂದ್ರಕನಂತಹ ನಾಟಕಕಾರನನ್ನು, ಚಾರ್ವಾಕನಂತಹ ದಾರ್ಶನಿಕನನ್ನು ಆದರಿಸಿದ ಸಂಸ್ಕೃತಿ ನಮ್ಮದು. ಇದು ಸಹನಶೀಲತೆಯಲ್ಲದೆ ಮತ್ತೇನು? ನಿಮ್ಮಂತೆಯೇ ನಾನೂ ಸಹ ಈ ಭಾರತೀಯ ಪರಂಪರೆಯ ಬಗೆಗೆ ಹೆಮ್ಮೆಪಟ್ಟುಕೊಳ್ಳುತ್ತೇನೆ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-69948346438549321842016-04-05T22:06:17.477+05:302016-04-05T22:06:17.477+05:30'ಚಿಕ್ಕ ಮಣ್ಣಿನ ಬಂಡಿ'ಯಂತೆ ಚಿಕ್ಕದಾಗಿ ಬರೆದ ಮೊದ...'ಚಿಕ್ಕ ಮಣ್ಣಿನ ಬಂಡಿ'ಯಂತೆ ಚಿಕ್ಕದಾಗಿ ಬರೆದ ಮೊದಲ ಕಂತು ಕಂಡು 'ಇದೇನು ಬರೀ ಟ್ರೇಲರ್ ತೋರಿಸ್ತಾ ಇದ್ದಾರಲ್ಲ ಸುನಾಥ ಅವರು ಅಂದುಕೊಂಡಿದ್ದೆ, ಎರಡನೇ ಕಂತು ನೋಡಿ ಖುಷಿಯಾದೆ. ನನಗೆ ಹಿಡಿಸಿದ ಸಂಸ್ಕೃತದ ಸುಂದರ ನಾಟಕದಲ್ಲಿ ಇದೂ ಒಂದು. ಆ ಕಾಲದಲ್ಲೇ (3BC to 5AD) ಇಂಥಹ ಧೈರ್ಯದ ನಾಟಕ. ಪ್ರೆಂಚ್ ರೆವಲ್ಯೂಷನ ಬಗ್ಗೆ (೧೮೪೫) ರಲ್ಲಿ ಕಾರ್ಲ್ ಮಾರ್ಕ್ಸ್ ಹೀಗೆಯೇ ಜನ ದಂಗೆ ಎದ್ದು ರಾಜರ ದರ್ಪ ಮುರಿಯುತ್ತಾರೆ ಎಂದದ್ದಕ್ಕೆ ದೇಶ ಬ್ರಷ್ಟನಾಗಬೇಕಾಯಿತು. ಸಾವಿರ ವರುಷಕ್ಕೂ ಮೊದಲು ಇಂಥಹ ನಾಟಕ ಬರೆದ ಶೂದ್ರಕ ಎಂದರೆ ಭಾರತೀಯ ಸಂಸ್ಕೃತಿ ಎಷ್ಟು ಸಹನಶೀಲವಾಗಿತ್ತು ಎಂದು ನನಗೆ ಆಶ್ಚರ್ಯವಾಗುತ್ತದೆ ಅಂತೆಯೇ ಹೆಮ್ಮೆ ಕೂಡಾ.
