Saturday, January 17, 2009

ಮೈ ಕರಗದವರಲ್ಲಿ………….

ಬಸವಣ್ಣನು ಹುಟ್ಟು ಕನ್ನಡಿಗ,ಅವನಿಗೆ ಸಂಸ್ಕೃತದಿಂದ ಕಡ ತೆಗೆದುಕೊಳ್ಳುವ ಅವಶ್ಯಕತೆ ಏನಿತ್ತು ಎನ್ನುವದು ಕೆಲವರ ಅನುಮಾನ. ಅವರಿಗೆ ಇಲ್ಲಿದೆ ಸಮಾಧಾನ:

ಸಂಸ್ಕೃತ ಹಾಗೂ ಕನ್ನಡ ಇವೆರಡೂ ಪರಸ್ಪರ ಪೋಷಕ ಭಾಷೆಗಳಾಗಿವೆ.
ಕಲ್ಯಾಣದ ಶರಣರು ಕನ್ನಡದ ವೃಕ್ಷಕ್ಕೆ ಸಂಸ್ಕೃತದ ಕಸಿಯನ್ನು ಮಾಡಿ ಸುಮಧುರವಾದ ಫಲಗಳನ್ನು ಪಡೆದಿದ್ದಾರೆ.
ಬಲ್ಲವರೇ ಬಲ್ಲರು ಆ ಹಣ್ಣಿನ ಸವಿಯ!
ಆದರೆ, ವೈಯಕ್ತಿಕ ಕಾರಣಕ್ಕಾಗಿ ಕೆಲವರು ಸಂಸ್ಕೃತದ ವಿರುದ್ಧ ರಾಜಕೀಯ ಮಾಡುತ್ತಲೇ ಬಂದಿದ್ದಾರೆ.
ಹಳೆಗನ್ನಡ ಕವಿ ಆಂಡಯ್ಯನು ತನ್ನ ಕಾವ್ಯದಲ್ಲಿ ಸಂಸ್ಕೃತವನ್ನು ಬಳಸುವದಿಲ್ಲವೆಂದು ಪ್ರತಿಜ್ಞೆ ಮಾಡಿ, ತದ್ಭವಗಳನ್ನು ತುರುಕಿದ್ದು ಎಲ್ಲರಿಗೂ ಗೊತ್ತಿದ್ದ ಸಂಗತಿಯೇ.

ಆದರೆ, ಬಸವಾದಿ ಶರಣರು ಇಂತಹ ಹುಚ್ಚುತನ ಮಾಡಲಿಲ್ಲ.
ಸಾಮಾನ್ಯ ಜನತೆಗಾಗಿಯೇ ರಚಿಸಿದಂತಹ ಬಸವಣ್ಣ, ಅಕ್ಕಮಹಾದೇವಿ ಮೊದಲಾದ ಶರಣರ ವಚನಗಳಲ್ಲಿ ಸಂಸ್ಕೃತವನ್ನು ಧಾರಾಳವಾಗಿ ಬಳಸಲಾಗಿದೆ.
ಅಲ್ಲದೆ, ಸಂಸ್ಕೃತ ವಾಕ್ಯಗಳನ್ನು ಹಾಗು ಶ್ಲೋಕಗಳನ್ನು ಉದ್ಧರಿಸಲಾಗಿದೆ.
ಹದವರಿತು ಸಂಸ್ಕೃತವನ್ನು ಬಳಸಿದಾಗ ಆ ಪಾಕಕ್ಕೆ ಒಂದು ವಿಶಿಷ್ಟ ರುಚಿ ಬರುತ್ತದೆ.
ಈ ಕಾರಣದಿಂದಲೇ, ಶರಣರ ವಚನಗಳು ಕನ್ನಡ ನಾಡಿನಲ್ಲಿ ಶ್ರೇಷ್ಠ ತತ್ವಜ್ಞಾನ ಮಾತ್ರವಲ್ಲ, ಶ್ರೇಷ್ಠ ಸಾಹಿತ್ಯವಾಗಿ ಸಹ ಪ್ರಸಿದ್ಧವಾಗಿವೆ.

ಶರಣರು ಸಂಸ್ಕೃತ ಪದಗಳನ್ನು ಹಾಗೂ ಸಂಸ್ಕೃತಜನ್ಯ ಜ್ಞಾನವನ್ನು ಬಳಸಿದ ಕಾರಣಗಳು ಹೀಗಿವೆ:

(೧) ರೂಢ ಸಂಪ್ರದಾಯದ ಹಾಗು ತತ್ವಜ್ಞಾನದ ಪರಿಭಾಷೆಯನ್ನು ಬಳಸುವ ಅವಶ್ಯಕತೆ:-
ಶರಣರು ಭಾರತೀಯ ತತ್ವಜ್ಞಾನದ ಅನೇಕ ಅಂಶಗಳನ್ನು ಒಪ್ಪಿಕೊಳ್ಳುತ್ತಿದ್ದರು ;
ಎಲ್ಲವನ್ನೂ ಅವರು ತಿರಸ್ಕರಿಸಿರಲಿಲ್ಲ.
ಈ ಅಂಶಗಳಿಗೆ ಬಳಸಲಾದ ಪರಿಭಾಷೆ ಅಂದರೆ terminology ಸಹ ಎಲ್ಲರಿಗೂ ತಿಳಿದದ್ದೇ.
ಉದಾಹರಣೆಗೆ ಅರಿಷಡ್ವರ್ಗಗಳು ಹಾಗೂ ಅರಿಷಡ್ವರ್ಗಗಳನ್ನು ಗೆಲ್ಲುವದಕ್ಕೆ ಇರುವ ಮಹತ್ವ.
ಆದುದರಿಂದ ಬಸವಣ್ಣನವರು ಇಂತಹ ಸಂದರ್ಭದಲ್ಲಿ ಸಂಸ್ಕೃತಜನ್ಯ ಪರಿಭಾಷೆಯನ್ನೇ ಬಳಸಿದ್ದಾರೆ.
ಕನ್ನಡವನ್ನೇ ಮೂಲರೂಪದಲ್ಲಿ ಬಳಸಬೇಕೆನ್ನುವ ಹುಚ್ಚು ಅವರಿಗೆ ಇರಲಿಲ್ಲ.
ಉದಾಹರಣೆಗೆ ಬಸವಣ್ಣನವರ ಈ ವಚನ ನೋಡಿರಿ:

ಕಾಮವೇಕೊ ಲಿಂಗಪ್ರೇಮಿ ಎನಿಸುವಂಗೆ?
ಕ್ರೋಧವೇಕೊ ಶರಣವೇದ್ಯ ಎನಿಸುವಂಗೆ?
ಲೋಭವೇಕೊ ಭಕ್ತಿಯ ಲಾಭವ ಬಯಸುವಂಗೆ?
ಮೋಹವೇಕೊ ಪ್ರಸಾದವೇದ್ಯ ಎನಿಸುವಂಗೆ?
ಮದ, ಮತ್ಸರವುಳ್ಳವಂಗೆ ಹೃದಯಶುದ್ಧವೆಲ್ಲಿಯದೊ?
ಹದುಳಿಗರಾದಲ್ಲಿಪ್ಪ ನಮ್ಮ ಕೂಡಲ-ಸಂಗಮ-ದೇವ.

ಈ ಮೇಲಿನ ವಚನದ ೨೧ ಪದಗಳಲ್ಲಿ ೧೫ ಪದಗಳು ಸಂಸ್ಕೃತಪದಗಳು.
ಹುಟ್ಟುಕನ್ನಡಿಗರಾದ ಬಸವಣ್ಣನವರು ಹೀಗೇಕೆ ಮಾಡಿದರು?
ಸಂಸ್ಕೃತ ಪದಗಳನ್ನೇಕೆ ಧಾರಾಳವಾಗಿ ಬಳಸಿದರು?
ಇದಕ್ಕೆ ಉತ್ತರವನ್ನು ನೀಡುವಿರಾ?
(ಯಾಕೆಂದರೆ ಬಸವಣ್ಣನವರು ಹುಟ್ಟುಕನ್ನಡಿಗರೇ ಹೊರತು ಹುಚ್ಚುಭಟ್ಟರು ಕಚ್ಚಿದ ಕನ್ನಡಿಗರಲ್ಲ!?)

ಬಸವಣ್ಣನವರು ಕೇವಲ ಸಂಸ್ಕೃತ ಪದಗಳನ್ನು ಬಳಸುವದಷ್ಟೇ ಅಲ್ಲ, ಸಂಸ್ಕೃತಶ್ಲೋಕಗಳನ್ನೇ ತಮ್ಮ ವಚನಗಳಲ್ಲಿ ಉದ್ಧರಿಸುತ್ತಿದ್ದರು ಎನ್ನುವದಕ್ಕೆ ಇಲ್ಲೊಂದು ಸಣ್ಣ ಉದಾಹರಣೆ ಇದೆ:

ಅಗ್ನಿಯಾಧಾರದಲ್ಲಿ ಕಬ್ಬುನ ನೀರುಂಬುದಯ್ಯಾ
ಭೂಮಿಯಾಧಾರದಲ್ಲಿ ವೃಕ್ಷ ನೀರುಂಬುದಯ್ಯಾ
ಜಂಗಮವಾಪ್ಯಾಯನವಾದೊಡೆ ಲಿಂಗ ಸಂತುಷ್ಟಿಯಹುದಯ್ಯಾ
‘ವೃಕ್ಷಸ್ಯ ವದನಮ್ ಭೂಮಿ: ಸ್ಥಾವರಸ್ಯ ತು ಜಂಗಮಃ
ಅಹಮ್ ತುಷ್ಯೋಸ್ಮುಮಾದೇವಿ ಉಭಯೋರ್ಲಿಂಗಜಂಗಮಾತ್’
ಇದು ಕಾರಣ ಕೂಡಲಸಂಗಮದೇವರಲ್ಲಿ
ಜಂಗಮಾಪ್ಯಾಯನವಾದೆಡೆ ಲಿಂಗಸಂತುಷ್ಟಿ.

ಈ ವಚನದಲ್ಲಿ ಬಸವಣ್ಣನವರು
ವೃಕ್ಷಸ್ಯ ವದನಮ್ ಭೂಮಿ: ಸ್ಥಾವರಸ್ಯ ತು ಜಂಗಮಃ
ಅಹಮ್ ತುಷ್ಯೋಸ್ಮುಮಾದೇವಿ ಉಭಯೋರ್ಲಿಂಗಜಂಗಮಾತ್
”,
ಎನ್ನುವ ಸಂಸ್ಕೃತ ಶ್ಲೋಕವನ್ನು ಉದ್ಧರಿಸುವ ಅವಶ್ಯಕತೆ ಏನಿತ್ತು?

ಈ ಉದ್ಧರಣೆ ಇಲ್ಲದೆಯೇ ವಚನ ಅರ್ಥಪೂರ್ಣವಾಗುತ್ತಿರಲಿಲ್ಲವೆ?
ಅಥವಾ ಬಸವಣ್ಣನವರು ಅಮಾಯಕರನ್ನು ಮರಳುಗೊಳಿಸಲು
ಸಂಸ್ಕೃತ ಶ್ಲೋಕವನ್ನು ಉಪಯೋಗಿಸಿದರೆಂದು ಹೇಳುವಿರಾ?
ಕನ್ನಡವನ್ನು ಅಪ್ಪಿಕೊಂಡವರಿಗೆ ಸಂಸ್ಕೃತ ಶ್ಲೋಕದ ಹಂಗೇಕೆ?

It means ಬಸವಣ್ಣನವರು ಕನ್ನಡ ಹಾಗೂ ಸಂಸ್ಕೃತಗಳ ಪರಸ್ಪರ ಅವಲಂಬನವನ್ನು ಅರಿತವರಾಗಿದ್ದರು.
ಈ ಎರಡು ಭಾಷೆಗಳ ನಡುವೆ ಅನವಶ್ಯಕ ಭೇದಬುದ್ಧಿಯನ್ನು ಹುಟ್ಟಿಸುವ ರಾಜಕಾರಣಿ-ಕನ್ನಡಿಗರ ಗುಂಪಿಗೆ ಅವರು ಸೇರಿರಲಿಲ್ಲ.

(೨) ಕನ್ನಡ ಪದಗಳ ಬದಲಾಗಿ ಸಂಸ್ಕೃತ ಪದಗಳನ್ನು ಕೆಲವೊಂದು ಸಂದರ್ಭದಲ್ಲಿ ಬಳಸಲೇ ಬೇಕಾಗುತ್ತದೆ.
ಉದಾಹರಣೆಗೆ ಅಕ್ಕಮಹಾದೇವಿಯ ಒಂದು ಖ್ಯಾತ ವಚನದ ಒಂದು ಸಾಲನ್ನು ನೋಡಿರಿ:

ತನು ಕರಗದವರಲ್ಲಿ ಪುಷ್ಪವನೊಲ್ಲೆಯ್ಯ ನೀನು.”

