Saturday, November 8, 2008

ಸಾಚಾರ ಸಮಿತಿಯ ಒಡಕು ತಂಬೂರಿ

ಭಾರತೀಯ ಸಂಗೀತದಲ್ಲಿ ತಂಬೂರಿಗೆ ಮಹತ್ವದ ಸ್ಥಾನವಿದೆ. ಗಾಯಕನಿಗೆ ಸ್ವರ ಹೊಂದಿಸಿಕೊಳ್ಳಲು ತಂಬೂರಿ ಬೇಕೆ ಬೇಕು. ಇಂತಹ ತಂಬೂರಿಯಲ್ಲಿ ನಾಲ್ಕು ತಂತಿಗಳಿರುತ್ತವೆ. ತಂಬೂರಿಯಿಂದ ಸುಸ್ವರದ ಆಲಾಪ ಬರಬೇಕಾದರೆ, ಈ ನಾಲ್ಕೂ ತಂತಿಗಳಿಂದ ಮಧುರವಾದ ಒಂದೇ ಸ್ವರ ಬರಬೇಕು. ಹಾಗಿಲ್ಲದೆ, ಒಂದೊಂದು ತಂತಿಯಿಂದ ಒಂದೊಂದು ಸ್ವರ ಬಂದರೆ ಕರ್ಕಶ ಧ್ವನಿ ಕೇಳಿಸುವದು. ನಮ್ಮ ಭಾರತವೆನ್ನುವ ತಂಬೂರಿಗೆ ನಾಲ್ಕಲ್ಲ, ನೂರಾರು ತಂತಿಗಳಿವೆ. ಪ್ರತಿಯೊಂದು ತಂತಿಯೂ ಝೇಂಕಾರದ ಬದಲು ಠೇಂಕಾರವನ್ನು ಮಾಡುತ್ತಿದೆ. ಇಂತಹ ಅಪಲಾಪವನ್ನು ಬೆಂಬಲಿಸುವ ಬುದ್ಧಿಜೀವಿಗಳು, “ಭಾರತವು ಒಂದು ಬಹುಸಂಸ್ಕೃತಿಯ ರಾಷ್ಟ್ರ” ಎಂದು ಬೊಬ್ಬೆಯಿಡುತ್ತಿದ್ದಾರೆ.

ಭಾರತವು ಬಹುಸಂಸ್ಕೃತಿಯ ರಾಷ್ಟ್ರವಲ್ಲ, ಇದು ವೈವಿಧ್ಯಮಯವಾದ ರಾಷ್ಟ್ರ. ಭಾರತೀಯನೊಬ್ಬನು ಪರದೇಶಕ್ಕೆ ಹೋದರೆ, ಅವನ ಭಾಷೆ, ಧರ್ಮ, ವೇಷಭೂಷಣ ಏನೆ ಇರಲಿ, ಅವನನ್ನು ಭಾರತೀಯನೆಂದೇ ಗುರುತಿಸುತ್ತಾರೆಯೇ ಹೊರತು ಅವನನ್ನು ತಮಿಳಿಗ, ಬಂಗಾಲಿ, ಹಿಂದೂ ಅಥವಾ ಮುಸ್ಲಿಮ್ ಎಂದಲ್ಲ.

[ಟಿಪ್ಪಣಿ:
ಶಾಂತಿಯುತ ಸಹಬಾಳ್ವೆ ನಡೆಸುತ್ತಿದ್ದ ಜನಕುಲಗಳು ಪ್ರಾಚೀನ ಭಾರತದಲ್ಲಿ ಎಲ್ಲೆಡೆಯೂ ನೆಲೆಸಿದ್ದವು.
ಇಂದು ಓಡಿಸಾದಲ್ಲಿ ಜಗಳಾಡುತ್ತಿರುವ ಪಣ ಮತ್ತು ಕಂದ ಆದಿವಾಸಿಗಳು ಒಂದು ಕಾಲದಲ್ಲಿ ಭಾರತದಲ್ಲೆಲ್ಲ ಹರಡಿಕೊಂಡಿದ್ದರು. ಪಣರು ಕರ್ನಾಟಕ ಹಾಗು ಗೋವಾದಲ್ಲಿ ನೆಲೆಯಾಗಿದ್ದರೆನ್ನುವದಕ್ಕೆ ಸಾಕ್ಷಿಯಾಗಿ ‘ಪಣ’ (ಹನ)ಹೆಸರಿನಿಂದ ಪ್ರಾರಂಭವಾಗುವ ಅನೇಕ ಊರುಗಳು ಈ ಭಾಗದಲ್ಲಿವೆ. ಉದಾ: ಪಣಜಿ, ಪಣಂಬೂರು, ಪಣಗುತ್ತಿ, ಹನಸೋಗೆ, ಹಣಜಿ ಇತ್ಯಾದಿ.
ಕಂದರಂತೂ ಅಫಘಾನಿಸ್ತಾನದಿಂದ ಕರ್ನಾಟಕದವರೆಗೆ ಎಲ್ಲೆಡೆಯೂ ಇದ್ದರು. ‘ಕಂದ’ ಪದದಿಂದ ಪ್ರಾರಂಭವಾಗುವ ಊರುಗಳು: ಕಂದಹಾರ (ಅಫಘಾನಿಸ್ತಾನದಲ್ಲಿ), ಕಂದಹಾರ (ಮಹಾರಾಷ್ಟ್ರದಲ್ಲಿ), ಕಂದಕೂರು,ಕಂದಲಿ, ಕಂದಾಪುರ, ಖಂಡಾಲಾ ಇತ್ಯಾದಿ.
ಹೆಚ್ಚಿನ ಮಾಹಿತಿಗಾಗಿ ಇಲ್ಲಿ ನೋಡಿರಿ.]

ಪರಿಸ್ಥಿತಿ ಹೀಗಿರುವಾಗ, ಭಾರತೀಯರಲ್ಲಿ ಭಿನ್ನತೆ ಕಲ್ಪಿಸುವ ವಿಪರೀತ ಬುದ್ಧಿ ಯಾವಾಗ ಪ್ರಾರಂಭವಾಯಿತು? ಅದರಂತೆ ‘ಅಲ್ಪಸಂಖ್ಯಾತರು’ ಎನ್ನುವ concept ಯಾವಾಗ ಪ್ರಾರಂಭವಾಯಿತು? ಬಹುಶಃ ಬ್ರಿಟಿಶರು ಈ ಪರಿಕಲ್ಪನೆಯನ್ನು ಹುಟ್ಟುಹಾಕಿದರೆ? ಅದೇನೇ ಇದ್ದರೂ, ಅದರ ಲಾಭ(?)ವನ್ನು ಪಡೆದವರು ಹಾಗೂ ಪಡೆಯಲು ಯತ್ನಿಸುತ್ತಿರುವವರು ಮಾತ್ರ ಸ್ವಾರ್ಥಿಗಳಾದ ರಾಜಕಾರಣಿಗಳು ಹಾಗೂ ಈ ರಾಜಕಾರಣಿಗಳ ಎಂಜಲು ತಿಂದಿರುವ, ತಿನ್ನುತ್ತಿರುವ ಅಜ್ಞಾನಪೀಠಸ್ಥರು.

ಅಲ್ಪಸಂಖ್ಯಾತರೆನ್ನುವ pervert ಕಲ್ಪನೆಯ ಪ್ರಥಮ ಫಲಾನುಭವಿ ಎಂದರೆ ಜಿನ್ನಾ. ಭಾರತದಲ್ಲಿ ರಕ್ತದ ಓಕುಳಿ ಹರಿಸಿ, ಭಾರತವನ್ನು ಒಡೆದು, ತಾನೂ ಸಹ ‘ರಾಷ್ಟ್ರಪಿತ’ನಾದ. ಎರಡನೆಯ ಫಲಾನುಭವಿ ಅಂದರೆ ಭಾರತೀಯ ರಾಜಕಾರಣಿ ; ತನಗೆ ವೋಟುಗಳು ಸಿಗಬೇಕಾದರೆ, ತಾನು ಭಾರತವನ್ನು ಛಿದ್ರ ಛಿದ್ರವಾಗಿ ಒಡೆಯಬೇಕೆಂದು ತಿಳಿದುಕೊಂಡವ.

