Monday, December 16, 2019

ಮಹಾತ್ಮಾ ಗಾಂಧೀಜಿ, ನಾಥೂರಾಮ ಗೋಡಸೆ, ಸಾಧ್ವಿ ಪ್ರಜ್ಞಾಸಿಂಗ

ಮಹಾತ್ಮಾ ಗಾಂಧೀಜಿ:

ಗಾಂಧೀಜಿಯವರ ಬಾಲ್ಯದಲ್ಲಿ ಅವರ ತಂದೆ ಕರಮಚಂದ ಗಾಂಧೀಯವರ ಮನೆಯಲ್ಲಿ ವಿವಿಧ ಧರ್ಮಗಳ ಪಂಡಿತರಿಂದ ಧರ್ಮಜಿಜ್ಞಾಸೆ ನಡೆಯುತ್ತಿತ್ತುಇವರ ತಾಯಿ ಪುತಳೀಬಾಯಿಯವರೂ ಸಹ ಧಾರ್ಮಿಕ ವ್ರತಾಚರಣೆಗಳನ್ನು ಕಟ್ಟುನಿಟ್ಟಾಗಿ ಆಚರಿಸುತ್ತಿದ್ದರು. ಕೆಲವೊಂದು ದಿನಗಳಲ್ಲಿ ಚಂದ್ರನ ದರ್ಶನವಾದ ನಂತರವೇ ಊಟವನ್ನು ಮಾಡಬೇಕೆನ್ನುವ ಅವರ ನಿಯಮದಿಂದಾಗಿ, ಅವರಿಗೆ ಅನೇಕ ದಿನಗಳವರೆಗೆ ಉಪವಾಸವೇ ಗತಿಯಾಗುತ್ತಿತ್ತು. ಇದೆಲ್ಲ ಬಾಲಕ ಮೋಹನದಾಸನ ಮೇಲೆ ಗಾಢವಾದ ಪ್ರಭಾವವನ್ನು ಬೀರಿತು. ಧರ್ಮಶಾಸ್ತ್ರಗಳಲ್ಲಿ ಹೇಳಲಾದ ಸತ್ಯ, ಅಹಿಂಸೆ, ಅಸ್ತೇಯ, ಅಪರಿಗ್ರಹ, ಬ್ರಹ್ಮಚರ್ಯ ಮೊದಲಾದ ಅವರ ಸದಾಚರಣೆಗಳೆಲ್ಲ ಅವರ ಮೇಲೆ ಬಾಲ್ಯಕಾಲದಲ್ಲಾದ ಘಟನೆಗಳ ಪರಿಣಾಮಗಳೇ ಆಗಿವೆ. ಕಠೋರ ಉಪವಾಸವೂ ಸಹ ಅವರಿಗೆ ತಾಯಿಯಿಂದ ಬಂದ ಆದರ್ಶವೇ ಎನ್ನಬೇಕು. ಮನೋವಿಜ್ಞಾನಿ ಎರಿಕ್ ಎರಿಕ್ಸನ್ ಅವರು ಗಾಂಧೀಜಿಯವರ ಮನೋವಿಶ್ಲೇಷಣೆಯನ್ನು ನಿಟ್ಟಿನಿಂದ ಮಾಡಿ, ಅವರನ್ನು ರೂಪಿಸಿದ ಅನೇಕ ಮನೋವೈಜ್ಞಾನಿಕ ಸತ್ಯಗಳ ಮೇಲೆ ಬೆಳಕು ಬೀರಿದ್ದಾರೆ.