ತನು ಮತ್ತು ಪುಷ್ಪ ಎನ್ನುವ ಸಂಸ್ಕೃತ ಪದಗಳನ್ನೇಕೆ ಅಕ್ಕ ಇಲ್ಲಿ ಬಳಸಿದಳು?
ಹುಟ್ಟುಕನ್ನಡತಿಯಾದ ಅವಳು ಕನ್ನಡ ಪದಗಳನ್ನೇ ಬಳಸಿದ್ದರೆ ಹೀಗಿರುತ್ತಿತ್ತು:
ಮೈ ಕರಗದವರಲ್ಲಿ ಹೂವನ್ನೊಲ್ಲೆಯ್ಯ ನೀನು!
ಈ ಸಾಲಿನ ಅರ್ಥ?
ಶಿವ ಶಿವಾ! ಬೊಜ್ಜು ಮೈಯವಳು ಹೂವು ಕೊಟ್ಟರೆ ನೀನು ಬೇಡವೆನ್ನುತ್ತಿದ್ದೆಯಾ, ಮಲ್ಲಿಕಾರ್ಜುನಾ?
ಕೇವಲ slim and trim ಇರುವವಳು ಹೂವು ಕೊಟ್ಟರೆ ಮಾತ್ರ ನೀನು ಒಪ್ಪಿಸಿಕೊಳ್ಳುತ್ತಿದ್ದೆಯಾ?
…………………………………………………
ಪ್ರಾಚೀನ ಭಾರತದಲ್ಲಿ ಭಾಷಾಭೇದಬುದ್ಧಿಯು ಯಾವಾಗಲೂ ಇರಲಿಲ್ಲ.
ಜನರು ಅವಶ್ಯಕತೆಗೆ ತಕ್ಕಂತಹ ಭಾಷೆಯನ್ನು ಉಪಯೋಗಿಸುತ್ತಿದ್ದರು.
ಉದಾಹರಣೆಗೆ, ಸನಾತನಧರ್ಮದ ಪುನರುತ್ಥಾನಕ್ಕಾಗಿ ಶಂಕರ ಎನ್ನುವ ಮಲೆಯಾಳಿ ತರುಣ ಸಂಸ್ಕೃತದಲ್ಲಿಯೇ ಏಕೆ ಜ್ಞಾನಪ್ರಸಾರ ಮಾಡಿದ, ಮಲೆಯಾಳಿಯಲ್ಲಿ ಏಕೆ ಮಾಡಲಿಲ್ಲ?
ಅಖಿಲ ಭಾರತವು ತಮ್ಮ ಧರ್ಮಭೂಮಿಯಾಗಿದ್ದರಿಂದ ಸಂಸ್ಕೃತವನ್ನೇ ಅವಲಂಬಿಸುವದು ಶಂಕರಾಚಾರ್ಯರಿಗೆ ಅನಿವಾರ್ಯವಾಗಿತ್ತು.
ಅದೇ ರೀತಿ ಕೇವಲ ಕನ್ನಡನಾಡನ್ನಷ್ಟೇ ಕರ್ಮಭೂಮಿಯಾಗಿ ಹೊಂದಿದ್ದ ಶರಣರು ಕನ್ನಡದಲ್ಲೇ ವಚನಗಳನ್ನು ರಚಿಸಿದರು.
ಭೂರಂಗವೇ ಈಗ ನಮ್ಮ ರಂಗಭೂಮಿಯಾಗಿರುವದರಿಂದ ನಮ್ಮ ತಾಂತ್ರಿಕ ಹಾಗೂ ವೈಜ್ಞಾನಿಕ ತಜ್ಞರು (ಅವರಲ್ಲಿ ಅನೇಕರು ಹುಟ್ಟುಕನ್ನಡಿಗರು) ಇಂಗ್ಲೀಶನ್ನು ಈಗ ಬಳಸುವದಿಲ್ಲವೆ?

64 comments:

  1. ಯಪ್ಪ ಕಾಂಟ್ರೋವರ್ಶಿಯಲ್ ಸಬ್ಜೆಕ್ಟು! ಮಾತಾಡೋಕೆ ಭಯ ಆಗುತ್ತೆ!

    ReplyDelete
  2. ಭಾಷಾಂಧತೆ ಯಾವ ಕಾಲಕ್ಕೂ ಸಲ್ಲದು. ಸಂಸ್ಕೃತ ಎಲ್ಲ ಭಾರತೀಯ ಭಾಷೆಗಳನ್ನು ಶ್ರೀಮಂತಗೊಳಿಸಿದೆ. ಸಂಸ್ಕೃತ-ಕನ್ನಡ ಪರಸ್ಪರ ಅವಲಂಬಿಸಿವೆ ಎಂದು ಬರೆದದ್ದೀರಲ್ಲ ? ಯಾವ ಸಂಸ್ಕೃತ ಗ್ರಂಥಗಳಲ್ಲಿಯೂ ಕನ್ನಡ ಶಬ್ದಗಳನ್ನು ಬಳಸಿದ್ದನ್ನು ನಾನಂತೂ ಕಾಣೆ. ಸಂಸ್ಕೃತ ಶಬ್ದಗಳನ್ನು ಉಪಯೋಗಿಸದೆ, ಕೇವಲ ಕನ್ನಡ ಶಬ್ದಗಳನ್ನು ಪ್ರಯೋಗಿಸಿ ಬರೆಯುವದು ಅಸಾಧ್ಯವೇನಲ್ಲ ! ಆದರೆ, ಈ ಭಾಷಾಂಧತೆ ಬೇಕೆ ? ಎನ್ನುವದೇ ಪ್ರಶ್ನೆ.

    ReplyDelete
  3. @ ನಿಜವಾಗಿಯೂ ನಿಮ್ಮ ಬರಹ ಅರ್ಥಪೂರ್ಣವಾಗಿದೆ.

    ಮೊದಲನೆಯದಾಗಿ ಒಂದು ಭಾಷೆಯಲ್ಲಿ ಇನ್ನೊಂದು ಭಾಷೆಯ ಪದಗಳು ಏಕೆ ನುಸುಳುತ್ತವೆ ಎಂದು ಅರ್ಥ ಮಾಡಿಕೊಂಡರೆ ಯಾವ ಅನುಮಾನವೂ ಉಳಿಯುವುದಿಲ್ಲ.

    ಕಾಲಕಾಲಕ್ಕೆ ಹೊಸ ಹೊಸ ಆವಿಷ್ಕಾರಗಳು ಬಂದಂತೆಲ್ಲಾ ಅದಕ್ಕೆ ಸಂವಾದಿಯಾದ ಪದಗಳು ಆಯಾ ಭಾಷೆಯ ಜಾಯಮಾನಕ್ಕೆ ಅನುಗುಣವಾಗಿ ಅಲ್ಪ ಸ್ವಲ್ಪ ಬದಲಾವಣೆಗಳೊಂದಿಗೆ ಸೇರುತ್ತವೆ.
    ಉದಾ
    car,bus ಈ ಪದಗಳು ಕನ್ನಡದಲ್ಲಿ ಕಾರು, ಬಸ್ಸು ಆದವು ಆದರೆ. lorry ಮಾತ್ರ ಲಾರಿಯಾಗಿಯೇ ಉಳಿಯಿತೇ ಹೊರತು ಲಾರು ಆಗಲಿಲ್ಲ.

    ಆದ್ದರಿಂದ ಕೇವಲ ಕನ್ನಡ ಪದಗಳನ್ನೇ ಬಳಸಿ ಬರೆಯುವುದು ಅಸಾಧ್ಯವಲ್ಲ ಎನ್ನುವ ಬದಲು ಏಕೆ ಅಷ್ಟು ಕಷ್ಟ ಪಡಬೇಕು ಅನ್ನುವುದೇ ನನ್ನ ಪ್ರಶ್ನೆ.

    ಕೇವಲ ಸಂಸ್ಕೃತ ಪದಗಳು ಮಾತ್ರ ಕನ್ನಡದಲ್ಲಿಲ್ಲ. ಪೋರ್ಚುಗೇಸ್, ಉರ್ದು, ಮುಂತಾದ ಭಾಷೆಯ ಪದಗಳೂ ಕನ್ನಡದಲ್ಲಿವೆ. ಕಾರಣ ಸ್ಪಷ್ಟ. ಆಯಾ ದೇಶದ ಜನರು ನಮ್ಮ ದೇಶಕ್ಕೆ ವ್ಯಾಪಾರ ಮಾಡಲು ಬಂದಿದ್ದರಿಂದ.ಒಟ್ಟಿನಲ್ಲಿ ಭಾಷೆ ಹರಿಯುವ ನೀರಿದ್ದಂತೆ.

    ನೀವು ಹೇಳಿದ ವಿಷಯ - ವಚನಕಾರರು ಸಂಸ್ಕೃತ quote ಮಾಡಿರುವುದು - ನನಗೆ ಹೊಸ ವಿಷಯ.

    ಬೊಜ್ಜು...ಹೋವು .. ಓದಿ ಹೊಟ್ಟೆ ಹುಣ್ಣಾಗುವಷ್ಟು ನಗೆ ಬಂದಿತು.

    ReplyDelete
  4. ಸಂದೀಪ,
    Life's like that!

    ReplyDelete
  5. ಕಟ್ಟಿಯವರೆ,
    ಸಂಸ್ಕೃತ ಗ್ರಂಥಗಳಲ್ಲಿ ಕನ್ನಡ ಪದಗಳನ್ನು ಬಳಸಿರಲಿಕ್ಕಿಲ್ಲ. ಆದರೆ ಸಂಸ್ಕೃತ ಪದಗಳೆಂದು (ಸಂಸ್ಕೃತ)ಪಂಡಿತರು ಭಾವಿಸುವ
    ಅನೇಕ ಪದಗಳು ದ್ರಾವಿಡ (i.e.ಕನ್ನಡ)ಪದಗಳೇ ಆಗಿವೆ.
    ಉದಾಹರಣೆಗೆ 'ಚಂದ್ರ'ಎನ್ನುವ ಸಂಸ್ಕೃತ ಪದವು 'ಶನ್' ಎನ್ನುವ ಕಂದಮಿಳ ಪದದಿಂದ ಬಂದಿದೆ.
    ಶನ್>>ಚನ್> ಚಂದ್ರ
    ಅದರಂತೆ ಕರ್ಪಟ(=ಹತ್ತಿ,ಕಾಪಾಸು,ಕಪಡಾ)ಎನ್ನುವ ಪದವು
    ಕರ್+ಪಟ ಎನ್ನುವ 'ಸಂಸ್ಕೃತ+ಕನ್ನಡ' ಪದವು. ಈ ಕಾಪಾಸ ಪದದಿಂದಲೇ ಕುಪ್ಪುಸ ಪದ ಬಂದಿದೆ.
    ಸಾಡೀ ಎನ್ನುವ ಹಿಂದಿ ಪದ ಸೀರೆ(ಚೀರ)ಪದದಿಂದ ಬಂದಿದೆ.
    ಆದುದರಿಂದ, ಕಟ್ಟಿಯವರೆ, ಸಂಸ್ಕೃತದಲ್ಲಿ ಶೇಕಡಾ ೫೦ಕ್ಕಿಂತಲೂ ಹೆಚ್ಚಿಗೆ ಕನ್ನಡ ಪದಗಳು ಇರುವ ಕಾರಣದಿಂದ
    ಸಂಸ್ಕೃತ ಗ್ರಂಥದಲ್ಲಿ ಕನ್ನಡ ಪದಗಳನ್ನು ಬಳಸಿದ್ದಾರೆಂದು
    ಧಾರಾಳವಾಗಿ ಹೇಳಬಹುದು.

    ReplyDelete
  6. ಚಂದ್ರಕಾಂತಾ,
    ಕನ್ನಡದಲ್ಲಿ ಬಳಕೆಯಲ್ಲಿದ್ದ 'ಪರದೇಶಿ'ಪದಗಳನ್ನು ನೋಡಿದರೆ ದಿಗ್ಭ್ರಮೆಯಾದೀತು.
    ಉದಾಹರಣೆಗೆ 'ಪೇಟೆ'ಎನ್ನುವ ಪದ ಫ್ರೆಂಚ್ ಭಾಷೆಯಿಂದ ಬಂದಿದೆ.'ಕಾಸು'ಎನ್ನುವ ಪದಕ್ಕೆ ಇಂಗ್ಲೀಶಿನ 'cash' ಪದವೇ ಮೂಲ. ಈಜಿಪ್ತಿನ hytr ಅನ್ನುವ ಪದವೇ ಕನ್ನಡದಲ್ಲಿ 'ಕುದುರೆ'ಆಯಿತು.
    ಇದೇ ರೀತಿ ಕನ್ನಡದಿಂದಲೂ ಅನೇಕ ಪದಗಳು ಬೇರೆ ಬೇರೆ ಭಾಷೆಗಳಿಗೆ ಹೋಗಿರಲು ಸಾಕು.
    ಅಷ್ಟೇಕೆ, ಮರಾಠಿ ಭಾಷೆಯಂತೂ ಆರ್ಯ ದನಗಾಹಿಗಳು ಆಡಿದ ಕನ್ನಡ ಭಾಷೆ. ಗುಜರಾತಿ ಭಾಷೆಗೆ ದ್ರಾವಿಡ base
    ಇದೆ ಎಂದು ಹೇಳುತ್ತಾರೆ. ಈ ದ್ರಾವಿಡ base ಕನ್ನಡವೇ
    ಆಗಿರುವದು ಸಹಜ.
    ಕನ್ನಡಿಗರೆಂದು ಕರೆದುಕೊಳ್ಳುವ ನಾವು ಸಾವಿರಾರು ವರ್ಷಗಳಿಂದ, ಎಷ್ಟೆಲ್ಲಾ ಜನಾಂಗಗಳ, ಎಷ್ಟೆಲ್ಲಾ ಭಾಷೆಗಳ,ಎಷ್ಟೆಲ್ಲಾ ಸಂಸ್ಕಾರಗಳಿಂದ ರೂಪುಗೊಂಡಿದ್ದೇವೆ ಅನ್ನುವದನ್ನು ಯಾರು ಹೇಳಿಯಾರು?

