’Super-male-fantasy’ ಎನ್ನುವ ಪದಕ್ಕೆ ಶ್ರೀ ಕೇಶವ ಕುಲಕರ್ಣಿಯವರು ’ಅತಿ-ಗಂಡಸ್ತನ-ಭ್ರಮೆ’ ಎನ್ನುವ ಪರ್ಯಾಯ ಕನ್ನಡ ಪದವನ್ನು ನೀಡಿದ್ದಾರೆ.
Fantasy ಎನ್ನುವ ಇಂಗ್ಲಿಶ್ ಪದಕ್ಕೆ ಸರಿಯಾದ ಪದ ಹೊಳೆಯದೆ ಇದ್ದುದರಿಂದ ನಾನು ಆ ಆಂಗ್ಲ ಪದವನ್ನೇ ಬಳಸುತ್ತ ಬಂದಿದ್ದೆ.
ಅವರ ಕೊಡುಗೆಗೆ ಧನ್ಯವಾದಗಳು.
ಆದರೆ, ಭ್ರಮೆ ಎನ್ನುವದು illusion ಪದಕ್ಕೆ ಸರಿಹೋಗುವದು.
Fantasy ಪದಕ್ಕೆ ’ಭ್ರಮಾವಿಲಾಸ’ ಎನ್ನುವ ಪದಪುಂಜ ಸರಿಯಾಗಬಹುದೆಂದು ಈಗ ಹೊಳೆಯುತ್ತಿದೆ.
ಆದುದರಿಂದ ಮುಂದಿನ ಭಾಗದಲ್ಲಿ ನಾನು ‘ಭ್ರಮಾವಿಲಾಸ’ ಎನ್ನುವ ಪದವನ್ನು fantasy ಪದಕ್ಕೆ ಪರ್ಯಾಯವಾಗಿ ಬಳಸುತ್ತೇನೆ.
ಭೈರಪ್ಪನವರ ಕಾದಂಬರಿಗಳಲ್ಲಿ ಕಂಡುಬರುವ ಈ ‘ಅಗಂಭ್ರವಿ’ ಬಗೆಗೆ ಹಿಂದಿನ ಲೇಖನದಲ್ಲಿ ಬರೆದ ಬಳಿಕ, ಸಹೃದಯ ಸ್ನೇಹಿತರು ಈ ವಿಷಯವನ್ನು ವಿವಿಧ ಕೋನಗಳಲ್ಲಿ ಪರೀಕ್ಷಿಸಿದ್ದಾರೆ.
ವಿಷಯದ ಪರವಾಗಿ ಹಾಗೂ ವಿರೋಧವಾಗಿ ಅನೇಕ ಟಿಪ್ಪಣಿಗಳು ಮೂಡಿವೆ.
ಈ ಟಿಪ್ಪಣಿಗಳನ್ನು ಸಮರ್ಪಕವಾಗಿ ಜೋಡಿಸಿಕೊಂಡು, ಸಮೀಕ್ಷಿಸುವ ಅವಶ್ಯಕತೆ ಕಂಡುಬರುತ್ತಿದೆ.
ಟಿಪ್ಪಣಿಗಳನ್ನು ಈ ರೀತಿಯಲ್ಲಿ ಜೋಡಿಸಿಕೊಳ್ಳಬಹುದು:
(೧) ರತಿಕ್ರಿಯೆಯ ವರ್ಣನೆ ಅನೇಕ ಸಾಹಿತಿಗಳ ಸಾಹಿತ್ಯದಲ್ಲಿ ಕಂಡುಬರುತ್ತದೆ. ಇದು ಕೇವಲ
ಭೈರಪ್ಪನವರ specialty ಅಲ್ಲ.
(೨) ಭೈರಪ್ಪನವರ ಸಾಹಿತ್ಯದಲ್ಲಿ ಕಂಡುಬರುವ ರತಿಕ್ರೀಡಾ ವರ್ಣನೆಯು ಸಂದರ್ಭಕ್ಕೆ ಉಚಿತವಾಗಿರುತ್ತದೆ. ಅದರಲ್ಲಿ ತಪ್ಪಿಲ್ಲ.
