Showing posts with label ಸಮಾಜ. Show all posts
Showing posts with label ಸಮಾಜ. Show all posts

Friday, July 5, 2024

ಭಾರತದೇಶದಲ್ಲಿದ್ದ ವಿವಿಧ ಸಮುದಾಯಗಳು ಹಾಗು ಭಾರತೀಯ ಸಂಸ್ಕೃತಿ

 “ಅಸ್ಯುತ್ತರಸ್ಯಾಂ ದಿಶಿ ದೇವತಾತ್ಮಾ ಹಿಮಾಲಯೋ ನಾಮ ನಗಾಧಿರಾಜಃ| ಪೂರ್ವಾಪರೌ ತೋಯನಿಧೀ ವಗಾಹ್ಯ ಸ್ಥಿತಃ ಪೃಥಿವ್ಯಾ ಇವ ಮಾನದಂಡಃ 

 

ಕವಿಗುರು ಕಾಳಿದಾಸನು ತನ್ನ ‘ಕುಮಾರಸಂಭವ’ ಕಾವ್ಯದಲ್ಲಿ ಹಿಮಾಲಯವನ್ನು ‘ದೇವತಾತ್ಮಾ’ ಎಂದು ಭಕ್ತಿಯಿಂದ, ಗೌರವದಿಂದ ಕರೆಯುವ ಸಾಲು ಇದು. ಭಾರತವು ಉತ್ತರದಲ್ಲಿ ಹಿಮಾಲಯದಿಂದ ಪ್ರಾರಂಭಿಸಿ, ದಕ್ಷಿಣಕ್ಕೆ ಕನ್ಯಾಕುಮಾರಿಯವರೆಗೆ ವ್ಯಾಪಿಸಿದ ವಿಶಾಲವಾದ ದೇಶವಾಗಿದ್ದು, ಈ ಭೂಪ್ರದೇಶದಲ್ಲಿ ಅನೇಕ ಸಮುದಾಯಗಳು ಹರಡಿದ್ದವು, ಹರಡಿವೆ. ಕಾಲಾಂತರದಲ್ಲಿ ಕೆಲ ಸಮುದಾಯಗಳು ಬಲಿಷ್ಠವಾದರೆ, ಕೆಲ ಸಮುದಾಯಗಳು ನಶಿಸಿ ಹೋದವು. ಆದರೆ ಅವುಗಳ ಕುರುಹುಗಳನ್ನು ನಮ್ಮ ಪುರಾಣಗಳಲ್ಲಿ, ನಮ್ಮ ಭಾಷೆಗಳಲ್ಲಿ ಹಾಗು ನಮ್ಮ ಸ್ಥಳನಾಮಗಳಲ್ಲಿ ಹುಡುಕಬಹುದು. ಈ ದಿಕ್ಕಿನಲ್ಲಿ ಶ್ರೇಷ್ಠ ಸಂಶೋಧಕರಾದ ಕೀರ್ತಿಶೇಷ ಶಂ. ಬಾ. ಜೋಶಿಯವರು ಏಶಿಯಾದಲ್ಲಿಯೇ ಪ್ರಪ್ರಥಮವಾಗಿ ವಿಸ್ತಾರವಾದ ಹಾಗು ಆಳವಾದ ಸಾಂಸ್ಕೃತಿಕ ಅಧ್ಯಯನವನ್ನು ಮಾಡಿದರು. ಶಂ. ಬಾ. ಜೋಶಿಯವರು ತಮ್ಮ ಸಂಶೋಧನೆಗಳಲ್ಲಿ ಉಲ್ಲೇಖಿಸಿದ ಸಮುದಾಯಗಳಿಗಿಂತ ಪೂರ್ವದಲ್ಲಿಯೇ ಭರತಖಂಡದ ಗೊಂಡಾರಣ್ಯದಲ್ಲಿ ಮತ್ತೂ ಒಂದು ಸಮುದಾಯದ ಕೆಲವರು ಪಾದಾರ್ಪಣೆ ಮಾಡಿದ್ದರು ಅನ್ನುವುದು ಅಚ್ಚರಿಯ ಸಂಗತಿಯಲ್ಲವೆ? ಅವರೇ ಬಾಹ್ಯಾಂತರಿಕ್ಷ ಯಾತ್ರಿಗಳು! ಆಶ್ಚರ್ಯವಾಗುವುದೆ, ಗೆಳೆಯರೆ? ಈ ಅನುಮಾನಕ್ಕೆ ಕಾರಣವಾಗಬಲ್ಲ ಕೆಲವು ಅಂಶಗಳನ್ನು, ನಮ್ಮ ಪುರಾಣಗಳಿಂದಲೇ ಹೆಕ್ಕಿ, ನಿಮ್ಮ ಮುಂದೆ  ಇದೀಗ ಇಡುತ್ತಿದ್ದೇನೆ.

 

ಮೊದಲನೆಯದಾಗಿ ಭಾರತದ ಸರ್ವಮಾನ್ಯ, ಜನಪ್ರಿಯ ದೇವರಾದ ಹನುಮಂತನನ್ನು ಪರಿಶೀಲಿಸೋಣ. (‘ಹನುಮಾನ್’ ಎನ್ನುವುದು ‘ಅನುಮಾನ್’ ಎನ್ನುವ ಅನ್ಯಭಾಷೆಯ ಪದದ ಅಪಭ್ರಂಶ ರೂಪ ಎಂದು ಭಾಷಾತಜ್ಞರೊಬ್ಬರು ಹೇಳುತ್ತಾರೆ; ಇದು ಬೇರೆಯ ವಿಷಯ.)  ಸಂಸ್ಕೃತ ಭಾಷೆಯಲ್ಲಿ ‘ಹನು’ ಎಂದರೆ ಗದ್ದ. ಉದ್ದವಾದ ಗದ್ದವಿದ್ದವನು ಹನುಮಾನ್. ಈ ದೈಹಿಕ ವೈಶಿಷ್ಟ್ಯವುಳ್ಳ ಕೆಲವರು ಉತ್ತರಪ್ರದೇಶದ ಒಂದು ಭಾಗದಲ್ಲಿ ಇದ್ದಾರಂತೆ. ಇದು ಒಂದು ದೂರದ ಊಹೆ ಎಂದು ಅನಿಸಬಹುದು. ಇದಕ್ಕಿಂತಲೂ ಹತ್ತಿರದ ಕೆಲವು ಸಾಧ್ಯತೆಗಳನ್ನು ನೋಡೋಣವೆ? ಹನುಮಂತನು ವಾಯುದೇವನ ಮಗನು. ನಮ್ಮ ಸ್ಪರ್ಶದ ಅನುಭವಕ್ಕೆ ಬರುತ್ತಿರುವ ವಾಯುವಷ್ಟೇ ವಾಯುದೇವನಲ್ಲ; ‘ನಿಲಿಂಪ’ರು ಹಾಗು ‘ಮರುತ’ರು ಎನ್ನುವುದು ವಾಯುದೇವತೆಗಳ ಗುಂಪುಗಳು. ನಮ್ಮ ಸ್ತೋತ್ರಮಂತ್ರಾದಿಗಳಲ್ಲಿ ಇವರ ಉಲ್ಲೇಖವಿದೆ. ಇವರನ್ನು ಅಂತರಿಕ್ಷ ಯಾತ್ರಿಗಳು ಎಂದು ಭಾವಿಸಬಹುದೆ? ಈ ವಾಯುದೇವರಲ್ಲಿಯ ಓರ್ವನು ಭೂವನಿತೆಯಾದ ‘ಅಂಜನಾ’ಳ ಜೊತೆಗೆ ಸಂಪರ್ಕ ಹೊಂದಿದ್ದರಿಂದ, ‘ಹನುಮಂತ’ನು ಜನಿಸಿದನೆ? ಇದು ಒಂದು ಅತಿರೇಕದ ಕಲ್ಪನೆ ಎಂದು ನಿಮಗೆ ಎನಿಸಿದರೆ, ಇದಕ್ಕೂ ಹೆಚ್ಚಿನ ಎರಡು ಸಂಭಾವ್ಯ ಪುರಾವೆಗಳನ್ನು ನಿಮ್ಮೆದುರಿಗೆ ಇಡುತ್ತೇನೆ:

 

ಹನುಮಂತನು ಸೀತಾದೇವಿಯನ್ನು ಹುಡುಕುತ್ತ ಕತ್ತಲೆಯ ಕಗ್ಗಾಡಿನಲ್ಲಿ ಅಲೆಯುತ್ತಿರುವಾಗ, ಒಂದು ಗುಹೆಯನ್ನು ನೋಡುತ್ತಾನೆ. ಆ ಗುಹೆಯಲ್ಲಿ ಆತನು ಪ್ರವೇಶಿಸಿದಾಗ, ತನ್ನ ಮೈಯಿಂದಲೇ ಬೆಳಕನ್ನು ಸೂಸುತ್ತಿರುವ ಓರ್ವ ಯೋಗಿನಿಯನ್ನು ನೋಡುತ್ತಾನೆ. ಅವಳ ಹೆಸರು ಸ್ವಯಂಪ್ರಭಾ. (ಸ್ವಯಂಪ್ರಭಾ ಎನ್ನುವುದು ಅವಳಿಗೆ ನಾವು ಕೊಟ್ಟ ಹೆಸರು ಎನ್ನುವುದು ಸ್ಪಷ್ಟವಿದೆ.) ಅವಳಿಗೆ ಈ ಬೆಳಕು ಎಲ್ಲಿಂದ ಬಂದಿತು? ಇದು ಅಣುಶಕ್ತಿಯ ಬೆಳಕು ಇರಬಹುದೆ? ಬಾಹ್ಯಾಂತರಿಕ್ಷದ ಸುದೂರದಿಂದ ಭೂಮಿಯವರೆಗೆ ಬಂದವರಿಗೆ, ಅಣುಶಕ್ತಿಯಿಂದಲೇ ಶಕ್ತಿಯನ್ನು ಹಾಗು ಬೆಳಕನ್ನು ಉತ್ಪಾದಿಸಿಕೊಳ್ಳುವ ತಂತ್ರ ಅನಿವಾರ್ಯವಲ್ಲವೆ?

 

ಇನ್ನೀಗ ಮತ್ತೊಂದು ಪುರಾವೆ. ಅಮೆರಿಕದ ಒಂದು ದೊಡ್ಡ ಬೆಟ್ಟದಲ್ಲಿ ಕಲ್ಲಿನಲ್ಲಿ ನಿರ್ಮಿಸಿದ ಕೆಲವು ಉಬ್ಬುಶಿಲ್ಪಗಳಿವೆ. ಅದರಲ್ಲಿಯ ಒಂದು ಶಿಲ್ಪವು ಥೇಟ್ ನಮ್ಮ ಹನುಮಂತನನ್ನೇ ಹೋಲುತ್ತದೆ. ನಾನು ೪೦ ವರ್ಷಗಳ ಹಿಂದೆ, ಎಷ್ಟೋ ವರ್ಷಗಳ ಹಿಂದಿನ ಒಂದು ಇಂಗ್ಲಿಶ್ ಪುಸ್ತಕದಲ್ಲಿ ಈ ಚಿತ್ರವನ್ನು ನೋಡಿದೆ. ಭಾರತೀಯನಾದ ನನಗೆ ಇದು ಹನುಮಂತನ ಚಿತ್ರವೆಂದು ಥಟ್ಟನೆ ಹೊಳೆಯಿತು. ಆದರೆ ನಮ್ಮ ಪುರಾಣಗಳ ಪರಿಚಯವಿರದ ಪಾಶ್ಚಾತ್ಯರಿಗೆ ಹಾಗೆ ಅನಿಸಲು ಸಾಧ್ಯವಿಲ್ಲ! ಇದೊಂದು ಆದಿವಾಸಿಗಳ ಕಲ್ಪನಾಚಿತ್ರವೆಂದು ಅವರು ಭಾವಿಸಿರಬಹುದು! (ಆದಿವಾಸಿಗಳು ತಮ್ಮ ಕಲ್ಪನೆಯ ಮೂಲಕ ಅಂತಹ ಒಂದು ಚಿತ್ರವನ್ನು ಸೃಜಿಸಲು ಸಾಧ್ಯವಿಲ್ಲ!) 