    ReplyDelete
  7. ಸುನಾಥ,

    ಮತ್ತೆ ಭಾಷೆ, ಅದರಲ್ಲೂ ಕನ್ನಡ-ಸಂಸ್ಕೃತ ಭಾಷೆ, ಅದರ ಜೊತೆ ಭಟ್ಟರ ಉಲ್ಲೇಖ! ಅಬ್ಬಬ್ಬಾ ನಿಮ್ಮ ಧೈರ್ಯವೇ? ಇನ್ನು ನಿಮ್ಮ ಮೇಲೆ ವಾಕ್ಪ್ರವಾಹ ಹರಿಯಲಿದೆ, ಹುಷಾರಾಗಿರಿ.

    - ಕೇಶವ (www.kannada-nudi.blogspot.com)

    ReplyDelete
  8. ಸುನಾಥ್ ಸಾರ್,

    ಕನ್ನಡ ಮತ್ತು ಸಂಸ್ಕೃತ ಭಾಷೆಗಳ [ಬಸವಣ್ಣ, ಅಕ್ಕಮಹಾದೇವಿಯವರು] ಬಳಕೆ ಬಗ್ಗೆ ಅದರ ಸಾರ್ಥಕತೆ ಬಗ್ಗೆ ಸೊಗಸಾಗಿ ವಿಶ್ಲೇಷಿಸಿದ್ದೀರಿ.....ನಾವು ಸ್ಲೂಲು ಕಾಲೇಜುಗಳಲ್ಲಿ ಕಲಿಯದ ವಚನ ಸಾಹಿತ್ಯದ ಎಲ್ಲ ಒಳಮುಖಗಳನ್ನು ನೀವಿಲ್ಲಿ ನಮಗೆ ಕಲಿಸುತ್ತಿದ್ದೀರಿ....ತುಂಬಾ ಥ್ಯಾಂಕ್ಸ್.....

    ReplyDelete
  9. ಸುನಾಥ್ ಕಾಕಾ,
    ಉತ್ತಮ ಬರಹ.

    " ಭಾಷೆ ಹರಿವ ನೀರಿನಂತೆ " ಎಂಬ ಚಂದ್ರಕಾಂತರ ಅಭಿಪ್ರಾಯಕ್ಕೆ ನನ್ನದೂ ಸಹಮತವಿದೆ. ಹಲವು ಭಾಷೆಗಳನ್ನಾಡುವ ಪರಿಸರದಲ್ಲಿ ಇರುವಾಗ ಒಂದರೊಡನೊಂದು ಭಾಷೆ ಬೆರೆಯುವುದು ಸಹಜ ಎನಿಸುತ್ತದೆ.
    ಸಂಸ್ಕೃತವನ್ನು ಭಾರತೀಯ ಭಾಷೆಗಳ ತಾಯಿ ಎನ್ನಲಾಗುತ್ತವೆ. ಹೀಗಿರುವಾಗ ಸಂಸ್ಕೃತ ಪದಗಳ ಬಳಕೆ ಅಸಹಜವಲ್ಲ ಎಂದು ನನ್ನ ಭಾವನೆ .

    ReplyDelete
  10. ಕೇಶವ,
    ಬಂದದ್ದೆಲ್ಲಾ ಬರಲಿ,ಗೋವಿಂದನ ದಯೆಯೊಂದಿರಲಿ!

    ReplyDelete
  11. ಶಿವು,
    ನಿಮ್ಮ ಜೊತೆಜೊತೆಗೇ ನಾನೂ ಕಲಿಯುತ್ತಿದ್ದೇನಲ್ಲ!

    ReplyDelete
  12. ಚಿತ್ರಾ,
    ಭಾಷೆ ಹರಿವ ನೀರಿನಂತೆ ಎನ್ನುವದು ಸರಿಯಾದ ಮಾತು. ಹರಿಯುತ್ತಿರುವ ಈ ತೊರೆಗೆ, ಬೇರೆ ಬೇರೆ ತೊರೆಗಳು ಕೂಡಿದ್ದರಿಂದಲೇ ಇದು ದೊಡ್ಡ ನದಿಯಾದೀತು.
    ಕನ್ನಡವು ಆ ತರಹದ ಮಹಾಪ್ರವಾಹವಾಗಬೇಕಾದರೆ,ನಾವು ಬೇರೆ ಬೇರೆ ತೊರೆಗಳನ್ನೆಲ್ಲ ಸ್ವಾಗತಿಸಬೇಕು.
    ತಮಿಳರಂತೆ ನಾವೂ ಸಂಕುಚಿತ ಬುದ್ಧಿಯನ್ನು ತೋರಿಸಿದರೆ, ನಮ್ಮದೂ ಸಹ ಕ್ಷುದ್ರಪ್ರವಾಹವಾದೀತು!

    ReplyDelete
  13. ಸುನಾಥ್ ಸರ್,
    ನಿಮ್ಮ ಲೇಖನ ಅರ್ಥಪೂರ್ಣವಾಗಿದೆ.ಕನ್ನಡದ ಕೆಲವು ಪದಗಳು ಇಂಗ್ಲೀಷನ ಮೂಲವನ್ನು ಹೊಂದಿಲ್ಲವೇ? ಉದಾ: ಮಾರುಕಟ್ಟೆ-market
    ಸರ್ಪ-serpent

    Thanks for your nice article.

    ಅಂದಹಾಗೆ ನಾನು ಬೇಂದ್ರೆಯವರ ’ಹುಬ್ಬಳ್ಳಿಯಾಂವ’ಕವನವನ್ನು ನನಗೆ ಕಂಡಂತೆ ವಿಮರ್ಶಿಸಿದ್ದೇನೆ.ಅದರಲ್ಲಿ ನೀವು ಹಿಂದೆ ಬರೆದಿರುವ ’ಹುಬ್ಬಳ್ಳಿಯಾಂವ ’ ಲೇಖನದಿಂದ ಕೆಲವು ಸಾಲುಗಳನ್ನು ಬಳಸಿಕೊಳ್ಳಬೇಕೆಂದುಕೊಡಿದ್ದೇನೆ. ನೀವು ಅನುಮತಿ ನೀಡಿದರೆ ಮುಂದುವರೆಯುವೆ.ಲೇಖನದ ಕೊನೆಯಲ್ಲಿ "ನೆರವು:ಸುನಾಥವರ ಬ್ಲಾಗ್ " ಎಂದು ನಮೂದಿಸುತ್ತೇನೆ. ಏನಂತಿರಿ?

    ReplyDelete
  14. ಉದಯ,
    ನೀವು ಹೇಳಿದಂತೆ, ಇಂಗ್ಲಿಶ್ ಮೂಲದ ಅನೇಕ ಪದಗಳು ಕನ್ನಡದಲ್ಲಿ ಬಳಕೆಗೆ ಬಂದಿವೆ.
    ನೀವು ನನ್ನ ಯಾವುದೇ ಲೇಖನದ ಭಾಗಗಳನ್ನು ನಿಮ್ಮ ಲೇಖನದಲ್ಲಿ ಬಳಸಬಹುದು. ಒಮ್ಮೆ ಬರೆದ ಮೇಲೆ ಅದು ಸಾರ್ವಜನಿಕ ಸೊತ್ತು.ನನ್ನ ಅನುಮತಿಯನ್ನು ಕೇಳಬೇಕಿಲ್ಲ ಮತ್ತು ನನ್ನ ಹೆಸರನ್ನು ಉಲ್ಲೇಖಿಸಬೇಕಿಲ್ಲ!

    ReplyDelete
  15. ಬಾಶೆ ಹರಿವ ಹೊಳೆಯೇ ಸರಿ, ಆದರೆ ಎಂದೆಂದಿಗೂ ಕಾವೇರಿ ಕಾವೇರಿಯೇ, ಗಂಗೆ ಗಂಗೆಯೇ. ಕಾವೇರಿಗೆ ತನ್ನದೇ ಆದ ಗುಣ ನಿಬ್ಬರಗಳಿವೆ ಹಾಗೆ ಗಂಗೆಗೂ ಇದೆ.

    ಹಾಗೆಯೇ, ನೀವು ಎನಿತು ಪದಗಳನ್ನು ಕನ್ನಡದಲ್ಲಿ ಬೆರೆಸಿದರೂ ಕನ್ನಡ ಕನ್ನಡವೇ, ಸಕ್ಕದ ಸಕ್ಕದವೇ.

    ಕಾವೇರಿಯನ್ನು ಗಂಗೆ ಮಾಡುವ/ಗಂಗೆಗೆ ಹೋಲಿಸುವ ಮೊಗಸು/ಜತುನವೇಕೆ?
    -ಬರತ್

    ReplyDelete
  16. ಸುನಾತರೆ,
    "...ಹಳೆಗನ್ನಡ ಕವಿ ಆಂಡಯ್ಯನು ತನ್ನ ಕಾವ್ಯದಲ್ಲಿ ಸಂಸ್ಕೃತವನ್ನು ಬಳಸುವದಿಲ್ಲವೆಂದು ಪ್ರತಿಜ್ಞೆ ಮಾಡಿ, ತದ್ಭವಗಳನ್ನು ತುರುಕಿದ್ದು ಎಲ್ಲರಿಗೂ ಗೊತ್ತಿದ್ದ ಸಂಗತಿಯೇ..."

    ಈ ಮೇಲಿನ ಸಾಲುಗಳು ತಮ್ಮ ಆಂಡಯ್ಯನ ಬಗೆಗಿರುವ ಕಡಿಮೆ ಅರಿವನ್ನು ತೋರುತ್ತದೆ. ಹೆಚ್ಚಿನ ಅರಿಮೆ ಇಲ್ಲಿ ನೋಡಿ.
    http://accha-kannada.blogspot.com/
    ಆಂಡಯ್ಯನ ಬಗ್ಗೆ ತುಂಬ ಕೀಳಾಗಿ ಮಾತಾಡಿದ್ದೀರಿ( ತುರುಕಿದ್ದು ಎಂಬ ಪದಬಳಸಿ), ತಾವು ಆಂಡಯ್ಯನ ಬಗ್ಗೆ ಹೆಚ್ಚು ಅರಿತು ಬರೆಯಿರಿ.

    ಆಂಡಯ್ಯ ತುಂಬ ತಿಳಿಯಾಗಿ ಹೇಳಿದ್ದಾನೆ- "ಅಸಮಸಕ್ಕದಮಂಅಚ್ಚಗನ್ನಡಂ" ಅಂತ. ಅಂದರೆ ತದ್ಬವಗಳು ಕೂಡ ಅಚ್ಚಗನ್ನಡವೇ. ನೀವು ಆಂಡಯ್ಯನ ಕಬ್ಬದಲ್ಲಿರುವ ಒಂದೇ ಒಂದು ತತ್ಸಮ ಪದವನ್ನು ತೋರಿಸಿ, ಇದು ತಮಗೆ ನನ್ನ ಸವಾಲು. ಆಂಡಯ್ಯ ಹೇಳಿರುವುದು ತಾನು ತತ್ಸಮವನ್ನು ಬಳಸಿಲ್ಲ ಅಂತ. ದಯವಿಟ್ಟು ತಪ್ಪು ತಪ್ಪು ಬರೆಯುವುದಕ್ಕೆ ಮುಂಚೆ ಎಚ್ಚರದಿಂದಿರಿ.

    ಹಾಗೆಯೇ, ಸಕ್ಕದದಲ್ಲಿರುವ ಹಲವು ಪದಗಳಿಗೆ 'ಮೀನು'(ಮೀನ),'ನೀರು'(ನೀರಜ) ಎಟಿಮಾಲಜಿ ಹೇಳಲಾಗುವುದಿಲ್ಲ. ಇವು ಕನ್ನಡ/ದ್ರಾವಿಡ ನುಡಿಗಳಿಂದ ಸಕ್ಕದಕ್ಕೆ ಹೋಗಿರುವವು. ಹಾಗೆಯೇ ಸಕ್ಕದದಿಂದ ಕನ್ನಡಕ್ಕೆ ತದ್ಬವಗಳು ಬಂದಿವೆ.

