Friday, December 13, 2013

ಅಪಾಯಕಾರಿ ಸ್ವೇಚ್ಛಾಚಾರ



ಸಮಾಜ ಹಾಗು ವ್ಯಕ್ತಿ ಇವುಗಳ ನಡುವಿನ ಸಂಬಂಧದ ಚರ್ಚೆ ಇಂದು ನಿನ್ನೆಯದಲ್ಲ. ವ್ಯಕ್ತಿಯ ಸ್ವಾತಂತ್ರ್ಯ ಅಪರಿಮಿತವಾದದ್ದೊ ಅಥವಾ ಸಮಾಜದ ಅಧಿಕಾರ ಹೆಚ್ಚಿನದೊ ಎನ್ನುವ ತಿಕ್ಕಾಟ ನಡದೇ ಇದೆ. ಸಮಾಜವನ್ನು ತಲ್ಲಣಗೊಳಿಸಿ, ಸಾಮಾಜಿಕ ಸಂಸ್ಥೆಗಳನ್ನು ಛಿದ್ರಗೊಳಿಸುವ ವ್ಯಕ್ತಿಸ್ವಾತಂತ್ರ್ಯವನ್ನು ಅಪಾಯಕಾರಿ ಸ್ವೇಚ್ಛಾಚಾರ ಎಂದೇ ಕರೆಯಬೇಕಾಗುವುದು.

ಸಂತಾನಾಭಿವೃದ್ಧಿಯೇ ರತಿಕ್ರೀಡೆಯ ನೈಸರ್ಗಿಕ ಉದ್ದೇಶ. ಇದು ಸೃಷ್ಟಿಯ ಎಲ್ಲ ಜೀವಿಗಳಿಗೂ ಅನ್ವಯಿಸುತ್ತದೆ. ಆದುದರಿಂದಲೇ ರತಿಕ್ರೀಡೆಯು ಪೂರಕಲಿಂಗಿಗಳಲ್ಲಿ ಮಾತ್ರ ನಡೆಯುತ್ತದೆ. ಇದಕ್ಕೆ ವಿರುದ್ಧವಾದ ರತಿಕ್ರೀಡೆಯು ಅನೈಸರ್ಗಿಕವಾದದ್ದು. ನಿಸರ್ಗದಲ್ಲಿರುವ ಕೆಳ ತರಗತಿಯ ಜೀವಿಗಳಲ್ಲಿ ಸಲಿಂಗರತಿಯನ್ನು ಕಾಣಲು ಸಾಧ್ಯವೇ ಇಲ್ಲ. ಮಾನವ ಪರಿಸರವು ಸಮತೋಲನದ ಬದುಕಿನಿಂದ ದೂರ ಸರಿದಂತೆಲ್ಲ, ಮನೋರೋಗಗಳು ಹೆಚ್ಚಾಗತೊಡಗಿದವು. ಸಲಿಂಗಕಾಮ, ಪಶುರತಿ, ಅತ್ಯಾಚಾರ ಇವೆಲ್ಲ ಮನೋರೋಗದ ಉದಾಹರಣೆಗಳೇ. ಆದುದರಿಂದಲೇ ನಮ್ಮ ಧರ್ಮಶಾಸ್ತ್ರಗಳು ಹಾಗು ನಮ್ಮ ವಿಧಾಯಕರು ಇವನ್ನೆಲ್ಲ ಅಪರಾಧಗಳು ಎಂದು ಸಾರಿದ್ದು.

ಪಾಶ್ಚಾತ್ಯ ದೇಶಗಳಲ್ಲಿ ಸಂಪತ್ತು ತುಂಬಿ ತುಳುಕಾಡುತ್ತಿದೆ ಮತ್ತು ಅಲ್ಲಿಯ ಸಾಮಾಜಿಕ ಕಟ್ಟುಪಾಡುಗಳು ಶಿಥಿಲವಾಗಿವೆ. ಅಲ್ಲಿಯ ನಿವಾಸಿಗಳು ತಮ್ಮ ಆಚಾರವಿಚಾರಗಳೇ ಶ್ರೇಷ್ಠ ಎಂದು ನಂಬಿದ್ದಾರೆ. ಆದುದರಿಂದ ತಮ್ಮಂತೆಯೇ ಇತರ ದೇಶಗಳೂ ಆಚರಿಸಬೇಕು ಎನ್ನುವ ಅಹಮ್ಮು ಅವರಿಗಿದೆ. ಅದಲ್ಲದೆ ತಮ್ಮ ದೇಶವಾಸಿಗಳು ಪರದೇಶಗಳಿಗೆ ಪ್ರವಾಸ ಕೈಗೊಂಡಾಗ, ಸಲಿಂಗಕಾಮದ ಅಪರಾಧದಲ್ಲಿ ಸಿಲುಕಬಾರದು ಎನ್ನುವ ದುರುದ್ದೇಶವೂ ಅವುಗಳಿಗೆ ಇದೆ. ಆದುದರಿಂದ ‘ಮಾನವ ಹಕ್ಕುಗಳು’ ಎನ್ನುವ ಸೋಗಿನಲ್ಲಿ ಇತರ ದೇಶಗಳ ಮೇಲೆ ಅವು ಅನೈಸರ್ಗಿಕ ರತಿಯನ್ನು ಹೇರುತ್ತಿವೆ. ಆದುದರಿಂದಲೇ ಬಡದೇಶಗಳಿಗೆ ನೆರವು ನೀಡುವ ಸಂದರ್ಭದಲ್ಲಿ ಈ ಶ್ರೀಮಂತ ಪಾಶ್ಚಾತ್ಯ ರಾಷ್ಟ್ರಗಳು  ‘ಮಾನವ ಹಕ್ಕುಗಳ ಪಾಲನೆ’ಯನ್ನು ಒಂದು ಶರತ್ತನ್ನಾಗಿ ಮಾಡುತ್ತಿವೆ. ಮಾನವ ಹಕ್ಕುಗಳ ಪಾಲನೆಯಲ್ಲಿ ಸಲಿಂಗಕಾಮವನ್ನೂ ಸಹ ಅವು ಸೇರಿಸಿವೆ. ಆಫ್ರಿಕಾ ಖಂಡದಲ್ಲಿರುವ ಮಾಲವಿ ಎನ್ನುವ ಬಡರಾಷ್ಟ್ರಕ್ಕೆ ಇಂಗ್ಲಂಡ ತಾನು ಕೊಡಮಾಡುತ್ತಿದ್ದ ೧೯ ಮಿಲಿಯನ್ ಪೌಂಡ್ ನೆರವನ್ನು ಇಂತಹ ಮಾನವ ಹಕ್ಕುಗಳ ನೆವದಲ್ಲಿಯೇ ನಿರಾಕರಿಸಿತು.

 ಇದೇ ಉದ್ದೇಶದಿಂದಲೇ ೧೯೭೩ನೆಯ ಇಸವಿಯಲ್ಲಿ  ಅಮೇರಿಕಾದ ಮನೋರೋಗ ವಿಜ್ಞಾನಿಗಳ ಮಂಡಳಿಯು ತನ್ನ ಕೈಪಿಡಿಯಿಂದ ಸಲಿಂಗಕಾಮವನ್ನು ತೆಗೆದು ಹಾಕಿತು. ಆದರೆ ಅಲ್ಲಿಯ ಅನೇಕ ಮನೋರೋಗವಿಜ್ಞಾನಿಗಳು ಗುಟ್ಟಿನಲ್ಲಿಯೇ ಆಗಲಿ, ಸಲಿಂಗಕಾಮವನ್ನು ಮನೋರೋಗವೆಂದೇ ಪರಿಗಣಿಸುತ್ತಾರೆ ಹಾಗು ಆ ರೋಗಕ್ಕೆ ಚಿಕಿತ್ಸೆ ನೀಡುತ್ತಾರೆ.

