Tuesday, October 26, 2010

ಬೇಂದ್ರೆಯವರ ‘ದೀಪ’

ಬೇಂದ್ರೆಯವರಿಗೆ ಪ್ರಣಯವು ಒಂದು ವೈಯಕ್ತಿಕ ಕಾಮನೆಯಲ್ಲ. ಇದೊಂದು ವಿಶ್ವಲೀಲೆ. ಅವರ ಅನೇಕ ಪ್ರಣಯಗೀತೆಗಳು ವಿಶ್ವಪ್ರಣಯವನ್ನು ತೋರಿಸುವ ಗೀತೆಗಳೇ ಆಗಿವೆ. ಅವರ ಸುಪ್ರಸಿದ್ಧ ಗೀತೆಯಾದ ‘ಅನಂತ ಪ್ರಣಯ’ವು (‘ಉತ್ತರ ಧ್ರುವದಿಂ ದಕ್ಷಿಣ ಧ್ರುವಕೂ ಚುಂಬಕ ಗಾಳಿಯು ಬೀಸುತಿದೆ….’) ವಿಶ್ವದ ಅಂತರಂಗದಲ್ಲಿ ಚಿಮ್ಮುತ್ತಿರುವ ಪ್ರಣಯವನ್ನು ತೋರಿಸುತ್ತದೆ. ಅವರ ‘ಕಾಮಕಸ್ತೂರಿ’ ಕವನಸಂಕಲನದಲ್ಲಿ ಇರುವ ‘ನನ್ನವಳು’ ಕವನವಂತೂ ಸಮಗ್ರ ಜಗತ್ತಿನ ಶ್ರೇಷ್ಠ ಪ್ರಣಯಕವನಗಳಲ್ಲಿ ಒಂದಾಗಿದೆ. ಈ ಕವನದಲ್ಲಿ ನಿಸರ್ಗದ ದೈನಂದಿನ ಬದಲಾವಣೆಗಳಾದ ಹಗಲು,ಸಂಜೆ ಹಾಗು ಇರುಳುಗಳ ಜೊತೆಗೆ ತನ್ನ ಕೆಳದಿಯನ್ನು ಸಮೀಕರಿಸಿ ಬೇಂದ್ರೆಯವರು ಹಾಡಿದ್ದಾರೆ. ತಮ್ಮ ವೈಯಕ್ತಿಕ ಪ್ರಣಯವನ್ನು ವಿಶ್ವಪ್ರಣಯದೊಂದಿಗೆ ಸಮೀಕರಿಸಿ ಅವರು ಹಾಡಿದ ಮತ್ತೊಂದು ಕವನವೆಂದರೆ ‘ದೀಪ’. ಈ ಕವನವು ‘ನಾದಲೀಲೆ’ ಸಂಕಲನದಲ್ಲಿದೆ. ಈ ಕವನದ ಪೂರ್ತಿಪಾಠ ಹೀಗಿದೆ:

                                    ಬಂತಿದೊ ಶೃಂಗಾರಮಾಸ
                                    ಕಂತು ನಕ್ಕ ಚಂದ್ರಹಾಸ
                                    ಎಂತು ತುಂಬಿತಾsಕಾಶ
                                                ಕಂಡವರನು ಹರಸಲು.

                                    ಕಿರಿಬೆರಳಲಿ ಬೆಳ್ಳಿಹರಳು
                                    ಕರಿಕುರುಳೊಳು ಚಿಕ್ಕೆ ಅರಳು
                                    ತೆರಳಿದಳಿದೊ ತರಳೆ ಇರುಳು
                                                 ತನ್ನರಸನನರಸಲು.

                                    ಗಂಗೆ ಯಮುನೆ ಕೂಡಿ ಹರಿದು
                                    ಸಂಗಮ ಜಲ ಬಿಳಿದು ಕರಿದು
                                    ತಿಂಗಳ ನಗೆ ಮೇರೆವರಿದು
                                                ಬೇರೆ ಮಿರುಗು ನೀರಿಗು.

                                    ಪಂಥದಿಂದ ಮನೆಯ ತೊರೆದು
                                    ಪಾಂಥ ನೆನೆದನತ್ತು ಕರೆದು :
                                    ಇಂಥ ಸಮಯ ಬೇರೆ ಬರದು
                                                 ದಂಪತಿಗಳಿಗಾರಿಗು !

                                    ನಾನು ನೀನು ಜೊತೆಗೆಬಂದು
                                    ಈ ನದಿಗಳ ತಡಿಗೆ ನಿಂದು
                                    ಸಾನುರಾಗದಿಂದ ಇಂದು
                                                 ದೀಪ ತೇಲಿಬಿಟ್ಟೆವೇ—
                                                ದೀಪ ತೇಲಿ ಬಿಟ್ಟೆವು.

ಬ್ರಾಹ್ಮೀ ಮುಹೂರ್ತದಲ್ಲಿ ನದಿಯಲ್ಲಿ ದೀಪಗಳನ್ನು ತೇಲಿ ಬಿಡುವದು ಧಾರಿäಕ ವಿಧಿಯ ಒಂದು ಭಾಗವಾಗಿದೆ. ಬೇಂದ್ರೆಯವರು ತಮ್ಮ ಹೆಂಡತಿಯೊಡನೆ ಪ್ರಯಾಗಕ್ಕೆ ಹೋದಾಗ ಅಲ್ಲಿ ಗಂಗಾ ಹಾಗು ಯಮುನಾ ನದಿಗಳ ಸಂಗಮದಲ್ಲಿ ದೀಪವನ್ನು ತೇಲಿ ಬಿಡುತ್ತಾರೆ. ಇದು ಈ ಕವನದ ಸಂದರã. ಗಂಡ,ಹೆಂಡತಿಯರು ಜೊತೆಯಾಗಿ ಯಾವುದೇ ಕಾರåವನ್ನು ಮಾಡಲಿ, ಆ ಸಂದರãವು ಅವರಿಗೆ ಸಹಜವಾಗಿಯೇ ಪ್ರೇಮಭಾವದ ಉದ್ದೀಪನದ ಕಾರಣವೂ ಆಗಬಲ್ಲದು.  ಇನ್ನೂ ನಸುಗತ್ತಲೆ ಇರುವ ಸಮಯದಲ್ಲಿ ಬೇಂದ್ರೆ ದಂಪತಿಗಳು ಒಂದು ಧಾರಿäಕ ವಿಧಿಯನ್ನು ನೆರವೇರಿಸಲು ಜೊತೆಯಾಗಿ ನದಿಯ ದಂಡೆಗೆ ಬಂದಿದ್ದಾರೆ. ಬೆಳದಿಂಗಳು ಇನ್ನೂ ತನ್ನ ಪೂರÚ ಪ್ರಭೆಯಲ್ಲಿದೆ. ನದಿಯಲ್ಲಿ ತೇಲುತ್ತಿರುವ ದೀಪಗಳು ಭಾವೋದ್ದೀಪನವನ್ನು ಮಾಡುತ್ತಿವೆ. ಹೀಗಾಗಿ ಜೊತೆಯಾಗಿರುವ ದಂಪತಿಗಳಿಗೆ ಇದು ಶೃಂಗಾರಮಾಸದಂತೆ ಭಾಸವಾದರೆ ಆಶÑåವಿಲ್ಲ. ಕವಿಯಲ್ಲಿ ಮೂಡಿದ ಆ ಭಾವನೆಯ ಫಲವೇ ಈ ಕವನ : ಶೃಂಗಾರ ಮಾಸ’. ಆದರೆ ಬೇಂದ್ರೆಯವರು ‘ಶೃಂಗಾರಮಾಸ’ವನ್ನು ಕೇವಲ ರೂಪಕವಾಗಿ ಬಳಸುತ್ತಿಲ್ಲ. ಋತುಮಾನವನ್ನು ಸೂಚಿಸಲೂ ಸಹ ಅವರು ಈ ಪದವನ್ನು ಪ್ರಯೋಗಿಸಿದ್ದಾರೆ. ‘ಶೃಂಗಾರಮಾಸ’ ಎಂದರೆ ಚೈತ್ರಮಾಸ. ವಸಂತ ಋತುವಿನ ಮೊದಲ ಮಾಸವಾದ ಚೈತ್ರದಲ್ಲಿಯೇ, ನಿಸರÎವು ತನ್ನನ್ನು ಹೂವುಗಳಿಂದ ಸಿಂಗರಿಸಿಕೊಳ್ಳುವದು ಹಾಗು ಫಲವತಿಯಾಗಲು ಕಾಯುವದು.
(ಬೇಂದ್ರೆಯವರ ಮತ್ತೊಂದು ಕವನವಾದ ‘ಯುಗಾದಿ’ಯಲ್ಲಿಯೂ ಸಹ ಇದೇ ಧ್ವನಿಯಿದೆ :
“ಕಮ್ಮನೆ ಬಾಣಕ್ಕೆ ಸೋತು
ಜುಮ್ಮನೆ ಮಾಮರವು ಹೂತು
ಕಾಮಗಾಗಿ ಕಾದಿದೆ.”)
ಆದುದರಿಂದ ಶೃಂಗಾರಮಾಸವೆಂದರೆ ಚೈತ್ರಮಾಸದ ಕಾಲ. ಮುಂದಿನ ಸಾಲುಗಳಲ್ಲಿ ಬೇಂದ್ರೆಯವರು ಇನ್ನೂ ನಿರಿÝಷ್ಟವಾದ ಕಾಲಸೂಚನೆಗಳನ್ನು ನೀಡುತ್ತಾರೆ. ಮೊದಲ ನುಡಿಯನ್ನು ಎಳೆಎಳೆಯಾಗಿ ಪರೀಕ್ಷಿಸಿದಾಗ ಈ ಸೂಚನೆಗಳು ಹೊಳೆಯುವವು:
                        ಬಂತಿದೊ ಶೃಂಗಾರಮಾಸ
                        ಕಂತು ನಕ್ಕ ಚಂದ್ರಹಾಸ
                        ಎಂತು ತುಂಬಿತಾsಕಾಶ
                                ಕಂಡವರನು ಹರಸಲು.