    ReplyDelete
  17. Ta. kācu
    1431 Ta. kācu gold, gold coin, money, a small copper coin. Ma. kāśu gold, money, the smallest copper coin. Ko. ka·c rupee. To. ko·s id. Ka. kāsu the smallest copper coin, a cash, coin or money in general. Tu. kāsů an old copper coin worth half a pie, a cash. Te. kāsu a cash, a coin in general, a gold coin, money. Go. (Ko.) kāsu pice

    http://dsal.uchicago.edu/cgi-bin/philologic/getobject.pl?c.0:1:1437.burrow

    ReplyDelete
  18. ಸುನಾಥರೆ, ನನಗೊಂದು ವಿವರಣೆ ಬೇಕು! ಭಾಷಾ ಇತಿಹಾಸಕಾರರ ಅಭಿಪ್ರಾಯದಲ್ಲಿ ಸಂಸ್ಕೃತ ಪ್ರಾಚೀನ ; ಕನ್ನಡ (ದ್ರಾವಿಡ) ಅರ್ವಾಚೀನ. 'ಚಂದ್ರ' ಶಬ್ಡ ವೇದಕಾಲೀನ ಸಂಸ್ಕೃತ ಸಾಹಿತ್ಯದಲ್ಲಿಯೂ ಇದೆ. ಅಂದಮೇಲೆ, ಚಂದ್ರ ದ್ರಾವಿಡದಿಂದ ಸಂಸ್ಕೃತಕ್ಕೆ ಹೇಗೆ ಹೋದ ? 'ಚಂದ್ರ'ನ ಶಬ್ಡೋತ್ಪತ್ತಿಯನ್ನು ಅಲ್ಲಿ ಬಂದಮೇಲೆ ನೋಡುವೆ ಮತ್ತೆ ಬರೆಯುವೆ. ಜನವರಿ 25ಕ್ಕೆ ಬೆಳಗಾವಿಯನ್ನು ತಲುಪುವೆ.

    ReplyDelete
  19. ಸುನಾತರೆ,
    ನೀವು ನಿಮ್ಮ ಕಮೆಂಟಿನಲ್ಲಿ ಹೀಗೆ ಹೇಳಿದಿರಿ
    "..'ಕಾಸು'ಎನ್ನುವ ಪದಕ್ಕೆ ಇಂಗ್ಲೀಶಿನ 'cash' ಪದವೇ ಮೂಲ.."

    ಇದು ತಪ್ಪೆಂದು ನಾನು ಎಮನೊ ಬರೊ ದ್ರಾವಿಡ ನುಡಿಗಂಟಿನ ಮೂಲಕ ತೋರಿಸುತ್ತಿದ್ದೇನೆ.
    Ta. kācu
    1431 Ta. kācu gold, gold coin, money, a small copper coin. Ma. kāśu gold, money, the smallest copper coin. Ko. ka·c rupee. To. ko·s id. Ka. kāsu the smallest copper coin, a cash, coin or money in general. Tu. kāsů an old copper coin worth half a pie, a cash. Te. kāsu a cash, a coin in general, a gold coin, money. Go. (Ko.) kāsu pice

    http://dsal.uchicago.edu/cgi-bin/philologic/getobject.pl?c.0:1:1437.burrow

    ಕನ್ನಡ, ತೆಲುಗು, ಮಲೆಯಾಳ ಇವುಗಳಲ್ಲಿ ಕಾಸು
    ತಮಿಳಿನಲ್ಲಿ 'ಕಾಚು'. ಇದು ಕನ್ನಡ/ದ್ರಾವಿಡದಿಂದ ಇಂಗಲೀಸಿಗೆ ಹೋಗಿದೆಯೆ ಹೊರತು ಅಲ್ಲಿಂದ ಬಂದಿಲ್ಲ.

    ReplyDelete
  20. ಸುನಾಥ ಸರ್....

    ನೀವು ಸಿವಿಲ್ ಇಂಜನೀಯರ್ ಆಗಿ ಇಷ್ಟೆಲ್ಲ ವಿಷಯ ಜ್ನಾನ ಸಂಪಾದನೆ ಹೇಗೆ ಮಾಡಿದಿರಿ...?

    ಅದೂ ಇಷ್ಟು ಆಳವಾಗಿ...!

    ಅಬ್ಭಾ...!

    ನಿಮ್ಮ ಬ್ಲೋಗಿಗೆ ಬಂದು ಎಲ್ಲ ಲೇಖನ ಓದುತ್ತಿದ್ದರೆ...
    ನಿಮ್ಮ ಜ್ನಾನದ ಆಳಕ್ಕೆ ನಾನು ಮೂಕನಾಗಿ ಹೋಗುತ್ತೇನೆ....

    ಈ ಬ್ಲೋಗ್ ಲೋಕದಲ್ಲಿ ನೀವು ಬಹಳ ಭಿನ್ನವಾಗಿ,...
    ಆಳವಾಗಿ ಬರೆಯುತ್ತೀರಿ...

    ನಿಮ್ಮ ಅಭಿಮಾನಿಯಾಗಿ...

    ನನ್ನ ಅಭಿನಂದನೆಗಳು....

    ReplyDelete
  21. ಭರತರೆ,
    ಗಂಗೆ ಗಂಗೆಯೇ, ಕಾವೇರಿ ಕಾವೇರಿಯೇ ಎನ್ನುವದು ಸರಿ.ಆದರೆ
    ಗಂಗೆಯೂ ಜಲಜನಕದ ಭಸ್ಮ(H20)ಹಾಗೂ ಕಾವೇರಿಯೂ ಸಹ
    ಜಲಜನಕದ ಭಸ್ಮ(H20)ವೇ ಆಗಿದೆ.
    ಕಾವೇರಿ ನೀರು ಆವಿಯಾಗಿ, ಮೋಡವಾಗಿ ಮತ್ತೆ ಗಂಗೆಯಲ್ಲಿ ಸುರಿದಿದೆ ಹಾಗೂ vice versa!

    ReplyDelete
  22. ಭರತ,
    ಆಂಡಯ್ಯನ ಕವಿತ್ವದ ಬಗೆಗೆ ನನಗೆ ಅಪಾರ ಗೌರವವಿದೆ. ಆದರೆ
    ಸಂಸ್ಕೃತ(=ತತ್ಸಮ) ಬಳಸುವದಿಲ್ಲವೆನ್ನುವ ಧಿಮಾಕಿನ ಮಾತನ್ನಾಡಿ, ಆತ ತದ್ಭವಗಳನ್ನು ತುರುಕಿದ್ದು ಸುಳ್ಳೆ?
    ತದ್ಭವಗಳು ಅಚ್ಚಕನ್ನಡವೆಂದು ಹೇಳುವ ಪಂಡಿತರ ಮಾತನ್ನು
    ನಾವು ಯಾವಾಗಲೋ ಒಪ್ಪಿದ್ದೇವೆ. ಆದುದರಿಂದಲೇ, ಇಂಗ್ಲಿಶ್,ಮರಾಠಿ, ಪರ್ಶಿಯನ್, ಉರ್ದೂ ಇತ್ಯಾದಿ ಮೂಲದ ಪದಗಳನ್ನು ಕನ್ನಡದಲ್ಲಿ ಬಳಸಲು ಹಿಂದೆ ಮುಂದೆ ನೋಡುವದಿಲ್ಲ. ಇವೂ ಸಹ ತದ್ಭವಗಳೆಂದು ನೀವು ಅರ್ಥ ಮಾಡಿಕೊಳ್ಳಬೇಕು.
    ಕಂದಮಿಳಿನಿಂದ ಅನೇಕ ಪದಗಳು ಸಂಸ್ಕೃತಕ್ಕೆ ಹೋಗಿರುವದಾಗಿ
    ನಾನೂ ಸಹ ಮೊದಲೇ ಹೇಳಿದ್ದೇನೆ.

    ReplyDelete
  23. Anonymus,
    ನೀವು ನೀಡಿದ ಹೆಚ್ಚಿನ ಮಾಹಿತಿಗಾಗಿ ಧನ್ಯವಾದಗಳು.
    ಕೆಲವು ನಿಘಂಟುಗಳ ಮೇರೆಗೆ, cash ಪದವು caisse (=money-box)ಎನ್ನುವ ಪದದಿಂದ ಬಂದಿದೆ.
    ಹೀಗಾಗಿ ಕೆಲವೊಂದು ಪದಗಳ ಮೂಲ ಹುಡುಕುವದು ಸ್ವಲ್ಪ ಕಷ್ಟವೇ ಸರಿ.
    ಧನ್ಯವಾದಗಳು.

    ReplyDelete
  24. ಕಟ್ಟಿಯವರೆ,
    ಸಂಸ್ಕೃತಭಾಷಿಗಳಾದ ಆರ್ಯರು ಭಾರತಕ್ಕೆ ಬರುವ ಪೂರ್ವದಲ್ಲಿಯೇ, ಕಂದಮಿಳ ಭಾಷಿಕರು ಹಿಮಾಲಯದ ತಪ್ಪಲಿನಿಂದ ಪ್ರಾರಂಭಿಸಿ, ಭಾರತದ ತುಂಬೆಲ್ಲ ಹರಡಿದ್ದರು.
    ಸಂಸ್ಕೃತಕ್ಕಿಂತ ಪ್ರಾಚೀನವಾದ ಅನೇಕ ಭಾಷೆಗಳು ವಿಶ್ವದಲ್ಲಿ ಹಾಗೂ ಭಾರತದಲ್ಲಿ ಇವೆ.

    ReplyDelete
  25. ಭರತರೆ,
    ನಾನು Anonymus ಅವರಿಗೆ ಬರೆದ ಉತ್ತರವೇ ಇದಕ್ಕೂ
    ಅನ್ವಯಿಸುತ್ತದೆ.

    ReplyDelete
  26. ಪ್ರಕಾಶ,
    ಕಣ್ಣು, ಕಿವಿಗಳನ್ನು ತೆರೆದುಕೊಂಡಿದ್ದರೆ ಜ್ಞಾನ ಎಲ್ಲಾ ಕಡೆಯಿಂದಲೂ ಬಂದೇ ಬರುವದು. ಆದರೆ ಈ ಜ್ಞಾನವನ್ನು
    prejudice ಇಲ್ಲದೆ ಗ್ರಹಿಸುವ ಮನಸ್ಸು ಮುಖ್ಯ. ಆದುದರಿಂದ ಕುರುಡು ಅಭಿಮಾನ etc. ಇರಕೂಡದು.
    ಪ್ರಕಾಶ,
    ನಾನು ಕ್ರೋಢೀಕರಿಸಿದ ಮಾಹಿತಿಯನ್ನು ನಾನು ನಿಮ್ಮೆದುರಿಗೆ ಇಡುತ್ತಿದ್ದೇನೆಯೇ ಹೊರತು, ಯಾವುದೇ original ವಿಷಯವನ್ನು ಬರೆದಿಲ್ಲ.ಆದರೆ, ನೀವು ನಿಮ್ಮ blogನಲ್ಲಿ ಸುಂದರವಾದ original ಲೇಖನಗಳನ್ನು ಬರೆಯುತ್ತಿದ್ದೀರಿ.
    ನಿಮ್ಮ ಪ್ರತಿಭೆಯ ಹೆಚ್ಚಿನದು.

    ReplyDelete
  27. ಸರ್,
    ಇದೊಂದು ಭಾಷಾವೃದ್ಧಿ ಲೇಖನ.
    ಆದರೆ 'ಕನ್ನಡ V/s ಇತರೆ ಭಾಷೆಗಳು' ತರಹದ
    colliding ಬರಹಗಳು ಆಗಾಗ್ಗೆ ಬರುತ್ತಲೇ ಇವೆ.
    ಇಷ್ಟಕ್ಕೂ ಯಾವುದೇ ಒಂದು ಬರಹ ಸಾರ್ಥಕತೆ
    ಹೊಂದುವದು ಹ್ಯಾಗೆ?
    ಅದು ಎಲ್ಲರ ಮನದಲ್ಲಿ ಪ್ರತಿಫಲಿಸಿ ಅದಕ್ಕೆ ಹತ್ತೆಂಟು
    ಅರ್ಥಗಳು ಹೊಳೆದಾಗ!
    ಆದರೆ ಈ ಭಾಷಾಹುಟ್ಟಿನ ರಗಳೆಯಲ್ಲಿ,ಶುದ್ಧಕನ್ನಡದ
    ಬಳಸುವ ಹುಮ್ಮಸ್ಸಿನಲ್ಲಿ ಬರಹವೊಂದು ನನ್ನಂಥ
    non academic ಓದುಗರಿಗೆ ಅರ್ಥವಾಗದೇ ಹೋದರೆ ಎಷ್ಟು ಕಷ್ಟ!
    ನನಗೆ ನನ್ನ ಕನ್ನಡದ ಬಗ್ಗೆ ಹೆಮ್ಮೆಯಿದೆ.ಆದರೆ ಹಾಗಂತ
    "ಅಭಿಯಂತರುಗಳು ಉದ್ಘಾಟನೆಗೆ ಬರುವರು.ಅವರೇ ಸೊಡರು ಹಚ್ಚಿ
    ಉದ್ಘಾಟಿಸುತ್ತಾರೆ.." ಅಂದರೆ ಕೊಂಚ ಆಭಾಸವೆನಿಸುತ್ತದೆ..