ಪಿ. ವಿ. ನರಸಿಂಹರಾಯರು ಭಾರತದ ಪ್ರಧಾನಿಯಾದಾಗ ವಿವಿಧ ಮಾಧ್ಯಮಗಳಲ್ಲಿ ಒಂದು ಜಾಹೀರಾತು ಪದೇ ಪದೇ ಬರುತ್ತಿತ್ತು. ಅದು ಹೀಗಿದೆ:
ಪಿ.ವಿ.ನರಸಿಂಹರಾಯರ ಚಿತ್ರ; ಅವರ ಪಕ್ಕದಲ್ಲಿ ಒಂದು ಬಸ್ಸು; ಕೆಳಗಡೆ ಒಂದು ಘೋಷಣೆ:
“ಪ್ರಯಾಣಿಕರು ಬಸ್ಸನ್ನು ಹತ್ತಬೇಕಾದರೆ, ಚಾಲಕನು ಪ್ರಯಾಣಿಕರ ಧರ್ಮವನ್ನು ಕೇಳುತ್ತಾನೆಯೆ?”

ಘೋಷಣೆಯೇನೊ ಸರಿಯಾದದ್ದೇ.
ಆದರೆ ಒಂದು ಸತ್ಯವನ್ನು ಇಲ್ಲಿ ಉದ್ದೇಶಪೂರ್ವಕವಾಗಿ ಮರೆಮಾಚಲಾಗಿದೆ:
ಬಸ್ಸಿನಲ್ಲಿ ಎಲ್ಲ ಪ್ರಯಾಣಿಕರು ಶಿಸ್ತಿನಿಂದ ಕೂಡಬೇಕು.
ಒಬ್ಬಾತ ನಿಂತುಕೊಂಡಾಗ, ಮತ್ತೊಬ್ಬಾತ ಮಲಗಿಕೊಂಡಿರಕೂಡದು, ಇನ್ನೊಬ್ಬಾತ ಸೀಟಿನ ಮೇಲೆ ಕುಣಿಯುತ್ತಿರಬಾರದು.
ಇತರ ಪ್ರಯಾಣಿಕರೊಂದಿಗೆ ಜಗಳ ತೆಗೆಯಬಾರದು.
ಬಸ್ಸಿಗೆ ಹಾನಿ ಮಾಡಬಾರದು.
ಇವೆಲ್ಲ ಬಸ್ಸಿನ ಪ್ರಯಾಣಿಕರು ಅನುಸರಿಸಬೇಕಾದ ಸಾಮಾನ್ಯ ನಿಯಮಗಳು.

ಆದರೆ ಭಾರತದಲ್ಲಿ ಒಬ್ಬೊಬ್ಬ ಪ್ರಯಾಣಿಕನಿಗೆ ಒಂದೊಂದು ನಿಯಮ.
ಏಕೆಂದರೆ, ಭಾರತವು ಬಹುಸಂಸ್ಕೃತಿಯ ದೇಶ ; ಭಾರತವು ಅಲ್ಪಸಂಖ್ಯಾತರ ದೇಶ !
ಅಲ್ಪಸಂಖ್ಯಾತರೆನ್ನುವ pervert concept ಅನ್ನು ಒಪ್ಪಿಕೊಳ್ಳೋಣ.
ಅಲ್ಪಸಂಖ್ಯಾತರಿಗೆ ಯಾವ ರೀತಿಯ ಸವಲತ್ತುಗಳನ್ನು ಕೊಡಬೇಕೆನ್ನುವದನ್ನು ಮಾತ್ರ ನಮ್ಮ ಸರಕಾರ ಅರ್ಥ ಮಾಡಿಕೊಂಡಿಲ್ಲ.
ಅಥವಾ ಮಾಡಿಕೊಂಡರೂ ಸಹ, ಉದ್ದೇಶಪೂರ್ವಕವಾಗಿ ತಿರುಚುತ್ತಿದೆ. (ಚುನಾವಣೆಯಲ್ಲಿ ಮತಗಳಿಕೆಗಾಗಿ).

ಅಲ್ಪಸಂಖ್ಯಾತರ ಸಂಸ್ಕೃತಿಯ ವೈಶಿಷ್ಟ್ಯಗಳು ಬಹುಸಂಖ್ಯಾತರ ಸಂಸ್ಕೃತಿಯಲ್ಲಿ ಮುಚ್ಚಿ ಹೋಗದಿರಲಿ ಎನ್ನುವದೇ ಅವರಿಗೆ ಕೊಡಬೇಕಾದ ರಕ್ಷಣೆಯ ಮುಖ್ಯ ಉದ್ದೇಶ. ನಮ್ಮಲ್ಲಿ ಅಲ್ಪಸಂಖ್ಯಾತರ ಧರ್ಮಾಚರಣೆಗೆ ಅಥವಾ ಸಂಸ್ಕೃತಿಯ ಪೋಷಣೆಗೆ ಏನಾದರೂ ಬಾಧಕಗಳಿವಿಯೆ?
In fact, contrary is the case.

ಮೊದಲಿನಿಂದಲೂ ನಮ್ಮ ಒಕ್ಕಲಿಗರೆಲ್ಲರೂ ಸೋಮವಾರದ ದಿನ ‘ಬಸವಣ್ಣನ ದಿನ’ ಎಂದು ತಮ್ಮ ಕೆಲಸಗಳಿಗೆ ಬಿಡುವು ಕೊಡುತ್ತಿದ್ದಾರೆ.
ಬ್ರಿಟಿಶರ ಆಡಳಿತಕ್ಕಿಂತ ಮೊದಲು ರವಿವಾರದ ರಜೆ ನಮ್ಮಲ್ಲಿ ಇರಲಿಲ್ಲ.
ಆದರೆ ಈಗ ನಮ್ಮಲ್ಲಿ ಶೇಕಡಾ ೧ಕ್ಕಿಂತ ಕಡಿಮೆ ಇರುವ ಅಲ್ಪಸಂಖ್ಯಾತ ಕ್ರಿಶ್ಚಿಯನ್ನರಿಗಾಗಿ ಒಂದು ವರ್ಷದಲ್ಲಿ ೫೨ ರಜಾದಿನಗಳನ್ನು (ರವಿವಾರದ ಪ್ರಾರ್ಥನೆಗಾಗಿ) ಸರಕಾರವು ನೀಡಿದೆ.
ಮುಸ್ಲಿಮ್ ದೇಶಗಳಲ್ಲಿ ಶುಕ್ರವಾರದಂದು ವಾರದ ರಜೆ ಕೊಡುತ್ತಾರೆ. (ಭಾರತದಲ್ಲಿಯ ಮುಸ್ಲಿಮ್ ವಿದ್ಯಾಸಂಸ್ಥೆಗಳೂ ಸಹ ರವಿವಾರದ ಬದಲಾಗಿ ಶುಕ್ರವಾರವೇ ರಜೆ ಕೊಡುತ್ತಾರೆ.)
ಪರಿಸ್ಥಿತಿ ಹೀಗಿದ್ದಾಗ, ಭಾರತದಲ್ಲಿ ಬಹುಸಂಖ್ಯಾತ ಹಿಂದು ಧರ್ಮೀಯರು ಅಲ್ಪಸಂಖ್ಯಾತರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ ಎನ್ನುವದು ಸರಿಯೆ?