ನಿಕಟ ಕೌಟಂಬಿಕ ಪ್ರಭಾವಗಳು ಗಾಂಧೀಜಿಯವರನ್ನು ಒಬ್ಬ ಸಂತನನ್ನಾಗಿ ಮಾಡಿದರೆ, ಯುರೋಪಿಯನ್ ಚಿಂತಕರ ಗ್ರಂಥಗಳು ಅವರನ್ನು ಸಮಾಜಸುಧಾಕರನನ್ನಾಗಿ ಕಡೆದವು ಎಂದು ಹೇಳಬಹುದುಜಾ˘ನ್ ರಸ್ಕಿನ್ ಅವರ Unto This Last ಎನ್ನುವ ಗ್ರಂಥದ ಪರಿಣಾಮದಿಂದಾಗಿಯೇ ಅವರು ದಕ್ಷಿಣ ಆಫ್ರಿಕಾದಲ್ಲಿ ಫೀನಿಕ್ಸ್ ಆಶ್ರಮವನ್ನು ಸ್ಥಾಪಿಸಿದರು ಹಾಗು Indian Opinion ಎನ್ನುವ ಪತ್ರಿಕೆಯನ್ನು ಪ್ರಾರಂಭಿಸಿದರು. ಗಾಂಧೀಜಿಯವರು ದಕ್ಷಿಣ ಆಫ್ರಿಕಾದಲ್ಲಿ ಹಾಗು ಆಬಳಿಕ ಭಾರತದಲ್ಲಿ ಪ್ರಾರಂಭಿಸಿದ ಧರಣಿ ಸತ್ಯಾಗ್ರಹ, ದೀರ್ಘ ಪಾದಯಾತ್ರೆ, ಅಹಿಂಸಾತ್ಮಕ ಪ್ರತಿರೋಧ, ಉಪವಾಸ ಸತ್ಯಾಗ್ರಹ, ಅಸಹಕಾರ ಚಳುವಳಿ ಮೊದಲಾದ ಉಪಕ್ರಮಗಳು ಆನಂತರ ಇಡೀ ಜಗತ್ತಿನಲ್ಲಿ ಶೋಷಕರ ವಿರುದ್ಧದ ಚಳುವಳಿಗಳಿಗೆ ಪಥದರ್ಶಕ ಕ್ರಮಗಳಾದವು.  ಇದರಲ್ಲಿಉಪ್ಪಿನ ಸತ್ಯಾಗ್ರಹವು ಮಹತ್ವದ ಚಳುವಳಿಯಾಗಿದೆ.

ಸಾಬರಮತಿ ಆಶ್ರಮದಿಂದ ದಂಡಿಯವರೆಗಿನ ೩೧೧ ಕಿಲೋಮೀಟರುಗಳಷ್ಟು ದೂರವನ್ನು ೬೧ ವರ್ಷದ ಮುದುಕ ಕೋಲೂರುತ್ತ, ಕಾಲ್ನಡಿಗೆಯಿಂದ ಕ್ರಮಿಸಿ ಜಗತ್ಪ್ರಸಿದ್ಧಉಪ್ಪಿನ ಸತ್ಯಾಗ್ರಹವನ್ನು ಕೈಗೊಂಡರು. ಇಡೀ ಭಾರತದಾದ್ಯಂತ ಚಳುವಳಿ ದಳ್ಳುರಿಯಂತೆ ಹಬ್ಬಿತು. ಸಾವಿರಾರು ಸಂಖ್ಯೆಗಳಲ್ಲಿ ಪುರುಷ ಹಾಗು ಮಹಿಳಾ ಸತ್ಯಾಗ್ರಹಿಗಳು ಪೋಲೀಸರ ಕ್ರೌರ್ಯವನ್ನು ಎದುರಿಸಿಯೂ ಸತ್ಯಾಗ್ರಹವನ್ನು ಮುಂದುವರೆಸಿದರು.