 

ಹೀಗಿರುವಾಗ ಭರತಖಂಡಕ್ಕೆ ಆಗಮಿಸಿದ ಅನೇಕ ಸಮುದಾಯಗಳಲ್ಲಿ ಬಾಹ್ಯಾಂತರಿಕ್ಷದ ಒಂದು ಸಮುದಾಯವೂ ಇದ್ದಿರಲು ಸಾಧ್ಯವಿದೆ. ಜಿಜ್ಞಾಸುಗಳು ಗಂಭೀರವಾದ ಸಂಶೋಧನೆಯನ್ನು ಮಾಡಲು ಈ ವಿಷಯವು ಯೋಗ್ಯವಾಗಿದೆ!

 

ಇನ್ನು ಬಾಹ್ಯಾಂತರಿಕ್ಷವನ್ನು ಬಿಟ್ಟು ಸಮುದ್ರಮಾರ್ಗಕ್ಕೆ ಬರೋಣ. ದೇವತೆಗಳು ಹಾಗು ಅಸುರರು ಜೊತೆಯಾಗಿ ಸಮುದ್ರಮಥನವನ್ನು ಮಾಡಿದಾಗ, ಸಮುದ್ರದ ಒಡಲಿನಿಂದ ಹದಿನಾಲ್ಕು ರತ್ನಗಳು ಹೊರಬಂದವು ಎಂದು ನಮ್ಮ ಪುರಾಣಗಳು ಹೇಳುತ್ತವೆ. ಆ ರತ್ನಗಳಲ್ಲಿ ಏಳು ಮುಖದ ಕುದುರೆ ಸಹ ಒಂದು ರತ್ನ. ಸಮುದ್ರದ ಈ ರತ್ನಗಳು ಈಜಿಪ್ತಿನಿಂದ ಭಾರತಕ್ಕೆ ಸಮುದ್ರಮಾರ್ಗವಾಗಿ ಬಂದ ‘ರತ್ನಗಳು’ ಎಂದು ಕೆಲವು ಸಂಶೋಧಕರು ಹೇಳುತ್ತಾರೆ. ಇವುಗಳಲ್ಲಿ ಕುದುರೆಯೂ ಸಹ ಇದೆ. ಪ್ರಾಚೀನ ಭಾರತದಲ್ಲಿ ಕುದುರೆಗಳು ಇರಲಿಲ್ಲ. ಈಜಿಪ್ತಿನಿಂದ ಕುದುರೆಗಳನ್ನು ಆಮದು ಮಾಡಿಕೊಳ್ಳಬೇಕಾಗುತ್ತಿತ್ತು. ಈಜಿಪ್ತದ ಭಾಷೆಯಲ್ಲಿ ಕುದುರೆಗೆ hytr ಎಂದು ಕರೆಯುತ್ತಾರೆ. ಅದೇ ಕನ್ನಡದಲ್ಲಿ ‘ಕುದುರೆ’ಯಾಗಿದೆ ಎಂದು ಕನ್ನಡದ ಕಣ್ವರೆಂದು ಖ್ಯಾತರಾದ ಬಿ.ಎಮ್.ಶ್ರೀಕಂಠಯ್ಯನವರು ತರ್ಕಿಸಿದ್ದಾರೆ. ಕರ್ನಾಟಕದ ಕರಾವಳಿಯಲ್ಲಿರುವ ಭಟಕಳವು ಒಂದು ಕಾಲದಲ್ಲಿ ಖ್ಯಾತ ಬಂದರು ಆಗಿತ್ತು ಹಾಗು ಈ ಬಂದರಿಗೆ ಈಜಿಪ್ತಿನ ಜೊತೆ ನೇರ ಸಂಪರ್ಕವಿತ್ತು ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯವೇ ಆಗಿದೆ. ಅಲ್ಲಿಂದ ಬಂದ ಅರಬರು ಭಟಕಳದಲ್ಲಿ ನೆಲೆಸಿದರು. ಅವರಿಗೆ ‘ನವಾಯತರು’ ಎಂದು ಸ್ಥಳೀಯರು ಕರೆಯುತ್ತಾರೆ. (ನವಾಯತ=ನವ+ಆಯತ). ಇವರೀಗ ಪರಕೀಯರಾಗಿ ಉಳಿದಿಲ್ಲ! ನಮ್ಮ ನಾಡಿನ ಮುಖ್ಯ ಪ್ರವಾಹದಲ್ಲಿ ಇವರು ಮಿಳಿತರಾಗಿ ಹೋಗಿದ್ದಾರೆ.

 

(ಟಿಪ್ಪಣಿ: (೧) ಭಟಕಳ ಬಂದರಿನ ಅನುಕೂಲತೆಯನ್ನು ಅರಿತಂತಹ ಶ್ರೀ ವಿಶ್ವೇಶ್ವರಯ್ಯನವರು ಮೈಸೂರಿನ ದಿವಾನರಾಗಿದ್ದಾಗ, ಭಟಕಳವನ್ನು ಮೈಸೂರಿಗೆ ಮಾರಲು ಕೊಡುವಂತೆ ಬ್ರಿಟಿಶರನ್ನು ಕೇಳಿಕೊಂಡಿದ್ದರು; ಆದರೆ ಬ್ರಿಟಿಶರು ಅದಕ್ಕೆ ಒಪ್ಪಲಿಲ್ಲ.

(೨) ಹಿಮಾಲಯವಾಸಿಯಾದ ಶಿವನ ವಾಹನವು ನಂದಿಯಾಗಿತ್ತೇ ಹೊರತು, ಕುದುರೆಯಾಗಿರಲಿಲ್ಲ. ಅವನ ಮಗನಾದ ಗಣಪತಿಯೂ ಸಹ ಗಜಮುಖನೇ ಹೊರತು, ಆಶ್ವಮುಖನಲ್ಲ! ಕುದುರೆಗಳ ಬಳಕೆಯು ಭಾರತದಲ್ಲಿ ರಾಮಾಯಣ ಹಾಗು ಮಹಾಭಾರತದ ಕಾಲಗಳಿಂದ ಅಂದರೆ ಆರ್ಯರ ಆಗಮನದ ನಂತರವೇ ಪ್ರಾರಂಭವಾಗುತ್ತದೆ.)

 

ಇದಿಷ್ಟು ಪ್ರಾಗೈತಿಹಾಸಿಕ ಭಾರತದ ಪುರಾಣ. ಇನ್ನು ಐತಿಹಾಸಿಕ ಭಾರತದಲ್ಲಿ ಸಿಗುವ ಕೆಲವು ಸಮುದಾಯಗಳನ್ನು ನೋಡೋಣ!

(೧) ಮಲ್ಲರು: ಮಲ್ಲರು ಭಾರತದಲ್ಲೆಲ್ಲ ಹರಡಿದ ದೊಡ್ಡ ಸಮುದಾಯ. ಕುರುಕ್ಷೇತ್ರ ಯುದ್ಧದಲ್ಲಿ ಮಲ್ಲರು ಭಾಗವಹಿಸಿದ್ದರು ಎಂದು ವ್ಯಾಸಭಾರತವು ಹೇಳುತ್ತದೆ. ಈ ಮಲ್ಲರ ವಾಸಸ್ಥಾನವು ಇದೀಗ ಪಾಕಿಸ್ತಾನದ ಪಂಜಾಬ ಹಾಗು ಭಾರತದ ಝಾರಖಂಡದಲ್ಲಿದೆ. ಇವರದು ಜಾಟ ಕುಲ. (ಜಾಟ >> ಜಾತ = ಕುಲೀನ). ಇವರು ಬಂಗಾಲವನ್ನು ಸಹ ಆಳಿದ್ದರು. ಅಲ್ಲಿ ಇವರು ಕಟ್ಟಿಸಿದ ಗುಡಿ-ಗುಂಡಾರಗಳಿವೆ. ಮಲ್ಲ ಅರಸರು ಕನ್ನಡ ನಾಡಿನವರೆಂದು ಸ್ಥಳೀಯ ಮಾರ್ಗದರ್ಶಿಗಳು ಹೇಳುತ್ತಾರೆ. ಕರ್ನಾಟಕದಲ್ಲಿ ಸಹ ಮಲ್ಲರು ಸಾಕಷ್ಟು ಸಂಖ್ಯೆಗಳಲ್ಲಿ ಹರಡಿಕೊಂಡಿದ್ದರು. ಇವರ ಅನೇಕ ನೆಲೆಗಳು ‘ಮಲ್ಲ’ ಎನ್ನುವ ಪೂರ್ವಪದದಿಂದ ಪ್ರಾರಂಭವಾಗುತ್ತವೆ. ಉದಾಹರಣೆಗೆ ಮಲ್ಲಾಡಿಹಳ್ಳಿ, ಮಲ್ಲಾಪುರ, ಮಲ್ಲೇಶ್ವರ ಇತ್ಯಾದಿ. ಕರ್ನಾಟಕದಲ್ಲಿ ಹರಿದ ಮಲಪ್ರಭಾ ನದಿಯು ವಾಸ್ತವದಲ್ಲಿ ‘ಮಲ್ಲಪ್ರಭಾ’!. ಸಂಸ್ಕೃತ ಪಂಡಿತರು ಇದನ್ನು ‘ಅಮಲಪ್ರಭಾ’ ಎಂದು ತಿದ್ದುವ ಜಾಣ ಕೆಲಸವನ್ನು ಮಾಡುತ್ತಾರೆ! ಕರ್ನಾಟಕದಲ್ಲಿ ಇರುವ ಅಜಮಾಸು ೩೦,೦೦೦ ಹಳ್ಳಿಗಳಲ್ಲಿ ಸುಮಾರು ೩೮೫ ಹಳ್ಳಿಗಳ ಹೆಸರುಗಳು ‘ಮಲ್ಲ’ ಎನ್ನುವ ಉಪಾಧಿಯೊಂದಿಗೆ ಪ್ರಾರಂಭವಾಗುತ್ತವೆ, ಅರ್ಥಾತ್ ಅಂದಾಜು ೧೩%. ಇದಲ್ಲದೆ ಕೇರಳದಲ್ಲಿಯೂ ಸಹ ಈ ಹೆಸರಿನ ಹಳ್ಳಿಗಳಿವೆ. ಕನ್ನಡದ ಜಾನಪದ ಕಥೆಗಳಲ್ಲಿ ‘ಮಲಪೂರಿ’ ಎನ್ನುವ ಒಬ್ಬ ಯಕ್ಷಿಣಿ ಬರುತ್ತಾಳೆ. ಅರ್ಥಾತ್ ಕರ್ನಾಟಕದಲ್ಲಿ ಈಗ ಹೇಳಹೆಸರಿಲ್ಲದಂತೆ ನಶಿಸಿ ಹೋಗಿದ್ದರೂ ಸಹ, ಈ ಮಲ್ಲರು ಒಂದು ಕಾಲಕ್ಕೆ ಕರ್ನಾಟಕದ ಒಂದು ಪ್ರಬಲ ಸಮುದಾಯವಾಗಿದ್ದರು. ಕರ್ನಾಟಕದಲ್ಲಿ ಇವರು ಈಗ ಇರದಿದ್ದರೂ ಸಹ ಉತ್ತರಭಾರತದಲ್ಲಿ ಇವರದು ದೊಡ್ಡ ಸಮುದಾಯವಾಗಿ ಉಳಿದಿದೆ. ಒಂದು ಕಾಲಕ್ಕೆ Bandit Queen ಎಂದು ಖ್ಯಾತಳಾಗಿದ್ದ ಫೂಲನ್ ದೇವಿಯು ಮಲ್ಲ ಕುಲದವಳು. ಮಲ್ಲರು ಜಲಗಾರರೂ ಸಹ ಅಹುದು. ಇವರು ‘ಗಂಗಾಮತಸ್ಥ’ರಿಗೆ ಹತ್ತಿರದವರಾಗಿರಬಹುದೆ? ಗಂಗಾಮತಸ್ಥರು ಕರ್ನಾಟಕದಲ್ಲಿ ಇನ್ನೂ ಇದ್ದಾರೆ. ಮಹಾಭಾರತದಲ್ಲಿ ನಾವು ಗುರುತಿಸಬಹುದಾದ,  ಗಂಗೆಗೆ ಸಂಬಂಧ ಪಟ್ಟ ಈರ್ವರು ಪ್ರಸಿದ್ಧಪುರುಷರೆಂದರೆ, (೧) ವ್ಯಾಸ ಮತ್ತು (೨) ಭೀಷ್ಮ.