ಕಂತುವದು ಎಂದರೆ ಮುಳುಗುವದು. ‘ಕಂತು ನಕ್ಕ ಚಂದ್ರಹಾಸ’ ಎಂದರೆ, ಮುಳುಗುತ್ತಿರುವ ಚಂದ್ರ. ಬೆಳದಿಂಗಳು ಆಕಾಶವನ್ನೆಲ್ಲ ತುಂಬಿಕೊಂಡಾಗ, ಚಂದ್ರನು ಮುಳುಗುತ್ತಿದ್ದಾನೆ ಎಂದರೆ ಇದು ಹುಣ್ಣಿವೆಯ ದಿನ ಹಾಗೂ ಈ ಸಮಯವು ಸೂರೋåದಯಕ್ಕಿಂತ ಮೊದಲಿನ ಸಮಯ. ಆದುದರಿಂದ ಬೇಂದ್ರೆಯವರು ಚೈತ್ರಪೂರಿÚಮೆಯಂದು ಇರುಳಿನ ಕೊನೆಯ ಜಾವದಲ್ಲಿ ದೀಪಗಳನ್ನು ತೇಲಿಬಿಡಲು ಅಲ್ಲಿ ತೆರಳಿದ್ದರು ಎಂದು ಸೂಚಿಸುತ್ತಿದ್ದಾರೆ. ಇದು ಪೂರಿÚಮೆಯ ದಿನವಾದದ್ದರಿಂದಲೇ ಆಕಾಶವೆಲ್ಲ ಬೆಳದಿಂಗಳಿನಿಂದ ತುಂಬಿದೆ. ಅದನ್ನೇ ಬೇಂದ್ರೆಯವರು ‘ಎಂತು ತುಂಬಿತಾsಕಾಶ’ ಎಂದು ಹಾಡಿದ್ದಾರೆ. ಶೃಂಗಾರಮಾಸದ ವರÚನೆಯನ್ನು ಪರಿಪೂರÚಗೊಳಿಸುತ್ತಲೇ, ಬೇಂದ್ರೆಯವರು ಕಾಲವನ್ನು ಸೂಚಿಸುವ ಪರಿ ಇದು.

 ‘ಕಂತು’ ಪದಕ್ಕೆ ಕಾಮದೇವ ಎನ್ನುವ ಅರÜವೂ ಇದೆ. ಹೀಗಾಗಿ ‘ಕಂತು ನಕ್ಕ ಚಂದ್ರಹಾಸ’ ಎಂದರೆ ಕಾಮದೇವನ ನಗೆಯೇ ಬೆಳದಿಂಗಳಾಯಿತು ಎನ್ನುವ ಭಾವನೆಯೂ ಇಲ್ಲಿ ಬರುತ್ತದೆ.  ಪ್ರಣಯಭಾವನೆಯನ್ನು ಜಾಗೃತಗೊಳಿಸುವ ಈ ಕಾಮದೇವನ ಉದ್ದೇಶವೇನು? ಈತನು ಕೇವಲ ಸಾಧಾರಣ ಕಾಮನಲ್ಲ ; ಈತನು ದೇವನು ಎನ್ನುವದನ್ನು ಗಮನದಲ್ಲಿ ಇಟ್ಟುಕೊಳ್ಳಿ. (ಬೇಂದ್ರೆಯವರು ತಮ್ಮ ಮತ್ತೊಂದು ಕವನದಲ್ಲಿ ’ದೇವಕಾಮವೆ ಕಾಮದೇವನಾಗಿ’ ಎಂದು ಹೇಳಿದ್ದಾರೆ.) ದೇವತೆಯಲ್ಲಿ ಸದಾಕಾಲವೂ ಅನುಗ್ರಹ ಭಾವನೆಯು ತುಂಬಿರುತ್ತದೆ. ಅದರಂತೆ ಕಾಮದೇವನೂ ಸಹ ತನ್ನ ಚಂದ್ರಹಾಸದಿಂದ ಅಂದರೆ ಬೆಳದಿಂಗಳಿನಿಂದ ಆಕಾಶವನ್ನೆಲ್ಲ ತುಂಬುವದು ಅನುಗ್ರಹ ನೀಡುವ ಕಾರಣಕ್ಕಾಗಿ. ಈ ಅನುಗ್ರಹವು ಕೇವಲ ಪ್ರಣಯಿಗಳಿಗಾಗಿ ಮಾತ್ರ ಅಲ್ಲ, ‘ಕಂಡವರನು ಹರಸಲು’.  ಇದರ ಅರÜ ಕಣ್ಣಿಗೆ ಬಿದ್ದ ಕೆಲವರನ್ನು ಮಾತ್ರ ಹರಸುವದು ಎಂದಲ್ಲ. ಆಕಾಶವನ್ನೆಲ್ಲ ಬೆಳದಿಂಗಳ ರೂಪದ ನಗೆಯಿಂದ ವ್ಯಾಪಿಸಿದ ಆ ಕಾಮದೇವನಿಗೆ ಕೆಳಗಿರುವ ಸೃಷ್ಟಿಯೆಲ್ಲ ಕಾಣದಿದ್ದೀತೆ? ಆದುದರಿಂದ ಸಕಲ ಚರಾಚರ ಜಗತ್ತನ್ನೆಲ್ಲ ಹರಸಲು ಕಾಮದೇವನು ಕಾತರನಾಗಿದ್ದಾನೆ ಎನ್ನುವದು ಈ ಸಾಲುಗಳ ಮರä.

ಮೊದಲನೆಯ ನುಡಿಯಲ್ಲಿ ಪ್ರಕೃತಿಯಲ್ಲಿ ಹರಡಿದ ಪ್ರಣಯ ಭಾವನೆಯನ್ನು ತೋರಿಸುತ್ತಲೇ ಎರಡನೆಯ ನುಡಿಯಲ್ಲಿ ಬೇಂದ್ರೆಯವರು ಈ ವಿಶ್ವಪ್ರಣಯದ ನಾಯಕ, ನಾಯಕಿಯರನ್ನು ತೋರಿಸುತ್ತಿದ್ದಾರೆ.  ಜೊತೆಜೊತೆಗೇ ಕಾಲಸೂಚನೆಯನ್ನೂ ಮಂಡಿಸುತ್ತಿದ್ದಾರೆ :
                        ಕಿರಿಬೆರಳಲಿ ಬೆಳ್ಳಿಹರಳು
                        ಕರಿಕುರುಳೊಳು ಚಿಕ್ಕೆ ಅರಳು
                        ತೆರಳಿದಳಿದೊ ತರಳೆ ಇರುಳು
                                  ತನ್ನರಸನನರಸಲು.
ಇರುಳು ಎಂಬ ಚಿಕ್ಕ ವಯಸ್ಸಿನ ಯುವತಿ (=ತರಳೆ) ತನ್ನ ಅರಸನನ್ನು ಅರಸಲು ಅಂದರೆ ಹುಡುಕಲು ಹೊರಟಿದ್ದಾಳೆ ಎನ್ನುವದು ಈ ನುಡಿಯ ತಿರುಳು. ರಾತ್ರಿ ಎನ್ನುವ ಈ ಯುವತಿ ಅನಾದಿಕಾಲದಿಂದಲೂ ತನ್ನ ಅರಸನನ್ನು ಅರಸುತ್ತಳೇ ಇದ್ದಾಳೆ. ಹೀಗಾಗಿ ಇವಳು ಚಿರಯೌವನೆ. ಆದುದರಿಂದಲೇ ಇವಳು ‘ತರಳೆ’. ಈ ತರಳೆಯ ಅರಸ ಯಾರು? ರಾತ್ರಿಕುಮಾರಿಯ ಅರಸನು ಚಂದ್ರನೇ ತಾನೆ? ಆದುದರಿಂದ ಚಂದ್ರನೇ ಇವಳು ಅರಸುತ್ತಿರುವ ಪ್ರಣಯಿ.  ಚಂದ್ರ ಎಲ್ಲಿದ್ದಾನೆ? ಆತನು ಕಂತು (=ಮುಳುಗು)ತ್ತಿದ್ದಾನೆ ಎಂದು ಬೇಂದ್ರೆಯವರು ಮೊದಲನೆಯ ನುಡಿಯಲ್ಲಿಯೇ ಹೇಳಿದ್ದಾರೆ. ಮುಳುಗುತ್ತಿರುವ ಚಂದ್ರನ ಹಿಂದೆಯೇ ಇರುಳೂ ಕೂಡ ಸರಿಯುತ್ತಿದೆ.  ಈ ರಾತ್ರಿಕುವರಿಯ ಒಡವೆಗಳನ್ನಷ್ಟು ನೋಡಿರಿ. ಇವಳು ಕಿರಿಬೆರಳಿನಲ್ಲಿ ಬೆಳ್ಳಿಹರಳಿರುವ ಉಂಗುರವನ್ನು  ಹಾಗು ಕಪ್ಪು ಕುರುಳಿನಲ್ಲಿ ಚಿಕ್ಕೆಗಳ ಅರಳು ಎಂದರೆ ಹೂವುಗಳನ್ನು ಧರಿಸಿದ್ದಾಳೆ. ಬೆಳ್ಳಿಹರಳು ಎಂದರೆ ಶುಕ್ರಗ್ರಹ. ಶುಕ್ರಗ್ರಹಕ್ಕೆ ಕನ್ನಡದಲ್ಲಿ ‘ಬೆಳ್ಳಿ ಚಿಕ್ಕಿ’ ಎಂದೇ ಕರೆಯುತ್ತಾರೆ. ಇವಳ ಕಪ್ಪು ಕುರುಳು ಎಂದರೆ ಆಕಾಶ. ಆಕಾಶದ ಅರಳುಗಳು ಎಂದರೆ ನಕ್ಷತ್ರಗಳು. ಇಷ್ಟು ಶೃಂಗಾರದೊಡನೆ ರಾತ್ರಿಕುಮಾರಿ ಚಂದ್ರನ ಬೆನ್ನು ಹತ್ತಿ ನಡೆದಿದ್ದಾಳೆ. ಇದಿಷ್ಟು ವಿಶ್ವಪ್ರಣಯಿಗಳ ವರÚನೆಯಾದರೆ, ಇದರಲ್ಲಿ ಅಡಗಿರುವ ಕಾಲಸೂಚನೆಯನ್ನಷ್ಟು ನೋಡೋಣ :