[ಭಾರತದ ಸಂವಿಧಾನವು ಹೀಗೆ ಹೇಳುತ್ತದೆ:
Article 14:
The State shall not deny to any person equality before the law or the equal protection of the laws within the territory of India.
Article 15:
Prohibition of discrimination on grounds of religion, race, caste, sex or place of birth.
ಆದುದರಿಂದ ಭಾರತದ ಸಂವಿಧಾನಕ್ಕೆ ಧರ್ಮನಿರಪೇಕ್ಷ ಎನ್ನಬೇಕಾಗುತ್ತದೆ.

ಆದರೆ ಮುಸ್ಲಿಮ್ ರಾಷ್ಟ್ರವೊಂದರಲ್ಲಿ ಇರುವ ಶಾಸನವನ್ನು ಗಮನಿಸಿ:
ಸುಮಾರು ೪೦ ವರ್ಷಗಳ ಹಿಂದೆ The Illustrated Weekly of India ಎನ್ನುವ ವಾರಪತ್ರಿಕೆಯಲ್ಲಿ ಪ್ರಕಟವಾದ ವರದಿ ಹೀಗಿತ್ತು:
ಅರಬ ರಾಷ್ಟ್ರವೊಂದರ factory ಒಂದರಲ್ಲಿ ಕೆಲಸ ಮಾಡುತ್ತಿದ್ದ ಗ್ರೀಸ್ ದೇಶದ ಫೋರ್ಮನ್ನನು factoryಯ ಒಳಗಡೆ ವಾಹನ ಚಲಾಯಿಸುತ್ತಿದ್ದಾಗ, ಅಕಸ್ಮಾತ್ತಾಗಿ ಭಾರತೀಯ ಕಾರ್ಮಿಕನ ಮೇಲೆ ವಾಹನ ಚಲಾಯಿಸಿದ್ದರಿಂದ ಕಾರ್ಮಿಕನು ಸಾವಿಗೀಡಾದನು. ಪರಿಹಾರ ಕೊಡಿಸುವ ನ್ಯಾಯಾಲಯವು ಮೃತ ಕಾರ್ಮಿಕನು ಭಾರತೀಯನಾದದ್ದರಿಂದ ನಿಕೃಷ್ಟ ಪರಿಹಾರವನ್ನು ನಿಗದಿಗೊಳಿಸಿತು. ತೀರ್ಪು ನೀಡಿದ ಬಳಿಕ, ಆ ಭಾರತೀಯನು ಹಿಂದೂ ಧರ್ಮದವನು ಎಂದು ಮತ್ತೆ ತಿಳಿದು ಬಂದದ್ದರಿಂದ, ಈ ಮೊದಲು ನಿಗದಿ ಪಡಿಸಿದ ಪರಿಹಾರವನ್ನು ಎರಡು ಮೂರಾಂಶಕ್ಕೆ ಮರು ನಿಗದಿಪಡಿಸಲಾಯಿತು.

ಅರಬ ರಾಷ್ಟ್ರಗಳಲ್ಲಿ ಭಾರತೀಯರಿಗೆ ಹಾಗೂ ಹಿಂದೂಗಳಿಗೆ ಕೊಡುವ ನ್ಯಾಯ ಇದು!]

ಭಾರತದಲ್ಲಿ ಮಾತ್ರ ಅಲ್ಪಸಂಖ್ಯಾತರರೇ ಬಹುಸಂಖ್ಯಾತರರಿಗಿಂತ ಹೆಚ್ಚು ಸಮಾನರು! ಉದಾಹರಣೆಗಳನ್ನು ಕೊಡುತ್ತೇನೆ:
ಭಾರತ ದೇಶದಲ್ಲಿ ಈಗ ಅತ್ಯಂತ ಬಡತನದ ಸ್ಥಿತಿಯಲ್ಲಿ ಇರುವವನೆಂದರೆ ಒಕ್ಕಲಿಗ.
ಸುಮಾರಾಗಿ ಎಲ್ಲ ಒಕ್ಕಲಿಗರೂ ಹಿಂದುಗಳೇ.
ನೂರಾರು ಜನ ಒಕ್ಕಲಿಗರು ಪ್ರತಿ ವರ್ಷವೂ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ.
ಭಾರತ ಸರಕಾರ ರೈತರ ಸ್ಥಿತಿ ಸುಧಾರಣೆಗೆ ಏನು ಮಾಡಿದೆ? ಅವರಿಗೆ ಯಾವ ಸವಲತ್ತುಗಳನ್ನು ಕೊಟ್ಟಿದೆ?
(ಭಾರತದಲ್ಲಿ ಈಗಾಗಲೇ ೧,೨೫,೦೦೦ ರೈತರು ಕುಲಾಂತರಿ ಬೀಜಗಳಿಂದಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು, ಬ್ರಿಟನ್ನಿನ ರಾಜಕುಮಾರ ಚಾರ್ಲ್ಸ್ಇಲ್ಲಿ ಹೇಳಿದ್ದಾರೆ.
ನಮ್ಮ ಸಹಪ್ರಯಾಣಿಕ ಅಮರ ಅವರ ಕೃಪೆಯಿಂದ ಈ ಮಾಹಿತಿ ಲಭ್ಯವಾಗಿದೆ.)


ಆದರೆ, ಅಲ್ಪಸಂಖ್ಯಾತರು, ವಿಶೇಷತಃ ಮುಸಲ್ಮಾನರು ಬಡತನದಲ್ಲಿ ಬಳಲುತ್ತಿದ್ದಾರೆ ಎಂದು ಭಾಷಣ ಬಿಗಿಯುತ್ತ, ಅವರ ಸ್ಥಿತಿ ಸುಧಾರಣೆಯ ವರದಿಗಾಗಿ, ಭಾರತ ಸರಕಾರವು ‘ಸಾಚಾರ ಸಮಿತಿ’ಯನ್ನು ನಿಯಮಿಸಿತು.
ತನ್ನ ಯಜಮಾನನಿಗೆ ಏನು ಬೇಕೆನ್ನುವದು ಈ ಸಮಿತಿಗೆ ಚೆನ್ನಾಗಿ ಗೊತ್ತು.
ಅಂತೆಯೇ ಸಮಿತಿಯು ಸರಕಾರಕ್ಕೆ ಒಂದು tailor-made ವರದಿಯನ್ನು ಸಮರ್ಪಿಸಿತು.
ಈ ವರದಿಯು ಮುಸಲ್ಮಾನರ ಸ್ಥಿತಿಗತಿಗಳ ಬಗೆಗೆ ಮಾತ್ರ ವರದಿ ನೀಡುವ ಬದಲು, ಅವರು ಹೇಗೆ ಬಹುಸಂಖ್ಯಾತರಿಗಿಂತ ಭಿನ್ನರು ಎಂದು ಹೇಳುವದಕ್ಕೆ ಕಸರತ್ತು ಮಾಡಿದೆ.
ಉದಾಹರಣೆಗಾಗಿ ಆ ವರದಿಯ ಒಂದು ಭಾಗವನ್ನು ಇಲ್ಲಿ ನೋಡಿರಿ:

The three language formula too, has not been implemented properly. Students have to opt for Sanskrit as there is no provision for teaching other languages in many schools, despite the fact that Urdu has been declared a second language in some states. This, in effect, makes Sanskrit a compulsory subject, especially in the Hindi belt. The lack of interest in studying Sanskrit makes Muslim students perform badly thus pulling down their grades. Students are also unable to take their higher secondary examination in Urdu as there is no provision for it and they are forced to take their exams in Hindi.(page 40)