 

ವ್ಯಾಸನು ಪರಾಶರ ಎಂಬ ಋಷಿ ಹಾಗು ಮತ್ಸ್ಯಗಂಧಿ ಎನ್ನುವ ಬೆಸ್ತ ತರುಣಿಯ ಮಗನು. ವ್ಯಾಸನ ಜನನದ ನಂತರ ಪರಾಶರನು, ಮತ್ಸ್ಯಗಂಧಿಗೆ ವಿದಾಯ ಹೇಳಿ ಹೊರಟು ಹೋದನು! ಮತ್ಸ್ಯಗಂಧಿಯೇ ವ್ಯಾಸನನ್ನು ತನ್ನ ಬೆಸ್ತಕುಲದಲ್ಲಿ ಬೆಳೆಸಿದಳು ಎಂದು ನಾವು ಭಾವಿಸಬಹುದು. ಅದರಂತೆಯೇ ಭೀಷ್ಮನು ಶಂತನು ಎನ್ನುವ ಮಹಾರಾಜ ಹಾಗು ಗಂಗಾದೇವಿಯ ಸಂಯೋಗದಿಂದ ಜನಿಸಿದನು. ಈ ಎರಡೂ ಘಟನೆಗಳಲ್ಲಿ ನಮಗೆ ಸ್ಪಷ್ಟವಾಗಿ ಗೋಚರವಾಗುವ ವಿಷಯವೆಂದರೆ, ಈ ಬೆಸ್ತ ಕನ್ಯೆಯರಿಗೆ ವಿವಾಹಬಂಧನವು ಕಡ್ಡಾಯವಾಗಿರಲಿಲ್ಲ. ಮಾತೃಪ್ರಧಾನ ಕುಲದವರಾದ ಬೆಸ್ತ ಕನ್ಯೆಯರಲ್ಲಿ ಆರ್ಯಕುಲದ ಗಂಡಸರಿಗೆ ಜನಿಸಿದವರು ಈ ಭೀಷ್ಮ ಹಾಗು ವ್ಯಾಸ ಮಹರ್ಷಿಗಳು. ಗಂಗೆಯು ತನ್ನಲ್ಲಿ ಹುಟ್ಟಿದ ಮೊದಲ ಏಳು ಮಕ್ಕಳನ್ನು ನದಿಯಲ್ಲಿ ಬಿಸುಟಳು ಎನ್ನುವದರ ಅರ್ಥವೇನು? ಈ ಬೆಸ್ತರ ಕುಲವು ಮಾತೃಪ್ರಧಾನವಾಗಿದ್ದು, ಇವಳು ತನ್ನ ಮಕ್ಕಳನ್ನು ತನ್ನ ಕುಲದವರ ಆಶ್ರಯದಲ್ಲಿ ಬೆಳೆಸಿದಳು; ಎಂಟನೆಯ ಮಗುವನ್ನು ಶಂತನು ರಾಜನು ಬೇಡಿಕೊಂಡಾಗ, ಅವನಿಗೆ ಒಪ್ಪಿಸಿ, ತಾನು ಮತ್ತೆ ತನ್ನ ಪೂರ್ವಸ್ಥಾನಕ್ಕೆ ಮರಳಿದಳು!

 

ವಾಸ್ತವದಲ್ಲಿ ಆರ್ಯರಲ್ಲಿಯೂ ಸಹ ವಿವಾಹಬದ್ಧತೆ ಮೊದಮೊದಲು ಇರಲಿಲ್ಲ. ಶ್ವೇತಕೇತು ಎನ್ನುವ ವಟುವಿನ ಕಥೆಯನ್ನು ಕೇಳಿರಿ. ಈ ವಟುವು ಒಂದು ಮಧ್ಯಾಹ್ನ ತನ್ನ ಆಶ್ರಮಕ್ಕೆ ಅನಿರೀಕ್ಷಿತವಾಗಿ ಬಂದಾಗ, ಅಲ್ಲಿ ತನ್ನ ತಾಯಿ ಒಬ್ಬ ಅಪರಿಚಿತ ಗಂಡಸಿನ ಜೊತೆಗೆ ಮಲಗಿರುವುದನ್ನು ನೋಡುತ್ತಾನೆ. ಅದು ಅವನಿಗೆ ಸಹ್ಯವಾಗುವುದಿಲ್ಲ. ತಕ್ಷಣವೇ ಆತನು ಶಾಪರೂಪದಲ್ಲಿ ಒಂದು ಕಟ್ಟಳೆಯನ್ನು ಮಾಡುತ್ತಾನೆ. ಇನ್ನು ಮೇಲೆ ಆರ್ಯ ಹೆಂಗಸರು ತಮ್ಮ ಗಂಡಂದಿರ ಜೊತೆಗೆ ಮಾತ್ರ ಮಲಗತಕ್ಕದ್ದು, ಬೇರೆ ಗಂಡಸರ ಜೊತೆಗೆ ಮಲಗಕೂಡದು. ಈ ವಿಷಯವನ್ನು ನಾವು ಪರೀಕ್ಷಿಸುವಾಗ, ಆರ್ಯರು ಭೂಮಿಯ ಉತ್ತರ ಭಾಗದಿಂದ ಭಾರತಕ್ಕೆ ಬಂದರು ಎನ್ನುವುದನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಉತ್ತರ ಧ್ರುವಕ್ಕೆ ಸಮೀಪದಲ್ಲಿರುವ ಎಸ್ಕಿಮೋಗಳಲ್ಲಿ ಸಂತಾನೋತ್ಪತ್ತಿ ಕಡಿಮೆ. ಅಲ್ಲಿಯ ಹವಾಮಾನ ಹಾಗು ಆಹಾರದ ಕೊರತೆಯಿಂದಾಗಿ ಇದು ಸಹಜವೇ. ಆದರೆ, ಎಲ್ಲ ಮನುಷ್ಯಕುಲಗಳಲ್ಲಿಯೂ ಸಂತಾನೋತ್ಪತ್ತಿಯ ಬಯಕೆ ಇದ್ದೇ ಇರುತ್ತದಲ್ಲವೆ? ಆದುದರಿಂದ ಓರ್ವ ಎಸ್ಕಿಮೊ ಕುಟುಂಬಕ್ಕೆ ಯಾರಾದರೂ ಪುರುಷನು ಅತಿಥಿಯಾಗಿ ಬಂದಂತಹ ಸಂದರ್ಭದಲ್ಲಿ, ಎಸ್ಕಿಮೋನ ಹೆಂಡತಿಯ ಜೊತೆಗೆ ಈ ವ್ಯಕ್ತಿಯು ಕಡ್ಡಾಯವಾಗಿ ಮಲಗಿಕೊಳ್ಳಲೇಬೇಕು! ಇದು ಅಲ್ಲಿಯ ರಿವಾಜು. ಭಾರತದಂತಹ ಅತಿಸಂತಾನ ದೇಶದಲ್ಲಿ ಏಕಪತಿತ್ವವು ಅನಿವಾರ್ಯವಾಗಿದೆ!

 

ಪ್ರಾಚೀನ ಕಾಲದ ಪ್ರಾಚೀನ ಭಾರತದಲ್ಲಿ, ಬೇಟೆಯ ಹಾಗು ಬೆಳೆಯ ಜಾಗಗಳ ಸಲುವಾಗಿ ವಿವಿಧ ಸಮುದಾಯಗಳು ಪರಸ್ಪರ ಹೋರಾಡುತಿದ್ದದ್ದು ಸಹಜವೇ ಆಗಿದೆ. ಹಾಗಿದ್ದರೆ, ಈ ಮಲ್ಲರ ಕಡು ವೈರಿ ಯಾರೆಂದಿರಾ? ಆತನೇ ನಮ್ಮ ಪುರಾಣಪ್ರಸಿದ್ಧ ದೇವನಾದ ಮಲ್ಲಾರಿ! ಈ ಮಲ್ಲಾರಿಗೆ ‘ಮಲ್ಲನಿಷೂದನ’ ಎಂದು ಸಂಬೋಧಿಸಲಾಗಿದೆ.ಒಂದು ಕಾಲಕ್ಕೆ ಶೂರ-ವೀರ ಕುಲದವರಾದ ಮಲ್ಲರು, ತಮ್ಮ ಹೋರಾಟಗಳಲ್ಲಿ ಮಣ್ಣು ಮುಕ್ಕಿದಾಗ, ಅವರು ಸಮಾಜಸೋಪಾನದಲ್ಲಿಯ ಅತ್ಯಂತ ಕೆಳಮಟ್ಟದ ಮೆಟ್ಟಲಿಗೆ ಇಳಿದರು!

 

ಈ ಎಲ್ಲ ಭಾರತೀಯ ಕುಲಗಳ ವೈವಿಧ್ಯಗಳೇನು, ಅವರುಗಳ ಸಂಸ್ಕೃತಿ ಹೇಗಿತ್ತು ಎನ್ನುವುದನ್ನು ಮತ್ತೊಮ್ಮೆ ಪರಿಶೀಲಿಸೋಣ.