~ಅನಿಲ Anonymoushttps://www.blogger.com/profile/10355108254867937880noreply@blogger.comtag:blogger.com,1999:blog-5939841257923965225.post-5024603423046320992016-04-04T23:18:35.753+05:302016-04-04T23:18:35.753+05:30ರಾಮಪ್ರಸಾದರೆ,
ಧನ್ಯವಾದಗಳು. ಇದೀಗ ಮೊದಲ ಉಪನ್ಯಾಸವನ್ನು ಕ...ರಾಮಪ್ರಸಾದರೆ,
ಧನ್ಯವಾದಗಳು. ಇದೀಗ ಮೊದಲ ಉಪನ್ಯಾಸವನ್ನು ಕೇಳಿದೆ. ವಿದ್ವತ್ಪೂರ್ಣವಾದ ಉಪನ್ಯಾಸ. ಅನೇಕ ಮಾಹಿತಿಗಳು ದೊರೆತವು. ಉಳಿದ ಉಪನ್ಯಾಸಗಳನ್ನು ಇನ್ನು ಮೇಲೆ ಕೇಳುವೆ. ಕೊಂಡಿಯನ್ನು ಕೊಟ್ಟದ್ದಕ್ಕಾಗಿ ಮತ್ತೊಮ್ಮೆ ಧನ್ಯವಾದಗಳು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-13842768902639060002016-04-04T04:48:36.804+05:302016-04-04T04:48:36.804+05:30ಸುನಾಥರೆ, ಇಲ್ಲಿವೆ - (ಪೂರ್ಣ ಇದ್ದಂತಿಲ್ಲ)
Part 1: ...ಸುನಾಥರೆ, ಇಲ್ಲಿವೆ - (ಪೂರ್ಣ ಇದ್ದಂತಿಲ್ಲ)

Part 1: https://www.youtube.com/watch?v=jJMaOMPP_yM

Part 2: https://www.youtube.com/watch?v=RFlGUx1nN7w

Part 3: https://www.youtube.com/watch?v=VlYGRKOqNhw

hamsanandihttps://www.blogger.com/profile/15560853535208005782noreply@blogger.comtag:blogger.com,1999:blog-5939841257923965225.post-46235094870187191492016-04-02T00:19:55.819+05:302016-04-02T00:19:55.819+05:30ಪ್ರಭಾಮಣಿ ಮೇಡಮ್,
ಒಂದು ಕಾಲಘಟ್ಟದ ಸಾಮಾಜಿಕ, ರಾಜಕೀಯ ಸ್ಥಿ...ಪ್ರಭಾಮಣಿ ಮೇಡಮ್,
ಒಂದು ಕಾಲಘಟ್ಟದ ಸಾಮಾಜಿಕ, ರಾಜಕೀಯ ಸ್ಥಿತಿಯನ್ನು ತೋರಿಸುವ ಸಂಸ್ಕೃತ ನಾಟಕಗಳಲ್ಲಿ ಇದೇ ಪ್ರಮುಖವಾದದ್ದು ಎಂದು ತಿಳಿದಿದ್ದೇನೆ. ಮುದ್ರಾರಾಕ್ಷಸ ನಾಟಕವು ಈ ಅರ್ಹತೆಗೆ ಕೊಂಚ ಹತ್ತಿರ ಬಂದೀತು!sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-83554975574162499712016-04-02T00:17:27.309+05:302016-04-02T00:17:27.309+05:30ಚುಕ್ಕಿ, ನಿಮ್ಮ ಅನುಮಾನ ಸರಿಯಾಗಿಯೇ ಇದೆ. ರಾಜನ ಮೈದುನನು ಸ...