ತ್ರಿಭಾಷಾ ಸೂತ್ರದ ಪ್ರಕಾರ ಮಾತೃಭಾಷೆ ಅಥವಾ ರಾಜ್ಯ ಭಾಷೆಯು ಪ್ರಥಮ ಭಾಷೆಯಾಗಿರುತ್ತದೆ. ಅಂದ ಮೇಲೆ ಉತ್ತರ ಪ್ರದೇಶದಂತಹ ರಾಜ್ಯಗಳಲ್ಲಿ ಹಿಂದಿ ಹಾಗೂ ಉರ್ದು ಎರಡೂ ಪ್ರಥಮ ಭಾಷೆಗಳಾಗುತ್ತವೆ.
ಆದುದರಿಂದ ಸಾಚಾರರ ಮೊದಲನೆಯ ನೆಲೆಗಟ್ಟು ಸುಳ್ಳಿನ ನೆಲೆಗಟ್ಟು ಎಂದಂತಾಯಿತು.
ಈಗ ಸಾಚಾರರ ಮತ್ತೊಂದು ಪೂರ್ವಾಗ್ರಹದ ಹೇಳಿಕೆಯನ್ನು ನೋಡಿರಿ:
The lack of interest in studying Sanskrit makes Muslim students perform badly thus pulling down their grades.
ಮುಸಲ್ಮಾನ ವಿದ್ಯಾರ್ಥಿಗಳಿಗೆ ಸಂಸ್ಕೃತದಲ್ಲಿ ಆಸಕ್ತಿ ಇರಬಾರದು ಎನ್ನುವ ಭಾವನೆ ತಪ್ಪಲ್ಲವೆ?
ನೂರಾರು ವರ್ಷಗಳ ಹಿಂದೆ, ಈ ವಿದ್ಯಾರ್ಥಿಗಳ ಪೂರ್ವಜರು, ಬಲಾತ್ಕಾರದಿಂದಲೊ ಅಥವಾ ಸ್ವಇಚ್ಛೆಯಿಂದಲೊ ಧರ್ಮಾಂತರಿತರಾಗಿರಬಹುದು.
ಆದರೆ ಅವರ ರಕ್ತ, ಅವರ ಸಂಸ್ಕೃತಿ ಹಾಗು ಅವರ ಜನಾಂಗ-ಸ್ಮೃತಿ ಬದಲಾಗಬೇಕೆ?
ನಮ್ಮ ತಾಯಿ ಭಾರತಮಾತೆ ಅಲ್ಲ, ಅವಳು ಅರಬಮಾತೆ ಅಥವಾ ಪರ್ಶಿಯಾಮಾತೆ ಎಂದು ಹೇಳುವದು ಶಕ್ಯವೆ?

ಇಂತಹ ಮಾತನ್ನು ಮುಸಲ್ಮಾನರು ಹೇಳುತ್ತಿಲ್ಲ. ಆದರೆ ಸಾಚಾರರು ಹೇಳುತ್ತಿದ್ದಾರೆ.
ಮುಸಲ್ಮಾನರಿಗೆ ಸಂಸ್ಕೃತ ಭಾಷೆಯಲ್ಲಿ ಆಸಕ್ತಿ ಇರಕೂಡದು ಎನ್ನುವದು ಸಾಚಾರರ ವೈಯಕ್ತಿಕ ನಿರ್ಣಯ.
ಏಕೆಂದರೆ ಸಂಸ್ಕೃತವು ಹಿಂದೂಗಳ ಭಾಷೆ ಹಾಗೂ ಅರೇಬಿಯನ್/ಪರ್ಶಿಯನ್ ಇವು ಮುಸಲ್ಮಾನರ ಭಾಷೆ ಎನ್ನುವದು ಸಾಚಾರರ ಪೂರ್ವಾಗ್ರಹಪೀಡಿತ ಅಭಿಮತ.
ಆದರೆ ನಿಜ ಪರಿಸ್ಥಿತಿ ಹಾಗಿದೆಯೇ?
ಕರ್ನಾಟಕವನ್ನೇ ತೆಗೆದುಕೊಳ್ಳಿರಿ:
ಕರ್ನಾಟಕದಲ್ಲಿ ಸಂಸ್ಕೃತ ಹಾಗೂ ಕನ್ನಡದಲ್ಲಿ ಪರಿಣತಿಯುಳ್ಳ ಎಷ್ಟು ಜನ ಮುಸ್ಲಿಮ್ ಲೇಖಕರಿಲ್ಲ?
ಉರ್ದು ಭಾಷೆಯಲ್ಲಿ ಇಲ್ಲದ ಪರಿಣಿತಿ ಇವರಿಗೆ ಕನ್ನಡ ಹಾಗೂ ಸಂಸ್ಕೃತದಲ್ಲಿದೆ.
ಪದ್ಮಶ್ರೀ ನಿಸಾರ ಅಹ್ಮದ, ನಮ್ಮ ಶ್ರೇಷ್ಠ ಲೇಖಕರಾದ ಕಟ್ಟಪಾಡಿ,ಬೋಳೂರು,ಸಾರಾ ಅಬೂಬಕ್ಕರ,ರಶೀದಾ,ರಹಮತ್ ತರೀಕೆರೆ ಇನ್ನೂ ಅನೇಕರೆಲ್ಲ ಮುಸಲ್ಮಾನರಲ್ಲವೆ?
ಈಗಲೂ ಸಹ ತಮಿಳುನಾಡಿನ ಮುಸಲ್ಮಾನರಿಗೆ ತಮಿಳೇ ಮಾತೃಭಾಷೆಯಾಗಿದೆಯೇ ಹೊರತು, ಉರ್ದು ಅಲ್ಲ.

ಮುಖ್ಯವಾಗಿ ಭಾಷೆ ಬೇಕಾದದ್ದು ಅಂತರ್-ಸಂವಹನೆಗಾಗಿ.
ಕರ್ನಾಟಕದಲ್ಲಿ ಇರುವ ಶೇಕಡಾ ೧೨ರಷ್ಟು ಮುಸಲ್ಮಾನರು ಕೇವಲ ತಮ್ಮ ತಮ್ಮಲ್ಲೇ ವ್ಯವಹರಿಸುತ್ತ ಕೂಡುತ್ತಾರೇನು?
ಉಳಿದ ಶೇಕಡಾ ೮೮ರಷ್ಟು ಜನರೊಡನೆ ಅವರಿಗೆ ವ್ಯವಹಾರ, ಸಂವಹನೆ ಬೇಡವೆ?

ಇದೇ ಮಾತು ಜನಾಂಗ-ಸ್ಮೃತಿಗೂ ಅನ್ವಯಿಸುತ್ತದೆ. ನಮ್ಮ ಪುರಾಣಗಳು ವಾಸ್ತವದಲ್ಲಿ ನಮ್ಮ ಜನಾಂಗದ ಸ್ಮೃತಿಕೋಶಗಳೇ ಆಗಿವೆ.
ಶ್ರೀರಾಮಚಂದ್ರ, ಶ್ರೀಕೃಷ್ಣ ಇವರು ದೇವತಾಪಟ್ಟಕ್ಕೇರಿದ ಐತಿಹಾಸಿಕ ಪುರುಷರು.
ಬೇತಾಳ-ವಿಕ್ರಮ ಕತೆಯಿಂದ ಪ್ರಸಿದ್ಧನಾದ ತ್ರಿವಿಕ್ರಮ ರಾಜನು ಅರಸನೆಂದರೆ ಹೇಗಿರಬೇಕು ಎನ್ನುವದಕ್ಕೆ model ಆದಂತಹ ದಂತಕತೆಯಾದ ರಾಜನು.
ಎಲ್ಲಾ ಭಾರತೀಯರಿಗೂ ಇವರೇ ಮೂಲಪುರುಷರು.
ನಮ್ಮ ಜನಾಂಗಸ್ಮೃತಿ ಇಂತಹ ಮಹಾಪುರುಷರಿಂದ ಆಗಿದೆ.