ನಮ್ಮ ಮಂಗಳೂರಿನ ಮಹಿಳೆ (ಅನಂತಯ್ಯ ಧಾರೇಶ್ವರರ ಮಗಳಾದ) ಕಮಲಾದೇವಿ ಚಟ್ಟೋಪಾಧ್ಯಾಯರು ಮುಂಬಯಿಯಲ್ಲಿ ಚಳುವಳಿಯ ನೇತಾರರಾದರೆ, ತಮಿಳುನಾಡಿನಲ್ಲಿ ರಾಜಗೋಪಾಲಾಚಾರಿಯವರು ಚಳುವಳಿಯ ಮುಂದಾಳಾಗಿದ್ದರು. ಕಡಲತೀರಗಳಿದ್ದ ಊರುಗಳಲ್ಲಿ ಮಾತ್ರ ಚಳುವಳಿ ನಡೆಯಿತು ಎಂದಲ್ಲ. ಧಾರವಾಡದ ಸತ್ಯಾಗ್ರಹಿಗಳಾದ ಡಾ˘. ಕಬ್ಬೂರ, ಶಾಲಾ ಶಿಕ್ಷಕರಾದ ಶ್ರೀ ಕೆ.ಜಿ.ಜೋಶಿ ಹಾಗು ಶ್ರೀ ವ್ಹಿ.ಕೆ.ಹೋಳಿಕಟ್ಟಿ ಮೊದಲಾದವರು ಧಾರವಾಡದಿಂದ ಸುಮಾರು ೩೫ ಕಿಲೋಮೀಟರುಗಳಷ್ಟು ದೂರವಿರುವ ಬೆಣ್ಣಿಹಳ್ಳಕ್ಕೆ ತೆರಳಿ, ಅಲ್ಲಿಯ ಸವಳು ನೀರಿನಿಂದ ಉಪ್ಪು ತಯಾರಿಸಿ, ಪೋಲೀಸರ ದೌರ್ಜನ್ಯಕ್ಕೆ ಒಳಗಾದರು. (ಪೂಜ್ಯ ಶ್ರೀ ಜೋಶಿಯವರು ತನ್ನಂತರ ಬ್ರಿಟಿಶರು ಇಂಗ್ಲಂಡಿಗೆ ಕಳುಹಿಸಲು ಸಂಗ್ರಹಿಸಿ ಇಟ್ಟ ತೇಗಿನ ಮರಮಟ್ಟುಗಳಿಗೆ ಬೆಂಕಿ ಹಚ್ಚಿ ಅಘನಾಶಿನಿ ನದಿಯಲ್ಲಿ ತೇಲಿ ಬಿಟ್ಟು ಬ್ರಿಟಿಶರಿಗೆಅಗ್ನಿಸಂದೇಶವನ್ನು  ಕಳುಹಿಸಿದ ಸಾಹಸಿಗಳು. ಪೂಜ್ಯ ಶ್ರೀ ಜೋಶಿ ಹಾಗು ಪೂಜ್ಯ ಶ್ರೀ ಹೋಳಿಕಟ್ಟಿಯವರು ಮಾಧ್ಯಮಿಕ ಶಾಲೆಯಲ್ಲಿ ನನಗೆ ಕಲಿಸಿದ ಗುರುಗಳು!) 

ಮುಂಬಯಿಯಲ್ಲಿ ನಡೆದ ಅಹಿಂಸಾತ್ಮಕ, ಶಾಂತ ಸತ್ಯಾಗ್ರಹ ಹಾಗು ಸತ್ಯಾಗ್ರಹಿಗಳ ಮೇಲಿನ ಪೋಲೀಸರ ದೌರ್ಜನ್ಯವು ಅಮೆರಿಕದ ಪತ್ರಿಕೆಗಳಲ್ಲಿ ವರದಿಯಾದ ಬಳಿಕ ಬ್ರಿಟನ್ನಿಗೆ ರಾಜಕೀಯ ಹಿನ್ನಡೆಯಾಯಿತು. ಎಪ್ರಿಲ್ , ೧೯೩೦ರಂದು ಜರುಗಿದ ಗಾಂಧೀ-ಇರ್ವಿನ್ ಸಭೆಯಲ್ಲಿ, ಕಡಲ ತೀರದ ಜನರು, ತೆರಿಗೆರಹಿತವಾಗಿ ಉಪ್ಪನ್ನು ಉತ್ಪಾದಿಸಬಹುದು ಎನ್ನುವ ಒಪ್ಪಂದವಾಯಿತು!

ಗಾಂಧೀಜಿಯವರು ಭಾರತವರ್ಷದ ಆಧುನಿಕ ಸಂತರು. ಇವರನ್ನು ಬುದ್ಧ ಹಾಗು ಬಸವಣ್ಣನವರ ಪರಂಪರೆಯ  ಸಾಧಕರೆಂದು ಹೇಳಬಹುದು. ಏಕೆಂದರೆ ಬುದ್ಧ ಹಾಗು ಬಸವಣ್ಣನವರಂತೆ ಗಾಂಧೀಜಿಯವರು ಸಹ ತಮ್ಮ ವೈಯಕ್ತಿಕ ಆಧ್ಯಾತ್ಮಿಕ ಸಾಧನೆಯನ್ನಲ್ಲದೆ, ಭಾರತೀಯ ಸಮಾಜದ ಸರ್ವಸುಧಾರಣೆಗಾಗಿ ಹೆಣಗಾಡಿದವರು. ತಮ್ಮ ಸಂತಸದೃಶ ನಡತೆ ಹಾಗು ಪ್ರಭಾವಳಿಯಿಂದಾಗಿ, ಗಾಂಧೀಜಿಯವರು ಭಾರತೀಯರ ನೆಚ್ಚಿನ ಜನನಾಯಕರಾದರು.