Saturday, January 13, 2024

ಲಕ್ಷದ್ವೀಪ ಹಾಗು ಮಾಲ್ದೀವ್ಸ್

ಲಕ್ಷದ್ವೀಪವು ಇದೀಗ ತುಂಬಾ ಸುದ್ದಿಯಲ್ಲಿದೆ. ಜೊತೆಗೇ ‘ಲಕ್ಷದ್ವೀಪ’ ಪದದ ವ್ಯುತ್ಪತ್ತಿಯ ಬಗೆಗೂ ಖಚಿತ ಅಭಿಪ್ರಾಯವು ಹರಡುತ್ತಿದೆ. ಲಕ್ಷ (ಅಂದರೆ ಅನೇಕ) ದ್ವೀಪಗಳ ಸಮೂಹವೇ ಲಕ್ಷದ್ವೀಪ ಎನ್ನುವುದು, ಈ ಅಭಿಪ್ರಾಯದ ತಿರುಳು. ಈ ಅಭಿಪ್ರಾಯವನ್ನು ಭಾಷಾಶಾಸ್ತ್ರದ ಮೂಲಕ ಸ್ವಲ್ಪ ವಿವೇಚಿಸೋಣ.

 

ಬಂಗಾಲದ ಖ್ಯಾತ ಭಾಷಾವಿಜ್ಞಾನಿಗಳಾದ ಸುನೀತಿಕುಮಾರ ಚಟರ್ಜಿಯವರು, ‘ಲಕ್’ ಈ ಪದವು ದ್ರಾವಿಡ ಪದವಾಗಿದ್ದು ಇದರ ಅರ್ಥ ನಡುಗಡ್ಡೆ ಎಂದು ಹೇಳಿದ್ದರು. ಆದುದರಿಂದ, ಲಕ್ ಪದದ ರೂಪಾಂತರವಾದ  ‘ಲಂಕಾ’ ಪದವು ‘ನಡುಗಡ್ಡೆ’ ಎಂದೇ ಆಗುತ್ತದೆ ಎನ್ನುವುದು ಅವರ ಅಭಿಪ್ರಾಯವಾಗಿತ್ತು. ( ದ್ರಾವಿಡ ಎನ್ನುವುದು ಚಟರ್ಜಿಯವರು ಬಳಸಿದ ಪದ. ಅವರಿಗೆ ಕನ್ನಡದ ಬಗೆಗೆ ವಿಶೇಷವಾಗಿ ಗೊತ್ತಿರಲಿಕ್ಕಿಲ್ಲ. ನನ್ನ ಅಭಿಪ್ರಾಯದ ಮೇರೆಗೆ, ‘ಲಕ್’ ಎನ್ನುವುದು ಕನ್ನಡ ಪದ.)

 

ಲಕ್ಷದ್ವೀಪವು ‘ಲಖ್-ದೀವ್’ ಎನ್ನುವ ಕನ್ನಡ (ಅರ್ಥಾತ್ ದ್ರಾವಿಡ) ಪದದ ಸಂಸ್ಕೃತೀಕರಣ. ಇದರಲ್ಲಿಯ ಲಖ್ ಎನ್ನುವುದು ಕನ್ನಡ ಪದವಾದರೆ, ‘ದೀವ್’ ಎನ್ನುವುದು ‘ದ್ವೀಪ’ ಎನ್ನುವ ಸಂಸ್ಕೃತ ಪದದ ಪ್ರಾಕೃತ ರೂಪ. ಅಂದರೆ, ಲಕ್ ಮತ್ತು ದೀವ್ ಎನ್ನುವ ಎರಡು ವಿಭಿನ್ನ ಭಾಷೆಯ ಪದಗಳನ್ನು ಜೋಡಿಸಿ, ‘ಲಖ್-ದೀವ್’ ಎನ್ನುವ ಜೋಡು ಪದದ ನಿರ್ಮಾಣವಾಗಿದೆ. ಇಂತಹ ಜೋಡು ಪದಗಳು ನಮ್ಮಲ್ಲಿ ಸರ್ವೇಸಾಮಾನ್ಯವಾಗಿವೆ ಹಾಗು ಹೇರಳವಾಗಿವೆ. ಉದಾಹರಣೆಗಳು ಹೀಗಿವೆ: ‘ಗೇಟ್ ಬಾಗಿಲು, ಕ್ಯಾಚ್ ಹಿಡಿ, ಆಕಳ ಗೋಮೂತ್ರ ಇತ್ಯಾದಿ.’ ಒಂದು ಕಾಲದಲ್ಲಿ ವಿಭಿನ್ನ ಭಾಷೆಗಳ ಸಮುದಾಯಗಳು ಒತ್ತಟ್ಟಿಗೆ ಬಂದಾಗ ಇಂತಹ ಜೋಡು ಪದಗಳ ನಿರ್ಮಾಣವು ಅನಿವಾರ್ಯವಾಗಿತ್ತು.

 

ಇನ್ನು ‘ಮಾಲ್ದೀವ್ಸ’ ಪದಕ್ಕೆ ಬರೊಣ. ನಮ್ಮ ಸಂಸ್ಕೃತ ಪಂಡಿತರು, ‘ಮಾಲ್ದೀವ್ಸ್’ ಇದು ‘ಮಾಲಾದ್ವೀಪ’ ಎನ್ನುವ ಸಂಸ್ಕೃತ ಪದದ ಅಪಭ್ರಂಶ ಎನ್ನುವ ನಿರ್ಣಯಕ್ಕೆ ತಟ್ಟನೆ ಜಿಗಿದು ಬಿಡುತ್ತಾರೆ! ಒಂದು ಕಾಲದಲ್ಲಿ ‘ಮಲ್ಲ’ ಎನ್ನುವ ಸಮುದಾಯವು ಭಾರತದ ತುಂಬೆಲ್ಲ ಹರಡಿತ್ತು. ‘ಮಲ್ಲ’ರು ನೇಪಾಳದಲ್ಲಿ ಅರಸರಾಗಿ ಆಳಿದ್ದರು ಹಾಗು ಕುರುಕ್ಷೇತ್ರದ ಯುದ್ಧದಲ್ಲಿ ಭಾಗವಹಿಸಿದ್ದರು ಎನ್ನುವ ಆಖ್ಯಾಯಿಕೆಯನ್ನು ಮಹಾಭಾರತದಲ್ಲಿ ಓದಬಹುದು. ಹೆಸರಾಂತ ದರೋಡೆಖೋರಳಾದ ಫೂಲನ್ ದೇವಿಯು ಮಲ್ಲ ಸಮುದಾಯದವಳು. ಈ ಮಲ್ಲರು ನೀರಿನಲ್ಲಿ ಬೆಳೆಯುವ ನಾರಿನಿಂದ ‘ನಾರುಮಡಿ’ಯನ್ನು ತಯಾರಿಸುತ್ತಿದ್ದರು. ಬಹುಶಃ, ಶ್ರೀರಾಮಚಂದ್ರ, ಲಕ್ಷ್ಮಣ ಹಾಗು ಸೀತಾದೇವಿಯವರಿಗೆ, ವನವಾಸಗಮನ ಸಂದರ್ಭದಲ್ಲಿ ಮಲ್ಲರೇ ನಾರುಮಡಿಯನ್ನು ಕೊಟ್ಟಿರಬಹುದೇನೊ! ಕೇರಳ ರಾಜ್ಯದ ಒಂದು ಜಿಲ್ಲೆಗೆ ಮಲಪ್ಪೂರ ಎನ್ನುವ ಹೆಸರೇ ಇದೆಯಲ್ಲ! ಕರ್ನಾಟಕದಲ್ಲಿಯೇ ‘ಮಲ್ಲ’ ಪದದಿಂದ ಪ್ರಾರಂಭವಾಗುವ ೩೮೫ ಸ್ಥಳಗಳಿವೆ. ಮಹಾರಾಷ್ಟ್ರದಲ್ಲಿ ಮುಂಬಯಿಯ ಹತ್ತಿರ ಇರುವ ‘ಮಲಾಡ’ವು, ಕನ್ನಡದ ‘ಮಲ್ಲಹಾಡಿ’ಯೇ ಹೌದು!. ಅಷ್ಟೇ ಏಕೆ, ನನ್ನ ಅಜ್ಜಿಯು ನಾನು ಚಿಕ್ಕವನಿದ್ದಾಗ, ನನಗೆ ‘ಮಲಪೂರಿ’ ಎನ್ನುವ ಯಕ್ಷಿಣಿಯೊಬ್ಬಳ ಕಥೆಯನ್ನು ಹೇಳುತ್ತಿದ್ದಳು. ಈ ಮಲ್ಲರೇ, ‘ಮಾಲ್ದೀವ್ಸ್’ದ ಮೂಲನಿವಾಸಿಗಳು. ಇವರಿಂದಲೇ ‘ಮಲ್ಲದ್ವೀಪ’ವು ಬಂದಿದ್ದು, ಅದನ್ನು ಸಂಸ್ಕೃತ-ಉತ್ಸಾಹಿಗಳು ‘ಮಾಲಾದ್ವೀಪ’ ಎಂದು ಘೋಷಿಸಿದ್ದಾರೆ. ಆದುದರಿಂದ, ವಿವೇಚನಾಶೀಲರಾದ ನನ್ನ ಕನ್ನಡ ಬಾಂಧವರೇ, ಸಂಸ್ಕೃತದ ಈ ಬಲೆಯಲ್ಲಿ ಕಣ್ಣು ತೆರೆದುಕೊಂಡೇ ಬೀಳದಿರಿ! ಲಕ್ಷದ್ವೀಪವು ‘ಲಕ್-ದೀವ್’ ಹಾಗು ಮಾಲ್ದೀವ್ಸ್ ಇದು ಮಲ್ಲದ್ವೀಪ ಎನ್ನುವುದನ್ನು ಅರಿಯಿರಿ!

Sunday, October 29, 2023

ನ್ಯಾಯಿಕ ಅಸಂವೇದನೆ.

 

ನ್ಯಾಯಿಕ ಅಸಂವೇದನೆ.