ಇತ್ತೀಚಿನ ಉದಾಹರಣೆಗಳೆಂದರೆ ತುರುಕರ ಹಾಗೂ ಪರ್ಶಿಯನ್ನರ ವಿರುದ್ಧ ಹೋರಾಡಿದ ಭಾರತೀಯ ರಾಜರು. ರಾಣಾ ಪ್ರತಾಪಸಿಂಹ, ಛತ್ರಪತಿ ಶಿವಾಜಿ, ಗುರು ಗೋವಿಂದಸಿಂಹ ಮೊದಲಾದವರು ಈ ನೆಲದ ಮಕ್ಕಳ ಸಲುವಾಗಿ ವಿದೇಶಿ ಆಕ್ರಮಣಕಾರರ ವಿರುದ್ಧ ಹೋರಾಡಿದ ಭಾರತೀಯರು. ಇವರನ್ನು ಕೃತಜ್ಞತೆಯಿಂದ ನೆನೆಯುವದು ಎಲ್ಲ ಭಾರತೀಯರ (-ಇವರಲ್ಲಿ ಅಲ್ಪಸಂಖ್ಯಾಕರೂ ಸೇರ್ಪಡೆಯಾಗುತ್ತಾರೆ-) ಕರ್ತವ್ಯವಲ್ಲವೆ? ಅದು ಬಿಟ್ಟು ರಾಣಾ ಪ್ರತಾಪಸಿಂಹನನ್ನು ಕೇವಲ ರಜಪೂತರು, ಶಿವಾಜಿಯನ್ನು ಕೇವಲ ಮರಾಠಿಗರು, ಗುರು ಗೋವಿಂದಸಿಂಹನನ್ನು ಕೇವಲ ಸೀಖರು, ವಿಜಯನಗರದ ಅರಸರನ್ನು ಕೇವಲ ಹಿಂದೂಗಳು ಗೌರವಿಸುವದು ಸರಿಯೆ?

ಈಗ ಸಾಚಾರರು ವರದಿಸುವದನ್ನು ನೋಡಿರಿ:
The “communal” content of school textbooks, as well as, the school ethos has been a major cause for concern for Muslims in some states. This is disconcerting for the school going Muslim child who finds a complete absence of any representation of her community in the school text.

ಸಾಚಾರರು ಯಾವುದಕ್ಕೆ communal content ಎಂದು ಕರೆಯುತ್ತಾರೆ?
ಶಿವಾಜಿಯು ಪ್ರಜಾವಿರೋಧಿಯಾದ ಮತಾಂಧ ಔರಂಗಜೇಬನ ವಿರುದ್ಧ ಹೋರಾಡಿದ್ದನ್ನು ಬರೆಯುವದು ಕೋಮುವಾದಿ ಪಠ್ಯವೆ?
ಅಥವಾ ಪುಸ್ತಕದಲ್ಲಿ ರಾಮ. ಕೃಷ್ಣ, ಕಮಲಾ, ವಿಮಲಾ ಎನ್ನುವ ಹೆಸರುಗಳು ಬಂದರೆ ಅದು ಕೋಮುವಾದವೆ? ಮುಸಲ್ಮಾನ ಹುಡುಗರು ಶಾಲೆಗೆ ಬಂದಾಗ (--ಅವರು ಸಾರ್ವಜನಿಕ ಶಾಲೆಗೆ ಬಂದರೆ--), ತಮ್ಮ ಸುತ್ತ ಮುತ್ತಲೂ ರಾಮ, ಕೃಷ್ಣ, ಕಮಲಾ, ವಿಮಲಾ ಇವರುಗಳನ್ನೇ ಕಾಣುತ್ತಾರೆ.
Communal contentಅನ್ನು ತೆಗೆದು ಹಾಕುವದಕ್ಕಾಗಿ ಈ ಹುಡುಗರು ತಮ್ಮ ಹೆಸರನ್ನು ಬದಲಾಯಿಸಿಕೊಳ್ಳಬೇಕೆ?

ನಿಜ ಹೇಳಬೇಕೆಂದರೆ, ಮುಸ್ಲಿಮರು ಕೇವಲ ಅರಬ್ಬಿ ಹೆಸರುಗಳನ್ನಷ್ಟೇ ಇಟ್ಟುಕೊಳ್ಳದೆ, ಭಾರತೀಯ ಹೆಸರುಗಳನ್ನು ಜೋಡಿಸಬಹುದು.
ಇದನ್ನು ಕ್ರಿಶ್ಚಿಯನ್ನರು ಮಾಡುತ್ತಿದ್ದಾರೆ.
ಉದಾಹರಣೆಗೆ ಅನೇಕ ಕ್ರಿಶ್ಚಿಯನ್ ಹೆಸರುಗಳು, ವಿಶೇಷತಃ ಹೆಣ್ಣು ಮಕ್ಕಳ ಹೆಸರುಗಳು ಜೋಡಿಸಿದ ಹೆಸರುಗಳಾಗಿವೆ.
ಉದಾ: ಕಮಲಾ ಮೇರಿ, ಹೇಮಾ ಗ್ರೇಸಿ ಇತ್ಯಾದಿ.
ಮುಸಲ್ಮಾನರೂ ಸಹ ಇದೇ ರೀತಿಯಲ್ಲಿ ತಮ್ಮ ಹೆಸರುಗಳನ್ನು ಫಾತಿಮಾ ಗೌರಿ, ಸಯೀದಾ ಲಕ್ಷ್ಮಿ ಎಂದೆಲ್ಲ ಇಟ್ಟುಕೊಂಡರೆ ಅವರನ್ನು ಬಾಧಿಸುತ್ತಿರುವ ಪರಕೀಯ ಪ್ರಜ್ಞೆ ತಪ್ಪಬಹುದು.


ಸಾಚಾರರ ತಿಪ್ಪರಲಾಗದ ಇನ್ನೊಂದಿಷ್ಟು ಉದಾಹರಣೆ ಇಲ್ಲಿವೆ:
….current research indicates that poverty and financial constraints are the major causes that prevent Muslim girls from accessing ‘modern/secular’ education. (p41)

ಯಾಕೆ? ಕೇವಲ ಮುಸಲ್ಮಾನ ವಿದ್ಯಾರ್ಥಿನಿಯರು ಮಾತ್ರ ಬಡತನದಿಂದಾಗಿ ಶಿಕ್ಷಣ ಪಡೆಯುತ್ತಿಲ್ಲವೆ?
ಹಳ್ಳಿಗಳಲ್ಲಿಯ ನಮ್ಮ ರೈತ ಕೂಲಿಕಾರ ಹೆಣ್ಣು ಮಕ್ಕಳು ಶಾಲೆ ಬಿಟ್ಟು ಹೊಲದಲ್ಲಿ ಕೂಲಿ ಮಾಡಲು ಹೋಗುವದಿಲ್ಲವೆ?
ನಗರಗಳಲ್ಲಿಯೂ ಸಹ ಎಷ್ಟು ಜನ ಮುಸ್ಲಿಮೇತರ ವಿದ್ಯಾರ್ಥಿನಿಯರು ಬಡತನದಿಂದಾಗಿ ಶಾಲೆ ಬಿಟ್ಟಿಲ್ಲ?
ನಗರಗಳಲ್ಲಿ ಕೊಳಚೆ ಹೆಕ್ಕುವ ಕೆಲಸ ಮಾಡುತ್ತಿರುವ rag pickerಗಳಲ್ಲಿ ಒಬ್ಬಳಾದರೂ ಮುಸ್ಲಿಮ್ ಹುಡುಗಿಯನ್ನು ಸಾಚಾರ ತೋರಿಸಲಿ !
ಇವೆಲ್ಲ ಅಂಕಿಸಂಖ್ಯೆಯ ಮಾತಾಯಿತು. ಈಗ ಸಾಚಾರರ ಈ ಹೇಳಿಕೆಯನ್ನು ನೋಡಿರಿ:
Muslim women often face overt discrimination from school authorities while trying to get admission or in availing of scholarships for their children. (p41)

ಇದಂತೂ ಸಾಚಾರರ ಕಲ್ಪನೆಯ ಮಹಾ ಅಪಲಾಪ.
ಏಕೆಂದರೆ, ಇಂತಹ overt discriminationದ ಒಂದಾದರೂ ಉದಾಹರಣೆಗಳನ್ನು ಸಾಚಾರರು ತಮ್ಮ ವರದಿಯಲ್ಲಿ ಉಲ್ಲೇಖಿಸಿಲ್ಲ.