ಈ ಸಲಿಂಗಕಾಮಿಗಳಿಗೆ ‘ಅಲ್ಪಸಂಖ್ಯಾತರು’ ಎನ್ನುವ ನಾಮಕರಣ ಮಾಡಿ, ಆ ಮೂಲಕ ಅಲ್ಪಸಂಖ್ಯಾತರ ಹಕ್ಕುಗಳು ಎಂದು ವಿಶ್ಲೇಷಿಸುವ ಬುದ್ಧಿವಂತಿಕೆಯೊಂದು ಪ್ರಾರಂಭವಾಗಿದೆ. ಸ್ವಾಮಿ, ನಿಜವಾದ ಅಲ್ಪಸಂಖ್ಯಾತರ ಒಳ್ಳೆಯ ವೈಶಿಷ್ಟ್ಯಗಳನ್ನು ಉಳಿಸಿ, ಬೆಳೆಯಿಸುವ ಉದ್ದೇಶದಿಂದ ಅವರಿಗೆ ವಿಶೇಷ ಸೌಲಭ್ಯ ನೀಡಬೇಕೆ ಹೊರತು, ದುರಾಚಾರಗಳನ್ನು ಹರಡುವದಕ್ಕಾಗಿ ಅಲ್ಲ. ಈ ತರ್ಕವನ್ನೇ ಮುಂದುವರೆಸಿದರೆ, ಕಳ್ಳರು, ಸುಳ್ಳರು, ಅತ್ಯಾಚಾರಿಗಳು, ಲಂಚಬಡಕರು ಎಲ್ಲರೂ ಅಲ್ಪಸಂಖ್ಯಾತರೇ ಆಗುವರು.  (ಹೌದೆ?)

ವ್ಯಕ್ತಿಸ್ವಾತಂತ್ರ್ಯದ ಪರಮಾಧಿಕಾರವನ್ನು ಸಾರುವ ಬುದ್ಧಿಜೀವಿಗಳು ಹೆರಯಿನ್ ಮೊದಲಾದ ಮಾದಕದ್ರವ್ಯಗಳ ಸೇವನೆಯನ್ನೂ ಸಹ ವ್ಯಕ್ತಿಸ್ವಾತಂತ್ರ್ಯ ಎಂದು ಹೇಳಬೇಕಲ್ಲವೆ?  ಪಾಶ್ಚಾತ್ಯ ರಾಷ್ಟ್ರಗಳಿಗೆ ಈ ಮಾದಕದ್ರವ್ಯಗಳ ಸೇವನೆ ಬೇಡವಾಗಿದೆ. ಅಲ್ಲಿ ಅವುಗಳನ್ನು ನಿಷೇಧಿಸಿದ ಕಾರಣದಿಂದಲೇ, ನಮ್ಮಲ್ಲಿಯ ಬುದ್ಧಿಜೀವಿಗಳು ಈ ವಿಷಯದಲ್ಲಿ ಬಾಯಿ ಮುಚ್ಚಿಕೊಂಡಿರುವದು.
ಅಂದರೆ ಅಲ್ಲಿ ಸಲ್ಲುವುದು ಮಾತ್ರ ಇಲ್ಲಿ ಸಲ್ಲುವುದು ಎಂದಂತಾಯಿತಲ್ಲವೆ?

ಈ ವಿಷಯದಲ್ಲಿ ಭಾರತದ ಸರ್ವೋಚ್ಚ ನ್ಯಾಯಾಲಯವು ನೀಡಿದ ತೀರ್ಪಿನ ವಿರುದ್ಧ ಈ ‘ಅಲ್ಪಸಂಖ್ಯಾತ’ರಿಂದ ಪ್ರತಿಭಟನೆಗಳು ನಡೆಯುತ್ತಿವೆ. ಕೆಲವು ರಾಜಕಾರಣಿಗಳೂ ಸಹ ಸರ್ವೋಚ್ಚ ನ್ಯಾಯಾಲಯವು ತಪ್ಪು ಮಾಡಿದೆ ಎನ್ನುವ ಹೇಳಿಕೆ ಕೊಟ್ಟು ‘ದೊಡ್ಡ ಮನುಷ್ಯ’ರಾಗುತ್ತಿದ್ದಾರೆ. ಸರ್ವೋಚ್ಚ ನ್ಯಾಯಾಲಯವು “ಸಲಿಂಗಕಾಮವನ್ನು ಸಕ್ರಮಗೊಳಿಸುವ ಶಾಸನವನ್ನು ಮಾಡುವ ಅಧಿಕಾರ ತನಗಿಲ್ಲ. ಅದನ್ನು ಲೋಕಸಭೆ ಮಾಡಬಹುದು” ಎಂದಷ್ಟೇ ಹೇಳಿದೆ. ಹಾಗಿದ್ದಾಗ, ‘ಅಲ್ಪಸಂಖ್ಯಾತ’ರು ಹಾಗು ಕೆಲವು ರಾಜಕಾರಣಿಗಳು (ಜನಪ್ರಿಯತೆಗಾಗಿ) ಸರ್ವೋಚ್ಚ ನ್ಯಾಯಾಲಯವನ್ನು ಹೀಗಳೆಯುತ್ತಿರುವುದು ತಪ್ಪಲ್ಲವೆ? 

ಕೊನೆಯದಾಗಿ ಹೇಳಬೇಕೆಂದರೆ, ಆರೋಗ್ಯವಂತ ಸಮಾಜದ ನಿರ್ಮಾಣಕ್ಕಾಗಿ, ಆರೋಗ್ಯವಂತರಾದ ಬಹುಸಂಖ್ಯಾತರು ಬೇಕಾಗುವರೇ ಹೊರತು ಅಲ್ಪಸಂಖ್ಯಾತರ ಸೋಗಿನ ಮನೋರೋಗಿಗಳಲ್ಲ. ಇಂತಹವರನ್ನು ಕರುಣೆಯಿಂದ ನೋಡಿ, ಇವರ ಮನೋರೋಗಕ್ಕೆ ಚಿಕಿತ್ಸೆ ನೀಡುವುದೇ ಒಳ್ಳೆಯದು.

36 comments:

  1. ಸರಿಯಾಗಿ ಹೇಳಿದ್ರಿ ಸುನಾಥ್ ಸಾರ್.. ಪ್ರಾಣಿಗಳೇ ಗುಣದಲಿ ಮೇಲು ಮಾನವನದಕಿಂತ ಕೀಳು..!!

    ReplyDelete
  2. Nauseating sexual deviations are being legitimised by the society.Even apex court is being denigrated by Tom Dick and Harry with impunity. My only fear is that homosex may be made legally compulsory for all one day through pressure from this deviated section of society!

    ReplyDelete
  3. ಅಹುದು ಸತೀಶ. ಪ್ರಾಣಿಗಳದು ನೈಸರ್ಗಿಕ ಜೀವನ. ಮಾನವನದು ಕೃತಕ ಬದುಕು!

    ReplyDelete
  4. Hahaha! You put it very well, Vasant.
    That day may not be far off!

    ReplyDelete
  5. ಸರಿಯಾಗಿ ಹೇಳಿರುವಿರಿ ಸಾರ್, ಆರೋಗ್ಯವಂತ ಸಮಾಜ ನಿರ್ಮಾಣ ನಮ್ಮೆಲ್ಲರ ಜವಾಬ್ದಾರಿ..ಹಾಗಾಗಿ ನಮ್ಮ ನಿರ್ಣಯಗಳು ಇದಕ್ಕೆ ಪೂರಕವಾಗಿರಲೇಬೇಕು....

    ReplyDelete
  6. ಮಂಜುಳಾದೇವಿಯವರೆ,
    ಒಂದು ಕೊಳೆತ ಮಾವಿನ ಹಣ್ನು ಬುಟ್ಟಿಯಲ್ಲಿಯ ಎಲ್ಲ ಮಾವಿನಹಣ್ನುಗಳನ್ನು ಕೆಡಿಸುವಂತೆ, ಕೆಲವೇ ‘ಅಲ್ಪಸಂಖ್ಯಾತ’ LGBT ವ್ಯಕ್ತಿಗಳು ಇಡೀ ಸಮಾಜವನ್ನೇ ಕೆಡಿಸುತ್ತಾರೆ. ಇವರಿಗೆ ಬೇಕಾಗಿರುವುದು ಚಿಕಿತ್ಸೆ, ಸ್ವಾತಂತ್ರ್ಯವಲ್ಲ!