(೩) ಭೈರಪ್ಪನವರ ಸಮಗ್ರ ಸಾಹಿತ್ಯವನ್ನು ಅಧ್ಯಯನ ಮಾಡದೆ, ಈ ರೀತಿಯ ನಿರ್ಣಯಕ್ಕೆ ಬರುವದು ತಪ್ಪು.
ಈ ಟಿಪ್ಪಣಿಗಳಿಗೆ ನನ್ನ ಮರುಟಿಪ್ಪಣಿಗಳು ಈ ರೀತಿಯಾಗಿವೆ:
(೧) ರತಿಕ್ರೀಡೆಯ ವರ್ಣನೆ ಭೈರಪ್ಪನವರ ಕಾದಂಬರಿಗಳಲ್ಲಿ explicit ಆಗಿ ಕಂಡುಬರುವಷ್ಟು ಬೇರೆ ಯಾವದಾದರೂ ಕನ್ನಡ ಕಾದಂಬರಿಯಲ್ಲಿ ಕಂಡು ಬರುತ್ತಿದ್ದರೆ, ದಯವಿಟ್ಟು ತಿಳಿಸಬೇಕು. (except in porno literature).
ನನಗೆ ಗೊತ್ತಿರುವ ಮಟ್ಟಿಗೆ ಕುವೆಂಪು ಬರೆದ ‘ಮಲೆಗಳಲ್ಲಿ ಮದುಮಗಳು’ ಕಾದಂಬರಿಯಲ್ಲಿ ರತಿಕ್ರೀಡೆಯ explicit ವರ್ಣನೆ ಇದೆ.
(ಓದಬಯಸುವವರು ಮೋಟುಗೋಡೆಯ ಮರೆಯಲ್ಲಿ ನೋಡಿರಿ.)
ಆದರೆ, ಈ ವರ್ಣನೆ ‘ಅತಿ-ಗಂಡಸ್ತನ-ಭ್ರಮಾವಿಲಾಸ’ದ ವರ್ಣನೆ ಅಲ್ಲ.
On the contrary, ಗಂಡು ಹೆಣ್ಣುಗಳ ಸಮಾನತೆಯನ್ನು, ಸಮಾನ ಆಸಕ್ತಿಯನ್ನು, ಕಾಮದ ಸಹಜತೆಯನ್ನು ತೋರಿಸುವ ವರ್ಣನೆ ಇದಾಗಿದೆ.
ಭೈರಪ್ಪನವರ ರತಿವರ್ಣನೆಗಳಲ್ಲಿ ಕಂಡುಬರುವ ವೈಶಿಷ್ಟ್ಯವೆಂದರೆ ‘ಅಗಂಭ್ರವಿ’.
ಇದರ ಅನೇಕ ಉದಾಹರಣೆಗಳನ್ನು ನಾನು ಹಿಂದಿನ ಲೇಖನದಲ್ಲಿ ಕೊಟ್ಟಿದ್ದೇನೆ.
ಅವರ ಒಂದು ಕಾದಂಬರಿಯಲ್ಲಿ (‘ಅನ್ವೇಷಣೆ’) ಬರುವ ಸಂದರ್ಭವನ್ನು ಇಲ್ಲಿ ಮತ್ತೊಮ್ಮೆ ನೆನಪಿಸಬಯಸುತ್ತೇನೆ.
ಕಾದಂಬರಿಯ ನಾಯಕನ ಗುರುವಾದ ಒಬ್ಬ ಸಾಧುಬಾಬಾ, ನಾಯಕನ ಹಾಗೆ ತಾನೂ ರತಿಸುಖವನ್ನು ಸವಿದು, ಜೀವನದಲ್ಲಿ ಅದರ ಮೌಲ್ಯ ಗುರುತಿಸುವ ಬಯಕೆಯೊಂದಿಗೆ, ಮುಂಬಯಿಯಲ್ಲಿ ಸೂಳೆಯೊಬ್ಬಳ ಬಳಿಗೆ ಹೋಗುತ್ತಾನೆ.