ಇದೇ ರೀತಿಯಲ್ಲಿ ಸಾಚಾರರು ಮುಸಲ್ಮಾನರು ಉದ್ಯೋಗಕ್ಷೇತ್ರದಲ್ಲಿ ಅನುಭವಿಸುತ್ತಿರುವ ಬವಣೆಗಳ ಬಗೆಗೆ ದೀರ್ಘವಾದ ವರದಿ ನೀಡಿದ್ದಾರೆ.
ನಾನೇನೂ ಅವರಿಗೆ ದೀರ್ಘವಾದ ಪ್ರಶ್ನೆ ಹಾಕುವದಿಲ್ಲ. ಒಂದು ಅತಿ ಸಣ್ಣ ಪ್ರಶ್ನೆ.
ಭಾರತದಲ್ಲಿ ಸಾಲದ ಶೂಲಕ್ಕೆ ಸಿಲುಕಿದ ಅನೇಕ ರೈತರು, ತಮ್ಮ ಕುಟುಂಬಕ್ಕೆ ತುತ್ತು ಅನ್ನ ನೀಡಲಾರದ ಅನೇಕ ನಿಸ್ಸಹಾಯಕರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ವರದಿಗಳು ಪತ್ರಿಕೆಗಳಲ್ಲಿ ಬರುತ್ತಲೇ ಇರುತ್ತಿವೆ.
ಇವರಲ್ಲಿ ಒಬ್ಬನಾದರೂ ಮುಸಲ್ಮಾನನು ಇದ್ದಾನೆಯೆ?
God forbid, ನಾನು ಅದನ್ನು ಬಯಸುತ್ತೇನೆ ಎಂದು ಹೇಳುತ್ತಿಲ್ಲ.
ಆದರೆ, suicide is the unfortunate barometer for judging the community that is really suffering ಎನ್ನುವದು ನನ್ನ ಅಭಿಪ್ರಾಯ.

ವಸ್ತುಸ್ಥಿತಿ ಹೀಗಿದ್ದಾಗ, ಸಾಚಾರರು ಮುಸಲ್ಮಾನರಿಗೆ ವಿಶೇಷವಾಗಿ ಉದ್ಯೋಗ ನೀಡಬೇಕು, ಉದ್ಯೋಗಸಾಲ ನೀಡಬೇಕು; ಯಾಕೆಂದರೆ ಅವರ ವಿರುದ್ಧ ಉದ್ದೇಶಪೂರ್ವಕವಾಗಿ ಅನ್ಯಾಯ ನಡೆದಿದೆ ಎಂದು ನಿರ್ಣಯ ನೀಡುತ್ತಾರೆ.
ಇದು ಕಪೋಲಕಲ್ಪಿತವಲ್ಲವೆ?
ನಿಜ ಹೇಳಬೇಕೆಂದರೆ, ಅನೇಕ ಉದ್ಯೋಗಗಳು ಮುಸಲ್ಮಾನ-ಕೇಂದ್ರಿತವೇ ಆಗಿವೆ.
ಉದಾಹರಣೆಗೆ, ಕಾಯಿಪಲ್ಲೆ ಹಾಗೂ ಹಣ್ಣುಗಳನ್ನು ಬೆಳೆದು, ಸಾಲ ಮಾಡಿ, ಕೈ ಸುಟ್ಟುಕೊಂಡು, ಸಂಕಷ್ಟಕ್ಕೆ ಸಿಲುಕಿದಾಗ ಆತ್ಮಹತ್ಯೆಗೆ ಶರಣಾಗುವ ರೈತರು ಸಹಸಾ ಹಿಂದೂಗಳು.
ಕಾಯಿಪಲ್ಲೆ ಹಾಗೂ ಹಣ್ಣುಗಳನ್ನು ಪೇಟೆಯಲ್ಲಿ ಮಾರಿ, ಎಂತಹದೇ ಪರಿಸ್ಥಿತಿಯಲ್ಲಿಯೂ ಲಾಭ ಮಾಡಿಕೊಳ್ಳುವ ಬಾಗವಾನರು ಸಹಸಾ ಮುಸಲ್ಮಾನರು.

ನಾನು ಇಲ್ಲಿ ಮುಸಲ್ಮಾನರ ವಿರುದ್ಧ ಮಾತನಾಡುತ್ತಿಲ್ಲ.
ನಾನು ಬರೆಯುತ್ತಿರುವದು ಸಾಚಾರ ವರದಿ ಎಂತಹ ಕೆಲಸಕ್ಕೆ ಬಾರದ ಕಂತೆಯಾಗಿದೆ ಎನ್ನುವದರ ಬಗೆಗೆ ; ಅಂಕಿಅಂಶಗಳನ್ನು ಹೇಗೆ ಸಾಚಾರರು ತಿರುಚಿ ಉಪಯೋಗಿಸಿಕೊಳ್ಳುತ್ತಿದ್ದಾರೆ ಎನ್ನುವದರ ಬಗೆಗೆ.

ಸಾಚಾರ ವರದಿಯಲ್ಲಿ ಏನೂ ‘ಸಾಚಾ’ ಇಲ್ಲ ; ಇದು ನಿಜವಾಗಿಯೂ ‘ಅವಿಚಾರ ವರದಿ’.
ಸುಮಾರು ಎರಡು ಶತಕಗಳ ಹಿಂದೆ ಹಾಡಿದ ಶರೀಫರ ಹಾಡು ಸಾಚಾರ ವರದಿಗೆ ಸರಿಯಾಗಿ ಅನ್ವಯಿಸುತ್ತದೆ:

“ತರವಲ್ಲ ತಗಿ ನಿನ್ನ ತಂಬೂರಿ,
ಸ್ವರ ಬರದೆ ಬಾರಿಸದಿರು ತಂಬೂರಿ!”

20 comments:

Harisha - ಹರೀಶ said...

ಪೂರ್ವಾಗ್ರಹ ತಪ್ಪು, ಪೂರ್ವಗ್ರಹ ಸರಿ ಎಂದು ಯಾವುದೋ ಬ್ಲಾಗಿನಲ್ಲಿ ಓದಿದ ನೆನಪು..

"ಅಜ್ಞಾನಪೀಠಸ್ಥ" ಪದ ಚೆನ್ನಾಗಿದೆ!! "U R A" "ಕರುನಾಡ" ಜೀನಿಯಸ್!! :-P

sunaath said...

ಹರೀಶ,
Prejudice ಎನ್ನುವ ಇಂಗ್ಲಿಶ್ ಪದಕ್ಕೆ ಸಮಾನಾರ್ಥವಾಗಿ
ಪೂರ್ವಾಗ್ರಹ ಹಾಗೂ ಪೂರ್ವಗ್ರಹ ಎನ್ನುವ ಎರಡೂ ಪದಗಳು
ಬಳಕೆಯಲ್ಲಿವೆ.