ಹಾಗಿರುವಾಗ ಮಹಾತ್ಮಾ ಗಾಂಧೀಜಿಯವರು ಹತ್ಯೆಯಾಗಲು ಕಾರಣವೇನು?

ಗಾಂಧೀಜಿ ಹಾಗು ಭಾರತೀಯ ಮುಸಲ್ಮಾನರು:
ದಕ್ಷಿಣ ಆಫ್ರಿಕಾದ ಸರಕಾರವು ಭಾರತೀಯ ಧರ್ಮೋಕ್ತ ಮದುವೆಗಳಿಗೆ ಮನ್ನಣೆಯನ್ನು ಕೊಡಲಿಲ್ಲ. ಸರಕಾರಿ ರಜಿಸ್ಟ್ರೇಶನ್ ಇಲ್ಲದ ಭಾರತೀಯ ಮದುವೆಗಳನ್ನು ಬೇಕಾಯದೇಶೀರ ಕೂಡಿಕಿ ಎಂದು ಅಲ್ಲಿಯ ಸರಕಾರ ಘೋಷಿಸಿತು. ಇದು ಎಲ್ಲ ಧರ್ಮೀಯರಿಗೂ ಅನ್ವಯಿಸುತ್ತಿತ್ತು. ಇದರಿಂದಾಗಿ ಆಫ್ರಿಕಾದಲ್ಲಿದ್ದ ವಿವಿಧ ಧರ್ಮಗಳ ಹಾಗು ವಿವಿಧ ಭಾಷೆಗಳ ಭಾರತೀಯರು ಗಾಂಧೀಜಿಯವರಿಗೆ ಜೊತೆಯಾಗಿ, ಇದರ ವಿರುದ್ಧದ ಚಳುವಳಿಗಳಲ್ಲಿ ಭಾಗವಹಿಸಿದರು.

ಗಾಂಧೀಜಿ ಭಾರತಕ್ಕೆ ಬಂದ ಸಮಯದಲ್ಲಿ ಇಲ್ಲಿಯ ಪರಿಸ್ಥಿತಿ ಭಿನ್ನವಾಗಿತ್ತು.ಬ್ರಿಟಿಶರ ವಿರುದ್ಧ ಜರುಗಿದ ಇಲ್ಲಿಯ ಹೋರಾಟಗಳಲ್ಲಿ ಮುಂದಾಳುಗಳಾದ ಬಾಲಗಂಗಾಧರ ತಿಲಕ(ಮಹಾರಾಷ್ಟ್ರ), ಲಾಲಾ ಲಜಪತರಾಯ(ಪಂಜಾಬ) ಹಾಗು ಬಿಪಿನಚಂದ್ರ ಪಾಲ (ಬಂಗಾಲ) ಇವರು ಹಿಂದುಗಳಾಗಿದ್ದರು. ಇಷ್ಟರಲ್ಲಿ ಬ್ರಿಟಿಶರು ಕೆಲವು ಮುಸಲ್ಮಾನ ಗಣ್ಯರನ್ನು ಮುಸ್ಲಿಮ ಮುಂದಾಳುಗಳನ್ನಾಗಿ ಮಾಡಿ, ಮುಸ್ಲಿಮರನ್ನು ಹಿಂದುಗಳ ವಿರುದ್ಧ ಎತ್ತಿ ಕಟ್ಟುವುದರಲ್ಲಿ ಸಫಲರಾಗಿದ್ದರು. ಭಾರತೀಯ ನವೋದಯವು ಕೇವಲ ಹಿಂದೂ ನವೋದಯವೆಂದೂ, ಮುಸ್ಲಿಮರ ನವೋದಯ ಅಲ್ಲವೆಂದೂ, ಮುಸ್ಲೀಮ್ ರಾಷ್ಟ್ರೀಯತೆ ಬೇರೆಯಾಗಿದೆ ಎಂದೂ ಮುಸ್ಲೀಮರ ಮನದಲ್ಲಿ ಬಿತ್ತಲಾಯಿತು.