ಸರಿ, ಓದುಗನಿಗೆ ಇದರಲ್ಲಿ ಎಂತಹ ತಪ್ಪೂ ಕಾಣುವದಿಲ್ಲ.
ಸಾಮಾನ್ಯ ಗಂಡಸಿನ ತರಹ ಒಂದು ನಿರ್ದಿಷ್ಟ ಅವಧಿಯವರೆಗೆ, ಆ ಸಾಧುಬಾಬಾ ಕ್ರೀಡಿಸಿದ್ದರೆ ಹಾಗೂ ರತಿಸುಖ ಪಡೆಯುವದರಲ್ಲಿ ತಪ್ಪಿಲ್ಲ ಎನ್ನುವ ನಿರ್ಣಯಕ್ಕೆ ಬಂದಿದ್ದರೆ, ಅದಕ್ಕೆ ಏನೂ ಆಕ್ಷೇಪಣೆ ಇರುತ್ತಿರಲಿಲ್ಲ.
ಆದರೆ, ಭೈರಪ್ಪನವರ ವರ್ಣನೆಯ ಮೇರೆಗೆ ಆ ಸಾಧುಬಾಬಾ ೪ ದಿನಗಳವರೆಗೆ ನಿರಂತರವಾಗಿ ಅವಳಲ್ಲಿ ಕ್ರೀಡಿಸಿದ!
ಓದುಗನು ಅದನ್ನೂ ಸಹ ಒಪ್ಪಿಕೊಂಡಾನು.
ಬಹುಶಃ ಭೈರಪ್ಪನವರು Guinnes Record ಸಾಧಿಸುವ ಉದ್ದೇಶದಿಂದ ಹಾಗೆ ಬರೆದಿದ್ದಾರು ಎಂದುಕೊಳ್ಳೋಣ.
ಆದರೆ, ಈ ಮುಂದಿನ ವಾಕ್ಯವನ್ನು ಗಮನಿಸಿ:
“ಅವಳು ಬಳಲಿದ್ದಳು. ನಾನು ಏನೂ ಬಳಲಿರಲಿಲ್ಲ.”
ಈ ವಾಕ್ಯವು ರತಿಸುಖದ ಮೌಲ್ಯಮಾಪನೆಗೆ ಅವಶ್ಯಕವೆ?
Does it not smack of super-male-fantasy?
ಕನ್ನಡದ ಇತರ ಸಾಹಿತಿಗಳ ಸಾಹಿತ್ಯದಲ್ಲಿ ಕಂಡುಬಂದಿರಬಹುದಾದ ರತಿವರ್ಣನೆಯು ‘ಅಗಂಭ್ರವಿ’ ಅಲ್ಲ. ಅದು ಕೇವಲ ರತಿಕ್ರೀಡೆಯ ಸರಳ ವರ್ಣನೆಯಷ್ಟೇ.
(೨) ಭೈರಪ್ಪನವರ ಕಾದಂಬರಿಗಳಲ್ಲಿ ಕಂಡುಬರುವ ರತಿಕ್ರೀಡಾ ವರ್ಣನೆಯು ಸಂದರ್ಭಜನ್ಯವಾಗಿರುತ್ತದೆ ಎನ್ನುವದು ಮತ್ತೊಂದು ಟಿಪ್ಪಣಿ.
ಅನೇಕ ಕನ್ನಡ ಹಾಗೂ ಹಿಂದಿ ಸಿನೆಮಾಗಳಲ್ಲಿ, ನಾಯಕ ಹಾಗೂ ನಾಯಕಿ ವನದಲ್ಲಿ ಅಥವಾ ಉಪವನದಲ್ಲಿ ತಿರುಗಾಡುತ್ತಿರುವಾಗ ಧಾರಾಕಾರವಾಗಿ ಮಳೆ ಹುಯ್ಯಲು ಪ್ರಾರಂಭವಾಗುತ್ತದೆ. ನಾಯಕ ಹಾಗೂ ನಾಯಕಿ ಸಂದರ್ಭಕ್ಕೆ ಉಚಿತವಾಗಿಯೇ (!) ಮಿಲನಗೊಳ್ಳುತ್ತಾರೆ.