 ಬಂಧುಗಳೆ,  ಅಪ್ರಾಪ್ತ ಹೆಂಡತಿಯ ಜೊತೆಗೆ ದೈಹಿಕ ಸಂಬಂಧ ಅತ್ಯಾಚಾರವಲ್ಲ! ಇದು ದೆಹಲಿ ಉಚ್ಚ ನ್ಯಾಯಾಲಯದ ತೀರ್ಪು. ಯಾಕೆ? ಯಾಕೆಂದರೆ, ‘ಆ ಅಪ್ರಾಪ್ತ ಹುಡುಗಿ’ ಅತ್ಯಾಚಾರಿಯ ಹೆಂಡತಿ ಅನ್ನುವ ಸಂಗತಿಯು ನ್ಯಾಯನಿರ್ಣಯದಲ್ಲಿಯ ಸವಲತ್ತಿಗೆ ಕಾರಣವಾಗಿದೆ. ಬಂಧುಗಳೆ, ಹುಡುಗಿ ಹೆಂಡತಿಯಾದರೆ, ಅವಳ ಗಂಡನು ಮಾಡುವ ಹಿಂಸೆಗೆ ‘ಬಾರಾ ಖೂನ್ ಮಾಫ್’ ಎನ್ನಬೇಕೆ? ಇದು ಹೊಡೆತ, ಬಡಿತ, ಅವಮಾನ,  ಗುದಮೈಥುನ, ಮುಖಮೈಥುನ ಮೊದಲಾದ ಅನೈಸರ್ಗಿಕ ಕಾಮಕ್ರೀಡೆಗಳಿಗೂ ಅನ್ವಯಿಸುವುದೆ? ಅಪ್ರಾಪ್ತ ವಯಸ್ಸಿನ ಸುಕೋಮಲ ಹುಡುಗಿ, ಧಡಿಯ ಗಂಡನ ಎಲ್ಲ ತರಹದ ಬಲಾತ್ಕಾರಗಳನ್ನು ಸಹಿಸಿಕೊಳ್ಳಬೇಕೆ? ಇಲ್ಲಿ ಹೇಳಲಾದ ಪ್ರಕರಣದಲ್ಲಿಯ ಅಪ್ರಾಪ್ತೆಯ ವಯಸ್ಸು ನನಗೆ ತಿಳಿದಿಲ್ಲ. ಆದರೆ ಬಂಧುಗಳೆ, ಹಳ್ಳಿಗಳಲ್ಲಿ ಇನ್ನೂವರೆಗೂ ಶಿಶುವಿವಾಹಗಳು, ಬಾಲ್ಯವಿವಾಹಗಳು ನಡೆಯುತ್ತಿವೆ ಎನ್ನುವುದನ್ನು ನೀವು ಅರಿತೇ ಇದ್ದೀರಿ. ಐದು ವರ್ಷದ ಬಾಲೆಯನ್ನು ಹದಿನೈದು ವರ್ಷದ ಹುಡುಗನಿಗೆ ಕೊಟ್ಟು ಮದುವೆ ಮಾಡುವುದು ಇಲ್ಲಿ ಸಾಮಾನ್ಯ ರೂಢಿಯಾಗಿದೆ. ಆತ ಅವಳನ್ನು ಬಲಾತ್ಕರಿಸುವುದು ಸಹಜ ಹಾಗೂ ಸಹಜಮಾನ್ಯ ಸಂಗತಿಯಾಗಿದೆ!

 ನೋಡಿದಿರಾ, ಬಂಧುಗಳೆ? ಈ ಆದೇಶವನ್ನು ನೀಡಿದ ದಿಲ್ಲಿ ಉಚ್ಚ ನ್ಯಾಯಾಲಯದ ನ್ಯಾಯಾಧೀಶರಿಗೆ ಪೋಕ್ಸೋ ಕಾಯದೆಯ ಬಗೆಗೆ ಏನಾದರೂ ತಿಳಿದಿದೆಯೆ? ಪೋಕ್ಸೋ ಕಾಯದೆಯಲ್ಲಿ ಅಪ್ರಾಪ್ತ ವಯಸ್ಸಿನ ಹುಡುಗಿ ಎಂದಷ್ಟೇ ಹೇಳಿದ್ದಾರೆ. ಅವಳಿಗೆ ಹಾಗು ಆರೋಪಿಗೆ ಇರಬಹುದಾದ ಸಂಬಂಧವನ್ನು ಪರಿಗಣಿಸಿಲ್ಲ. ಆದರೆ ದಿಲ್ಲಿ ಉಚ್ಚ ನ್ಯಾಯಾಲಯದ ನ್ಯಾಯಾಧೀಶರಿಗೆ ಇದು ಪ್ರಮುಖ ಮುದ್ದೆಯಾಗಿದೆ!

 ಅಪ್ರಾಪ್ತ ವಯಸ್ಸಿನ ಹುಡುಗಿಯ ಗಂಡನು ಅವಳನ್ನು ದೈಹಿಕ ಸಂಪರ್ಕಕ್ಕೆ ಒತ್ತಾಯಿಸಿದಾಗ, ಆ ಅಪ್ರಾಪ್ತೆಗೆ ನಿರಾಕರಿಸಲು ಧೈರ್ಯವೇ ಆಗುವುದಿಲ್ಲ. ಇದಕ್ಕೆ ಕೆಲವು ಕಾರಣಗಳು ಹೀಗಿವೆ:

(೧) ‘ಒಲ್ಲೆ’ ಎನ್ನಲು ಇರುವ ವೈಯಕ್ತಿಕ ಅಂಜಿಕೆ,

(೨) ತನ್ನ ಅತ್ತೆಮನೆಯವರು ಏನೆನ್ನುವರೋ ಎನ್ನುವ ಹೆದರಿಕೆ,  

(೩) ಗಂಡನ ಮಾತಿಗೆ ಮಣಿಯಲೇ ಬೇಕು ಎನ್ನುವ ಸಾಂಪ್ರದಾಯಿಕ ಮೂಢಭಾವನೆ.

 ಇವೆಲ್ಲವುಗಳ ಒಟ್ಟಾರೆ ಒತ್ತಾಸೆಯಿಂದ ಅಪ್ರಾಪ್ತೆಯು ಗಂಡನ ಬಲಾತ್ಕಾರಕ್ಕೆ ಬಾಯಿ ಮುಚ್ಚಿಕೊಂಡು ತನ್ನ ದೇಹವನ್ನು ಒಪ್ಪಿಸುತ್ತಾಳೆ. ಒಂದು ವೇಳೆ, ಅವಳ ಸ್ವೇಚ್ಛಾಸಮ್ಮತಿ ಇದ್ದರೂ ಸಹ, ಪೋಕ್ಸೋ ಕಾಯದೆಯ  ಪ್ರಕಾರ ಅದು ಬಲಾತ್ಕಾರವಾಗುತ್ತದೆ ಹಾಗು ಆ ಗಂಡಸು ಶಿಕ್ಷಾರ್ಹ ಅಪರಾಧಿಯಾಗುತ್ತಾನೆ ಎನ್ನುವುದು ನಮ್ಮ ನ್ಯಾಯಾಧೀಶರ ನ್ಯಾಯಿಕ ಅರಿವಿಗೆ ಬರಲಿಲ್ಲವೆ?

ಇದು ನ್ಯಾಯಿಕ ಅಸಂವೇದನೆಯಲ್ಲವೆ?

 ಇಂತಹ ಇನ್ನೂ ಹಲವು ಪ್ರಕರಣಗಳಿವೆ. ಮದ್ರಾಸ ಉಚ್ಚ ನ್ಯಾಯಾಲಯವು ಅತ್ಯಾಚಾರಕ್ಕೊಳಗಾದ ಯುವತಿಗೆ ಹೇಳಿದ ‘ಉಪದೇಶ’ವನ್ನಿಷ್ಟು ನೋಡಿರಿ. (ಅಹಾ, ಇದಕ್ಕೆ judicial advice ಎನ್ನಬೇಕೊ ಅಥವಾ senior old man’s  gentlemanly advice ಎನ್ನಬೇಕೊ ನನಗೆ ಗೊತ್ತಾಗುತ್ತಿಲ್ಲ!)

 ಈ ಯುವತಿಯ ಮೇಲೆ ಅತ್ಯಾಚಾರ ಮಾಡಿದ ಯುವಕನು ‘ತಾನು ಅವಳನ್ನು ಮದುವೆಯಾಗಲು ಸಿದ್ಧನಿದ್ದೇನೆ; ಬಲಾತ್ಕಾರದ ಆರೋಪವನ್ನು ಕೈಬಿಡಬೇಕು’ ಎನ್ನುವ ಮನವಿಯನ್ನು ಮಾಡಿಕೊಂಡಿರಬೇಕು. ಆಗ ಘನತೆವೆತ್ತ ನ್ಯಾಯಾಧೀಶರು ಅವಳಿಗೆ, “ಏನಮ್ಮಾ. ಆತನು ನಿನಗೆ ಹೊಸ ಬಾಳನ್ನು ಕೊಡಲು ಸಿದ್ಧನಿದ್ದಾನೆ; ಈ ಪ್ರಕರಣವನ್ನು ಬಿಟ್ಟುಬಿಡೋಣ” ಎಂದು ಹೇಳಿರಬಹುದು!

 ನೋಡಿದಿರಾ ಬಂಧುಗಳೆ. ಇದೀಗ ಆ ಅತ್ಯಾಚಾರಿ ಯುವಕನಿಗೆ ಈ ಹುಡುಗಿಯ ಮೇಲೆ ದಿನವೂ ಅತ್ಯಾಚಾರ ಮಾಡಲು ಇದೀಗ judicial license ಸಿಕ್ಕಿತು. ತನ್ನನ್ನು ಸಾರ್ವಜನಿಕವಾಗಿ ನ್ಯಾಯಾಲಯಕ್ಕೆ ಎಳೆದ ಈ ಅಪ್ರಾಪ್ತೆಗೆ ಬುದ್ಧಿ ಕಲಿಸೋಣವೆಂದು, ಆ ಅತ್ಯಾಚಾರಿ ಯುವಕನು ಅವಳಿಗೆ ದಿನವೂ ಎಂಥೆಂಥಾ ‘ಹೊಸ ಬಾಳನ್ನು’ ಕೊಡುತ್ತಿರಬಹುದು ಎನ್ನುವುದು ಸಾಮಾನ್ಯನ ಊಹೆಗೆ ನಿಲುಕದ ವಿಷಯ!

ನಮ್ಮ ಉದಾರಬುದ್ಧಿಯ ನ್ಯಾಯಾಧೀಶರಿಗೆ ಇದು ಆತ್ಮಸಂತೃಪ್ತಿಯನ್ನು ಕೊಟ್ಟಿರಬಹುದು!

 ಇನ್ನು ನಾನು ಮಾಡಿದ ಟೀಕೆಗಾಗಿ ನನಗೆ ನ್ಯಾಯಾಲಯವು ಶಿಕ್ಷೆ ವಿಧಿಸಿದರೆ, ಅದೂ ಸಹ ನ್ಯಾಯಿಕ ಅಸಂವೇದನೆಯೇ ಆಗಲಿಕ್ಕಿಲ್ಲವೆ!

God, do not forgive them; they knew what they were passing out as justice!

Tuesday, January 28, 2020

`Things fall apart, the center cannot hold’.

`Things fall apart, the center cannot hold’.
ಇದು ಆಂಗ್ಲ ಕವಿ ಯೇಟ್ಸನ ಕವನವೊಂದರ ಸಾಲು.
ಸಾಲನ್ನು ಈಗ ಹೀಗೂ ಹಾಡಬಹುದು:
`ಭಾರತಕೋ ತುಕಡೇ ತುಕಡೇ ಕರೇಂಗೆ!
Let India fall apart!’

ಬಂಗಾಲ ಸರಕಾರವು  ಭಾರತ ದೇಶದ ಲೋಕಸಭೆಯು ಅನುಮೋದಿಸಿದ ಹಾಗು ಇದೀಗ ಶಾಸನವೆಂದು ಅಂಗೀಕೃತವಾದ ನಾಗರಿಕತೆ ಬದಲಾವಣೆ ಶಾಸನವನ್ನು ಒಪ್ಪುವದಿಲ್ಲವೆಂದೂ, ತಮ್ಮ ರಾಜ್ಯದಲ್ಲಿ ಇದನ್ನು ಚಲಾಯಿಸುವದಿಲ್ಲವೆಂದೂ ಹೇಳಿಕೆ ಕೊಟ್ಟಿದೆ. ಬಂಗಾಲವನ್ನು ಅನುಕರಿಸಿ ಇತರ ಭಾಜಪೇತರ ರಾಜ್ಯಗಳೂ ಸಹ ಇಂತಹದೇ ಹೇಳಿಕೆ ಕೊಟ್ಟಿವೆ.