ಶುಕ್ರಗ್ರಹವು ಸೂರೋåದಯಕ್ಕಿಂತ ಮೊದಲು ಅಥವಾ ಸೂರಾåಸ್ತದ ನಂತರ ಕಾಣಿಸುತ್ತದೆ. 
ಈ ಸಂದರãದಲ್ಲಿ ಇದು ಸೂರೋåದಯದ ಮೊದಲಿನ ವರÚನೆ. ಇದನ್ನು ದೃಢೀಕರಿಸಲು ಬೇಂದ್ರೆಯವರು ‘ಕಿರಿಬೆರಳಲಿ ಬೆಳ್ಳಿಹರಳು’ ಎಂದು ಹೇಳುತ್ತಾರೆ. ರಾತ್ರಿಕುವರಿಯು ತನ್ನ ಯಾವುದೇ ನಾಲ್ಕು ಬೆರಳುಗಳಲ್ಲಿ ಉಂಗುರ ಧರಿಸಬಹುದಾಗಿತ್ತು. ಆದರೆ ಅವಳು ತನ್ನ ಕಿರಿಬೆರಳಲ್ಲಿ ಧರಿಸಿದ್ದಾಳೆ. ಈಗ ತೋರುಬೆರಳಿನಿಂದ  ಬೆರಳುಗಳನ್ನು ಎಣಿಸಿರಿ : (೧) ತೋರುಬೆರಳು, (೨) ನಡುವಿನ ಬೆರಳು, (೩) ಉಂಗುರ ಬೆರಳು ಹಾಗು (೪) ಕಿರಿಬೆರಳು. ಈ ಎಣಿಕೆಯಲ್ಲಿ ಕಿರಿಬೆರಳು ನಾಲ್ಕನೆಯ ಬೆರಳಾಗುತ್ತದೆ. ಆದುದರಿಂದ ಈ ಸಮಯವು ರಾತ್ರಿಯ ನಾಲ್ಕನೆಯ ಜಾಮ. ಆದರೆ ನಕ್ಷತ್ರಗಳು ಇನ್ನೂ ಕಾಣುತ್ತಲೇ ಇವೆ. ಆದುದರಿಂದ ಇದು ನಾಲ್ಕನೆಯ ಜಾಮದ ಪೂರಾéÞ ಅರಾÜತ್ ಬ್ರಾಹ್ಮೀ  ಮುಹೂರÛ.

ಮೂರನೆಯ ನುಡಿಯಲ್ಲಿ ಬೇಂದ್ರೆಯವರು ಆಕಾಶದಿಂದ ಭೂಮಿಗೆ ಇಳಿಯುತ್ತಾರೆ ಹಾಗು ಭೂಮಿಯ ಮೇಲಿನ ಪ್ರಣಯವನ್ನು ಅಂದರೆ ಗಂಗಾ-ಯಮುನಾ ನದಿಗಳ ಸಂಗಮವನ್ನು ವರಿÚಸುತ್ತಾರೆ :
                        ಗಂಗೆ ಯಮುನೆ ಕೂಡಿ ಹರಿದು
                        ಸಂಗಮ ಜಲ ಬಿಳಿದು ಕರಿದು
                        ತಿಂಗಳ ನಗೆ ಮೇರೆವರಿದು
                                ಬೇರೆ ಮಿರುಗು ನೀರಿಗು.

ಗಂಗೆಯ ನೀರಿನ  ಬಣ್ಣ ಬಿಳಿ ಹಾಗು ಯಮುನೆಯ ನೀರಿನ ಬಣ್ಣ ಕರಿ. ಈ ನದಿಗಳ ಸಂಗಮದ ಜಲವು ಬಿಳಿ ಹಾಗು ಕರಿಯ ಬಣ್ಣಗಳ ಮಿಶ್ರಣವಾಗುತ್ತದೆ. ಈ ಮಿಶ್ರಣದ ಮೇಲೆ ತಿಂಗಳಿನ ನಗೆ ಅಂದರೆ ಬೆಳದಿಂಗಳು ಬಿದ್ದಾಗ ಆ ನೀರಿಗೆ ಒಂದು ವಿಭಿನ್ನ ಮಿರುಗು ಬರುತ್ತದೆ. ದಾಂಪತ್ಯದಲ್ಲೂ ಸಹ ಗಂಡ ಹಾಗು ಹೆಂಡತಿಯ ಸ್ವಭಾವಗಳು ಭಿನ್ನವಾಗಿರುತ್ತವೆ. ಆದರೆ ಸರಸ ಪ್ರೇಮದ ಬೆಳದಿಂಗಳಿನಲ್ಲಿ ಮಿಂದಾಗ ಆ ದಾಂಪತ್ಯಕ್ಕೆ ಒಂದು ಹೊಸ ಸೊಬಗು ಬರುತ್ತದೆ ಎಂದು ಬೇಂದ್ರೆಯವರು ಅನ್ಯೋಕ್ತಿಯ ಮೂಲಕ ಹೇಳುತ್ತಿದ್ದಾರೆ.

ನಾಲ್ಕನೆಯ ನುಡಿ ಹೀಗಿದೆ :
                        ಪಂಥದಿಂದ ಮನೆಯ ತೊರೆದು
                        ಪಾಂಥ ನೆನೆದನತ್ತು ಕರೆದು :
                        ಇಂಥ ಸಮಯ ಬೇರೆ ಬರದು
                                  ದಂಪತಿಗಳಿಗಾರಿಗು !

ಮೇಲಿನ ಮೂರು ನುಡಿಗಳಲ್ಲಿ ಬೇಂದ್ರೆಯವರು ಆಕಾಶದಲ್ಲಿಯ ಪ್ರಣಯವನ್ನು ಹಾಗು ಭೂಮಿಯ ಮೇಲಿನ ಪ್ರಣಯವನ್ನು ಬಣ್ಣಿಸಿದರು. ಆದರೆ ತಮ್ಮದೇ ಸಂಸಾರದಲ್ಲಿ ಅವರು ಒಂದು ಮನಸ್ತಾಪವನ್ನು ಅನುಭವಿಸುತ್ತಿದ್ದಾರೆ. ಇದರ ಸುಳಿವು ಈ ನಾಲ್ಕನೆಯ ನುಡಿಯಲ್ಲಿದೆ.

ಪಂಥ ಎಂದರೆ ಜಿದ್ದು , ಹಟ. ಪಾಂಥ ಎಂದರೆ ದಾರಿಕಾರ, ಪ್ರಯಾಣಿಕ.  ಯಾವ ಕಾರಣಕ್ಕಾಗಿ ಬೇಂದ್ರೆ ದಂಪತಿಗಳಲ್ಲಿ ವಿರಸ ಹುಟ್ಟಿತು ಎನ್ನುವದನ್ನು ಬೇಂದ್ರೆಯವರು ತಿಳಿಸಿಲ್ಲ. ಒಟ್ಟಿನಲ್ಲಿ ಹಟಮಾರಿತನ, ಸಿಟ್ಟು, ಸೆಡವು ಇವೆಲ್ಲ ಭಾವನೆಗಳು ಇಬ್ಬರಲ್ಲೂ ಬಂದು ಹೋಗಿವೆ. ಇಬ್ಬರಿಗೂ ದುಃಖವಾಗಿದೆ ಎನ್ನುವದು ‘ಅತ್ತು ಕರೆದು’ ಎನ್ನುವದರ ಮೂಲಕ ಸ್ಪಷ್ಟವಾಗಿದೆ. ಇಂತಹ ಸಂದರãವು ಬೇರೆ ಯಾವ ದಂಪತಿಗಳಿಗೂ ಬಂದಿರಲಿಕ್ಕಿಲ್ಲ ಹಾಗು ಬರದಿರಲಿ ಎಂದು ಬೇಂದ್ರೆಯವರು ಹಾರೈಸುತ್ತಾರೆ. ಆದರೆ ಗಂಗೆ-ಯಮುನೆಗಳ ಸಂಗಮದ ತಟದಲ್ಲಿ ಇವರೀರéರೂ ಆ ಅಸುಖೀ ಭಾವನೆಯಿಂದ ಈಗ ಹೊರಬಂದಿದ್ದಾರೆ. ವಿಶ್ವಪ್ರಣಯದ ಬೆಳದಿಂಗಳಿನಲ್ಲಿ ಮಿಂದು, ಮತ್ತೆ ಸರಸ, ಸಮಾಧಾನದ ಭಾವಕ್ಕೆ ಮರಳಿದ್ದಾರೆ. ಈ ಭಾವನೆಯು ಅವರ ಮುಂದಿನ (ಕೊನೆಯ) ನುಡಿಯಲ್ಲಿ ವ್ಯಕ್ತವಾಗುತ್ತಿದೆ :
                        ನಾನು ನೀನು ಜೊತೆಗೆಬಂದು
                        ಈ ನದಿಗಳ ತಡಿಗೆ ನಿಂದು
                        ಸಾನುರಾಗದಿಂದ ಇಂದು
                                  ದೀಪ ತೇಲಿಬಿಟ್ಟೆವೇ—
                                  ದೀಪ ತೇಲಿ ಬಿಟ್ಟೆವು.

ಸಾನುರಾಗದಿಂದ ಎಂದು ಹೇಳುವಾಗ ಅವರೀರéರಲ್ಲಿ ಮತ್ತೆ ಅನುರಾಗ ಭಾವ ಬಂದಿರುವದನ್ನು ಬೇಂದ್ರೆಯವರು ಸ್ಪಷ್ಟ ಪಡಿಸುತ್ತಾರೆ. ದೀಪ ತೇಲಿ ಬಿಡುವ ವಿಧಿಯನ್ನು ಜೊತೆಯಾಗಿ ಮಾಡುವದರ ಮೂಲಕ ದಾಂಪತ್ಯ ಜೀವನದಲ್ಲಿ ಗಂಡ-ಹೆಂಡಿರ ಸಾಮರಸ್ಯವನ್ನು ಸೂಚಿಸುತ್ತಾರೆ. ಅಲ್ಲದೆ, ಈ ದೀಪವು ಬಾಳಿಗೆ ಬೆಳಕು ನೀಡುವ ದೀಪವೂ ಹೌದು ಎಂದು ಸೂಚಿಸುತ್ತಾರೆ.
……………………………………………………………….
ಟಿಪ್ಪಣಿ (೧):
ಬೇಂದ್ರೆಯವರ ಕವನಗಳಲ್ಲಿ ಪದಗಳ ಶ್ಲೇಷೆಯನ್ನು ಕಾಣುವದು ಅತಿ ಸಹಜ. ಉದಾಹರಣೆಗೆ ‘ಸಾವಿರದ ಮನೆಯಲೊಂದು ಮನೆಯ ಮಾಡಿದೆ’ ಎಂದು ಹೇಳುವಾಗ ‘ಸಾವಿರದ’ ಪದಕ್ಕೆ ‘ಅನೇಕ’ ಎನ್ನುವ ಅರÜ ಇರುವಂತೆಯೇ ‘ಸಾವು+ಇರದ’ ಎನ್ನುವ ಅರÜವೂ ಇದೆ. ಕೆಲವೊಮ್ಮೆ ವಿರುದ್ಧಾರÜದ ಶ್ಲೇಷೆಯನ್ನೂ ಅವರು ಮಾಡುತ್ತಾರೆ. ಉದಾಹರಣೆಗೆ, ಈ ಸಾಲು ನೋಡಿರಿ: ‘ಅಮೃತಂತ ಬಾಯಿ ಚಪ್ಪರಿಸತಾವ, ಕೇಳಿ ಕಣ್ಣು ಮಿಟಕತದ ರಾತ್ರಿ.’
ನಲ್ಲ, ನಲ್ಲೆಯರು ಮುತ್ತು ಕೊಟ್ಟುಕೊಳ್ಳುವಾಗ ‘ಇದು ಅಮೃತ’ ಎನ್ನುತ್ತ ಬಾಯಿ ಚಪ್ಪರಿಸುತ್ತಾರೆ. ಇದನ್ನು ಕೇಳಿದ ರಾತ್ರಿಯು ಕಣ್ಣು ಹೊಡೆಯುತ್ತದೆ ಎನ್ನುವದು ಒಂದು ಅರÜ. ಮತ್ತೊಂದು ಅರÜ ಹೀಗಿದೆ: ಇದು ಅಮೃತ ಎಂದರೆ ನಿರಂತರ ಎಂದು ಪ್ರಣಯಿಗಳು ಭಾವಿಸುತ್ತಾರೆ. ಆದರೆ ಇದರ ಅವಧಿ ಅತ್ಯಲ್ಪ ಅರ್ಥಾತ್ ಕಣ್ಣು ಮಿಟುಕಿಸುವ ಸಮಯದಷ್ಟು ಮಾತ್ರ.