ಆಫ್ರಿಕಾದಲ್ಲಿ ಭಿನ್ನ ಧರ್ಮೀಯರೆಲ್ಲ ಒಟ್ಟಾಗಿ ಹೋರಾಡಿದಂತೆ ಇಲ್ಲಿಯೂ ಒಟ್ಟಾಗಿ ಹೋರಾಡಬಹುದೆಂದು  ತಿಳಿದ ಗಾಂಧೀಜಿಯವರು ನಿಟ್ಟಿನಲ್ಲಿ ಪ್ರಯತ್ನಿಸಿದರು. ಮುಸಲ್ಮಾನರ ಮನ ಗೆಲ್ಲಲುಖಿಲಾಫತ್ಚಳುವಳಿಯಲ್ಲಿ ಭಾಗವಹಿಸಿದರು. ಸಮಯದಲ್ಲಿ ಮುಸಲ್ಮಾನರು ಕೇರಳ ಹಾಗು ಭಾರತದ ಇತರ ಕೆಲವು ಕಡೆಗಳಲ್ಲಿ ಹಿಂದೂಗಳ ಕಗ್ಗೊಲೆಯನ್ನು ಮಾಡಿದರೂ ಸಹ ಅದನ್ನುಖಂಡಿಸದೇ, ಇದು ತಪ್ಪು ಕಲ್ಪನೆಯಿಂದಾದ ಘಟನೆ ಎಂದು ಕೊಲೆಗಡುಕರ ಪರವಾಗಿ ವಾದಿಸಿದರು. ಭಾರತ ಇಬ್ಭಾಗವಾಗಬಾರದೆಂದು ಜಿನ್ನಾರ ಮನ ಒಲಿಸಲು ಗಾಂಧೀಜಿಯವರು ಮಾಡಿದ ಪ್ರಯತ್ನಗಳು ಸಫಲವಾಗಲಿಲ್ಲ. ಜಿನ್ನಾ ಅವರು ‘D-Day’ಗೆ ಕೊಟ್ಟ ಕರೆಯ ಪರಿಣಾಮವಾಗಿ ಒಂದೇ ದಿನದಲ್ಲಿ ಮೂರುಸಾವಿರ ಹಿಂದೂಗಳ ಕೊಲೆ ನಡೆಯಿತು. ಗಾಂಧೀಜಿಯವರ ಮನಸ್ಸಿನ ವಿರುದ್ಧವಾಗಿ ಭಾರತ ಇಬ್ಭಾಗವಾಯಿತುಡಾ˘. ಅಂಬೇಡಕರ ಹಾಗು ವಲ್ಲಭಬಾಯಿ ಪಟೇಲರು ಭಾರತ ಹಾಗು ಪಾಕಿಸ್ತಾನಗಳ ನಡುವೆ ಜನಸಮುದಾಯ ವಿನಿಮಯ ( Population transfer) ನಡೆಯಲಿ ಎಂದು ಪ್ರತಿಪಾದಿಸಿದ್ದರು. ಆದರೆ ಗಾಂಧೀಜಿ ಒಪ್ಪಲಿಲ್ಲ.  ಎರಡೂ ಕಡೆಗಳಲ್ಲಿ ಸಾವಿರಾರು ಜನರ ಕೊಲೆ, ಅತ್ಯಾಚಾರ, ಲೂಟಿ ನಡೆದವು. ಅನೇಕರು ನಿರಾಶ್ರಿತರಾದರು. ಇವರ ದೇಶಾಂತರ ಪರ್ವ ನಡೆಯಿತು. ಪರಿಣಾಮ ದಾರುಣವಾಗಿತ್ತು.