ಕೇರಳದ ಮುಖ್ಯ ಮಂತ್ರಿ ಪಿಣರಾಯಿಯವರು ಭಾರತದ ಹನ್ನೊಂದು ರಾಜ್ಯಗಳಿಗೆ ಈ ಶಾಸನವನ್ನು ಧಿಕ್ಕರಿಸಲು ಕರೆ ಕೊಟ್ಟಿದ್ದಾರೆ! ಹಾಗು ಸರ್ವೋಚ್ಚ ನ್ಯಾಯಾಲಯದ ಬಾಗಿಲನ್ನು ಬಡೆದಿದ್ದಾರೆ. ಈ ಶಾಸನದ ವಿರೋಧಿಗಳು ಕೊಡುವ ಕಾರಣವೇನೆಂದರೆ, ಈ ಶಾಸನವು ಅಲ್ಪಸಂಖ್ಯಾಕರ ವಿರೋಧಿಯಾಗಿದೆ ಎನ್ನುವುದು. ಆದರೆ ಭಾರತದ ನೆರೆಹೊರೆಯ ದೇಶಗಳಲ್ಲಿ ಇದ್ದಂತಹ ಹಾಗು ಧಾರ್ಮಿಕ ದೌರ್ಜನ್ಯಕ್ಕೆ ಒಳಗಾದಂತಹ, ಈ ದೇಶದಲ್ಲಿ ಈಗಾಗಲೇ ಐದು ವರ್ಷಗಳ ವರೆಗೆ ಇದ್ದಂತಹ ಪರದೇಶೀ ಅಲ್ಪಸಂಖ್ಯಾಕರಿಗೆ ಮಾತ್ರ ಭಾರತದಲ್ಲಿ ಆಶ್ರಯ ಕೊಡುವುದು ಈ ಕಾನೂನಿನ ಉದ್ದೇಶವಾಗಿದೆ. ಭಾರತದಲ್ಲಿ ಇರುವ ಧಾರ್ಮಿಕ ಅಲ್ಪಸಂಖ್ಯಾಕರಿಗೆ ಹಾಗು ಬಹುಸಂಖ್ಯಾಕರಿಗೆ  ಇದು ಸಂಬಂಧವೇ ಇಲ್ಲದ ವಿಷಯ! ಹಾಗಿದ್ದರೆ ಭಾರತಿಯ ಧಾರ್ಮಿಕ ಅಲ್ಪಸಂಖ್ಯಾಕರಿಗೆ ಕಣ್ಕಟ್ಟು ಮಾಡುವ ಈ ಹೋರಾಟಗಳು ಏತಕ್ಕಾಗಿ? ಬಹುಶ: ಈ ತಪ್ಪು ಪ್ರಚಾರದಿಂದ ಮರುಳಾದ ಭಾರತೀಯ ಅಲ್ಪಸಂಖ್ಯಾತರು ಮುಂದಿನ ಚುನಾವಣೆಗಳಲ್ಲಿ ತಮ್ಮ ಪಕ್ಷಕ್ಕೇ ಮತ ಹಾಕಬಹುದು ಎನ್ನುವ ತರ್ಕ ಇಲ್ಲಿದೆಯೆ?

ಭಾರತದ ಆಧುನಿಕ ಸಂವಿಧಾನವು ಧರ್ಮನಿರಪೇಕ್ಷವಾಗಿದೆ ಹಾಗು ಕೇವಲ ಆ ಕಾರಣಕ್ಕಾಗಿಯೇ ಆಧುನಿಕ ಭಾರತವು ಧರ್ಮನಿರಪೇಕ್ಷವಾಗಿರತಕ್ಕದ್ದು ಎಂದು ಕೆಲವರು ಹೇಳುತ್ತಿದ್ದಾರೆ. ಬಂಧುಗಳೆ, ಆಧುನಿಕ ಸಂವಿಧಾನವು ಬರುವ ಸಾವಿರಾರು ವರ್ಷಗಳ ಪೂರ್ವದಿಂದಲೂ ಭಾರತವು ಧರ್ಮನಿರಪೇಕ್ಷವಾಗಿಯೇ ಇದೆ. (ಅದೇ ತಪ್ಪಾಯಿತು, ಎನ್ನುತ್ತೀರಾ!) ಭಾರತದ ಮೇಲೆ ತುರ್ಕಸ್ತಾನ, ಅರಬಸ್ತಾನ ಮೊದಲಾದ ಪಶ್ಚಿಮೋತ್ತರ ಹಾಗು ನಿಕಟಪಶ್ಚಿಮದ ಕಾಡುಜನರು ದಾಳಿ ಮಾಡಿ, ಭಾರತವನ್ನು ಆಕ್ರಮಿಸಿ, ತಮ್ಮ ಆಡಳಿತವನ್ನು ಸ್ಥಾಪಿಸಿದ ಬಳಿಕವೇ ಇಲ್ಲಿ ಹಿಂಸಾತ್ಮಕ ಧರ್ಮಾಂತರ ಹಾಗು ಧಾರ್ಮಿಕ ಕ್ರೌರ್ಯ ಪ್ರಾರಂಭವಾಯಿತು. ಹಾಗಿದ್ದರೂ ನಮ್ಮ ಬುದ್ಧಿಜೀವಿಗಳು ಪ್ರಚುರಿಸುತ್ತಿರುವ ಕೆಲವು ಜಾಣಸುಳ್ಳುಗಳನ್ನು ನೋಡಿರಿ. ನಮ್ಮ ಜ್ಞಾನಪೀಠಿ ಕಾರ್ನಾಡರು ಟೀಪೂಸುಲ್ತಾನನನ್ನು ವೈಭವೀಕರಿಸಿ ಒಂದು ನಾಟಕವನ್ನು ಬರೆದಿದ್ದಾರೆ. ಓರ್ವ ಪತ್ರಕರ್ತರು  ‘ಟೀಪೂಸುಲ್ತಾನನು ಮತಾಂಧನಾಗಿದ್ದನಲ್ಲವೆ’ ಎಂದು ಪ್ರಶ್ನಿಸಿದಾಗ, ಕಾರ್ನಾಡರು ಹೇಳಿದ್ದು ಹೀಗಿದೆ: ‘There was no concept of secularism at that time!’

ವಾಹ್! ಜ್ಞಾನಪೀಠಿಗಳೇ! ಟೀಪೂಸುಲ್ತಾನನಿಗಿಂತಲೂ ಸುಮಾರು ಎರಡುನೂರು ವರ್ಷಗಳಷ್ಟು ಮೊದಲೇ ವಿಶಾಲ ಕರ್ನಾಟಕದ ಸಾಮ್ರಾಟನಾಗಿದ್ದ ಕೃಷ್ಣದೇವರಾಯನು ವಿಜಯನಗರದಲ್ಲಿ ಮುಸಲ್ಮಾನರಿಗಾಗಿ ಮಸೀದಿಗಳನ್ನು ಕಟ್ಟಿಸಿಕೊಟ್ಟಿದ್ದನು ಎನ್ನುವುದು ನಿಮಗೆ ಗೊತ್ತಿರಲಿಕ್ಕಿಲ್ಲವೆ ಅಥವಾ ಇದು ಜಾಣ ವಿಸ್ಮರಣೆಯೆ? ಅಥವಾ ಟೀಪೂನ ಹಾಗು ಅವನಂಥವರ ಕಾಲಖಂಡದಲ್ಲಿ secularism concept ಅಳಿಸಿ ಹೋಯಿತೆ?
 
ಭಾರತದ ಸರ್ವಾಂಗೀಣ ಬೆಳವಣಿಗೆಗೆ ವಿವಿಧ ರಾಜ್ಯಗಳ ಕನಸುಗಳು ಹಾಗು ಆಲೋಚನೆಗಳು ಏನಿವೆ ಎನ್ನುವುದನ್ನು ಅರಿತುಕೊಂಡು ಅವುಗಳನ್ನು ಅಭಿವೃದ್ಧಿನೀತಿಯಲ್ಲಿ ಅಳವಡಿಸಿಕೊಳ್ಳೋಣ ಎನ್ನುವ ಕಾರಣಕ್ಕಾಗಿಯೇ ಪ್ರಧಾನಮಂತ್ರಿಯವರುನೀತಿ ಆಯೋಗವನ್ನು ಸ್ಥಾಪಿಸಿದರು. ನೀತಿ ಆಯೋಗ ಮೊದಲ ಸಭೆಯನ್ನು ಪ್ರಧಾನಿಯವರು ಫೆಬ್ರುವರಿ ೨೦೧೫ರಲ್ಲಿ ಕರೆದಿದ್ದರು.   ಸಭೆಗೆ ಕೆಲವು ರಾಜ್ಯಗಳ ಮುಖ್ಯ ಮಂತ್ರಿಗಳು ಉಪಸ್ಥಿತರಾಗಲಿಲ್ಲ.

ದೇಶದ ಪ್ರಗತಿಗಾಗಿ ವಿಚಾರವಿನಿಮಯ ಮಾಡಬಯಸುವ ಒಂದು ಸಭೆಯ ಮೊದಲ ಕಾರ್ಯಕ್ರಮಕ್ಕೆ ತರಹದ ಪ್ರತಿರೋಧ ಏಕೆ? ಭಾರತವುಸಹಕಾರಿ ಒಕ್ಕೂಟಎಂದು ತೆರಪಿಲ್ಲದೆ ಸಾರುತ್ತಿರುವವರು ಕೇಂದ್ರ ಸರಕಾರಕ್ಕೆ ಅಸಹಕಾರ ತೋರುತ್ತಿರುವ ಕಾರಣವೇನು?  ಸಮಗ್ರ ಭಾರತದ ಪ್ರಧಾನಿಯವರನ್ನು ತಿರಸ್ಕರಿಸುವ ಮೂಲಕ ಇವರು ಯಾವ ಸಂದೇಶವನ್ನು ಭಾರತೀಯರಿಗೆ ಕೊಡಲು ಬಯಸುತ್ತಿದ್ದಾರೆ? `ಭಾರತಕೋ ತುಕಡೇ ತುಕಡೇ ಕರೇಂಗೆ! Let India fall apart!’ ಎನ್ನುವುದು ಇವರ ಆಶಯವಾಗಿರಬಹುದೆ?