    -ರಾಘವೇಂದ್ರ ಜೋಶಿ

    ReplyDelete
  28. ಬ್ರಾಹ್ಮಣನೊಬ್ಬ ಸಂಸ್ಕೃತ ವೇದ ಪುರಾಣದ ಬಗ್ಗೆ ಪುಟಪುಟ ಲೇಖನಗಳನ್ನು ಬರೆದುನಂತೆ.

    ಆಮೇಲೆ ಸಂಸ್ಕೃತದ ಬಗ್ಗೆ ವಕಾಲತ್ತಿಗೆ ಬಸವಣ್ಣನ ವಚನಗಳನ್ನು ತೋರಿದನಂತೆ. ಜೈನ ಆಂಡಯ್ಯನನ್ನು ಮೂದಲಿಸಿದನಂತೆ.

    ಹಾಗಾದರೆ ಬಸವಣ್ಣನ್ನು ಕಟ್ಟಬಯಸಿದ ವರ್ಣಾತೀತ ಸಮಾಜವನ್ನು ಬೆಂಬಲಿಸಿ ತನ್ನ ಸಂತಾನವನ್ನು ಹೊಲೆಯ ಮಾದಿಗ, ಅದ್ಯಾಕೆ ಒಬ್ಬ ಕ್ರಿಶ್ಚಿಯನ್ನಿಗೆ ಮದುವೆ ಮಾಡುವನೇನು? ಮಾಡಲಾರ.

    ಹಾಗೆಯೇ ಹೇರಳ ಸಂಸ್ಕೃತಭಾಷೆಯ ಪದಗಳ ತುರುಕಾಟದಿಂದ ಸೊರಗಿರುವ ಕನ್ನಡದ ’ಮಾತೃಭಾಷಾಶಿಕ್ಷಣ’ದ ಬಗ್ಗೆ ಕಾಳಜಿ ವಹಿಸಿ ಆಡುನುಡಿಗೆ ಹತ್ತಿರವಾದ ಕಲಿಕೆಯನ್ನು ಪ್ರಸ್ತಾಪಿಸಿದ ಶಂಕರಭಟ್ಟರನ್ನು ಹಳಿಯದೇ ಇರಲಾರ.

    ಇನ್ನು ಈ ಬ್ರಾಹ್ಮಣನ ಲೇಖನಗಳನ್ನು ಮೆಚ್ಚುವ ಮಂದಿಯಲ್ಲಿ ಅದೆಷ್ಟು ಬಸವಣ್ಣನ ಲಿಂಗಾಯತರೋ, ಆಂಡಯ್ಯನ ಜೈನರೋ ಕಾಣರು. ಇತ್ತ ಕಂಡಂತೆ ಬ್ರಾಹ್ಮಣನಿಂದ ಬ್ರಾಹ್ಮಣರಿಗಾಗಿ ಬ್ರಾಹ್ಮಣತ್ವದ ಅಡಕದ ಲೇಖನ.

    ಬಸವಣ್ಣನ ವಚನಗಳ ಬಗ್ಗೆ ಎಷ್ಟು ಬರಹ ಬರೆದಿಹರೋ ದೇವ. ದ.ರಾ.ಬೇಂದ್ರೆಯ ಮುಂದೆ ಅಷ್ಟೊಂದು ಶರಣರು ಸಮರೇನು? ದ.ರಾ.ಬೇಂದ್ರೆ ಧಾರವಾಡದ ಮಾಧ್ವರಲ್ವೇನು!

    ಸುನಾಥರ ಸಲ್ಲಾಪವು ಸುಸಂಸ್ಕೃತವೇ! ಪಾಪಾ ವಚನಗಳನ್ನು ಲಿಂಗಾಯತರಿಗೆ ಬಿಟ್ಟು ಬಿಟ್ಟು, ಆಂಡಯ್ಯನ ಕಬ್ಬಿಗಕಾವವನ್ನು ಜೈನಿರಿಗೆ ಬಿಟ್ಟುಬಿಟ್ಟು, ಹಾಯಾಗಿ ನಿಮ್ಮ ಸನಾತನದ ಧರ್‍ಮಸ್ಥಾಪನೆಯ ಕಡೆ ಸಂಸ್ಕೃತ ಪ್ರಚಾರದ ಕಡೆ ಗಮನ ಹರಿಸಿರಿ.

    ನಾವು ಲಿಂಗಾಯತರ ಸುದ್ದಿ ನಿಮ್ಮಂತಹ ಬ್ರಾಹ್ಮಣಿರಿಗೆ ಯಾಕೆ. ಬಸವಣ್ಣ ಹುಟ್ಟು ಬ್ರಾಹ್ಮಣನಾದರೂ, ಜನಿವಾರದ ಬ್ರಾಹ್ಮಣತ್ವವನ್ನು ತ್ಯಜಿಸಿದವನು. ನೀವು ಜನಿವಾರವನ್ನು ಕಿತ್ತೊಗೆದು ಬಸವತತ್ವನ್ನು ಅಧ್ಯಯನ ಮಾಡಿ, ಅದೇನೆಂದು ತಿಳಿಯಬಹುದು.

    ಬಸವಣ್ಣನ ವಿರೋಧ ಮಾಡಿದವರು ಇವೊತ್ತು ನಮ್ಮ ಬ್ರಾಹ್ಮಣನೇ ಅವನು ಎಂಬುವರು. ಆದರೆ ಬಸವಣ್ಣ ತನ್ನನ್ನು ತಾನು ಹಾರ್‍ವನೆಂದು ಮೂದಲಿಕೆ ಕರೆದುಕೊಂಡನೇ ಹೊರತು ಬ್ರಾಹ್ಮಣತ್ವವನ್ನು ಒಪ್ಪಿಕೊಂಡಲ್ಲ.

    ಇನ್ನು ಅಲ್ಲಮನೋ ವೇದವೆಲ್ಲ ಬೂಟಾಟಿಕೆ ಎಂದಿಹನು. ಅಲ್ಲಮನೂ ಹುಟ್ಟು ಬ್ರಾಹ್ಮಣನು ತಾನೆ.

    ವಚನವನ್ನು ಹೊಗಳುವವರು ವೇದವನ್ನು ಬೂಟಾಟಿಕೆ ಎಂಬ ಮಾತನ್ನು ಒಪ್ಪವರೇ ಸಂಗಮದೇವ?

    -ಒಬ್ಬ ಲಿಂಗಾಯತ.

    ReplyDelete
  29. ಕಾಕಾ,

    ತುಂಬಾ ಉಪಯುಕ್ತ ಹಾಗೂ ಮಾಹಿತಿಪೂರ್ಣ ಲೇಖನ. ಸಲ್ಲಾಪದಲ್ಲಿ ಮತ್ತಷ್ಟು ಇಂತಹ ಲೇಖನಗಳು ಮೂಡಿಬರಲಿ.

    ReplyDelete
  30. rj,
    "ಅಭಿಯಂತರುಗಳು ಉದ್ಘಾಟನೆಗೆ ಬರುವರು.ಅವರೇ ಸೊಡರು ಹಚ್ಚಿ ಉದ್ಘಾಟಿಸುತ್ತಾರೆ.."
    ---ಹಹ್ಹಹ್ಹಾ! ತುಂಬ ಸುಂದರ ಉದಾಹರಣೆ.

    ReplyDelete
  31. ಋಷಿ ಮೂಲ ಹಾಗೂ ನದಿ ಮೂಲ ಹುಡುಕಬಾರದು ಅಂತ ಹಿರಿಯರು ಹೇಳಿದ್ದಾರೆ.
    ಇದೆರಡರ ಜೊತೆ ’ಪದ ಮೂಲ’ವನ್ನು ಸೇರಿಸಿದರೆ ಒಳ್ಳೆಯದು ಅನ್ಸುತ್ತೆ!

    ReplyDelete
  32. Anonymusರೇ,
    ಕಾಮಾಲೆಯಾದವರ ಕಣ್ಣಿಗೆ ಜಗತ್ತೇ ಹಳದಿಯಾಗಿ ಕಾಣುತ್ತದಂತೆ!
    ನಾವಿಲ್ಲಿ ಶರಣರ ವಚನಗಳ ಕನ್ನಡದ ಸೊಬಗಿನ ಬಗೆಗ ಮಾತನಾಡುತ್ತಿದ್ದೇವೆ. ನೀವು ಬ್ರಾಹ್ಮಣ. ಲಿಂಗಾಯತ, ಜೈನ ಇತ್ಯಾದಿ ಮಾತನಾಡುತ್ತ, you are communalising the whole issue. ಭಟ್ಟರ ಶಿಷ್ಯರಿಗೆ ಅದೊಂದೇ ತರ್ಕದ ವಿಷಯವಲ್ಲವೆ? ಅದಕ್ಕಾಗಿಯೇ ಬ್ಲಾಗರುಗಳ ಜಾತಿಯ ಬಗೆಗೆ ಹುಯಿಲು ಎಬ್ಬಿಸುತ್ತ್ತ ತಪ್ಪು ತಪ್ಪು ಊಹೆಗಳನ್ನು ಹರಿಬಿಡುತ್ತಿದ್ದೀರಿ.

    ದಯವಿಟ್ಟು ನಿಮ್ಮ ಕಣ್ಣುಪಟ್ಟಿ ಬಿಚ್ಚಿಕೊಂಡು ಬಂದು, ವಿಶಾಲವಾದ ಜಗತ್ತನ್ನು ವೀಕ್ಷಿಸಿ.

    ReplyDelete
  33. ತೇಜಸ್ವಿನಿ,
    ಧನ್ಯವಾದಗಳು.
    I feel encouraged.

    ReplyDelete
  34. ಸಂದೀಪ,
    ನಿಮ್ಮ ಮಾತಿನ ಯಥಾರ್ಥತೆ ಗೊತ್ತಾಗ್ತಾ ಇದೇರಿ.
    ಆದರೆ,
    "ಸಂತೆಯಲೊಂದು ಮನೆಯ ಮಾಡಿ ಶಬ್ದಗಳಿಗಂಜಿದೊಡೆಂತಯ್ಯಾ?"

    ReplyDelete
  35. ಆರ್ಯರು ಭಾರತಕ್ಕೆ ಹೊರಗಿನಿಂದ ಬಂದವರೆಂಬುದೇ ಕಪೋಲ-ಕಲ್ಪಿತ. ಪಾಶ್ಚಾತ್ಯ ಇತಿಹಾಸಕಾರರು ತಮ್ಮ ರಾಜಕೀಯ ಸ್ವಾರ್ಥಕ್ಕಾಗಿ, ಭಾರತೀಯರಲ್ಲಿ ಭೇದ ಹುಟ್ಟಿಸಲು,ಈ ಕಪೋಲ ಕಲ್ಪಿತ ಇತಿಹಾಸವನ್ನು ಹುಟ್ಟಿಸಿ ತಮ್ಮ ಬೇಳೆ ಬೇಯಿಸಿಕೊಳ್ಳುವದಕ್ಕಾಗಿ, ಅದನ್ನೇ ನಮಗೆ ಕಲಿಸಿ, ನಮ್ಮ ವಿವೇಕವನ್ನೇ ಪೂರ್ವಗ್ರಹ ದೂಷಿತವಾಗಿಸಿದ್ದಾರೆಂದು ಭಾರತೀಯ ಇತಿಹಾಸಕಾರರು ಹೇಳುತ್ತಾರಲ್ಲ ! ಇನ್ನೊಂದು ಮಾತು, ಸಂಸ್ಕೃತ ಹೊರಗಿನಿಂದ ಬಂದದ್ದಾದರೆ, ತನ್ನ ಉಗಮಸ್ಥಾನದಲ್ಲಿಯಾದರೂ ಇರಬೇಕಿತ್ತಲ್ಲ ? ಭಾರತ ಉಪಖಂಡವನ್ನು ಬಿಟ್ಟು ಸಂಸ್ಕೃತ ಬೆರೆಲ್ಲಿ ಇದೆ ? ಆರ್ಯ-ಅನಾರ್ಯ ವಾದವೇ ತಳ-ಬುಡ ಇಲ್ಲದ್ದು ! ಆರ್ಯ ಶಬ್ದಕ್ಕೆ 'ಸುಸಂಸ್ಕೃತ, ಹಿರಿಯ' ಎಂಬ ಗೌರವ ಸೂಚಕ ಅರ್ಥಗಳೂ
    ಇವೆ. ಕಾಳಿದಾಸನ ಕಾವ್ಯಗಳಲ್ಲಿ 'ಆರ್ಯ' ಇದೇ ಅರ್ಥದಲ್ಲಿ ಬಳಸಲಾಗಿದೆ.