ಚುಕ್ಕಿ, ನಿಮ್ಮ ಅನುಮಾನ ಸರಿಯಾಗಿಯೇ ಇದೆ. ರಾಜನ ಮೈದುನನು ಸಕಾರವನ್ನು ಶಕಾರವಾಗಿ ಉಚ್ಚರಿಸುವ ಕಾರಣದಿಂದಾಗಿಯೇ, ಆತನಿಗೆ ನಾಟಕದಲ್ಲಿ ಶಕಾರ ಎನ್ನುವ ಅಡ್ಡಹೆಸರನ್ನು ಕೊಡಲಾಗಿದೆ. ನಾಟಕದ ಸಂಭಾಷಣೆಗಳು ತುಂಬ ರಸವತ್ತಾಗಿವೆ. ಪೂರ್ತಿ ನಾಟಕವನ್ನು ಓದಿದರೆ ಮಾತ್ರ, ನಿಮಗೆ ರಸಾಸ್ವಾದವಾಗಲು ಸಾಧ್ಯ. ನನ್ನ ವ್ಯಾಖ್ಯಾನವು ಮೂಲನಾಟಕದ ೦.೦೧ ಶತಾಂಶದಷ್ಟೂ ಸಹ ರಸವನ್ನು ಕೊಡಲು ಸಾಧ್ಯವಿಲ್ಲ! ಬನ್ನಂಜೆಯವರ ಅನುವಾದವು ಮತ್ತೊಮ್ಮೆ ದೊರೆತರೆ, ನಿಮಗೆ ಪ್ರಕಾಶಕರ ವಿಳಾಸ ತಿಳಿಸೋಣವೆಂದುಕೊಂಡು ಆ ಪುಸ್ತಕವನ್ನು ಹುಡುಕಿದೆ. ಸಿಗಲಿಲ್ಲ. ಅದು ದೊರೆತರೆ, ಮುಂದಿನ ಭಾಗದಲ್ಲಿ ತಿಳಿಸುತ್ತೇನೆ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-8816695892043796042016-04-01T23:59:46.687+05:302016-04-01T23:59:46.687+05:30ರಾಮಪ್ರಸಾದರೆ, ಶತಾವಧಾನಿ ಗಣೇಶರ ಭಾಷಣವನ್ನು ಅಂತರಜಾಲದಲ್ಲಿ...ರಾಮಪ್ರಸಾದರೆ, ಶತಾವಧಾನಿ ಗಣೇಶರ ಭಾಷಣವನ್ನು ಅಂತರಜಾಲದಲ್ಲಿ ಕೇಳಲು ಸಾಧ್ಯವಾದೀತೆ? ನಿಮ್ಮಲ್ಲಿ ಇದರ ಕೊಂಡಿ ಲಭ್ಯವಿದ್ದರೆ, ದಯವಿಟ್ಟು ಕೊಡುವಿರಾ?sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-51445235067068839812016-04-01T23:53:09.892+05:302016-04-01T23:53:09.892+05:30ರಾಮಪ್ರಸಾದರೆ, ಧನ್ಯವಾದಗಳು. ಶೂದ್ರಕನ ‘ಮೃಚ್ಛಕಟಿಕಮ್’ ನಾಟ...ರಾಮಪ್ರಸಾದರೆ, ಧನ್ಯವಾದಗಳು. ಶೂದ್ರಕನ ‘ಮೃಚ್ಛಕಟಿಕಮ್’ ನಾಟಕವು ರಾಜಾಸ್ಥಾನದಲ್ಲಿ ಅಭಿನಯಿಸಲ್ಪಡುತ್ತಿತ್ತು ಎನ್ನುವದರ ಬಗೆಗೆ ನನಗೆ ವೈಯಕ್ತಿಕ ಸಂದೇಹವಿದೆ. ರಾಜನ ಶ್ಯಾಲಕನು ಪಶುಸಮಾನನಾಗಿರುವಂತಹ ಹಾಗು ಕೊನೆಯಲ್ಲಿ ರಾಜನ ಕೊಲೆಯಾಗುವಂತಹ ನಾಟಕವನ್ನು ರಾಜಾಸ್ಥಾನದಲ್ಲಿ ಅಥವಾ ಅಂತಃಪುರದಲ್ಲಿ ಪ್ರದರ್ಶಿಸುವುದು ಸಾಧ್ಯವೆಂದು ನನಗೆ ತೋರುವುದಿಲ್ಲ. ಇದು ಊಹೆ ಮಾತ್ರ.
ಇನ್ನು ಶೂದ್ರಕನು ಬ್ರಾಹ್ಮಣ ರಾಜನಾಗಿರಬಾರದೆಂದೂ ನಾನು ಹೇಳಲಾರೆ. ಇಲ್ಲಿಯೂ ಸಹ ನಾನು ಕೆಲವು ಅನುಮಾನಗಳ ಮೂಲಕ ನನ್ನ ತರ್ಕವನ್ನು ಓದುಗರ ಎದುರಿಗೆ ಇರಿಸಿದ್ದೇನೆ, ಅಷ್ಟೆ.
sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-13198937311041038252016-04-01T23:05:09.824+05:302016-04-01T23:05:09.824+05:30RJ, ತಮ್ಮ ಅನುಮಾನವು ಸಮಂಜಸವಾಗಿದೆ. ‘ಸ’ಕಾರದ ಬದಲು ‘ಶ’ಕಾರ...RJ, ತಮ್ಮ ಅನುಮಾನವು ಸಮಂಜಸವಾಗಿದೆ. ‘ಸ’ಕಾರದ ಬದಲು ‘ಶ’ಕಾರವನ್ನು ಉಚ್ಚರಿಸುವದರಿಂದ ಈತನಿಗೆ ಶಕಾರನೆನ್ನುವ ಅಡ್ಡಹೆಸರನ್ನು ಕೊಡಲಾಗಿದೆ. ಈ ಮೂಲಕ ನಾಟಕಕಾರನು ಶಕಾರನ ವಿದ್ಯಾಹೀನತೆಯನ್ನು ತೋರಿಸುವದರ ಜೊತೆಗೇ, ವಿನೋದವನ್ನೂ ಸೃಷ್ಟಿಸಿದ್ದಾನೆ. ಬನ್ನಂಜೆ ಗೋವಿಂದಾಚಾರ್ಯರು ಮಾಡಿದ ಮೃಚ್ಛಕಟಿಕಮ್ ನಾಟಕದ ಅನುವಾದವನ್ನು ನಾನು ಓದಿದ್ದೇನೆ. ಆದರೆ, ನಾನು ಕನ್ನಡ ಶಾಲೆಯಲ್ಲಿ ಕಲಿಯುತ್ತಿದ್ದಾಗ, ನಮಗೆ ‘ಶಕಾರನ ಶಾರೋಟು’ ಎನ್ನುವ extractಅನ್ನು ಪಠ್ಯವಾಗಿ ಹಚ್ಚಿದ್ದರು. ಇದರ ರಚಕರು ಯಾರು ತಿಳಿದಿಲ್ಲ. ಬಹುಶಃ ರಾಜರತ್ನಮ್ ಇರಬಹುದು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-11066356464130194942016-04-01T00:42:58.215+05:302016-04-01T00:42:58.215+05:30ಮೃಚ್ಛಕಟಿಕ ನಾಟಕ ರಸಾಸ್ವಾದ ಎಂಬ ಭಾಷಣಮಾಲಿಕೆಯೊಂದಿದೆ - ಶತ...ಮೃಚ್ಛಕಟಿಕ ನಾಟಕ ರಸಾಸ್ವಾದ ಎಂಬ ಭಾಷಣಮಾಲಿಕೆಯೊಂದಿದೆ - ಶತಾವಧಾನಿ ಗಣೇಶರದ್ದು. ಈ ನಾಟಕ ಓದಿದವರು, ಅಥವಾ ಅದರ ಬಗ್ಗೆ ಕೇಳಿದವರು ತಪ್ಪದೇ ಕೇಳಬೇಕಾದ ಭಾಷಣಮಾಲಿಕೆ ಅದು.hamsanandihttps://www.blogger.com/profile/15560853535208005782noreply@blogger.comtag:blogger.com,1999:blog-5939841257923965225.post-15733638680078615302016-04-01T00:41:40.480+05:302016-04-01T00:41:40.480+05:30ಕಾಳಿದಾಸ ಭಾಸಾದಿಗಳ ನಾಟಕಗಳು ಅಂತಃಪುರವಿನೋದಕ್ಕೆಂದು ಬರೆದಿ...ಕಾಳಿದಾಸ ಭಾಸಾದಿಗಳ ನಾಟಕಗಳು ಅಂತಃಪುರವಿನೋದಕ್ಕೆಂದು ಬರೆದಿದ್ದು, ಮೃಚ್ಛಕಟಿಕವು ಜನಸಾಮಾನ್ಯರಿಗೆ ಎಂದು ಬರೆದದ್ದು ಎಂದು ವಿಂಗಡಿಸುವುದು ತಪ್ಪಾಗುತ್ತದೆ. ಈ ಎಲ್ಲ ನಾಟಕಗಳೂ ಎಲ್ಲರೂ ನೋಡಲೆಂದೇ ಬರೆದವುಗಳು. ಸಾಮಾನ್ಯವಾಗಿ ಈ ಎಲ್ಲವೂ ಕೂಡ ಬಯಲಾಟದಂತಹ ಹೊರಾಂಗಣ ರಂಗದಲ್ಲೂ, ಮತ್ತೆ ಈಗಿನ ರೀತಿಯ ಒಳಾಂಗಣ ರಂಗದಲ್ಲೂ ಎರಡೂ ಕಡೆ ಪ್ರಯೋಗವಾಗುತ್ತಿದ್ದವು ಎಂದು ಸಿದ್ದಮಾಡಬಹುದು. ನಾಟ್ಯಶಾಸ್ತ್ರವೇ ಕೊಡುವ ಹತ್ತುಬಗೆಯ ರೂಪಕಗಳಲ್ಲಿ ಮೃಚ್ಛಕಟಿಕವು ಪ್ರಕರಣ ಎಂಬ ಪ್ರಕಾರಕ್ಕೆ ಸೇರುತ್ತದೆ. ಹಾಗಾಗಿ ಇದು ಶೂದ್ರಕ ಹೊಸದಾಗಿ ಕಂಡುಹಿಡಿದ ಪ್ರಕಾರವೇನಲ್ಲ. ಆದರೆ ಎಲ್ಲಕ್ಕಿಂತ ಹೆಚ್ಚು ಪ್ರಸಿದ್ಧ ಪ್ರಕರಣ ಎನ್ನುವುದರಲ್ಲಿ ಅನುಮಾನವಿಲ್ಲ.