EXACTLY ಇದೇ ರೀತಿಯಲ್ಲಿ, ‘ಗ್ರಹಣ’ ಕಾದಂಬರಿಯ ನಾಯಕರಾದ ಸ್ವಾಮೀಜಿಯವರು ನಾಯಕಿಯೊಡನೆ ಮಿಲನಗೊಂಡರು.
ತಪ್ಪೇನಿಲ್ಲ ಬಿಡಿ; ಸಂದರ್ಭವೇ ಹಾಗಿದೆ ಎಂದು ಒಪ್ಪಿಕೊಳ್ಳೋಣ.
ಆದರೆ ಈ ರತಿಕ್ರೀಡೆಯು ಸ್ವಾಮೀಜಿಯವರ ’ಅತಿಮಾನುಷಪೌರುಷ’ದ ವರ್ಣನೆಯಾಗುವದರ ಔಚಿತ್ಯವೇನು; ಕಾದಂಬರಿಯ ಕಥಾನಕಕ್ಕೆ ಇದು ಯಾವ ರೀತಿಯಲ್ಲಿ ಪೂರಕ ಎನ್ನುವದಷ್ಟೇ ನನ್ನ ಪ್ರಶ್ನೆ.
(೩) ಭೈರಪ್ಪನವರ ಸಮಗ್ರ ಸಾಹಿತ್ಯವನ್ನು ಅಧ್ಯಯನ ಮಾಡದೆ, ಈ ರೀತಿಯ ನಿರ್ಣಯಕ್ಕೆ ಬರುವದು ತಪ್ಪು:
ಭೈರಪ್ಪನವರು ಈವರೆಗೆ ಬರೆದ ೨೦ ಕಾದಂಬರಿಗಳ ಪೈಕಿ ೧೨ ಕಾದಂಬರಿಗಳಿಂದ ಈ ಲೇಖನದಲ್ಲಿ ನಾನು quote ಮಾಡಿದ್ದೇನೆ. ಇವರ ಎಲ್ಲಾ ಕಾದಂಬರಿಗಳಿಂದ ನಾನು quote ಮಾಡಿದ್ದರೆ, ಲೇಖನವು ಅನವಶ್ಯಕವಾಗಿ ದೀರ್ಘವಾಗುತ್ತಿತ್ತು.
ಭೈರಪ್ಪನವರ ಆತ್ಮಚರಿತ್ರೆ ಹಾಗೂ ವಿಮರ್ಶಾಗ್ರಂಥಗಳನ್ನು ನಾನು ಬಿಟ್ಟಿದ್ದಕ್ಕೆ ಆಕ್ಷೇಪಣೆ ಬಂದಿದೆ.
ಅಲ್ರೀ, ಆತ್ಮಚರಿತ್ರೆಯಲ್ಲಿ ಯಾರಾದರೂ ‘ಅಗಂಭ್ರವಿ’ಯನ್ನು ಬರೆಯುತ್ತಾರೆಯೆ?!
………………………………………………………………………………
ಉಳಿದ ಸಾಹಿತಿಗಳಿಗೆ ಹೋಲಿಸಿದಾಗ ಭೈರಪ್ಪನವರು ಎಲ್ಲಿ ನಿಲ್ಲುತ್ತಾರೆ?
ಕನ್ನಡದ ಕೆಲವು ನಾಮಾಂಕಿತ ಕಾದಂಬರಿಕಾರರನ್ನು ತೆಗೆದುಕೊಳ್ಳೋಣ:
ಶಿವರಾಮ ಕಾರಂತರು ಕನ್ನಡದ ಉದ್ದಾಮ ಸಾಹಿತಿಗಳು.