ನಾಥೂರಾಮ ಗೋಡಸೇ:  ಹಿಂದೂ-ಮುಸ್ಲಿಮ್ ಮಾನಸಿಕ ವಿಭಜನೆಯಾಗಲು ಗಾಂಧೀಜಿಯವರು ತಳೆಯುತ್ತಿದ್ದ ಮುಸ್ಲಿಮಪರ ಧೋರಣೆಗಳೇ ಕಾರಣ ಎನ್ನುವದು ಕೆಲವು ಹಿಂದೂಗಳ ಅಭಿಪ್ರಾಯವಾಗಿತ್ತು. ವಿಭಜನೆಯ ನಂತರ ನಡೆದ ನರಮೇಧ, ಅತ್ಯಾಚಾರ, ಸುಲಿಗೆ ಇವೆಲ್ಲವಕ್ಕೆ ಗಾಂಧೀಜಿಯವರ impractical ಆದರ್ಶ ಹಾಗು  ಉಪದೇಶಗಳೇ ಕಾರಣ ಎನ್ನುವುದು ಹಿಂದೂ ಮುಖಂಡರ ಅಭಿಪ್ರಾಯವಾಗಿತ್ತು. ಭಾರತವನ್ನು ಆಳುತ್ತಿದ್ದಂತಹ ಕಾಂ˘ಗ್ರೆಸ್ ಸರಕಾರವು ಗಾಂಧೀಜಿಯವರು ಹಾಕಿದ ಗೆರೆಯನ್ನು ದಾಟುತ್ತಿದ್ದಿಲ್ಲ. ಇದನ್ನೆಲ್ಲ ತಪ್ಪಿಸಲು ಈ ಮುಖಂಡರಲ್ಲಿ ಕೆಲವರಿಗೆ ಒಂದೇ ಮಾರ್ಗ ಕಾಣುತ್ತಿತ್ತು. ಅದು ಭಾರತದ ರಾಜಕೀಯ ಪಟದಿಂದ ಗಾಂಧೀಜಿ ಇಲ್ಲವಾಗುವುದು. ಅರ್ಥಾತ್ ಗಾಂಧೀಜಿಯ ಹತ್ಯೆ!

ಗಾಂಧೀಜಿಯ ಹತ್ಯೆಯನ್ನು ಮಾಡಲು ಎಂಟೆದೆಯ ವ್ಯಕ್ತಿ ಬೇಕು. ನಾಥೂರಾಮ ಗೋಡಸೇ ಒಬ್ಬ ಸುಶಿಕ್ಷಿತ ವ್ಯಕ್ತಿ. ಗಾಂಧೀಜಿಯವರ ಹತ್ಯೆಯನ್ನು ಮಾಡುವುದೆಂದರೆ ತಾನೂ ಆತ್ಮಹತ್ಯೆಯನ್ನು ಮಾಡಿಕೊಂಡಂತೆಯೇ ಎನ್ನುವುದನ್ನು ಗೋಡಸೇ ಅರಿತಿದ್ದ. ತನ್ನ ವಿಚಾರಗಳಿಗೆ ಸಾರ್ವತ್ರಿಕ ಮನ್ನಣೆ ದೊರೆಯಬೇಕು ಎನ್ನುವ ಕಾರಣಕ್ಕಾಗಿಯೇ ಆತ ತುಂಬಿ ತುಳುಕುತ್ತಿರುವ ಪ್ರಾರ್ಥನಾ ಸಭೆಯಲ್ಲಿ ಗಾಂಧೀಜಿಯವರನ್ನು ಗುಂಡಿಕ್ಕಿ ಕೊಲೆಗೈದ (೩೧--೧೯೪೮). ಯಾವುದೇ ಪ್ರತಿರೋಧವಿಲ್ಲದೆ, ಅಲ್ಲಿಯೇ ಪೋಲೀಸರಿಗೆ ಶರಣಾದ. ಗೋಡಸೇಯ ನ್ಯಾಯಿಕ ವಿಚಾರಣೆ ನಡೆದ ನಂತರ  ೧೫ ನವ್ಹೆಂಬರ ೧೯೪೯ರಂದು ಗೋಡಸೇಯನ್ನು ಗಲ್ಲಿಗೇರಿಸಲಾಯಿತು.