‘ದೀಪ’ ಕವನದಲ್ಲಿ ಮೊದಲಿನ ಎರಡೂ ನುಡಿಗಳೇ ಶ್ಲೇಷೆಯಿಂದ ಕೂಡಿರುವದು ಈ ಕವನದ ಒಂದು ಹೆಚ್ಚುಗಾರಿಕೆ. ಈ ನುಡಿಗಳು ವಿಶ್ವಪ್ರಣಯವನ್ನು ಹಾಗು ನಾಯಕ, ನಾಯಕಿಯರನ್ನು ವರಿÚಸುವದರ ಜೊತೆಗೇ ಕಾಲಸೂಚನೆಯನ್ನೂ ಮಾಡುವದು ಬೇಂದ್ರೆಯವರ ಶ್ಲೇಷಪ್ರತಿಭೆಯ ನಿದರêನವಾಗಿದೆ.
…………………………………………………………………………….
ಅಕ್ಟೋಬರ ೨೬ ಬೇಂದ್ರೆಯವರ ಪುಣ್ಯತಿಥಿ. ೧೯೮೧ ಅಕ್ಟೋಬರ ೨೬ರಂದು ಬೇಂದ್ರೆಯವರು ಮುಂಬಯಿಯಲ್ಲಿ ನಿಧನರಾದರು. ಅಂದು ನರಕಚತುರÝಶಿಯ ದಿನವಾಗಿತ್ತು. ಅವರು ಕಾಲವಶರಾಗಿ ಇಂದಿಗೆ ಎರಡು ದಶಕಗಳು ಸಂದವು.
……………………………………………………………
ಟಿಪ್ಪಣಿ (೨):
ಇದು ಬ್ಲಾಗಿಗರೆಲ್ಲ ಖುಶಿ ಪಡುವ ಹಾಗು ಹೆಮ್ಮೆ ಪಟ್ಟುಕೊಳ್ಳುವ ತಿಂಗಳಾಗಿದೆ. ಮೂರು ಜನ ಬ್ಲಾಗಿಗರು ಸಾಹಿತ್ಯಸಮ್ಮಾನವನ್ನು ಪಡೆದದ್ದನ್ನು ಈ ತಿಂಗಳಿನಲ್ಲಿ ಕೇಳುತ್ತಿದ್ದೇವೆ. ಮೊದಲನೆಯವರು ‘ಛಾಯಾಕನ್ನಡಿ’ಯ ಶಿವು. ಇವರಿಗೆ ಬೇಂದ್ರೆ ಸ್ಮಾರಕ ಟ್ರಸ್ಟಿನ ಪ್ರಶಸ್ತಿಯು ಲಲಿತ ಪ್ರಬಂಧಗಳ ವಿಭಾಗದಲ್ಲಿ ದೊರಕಿದೆ. ಎರಡನೆಯವರು ‘ಮೌನಗಾಳದ’ ಸುಶ್ರುತ ದೊಡ್ಡೇರಿ. ಇವರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಶಸ್ತಿ ದೊರೆತಿದೆ. ಮೂರನೆಯವರು ‘ಕಂಡೆ ನಾನೊಂದು ಕನಸು’ ಎನ್ನುವ ಸುಷ್ಮಾಸಿಂಧು. ಇವರ ಕತೆಗೆ ಕಾರವಾರದ ‘ಹಣತೆ’ ಸಂಘಟನೆಯ ಪ್ರಥಮ ಬಹುಮಾನ ದೊರೆತಿದೆ. ಕಳೆದ ತಿಂಗಳಿನಲ್ಲಿ ಕನ್ನಡದ ಖ್ಯಾತ ವಿಮರêಕ ರಹಮತ್ ತರೀಕೆರೆಯವರು ಭಾಷಣ ಮಾಡುತ್ತ ಬ್ಲಾಗ್ ಸಾಹಿತ್ಯದ ಬಗೆಗೆ ಲಘುವಾಗಿ ಮಾತನಾಡಿದ್ದರು. ನಮ್ಮ ಬ್ಲಾಗಿಗರು ಅವರಿಗೆ ಸತ್ಯವನ್ನು ತೋರಿಸಿದ್ದಾರೆ.
ಮೂವರಿಗೂ ಶುಭಾಶಯಗಳು.

65 comments:

  1. ತು೦ಬಾ ಚೆನ್ನಾದ ವಿಶ್ಲೇಷಣೆ. "ಕ೦ತು" ಎ೦ಬ ಪದಕ್ಕೆ ತುಳುಭಾಷೆಯಲ್ಲೂ "ಮುಳುಗುವುದು" ಎ೦ಬ ಸಮಾನಾ೦ತರ ಅರ್ಥವಿದೆ. ಕನ್ನಡದಲ್ಲಿ ಅದರ ಬಲಕ್ಕೆ ಇದ್ದದ್ದು ಗೊತ್ತಿರಲಿಲ್ಲ. ಹೌದು, ಅವರ ಕಾವ್ಯ ಹಲವು ಹೊಳಹು ಗಳನ್ನು ಹೊಮ್ಮಿಸುವಲ್ಲಿ ಶಕ್ತ. ಪ್ರಶಸ್ತಿ ವಿಜೇತರಿಗೆ ನಿಮ್ಮ ಮೂಲಕ ಮತ್ತೊಮ್ಮೆ ಅಭಿನ೦ದನೆ ಸಲ್ಲಿಸುವೆ

    ReplyDelete
  2. "ಬಳಕೆ " ತಪ್ಪಾಗಿ ಟೈಪಿಸಿದ್ದೆ , ಅದನ್ನು ಈ ಮುಉಲಕ ತಿದ್ದುಪಡಿ ಮಾಡಿದ್ದೇನೆ.

    ReplyDelete
  3. ಕಾಕಾ,
    ಸುಂದರವಾದ ಕವನ ಮತ್ತು ಸುಂದರವಾದ ವಿವರಣೆ.
    ಧನ್ಯವಾದಗಳು.

    ReplyDelete
  4. ಸುನಾಥ್ ಸರ್... ಬೇಂದ್ರೆಯವರ ಸುಂದರ ಕವಿತೆಯೊಂದಿಗೆ ತುಂಬಾ ಮಾಹಿತಿಯನ್ನು ನೀಡಿದ್ದೀರಿ... ಧನ್ಯವಾದಗಳು...

    ReplyDelete
  5. ಪರಾಂಜಪೆಯವರೆ,
    ತುಳು ಹಾಗು ಕನ್ನಡದಲ್ಲಿ ಅನೇಕ ಸಮಾನ ಪದಗಳಿವೆ. ಉದಾಹರಣೆಗೆ ತುಳುವಿನಲ್ಲಿ ಊಟಕ್ಕೆ ‘ವಣಸ್’ ಎನ್ನುವ ಪದವಿದೆಯಲ್ಲವೆ? ಕನ್ನಡದಲ್ಲಿ ಅಡುಗೆ ಮಾಡುವವನಿಗೆ ಬಾಣಸಿಗ(=ವಾಣಸಿಗ) ಎನ್ನುತ್ತಿದ್ದರು. ತುಳುವಿನಲ್ಲಿ ಮನೆಗೆ ‘ಇಲ್’ ಎನ್ನುತ್ತಾರೆ. ಕನ್ನಡದ ‘ಬಾಗಿಲು’ ಪದವು
    ‘ವಾಯ್+ಇಲ್’(=ವಾಯಿಲ್=ಬಾಯಿಲ್=ಬಾಕಿಲು) ಪದದಿಂದ ಬಂದಿದೆ. ಇದರ ಅರ್ಥ ಮನೆಯ ಬಾಯಿ.

    ReplyDelete
  6. ಮಧು,
    ನಿಮಗೂ ಧನ್ಯವಾದಗಳು. ನಿಮ್ಮಿಂದ ಇತ್ತೀಚೆಗೆ ಬರಹಗಳು ಬಂದಿಲ್ಲ. ಪ್ರತೀಕ್ಷೆ ಮಾಡುತ್ತಿರುತ್ತೇನೆ.

    ReplyDelete
  7. ಪ್ರಗತಿ,
    ಬೇಂದ್ರೆಯವರ ಕವನಗಳೇ ಸೊಗಸಾಗಿರುತ್ತವೆ. ವಿವರಣೆಯಲ್ಲಿ ಅದನ್ನೇ ಹೇಳುತ್ತೇವೆ, ಅಲ್ಲವೆ?