ಪ್ರಧಾನಿಯವರು ಬಾಂಗ್ಲಾ ದೇಶದ ಜೊತೆಗೆ ನದೀನೀರಿನ ಒಪ್ಪಂದ ಮಾಡಿಕೊಳ್ಳಲು ಕೋಲಕತ್ತೆಗೆ ಹೋಗಿದ್ದರು. ಸಂದರ್ಭದಲ್ಲಿ ಒಪ್ಪಂದವು ಸುಲಭವಾಗಲಿಲ್ಲ ; ಬಂಗಾಲದ ಮುಖ್ಯ ಮಂತ್ರಿಗಳು ಒಪ್ಪಂದಕ್ಕೆ ಅನುಕೂಲರಿರಲಿಲ್ಲ ಎಂದು ಹೇಳಲಾಗುತ್ತದೆ. ತಮ್ಮ ರಾಜ್ಯದ ಹಿತವು ಬೇರೆಯಾಗಿದೆ ಎಂದು ಅವರು ಭಾವಿಸಿದ್ದರೆಂದು ಹೇಳಲಾಗುತ್ತದೆ. ಅಥವಾ ಬಂಗಾಲದ ಮುಖ್ಯ ಮಂತ್ರಿಗಳು ಭಾರತದ ಪ್ರಧಾನಿಗೆ,  ‘ನನ್ನೆದುರಿಗೆ ನೀನ್ಯಾವ ಬಾಜೀರಾಯ!’ ಎಂದು ಸವಾಲು ಹಾಕಿದರು ಎಂದೂ ಕೆಲವರು ಹೇಳುತ್ತಾರೆ . ಏತಕ್ಕಾಗಿ ಸವಾಲು? ಪ್ರಧಾನ ಮಂತ್ರಿಗಳನ್ನು ಧಿಕ್ಕರಿಸುವುದರಿಂದ ತಮ್ಮ ರಾಜ್ಯದಲ್ಲಿ ತಮಗೊಂದು ರಾಜಕೀಯ ಪ್ರಭಾವಳಿ ಸಿಗುತ್ತದೆ ಎನ್ನುವ ತರ್ಕ ಇಲ್ಲಿರಬಹುದೆ? ಅಥವಾ ಇದು Let India fall apart ಎನ್ನುವುದರ ಪೂರ್ವಭಾವೀ ಪ್ರಯತ್ನವಾಗಿರಬಹುದೆ?!

ಕೇಂದ್ರ ಸರಕಾರದ ವಿಚಕ್ಷಣಾ ಪಡೆಯು (ಸಿ.ಬಿ.ಬಂಗಾಲದ ಓರ್ವ ಪೋಲೀಸ ಅಧಿಕಾರಿಯನ್ನು ವಿಚಾರಣೆಗೆ ಒಳಪಡಿಸಲು ಬಂದಾಗ, ಬಂಗಾಲ ಸರಕಾರವು ಕಾರ್ಯಕ್ಕೆ ಎನಿತೂ ಸಹಕಾರ ನೀಡಲಿಲ್ಲ. ಸರ್ವೋಚ್ಚ ನ್ಯಾಯಾಲಕ್ಕೆ ಕೇಂದ್ರ ಸರಕಾರವೂ ಹೆದರುತ್ತದೆ. ಅಂತಹದರಲ್ಲಿ ಬಂಗಾಲ ಸರಕಾರವು ಸರ್ವೋಚ್ಚ ನ್ಯಾಯಾಲಕ್ಕೆ ಸ್ವಲ್ಪವೂ ಬೆದರದೆ, ರಾಜಕುಮಾರನನ್ನು ತಮ್ಮ ಕಣ್ಣು ರೆಪ್ಪೆಯ ಕೆಳಗೆ ಕಾಯ್ದರು. ಏತಕ್ಕಾಗಿ ಅಸಹಕಾರ? ಇದರ ಅರ್ಥ ಹೀಗಿರಬಹುದೆ: ಬಂಗಾಲಿಗಳೇ, ನೀವು ಭಾರತದ ಪ್ರಜೆಗಳಲ್ಲ; ನೀವು ಬಂಗಾಲದ ಪ್ರಜೆಗಳು ಹಾಗು ಬಂಗಾಲವನ್ನು `ನಾವು ಆಳುತ್ತಿದ್ದೇವೆ!

JNUದಲ್ಲಿ ‘ಭಾರತದ ತುಕಡೆ ತುಕಡೆ’ ಆಂದೋಲನ; ಇದೀಗ ಅಲ್ಲಿಯೇ CAAದ ವಿರುದ್ಧ ಘರ್ಷಣೆ! ‘ನಾವೂ ಇಂಡಿಯನ್ಸ; ನಮಗೆ ರಾಷ್ಟ್ರಭಕ್ತಿಯನ್ನು ನೀವು ಕಲಿಸಬೇಕಾಗಿಲ್ಲ’ ಎನ್ನುವುದು ಈ ಹೋರಾಟಗಾರರ ಹಾಗು ಅವರನ್ನು ಬೆಂಬಲಿಸುವ ರಾಜಕಾರಣಿಗಳ ವಿತಂಡವಾದದ ಬೊಬ್ಬೆ! 

ವಾಸ್ತವದಲ್ಲಿ ‘ರಾಷ್ಟ್ರಭಕ್ತಿ’ ಎನ್ನುವುದು ಇರುವುದೇ ಇಲ್ಲ. ರಶಿಯಾದ ಖ್ಯಾತ ಪ್ರಾಣಿವರ್ತನಾ ವಿಜ್ಞಾನಿಯಾದ ಪಾವ್ಲೋವನು `ರಾಷ್ಟ್ರಭಕ್ತಿಯು ನಿರಂತರವಾದ ಪ್ರಯತ್ನಗಳ ಮೂಲಕ ಕಲಿಸಬೇಕಾದ ವರ್ತನೆಯಾಗಿದೆ’ ಎಂದಿದ್ದಾನೆ. (Patriotizm-operantnaya-reaktsiya = Patriotism is an operant conditioned reaction). 
ಖಂಡಿತವಾಗಿಯೂ ಇದು ಸತ್ಯ. ರಾಷ್ಟ್ರಭಕ್ತಿಯು ಕಲಿಕಾವರ್ತನೆಯಾಗಿದೆ. ಆದರೆ ಸ್ವಾರ್ಥವನ್ನು ಕಲಿಸಬೇಕಾಗಿಲ್ಲ. Selfishness is an instinct! 

ನಮ್ಮ ದೇಶ ಉಳಿದರೆ ತಾನೇ ನಾವೂ ಉಳಿಯುವುದು; ಆದುದರಿಂದ ನಾವು ದೇಶಭಕ್ತಿಯನ್ನು ನಮ್ಮ ಪ್ರಜೆಗಳಿಗೆ ಬಾಲ್ಯದಿಂದಲೇ ಒತ್ತಾಯದ ಪ್ರಯತ್ನಗಳ ಮೂಲಕ ಕಲಿಸಲೇಬೇಕಾಗುತ್ತದೆ. ಆ ಕಾರಣಕ್ಕಾಗಿಯೇ ‘ಜೈಹಿಂದ್ ; ವಂದೇ ಮಾತರಮ್’ ಮೊದಲಾದ ಘೋಷಣೆಗಳು ಬೇಕಾಗುತ್ತವೆ. ಆದರೆ ನಮ್ಮವರೇ ಆದ ಕೆಲವು ಭಾರತೀಯರು ‘ಇದು ನಮ್ಮ ಧರ್ಮಾಚಾರದ ವಿರುದ್ಧ; ಆದುದರಿಂದ ನಾವು ‘ವಂದೇ ಮಾತರಮ್’ ಎನ್ನುವುದಿಲ್ಲ ಎನ್ನುವ ವಿಚಿತ್ರ ತರ್ಕವನ್ನು ಪ್ರತಿಪಾದಿಸುತ್ತಾರೆ. ವಿಶ್ವದ ಅನೇಕ ರಾಷ್ಟ್ರಗಳಲ್ಲಿ ಸೈನಿಕ ಶಿಕ್ಷಣ ಹಾಗು ಅಲ್ಪಕಾಲೀನ ಸೈನ್ಯವೃತ್ತಿ ಅಲ್ಲಿಯ ಯುವಕರಿಗೆ ಕಡ್ಡಾಯವಾಗಿದೆ ಎನ್ನುವುದು ಉದಾರಭಾರತದಲ್ಲಿ ವಾಸಿಸುತ್ತಿರುವ ನಮ್ಮವರಿಗೆ ತಿಳಿದಿಲ್ಲ!

ಅಣ್ಣಗಳಿರಾ, ನಮ್ಮ ದೇಶದ ವಿರೋಧಿಗಳಾದ ನಮ್ಮ ನೆರೆಹೊರೆಯವರು ನಮ್ಮ ನಾಶಕ್ಕೆ ಬೆಂಕಿಯನ್ನು ಉಗುಳುತ್ತ ನಿಂತುಕೊಂಡಿದ್ದಾರೆ. ಭಾರತವು ನಾಶವಾಗಿ ಹೋದರೆ, ಯಾವ ಭಾರತೀಯನೂ (-ಯಾವುದೇ ಧರ್ಮದವನಾಗಿರಲಿ-)
 ಉಳಿಯುವುದಿಲ್ಲ. ಯಾರಾದರೂ ಉಳಿದುಕೊಂಡರೆ, ಅವರು ನೆರೆಯ ದೇಶಗಳ ಗುಲಾಮರಾಗಿ, ಹಂದಿಗಳ ಕೊಟ್ಟಿಗೆಯಲ್ಲಿ ಬದುಕಬೇಕಾಗುತ್ತದೆ, ಅಷ್ಟೆ!

ಯೇಟ್ಸನ ಕವನವು ಭಾರತಕ್ಕೆ ಭವಿಷ್ಯವಾಣಿಯಾದೀತೆ?

Friday, January 17, 2020

ವಿಶ್ವವಾಣಿ ಪತ್ರಿಕೆಯ ಸಂಪಾದಕರಿಗೆ,

ವಿಶ್ವವಾಣಿ ಪತ್ರಿಕೆಯ ಸಂಪಾದಕರೆ,
ನಾನು ಮೆಚ್ಚುವ ದಿನಪತ್ರಿಕೆಗಳಲ್ಲಿವಿಶ್ವವಾಣಿಯೂ ಒಂದು. ಇದಕ್ಕೆ ಕಾರಣ ವಿಶ್ವವಾಣಿಯಲ್ಲಿ ಕಂಡು ಬರುವ ಜಾಣಹಾಸ್ಯ. ಇದು ಅನೇಕ ಸಲ ಯಾರ್ಯಾರೋ ವ್ಯಕ್ತಿಗಳ ಹುಳಕನ್ನು ಪ್ರದರ್ಶಿಸುವ ಸಲುವಾಗಿಯೂ ಬಳಕೆಯಾಗುತ್ತಿದೆ. ಅದರಲ್ಲೇನೂ ತಪ್ಪಿಲ್ಲ ಬಿಡಿ; ಆದರೆ ಇದು ವಿನಾಕಾರಣ ವ್ಯಕ್ತಿನಿಂದನೆಯಾಗಬಾರದಷ್ಟೆ? ಹಾಗಾದಾಗ ವಿಶ್ವವಾಣಿಗೆ ಪೀತಪತ್ರಿಕೆ ಎನ್ನುವ ಬಿರುದು ಬರಲಿಕ್ಕಿಲ್ಲವೆ? ೧೭--೨೦ರ ಪತ್ರಿಕೆಯನ್ನು ನೋಡಿದಾಗ ಇಂತಹ ಭಾವನೆಯೊಂದು ನನ್ನ ಮನದಲ್ಲಿ ಸುಳಿದು ಹೋಯಿತು.