ಸಾಧ್ವಿ ಪ್ರಜ್ಞಾಸಿಂಗ ಠಾಕೂರ: ಸಾಧ್ವೀ ಪ್ರಜ್ಞಾಸಿಂಗರು ಗೋಡಸೇಯ ವಿಚಾರಧಾರೆಯನ್ನು ಬೆಂಬಲಿಸುವವರು. ಭಾರತವಿರೋಧೀ ಬ್ರಿಟಿಶ ಅಧಿಕಾರಿಗಳನ್ನು ಬಲಿಹಾಕಿದ ಭಗತಸಿಂಗ, ರಾಜಗುರು ಇವರನ್ನು ನಾವು ಗೌರವಿಸುವದಾದರೆ, ಹಿಂದೂಗಳಿಗೆ ಅನ್ಯಾಯ ಬಗೆದ, ಆ ಮೂಲಕ ಭಾರತಕ್ಕೆ ಅನ್ಯಾಯ ಬಗೆಯುತ್ತಿರುವ ಗಾಂಧೀಜಿಯವರನ್ನು ಹತ್ಯೆ ಮಾಡಿದ ಗೋಡಸೇಯನ್ನು ಏಕೆ ಗೌರವಿಸಬಾರದು ಎನ್ನುವುದು ಸಾಧ್ವೀ ಪ್ರಜ್ಞಾಸಿಂಗರ ಪ್ರಶ್ನೆ. ಆದರೆ ಭಾರತದಲ್ಲಿ ಮಹಾತ್ಮರಿಗೆ ಅತ್ಯಂತ ಉಚ್ಚ ಸ್ಥಾನವಿದೆಇವರನ್ನು ಭಾರತದ ಪವಿತ್ರ ಗೋವು (holy cow) ಎನ್ನಬಹುದು. ಗಾಂಧೀಜಿಯ ಪ್ರಭಾವಳಿಯನ್ನು ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಳ್ಳಲು ಬಯಸುವ ಕೆಲವು ರಾಜಕಾರಣಿಗಳು ಗಾಂಧೀದೂಷಣೆಯನ್ನುಧರ್ಮದ್ರೋಹ’ (blasphemy) ಎಂದು ದೊಡ್ಡ ದನಿಯಲ್ಲಿ ಅರಚುತ್ತಾರೆ. ಹೀಗಾಗಿ ಗಾಂಧೀಹಂತಕ ಗೋಡಸೇ ಭಾರತದಲ್ಲಿ ಒಬ್ಬ ಅತ್ಯಂತ ಹೀನವ್ಯಕ್ತಿಯಾಗಿ ಪರಿಗಣಿಸಲ್ಪಟ್ಟಿದ್ದಾನೆ. ಅಂಥವನನ್ನು ಸಾಧ್ವೀ ಪ್ರಜ್ಞಾಸಿಂಗರುದೇಶಭಕ್ತಎಂದು ಕರೆಯಬಹುದೆ?
ತಮ್ಮ ಮನಸ್ಸಿನಲ್ಲಿ ಏನೇ ಇದ್ದರೂ ಸಹ ಸಾಧ್ವೀ ಪ್ರಜ್ಞಾಸಿಂಗರು ಸಾರ್ವಜನಿಕವಾಗಿ ಇಂತಹ ಹೇಳಿಕೆಯನ್ನು ನೀಡಬಾರದಾಗಿತ್ತು. ಇದು ರಾಜಕೀಯವಾಗಿ ಅತ್ಯಂತ ಅಪ್ರಬುದ್ಧ ಹೇಳಿಕೆ ಹಾಗು ಚುನಾವಣೆಯಲ್ಲಿ ಭಾರತೀಯ ಮತದಾರರ ಮೇಲೆ ಕೆಟ್ಟ ಪರಿಣಾಮವನ್ನು ಮಾಡೀತು”, ಎಂದು ಭಾವಿಸಿದ ಭಾರತೀಯ ಜನತಾ ಪಕ್ಷವು ಸಾಧ್ವೀ ಪ್ರಜ್ಞಾ ಸಿಂಗ ಠಾಕೂರರನ್ನು ತನ್ನ ಕೆಲವೊಂದು ಸಮಿತಿಗಳಿಂದ ಹೊರಹಾಕಿತು ಎಂದು ನನ್ನ ಭಾವನೆ. ಅದೂ ಅಲ್ಲದೆ, ಈಗಾಗಲೇ ಗಾಂಧೀಜಿಯವರು ನಮ್ಮ ರಾಷ್ಟ್ರಪಿತರಾಗಿ ದೇಶದ ಅತ್ಯುಚ್ಚ ಸ್ಥಾನದಲ್ಲಿದ್ದಾರೆ; ಅವರ ಹಂತಕನನ್ನುದೇಶಭಕ್ತಎಂದು ಕರೆಯುವುದು, ಅಂತರರಾಷ್ಟ್ರೀಯ ಪಟದಲ್ಲಿ ಭಾರತಕ್ಕೆ ಅಗೌರವ ತಂದಂತೆ ಎನ್ನುವ ವಿಚಾರವೂ ಇರಬಹುದು. ಇದೆಲ್ಲ ಸರಿ ಎನ್ನುವಂತೆ, ಕೆಲವು ರಾಜಕಾರಣಿಗಳು ಸಾಧ್ವೀ ಪ್ರಜ್ಞಾಸಿಂಗ ಠಾಕೂರರನ್ನು ತಮ್ಮ ಭಾಷಣಗಳಲ್ಲಿ ಹಾಗು ತಮ್ಮ ಟ್ವೀಟುಗಳಲ್ಲಿ ಗಲ್ಲಿಗೇರಿಸಿದರು.