    ReplyDelete
  7. ಪ್ರೀತಿಯ ಕಾಕಾ,
    ನಿಮ್ಮ ಸಾಮಾಜಿಕ ಕಳಕಳಿ ನಂಗೆ ಅರ್ಥ ಆಗುತ್ತೆ. ಮತ್ತು ನಿಮ್ಮ ಸೂಕ್ಷ್ಮ ಸ್ಪಂದನಶೀಲ ಮನಸ್ಸಿಗೆ ಯಾವತ್ತಿಗೂ ನನ್ನ ಗೌರವ.
    ಸ್ವೇಚ್ಛಾಚಾರವನ್ನು ನಾನು ವಿರೋಧಿಸುತ್ತೇನೆ. ಆದರೆ ವೈಯಕ್ತಿಕ ನೆಲೆಯಲ್ಲಿ ಇರುವ, ಸಮಾಜವನ್ನು ಹುಳುಕಾಗಿಸದ ಖಾಸಗಿ ಆಸಕ್ತಿ ಮತ್ತು ಆಚರಣೆಗಳನ್ನ ಪ್ರಶ್ನಿಸಬಾರದು ಎನ್ನುವುದು ನನ್ನ ನಿಲುವು.
    ಈ ಹಿನ್ನೆಲೆಯಲ್ಲಿ ನೀವು ಇವತ್ತು ಬರೆದ ಪೋಸ್ಟಿನ ಒಂದು ಮಾಹಿತಿಯ ಬಗ್ಗೆ ನನಗೆ ಅಸಮ್ಮತಿ.
    ಸಲಿಂಗ ಕಾಮ ಒಂದು ಮನೋರೋಗ ಎನ್ನುವ ಮಾಹಿತಿಯ ಬಗ್ಗೆ ನನಗೆ ಒಪ್ಪಿಗೆಯಾಗುತ್ತಿಲ್ಲ.
    ನನಗೆ ಅಮೆರಿಕಾ ಅಥವಾ ಇತರ ಪಾಶ್ಚಾತ್ಯ ದೇಶ, ಸಂಸ್ಕೃತಿಗಳ ಹುನ್ನಾರದ ಬಗ್ಗೆ ಗೊತ್ತಿಲ್ಲ್ಲ. ನನ್ನ ತಿಳುವಳಿಕೆ ಒಂದು ಮಿತಿಯಲ್ಲಿದೆ.
    ಆದರೆ ಈ ಸ್ಥಿತಿ ಖಂಡಿತಾ ಒಂದು ಮನೋರೋಗವಲ್ಲ.
    ಸರಿಯಾಗಿ ನಿಭಾಯಿಸಲು ಬರದೆ ಇದ್ದಾಗ ರೋಗವಾಗಲೀ ಅಥವಾ ಮನೋರೋಗವಾಗಲೀ ಬರಬಹುದಾದ ಸಾಧ್ಯತೆ ಹೆಚ್ಚಿರುವ ದೇಹಸ್ಥಿತಿ ಇದು.
    ಮಾನಸಿಕ ಒತ್ತಡಗಳಿಂದಲೂ, ಇನ್ ಫ್ಲುಯೆನ್ಸಿನಿಂದಲೂ ಇದು ಬರಬಹುದಾದ ಸಾಧ್ಯತೆ ಇದ್ದಾಗ್ಯೂ, ಕ್ರೋಮೋಝೋಮಲ್ ಮ್ಯುಟೇಶನ್ ಕೂಡಾ ಈ ದೇಹಸ್ಥಿತಿಗೆ ಹೆಚ್ಚಿನ ಪರಿಸ್ಥಿತಿಯಲ್ಲಿ ಕಾರಣವಾಗಿರುತ್ತದೆ.
    ಜನ್ಮತಹ ಬಂದಂತಹ ಒಂದು ಸ್ಥಿತಿಗೆ ವ್ಯಕ್ತಿಯೊಬ್ಬ ನರಳಬೇಕಾದ ಪರಿಸ್ಥಿತಿಯನ್ನು ನಾವು ಸ್ಪಂದನಶೀಲ ಸಹಜನರು ಮಾಡಬಾರದು ಅನ್ನುವುದು ನನ್ನ ಅನಿಸಿಕೆ.
    ಹಾಗಾಗಿ ದಯವಿಟ್ಟು ಈ ಮಾಹಿತಿಯೊಂದರ ಬಗ್ಗೆ ನೀವು ಪರಿಶೀಲಿಸಿ ಹಾಕಬೇಕು ಅಂತ ನನ್ನ ವಿನಯಪೂರ್ವಕ ಕೇಳಿಕೆ.
    ನಿಮ್ಮ ಮಾಹಿತಿ, ವಿಶ್ಲೇಷಣೆ, ವಿಷಯ ಸಂಗ್ರಹ ಮತ್ತು ಹಂಚಿಕೊಳ್ಳುವುದೆಲ್ಲದರ ಬಗ್ಗೂ ನನಗೆ ತುಂಬ ಗೌರವ ಮತ್ತು ಪ್ರೀತಿ. ನೀವು ಹಿರಿಯರು ಪದದ ಅನ್ವರ್ಥ ನಾಮ ಸೂಚಕರು.
    ಅದಕ್ಕಾಗಿ ಈ ಒಂದು ಮಾತನ್ನು ಬರೆಯಲೇಬೇಕೆನ್ನಿಸಿತು.
    on a different note.. ಇದು ಬಹುಶಹ ಪ್ರಕೃತಿ ನಮ್ಮ ಸಂತಾನಾಭಿವೃದ್ಧಿಯನ್ನು ನಿಯಂತ್ರಿಸ ಹೊರಟಿರುವ ಕ್ರಮವೂ ಇರಬಹುದೇನೋ.. i am not sure.. just a thought.
    ಇನ್ನೂ ಈ ವಿಚಾರದಲ್ಲಿ ಸುಪ್ರೀಂ ಕೋರ್ಟಿನ ತೀರ್ಪಿನ ವಿರುದ್ಧ ಅರ್ಥರಹಿತವಾದ ವಿವಾದ ತಳುಕು ಹಾಕಿಕೊಂಡಿರುವುದು ಖೇದಕರ. ಸುಪ್ರೀಂ ಕೋರ್‍ಟು ನಾವೇ ನಿರ್ಮಿಸಿಕೊಂಡ ಸಂವಿಧಾನಕ್ಕೆ ಅನುಗುಣವಾಗಿ ಕಾನೂನನ್ನ ಅರ್ಥೈಸಿದೆ.
    ನೀವು ನನ್ನ ಈ ಅನಿಸಿಕೆಯನ್ನು ತಪ್ಪು ತಿಳಿಯಲಾರಿರಿ ಎಂಬ ಭರವಸೆಯೊಂದಿಗೆ,
    ಪ್ರೀತಿಯಿಂದ,
    ಸಿಂಧು

    ReplyDelete
  8. Dear Sunaath,
    I fully agree with you. However homosex is becoming a fancy among particular class of our society. It should not infect the growing buds.
    That is my concern. I appreciate the verdict of the SC.
    -Vanamala

    ReplyDelete
  9. ನೀವು ಹೇಳೋ ಮಾತಿಗೆ ನನ್ನದೂ ಸಹಮತಮಿದೆ ಸುನಾಥ ಕಾಕ.
    ಮೊನ್ನೆ ನಮ್ಮ ಆಫೀಸಿನಲ್ಲಿ ಇದೇ ವಿಷಯಕ್ಕೆ ಸುಮಾರು ಒಂದು ಘಂಟೆ ಮಾತಾಡಿದ್ದೆವು.
    ಈ ಭಾವ ಒಂದು ಮಾನಸಿಕ ಖಾಯಿಲೆ, ಅದಕ್ಕೆ ಚಿಕಿತ್ಸೆ ಕೊಡಿಸಬೇಕು ಅಂತ ಕೆಲವರು, ಇದು ಅವರವರ ಸ್ವಾತಂತ್ರ್ಯ, ಇದು ಹುಚ್ಚಲ್ಲ ಅಂತ ಉಳಿದವರು. ಇದು ಹಾರ್ಮೋನುಗಳ ತೊಂದರೆಯೆಂದೂ, ಪಾಶ್ಚಾತ್ಯರ ಅಂಧಾನುಕರಣೆಯೆಂದೂ, ನೆಟ್ಟಿನ ಅತೀ ಹೆಚ್ಚು ಬಳಕೆಯಿಂದ ಬಂದಿರುವ ಹುಚ್ಚೆಂದು.. ಹಲ ವಿಷಯಗಳು ಬಂದು ಹೋದವು.. ಮಧ್ಯ ಯಾವುದೋ ಅನಿವಾರ್ಯ ಕೆಲಸಗಳು ಬಂದಿದ್ದರೆಂದ ಚರ್ಚೆ ಅಪೂರ್ಣಗೊಂಡಿದ್ದವೆಂಬುದು ಬೇರೆ ಮಾತು.. ನಿಮ್ಮ ಲೇಖನವನ್ನೋದಿ ಆ ನೆನಪುಗಳು ಮತ್ತೆ ಮರುಕಳಿಸಿದವು