    ReplyDelete
  8. ವಿಷ್ಲೇಶಣೆ ತುಂಬಾ ಚೆನ್ನಾಗಿದೆ.ಬೇಂದ್ರೆಯವರ ಬಹುತೇಕ ಕವನಗಳಲ್ಲಿ ದಾರ್ಶನಿಕ ಒಳನೋಟ ಕವನದ ಅಂತರಂಗವೇ ಆಗಿದ್ದು,ವಾಚ್ಯಾರ್ಥವನ್ನು ವಿಸ್ತರಿಸುತ್ತ ಬೆಳೆಯತ್ತದೆ.ಕುತೂಹಲದ ಸಂಗತಿಯೆಂದರೆ ಅವರು ಜೀವನದ ಅನುಭವಗಳನ್ನು ಕವನವಾಗಿಸಿದಾಗ ಹೊಮ್ಮುವ ಈ ದರ್ಶನ,ಅವರು ದಾರ್ಶನಿಕ ಉದ್ದೇಶದಿಂದ ಬರೆದ ಕವನಗಳಲ್ಲಿ ಹೊಮ್ಮುವುದಿಲ್ಲ ಎಂಬುದು.(ಕೆಲವು ಕವನಗಳನ್ನು ಉದಾಹರಿಸುವ ಉದ್ದೇಶದಿಂದ ಅವರ ಕವನ ಸಂಗ್ರಹ ಹುಡುಕಿದೆ.ನನ್ನ ಪುಸ್ತಕ ಸಂಗ್ರಹದ ಯಾವ ಮೂಲೆಯಲ್ಲಿ ಕೂತೆದೆಯೊ ತಿಳಿಯುತ್ತಿಲ್ಲ.)

    ReplyDelete
  9. ವಿಷ್ಲೇಶಣೆ ಅಲ್ಲ,ವಿಶ್ಲೇಷಣೆ ಎಂದಾಗಬೇಕು. ತಿದ್ದಿಕೊಂಡು ಓದಿ.ತಪ್ಪು ಪದಪ್ರಯೋಗಕ್ಕೆ ವಿಷಾದಿಸುತ್ತೇನೆ.

    ReplyDelete
  10. ದೀಪ ಕವನದ ಆ೦ತರ್ಯವನ್ನ ಅರ್ಥವತ್ತಾಗಿ ವಿಸ್ತರಿಸಿದ್ದಿರಾ...
    ಬೇಂದ್ರೆ ಕವನಗಳು ಒಂದು ಅನೂಹ್ಯ ಲೋಕವನ್ನೇ ತೆರೆಯುತ್ತವೆ.

    ReplyDelete
  11. ಬೇ೦ದ್ರೆಯವರ ಸು೦ದರ ಕವನವನ್ನು ಸಕಾಲಿಕವಾಗಿ ನೆನಪಿಸಿದ್ದಕ್ಕೆ ಅಭಿನ೦ದನೆಗಳು.

    ReplyDelete
  12. ಗುರುಪ್ರಸಾದರೆ,
    ಧನ್ಯವಾದಗಳು. ನಿಮ್ಮ ಕಾದಂಬರಿ ‘ಬಿಳಿಯ ಚಾದರ’ ನನಗೆ ತುಂಬ ಇಷ್ಟವಾದ ಕಾದಂಬರಿ. ನಿಮ್ಮ ಲಿಂಕ್ ಮೂಲಕ ಇವತ್ತು ನಿಮ್ಮ ಬ್ಲಾ‍^ಗ್ ನೋಡಿದೆ. ನಿಮ್ಮ ಲೇಖನದಲ್ಲಿಯ ವಿಶ್ಲೇಷಣೆ ಸೊಗಸಾಗಿದೆ.

    ReplyDelete
  13. ಹೊಸಮನೆಯವರೆ,
    ನಿಮ್ಮ ಅಭಿಪ್ರಾಯಕ್ಕೆ ನನ್ನದೂ ಸಮ್ಮತಿ ಇದೆ. ಮಧುರಚೆನ್ನರ ಕವನಗಳಲ್ಲಿ ಬರುವ ಅನುಭಾವದ ಗಾಢತೆ ಅಥವಾ ಶರೀಫರ ಹಾಡುಗಳ ಸಹಜ ತಾತ್ವಿಕತೆಯು ಬೇಂದ್ರೆಯವರ ದಾರ್ಶನಿಕ ಕವನಗಳಲ್ಲಿ ಕಾಣುವದಿಲ್ಲ.

    ReplyDelete
  14. ಸೀತಾರಾಮರೆ,
    ಬೇಂದ್ರೆ ಕವನಗಳು ನಮ್ಮನ್ನು ಬೇರೊಂದು ಲೋಕಕ್ಕೇ ಕರೆದೊಯ್ಯುವವು. ಅವರ ‘ದೀಪ’ ಕವನವು ನಮ್ಮ ಮನಸ್ಸಿನಲ್ಲಿಯೇ ದೀಪವನ್ನು ಹಚ್ಚುತ್ತದೆ ಎನ್ನಬಹುದು.

    ReplyDelete
  15. ಕುಸು ಮುಳಿಯಾಲರೆ,
    ಬೇಂದ್ರೆ ಸ್ಮರಣೆಗಾಗಿ ಈ ಕವನವನ್ನು ಆರಿಸಿಕೊಂಡೆ. ಪಾಲ್ಗೊಂಡದ್ದಕ್ಕಾಗಿ ಧನ್ಯವಾದಗಳು.

    ReplyDelete
  16. ವಸಂತ,
    ನಿಮಗೆ ಧನ್ಯವಾದಗಳು.

    ReplyDelete
  17. 1. ಕವಿ ಬೇ೦ದ್ರೆಯವರ ಪ್ರತಿಭೆಯ ವೈವಿಧ್ಯತೆಯ ಪರಿಚಯ ನಿಮ್ಮ ಲೇಖನಿಯಿ೦ದ ನಮಗೆ ಲಭ್ಯವಾಗುತ್ತಿದೆ..ಸುನಾತ್ ಸರ್. ಕ೦ತುಪಿತ ಅನ್ನುವ ಪದ ದಾಸರ ಕೀರ್ತನೆಗಳಲ್ಲಿ ಬಹಳ ಕಡೆ ಉಪಯೋಗಿಸಿದ್ದಾರೆ. ಮನ್ಮಥ ಪಿತ ಕೃಷ್ಣನ ಕುರಿತೇ ಹೇಳಿರುವ೦ತಹ ಕೀರ್ತನೆಗಳವು.‘ಕಿರಿಬೆರಳಲಿ ಬೆಳ್ಳಿಹರಳು’- ಇವೆಲ್ಲ ಉಪಮೆಗಳನ್ನು ಗಮನಿಸಿದಲ್ಲಿ ವರಕವಿ ಕಾಳಿದಾಸನ ಕೃತಿಗಳ ನೆನಪಾಗುತ್ತದೆಯಲ್ಲವೆ?
    ೨. ಸಾಹಿತ್ಯ ಸನ್ಮಾನ ಪಡೆದ ಬ್ಲಾಗಿಗರಿಗೆ ಧನ್ಯವಾದಗಳು.

    ಅನ೦ತ್

    ReplyDelete
  18. ಚಂದದ ಹೂವನ್ನು ಹೊಗಳಬೇಕೋ, ಹೂವು ಏಕೆ ಚಂದ ಎಂದು ಅದಕ್ಕಿಂತ ಚಂದವಾಗಿ ವಿವರಿಸಿದವನನ್ನು ಹೊಗಳಬೇಕೋ ಗೊತ್ತಾಗುತ್ತಿಲ್ಲ. ನಿಮ್ಮಂತಹ ಬೇಂದ್ರೆ ಅಭಿಮಾನಿಯನ್ನು ಪಡೆದ ಬೇಂದ್ರೆ ಧನ್ಯ!

    ReplyDelete
  19. ಅನಂತರಾಜರೆ,
    ದಾಸರ ಕೀರ್ತನೆಯಲ್ಲಿ ಬರುವ ‘ಕಂತುಪಿತನ ದಿವ್ಯನಾಮ ಮಂತ್ರವನ್ನು ಜಪಿಸುವವಗೆ’ ನೆನಪಾಯಿತು. ಕಂತುಪಿತನು ಬ್ಲಾಗಿಗರನ್ನೆಲ್ಲ ಹರಸಲಿ!
    ಬೇಂದ್ರೆಯವರ ಉಪಮೆಗಳು ಕಾಳಿದಾಸನನ್ನು ನೆನಪಿಸುತ್ತವೆ ಎನ್ನುವದು ನಿಜ.

    ReplyDelete
  20. ಕೇಶವ,
    ಹೂವು ನಿಸರ್ಗದ ಅಪ್ರತಿಮ ಸೃಷ್ಟಿ; ಮೊದಲ ಸಮ್ಮಾನ ಹೂವಿಗೆ. ಹೂವಿನ ಬಗೆಗೆ ಚೆಲುವಾದ ಕವಿತೆ ಬರೆಯುವ ಕವಿಗೆ ಎರಡನೆಯ ಸಮ್ಮಾನ. ವಿಮರ್ಶಕನು ಹೂವನ್ನೂ ಸೃಷ್ಟಿಸುವದಿಲ್ಲ,ಕವನವನ್ನೂ ಸೃಷ್ಟಿಸುವದಿಲ್ಲ! ಆತನದು ಮೂರನೆಯ ದರ್ಜೆ!
    ನಿಮ್ಮ ಒಲವಿಗೆ ಧನ್ಯವಾದಗಳು.

    ReplyDelete
  21. ಕಾಕಾ, ನನ್ ಫ್ರೆಂಡು ಷರೀಫರ ’ಅಗ್ಗದ ಅರಿವಿ ತಂದು’ ಹಾಡಿನ ತಾತ್ಪರ್ಯ ಕೇಳ್ತಿದ್ದ.. ಯಾವಾಗಾದ್ರೂ ಬರ್ಕೊಡಿ ಪ್ಲೀಸ್.. ನಿಮ್ಮನ್ನಲ್ದೇ ಮತ್ತಿನ್ಯಾರನ್ ಕೇಳ್ಲಿ ನಾನಾದ್ರೂ..

    ReplyDelete
  22. ಕಾಕಾ...
    ಬೇಂದ್ರೆಯವರ ಮತ್ತೊಂದು ಕವನದ ಸುಂದರ ವಿವರಣೆ ಮತ್ತು ಪರಿಚಯ. ಬೇಂದ್ರೆಯವರ ಸಾಹಿತ್ಯ ಪರಿಚಯ ಮಾಡಿಸುತ್ತಿರುವ ನಿಮಗೆ ನನ್ನ ಪ್ರೀತಿ ಪೂರ್ವಕ ನಮಸ್ಕಾರಗಳು ಮತ್ತು ಧನ್ಯವಾದಗಳೂ ಕೂಡ.

    ಶ್ಯಾಮಲ

    ReplyDelete
  23. ಬೇ೦ದ್ರೆಯವರ ರಮ್ಯ ಕವನ.. ಅದಕ್ಕೆ ತಕ್ಕ೦ತೆ ವಿವರಣೆ.
    ಧನ್ಯವಾದಗಳು ಕಾಕಾ.

    ReplyDelete
  24. ಸುಶ್ರುತ,
    ತಥಾಸ್ತು!