ಫೂರ್ವಾಗ್ರಹ=ಪೂರ್ವ(ಮೊದಲೇ)+ಆಗ್ರಹ(=ಒತ್ತಾಯ, ಜುಲುಮೆ).
ಅಂದರೆ ಮನದಲ್ಲಿ ಒಂದು impression ಈಗಾಗಲೇ ಬಲವಂತವಾಗಿ ಬೇರೂರಿದೆ.

ಪೂರ್ವಗ್ರಹ=ಪೂರ್ವ+ಗ್ರಹ(=ಹಿಡಿ=ತಿಳಿದುಕೊ)
ಇಲ್ಲಿಯೂ ಸಹ 'ಮೊದಲೇ ಬೇರೂರಿದ ಭಾವನೆ' ಎನ್ನುವ ಅರ್ಥವೇ ಬರುತ್ತದೆ.

ಆದುದರಿಂದ ಯಾವುದೇ ಪದವನ್ನು ಬಳಸಬಹುದು.

ಹ್ಞಾ, ಅಜ್ಞಾನಪೀಠಮೂರ್ತಿಗಳ ಬಗೆಗೆ ಹೇಳುವದಾದರೆ,
"ಗಡ್ಡವಿದ್ದವನಿಗೇ ಗುಡ್ಡದಷ್ಟು ಗೌರವ!"

Anonymous said...

ಸ್ವಾಮೀ ಸುನಾಥರೆ, ನೀವು ಇಷ್ಟು ಕಷ್ಟ ಪಟ್ಟು "ಸಾಚಾರ ವರದಿ"ಯ ಕುರಿತು ಲೇಖನ ಬರೆದಿದ್ದೀರಿ. ಇವೆಲ್ಲ ವಿಷಯಗಳೂ ನಮ್ಮ ದೇಶದಲ್ಲಿ ಎಲ್ಲರಿಗೂ ಗೊತ್ತು ; ಆದರೆ ನುಡಿಯಲಾರರು ! ಅವರಾದರೂ ಏನು ಮಾಡಿಯಾರು, ಪಾಪ ? ಕೆಲವರಿಗೆ ತಮ್ಮ 'ಮತ-ಬ್ಯಾಂಕ' ಭದ್ರವಾಗಿಸುವ ಚಿಂತೆ ! ಇನ್ನು ಕೆಲವರಿಗೆ ತಮ್ಮ ಸ್ವಘೋಷಿತ 'ಬುದ್ಧಿ ಜೀವಿ' ಸ್ಥಾನವನ್ನು ಕಾಪಾಡುವ ಆತುರ ! ಮತ್ತೆ ಕೆಲವರಿಗೆ 'ಸತ್ಯ' ನುಡಿಯಲು ಅಲರ್ಜಿ ! ಇನ್ನು ಸಾಚಾರರಂಥವರಿಗೆ, ತಮ್ಮ 'ಪ್ರಭು'ಗಳ ಪ್ರೀತಿ ಸಂಪಾದಿಸಿ, ಜೀವನದಲ್ಲಿ ಏನಾದರೂ ಗಳಿಸುವ ಹಂಬಲ ! ಸತ್ಯ, ರಾಷ್ಟ್ರ ಯಾರಿಗೆ ಬೇಕು ? 1947 ರಿಂದಲೇ ನಾವು ನಮ್ಮ ನಾಯಕರು ರಾಷ್ಟ್ರದ 'ಅಸ್ಮಿತೆ'ಯನ್ನು ಮರೆತು,ತಮ್ಮ ಸ್ವಾರ್ಥವನ್ನು ಮೆರೆದರು. ಅಸ್ಮಿತೆಯನ್ನು ಮೆರೆದ ಕೆಲವೇ ಕೆಲವರನ್ನು "ರಾಷ್ತ್ರದ್ರೋಹಿ"ಗಳೆಂದು ಬಿಂಬಿಸಲಾಯಿತು. ಅವರನ್ನು, ಅವರ ಪುಸ್ತಕಗಳನ್ನೂ ನಿಷೇಧಿಸಲಾಯಿತು. ಆದರೆ, ಬಿರುಗಾಳಿ ಬಂದೇ ಬರುವದು ! ಸತ್ಯ ತಾನೇ ಬಯಲಾಗುವದು ! ಆ ಗಳಿಗೆಗೆ, ಆ ಯುಗಪುರುಷನಿಗೆ ಕಾಯಬೇಕಷ್ಟೆ !!

Anonymous said...

ವಿಜಯ ಕರ್ನಾಟಕದಲ್ಲಿ ಶ್ರೀ ಎಸ್.ಎಲ್.ಭೈರಪ್ಪನವರ ಲೇಖನ ಯಾವ ದಿನಾಂಕದಂದು ಬಂದಿತ್ತು ? ದಯವಿಟ್ಟು ತಿಳಿಸಿ.

sunaath said...

ಕಟ್ಟಿಯವರೆ,
೧೬ ಅಕ್ಟೋಬರದಂದು ಭೈರಪ್ಪನವರ ಲೇಖನ ವಿಜಯಕರ್ನಾಟಕದಲ್ಲಿ ಪ್ರಕಟವಾಗಿರಬಹುದು.

Anonymous said...

ಧನ್ಯವಾದಗಳು.

shivu.k said...

ಸುನಾಥ್ ಸಾರ್
ಸಾಚಾರ ವರದಿ ಯನ್ನು ಅತ್ಯುತ್ತಮವಾಗಿ ವಿಶ್ಲೇಷಿದ್ದೀರಿ! ಹಾಗೂ ಜೊತೆಯಲ್ಲೇ ಇತಿಹಾಸದ ಬಲು ಉಪಯುಕ್ತ ಮಾಹಿತಿಯನ್ನು ಉತ್ತಮವಾಗಿ ನೀಡಿದ್ದೀರಿ ! ಓದುತ್ತಾ ಹೋದಂತೆ ಎಷ್ಟೋ ಗೊತ್ತಿಲ್ಲದ ವಿಚಾರಗಳು ಬೆಳಕಿಗೆ ಬಂದವು.
ಬರವಣಿಗೆ ಸರಳವಾಗಿ ನೇರವಾಗಿದೆ ಮತ್ತು ಸುಲಭವಾಗಿದೆ.

Ittigecement said...

ರಾಮ, ಕ್ರಷ್ಣ ಮತೀಯವಾದರೆ ಮಹಾತ್ಮ ಗಾಂಧಿಯವರು ಮತೀಯವಾಗಲೇಬೇಕು, ಯಾಕೆಂದರೆ ಅವರ ಕನಸು ರಾಮ ರಾಜ್ಯವಾಗಿತ್ತು. ಹುಚ್ಚುತನದ ಪರಮಾವಧಿ ಇದು ಅಲ್ಲವಾ?
thank you sir..

sunaath said...

ಶಿವು,ಪ್ರಕಾಶ,
ಸಾಚಾರ ವರದಿಯ ಅಲ್ಪ ಭಾಗವನ್ನಷ್ಟೇ ನಾನು ವಿಶ್ಲೇಷಿಸಿದ್ದೇನೆ.
ಸಾಚಾರ ಸಮಿತಿಯು ಅಂಕಿ ಸಂಖ್ಯೆಗಳನ್ನು ಸರಿಯಾಗಿಯೇ ನೀಡಿದ್ದರೂ ಸಹ, ತನ್ನ ನಿರ್ಣಯಗಳನ್ನು ತಿರುಚಿ ಕೊಟ್ಟಿದೆ.

Anonymous said...