    ReplyDelete
  10. ಸಿಂಧು,
    ನಿಮ್ಮ ಭಿನ್ನಮತವನ್ನು ನಾನು ಸ್ವಾಗತಿಸುತ್ತೇನೆ.ತರ್ಕಗಳ ತಿಕ್ಕಾಟದಿಂದಲೇ ಬೆಳಕು ಹೊಳೆಯುವುದು. ಸಲಿಂಗಕಾಮವನ್ನು ನಾವು ಮನೋರೋಗ ಎಂದು ಕರೆಯದಿದ್ದರೂ ಸಹ Deviant behaviour ಎಂದು ಕರೆಯಬಹುದಲ್ಲವೆ? ಇವರ ವರ್ತನೆಗೆ ವರ್ಣತಂತುಗಳ defect ಅಥವಾ ಅನೇಕ ಕೌಟಂಬಿಕ ಹಾಗು ಸಾಮಾಜಿಕ ಕಾರಣಗಳು ಇರಬಹುದು. ಇಂಥವರನ್ನು ನಾವು ತಾಳ್ಮೆಯಿಂದ ನೋಡಬೇಕು ಎನ್ನುವುದನ್ನು ಒಪ್ಪುತ್ತೇನೆ. ಆದರ ultimately ಇವರು ಸಮಾಜದ ಶರೀರದ ಮೇಲಿನ ವ್ರಣ ಇದ್ದಂತೆ ಎನ್ನುವುದು ನನ್ನ ಭಾವನೆ. ಈ ವ್ರಣಕ್ಕೆ ನಾವು ಚಿಕಿತ್ಸೆಯನ್ನು ಕೊಡಲೇಬೇಕು ಎಂದು ನನಗೆ ಅನಿಸುತ್ತದೆ.

    ReplyDelete
  11. ವನಮಾಲಾ,
    ನಿಮ್ಮ ಸ್ಪಂದನೆಗೆ ಧನ್ಯವಾದಗಳು.

    ReplyDelete
  12. ಪ್ರಶಸ್ತಿಯವರೆ,
    ನಿಮ್ಮ ಚರ್ಚೆ ಮುಂದುವರೆಯಲಿ ಹಾಗು ಬೆಳಕು ಮೂಡಲಿ ಎಂದು ಹಾರೈಸುತ್ತೇನೆ!

    ReplyDelete
  13. ಗಿರೀಶ ಕಾರ್ನಾಡರು ಮತ್ತೆ ಹಕ್ಕುಗಳ ಸ್ಲೋಗನ್ ಹಿಡಿದು ಎಚ್ಚರಗೊಂಡಿದ್ದಾರೆ. ಇಂತಹವರ ಮನೋರೋಗಕ್ಕೂ ಚಿಕಿತ್ಸೆ ಕೊಡಿಸಬೇಕಾಕಿದೆ. ನೀವೆಂದಂತೆ, ಭವಿಷ್ಯದಲ್ಲಿ ಎಂತೆತೆಹ ಅಲ್ಪಸಂಖ್ಯಾತರು ಹುಟ್ಟಿಕೊಳ್ಳುತ್ತಾರೋ ತಿಳಿಯದು !.

    ReplyDelete
  14. ಆರೋಗ್ಯವಂತ ಸಮಾಜದ ನಿರ್ಮಾಣಕ್ಕಾಗಿ, ಆರೋಗ್ಯವಂತರಾದ ಬಹುಸಂಖ್ಯಾತರು ಬೇಕಾಗುವರೇ ಹೊರತು ಅಲ್ಪಸಂಖ್ಯಾತರ ಸೋಗಿನ ಮನೋರೋಗಿಗಳಲ್ಲ. ಇಂತಹವರನ್ನು ಕರುಣೆಯಿಂದ ನೋಡಿ, ಇವರ ಮನೋರೋಗಕ್ಕೆ ಚಿಕಿತ್ಸೆ ನೀಡುವುದೇ ಒಳ್ಳೆಯದು

    ಸುನಾಥ್ ಸರ್, ನಿಮ್ಮ ಸಲಹೆ ಸರಿಯಾದುದು..ಈ ಕೆಲವೇ ಚಟವುಳ್ಳವರೆಲ್ಲಾ ಸೇರಿಕೊಂಡು ಚಳವಳಿ ಮಾಡುತ್ತಿರುವುದು ಅಚ್ಚರಿತರುತ್ತದೆ, ಅವರಿಗೆ ಕೆಲ ವಿಐಪಿಗಳ ಬೆಂಬಲ ಬೇರೆ!

    ReplyDelete
  15. ಈ ಬರಹಕ್ಕೆ ಏನು ಹೇಳೋಕೂ ತೋಚುತ್ತಿಲ್ಲ

    ReplyDelete
  16. ಸುಬ್ರಹ್ಮಣ್ಯರೆ,
    ಗಿರೀಶ ಕಾರ್ನಾಡರ ಮನೋರೋಗಕ್ಕೆ ಮದ್ದಿಲ್ಲ ಎನಿಸುತ್ತದೆ!

    ReplyDelete
  17. ವೇಣುವಿನೋದರೆ,
    ಸಲಿಂಗಕಾಮಿಗಳ ಬೆಂಬಲಕ್ಕೆ ನಿಂತವರಿಗೆಲ್ಲ, ಆ ಜನದ ವೋಟ್ ಬೇಕಾಗಿದೆ. ಅಷ್ಟೇ ಅವರ ತಿಳಿವಳಿಕೆ!

    ReplyDelete
  18. ಸ್ವರ್ಣಾ,
    ಇನ್ನಿಷ್ಟು ವಿಚಾರಮಂಥನ ಮಾಡಿ. ನಿಮಗೆ ಸರಿ ಅನ್ನಿಸಿದ್ದನ್ನು ಮಾಡಿ.

    ReplyDelete
  19. ಖಂಡಿತ ಕೆಲವು ರಾಜಕಾರಣಿಗಳು ಮತ್ತು ಸಂಸ್ಥೆಗಳು ಈ ವಿಷಯದಲ್ಲಿ ಅನಗತ್ಯ ಹೇಳಿಕೆಗಳನ್ನು ಕೊಟ್ಟು ಗೊಂದಲ ಸೃಷ್ಟಿ ಮಾಡುತ್ತಿದೆ ಎನಿಸುತ್ತದೆ ..

    ReplyDelete
  20. ರಾಜಕಾರಣಿಗಳಿಗೆ ಹಾಗು ಬುದ್ಧಿಜೀವಿಗಳಿಗೆ ಯಾವಾಗಲೂ ಒಂದಿಲ್ಲೊಂದು issue ಬೇಕು. ಬಿಟ್ಟಿ ಪ್ರಚಾರವೇ ಅವರ ಉದ್ದೇಶ!

    ReplyDelete
  21. ಮನಸ್ಸು ಬುದ್ಧಿ ದೇಹಗಳೆಲ್ಲಾ ವಿದೇಹವಾದಮೇಲೆ ಹೀಗೆಲ್ಲಾ ಆಗಿರೋದು. ಮನುಷ್ಯರಲ್ಲಿ ಯಾಕೋ ಬರಬರುತ್ತಾ ಇವುಗಳ ಮಧ್ಯದ Synchronization ಕಡಿಮೆಯಾಗುತ್ತಿದೆ ಅನ್ನಿಸುತ್ತಿದೆ. ಪ್ರಾಣಿಗಳೋ ಅದನ್ನು ಕಾಪಾಡಿಕೊಂಡು ಬಂದಿರುವುದನ್ನು ನಾವು ಗಮನಿಸಬಹುದು.