ಇನ್ನು ಇವನ ಹೆಸರು ಶೂದ್ರಕನೆಂದು ಇರುವ ಬಗ್ಗೆ: ಈ ಹೆಸರಿನಿಂದ ಮಾತ್ರಕ್ಕೆ ಇವನು ರಾಜನಾಗಿದ್ದಿರಬಹುದಾದದ್ದನ್ನೂ, ಅಥವಾ ಇವನು ಬ್ರಾಹ್ಮಣನೆಂದು ಹೇಳಿಕೊಂಡಿರುವುದನ್ನೂ ತಳ್ಳಿಹಾಕಲಾಗುವುದಿಲ್ಲ. ಉದಾಹರಣೆಗೆ ಗುಪ್ತ ಎಂದು ವೈಶ್ಯಸೂಚಕ ಹೆಸರನ್ನು ಹೊಂದಿದ್ದ, ಬ್ರಾಹ್ಮಣನೆಂದು ತಿಳಿದಿರುವ ಅಭಿನವಗುಪ್ತನನ್ನು ನಾವು ಕಂಡೇ ಇದ್ದೇವೆ. ತನ್ನ ಸಾವಿನ ಬಗ್ಗೆ ಇವನು ತಾನೇ ಹೇಗೆ ಬರೆದುದುಕೊಂಡ ಅನ್ನುವುದಕ್ಕೆ - ಬಹುಶಃ ಈ ಪೀಠಿಕೆಯಲ್ಲಿರುವ ಪದ್ಯಗಳನ್ನು ಇವನ ಸಾವಿನ ನಂತರ ಯಾರೋ ಹತ್ತಿರದವರು ಈ ನಾಟಕಕ್ಕೆ ಸೇರಿಸಿದ್ದಾರೆ ಎಂದು ಊಹಿಸಬಹುದೇನೋ.

ಅಂದಹಾಗೆ ನಾಟಕ ಅನ್ನುವುದೂ ಹತ್ತು ಬಗೆಯ ರೂಪಕ (ದೃಶ್ಯಕಾವ್ಯ)ಗಳಲ್ಲಿ ಒಂದು. ಆದರೆ ಈಗ ನಾಟಕ ಅನ್ನುವುದನ್ನೇ ರೂಪಕ ಎನ್ನುವುದರ ಬದಲಾಗಿ ಬಳಸತೊಡಗಿದ್ದೇವೆ ಅಷ್ಟೇ.hamsanandihttps://www.blogger.com/profile/15560853535208005782noreply@blogger.comtag:blogger.com,1999:blog-5939841257923965225.post-90988128458493180762016-03-31T17:13:12.953+05:302016-03-31T17:13:12.953+05:30ಸರ್,
ನಾಟಕ ಕುತೂಹಲಭರಿತವಾಗಿದೆ. ಇಲ್ಲಿ ರಾಜನ ಹೆಂಡತಿಯ ತಮ್...ಸರ್,
ನಾಟಕ ಕುತೂಹಲಭರಿತವಾಗಿದೆ. ಇಲ್ಲಿ ರಾಜನ ಹೆಂಡತಿಯ ತಮ್ಮನಾದ ಶ್ಯಾಲಕನನ್ನು 'ಶಕಾರ'ನೆಂಬ ಅಡ್ಡ ಹೆಸರಿನಿಂದ ಕರೆದ ಔಚಿತ್ಯದ ಬಗ್ಗೆ ಕುತೂಹಲ ಉಂಟಾಗಿತ್ತು. ಆದರೆ,

‘ಇವಳು ಶೂಳೆಯ ಮಗಳು
ಶೂಳೆಗೇರಿಯ ಚೆಲುವೆ
ವೇಶ್ಯೆ—ಬೆಲೆವೆಣ್ಣು
ಈ ಹತ್ತು ನಾಮಾವಳಿಯನಿವಳಿಗಿಟ್ಟಿರುವೆ
ಆದರೂ ಇವಳೆನ್ನ ಬಯಶುತಿಲ್ಲ!’