    ReplyDelete
  36. ಸೆಕ್ಯುಲರ್‍ ಸುನಾಥರೇ ಬೈಬಲ್ಲು ಕುರಾನ್ಗಳಲ್ಲೂ ಸಂಸ್ಕೃತ ಇರಬೇಕು ನೋಡ್ರಿ.

    ನಿಮ್ ಸಂಸ್ಕೃತ ಇಲ್ಲದೇ ಇರೋ ಜಾಗವೇ ಇಲ್ಲ ಅಲ್ವೇ!

    ReplyDelete
  37. ಕಟ್ಟಿಯವರೆ,
    ಸಂಸ್ಕೃತ ಹಾಗೂ ಲ್ಯಾಟಿನ್ ಭಾಷೆಗಳು ಸೋದರ ಭಾಷೆಗಳು.
    ಪರ್ಶಿಯನ್ ಭಾಷೆ ಕೂಡ ಸಂಸ್ಕೃತದ ಸೋದರ ಭಾಷೆ. ಸಂಸ್ಕೃತದ ಸೋದರ ಭಾಷೆಗಳು ಯುರೋಪ್‌ನಲ್ಲಿ ಇವೆ. ಆರ್ಯರ ಮೂಲಸ್ಥಾನದ ಬಗೆಗೆ ಅನೇಕ theoryಗಳು ಇವೆ.
    ಲೋಕಮಾನ್ಯ ತಿಳಕರ ಮೇರೆಗೆ ಆರ್ಯರು ಉತ್ತರ ಧ್ರುವದ ಸಮೀಪದಿಂದ ಹರಡಿದವರು. ಋಗ್ವೇದದ ಉದಾಹರಣೆಗಳನ್ನು ತಿಲಕರು ನೀಡುತ್ತಾರೆ.

    ReplyDelete
  38. ಪೂರ್ವಾಗ್ರಹಪೀಡಿತ Anonymousರೆ,
    ಕುರಾನಿನಲ್ಲಿ ಬರುವ ಸಂಸ್ಕೃತ ಪದಗಳಿಗಾಗಿ ಖಲೇದ ಅಹ್ಮದ ಅವರು Daily Times ಎನ್ನುವ ಪಾಕಿಸ್ತಾನಿ ಪತ್ರಿಕೆಯಲ್ಲಿ ಬರೆದ ಲೇಖನವನ್ನು ((http://www.dailytimes.com.pk/default.asp?page=story_1-8-2004_pg3_3)
    ಓದಿರಿ.
    ಅದರಂತೆ, ಬೈಬಲ್ಲಿನಲ್ಲಿ ಬರುವ ಸಂಸ್ಕೃತ ಪದಗಳಿಗಾಗಿ George Borrow ಬರೆದ ಪುಸ್ತಕ ಓದಿರಿ.
    (http://ebooks.adelaide.edu.au/b/borrow/george/bible/chapter37.html)

    ReplyDelete
  39. anonymous ಅವರೆ,

    ಸುನಾಥರು ಶರಣರ ವಚನಗಳ ಸೊಬಗನ್ನು ವಿವರಿಸಿದ್ದಾರೆ. ಈ ತಿಳಿವನ್ನು ನಾವೆಲ್ಲರೂ ಆಸ್ವಾದಿಸಬೇಕು. ಸುನಾಥರು ಬೇಂದ್ರೆ ಹಾಗು ಶರೀಫರ ಬಗೆಗೆ ಬರೆದಿದ್ದಾರೆ.ಅದರಂತೆಯೆ ಈಗ ಶರಣರ ವಚನಗಳ ಬಗ್ಗೆ ಬರೆದಿದ್ದಾರೆ.ಯಾವುದೇ ಧರ್ಮ ಅಥವಾ ಜಾತಿಯ ಬಗೆಗೆ ಹೇಳಿಲ್ಲ.
    ಅವರು ಕನ್ನಡಿಗರು ಎನ್ನುವುದು ಮಾತ್ರ ನನಗೆ ಕಾಣುತ್ತದೆ. ಅವರು ಕೇವಲ ಕನ್ನಡ ಪದಗಳ ಬಗೆಗೆ ವಿವರಣೆ ಹಾಗು ಸಾಹಿತ್ಯದ ಜ್ಞಾನವನ್ನು ಕೊಡುತ್ತಿದ್ದಾರೆ ಎನ್ನುವುದು ನನ್ನ ಅಭಿಪ್ರಾಯ.ಬೇರೆಯವರ ಜ್ಞಾನವನ್ನು ನಾವು ತೆಗೆದುಕೊಳ್ಳಬೇಕು. ಜಾತಿಯ ವಿಚಾರವೇಕೆ?

    -ಕರುಣಾ

    ReplyDelete
  40. I strongly support statements of karuna.
    -rj

    ReplyDelete
  41. "..ಆಂಡಯ್ಯನ ಕವಿತ್ವದ ಬಗೆಗೆ ನನಗೆ ಅಪಾರ ಗೌರವವಿದೆ. ಆದರೆ ಸಂಸ್ಕೃತ(=ತತ್ಸಮ) ಬಳಸುವದಿಲ್ಲವೆನ್ನುವ ಧಿಮಾಕಿನ ಮಾತನ್ನಾಡಿ, ಆತ ತದ್ಭವಗಳನ್ನು ತುರುಕಿದ್ದು ಸುಳ್ಳೆ?.."
    ಮತ್ತೆ ತುರುಕಿದ್ದು ಯಾಕೆ. ಅವನು ತತ್ಸಮ ಬಳಸಿಲ್ಲ ಅಂತ ಹೇಳಿರುವುದು ಸಾಮಿ. ಅವನು ಹೇಳಿದಂತೆ ತದ್ಬವವೂ ಕೂಡ ಅಚ್ಚಗನ್ನಡವೆ. ನಿಮಗೆ ಆಗಲೆ ನಾನು ಸವಾಲು ಹಾಕಿ ಆಗಿದೆ - ನೀವು 'ಕಬ್ಬಿಗರ ಕಾವನ್' ಓದಿ ಅಲ್ಲಿ ತತ್ಸಮಗಳಿದ್ದರೆ ತೋರಿಸಿ. ಸುಮ್ಮನೆ ನೀವು ಆಂಡಯ್ಯನಿಗೆ ಅವಮಾನ ಮಾಡಿದರೆ ಒಪ್ಪಲಾಗದು.
    -ಬರತ್

    ReplyDelete
  42. ಕರುಣಾ, rj,
    ಧನ್ಯವಾದಗಳು.

    ReplyDelete
  43. Anonymousರೆ,
    ಆಂಡಯ್ಯನ ಪ್ರಕಾರ ತದ್ಭವವೂ ಅಚ್ಚಕನ್ನಡ. ಇನ್ನು ಕೆಲವರ ಪ್ರಕಾರ ತದ್ಭವಗಳು, ಅಪಭ್ರಂಶಗಳು ಎಲ್ಲವೂ ಅಚ್ಚಕನ್ನಡವೇ. ಒಂದು ಮಾತು ಗೊತ್ತಾ? ಪ್ರತಿಯೊಬ್ಬ ಕನ್ನಡಿಗನ ಅಚ್ಚ ಕನ್ನಡವೂ ಬೇರೆಬೇರೆಯಾಗಿದೆ. ನೀವೇ ಈಗ ಸವಾಲು ಎನ್ನುವ ಹಿಂದೀ ಶಬ್ದವನ್ನೂ, ಅವಮಾನ ಎನ್ನುವ ಸಂಸ್ಕೃತ ಶಬ್ದವನ್ನೂ ಉಪಯೋಗಿಸಿದ್ದೀರಿ.ನಿಮ್ಮ ಪ್ರಕಾರ ಇದೂ ಅಚ್ಚ ಕನ್ನಡವೇ.
    Right?
    ನನ್ನ ಪ್ರಕಾರ ಇದೂ ಅಚ್ಚಕನ್ನಡವೇ.
    ನಿಮಗೆ ನಾನು ಮಾಡುವ request ಒಂದೇ:
    ಬೇಕಾದಂತಹ ಅಚ್ಚಕನ್ನಡ ಬಳಸಿರಿ; ಆದರೆ ಹುಚ್ಚುಕನ್ನಡ
    ಮಾತ್ರ ಬಳಸಬೇಡಿ!

    ReplyDelete
  44. ಸುನಾಥನ ಸರ್‍ಟಿಪಿಕೇಟ್ ಸೆಂಟರ್‍.

    ಬೇರೊಬ್ಬರ ಸಂಗತಿಗೆ ತಲೆ ಹಾಕಿಕೊಂಡು ಸರ್‍ಟಿಫಿಕೇಟು ಕೊಡುವ ಬ್ರಾಹ್ಮಣ ಸಂಪ್ರದಾಯ.

    ಈ ವಯ್ಯ ಯಾರನ್ನ ಬೆಟ್ಟು ಮಾಡವ್ನೆ ಎಂದು ನಮಗೆ ಗೊತ್ತು. ಆ ಗುರುಗಳ ಯಾವುದೋ ಒಂದು ಕೂದಲ ಸಮವಿಲ್ಲ ಈ ಮನುಶ್ಯ.

    ಅವರವ ಕೆಲಸವನ್ನು ಅವರವರು ನೋಡಿಕೊಂಡರೆ ಒಳ್ಳೇದು. ಅತಿಯಾಗಿ ಬ್ರಾಹ್ಮಣಿಕೆ ಮಾಡಿದರೆ ಮಡಿಕೆಟಿಸಿಕೊಂಡಾರು.

    ಅಚ್ಚಗನ್ನಡವೋ, ಹುಚ್ಚುಗನ್ನಡವೋ, ಅವರವರಿಗೆ ಬಿಟ್ಟಿದ್ದು. ಬಿಟ್ಟಿ ಬ್ಲಾಗ್ ಸಿಕ್ಕದೆ ಎಂದು ಧಾರವಾಡದಲ್ಲಿ ದೊಡ್ಡ ಬರಹ ಎಂದು ಹೇತು, ಏನೋನೇ ಬರೆಯೋದು.

    ನಿಮ್ ಧಾರವಾಡದ ಹರಕು ಮಂದಿಯ ವಿಚಾರಕ್ಕೆ ನಾವು ಮೈಸೂರು ಬೆಂಗಳೂರಿನ ಅಚ್ಚಕನ್ನಡಿಗರು ನಕ್ಕು ಸುಮ್ಮನಾಗಿದ್ದೀವಿ. ನಿಮ್ಮ ಮರಾಠಿ ’ಪ್ರೇಮ’, ಹಿಂದಿ ಹಂದಿ ಪ್ರೇಮ, ಹಿಂದೂಸ್ತಾನಿ ಎಂಬ ಪಾರಸೀ ಸಂಗೀತದ ಪ್ರೇಮ, ಧಾರವಾಡ ಅತಿ ಮಡಿಬ್ರಾಹ್ಮಣರ ಸಂಸ್ಕೃತ ಪ್ರೇಮ ನಮಗೆಲ್ಲ ಗೊತ್ತಿದೆ. ಆದರೂ ಸುಮ್ಮನಿದ್ದೀವಿ.

    ಮೊದಲು ಮರಾಠಿ ಹುಚ್ಚುಬಿಡಿ, ಹಿಂದೂಸ್ತಾನಿಗೆ ಪ್ರಾಶಸ್ತ್ಯ ಬಿಡಿ. ಕನ್ನಡ ನೆಲದ್ದು ಅಚ್ಚಕನ್ನಡ, ಕರ್‍ನಾಟಕ ಸಂಗೀತ.

    ಹೀಗೆ ಈ ಬೊಗಳೆ ’ಸಂಗೀತಕ್ಕೆ ಭಾಷೆಯಿಲ್ಲ’ ಎಂಬ ವಾದ ತೆಗೀತಾನೆ. ನಿಮ್ ಧಾರವಾಡದ ಮಹನೀಯರ ಸುದ್ದಿ ನಮಗೆ ಗೊತ್ತಿದೆ.

    ನಿಮಗೆ ಅಚ್ಚಕನ್ನಡ ಬೇಡದಿರಬಹುದು. ಆದರೆ ನಮಗೆ ಬೇಕು. ನಿಮ್ಮ ಶರಣರ ವಚನ ಯಾವ ಒಕ್ಕಲಿಗನಿಗೆ ಬೇಕಿದೆ? ನಾವು ’ಮನೆಗೆ ವೋಗು. ದುಡ್ ಅಯ್ತಾ’ ಎಂದಾಗ ’ಹಕಾರ’ ಬರದವರು ಎಂದು ನಕ್ಕ ಹಲಕ ಜನ ನೀವು. ನೀವು ಚಲು ಅನ್ನು ಛಲೋ ಎಂದಾಗ, ಬಹಳ ಅನ್ನು ಭಾಳ ಎಂದಾಗ ಮನೆಯನ್ನು ಮನಿ ಅಂದಾಗ ನಾವು ಮುಚ್ಚಿಕೊಂಡಿಲ್ವ. ಹಂಗೆ ನೀವು ಇರೋದು ಒಳ್ಳೇದು.