    ReplyDelete
  22. ಸರ್,
    ಸಂತಾನಾಭಿವೃದ್ಧಿಯೇ ರತಿಕ್ರೀಡೆಯ ನೈಸರ್ಗಿಕ ಉದ್ದೇಶ-ಎಂಬ ultimate ಸತ್ಯವನ್ನು ಮರೆಯುವಂತಿಲ್ಲ.
    ಸಲಿಂಗಕಾಮ ಎನ್ನುವದು ಒಂದು ಅಸಹಜ,ಅನೈಸರ್ಗಿಕ ಕ್ರಿಯೆ ಎಂದು ಭಾವಿಸಬಹುದು.ಆದರೆ ನಿಮ್ಮ ಲೇಖನವನ್ನು ಓದಿದ ಬಳಿಕ,
    ನೀವು ಇದರ ಬಗ್ಗೆ ಇನ್ನೊಂದಿಷ್ಟು ವಸ್ತು ಸಂಗ್ರಹಣೆ ಮಾಡಿ ಬರೆಯಬಹುದಿತ್ತು ಅಂತ ಖಂಡಿತ ಅನಿಸಿತು.
    ಇಲ್ಲಿ ನನಗೊಂದಿಷ್ಟು ಪ್ರಶ್ನೆಗಳು ಮೂಡುತ್ತಿವೆ:
    ಬದಲಾದ (?) ಇವತ್ತಿನ ಕಾಲಘಟ್ಟದಲ್ಲಿ 'ಸಲಿಂಗಕಾಮ'ವೆನ್ನುವದು ಅದು ಹೇಗೆ ದಿಢೀರ್ ಅಂತ ಉದ್ಭವಿಸಿತು? ಸಲಿಂಗಕಾಮಕ್ಕೆ ಆಯಾ
    ವ್ಯಕ್ತಿಯಲ್ಲಿನ ವರ್ಣತಂತುಗಳ ಅಸಮತೋಲನ ಕಾರಣವಾಗಿರಬಹುದು.ಇಂಥದೊಂದು ಅಸಮತೋಲನ ಇದ್ದಕ್ಕಿದ್ದಂತೆ ಶುರುವಾಯಿತೇ,
    ಅಥವಾ ನೂರಿನ್ನೂರು ವರ್ಷಗಳ ಹಿಂದೆಯೇ ಇಂಥದೊಂದು ಚಟುವಟಿಕೆ ಚಾಲ್ತಿಯಲ್ಲಿತ್ತೆ ಎನ್ನುವದನ್ನೂ ನಾವು ಗಮನಿಸಬೇಕಾಗಿದೆ.
    ಹಾಗೊಂದು ವೇಳೆ ತುಂಬ ಹಿಂದೆಯೇ ಈ ರೀತಿಯ ಚಟುವಟಿಕೆಗಳು ಗುಪ್ತವಾಗಿ ನಡೆದುಕೊಂಡು ಬಂದಿದ್ದಲ್ಲಿ,ಇವತ್ತಿನ ಸ್ವೇಚ್ಚಾಚಾರವೇ
    ಅದನ್ನು ಇನ್ನಷ್ಟು ಶೋಕೇಸ್ ಮಾಡುವದರಲ್ಲಿ ಸಂಶಯವಿಲ್ಲ.ಹಾಗಂತ,ಇವತ್ತಿನ ನಮ್ಮ ನ್ಯಾಯಾಲಯಗಳು ಇದ್ದಕ್ಕಿದ್ದಂತೆಯೇ "ಇಂಥದ್ದನ್ನೆಲ್ಲ ಮಾಡುವಂತಿಲ್ಲ.."
    ಅಂತ ತೀರ್ಪು ನೀಡಿಬಿಟ್ಟರೆ ಸಾಕೇ?
    ಇಲ್ಲೊಬ್ಬ ಹುಡುಗನಿಗೆ ತನ್ನದೇ ಪ್ರಾಯದ ಹುಡುಗಿಯನ್ನು ನೋಡಿದಾಗ ಪ್ರೀತಿಯ,ಸುಕೋಮಲ ಭಾವನೆಗಳು ಮೂಡಬೇಕೆಂದು ನಿಸರ್ಗವೇನೋ
    ನಿರ್ದೇಶಿಸುತ್ತದೆ.ಆದರೆ ಸದರಿ ಹುಡುಗನಿಗೆ ಪ್ರಕೃತಿಯ ಈ ಆದೇಶವನ್ನು ಪಾಲಿಸಲಾಗುತ್ತಿಲ್ಲ.ಬದಲಾಗಿ ಇನ್ನೊಬ್ಬ ಹುಡುಗನನ್ನು ನೋಡಿದಾಗ
    ಪ್ರೀತಿಯ ಭಾವನೆ ಮೂಡುತ್ತಿದೆ!
    ಇಲ್ಲಿ ತಪ್ಪು ಯಾರದು?
    ತಪ್ಪು ಹುಡುಗನಿಗೆ ತಪ್ಪು ನಿರ್ದೇಶನ ಕೊಟ್ಟ ಪ್ರಕೃತಿಯದೇ?
    ಅಥವಾ ಕೊಟ್ಟ ಆದೇಶವನ್ನು ಪಾಲಿಸಲಾಗದಂಥ ಮನಸ್ಥಿತಿ/ದೈಹಿಕಸ್ಥಿತಿಯಲ್ಲಿರುವ ಹುಡುಗನದೇ?
    ತಮಾಷೆಯೋ,ವ್ಯಂಗ್ಯವೋ ಅಥವಾ ದುರಂತವೋ-ಪ್ರಕೃತಿಗೆ ಶಿಕ್ಷೆ ವಿಧಿಸುವ ಅಥವಾ ನಿಯಂತ್ರಣದಲ್ಲಿಡುವ ಶಕ್ತಿ ನಮ್ಮ ನ್ಯಾಯಾಲಯಗಳಿಗಿಲ್ಲ.
    ಇಲ್ಲಿ ಸುಲಭಕ್ಕೆ ಸಾಧ್ಯವಾಗುವ ಕೆಲಸವೆಂದರೆ,ಅಂಥ ಹುಡುಗ/ಹುಡುಗಿಯನ್ನು ಶಿಕ್ಷಿಸುವದು..
    ಸರ್,ನನಗನ್ನಿಸುವಂತೆ,ನ್ಯಾಯಾಲಯ ತನ್ನ ತೀರ್ಪು ನೀಡುವ ಮೊದಲಿಗೆ 'ಇಂಥದೊಂದು' ಕೆಲಸ ಮಾಡುವ ವ್ಯಕ್ತಿಯ ಮಾನಸಿಕ ಸ್ಥಿತಿಯ ಬಗ್ಗೆ
    ಇನ್ನೊಂದು ವ್ಯವಸ್ಥೆ (ಅಂದರೆ,ಸರ್ಕಾರ) ಯಾವುದಾದರೂ outlet ಒದಗಿಸಿದೆಯೇ ಅಂತ ತಿಳಿದುಕೊಳ್ಳಬೇಕು.'ದೋಷ ಪರಿಹಾರ'ಕ್ಕಾಗಿ ಅವರಿಗೆ
    ಯಾವ ರೀತಿಯ ದೈಹಿಕ/ಮಾನಸಿಕ ಚಿಕಿತ್ಸಾ ವ್ಯವಸ್ಥೆಯನ್ನು ಮಾಡಲಾಗಿದೆ ಅಂತ ಪರಿಶೀಲಿಸಬೇಕು.ಹಾಗೊಂದು ವೇಳೆ ಇಂಥ 'ಪರಿವರ್ತನಾ ವ್ಯವಸ್ಥೆ'ಯನ್ನು
    ಸರ್ಕಾರ ಮಾಡಿಲ್ಲವೆಂದಾದಲ್ಲಿ,ಅದನ್ನು ಮೊದಲು ವ್ಯವಸ್ಥೆ ಮಾಡುವಂತೆ ಸರ್ಕಾರಕ್ಕೆ ನಿರ್ದೇಶಿಸಬೇಕು.ಯಾಕಂದರೆ,ನಿರುದ್ಯೋಗದಿಂದಾಗಿಯೋ ಅಥವಾ
    ಮೋಜಿನ ಜೀವನಕ್ಕಾಗಿಯೋ ಬೈಕ್ ಕಳ್ಳತನ ಮಾಡುವದಕ್ಕೂ ಮತ್ತು ದೈಹಿಕ/ಮಾನಸಿಕ ಅಸಮತೋಲತೆಯಿಂದ ಸಲಿಂಗಕಾಮದೆಡೆಗೆ ವಾಲುವವರಿಗೂ
    ವ್ಯತ್ಯಾಸವಿದೆಯಲ್ಲವೇ?
    ಇದ್ಯಾವುದನ್ನೂ ಮಾಡದೇ ಸಲಿಂಗಕಾಮ ಅಪರಾಧ ಅಂತ ತೀರ್ಪು ನೀಡುವದರಲ್ಲಿ ಯಾವ ಪುರುಷಾರ್ಥವೂ ಇಲ್ಲ.ಅಲ್ಲಿಗೆ,ಇದೂ ಕೂಡ ಭಾರತೀಯ
    ದಂಡಸಂಹಿತೆಯಲ್ಲಿನ ಒಂದು ಕಲಂ ಆಗಿ ನಿರ್ಜೀವವಾಗುತ್ತದೆ.ಇಂಥ ಸಾಕಷ್ಟು ಕಲಂಗಳ ಪೈಕಿ "ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ನಿಶಿದ್ಧ", "ಗುಟಖಾ ನಿಷೇಧ",
    "ವಾಹನ ಚಾಲನೆಯಲ್ಲಿ ಮೊಬೈಲ್ ನಿಶಿದ್ಧ" ಎಂಬ ಅಪರಾಧಗಳ ಪಟ್ಟಿ ಇವತ್ತು ಎಲ್ಲಿಗೆ ಬಂದು ನಿಂತಿದೆ ಅಂತ ನಮಗೆಲ್ಲರಿಗೂ ಗೊತ್ತಿದೆ.
    ಶಿಕ್ಷೆ ಎನ್ನುವದು ಅಪರಾಧಿಯ ಮನಸ್ಥಿತಿಗೆ ಅಳವಡಿಸಬೇಕೇ ಹೊರತು ಅಪರಾಧಿಗಲ್ಲ-ಎನ್ನುವದು ನಾಗರಿಕ ಪ್ರಪಂಚದ ಘೋಷಣೆ.ಅದರರ್ಥ:ಅಪರಾಧಿಯ
    ಮನಸ್ಥಿತಿಯನ್ನು ಬದಲಾಯಿಸುವದು.ಈ ಕೆಲಸವನ್ನು ನಮ್ಮ ಜೈಲುಗಳು ಮಾಡುತ್ತಿವೆಯೇ?ಹಾಗೆಯೇ ಸಲಿಂಗಕಾಮಿಯಲ್ಲಿ ಕೊರತೆಯೇನಿದೆ ಅಂತ ತಿಳಿಯದೇ,
    ಅವರ ವೈದ್ಯಕೀಯ ಜರೂರತ್ತನ್ನು fulfill ಮಾಡದೇ ಶಿಕ್ಷೆ ಜಾರಿಗೊಳಿಸುವದು ಅಮಾನವೀಯತೆ ಅಂತ ನನಗೆ ಅನಿಸುತ್ತಿದೆ.
    ಹಾಗೆಯೇ ಇವತ್ತು ನಮ್ಮಲ್ಲಿ ಹುಡುಗ-ಹುಡುಗಿಯ ಪ್ರೇಮದ ಕಾರಣಗಳಿಂದ ಘಟಿಸುವ ಮರ್ಯಾದಾ ಹತ್ಯೆಗಳಿಗೂ,ಪರಿಹಾರ ಕೊಡದೇ ಸಲಿಂಗಕಾಮಕ್ಕೆ ಶಿಕ್ಷೆ ವಿಧಿಸುವ ನ್ಯಾಯಾಲಯದ ತೀರ್ಪಿಗೂ ಯಾವ ವ್ಯತ್ಯಾಸವೂ ಕಾಣಿಸದು..