ವಿಶ್ವವಾಣಿಯ ಮುಖಪುಟದಲ್ಲಿಯೇ ಸಲ ಒಂದುಸುದ್ದಿ+ಟೀಕೆಪ್ರಕಟವಾಗಿದೆ. ಅದು ಹೀಗಿದೆ:

ಸಮಾಚಾರಕ್ಕೆ ಕೊಡಲಾದ ಶೀರ್ಷಿಕೆಯೆ ನನ್ನಲ್ಲಿ ಅಸಹ್ಯವನ್ನು ಹುಟ್ಟಿಸಿತು. ‘ಅಲ್ಲಾಡಿಸ್ತೀರಿಪದದ ಅರ್ಥವೇನು? ……..ತಲೆಯನ್ನೆ?.... ಸುದ್ದಿಯ ತಿರುಳು ಇದಕ್ಕೆ ವಿರುದ್ಧವಾಗಿದೆ; ಹಾಗಾದರೆ ಇದು ಪೃಷ್ಠವನ್ನು ಸೂಚಿಸುತ್ತಿರಬಹುದೆಓದುಗನಾದ ನನಗಂತೂ ತಿಳಿಯದು. ಸಂಪಾದಕರೇ ಹೇಳಬೇಕು! ಇನ್ನೂ ಕೆಳಮಟ್ಟಕ್ಕೆ ಇಳಿದು ಕೇಳಬಹುದಾದರೆ ಇದು ನಾಯಿಯ ಬಾಲವನ್ನು ಸೂಚಿಸುತ್ತಿದೆಯೆ? ಆದರೆ ಇದು ಒಂದು ಗಂಭೀರ ಪತ್ರಿಕೆಯು ಮುಖಪುಟದಲ್ಲಿ ಕೊಡಬಹುದಾದ ಶೀರ್ಷಿಕೆಯಂತೆ ನನಗೆ ಅನಿಸುತ್ತಿಲ್ಲ. ಹಾಗಾದರೆ ಇದು ಬಹುಶಃ ಆಧುನಿಕ ಪತ್ರಿಕಾಕಾರರ ಅಪರಿಮಿತ ಭಾಷಾಸ್ವಾತಂತ್ರ್ಯವಿರಬಹುದೇನೊ?

ವರದಿಯನ್ನು ಬರೆದ ಶ್ರೀ ಜಯವೀರ ವಿಕ್ರಮ ಸಂಪತ್ ಗೌಡರು ಸುರೇಶಕುಮಾರರನ್ನುಸುರೇಶಕ್ರಮಎಂದು ಕರೆದಿದ್ದಾರೆ. ಏಕೆಂದರೆ ಮಂತ್ರಿಗಳು ಎಲ್ಲರ ಮೇಲೂ  ಕ್ರಮಜರುಗಿಸುತ್ತಾರಂತೆ! ಜಯವೀರ ವಿಕ್ರಮ ಸಂಪತ್ ಗೌಡರು ವರದಿ ಮಾಡಿದ ಘಟನೆಯಲ್ಲಿ , ಕುಣಿದು ಕುಪ್ಪಳಿಸಿದ ಶಿಕ್ಷಕಿಯರು ಯಾವುದೇ ಅಪರಾಧ ಮಾಡಿಲ್ಲವಂತೆ; ಅವರು ಅನುಸರಿಸಿದ ಹಾಡಿನಲ್ಲಿ ಯಾವುದೇ ಅಶ್ಲೀಲತೆ ಇಲ್ಲವಂತೆ; ಅಲ್ಲಲ್ಲಿ ಅಲ್ಪ ಸ್ವಲ್ಪ ಡಬಲ್ ಮೀನಿಂಗ್ ಇರಬಹುದಂತೆ! ಇಂತಹ ಕಾರ್ಯಕ್ರಮಗಳನ್ನು  ಸಾರ್ವಜನಿಕರು ತಮ್ಮ ಟೀವಿಯಲ್ಲಿ ನೋಡುವುದಿಲ್ಲವೆ? (ನೋಡಿಯೇ ನೋಡುತ್ತಾರೆ ಎಂದು ಗ್ರಹಿಸಿಕೊಳ್ಳಿರಿ!) ವಿದ್ಯಾರ್ಥಿಗಳು ಅಲ್ಲಿ ಕೆಟ್ಟಿಲ್ಲ ಅಂದರೆ ಇಲ್ಲಿಯೂ ಸಹ (ತಮ್ಮ ಶಿಕ್ಷಕಿಯರ ಕುಣಿತವನ್ನು ನೋಡಿಯೂ ಸಹ) ಕೆಡಲಾರರು ಎನ್ನುವುದು ಜಯವೀರ ವಿಕ್ರಮ ಸಂಪತ್ ಗೌಡರ ತರ್ಕ.

ವಿಶ್ವವಾಣಿಯ ಸಂಪಾದಕರೆ, ನೀವು ಇತ್ತೀಚೆಗೆ ರಸ್ತೆಯ ಮೇಲೆ ಓಡಾಡುತ್ತಿರುವ ಹದಿಹರೆಯದ ಹುಡುಗರ ಗುಂಪುಗಳನ್ನು ನೋಡಿರುವುರಾ? ಐದಾರು ಹುಡುಗರ ಗುಂಪಿನಲ್ಲಿ ಒಬ್ಬನ ಅಥವಾ ಇಬ್ಬರ ಕೈಗಳಲ್ಲಿ ಬೆಲೆ ಬಾಳುವ ಸ್ಮಾರ್ಟ ಫೋನ್ಹುಡುಗರೆಲ್ಲರೂ ಸ್ಮಾರ್ಟ ಫೋನ್ ನೋಡುತ್ತ ಹೊಲಸು ಹೊಲಸು ಮಾತುಗಳನ್ನು ಆಡುತ್ತ ನಡೆಯುತ್ತಿರುತ್ತಾರೆ. ಕೆಲವೊಮ್ಮೆ ಅವರು ಹೇಳುವ ಮಾತು ಹೀಗೂ ಇರುತ್ತದೆ: ‘, ನಾ ಆಕಿನ್ನ ಕರದೇನ್ಲೆ. ಆಕಿ ಇಂಥಲ್ಲಿ ಬರತೇನಂತ ಹೇಳ್ಯಾಲಲೆ.’ ನಮ್ಮ ಹುಡುಗರ ಸದ್ಯದ ನೈತಿಕ ಮಟ್ಟ ಇದು. ಗೌಡರೆ, ನೀವು ಇದನ್ನು ಸಮರ್ಥಿಸುತ್ತೀರಾ? ಇಂತಹ ಹುಡುಗರೆ ನಂತರದಲ್ಲಿ ಅಸಹಾಯಕ ಬಾಲಕಿ ಸಿಕ್ಕಾಗ ರೇಪ್ ಮಾಡುವವರು; ಸಂತ್ರಸ್ತೆ ತಮ್ಮ ಗುರುತು ಹೇಳಬಹುದೆನ್ನುವ ಹೆದರಿಕೆಯಲ್ಲಿ ಅವಳನ್ನು ಭೀಕರವಾಗಿ ಕೊಲೆ ಮಾಡುವವರು. ಇವರೇ ನಿರ್ಭಯಾಳ ಅತ್ಯಾಚಾರಿ ಹಾಗು ಕೊಲೆಗಾರರು. ಇವರಿಗೆ ಇಂತಹ ಶಿಕ್ಷಣವನ್ನು ಯಾರು ನೀಡುತ್ತಿದ್ದಾರೆ, ಗೌಡರೆ? ಅವರ ಪರಿಸರವೆ ಅಂದರೆ ಪಾಠಶಾಲೆಯೆ ಇದಕ್ಕೆ ಕಾರಣವಲ್ಲವೆ?

ನನ್ನ ನಿವಾಸದ ಸ್ವಲ್ಪ ಕೆಳಗೆ ಒಂದು ಹಣಮಪ್ಪನ ಸ್ವಲ್ಪ ದೊಡ್ಡ ಗುಡಿಯಿದೆ. ಅಲ್ಲಿ ರೈತರು ಹಾಗು ಕಾರ್ಮಿಕರು ಕೂತು, ಹರಟೆ ಹೊಡೆದು ಹೋಗುತ್ತಿರುತ್ತಾರೆ. ಕೆಲವು ದಿನಗಳ  ಹಿಂದೆ ಒಂದು ಸಾರ್ವಜನಿಕ ಪ್ರದರ್ಶನ ಅಲ್ಲಿ ನಡೆದಿತ್ತು. ಒಬ್ಬ ಪುಟ್ಟ ಹುಡುಗಿ ಹಾಗು ಒಬ್ಬ ಹದಿಹರೆಯದ ಹುಡುಗ , ಯಾವುದೋ ಸಿನಿಮಾ ಹಾಡಿಗೆ, ತಮ್ಮ ಮೈ ಕೈ ಕುಣಿಸುತ್ತ ಅಸಹ್ಯವಾಗಿ ಕುಣಿಯುತ್ತಿದ್ದಾರೆ. ಕೂಡಿದ ಸಾರ್ವಜನಿಕರಿಂದ ಸೀಟಿ ಹಾಗು ಚಪ್ಪಾಳೆಗಳ ಮೆಚ್ಚುಗೆ. ಇದಕ್ಕೆ ಕಾರಣವೆಂದರೆ ಯಾವ ಗುಡಿ ಗುಂಡಾರಗಳಲ್ಲಿ ಒಂದು ಕಾಲಕ್ಕೆ ಹಳ್ಳಿಗರುಸತ್ಯ ಹರಿಶ್ಚಂದ್ರನಂತಹ ಬಯಲಾಟಗಳನ್ನು ಆಡುತ್ತಿದ್ದರೊ, ಅಲ್ಲೀಗ ಅನೈತಿಕ ಕುಣಿತ ನಡೆಯುತ್ತಿದೆ. ಇಂತಹದನ್ನು ಹುಡುಗರು ಕಲಿಯುವುದು ಟೀವೀ ಹಾಗು ಸ್ಮಾರ್ಟಫೋನುಗಳಿಂದ. ಇದಕ್ಕೆ ಪ್ರೋತ್ಸಾಹ ಕೊಡುವವರು ನಮ್ಮ ಶಿಕ್ಷಕಿಯರು ಹಾಗು ಕೆಲವಾರು ಪತ್ರಕರ್ತರು.

ಭಲೇ ಜಯವೀರ ವಿಕ್ರಮ ಸಂಪತ್ ಗೌಡರೆ! ಸುರೇಶಕುಮಾರರು ನಮ್ಮೆಲ್ಲ ರಾಜಕಾರಣಿಗಳಲ್ಲಿಯೇ ಸಭ್ಯ ಹಾಗು ಸುಸಂಸ್ಕೃತ ಎಂದು ಹೆಸರಾದವರು. ನಾವು ಕಟ್ಟಬೇಕಾದ ಭಾರತವು ಸುಸಂಸ್ಕೃತವಾದ ಆಧುನಿಕ ಭಾರತ ಎಂದು ಅರಿತವರು. ಅವರ ಜೊತೆಗೆ ನೀವು ಕೈಕೂಡಿಸದಿದ್ದರೆ ಬೇಡ, ಅವರ  ಕಾಲೆಳೆಯದಿದ್ದರೆ ಸಾಕು!
-ಸುನಾಥ