    ReplyDelete
  25. ಶ್ಯಾಮಲಾ,
    ಪ್ರೀತಿಯಿಂದ ಓದುತ್ತಿರುವ ನಿಮಗೂ ಧನ್ಯವಾದಗಳು!

    ReplyDelete
  26. ಮನಮುಕ್ತಾ,
    ರಮ್ಯವಾದ ಕವನದ ವಿವರಣೆಯಲ್ಲಿ ರಮ್ಯತೆ ಬಂದೇ ಬರುತ್ತದೆ!
    ಧನ್ಯವಾದಗಳು.

    ReplyDelete
  27. ಕಾಕ..
    ಬೇ೦ದ್ರೆ ಯವರ ಕವಿತೆಯನ್ನು ಎಷ್ಟೊ೦ದು ಚನ್ನಾಗಿ ಅರ್ಥೈಸಿದ್ದೀರಿ.. ಹೀಗೆ ವಿಸ್ತರಿಸಿ ಹೇಳುತ್ತಿದ್ದರೆ ಕವಿತೆಯ ರುಚಿ ಇನ್ನಷ್ಟು ಹೆಚ್ಚಾಗುತ್ತಾ ಹೋಗುತ್ತದೆ.

    ವ೦ದನೆಗಳು.

    ReplyDelete
  28. ವಿಜಯಶ್ರೀ,
    ಬೇಂದ್ರೆಯವರ ಕವನಗಳನ್ನು ತಿಳಿದುಕೊಂಡಷ್ಟೂ, ಅವು ಹಿಗ್ಗುತ್ತಲೇ ಹೋಗುತ್ತವೆ. ಆದುದರಿಂದಲೇ ಅವರಿಗೆ ಓದುಗರನ್ನು, ವಿಮರ್ಶಕರನ್ನು ಬೆಳೆಯಿಸುವ ಕವಿ ಎಂದು ಹೇಳುತ್ತಾರೆ.

    ReplyDelete
  29. ಕಾಕಾ ಮೊದಲಿಗೆ ನಿಮಗೆಅಭಿನಂದನೆಗಳು--ಇಷ್ಟು ಸುಂದರವಾಗಿ ಕವಿತ ತಿಳಸಿಕೊಟ್ಟಿದ್ದಕ್ಕೆ. ಪ್ರಸ್ತುತ ಕವಿತೆ
    "ಶೃಂಗಾರಮಾಸ" ಸಿನೆಮದಲಿತ್ತು. ವಾಣಿಜಯರಾಂ ಈ ಹಾಡು ಹಾಡಿದ್ದರು. ನನಗೆ "ಅಂತು ನಕ್ಕ ಚಂದ್ರಹಾಸ.."ದಂತೆ ಕೇಳಿತ್ತು.ಈಗ ನಿಮ್ಮ ಲೇಖನದಿಂದ ಅದುತಿಳಿಯಾಗಿದೆ. ಸುಂದರಕವಿತೆ ಅದಕ್ಕೂ
    ಮಿಗಿಲಾದ ನಿಮ್ಮ ವರ್ಣನೆ.

    ReplyDelete
  30. ಕಾಕಾ,

    ಅದ್ಭುತ ಕವನ. ಬೇಂದ್ರೆಯವರಿಂದ ಮಾತ್ರ ಇಂತಹ ಶ್ಲೇಷ ಕವನವನ್ನು ರಚಿಸಲು ಸಾಧ್ಯ! ಈ ಕವನವನ್ನು ತುಂಬಾ ಸಮರ್ಥವಾಗಿ, ಚೆನ್ನಾಗಿ ವಿವರಿಸಿದ್ದೀರಿ. ಧನ್ಯವಾದಗಳು.

    ನಿಜ, ಯಾವುದೇ ರೀತಿಯ ಬರಹವೂ ಕಿಳಲ್ಲ. ಜ್ಞಾನ ಎಲ್ಲೇ ಇರಲಿ ಅದು ನಮ್ಮೆಡೆ ಹರಿದು ಬರಲಿ (ಆನೋ ಭದಾಃ ಕೃತವೋ ಯಂತು ವಿಶ್ವತಃ) ಎನ್ನುವ ಸಂಸ್ಕಾರ, ಸಂಸ್ಕೃತಿ ನಮ್ಮದಾಗಬೇಕು. ನನ್ನ ಕಡೆಯಿಂದಲೂ ಈ ಮೂವರಿಗೆ ಹಾರ್ದಿಕ ಶುಭಾಶಯಗಳು.

    ReplyDelete
  31. ಸುನಾತ್ ಸರ್ ನಿಮ್ಮ ಜ್ಞಾನಕ್ಕೆ ನಮನಗಳು. ವರಕವಿ ದ.ರಾ .ಬೇಂದ್ರೆ ಬಗ್ಗೆ ಅವರ ಸಾಹಿತ್ಯ ಸಾಧನೆಯ ಮಂಥನ ಬಗ್ಗೆ ಅದ್ಭುತವಾಗಿ ಬ್ಲಾಗಿಗರಿಗೆ ಮಾಹಿತಿ ನೀಡಿದ್ದೀರಿ.ಧಾರವಾಡ ಪೇಡ ರುಚಿ ಅಂದ್ರೆ ಇದು ನೋಡ್ರೀ ಯಪ್ಪಾ.

    ReplyDelete
  32. ದೇಸಾಯರ,
    ಈ ಹಾಡು ನಾ ಕೇಳೇ ಇಲ್ಲ. ಇನ್ನ ಹುಡುಕಿ ಕೇಳತೇನಿ. ಧನ್ಯವಾದಗಳು.

    ReplyDelete
  33. ತೇಜಸ್ವಿನಿ,
    ಬೇಂದ್ರೆಯವರ ಅದ್ಭುತ ಶ್ಲೇಷೆಯ ಮತ್ತೊಂದು ಕವನವಿದ.
    ಕಾವ್ಯರಸಿಕನೊಬ್ಬ ‘ಸಂಸಾರ’ದ ಬಗೆಗೆ ಹೇಳುವ ಮಾತು ಹೀಗಿದೆ:
    "ಏನೈತಿ ಸುಗ್ಗಿಯಾ ಹುರುಡ/ಯಾಕ ಉಳಿದೆಲ್ಲ ತಿಂಗಳಾ ಬರಡ/ ಬೇಕ್ಯಾಕ ಮಾವಿನ ಕಾಡು/ ಕೋಗಿಲದ ಹಾಡು/ಅಗಲಿಕೀ ಕೇಕು/
    ನಿನ ತೆಕ್ಕಿಯೊಳಗ ಸಿಕ್ಕೈತಿ ಸುಗ್ಗಿ/ಸ್ವರ್ಗಕ್ಕ ಸಾಕು ತೋಳೆರಡs/ಏನೈತಿ ಸುಗ್ಗಿಯಾ ಹುರುಡ?"
    ಈ ನುಡಿಯು ರಸಿಕನ ಪ್ರೇಮವನ್ನು ತೋರಿಸುವದರ ಜೊತೆಗೇ
    ಮಾರ್ಗ ಕಾವ್ಯವು ಬೇಕಾಗಿಲ್ಲ;ದೇಸಿ ಕಾವ್ಯವೇ ಸುಖಮಯ ಎಂದೂ ಬಣ್ಣಿಸುತ್ತದೆ. ಇಂತಹ ಶ್ಲೇಷಸಾಮರ್ಥ್ಯ ವರಕವಿಗೆ ಮಾತ್ರ ಸಾಧ್ಯ!

    ReplyDelete
  34. ಬಾಲು,
    ಬೇಂದ್ರೆಕವನ ಅಂದರ ಧಾರವಾಡ ಫೇಡೇ. ಒಮ್ಮೆ ರುಚಿ ಹತ್ತಿದರ, ಬಿಡಲಿಕ್ಕೆ ಆಗೂದಿಲ್ಲ!

    ReplyDelete
  35. ಕಾಕ, ಬೇಂದ್ರೆ ಅಜ್ಜನ ಕವನವನ್ನು ಸವಿಸ್ತಾರವಾಗಿ ನಮ್ಮಗೆಲ್ಲರಿಗೂ ಅರ್ಥವಾಗುವ ರೀತಿ ಹೇಳಿದ್ದೀರಲ್ಲ ಬಹಳಷ್ಟು ಮಾಹಿತಿ ಹಾಗೂ ತಿಳಿದುಕೊಂಡ ಖುಷಿ ನೀಡಿದೆ. ನಿಮ್ಮ ಲೇಖನವೇ ಹಾಗೇ ನೋಡಿ ಒಂದು ತರಹದ ಹೊಸತನ್ನು ನೀಡುತ್ತೆ. ತುಂಬಾ ಧನ್ಯವಾದಗಳು....
    ಕಾಕ ನಿಮ್ಮ ಫೋಟೋ ಶಿವುರವರ ಬ್ಲಾಗ್ ನಲ್ಲಿ ನೋಡಿದ ನನ್ನವರು ಕಾಕ ಅವರ ಫೋಟೋ ಶಿವು ಬ್ಲಾಗ್ ನಲ್ಲಿ ಹಾಕಿದ್ದಾರೆ ... ನೋಡು ಎಂದಾಗಲೇ ಬಹಳ ಖುಷಿಯಾಯಿತು. ನಿಮ್ಮನ್ನ ಭೇಟಿ ಮಾಡಿದಷ್ಟೆ ಸಂತೋಷವಾಯಿತು......
    ವಂದನೆಗಳು

    ReplyDelete
  36. ಸುನಾಥರೆ, ಬಹಳ ಚೆನ್ನಾಗಿದೆ. ಹೀಗೆ ಪದ್ಯಗಳನ್ನು ಶಾಲೆಯಲ್ಲಿ ನಮಗೆ ಪಾಠಮಾಡುವರಿರಬಾರದಿತ್ತೇ ಅನ್ನಿಸುತ್ತೆ!

    ReplyDelete
  37. ಸುನಾಥ್ ಸರ್ ಬೇಂದ್ರೆಯವರ ಕವಿತೆಯ ವಿಶ್ವಪ್ರಣಯವನ್ನ ತುಂಬಾ ಸೊಗಸಾಗಿ,ಸವಿವರವಾಗಿ ಅರ್ಥೈಸಿದ್ದಿರ. ಮತ್ತು ಬೇಂದ್ರೆಯವರ ಬಗ್ಗೆ ಸಾಕಷ್ಟು ಮಾಹಿತಿ ನೀಡುತ್ತಿರುವುದಕ್ಕಾಗಿ ಧನ್ಯವಾದಗಳು.ನಿಮ್ಮಿಂದ ಇನ್ನು ಹೆಚ್ಚು ಹೆಚ್ಚು ಮಾಹಿತಿಯನ್ನುನಿರೀಕ್ಷಿಸೋಣವೇ
    ಹಾಗುಪ್ರಶಸ್ತಿ ಪಡೆದ ಬ್ಲಾಗ್ ಬಳಗದ ಸದಸ್ಯರಾದ "ಶಿವು,ಸುಶ್ರುತ ,ಸುಶ್ಮ" ರವರಿಗೆ ಅಭಿನಂದನೆಗಳು

    ReplyDelete
  38. ಸುಮಧುರವಾದ ಸಾಲುಗಳಲ್ಲವೇ ಅವು..
    ಚೆನ್ನಾಗಿದೆ.