    -Rj

    ReplyDelete
  23. ನೂತನರೆ,
    ಪ್ರಕೃತಿ ನೈಸರ್ಗಿಕ; ವಿಕೃತಿ ನಾಗರಿಕ!

    ReplyDelete
  24. Rj,
    ನಿಮ್ಮದು ವಿಚಾರಪ್ರಚೋದಕವಾದ ಪ್ರತಿಕ್ರಿಯೆ ಆಗಿದೆ. ಪ್ರಾಣಿಗಳಲ್ಲಿ ಸಲಿಂಗಕಾಮವು ಕಂಡು ಬಂದಿಲ್ಲ. ಆದುದರಿಂದ ಸಲಿಂಗಕಾಮವು ನಾಗರಿಕತೆಯ ಕೊಡುಗೆ ಎನ್ನಬಹುದು. ಅದೇನೆ ಇದ್ದರೂ ಸಹ, ಓರ್ವ ವ್ಯಕ್ತಿಯ ಸಲಿಂಗಕಾಮದ ಕಾರಣಗಳನ್ನು ಕಂಡು ಹಿಡಿದು, ಒಂದೋ ಅದನ್ನು ತಿದ್ದಲು ಪ್ರಯತ್ನಿಸಬೇಕು. ಅದು ಸಾಧ್ಯವಿರದಿದ್ದರೆ, ಅದನ್ನು ಸಹನೆಯಿಂದ ಒಪ್ಪಿಕೊಳ್ಳಬೇಕು. ಇದನ್ನು ಮಾಡಬೇಕಾದವರು social institutes. ನ್ಯಾಯಾಲಯದ ಕಾರ್ಯವು ಏನಿದ್ದರೂ ಸಂವಿಧಾನದ ಮೇರೆಗೆ ನ್ಯಾಯದಾನ ಮಾಡುವುದು.
    ಏನೆ ಆದರೂ, ನಿಮ್ಮ ಪ್ರತಿಕ್ರಿಯೆಯು ಹೆಚ್ಚಿನ ವಿಚಾರವಿನಿಮಯವನ್ನು ಆಕರ್ಷಿಸುತ್ತದೆ.

    ReplyDelete
  25. ಈಗಂತೂ ಈ LGBT ಪರ ಮಾತಾಡುವುದೇ ಮುಂದುವರೆಯುವಿಕೆ, ವಿರೋಧಿಸುವವರು ಮಡಿವಂತ ಗೊಡ್ಡುಗಳು ಎಂಬ ವಾತಾವರಣ ಸೃಷ್ಟಿಯಾಗಿದೆ. ನಾನು gay, ನಾನು lesbian, ನಾನು ಸಲಿಂಗಕಾಮಿ ಎಂದು ಹೇಳಿಕೊಳ್ಳುವುದು ಹೆಮ್ಮೆಯ ವಿಷಯವಾಗಿರುವಾಗ ಸಮಾಜದ ಸ್ವಾಸ್ಥ್ಯದ ಬಗ್ಗೆ ಯೋಚಿಸುವುದೇ ಮೂಢನಂಬಿಕೆಯಾಗಿ ಬಿಟ್ಟಿದೆ. ಉತ್ತಮ ಕಳಕಳಿಯ ಲೇಖನ ಸರ್

    ReplyDelete
  26. ದೀಪಸ್ಮಿತಾ,
    ಸಮಾಜದ ಮೌಲ್ಯಗಳು ಹೇಗೆ ಬದಲಾಗಿವೆ ನೋಡಿರಿ! ಇದು ನಮ್ಮ ಬುದ್ಧಿಜೀವಿಗಳ ಕೊಡುಗೆ!

    ReplyDelete
  27. ಪ್ರಿಯ ಖಾಕಾ,
    ನಿಮ್ಮಿಂದ ಇಂಥಾ ಲೇಖನವನ್ನ ನೋಡಿ ಸಖೇದಾಶ್ಚರ್ಯಗಳಾಗುತ್ತಿವೆ. ನಿಮಗೆ ಪರಿಚಯವಿಲ್ಲದ್ದೆಲ್ಲ ಅನಿಷ್ಟವಾ? ಅವಕ್ಕೆಲ್ಲಾ ಅಮೇರಿಕೇತ್ಯಾದಿ ಪಾಶ್ಚಿಮಾತ್ಯ ಶನೀಶ್ವರರು ಕಾರಣರಾ?? ಮನಶಾಶ್ತ್ರದಂತಹಾ ಜಟಿಲ ವಿಷಯದಲ್ಲ್ಲಿ ನಿಮಗೆ ಏನು ಅಧ್ಯಯನವಿದೆ?
    ಖಂದಿತವಾಗಿಯೂ ಏನೂ ಮಾಹಿತಿಯಿಲ್ಲದೇ ಸಂಪೂರ್ಣ ತಪ್ಪುಗ್ರಹಿಕೆಯಿಂದ ಬರೆದಿದ್ದೀರಿ. ಹೀಗೆ ಕತ್ತಲಿನಲ್ಲಿ ಮನಸಿಗನ್ನಿಸಿದ್ದನ್ನು ಬರೆಯುವ ಮೊದಲು ದೊಡ್ಡಣ್ಣ ಗೂಗ್ಲ ನನ್ನಾದರೂ ಸಂಪರ್ಕಿಸಬಹುದಿತ್ತು, ಚಿಕ್ಕಣ್ಣ ವಿಕಿಪೀಡಿಯಾ ಈ ಬಗ್ಗೆ ಏನು ಹೇಳುತ್ತಾನೆಂದು ನೋಡಿ ಚಿಂತಿಸಬಹುದಿತ್ತು. ಇನ್ನೂ ಖೇದಕರ ಸಂಗತಿಯೆಂದರೆ ನಿಮ್ಮ ಅಜ್ನಾನವು ನಿಮ್ಮ ಬಹುತೇಕ ಓದುಗರಲ್ಲೂ ಹಾಗೆಯೇ ಅನುರಣನಗೊಳ್ಳುವುದು ಈ ಮೇಲಿನ ಪ್ರತಿಕ್ರಿಯೆಗಳಲ್ಲಿ ಢಾಳಾಗಿ ಕಾಣಿಸುತ್ತಿದೆ. ಏನು ಮಾಡುವುದು, ಬರೆದುಬಿಟ್ಟಿದ್ದೀರಿ. ಈಗಲಾದರೂ ಈ ಕೆಳಗೆ ಲಗತ್ತಿಸಿರುವ ಆಕರಗಳನ್ನಾದರೂ ಎಚ್ಚರಿಕೆಯಿಂದ ಕೂಲಂಕುಶ ಅವಲೋಕಿಸಿ ಇನ್ನೊಂದು ಲೇಖನ ಪ್ರಕಟಿಸುವ ಹೊಣೆ ಹೊತ್ತುಕೊಳ್ಳಿ.