    ನಿಮಗೆ ಕಮೆಂಟಾಗಿದ್ದೋರೆಲ್ಲ ನಿಮ್ಮೂರಿನವರೇ ಇರಬೇಕು. ಧಾರವಾಡದ ಅಧಿಕಪ್ರಸಂಗಿಗಳು. ನಿಮ್ಮ ಕೈಯಲ್ಲಿ ಏನು ಆದೀತು. ಪಕ್ಕದ ಬೆಳಗಾವಿ ಬಗ್ಗೆ ಮಾತಾಡಕ್ಕೆ ಮಂಗಳೂರಿನವರು, ಹಾಸನ ಮೈಸೂರಿನವರು ಬೇಕು.

    ತೂ! ಅಲ್ಲ ಥೂ..

    ತಂಟೆ ಜಾಸ್ತಿ ಆಯ್ತು.!

    ReplyDelete
  45. ಉತ್ತರ ಕರ್ನಾಟಕದ ಜನ ರಫ್ಫೂ ಅನ್ನೋದು ಈವಯ್ಯನ ನೋಡಿಯೇ ಇರಬೇಕು. ಮೊಂಡತನ.

    ReplyDelete
  46. ಭರತ್/ಸುನಾಥ

    > ಕನ್ನಡ, ತೆಲುಗು, ಮಲೆಯಾಳ ಇವುಗಳಲ್ಲಿ ಕಾಸು
    > ತಮಿಳಿನಲ್ಲಿ 'ಕಾಚು'. ಇದು ಕನ್ನಡ/ದ್ರಾವಿಡದಿಂದ
    > ಇಂಗಲೀಸಿಗೆ ಹೋಗಿದೆಯೆ ಹೊರತು ಅಲ್ಲಿಂದ ಬಂದಿಲ್ಲ.

    ಇದು ತಮಿಳಲ್ಲೂ ಕೂಡ ಕಾಸು ಅಂತಲೇ. ಕನ್ನಡದಿಂದ ಇಂಗ್ಲೀಷಿಗೆ ಹೋಗಿದೆಯೋ ಇಲ್ಲವೋ ಗೊತ್ತಿಲ್ಲ, ಆದರೆ ವ್ಯಾಸರಾಯರ ಕಾಲದಲ್ಲಿ ಇನ್ನೂ ಇಂಗ್ಲಿಷ್ ನಮ್ಮ ದೇಶದಲ್ಲಿ ಹಾಸುಹೊಕ್ಕಾಗಿರಲಿಲ್ಲ ಅಂತ ಮಾತ್ರ ಹೇಳಬಲ್ಲೆ. ವ್ಯಾಸರಾಯರು ಪುರಂದರ ದಾಸರ ಬಗ್ಗೆ ಬರೆದಿರುವ (ಸುಮಾರು ಕ್ರಿ.ಶ.೧೫೨೦ ಅಂದುಕೊಳ್ಳಬಹುದು) ದಾಸರೆಂದರೆ ಪುರಂದರದಾಸರಯ್ಯ ಅನ್ನುವ ದೇವರನಾಮದಲ್ಲಿ "ಬೇಸರಿಲ್ಲದೆ ಅವರ ಕಾಡಿ ಬಳಲಿಸುತ ಕಾಸುಗಳಿಸುವ ಪುರುಷ ಹರಿದಾಸನೇ?" ಎಂದು ಕೇಳುವುದನ್ನು ಇಲ್ಲಿ ನೆನೆಯಬೇಕು.

    ಅಂದಹಾಗೆ, ಗೆಳೆಯರೊಬ್ಬರಿಂದ ಶಂಕರಭಟ್ಟರ ಪುಸ್ತಕಗಳು ಕೆಲವನ್ನು ಎರವಲು ತೆಗೆದುಕೊಂಡು ಓದುತ್ತಿರುವೆ. ಅವರ ಬರಹ ಬದಲಾಯಿಸುವ ಮಾತು ನನಗೆ ಅಷ್ಟು ಹಿಡಿಸದಾದರೂ, ಅವರು ಕನ್ನಡ ವ್ಯಾಕರಣದ ಬಗ್ಗೆ ಹೇಳಿರುವ ಮಾತುಗಳು ಸೊಗಸಾಗಿವೆ. ಅಲ್ಲಿರುವ ವಿಷಯಗಳು ಹಲವನ್ನು ಮುಂಚೆ ಬಿಡಿಬಿಡಿಯಾಗಿ ಓದಿದ್ದೆನಾದರೂ, ಒಟ್ಟಿಗೆ ಓದುವುದು ಒಂದು ಒಳ್ಳೇ ಅನುಭವ.

    ಹೊಸಪದಗಳನ್ನು ಹುಟ್ಟುಹಾಕುವ ಬಗ್ಗೆ ಅವರ ವಿಚಾರಸರಣಿ ಬಹಳ ಚೆನ್ನಾಗಿದೆ.

    ReplyDelete
  47. ಈ "ಅನಾಮಧೇಯ" ಬಹಳೇ ತಿಕ್ಕಲು ಇದೆ. ಸಾಮಾನ್ಯ ಸಭ್ಯತೆಯೂ ಇಲ್ಲ. ಇವನಿಗೆ ಅವಜ್ಞೆಯೇ ಸರಿ ಉತ್ತರ !

    ReplyDelete
  48. ಸುನಾಥ ಸರ್....

    ಈ ಅನಾಮಧೇಯನನನ್ನು ಅಲಕ್ಷಿಸಿಬಿಡಿ....

    ಎಷ್ಟು ಚಂದವಾದ ಚರ್ಚೆಯ ವೇದಿಕೆಯನ್ನು...

    ಗಲೀಜು ಮಾಡಿ ಬಿಡುತ್ತಾರೆ...

    ಬ್ರಿಟಿಷರು ನಮ್ಮನ್ನು ಒಡೆದರು..

    ಜಾತಿ, ಭಾಷೆ, ಮತ ..ಅಂತೆಲ್ಲ...

    ಇಂಥವರು ಅದನ್ನು ಮುಂದುವರೆಸುತ್ತಿದ್ದಾರೆ...

    ಇಂಥವರ ಪ್ರತಿಕ್ರಿಯೆ ಅಳಿಸಿ ಬಿಡಿ...

    ನಿಮ್ಮ ಒಳ್ಳೆಯತನದ ದುರುಪಯೋಗವಾಗುತ್ತಿದೆ...

    ಚರ್ಚೆಯಿಂದ ಬರುವ ಒಳ್ಳೆಯದನ್ನು ತೆಗೆದು ಕೊಳ್ಳುವ ಸ್ವಭಾವ ಇವರದಲ್ಲ...

    ಹೆಸರು ಹಾಕಿ ಬರೆಯುವ ಧೈರ್ಯವೂ ಇವರಿಲ್ಲಿಲ್ಲ...

    ನನ್ನ ನುಡಿ ತಪ್ಪಿದ್ದರೆ ಕ್ಷಮೆ ಇರಲಿ..

    ReplyDelete
  49. ಕರುಣಾ ಅವರ ಮಾತುಗಳು ನಿಜಕ್ಕೂ ಅರ್ಥಪೂರ್ಣ ಹಾಗೂ ಮಾನನೀಯವಾಗಿವೆ.

    ReplyDelete
  50. ಸುನಾಥ್ ಸರ್..ನಿಮ್ಮ ಬರೆಯುವ ವಿಷಯಗಳಿಂದ ತುಂಬಾ ತಿಳ್ಕೊಳ್ತಿವಿ ..ವಂದನೆಗಳು ಸರ್.
    -ಚಿತ್ರಾ

    ReplyDelete
  51. @ಸುನಾಥಂಕಲ್,
    ಅನಾಮಧೇಯ ಯಾರು ಅಂತ ಎಲ್ಲರಿಗೂ ಗೊತ್ತಿದೆ.. ಸುಮ್ಮನೆ ಅವನ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ..

    >>> ಸಂಸ್ಕೃತದಲ್ಲಿ ಶೇಕಡಾ ೫೦ಕ್ಕಿಂತಲೂ ಹೆಚ್ಚಿಗೆ ಕನ್ನಡ ಪದಗಳು ಇರುವ ಕಾರಣದಿಂದ ಸಂಸ್ಕೃತ ಗ್ರಂಥದಲ್ಲಿ ಕನ್ನಡ ಪದಗಳನ್ನು ಬಳಸಿದ್ದಾರೆಂದು ಧಾರಾಳವಾಗಿ ಹೇಳಬಹುದು.

    ನೀವು ಏನು ಹೇಳಬಯಸಿದ್ದಿರಿ ಎಂದು ತಿಳಿಯಲಿಲ್ಲ. ಸಂಸ್ಕೃತದಲ್ಲಿ ಶೇಕಡಾ ೫೦ಕ್ಕಿನ್ತ ಹೆಚ್ಚು ಕನ್ನಡ ಪದಗಳಿವೆಯೇ?

    @ಬಿಸಿಲ ಹನಿ:
    ಸರ್ಪ-serpent

    ಇಲ್ಲಿ ಸರ್ಪ ಕನ್ನಡ ಪದವಲ್ಲ.. ಸಂಸ್ಕೃತ ಪದ. ಮತ್ತು serpent ಎಂಬುದು ಆಕ್ಸ್ಫರ್ಡ್ ನಿಘಂಟಿನ ಪ್ರಕಾರ ORIGIN from Latin serpere ‘to creep’ ಎಂದು ಇದೆ..

    @ಭರತ್:
    >>> ಆಂಡಯ್ಯ ತುಂಬ ತಿಳಿಯಾಗಿ ಹೇಳಿದ್ದಾನೆ- "ಅಸಮಸಕ್ಕದಮಂಅಚ್ಚಗನ್ನಡಂ" ಅಂತ.

    ಹೌದು.. ಕುವೆಂಪು ಅವರೂ ಹೇಳಿದ್ದಾರೆ ತಮ್ಮ ರಾಮಾಯಣ ದರ್ಶನಂ ಇರುವುದು ಮಹಾಛಂದಸ್ಸು ಅಂತ... ನಾನೂ ಹೇಳುತ್ತೇನೆ.. ಕನ್ನಡಿಗರು ಬಳಸುವ ಪದಗಳೆಲ್ಲವೂ ಕನ್ನಡವೇ ಅಂತ.. ಕನ್ನಡಿಗರು ಸಂಸ್ಕೃತ ಪದ ಬಳಸ್ತಾರೆ.. ಆದ್ದರಿಂದ ಅವೂ ಕನ್ನಡ ಪದಗಳೇ... ಸರಿ ಹೋಯ್ತಲ್ಲ..

    >>> ಹಾಗೆಯೇ, ಸಕ್ಕದದಲ್ಲಿರುವ ಹಲವು ಪದಗಳಿಗೆ 'ಮೀನು'(ಮೀನ),'ನೀರು'(ನೀರಜ) ಎಟಿಮಾಲಜಿ ಹೇಳಲಾಗುವುದಿಲ್ಲ.

    ನೀವು ಮತ್ತೆ ಜಾಣ ಕಿವುಡು/ಕುರುಡು ತೋರಿಸಬೇಡಿ
    ಇಲ್ಲಿದೆ ಹತ್ತು ಸಾರಿ ಓದಿ..

    ReplyDelete
  52. ಸಲ್ಲಾಪ ಬ್ಲಾಗ್ಗಾರರೇ,

    ಬರತ ಅವರು ನನಗೆ ಈ ಕೊಂಡಿಯನ್ನು ತೋರಿಸಿ ನನ್ನ ಅನಿಸಿಕೆಯನ್ನು ಅರುಹಲು ಸೂಚಿಸಿದರು.

    ಅದಕ್ಕಾಗಿ ನಾನು ನನ್ನ ಕೆಲವು ಅನಿಸಿಕೆಗಳನ್ನು ಹೇಳುವೆನು. ನಿಮ್ಮ ಸಲ್ಲಾಪ ಬ್ಲಾಗಿನ ಓದುಗ ನಾನಲ್ಲ. ಈ ಬ್ಲಾಗು ಮತ್ತು ಹಿಂದೆ ನೀವು ಶಂಕರಬಟ್ಟರ ಬಗ್ಗೆ ಬರೆದ ಬ್ಲಾಗುಗಳನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಅನಿಸಿಕೆ ಬರೆದಿಹೆನು.

    ೧)ನಡುಗನ್ನಡ ಮತ್ತು ಹಳಗನ್ನಡದ ಹಲವು ಸಂಗತಿಗಳು ಇಂದು ಅಪ್ರಸ್ತುತ. ವಚನಗಳನ್ನು ಮಾದರಿಯಾಗಿ ತೆಗೆದುಕೊಂಡುದ್ದನ್ನು ನಾನು ಒಪ್ಪುವುದಿಲ್ಲ. ಇಂದೂ ವಚನದ ನುಡುಗನ್ನಡದ ಪ್ರಯೋಗ ಸಲ್ಲದು.