    ReplyDelete
  39. ಮನಸು,
    ಬೇಂದ್ರೆಯವರ ಕವನಗಳನ್ನು ಓದಿದಷ್ಟೂ ಹೊಸ ಹೊಸ ಅರ್ಥಗಳು ಹೊಳೆಯುತ್ತಲೇ ಹೋಗುತ್ತವೆ. ಇದು ಬೇಂದ್ರೆ ವೈಶಿಷ್ಟ್ಯ!

    ReplyDelete
  40. ಹಂಸಾನಂದಿ,
    ಕವನಗಳನ್ನು ಅರ್ಥ ಮಾಡಿಕೊಳ್ಳಬೇಕಾದ ವಿಧಾನವನ್ನು ನಮ್ಮ ಮಾಧ್ಯಮಿಕ ಶಾಲೆಯ ಗುರುಗಳು ಕಲಿಸಿದರು. ಬಳಿಕ ಕುರ್ತಕೋಟಿಯವರ ಕೆಲವು ಲೇಖನಗಳನ್ನು ಓದಿ ಇನ್ನಿಷ್ಟು ತಿಳಿವು ಬಂತು. ಒಟ್ಟಿನಲ್ಲಿ ‘ಕೆಲವಂ ಬಲ್ಲವರಿಂದ ಕಲ್ತು....’!

    ReplyDelete
  41. ಕಲಾವತಿಯವರೆ,
    ಬೇಂದ್ರೆಯವರ ದೃಷ್ಟಿಯು ವಿಶ್ವವ್ಯಾಪಿಯಾದ ದೃಷ್ಟಿ. ಭಗವಂತನ ಲೀಲೆಯನ್ನು ಎಲ್ಲೆಡೆಯೂ ಕಾಣುವ ದೃಷ್ಟಿ. ಅವರ ಕಾವ್ಯವು ಅವರ ದೃಷ್ಟಿಯ ಪ್ರತಿಫಲನವಾಗಿದೆ.

    ReplyDelete
  42. ಬೆಳಕಿನ ಮನೆಯವರೆ,
    ಬೇಂದ್ರೆ ಕಾವ್ಯವು ಬೆಳಕು ಕೊಡುವ ಕಾವ್ಯ ಎಂದು ನನಗೆ ಅನಿಸುತ್ತದೆ!

    ReplyDelete
  43. ಸುನಾಥ್ ಕಾಕಾ,

    ಎಂದಿನಂತೆ ಆಳವಾದ ಅಧ್ಯಯನದಿಂದ ಹೊರಬಂದಂತಹ ವಿಶ್ಲೇಷಣೆ..ಸಲ್ಲಾಪಕ್ಕೆ ಬಂದಾಗಲೆಲ್ಲಾ ಖುಷಿಯಾಗುತ್ತೆ.

    ಇನ್ನು ಬೇಂದ್ರೆಯಜ್ಜನ ಬಗ್ಗೆ ಎನು ಹೇಳೋದು..
    ದೀಪವನ್ನು ಬಿಡುವ ಚಿತ್ರಣ ಕಣ್ಣಿಗೆ ಕಟ್ಟಿತು.

    ReplyDelete
  44. ಅಪ್ಪ-ಅಮ್ಮ,
    ‘ದೀಪವನ್ನು ಬಿಡುವದು ಕಣ್ಣಿಗೆ ಕಟ್ಟಿದಂತಾಗುತ್ತದೆ’ ಎನ್ನುವದು ಈ ಕವನದ ಬಗೆಗಿನ ultimate appreciation!

    ReplyDelete
  45. ಬೇಂದ್ರೆಯವರ ಬಗ್ಗೆ ನೀವು ಬರೆದಿರುವ ಲೇಖನಗಳೇ ಒಂದು ಮಾಲಿಕೆಯಾಗಿ ಹರಿದುಬರುತ್ತಿರುವುದು ಬೇಂದ್ರೆ ಪ್ರಿಯರಾದ ನಮ್ಮ ಸೌಭಾಗ್ಯ, ಬೆನ್ದ್ರೆಯೊಳಗೆ ಮೂರು ವ್ಯಕ್ತಿತ್ವಗಳನ್ನು ಅವರು ಗುರುತಿಸುತ್ತಿದ್ದರು ಎಂದು ಕೇಳಿದ್ದೇನೆ! ಒಂದು ಬೇಂದ್ರೆ, ಎರಡನೇದು ಬೇಂದ್ರೆಯ ಒಳಗಿನ ಬೇಂದ್ರೆ, ಮೂರನೇದು ಬೇಂದ್ರೆಯ ಒಳಗಿನ ವಿಮರ್ಶಕ ಬೇಂದ್ರೆ! ಹೀಗಾಗಿ ಈ ಮೂರು ಪಾತ್ರಗಳನ್ನೂ ಏಕಪಾತ್ರಾಭಿನಯವಾಗಿ ಬಿಂಬಿಸುತ್ತಾ ಕಾವ್ಯ ಬರೆಯುತ್ತಿದ್ದರಂತೆ. ಒಂದು ಕವನಕ್ಕೆ ಒಳಗಿನ ಬೇಂದ್ರೆ ಯಸ್ ಎನ್ನಬೇಕು, ಮೂರನೇ ವ್ಯಕ್ತಿ ವಿಮರ್ಶಿಸಿ ಸೈ ಎನ್ನಬೇಕು--ಹಾಗೇ ಇತ್ತಂತೆ ಅವರ ಕೃತಿ ರಚನೆ. ಅಂತಹ ದಾರ್ಶನಿಕ, ಅನುಭಾವೀ ಕವಿ ಬೇಂದ್ರೆ, ಬೇಂದ್ರೆ ಸ್ಮೃತಿ ಬರೆಯುತ್ತಿರುವುದಕ್ಕೆ ಧನ್ಯವಾದಗಳು.

    ReplyDelete
  46. ಭಟ್ಟರೆ,
    ಬೇಂದ್ರೆ ಬಲು ಸಂಕೀರ್ಣ ವ್ಯಕ್ತಿ. ಕವಿ, ಸಹೃದಯ ಹಾಗು ವಿಮರ್ಶಕರ ವ್ಯಕ್ತಿತ್ವಗಳು ಅವರಲ್ಲಿ ಮುಪ್ಪರಿಗೊಂಡಿದ್ದವು ಎನ್ನುವದು ಸತ್ಯವಾದ ಮಾತು.

    ReplyDelete
  47. ಸುನಾಥ್ ಸರ್,

    ಬೇಂದ್ರೆಯವರ ಮತ್ತೊಂದು ಕವನದ ಬಗ್ಗೆ ಸೊಗಸಾದ ವಿವರಣೆ. ಓದುತ್ತಾ ಹೋದಂತೆ ಎಷ್ಟು ವಿಚಾರಗಳು ನಮ್ಮ ಅರಿವಿಗೆ ಬರುತ್ತವೆ ಎನ್ನುವುದೇ ಕುತೂಹಲದ ವಿಚಾರ. ನಿಮ್ಮ ಪ್ರಯತ್ನವನ್ನು ನಮಗೆ ತುಂಬಾ ಖುಷಿಯಾಗುತ್ತದೆ.

    ಮತ್ತೆ ಧಾರವಾಡದಲ್ಲಿ ನಿಮ್ಮನ್ನು ಬೇಟಿಯಾಗಿದ್ದು ಮರೆಯಲಾಗದ ಅನುಭವ. ಎಲ್ಲಾ ಬ್ಲಾಗಿಗರು ಇನ್ನಷ್ಟು ಚೆನ್ನಾಗಿ ಬರೆದು ಬಹುಮಾನವನ್ನು ಗಳಿಸಲಿ ಎಂದು ಹಾರೈಸುವೆ..
    ಧನ್ಯವಾದಗಳು.

    ReplyDelete
  48. ಕಾಕಾ,
    ಬೇಂದ್ರೆಯವರ ಕವನಗಳ ಒಳ ನೋಟ ತಮ್ಮಿಂದ ಅದೆಷ್ಟು ಚೆನ್ನಾಗಿ ತಿಳಿದುಬರುತ್ತದೆ. ಬಹಳ ಸುಂದರವಾಗಿ ವಿವರಿಸಿದ್ದೀರಿ, ತಮ್ಮ ಲೇಖನಗಳೆಲ್ಲ ಸಂಗ್ರಹ ಯೋಗ್ಯ.

    ReplyDelete
  49. ಶಿವು,
    ಧಾರವಾಡದಲ್ಲಿ ನಿಮ್ಮ ಭೆಟ್ಟಿಯಾದಾಗ ನಿಮ್ಮ ಸರಳ, ಸ್ನೇಹಶೀಲ ಅಂತರಂಗವನ್ನು ಅನುಭವಿಸಿ ನನಗೇ ತುಂಬ ಖುಶಿ ಆಯ್ತು. ಕೇವಲ ಬ್ಲಾಗ್ ಮೂಲಕ ನಿಮ್ಮನ್ನು ನೋಡಿದ ನನಗೆ ವೈಯಕ್ತಿಕ ಭೆಟ್ಟಿ ತುಂಬ ತೃಪ್ತಿಯನ್ನು ಕೊಟ್ಟಿತು.

    ReplyDelete
  50. ಸಾಗರಿ,
    ನನಗೆ ಕಂಡದ್ದಷ್ಟನ್ನು ನಾನು ನಿಮ್ಮೆದುರಿಗೆ ಇಟ್ಟಿದ್ದೇನೆ. ಬೇಂದ್ರೆಕಾವ್ಯ ಎನ್ನುವ ಹಿಮಾಲಯವನ್ನು ವರ್ಣಿಸುವದು ನನ್ನ ಅಳವೆ?