ಅಕ್ಟೋಬರ್ 16 ರ ಸಂಚಿಕೆ ಅಂರ್ತಜಾಲದಲ್ಲಿ ಲಭ್ಯವಿಲ್ಲ. ಆ ಲೇಖನವನ್ನು ನನ್ನ ಮಿಂಚು-ಅಂಚೆಗೆ ಕಳುಹಿಸಲು ಸಾಧ್ಯವೆ ? ನನ್ನ ಮಿಂಚಂಚೆಯ ವಿಳಾಸ:yalgur@hotmail.com or smkatti44@rediffmail.com

"ಅಂಕಿ-ಸಂಖ್ಯೆಗಳು ಕತ್ತೆಯಂತೆ ; ಅವುಗಳಿಂದ ಅನುಕೂಲಕರ ಅರ್ಥ ತೆಗೆಯುವದು ತುಂಬ ಸುಲಭ" ಎಂದು ಎಲ್ಲಿಯೋ ಓದಿದ ಹಾಗೆ ನೆನಪು.

ಪೂರ್ವ + ಆಗ್ರಹ = ಪೂರ್ವಾಗ್ರಹ -ಸ್ವರಲೋಪ ಸಂಧಿ. ಇದು ಸರಿ ಇರಬಹುದು. ಇನ್ನು, ಮೊದಲೇ ಮಾಡಿದ ಗ್ರಹಿಕೆ "ಪೂರ್ವಗ್ರಹ"ವೂ ಸರಿ ಇರಬಹುದು. ಆದರೆ ಬಳಕೆಯಲ್ಲಿರುವದು "ಪೂರ್ವಾಗ್ರಹ" ಎಂದೇ ಅಲ್ಲವೇ ?

ವಿ.ರಾ.ಹೆ. said...

oh, idu saachara varadi emba anaachaara varadi ! UPA prayojitha varadi innu hEge iralu saadhya !

sunaath said...

ಕಟ್ಟಿಯವರೆ,
ವಿಜಯ ಕರ್ನಾಟಕದ ಪ್ರತಿ ನನ್ನಲ್ಲೂ ಲಭ್ಯವಿಲ್ಲ. ಪ್ರಯತ್ನಿಸುತ್ತೇನೆ. ಅದು ದೊರೆತರೆ, ಅದರ ಮಿಂಚಂಚೆಯನ್ನು ನಿಮಗೆ ಕಳುಹಿಸುತ್ತೇನೆ.

sunaath said...

ವಿಕಾಸ,
ಸಾಚಾರ ವರದಿಯ follow up action ಇನ್ನೂ ಭಯಂಕರವಾಗಿದೆ. Disparity Index ಅನ್ನುವ ಒಂದು ಸೂಚಕವನ್ನು ಹುಟ್ಟುಹಾಕಲಾಗಿದೆ. ಯಾವ ಸಾರ್ವಜನಿಕ ಸಂಸ್ಥೆಯಲ್ಲಿ (including ಶೈಕ್ಷಣಿಕ ಸಂಸ್ಥೆಗಳು)ಅಲ್ಪಸಂಖ್ಯಾತರ ಸಂಖ್ಯೆ ಈ ಸೂಚಕ ಸಂಖ್ಯೆಗಿಂತ ಕಮ್ಮಿ ಇರುವದೊ, ಆ ಸಂಸ್ಥೆಗೆ ಅನುದಾನ ಮೊದಲಾದ ಸೌಲಭ್ಯಗಳು ದೊರೆಯಲಾರವು.
ಇದು ಕೇಂದ್ರ ಸರಕಾರದ ಆದೇಶವಿರುವದರಿಂದ, concurrent listನಲ್ಲಿಯ ಸಂಸ್ಥೆಗಳಿಗೆ ಅನ್ವಯಿಸಲಿಕ್ಕಿಲ್ಲ.
ಮನಮೋಹನ ಸಿಂಗರು, ಈ ವಿಷಯದಲ್ಲಿ ತಾವೂ ಸಹ ಇಂದಿರಾ ಗಾಂಧಿಯವರಂತೆ ಹೆಸರು ಪಡೆಯುವ ಉದ್ದೇಶದಿಂದ Prime Minister's 15 Point Programme ಮಾಡಿದ್ದಾರೆ!

Shriniwas M Katti said...

ಪಾಪ ! ಮನಮೋಹನಸಿಂಗರು ಏನೂ ಮಾಡಿರಲಾರರು. ಅವರೊಬ್ಬ ಅತ್ಯಂತ ನಿಷ್ಟಾವಂತ " ಜೀ ಹುಜೂರ್ ಪ್ರಧಾನಮಂತ್ರಿ". ಇದು ಅವರ "ಮಹಾನ್" ನಾಯಕಿಯ ಮಹದ್ ಬುದ್ಧಿ ಸಂಭವವೇ ಇರಬೇಕು ! ಅಥವಾ ಅವರ ಸುತ್ತಲೂ ನೆರೆದಿರುವ ಭಟ್ಟಂಗಿಗಳ ಕೆಲಸವಿರಬಹುದು.

Harisha - ಹರೀಶ said...

ಇಲ್ಲಿ ಮತ್ತು ಇಲ್ಲಿ ನೋಡಿ

Anonymous said...

ಶ್ರೀಯುತ ಹರೀಶರಿಗೆ ತುಂಬ-ತುಂಬ ಧನ್ಯವಾದಗಳು.

sunaath said...

ಹರೀಶ,
ವಿಜಯ ಕರ್ನಾಟಕದಲ್ಲಿಯ ಬೈರಪ್ಪನವರ ಲೇಖನಕ್ಕೆ ಕೊಂಡಿ ಕೊಟ್ಟದ್ದಕ್ಕಾಗಿ ಧನ್ಯವಾದಗಳು.

Jagali bhaagavata said...

ತಂಬೂರಿ ಪದ್ಯ ಬಪ್ಪುದ್ ಏಗ್ಳಿಕೆ?

sunaath said...

ಭಾಗವತರೆ,
ಶರೀಫರ ತಂಬೂರಿಯನ್ನು ಹುಡುಕುತ್ತಿದ್ದೇನೆ. ಶೀಘ್ರವೇ ಬಾರಿಸಲಾಗುವದು. ವಿಳಂಬಕ್ಕೆ ಕ್ಷಮೆ ಇರಲಿ.

ಸಂತೋಷಕುಮಾರ said...

ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೊಳಿಸಿ ಅಂತಾ ಸುಪ್ರಿಂ ಕೋರ್ಟು ಎಷ್ಟು ಹೇಳಿದರೂ ಕೇಳದ ಕೇಂದ್ರ ಸರಕಾರದವರು, ಹಿಂತಹ ವರದಿಗಳನ್ನು ಮಾತ್ರ ಚಾಚೂ ತಪ್ಪದೆ ಜಾರಿಗೊಳ್ಳಿಸಿಬಿಡುತ್ತಾರೆ.. ಸಾಮಾಜಿಕ ನ್ಯಾಯ, ಜಾತ್ಯಾತೀತತೆ ಇತ್ಯಾದಿ ಪದಗಳ "ಸದುಪಯೋಗ" ಭಾರತದಲ್ಲಿ ಆದಷ್ತು ಬೇರೆ ಎಲ್ಲೂ ಆಗಿರಲಿಕ್ಕಿಲ್ಲ್ಲ.. ಹಿಂತಹವೇ ಕೆಲ ನಾಲಾಯಕ್ ಪದ ಬಳಸುತ್ತಾ ಕೆಲವರು ಏನೋನೋ ಆಗಿ ಬಿಡುತ್ತಾರೆ.. ಮೇರಾ ಭಾರತ್ ಮಹಾನ್..
ಬುದ್ದಿಜೀವಿಯಾಗಲು ಗಡ್ಡ ಬಿಡುವದು ಒಂದು ಯೋಗ್ಯತೆ ಅಂತ ಗೊತ್ತಾಯ್ತು :)