    ೨) ನಿಮ್ಮ ಸಂಸ್ಕೃತದ ಅವಶ್ಯಕತೆಯ ಮಾತುಗಳು ನನಗೆ ತುಸು ಉತ್ಪ್ರೇಕ್ಶೆ ಎನಿಸಿದವು. ಆದರೆ ಹೀಗೆ ಸಂಸ್ಕ್ರುತವೂ ವೇದ ಕಾಲದಿಂದಲೇ ದ್ರಾವಿಡನುಡಿಯ ಶಬ್ದಗಳನ್ನು ಬಳಸಿಕೊಂಡು ಬಂದಿದೆಯೋ ಹಾಗೇ ಕನ್ನಡಕ್ಕೂ ಹೊರನುಡಿ/ಪರಬಾಶಾ ಪದಗಳು ಬೇಕು, ಈ ವಿಶಯದಲ್ಲಿ ಯಾವ ಅನುಮಾನವಿಲ್ಲ.

    ೩) ಆದರೆ ಬೇಕಾದ ಹೊರನುಡಿಯ ಪದ ಸಂಸ್ಕ್ರುತದದ್ದೇ ಆಗಿರಬೇಕು ಎಂಬ ದೋರಣೆ ಕೆಲವರದ್ದು. ಅದು ಸಲ್ಲದು. ಕಂಪ್ಯೂಟರು ಕನ್ನಡದಲ್ಲಿ ಗಣಕವೇಕೆ ಆಗಬೇಕು, ಕಂಪ್ಯೂಟರಾಗೇ ಇರಬಹುದಲ್ಲ. ಇಂಟರ್‍ನೆಟ್ಟು ಕನ್ನಡದಲ್ಲಿ ಅಂತರ್‍ಜಾಲವೇಕೆ ಆಗಬೇಕು, ಇಂಟರ್‍ನೆಟ್ಟಾಗೇ ಇರಬಹುದಲ್ಲ. ಇಲ್ಲಿ ಕೆಲವು ಸಂಸ್ಕ್ರುತ ಪಕ್ಶಪಾತಿಗಳ ಹಟವನ್ನು ಕಂಡು ಬರತರು ಕೆಲವು ಮಾತುಗಳನ್ನು ಹೇಳಿಬೇಕು.

    ೪) ನಿಮ್ಮ ಆತಂಕವು ಅಕಾರಣವು. ಇಂದು ಕನ್ನಡದಲ್ಲಿ ಬೇಕು ಎಂದು ಹೇಳುತ್ತಿರುವ, ಸಾರುತ್ತಿರುವ ಬಾಶಾಸುದಾರಣೆಗಳನ್ನು, ಪದ ಮತ್ತು ಲಿಪಿ ಬದಲಾವಣೆಗಳನ್ನು ಯಾರೂ ನಡೆಸಿ ತೋರಿಸುತ್ತಿಲ್ಲ. ಆದುದರಿಂದ ನಿಮ್ಮ ಸಂಸ್ಕ್ರುತಪದಗಳನ್ನು ಒಳಗೊಂಡ ಕನ್ನಡ ಸುರಕ್ಶಿತ ಮತ್ತು ಸುಬದ್ರ. ಅದಕ್ಕಾಗಿ ಅನ್ಯಥಾ ಆತಂಕಿಸಬೇಡಿರಿ.

    ೫) ಇನ್ನು ಅಪೇಕ್ಶಿತ ಪರಿವರ್‍ತನೆಗಳು ಅದು ಯಾವ ರಾಯನ ಕಾಲಕ್ಕೆ ಬರುವುದೋ? ಅದು ಬರುವ ಸಂಬಾವನೆಗಳಂತೂ ಗೋಚರಿಸುತ್ತಿಲ್ಲ.
    ಒಟ್ಟಿನಲ್ಲಿ.. ಈ ಕನ್ನಡ-ಸಂಸ್ಕ್ರುತದ ತಿಕ್ಕಾಟದ ಸಂಗತಿಯು ಮುಗಿಸಿಬಿಡುವ ಹಂತ ತಲುಪಿದೆ. ನನಗೂ ಇದರಲ್ಲಿ ಆಸಕ್ತಿ ಕುಂದಿದೆ. ಈ ಮಾತುಕತೆಗಳು ಎತ್ತೆತ್ತಲೋ ಸಾಗಿ ಮತ್ತೆ ಮೊದಲ ಹತ್ತಿದ ಕಡೆಗೇ ಬಂದು ನಿಲ್ಲುವುದು. ಕೊನೆಯಿಲ್ಲದ ವ್ರುತ್ತಾಕಾರದ ಗೋಚಲು.

    ಬಾಶಾಂದರು ಕನ್ನಡದವರು, ಸಂಸ್ಕ್ರುತದವರು, ಮರಾಟಿಗಳು, ತಮಿಳರು, ತೆಲುಗರು, ಹಿಂದಿಗಳು ಎಲ್ಲರೂ ಇದ್ದಾರೆ, ಯಾರೇನು ಒಬ್ಬರಿಗಿಂತ ಇನ್ನುಬ್ನರು ಹೆಚ್ಚೂ ಇಲ್ಲ, ಕಡಮೆಯೂ ಇಲ್ಲ.

    ಮಯ್ಯೂ ಕರಗದು, ಮನವೂ ಕರಗದು, ಕರಗುವುದು ಬರಿ ಹೊತ್ತೊಂದೇ! :)

    ನಮಸ್ಕಾರಗಳು
    ಮಹೇಶ

    ReplyDelete
  53. 'ಕಾಸು'ಎನ್ನುವ ಪದಕ್ಕೆ ಇಂಗ್ಲೀಶಿನ 'cash' ಪದವೇ 'ಮೂಲ'

    ಅಲ್ಲ. ಬರತರ ವಿವರಣೆಯಲ್ಲಿ ಕೂಡ ತಪ್ಪಿದೆ.
    ಕಾಸು ಇದು ದ್ರಾವಿಡ ಪದ.

    ಆದರೆ ರುಪಾಯಿ ಸಂಸ್ಕ್ರುತದಿಂದ ಬಂದುದು. ರುಪಾಯಿ ( ರೂಪ್ಯಕಂ? )ಎಂದರೆ ಬೆಳ್ಳಿ ಅಲ್ಲವೇ ಸಂಸ್ಕ್ರುತದಲ್ಲಿ.

    ಹಣ(ಪಣ), ದುಡ್ಡು, ಡಬ್ಬ ಇದು ದ್ರಾವಿಡ ಪದಗಳು

    ReplyDelete
  54. This comment has been removed by the author.

    ReplyDelete
  55. ಹಂಸಾನಂದಿ,
    ಮಾಹಿತಿಗಾಗಿ ಧನ್ಯವಾದಗಳು.

    ReplyDelete
  56. ಅಬ್ದುಲ್ ಖಾದರ್, ಪ್ರಕಾಶ, ತೇಜಸ್ವಿನಿ, ಚಿತ್ರಾ,
    ಧನ್ಯವಾದಗಳು. ನಿಮ್ಮ ಸಲಹೆಯನ್ನು ಲಕ್ಷಿಸುವೆ.

    ReplyDelete
  57. ಹರೀಶ,
    ಸಾವಿರಾರು ವರ್ಷಗಳ ಹಿಂದೆ, ಭಾರತದಲ್ಲಿ ಆರ್ಯರು ಹಾಗು ಅನಾರ್ಯರು ಸಂಧಿಸಿದರು. ಆ ಸಮಯದಲ್ಲಿ ಆರ್ಯರು hunting nomads ಆಗಿದ್ದರು ಹಾಗೂ ಅನಾರ್ಯರಲ್ಲಿ ಕೆಲವು ಜನಾಂಗಗಳು hunting nomads ಆಗಿದ್ದರೆ, ಕೆಲವು
    ಜನಾಂಗಗಳು agricultural settlers ಆಗಿದ್ದವು.
    ಇಂತಹ ಸಂದರ್ಭದಲ್ಲಿ ಆಯಾ ಸಮಾಜದ ವೈಶಿಷ್ಟ್ಯಕ್ಕೆ ಸಂಬಂಧಿಸಿದ ಪದಗಳನ್ನೇ ಇತರ ಜನಾಂಗಗಳು ಬಳಸುವದು ಸ್ವಾಭಾವಿಕವಲ್ಲವೆ? ಉದಾಹರಣೆಗೆ ಅಸ್ತ್ರವಿದ್ಯೆಯ, ಅಶ್ವವಿದ್ಯೆಯ
    ಪದಗಳನ್ನು ಆರ್ಯರು ಕೊಟ್ಟಿದ್ದರೆ, ಹೈನುಗಾರಿಕೆಯ, ಒಕ್ಕಲುತನದ ಪದಗಳನ್ನು ಅನಾರ್ಯರ ಕೆಲವು ದನಗಾಹಿ ಜನಾಂಗಗಳು ಕೊಟ್ಟಿರಬಹುದು.
    ಹೀಗಾಗಿ ಸಂಸ್ಕೃತದಲ್ಲಿಯೂ ಸಹ ಅನೇಕ ಅನಾರ್ಯ ಪದಗಳು ಸೇರಿಕೊಂಡವು. ಇವುಗಳ exact ಪ್ರಮಾಣ ಹೇಳುವದು ಕಷ್ಟವಾದರೂ ಅಸಾಧ್ಯವಲ್ಲ.
    ಸಂಸ್ಕೃತವು Latinಭಾಷೆಯ ಸೋದರಭಾಷೆಯಾಗಿರುವದರಿಂದ, Latin ಭಾಷೆಯ ಮೂಲವನ್ನು ಹೊರತುಪಡಿಸಿದಂತಹ ಪದಗಳನ್ನು ಅನಾರ್ಯ ಭಾಷೆಗಳ ಕೊಡುಗೆ ಎನ್ನಬಹುದು.

    ReplyDelete
  58. ಸರಿ, ಆದರೆ ಶೇ. ೫೦ ಕ್ಕಿಂತ ಹೆಚ್ಚು ಎನ್ನುವುದು ಉತ್ಪ್ರೇಕ್ಷೆಯಾದೀತೇನೋ..

    ReplyDelete
  59. ಹರೀಶ,
    ನೀವು ಹೇಳುವಂತೆ,ಇದು ಮೇಲುನೋಟಕ್ಕಂತೂ ಉತ್ಪ್ರೇಕ್ಷೆ ಎಂದು ಅನಿಸುತ್ತದೆ. ಈ ವಿಷಯದಲ್ಲಿ ಲ್ಯಾಟಿನ್-ಸಂಸ್ಕೃತ-ದ್ರಾವಿಡ ಭಾಷಾ ತಜ್ಞರಿಂದ ನೆರವನ್ನು ಪಡೆಯುವದು ಸರಿಯಾದೀತು.

    ReplyDelete
  60. ಆಸಕ್ತರಿಗೆ

    ಸಂಸ್ಕ್ರುತದ ಹುಟ್ಟು ಮತ್ತು ಬೆಳವಣಿಗೆ ಬಗ್ಗೆ ಇಲ್ಲಿ ಓದಿ

    ಅವೇಸ್ತ ಮತ್ತು ಹಳೇಪಾರಸೀ ನುಡಿಗಳು ಸಂಸ್ಕ್ರುತಕ್ಕೆ, ವೇದಬಾಶೆಗೆ ಬಲು ಹತ್ತಿರವಾದವು. ಅವುಗಳನ್ನು ಹೋಲಿಸಬೇಕು.

    ಲ್ಯಾಟಿನ್ನು, ಜರ್ಮನ್ನು ಇವೆಲ್ಲ ಸಂಸ್ಕ್ರುತಕ್ಕೆ ಬಲು ದೂರ.

    ಹತ್ತಿರವಾದವು ಪಾರಸೀ, Kurd, ಮುಂತಾದ ಇರಾಕ್ ಇರಾನ್ ಮತ್ತು ಅಪಗಾನಿಸ್ತಾನದ ಬಾಶೆಗಳು

    ಅಹುರ = ಅಸುರ, ಜಸ್ನ = ಯಜ್ಞ ಮುಂತಾದವನ್ನು ಗಮನಿಸಬಹುದು.

    -ಮಹೇಶ

    ReplyDelete
  61. ಅಂಕಲ್,
    ಸಂಸ್ಕೃತ ಪದಗಳು ಕನ್ನಡದಲ್ಲಿ ಬಳಸಿ.. ಅದು ಕನ್ನಡದ್ದೇ ಎಂಬುವಂತೆ ಆಗಿದೆ. ಏನು ತಪ್ಪಿಲ್ಲ ಎಂದು ನನ್ನ ಭಾವನೆ.

    ಸಂಸ್ಕೃತ ಎಲ್ಲಾ ಭಾಷೆಗಳ ತಾಯಿ ಎಂಬುದು ತಿಳಿದಿರುವ ವಿಚಾರ.

    ReplyDelete
  62. ಹೌದು ಜಯಶಂಕರ!
    ಒಂದು ಭಾಷೆಯಲ್ಲಿ ಬೇರೆ ಬೇರೆ ಭಾಷೆಗಳ ಪದಗಳು ಸೇರಿಕೊಳ್ಳುವದು ಅತ್ಯಂತ ಸಹಜ ಪ್ರಕ್ರಿಯೆ ಆಗಿದೆ.

    ReplyDelete