    ReplyDelete
  51. ಶ್ರೀನಿವಾಸ ಮ. ಕಟ್ಟಿOctober 30, 2010 at 11:15 PM

    ಬೇಂದ್ರೆಯವರ ಕುರಿತು ಬರೆಯುವಾಗ ನೀವು ತುಂಬ ಭಾವಪೂರ್ಣವಾಗಿ ಬರೆಯುವಿರಿ. ಬಹುಶಃ, ನಿಮಗೆ ಆ ಸಮಯದಲ್ಲಿ ದೇಹ, ಮನಸ್ಸು, ಹೃದಯ, ಬುದ್ಧಿ ಒಂದರಲ್ಲಿ ಒಂದು ವಿಲೀನವಾಗಿ, ಪರಮ ಶ್ರೇಷ್ಟವಾದ ಅದ್ವೈತದ ಭಾವನೆ ಬಂದು ಬಿಡುತ್ತದೆ. ಆದ್ದರಿಂದ ಬರೆದ ಲೇಖನ ತುಂಬ ಸುಂದರವಾಗಿಯೂ, ಹೃದ್ಯವಾಗಿಯೂ ಹೊರಹೊಮ್ಮುತ್ತದೆ.

    ReplyDelete
  52. ಕಟ್ಟಿಯವರೆ,
    ಓದುಗನನ್ನು ಈ ರೀತಿಯಾಗಿ ಸೆರೆ ಹಿಡಿಯುವ ಶಕ್ತಿ
    ಬೇಂದ್ರೆ-ಕಾವ್ಯಕ್ಕಿದೆ. ನಾನೂ ಸಹ ಅವರ ಕಾವ್ಯದ ಸೆರೆಯಾಳು!

    ReplyDelete
  53. ಶ್ರೀನಿವಾಸ ಮ ಕಟ್ಟಿ, Dublin,OH,USANovember 3, 2010 at 5:27 AM

    ನೀವು ಹೇಳುವದು ನಿಜ. ನನಗೆ ಕನ್ನಡದಲ್ಲಿ ಕುಮಾರವ್ಯಾಸ ಮತ್ತು ಅಂಬಿಕತನಯದತ್ತರ ಕಾವ್ಯದಲ್ಲಿ ಮೊಗೆದಷ್ಟೂ ರಸ ಹೊರಹೊಮ್ಮುತ್ತದೆ. ಅವುಗಳ ಆಳ, ವಿಸ್ತಾರ ಶಬ್ದಾತೀತ.

    ReplyDelete
  54. ಅನಾಮಿಕಾNovember 3, 2010 at 5:32 AM

    ಈ ಬೇಂದ್ರೆ ನಮ್ಮ ಕರ್ನಾಟಕ ಬಿಟ್ಟು ಬ್ಯಾರೆ ದೇಶದಾಗ ಹುಟ್ಟಿದ್ದಂದರ ಅಂವಗ ನೊಬೆಲ್ ಅಂಥಾವು ಸಾವಿರ - ಸಾವಿರ ಪ್ರೈಜ್ ಬರತಿದ್ದು. ಮಾರಾಯ, ಛಲೋ ದೇಶದಾಗ ಹುಟ್ಟಬಾರದ ! ಎಲ್ಲಾ ಬಿಟ್ಟು ನಮ್ಮ ಇಂಡಿಯಾದಾಗ ಅದೂ ಕರ್ನಾಟಕದಾಗ್ ಹುಟ್ಟಬೇಕ ?

    ReplyDelete
  55. ಕಟ್ಟಿಯವರೆ,
    ಕುಮಾರವ್ಯಾಸನು ಮಹಾಕಾವ್ಯದ ಕವಿ. ಬೇಂದ್ರೆಯವರೂ ಸಹ ಮಹಾಕವಿಯೇ.

    ReplyDelete
  56. ಅನಾಮಿಕಾ,
    ನೋಬೆಲ್ ಸಮ್ಮಾನ ಸಿಗದೇ ಇದ್ದರೂ ಸಹ, ಬೇಂದ್ರೆಯವರು ಕನ್ನಡ ನಾಡಿನಲ್ಲಿ ಹುಟ್ಟಿದ್ದು ನಮಗೆಲ್ಲ ಒಳ್ಳೆಯದೇ ಆಯಿತು. ಅವರನ್ನು ‘ಭುವನದ ಭಾಗ್ಯ’ ಎಂದು ವಿಮರ್ಶಕ ಆಮೂರರು ಬಣ್ಣಿಸಿದ್ದಾರೆ. ಅವರ ಒಳಿತಿಗಾಗಿ ಅವರನ್ನು ನಾವು ಹೇಗೆ ಬಿಟ್ಟುಕೊಡೋಣ?

    ReplyDelete
  57. ಅನಾಮಿಕಾNovember 4, 2010 at 7:37 AM

    ಹೆಂತಾವ್ರಿ ನೀವು ? ಕನ್ನಡಕ್ಕ ಮತ್ತ ಕರ್ನಾಟಕಕ್ಕ ಛಲೊ ಆಗಲಿ ಅಂತ, ಆ ಬೇಂದ್ರೆನ್ನ ಬಡತನದ ಬೆಂಕ್ಯಾಗ ಬೇಯಿಸಿ ಬಿಟ್ರಲ್ಲ ! ಇದು ನ್ಯಾಯ್ನ, ನೀವೇ ಹೇಳ್ರಿ, ಸುನಾಥರ ?

    ReplyDelete
  58. ಶ್ರೀನಿವಾಸ ಮ.ಕಟ್ಟಿ, Dublin, Ohio, USANovember 4, 2010 at 7:39 AM

    ಸುನಾಥರಿಗೆ, ಅವರ ಪರಿವಾರದವರಿಗೆ ಮತ್ತು ‘ಸಲ್ಲಾಪ’ದ ಎಲ್ಲ ಬಳಗಕ್ಕೆ ದೀಪಾವಳಿಯ ಶುಭಾಷಯಗಳು.

    ReplyDelete
  59. ಅನಾಮಿಕಾ,
    ಬೇಂದ್ರೆಯವರಿಗೆ ಅನ್ಯಾಯ ಆತು ಅಂತ ಒಪ್ಪಿಕೋತೇನಿ. ಆದರ ಅವರು ಬಾಳಿನ ಬೆಂಕಿಯೊಳಗ ಸುಟ್ಟರು ಅಂತsನ, ಕನ್ನಡಿಗರಿಗೆ ಶ್ರೇಷ್ಠ ಕಾವ್ಯದ ಬೆಳಕು ಕಾಣಿಸಿತು, ಹೌದಲ್ಲೊ?

    ReplyDelete
  60. ಕಟ್ಟಿಯವರೆ,
    ಧನ್ಯವಾದಗಳು. ನಿಮಗೆ ಹಾಗು ನಿಮ್ಮ ಶ್ರೀಮತಿಯವರಿಗೆ ಹಾಗು ಕುಟುಂಬವರ್ಗಕ್ಕೆ ನನ್ನ ಹಾಗು ವನಮಾಲಾನ ಶುಭಾಶಯಗಳು. ದೀಪಾವಳಿಯು ನಿಮಗೆಲ್ಲರಿಗೂ ಸುಖ, ಸಂತೋಷವನ್ನು ತರಲಿ.

    ReplyDelete
  61. ವಸಂತರೆ,
    ದೀಪಾವಳಿಯ ಶುಭಾಶಯಗಳು. ಬೆಳಕಿನ ಹಬ್ಬವು ನಿಮಗೆ ಸಂಭ್ರಮವನ್ನು ತರಲಿ ಎಂದು ಹಾರೈಸುತ್ತೇನೆ.

    ReplyDelete
  62. ತಲೆವಾಗು,

    ನಿಮ್ಮ ವಿವರಣೆ ಚೆನ್ನಾಗಿದೆ...ಸವಿಯೊದಗು

    ಪಂಥದಿಂದ ಮನೆಯ ತೊರೆದು
    ಪಾಂಥ ನೆನೆದನತ್ತು ಕರೆದು :
    ಇಂಥ ಸಮಯ ಬೇರೆ ಬರದು
    ದಂಪತಿಗಳಿಗಾರಿಗು

    ಇಲ್ಲಿ ಇರುವುದು ’ಪಂಥ’ವಲ್ಲ ’ಪಂತ’ ಅನ್ಸುತ್ತೆ. ಪಂಥ ಅನ್ನುವುದಕ್ಕೆ ಯಾವುದೇ ತಿರುಳಿಲ್ಲ..ಆದರೆ ಪಂತ ಅಂದರೆ ’bet', 'challenge'. ಇದು ಕನ್ನಡದ ಬೇರಿನ ಪದವೇ.
    http://dsal.uchicago.edu/cgi-bin/philologic/getobject.pl?c.1:1:1337.burrow
    Ka. panta, pandya bet, wager

    ಇನ್ನು ಪಾಂಥ ನೀವು ಹೇಳಿರುವಂತೆ ಸರಿಯಾಗಿದೆ ಮತ್ತು ಇದು ಸಂಸ್ಕ್ರುತ ಪದ.
    pantha (p. 158) [ pântha ] m. wayfarer, traveller: -tva, n. life of a wayfarer.
    (http://dsal.uchicago.edu/cgi-bin/romadict.pl?query=pant&display=simple&table=macdonell)

    -ಹದುಳವಿರಲಿ,
    ಬರತ್

    ReplyDelete
  63. ತಲೆವಾಗು,
    ಕಂತು ಬಳಕೆಯನ್ನು ನೋಡಿ ಪುಳಕವಾಯಿತು.
    ಹಾಗೆ ನಮ್ಮ ಮಂಡ್ಯ ಕಡೆ, ಕಂತು ಅನ್ನುವುದಕ್ಕೆ ಇನ್ನೊಂದು ತಿರುಳೂ ಇದೆ.

    ಹನಿ => ಕನಿ (ಒದ್ದೆ) ..
    ೧. ಈಗ ನೆಲವನ್ನು ಅಗೆದಾಗ ಅಲ್ಲಿರುವ ಮಣ್ಣು ಒದ್ದೆಯಾಗಿದ್ದರೆ ಅದನ್ನ ’ಕಂತ್ಕಂಡದೆ’ ಅಂತ ಹೇಳ್ತಾರೆ

    +ಹದುಳವಿರಲಿ,
    ಬರತ್

    ReplyDelete
  64. ಹಾರತಿರಲಿ ಗಾಳಿಗೆ ಬಿಚ್ಚಿದ್ಹೆರಳು
    ವಾರಿಯಿರಲಿ ಕೊರಳು
    ಬಾಚತಿರಲಿ ಬೆರಳು
    ನೋಡ್ತೇನಿ ನಿನ್ನ ಕವಿನೆರಳು ||ಹೂತsದ

    Ada racane !holly

    ReplyDelete