- ಈ ರೀತಿಯ ಸಂಭಾಷಣೆಗಳನ್ನು ಗಮನಿಸಿದ ಮೇಲೆ ಬಹುಶಃ ಆತನಿಗೆ 'ಸ'ಕಾರದ ಬಗ್ಗೆ ಗೊಂದಲವಿದ್ದಂತಿದೆ. ಹಾಗಾಗಿ ಆತನಿಗೆ 'ಶಕಾರ'ನೆಂಬ ಅಡ್ಡ ಹೆಸರು ಸಕಾರಣದಿಂದಲೇ ಬಂದಂತಿದೆ ಅಂತ ಅನಿಸುತ್ತಿದೆ. :-)
ಮನುಷ್ಯನ ಆಕಾರ, ಸ್ವಭಾವ ಮತ್ತು ಬಣ್ಣ ಇತ್ಯಾದಿಗಳ ಕುರಿತಂತೆ ಇವತ್ತಿನ ಸಿನೆಮಾ/ಸಾಹಿತ್ಯದ ಕೃತಿಗಳಲ್ಲಿ ಲೊಡ್ಡೆ, ಮಚ್ಚ, ಆನೆ, ಕರಿಯ ಮುಂತಾದ ರೀತಿಯ ನಾಮಕರಣಗಳಿಗೆ ಹೋಲಿಸಿದರೆ, ಶಕಾರ ಅನ್ನುವ ಹೆಸರು ಕೊಂಚ ಸಾಹಿತ್ಯಕ ಸಂಸ್ಕೃತಿಯುಳ್ಳದ್ದಾಗಿರುವಂತೆ ತೋರುತ್ತಿದೆ.
-Rjರಾಘವೇಂದ್ರ ಜೋಶಿhttps://www.blogger.com/profile/17363727726010521224noreply@blogger.comtag:blogger.com,1999:blog-5939841257923965225.post-15562697734428316472016-03-31T13:00:19.972+05:302016-03-31T13:00:19.972+05:30 ಆಗಿನ ಸಮಾಜದ ರೀತಿನೀತಿಗಳನ್ನು ಪ್ರಸ್ತುತಪಡಿಸುತ್ತಾ ಬಹಳ ಸ... ಆಗಿನ ಸಮಾಜದ ರೀತಿನೀತಿಗಳನ್ನು ಪ್ರಸ್ತುತಪಡಿಸುತ್ತಾ ಬಹಳ ಸ್ವಾರಸ್ಯಕರವಾಗಿ ಬರೆಯುತ್ತಿದ್ದೀರಿ ಸರ್. ಸೀಮಿತ ಅವಧಿಯಲ್ಲಿ ನೋಡಿದ ನಾಟಕ ಅಷ್ಟೇನೂ ನೆನಪಿನಲ್ಲಿರಲಿಲ್ಲ. ಮು೦ದಿನ ಅ೦ಕಗಳಿಗಾಗಿ ಕಾದಿದ್ದೇನೆ. prabhamani nagarajahttps://www.blogger.com/profile/07947483115117171478noreply@blogger.comtag:blogger.com,1999:blog-5939841257923965225.post-267303021591350602016-03-30T18:49:31.339+05:302016-03-30T18:49:31.339+05:30ಕಾಕ .. ಮೊದಲ ಅಂಕ ನೋಡಿಯಾಯಿತು ..:) ಶಕಾರ ನ ಹೆಸರು ಆತನ...ಕಾಕ .. ಮೊದಲ ಅಂಕ ನೋಡಿಯಾಯಿತು ..:) ಶಕಾರ ನ ಹೆಸರು ಆತನು ಸಕಾರವನ್ನು ಶಕಾರವಾಗಿ ನುಡಿಯುವುದಕ್ಕೆ ಬಂದಿದ್ದೋ ..? ಚುಕ್ಕಿಚಿತ್ತಾರhttps://www.blogger.com/profile/16311293580745309172noreply@blogger.com