    ನೋಡಿ :
    http://en.wikipedia.org/wiki/Homosexual_behavior_in_animals
    http://en.wikipedia.org/wiki/List_of_birds_displaying_homosexual_behavior
    http://google.com/search?q=homosexuality+in+indian+sculpture&site=imghp&source=lnms&tbm=isch
    http://google.com/search?q=homosexuality+in+indian+sculpture
    http://en.wikipedia.org/wiki/LGBT_topics_and_Hinduism
    http://en.wikipedia.org/wiki/Portal:LGBT

    ಮತ್ತು ಕೊನೆಯದಾಗಿ ನಿಮ್ಮ ಮೂಡು ಪರಮನೆಂಟಾಗಿ ಕೆಟ್ಟಿದ್ದರೆ ಅಂತ ;)
    http://motugode.blogspot.in/

    --kshaaravadana

    ReplyDelete
  28. http://vijaykarnataka.indiatimes.com/articleshow/27865461.cms

    --khaaravadana

    ReplyDelete
  29. ಕ್ಷಾರವದನರೆ,
    ನಿಮ್ಮ ಸಲಹೆಗಾಗಿ ಧನ್ಯವಾದಗಳು.

    ReplyDelete
  30. ಖಾರವದನರೆ,
    ಲಿಂಕ್ ಕೊಟ್ಟಿದ್ದಕ್ಕಾಗಿ ಧನ್ಯವಾದಗಳು.

    ReplyDelete
  31. ಮನಸು,
    ಧನ್ಯವಾದಗಳು.

    ReplyDelete
  32. ಸುನಾಥರೆ - ಇದು ಅತ್ಯಂತ ಅವಶ್ಯಕವೂ, ಹೇಳಲೇಬೇಕಾದದ್ದು. ನನ್ನ ನಿಲುವು ಹೆಚ್ಚು ಕಡಿಮೆ ಇದನ್ನೆ ಹೋಲುತ್ತದೆ(ಇಲ್ಲಿನ ಅನೇಕರ ಅವಹೇಳನದ ನಡುವೆ). ಇದನ್ನು ಇನ್ನೂ ಸೂಕ್ಷ್ಮವಾಗಿ, ಆಳವಾಗಿ ಅಧ್ಯಯಸಿ ಬರೆಯಬಹುದಿತ್ತು ಅನಿಸಿದ್ದು ಸುಳ್ಳಲ್ಲ. ಎಷ್ಟೇ ಆಕರಗಳನ್ನು ಓದಿ, ಅರಗಿಸಿ, ಮನ ಮೆಚ್ಚುವಂತೆ ಬರೆಯುವದನ್ನು ಬದಿಗಿರಿಸಿ ನೋಡುವದಾದರೆ ಕೊಟ್ಟ ಕೊನೆಗೆ ಹೇಳಬೇಕಾದ ಮಾತೆಂದರೆ ಮದುವೆ ಎನ್ನುವದು ಗಂಡು ಹೆಣ್ಣಿನ ನಡುವಿನ ಸಂಬಂಧವಾಗಿ ಮಾತ್ರ ಉಳಿಯಬೇಕು. ಎಲ್ಲ ವೈಯಕ್ತಿಕ ಸ್ವಾತಂತ್ರ್ಯ ಮೂಲಭೂತವಾದದ್ದು, ಲೈಂಗಿಕತೆ ಅತ್ಯಂತ ಖಾಸಗಿಯದದ್ದು -ಇದರಲ್ಲಿ ಸಂದೇಹವೆ ಇಲ್ಲಾ -ಅದಕ್ಕೆಂದೆ ಇದನ್ನು ಮನೋರೋಗವೆಂದೋ, ಅನಾರೋಗ್ಯವೆಂದೋ ಹೇಳಲಾಗದು-ಅದರೆ ಇಲ್ಲಿ ಪ್ರಶ್ನೆ ಅದಲ್ಲವೆಂದು ಎಲ್ಲರಿಗೂ ಗೊತ್ತು(?). ಯಾವದೋ ಒಂದು ಲೇಬಲ ಹಚ್ಚಿ (ಮಾನವ ಹಕ್ಕುಗಳು,ಅಲ್ಪಸಂಖ್ಯಾತ ಇತ್ಯಾದಿ) ಸಲಿಂಗಕಾಮವನ್ನು ಮುಖ್ಯ ಧಾರೆಗೆ ಎಳೆದು ತರುವ ಪ್ರಯತ್ನ ಅವಿರತವಾಗಿ ನಡೆಯುತ್ತಲಿದೆ. ಅದರ ಹೆಚ್ಚಳವನ್ನು ಸ್ವಲ್ಪ ಮಾತ್ರವೂ ಪ್ರಶ್ನಿಸುವವರನ್ನು ಪ್ರತಿಗಾಮಿ ಎಂದೆ ಜರಿಯಲಾಗುತ್ತದೆ. ಇದರಲ್ಲಿ ಅನೇಕ ಕಪೋಲಕಲ್ಪಿತ ವಿಚಾರಧಾರೆಗಳನ್ನು ನುಸಳಿಸಿ ತಮ್ಮ ದೃಷ್ಟಿಯೇ ಸರ್ವಶ್ರೇಷ್ಟ, ಮಾನವತಾವಾದಿ ಎಂದು ಬೀಗುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇದು 'ಅಪಾಯಕಾರಿ ಸ್ವೇಚ್ಛಾಚಾರ' ಎಂಬುವದನ್ನು ನಾನಂತೂ ಸಂಪೂರ್ಣವಾಗಿ ಒಪ್ಪುತ್ತೇನೆ. ಇಂಥಹ ಲೇಖನಗಳು ತಮ್ಮಿಂದ ಇನ್ನಷ್ಟು ಬರಲಿ.
    -ಅನಿಲ ತಾಳಿಕೋಟಿ

    ReplyDelete
  33. ಸರ್,

    ಸಮಾಜದಡೆಗೆ ನಿಮಗಿರುವ ಕಳಕಳಿ ಮತ್ತು ನಿಮ್ಮ ಈ ಲೇಖನಕ್ಕೆ ಸಂಬಂಧಪಟ್ಟಂತೆ ಮೇಲಿನ ಕೆಲವೊಂದು ಅಭಿಪ್ರಾಯಗಳು ನನ್ನನ್ನು ಸದರಿ ವಿಷಯದ ಬಗ್ಗೆ ಇನ್ನಷ್ಟು ಯೋಚಿಸುವಂತೆ ಮಾಡಿದವು. ಸಲಿಂಗಕಾಮವು ಮಾನವರಲ್ಲಷ್ಟೇ ಅಲ್ಲ,ಪ್ರಾಣಿ-ಪಕ್ಷಿಗಳಲ್ಲೂ ಸಹ ಅಂತರ್ಗತವಾಗಿದೆ ಅಂತ ಸಜ್ಜನ ಓದುಗರೊಬ್ಬರು ಮೇಲೆ ಕಮೆಂಟಿಸಿದ್ದಾರೆ.ಹಾಗೆಯೇ ಅದಕ್ಕೆ ತಕ್ಕಂತೆ ಸ್ಪಷ್ಟ ಪುರಾವೆಗಳನ್ನೂ ಕೂಡ ತೋರಿಸಿದ್ದಾರೆ.ಇವತ್ತು ಅಂತರ್ಜಾಲದಲ್ಲಿ ಕೆಲವೊಂದು ವೀಡಿಯೊ ಗಮನಿಸುತ್ತಿರುವಾಗ ಒಂದು ವಿಷಯ ನನ್ನ ಗಮನ ಸೆಳೆಯಿತು.ಇದು ನೇರವಾಗಿ ಸಲಿಂಗಕಾಮಕ್ಕೆ ಸಂಬಂಧಿಸಿದ್ದು ಅಲ್ಲವಾದರೂ ಕೂಡ ನಿಸರ್ಗವು ತನ್ನಲ್ಲಿ ಏನೇನು ಅತಿರೇಕಗಳನ್ನು ಮತ್ತು ನಿಗೂಢಗಳನ್ನು ಬಚ್ಚಿಟ್ಟುಕೊಂಡಿದೆ ಅಂತ ಅಚ್ಚರಿಯಾಯಿತು.ಆಸಕ್ತಿಯುಳ್ಳವರಿಗೆ ಏನಾದರೂ ಹೊಸ ವಿಷಯ ತಿಳಿಸೋಣ ಅಂತ ಈ ಟಿಪ್ಪಣಿ:

    ಇವರು ಕೀಸ್ ಮೋಯ್ಲಿಕರ್ (Kees Moeliker).
    ಸತ್ತ ಪ್ರಾಣಿಗಳನ್ನು ಸಂಗ್ರಹಿಸುವ ವೃತ್ತಿಯಲ್ಲಿರುತ್ತಾರೆ. ಒಂದು ದಿನ ತಮ್ಮ ಕೆಲಸದ ಮಧ್ಯೆ ಅಚ್ಚರಿಗೊಳಗಾಗುವ ಘಟನೆಯೊಂದಕ್ಕೆ ಸಾಕ್ಷಿಯಾಗುತ್ತಾರೆ. ಸುತ್ತಲೂ ಗಾಜಿನ ಗೋಡೆಯನ್ನಾವರಿಸಿದ ಅವರ ಕಚೇರಿಯ ಗೋಡೆಗೆ ಒಂದು ಬಾತುಕೋಳಿ ಅಪ್ಪಳಿಸಿ ಸತ್ತುಹೋಗುತ್ತದೆ.ಇದನ್ನು ಗಮನಿಸಿದ ಕೀಸ್ ಮೋಯ್ಲಿಕರ್ ಬಾತುಕೋಳಿಯನ್ನು ನೋಡಲು ಹೊರಗೆ ಬರುತ್ತಿದ್ದಂತೆ ಇನ್ನೊಂದು ಆಶ್ಚೈರ್ಯಕರ ಘಟನೆಗೆ ಸಾಕ್ಷಿಯಾಗುತ್ತಾರೆ.ಅಲ್ಲಿ ಸತ್ತು ಮಲಗಿದ್ದ ಕೋಳಿಯ ಮೇಲೆ ಇನ್ನೊಂದು ಜೀವಂತ ಕೋಳಿಯು ರತಿಕ್ರೀಡೆಯಾಡುವ ಪ್ರಯತ್ನ ಮಾಡುತ್ತಿರುತ್ತದೆ!
    ಕುತೂಹಲದಿಂದ ಇನ್ನಷ್ಟು ಹತ್ತಿರಕ್ಕೆ ಹೋಗಿ ನೋಡಿದಾಗ-ಸತ್ತ ಕೋಳಿ ಮತ್ತು ಜೀವಂತ ಕೋಳಿ ಎರಡೂ ಸಲಿಂಗಿಗಳು ಅನ್ನುವ ವಿಷಯ ಕೀಸ್ ಮೋಯ್ಲಿಕರ್ ಅವರಿಗೆ ಗೊತ್ತಾಗುತ್ತದೆ.
    ಸದರಿ ಘಟನೆಯನ್ನು ಅವರು Necrophilia ಅಂತ ಗುರುತಿಸುತ್ತಾರೆ. ಸತ್ತ ವ್ಯಕ್ತಿಯ ಮೇಲಿನ ಮೋಹದಿಂದಾಗಿ ಶವದ ಮೇಲೂ ಕೂಡ ರತಿಕ್ರೀಡೆಯಾಡಬಯಸುವ ವಾಂಛೆಗೆ 'ನೆಕ್ರೋಫಿಲಿಯ' ಅಂತ ಕರೆಯಲಾಗುತ್ತದೆ.

    ಇಂಥ ವರ್ತನೆಯನ್ನು ನೋಡಿದ ಬಳಿಕ ಪ್ರಾಣಿ-ಪಕ್ಷಿಗಳಲ್ಲೂ ಕೂಡ ಸಲಿಂಗಕಾಮ,ಕಾಮ ವೈಪರಿತ್ಯ ಮತ್ತು Necrophilia ಉದ್ಭವಿಸಬಲ್ಲದು ಅಂತ ಕೀಸ್ ಮೋಯ್ಲಿಕರ್ ತಮ್ಮ ಮುಂದಿನ ಸಂಶೋಧನೆಗಳಲ್ಲಿ ಕಂಡುಕೊಳ್ಳುತ್ತಾರೆ.
    ಅವರ ಸಂಶೋಧನೆಯ ಕ್ಲಿಪ್ಪಿಂಗ್ ಇಲ್ಲಿ ನೋಡಬಹುದು.

    http://www.ted.com/talks/kees_moeliker_how_a_dead_duck_changed_my_life.html

    ಕೊನೆಯದಾಗಿ,ಸಲಿಂಗಕಾಮವು ಒಳ್ಳೆಯದೋ,ಕೆಟ್ಟದ್ದೋ ಎಂಬುದನ್ನು ಸಂಶೋಧಕರು ಮತ್ತು ವೈದ್ಯಕೀಯ ಜಗತ್ತು ಹೇಳಬಹುದಾಗಿದೆ.ಆದರೆ,ಪ್ರಾಣಿ-ಪಕ್ಷಿಗಳಿಗಿಂತ ಹೆಚ್ಚಿನ ಬುದ್ಧಿಮತ್ತೆಯನ್ನು ಮತ್ತು ಅರಿವನ್ನು ಹೊಂದಿರುವ ಮನುಜ ಆದಷ್ಟೂ ನಿಸರ್ಗಕ್ಕೆ ಹತ್ತಿರವಾಗಿ ಬದುಕುವದನ್ನು ಕಲಿಯಬೇಕಾಗಿದೆ,ನಿಸರ್ಗದ ವೈಪರಿತ್ಯವನ್ನು ಅರಿಯಬೇಕಿದೆ ಮತ್ತು ಸೃಷ್ಟಿಯ ನಿಯಮಗಳನ್ನು ಪಾಲಿಸಬೇಕಿದೆ..

    -Rj

    ReplyDelete
  34. ಅನಿಲರೆ,
    ಧನ್ಯವಾದಗಳು. ಧರ್ಮ, ಅರ್ಥ, ಕಾಮ ಹಾಗು ಮೋಕ್ಷ ಎನ್ನುವ ನಾಲ್ಕು ಪುರುಷಾರ್ಥಗಳು fulfill ಅಗಲು ನೆರವು ನೀಡುವ ಸಮಾಜವು ಉತ್ತಮ ಸಮಾಜ. ನಮ್ಮ ಆಧುನಿಕ ಸಮಾಜವು ಈ ಪುರುಷಾರ್ಥಗಳನ್ನು ತಿರುವು ಮುರುವಾಗಿಸಲು ಹೊರಟಿದೆಯೇನೊ?

    ReplyDelete
  35. Rj,
    ನಿಮ್ಮ ಪ್ರತಿಕ್ರಿಯೆಯಲ್ಲಿಯ ಮಾಹಿತಿಯು ನನ್ನನ್ನು ದಂಗು ಬಡಿಸಿತು. ಪ್ರಾಣಿಜಗತ್ತಿನ ವ್ಯವಹಾರಗಳು ‘ನೈಸರ್ಗಿಕ’ ಎನ್ನುವುದು ಒಂದು ಭ್ರಮೆಯೋ ಎನ್ನುವಂತೆ ಭಾಸವಾಗುತ್ತಿದೆ. ಆದರೆ ಪ್ರಾಣಿಮನೋಶಾಸ್ತ್ರಜ್ಞರು ಹೇಳುವಂತೆ ಕಷ್ಟಕರ ವ್ಯವಸ್ಥೆಯಲ್ಲಿ ಕೂಡಿಹಾಕಿದ ಪ್ರಾಣಿಗಳು ‘ಅಸಹಜ’ ವರ್ತನೆಯನ್ನು ತೋರುತ್ತವೆ. ಉದಾ:rape.
    ನೀವು ಕಳುಹಿದ ಲಿಂಕ್ ನೋಡಿದ ಮೇಲೆ ನನ್ನ ತಿಳಿವು ಬದಲಾಗಬಹುದು! ಧನ್ಯವಾದಗಳು.

    ReplyDelete