ಸರಿ, ಸಾಧ್ವೀ ಪ್ರಜ್ಞಾಸಿಂಗ ಠಾಕೂರರು ತಮ್ಮ ಉಚ್ಚ ಸ್ಥಾನದಿಂದ ಕೆಳಗುರುಳಿ, ಮಣ್ಣು ಮುಕ್ಕಿದರು. ಆದರೆ, ನಮ್ಮ ಮುಂದಿರುವ ಪ್ರಶ್ನೆ ಬೇರೆಯೇ ಆಗಿದೆ. ಸಾಧ್ವೀ ಪ್ರಜ್ಞಾಸಿಂಗರಿಗೆ ವಿಚಾರಸ್ವಾತಂತ್ರ್ಯ ಇಲ್ಲವೆ? ಅವರಿಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತ ಪಡಿಸುವ ಸಂವಿಧಾನದತ್ತ ಸ್ವಾತಂತ್ರ್ಯ ಇಲ್ಲವೆ? ಅವರ ಅಭಿಪ್ರಾಯವು ದೇಶದ್ರೋಹವೆ, ಧರ್ಮದ್ರೋಹವೆ? ಯಾವುದೇ ವಿಚಾರಣೆ ಇಲ್ಲದೆ, ಸೆರೆಮನೆಯಲ್ಲಿ ವರ್ಷಗಳವರೆಗೆ ಹೇಳಲಾಗದಂತಹ ಕ್ರೌರ್ಯವನ್ನು ಅನುಭವಿಸಿದ ಸಾಧ್ವೀ ಪ್ರಜ್ಞಾಸಿಂಗರ ಗಂಟಲನ್ನೂ ಹಿಚುಕುವ ಹಿಂಸೆಯನ್ನು ರಾಜಕಾರಣಿಗಳು ಅವರಿಗೆ ಕೊಡುವುದು ಸರಿಯೆ? ಇದು ರಾಜಕಾರಣಿಗಳ ಪ್ರಜ್ಞೆಯನ್ನು ಬಾಧಿಸುವದಿಲ್ಲವೆ?
ಮಹಾತ್ಮಾ, ನೀವು ಮತ್ತೊಮ್ಮೆ ಸತ್ತಿರಿ!
ಸಂದರ್ಭದಲ್ಲಿ ನನಗೆ ಶೇಕ್ಸಪಿಯರನ ನಾಟಕಜೂಲಿಯಸ್ ಸೀಜರದಲ್ಲಿ, ಸೀಜರನ ಕೊಲೆಗಾರಲ್ಲಿ ಒಬ್ಬನಾದ ಬ್ರೂಟಸ್, ಜನಸಮುದಾಯದ ಎದುರಿನಲ್ಲಿ ಮಾಡಿದ ಭಾಷಣದ ಒಂದು ಮಾತು ನೆನಪಿಗೆ ಬರುತ್ತದೆ: Not that I loved Ceaser less, but I loved Rome more.
ಬಹುಶಃ ಗೋಡಸೇ ಸಹ ಹೀಗೆಯೇ ಅಂದುಕೊಂಡಿರಬಹುದು: Not that I respected Gandhiji less, but I loved India more!
ಅಥವಾ ಹಾಗೆ ಅಂದುಕೊಂಡಿರಲಿಕ್ಕಿಲ್ಲ.