ಅವರ ಅನೇಕ ಕಾದಂಬರಿಗಳನ್ನು ಓದಿದವರಿಗೆ ಒಂದು ವಿಷಯ ಸ್ಪಷ್ಟವಾಗಿ ಗೋಚರವಾಗುತ್ತದೆ:
ಸಾಮಾನ್ಯ ಮಾನವನ ಬಗೆಗಿರುವ ಗೌರವ, ಸಹಕಂಪ ಹಾಗೂ ಮಾನವಪ್ರಯತ್ನದಲ್ಲಿರುವ ವಿಶ್ವಾಸ ಇವು ಕಾರಂತರ ಸಾಹಿತ್ಯದ ಮೂಲ ಆಶಯಗಳಾಗಿವೆ.
ಈಗ ತ್ರಿವೇಣಿಯವರನ್ನು ತೆಗೆದುಕೊಳ್ಳೋಣ.
ಕನ್ನಡದ ಖ್ಯಾತ ವಿಮರ್ಶಕರಾದ (ದಿ.) ಕೀರ್ತಿನಾಥ ಕುರ್ತಕೋಟಿಯವರು ತ್ರಿವೇಣಿಯವರ ಕಾದಂಬರಿಗಳನ್ನು ಅರೆಬೆಂದ ಕನಸುಗಳು ಎಂದು ವಿಮರ್ಶಿಸುವ ಮೂಲಕ ಈ ಲೇಖಕಿಗೆ ದೊಡ್ಡ ಅನ್ಯಾಯ ಮಾಡಿದ್ದಾರೆ.
ತ್ರಿವೇಣಿಯವರ ಎಲ್ಲಾ ಕಾದಂಬರಿಗಳಲ್ಲಿ ಕಂಡು ಬರುವ ಮೂಲ ಆಶಯವೆಂದರೆ: Woman’s aspirations.
ಹೆಣ್ಣಿಗೂ ಸಹ ಗಂಡಿನಂತೆಯೇ ಆಕಾಂಕ್ಷೆಗಳಿರುತ್ತವೆ, ಅವಳಿಗೂ ಮನಸ್ಸೆಂಬುದು ಒಂದಿದೆ, ಗಂಡು ಹಾಗು ಹೆಣ್ಣು ಪರಸ್ಪರ ಪ್ರೇಮಿಗಳೇ ಹೊರತು ಪ್ರತಿಸ್ಪರ್ಧಿಗಳಲ್ಲ ಎನ್ನುವದು ಅವರ ಸಾಹಿತ್ಯದ ಮೂಲ ಆಶಯ.
ಕನ್ನಡದ ಕಥಾಬ್ರಹ್ಮರೆಂದು ಹೆಸರು ಪಡೆದ ಮಾಸ್ತಿಯವರ ಸಾಹಿತ್ಯದ ಮೂಲ ಆಶಯವೇನು?
ಮಾನವನ ಆದರ್ಶ, ಘನತೆ, ಸ್ತ್ರೀಯರ ಬಗೆಗೆ ಔದಾರ್ಯ ಇವು ಮಾಸ್ತಿಯವರ ಸಾಹಿತ್ಯದ ಮೂಲ ಆಶಯಗಳು.
(ಈ ಎಲ್ಲ ಅಂಶಗಳನ್ನು ಒಳಗೊಂಡ ಅವರ ಅತ್ಯುತ್ತಮ ಕತೆ ಎಂದರೆ ‘ವೆಂಕಟಿಗನ ಹೆಂಡತಿ’.)
ಕಥಾಸಾಹಿತ್ಯದಲ್ಲಿ ಮಾಸ್ತಿಯವರಷ್ಟೇ ಶ್ರೇಷ್ಠರಾದ ಪಿ. ಲಂಕೇಶರ motif ಮಾತ್ರ ಬೇರೆಯಾಗಿತ್ತು.
ಇವರು ಪರಿಸರದ ಅನಿವಾರ್ಯತೆಯಿಂದ ಉಂಟಾದ ಮನುಷ್ಯನ ಕ್ಷುದ್ರತೆಯನ್ನು ತೋರಿಸಿದರು.
ಇದರ ಉದಾಹರಣೆಯಾಗಿ ಕನ್ನಡದ ಶ್ರೇಷ್ಠ ಕವನಗಳಲ್ಲೊಂದಾದ ಅವರ ‘ಅವ್ವ’ ಕವನವನ್ನೇ ನೋಡಬಹುದು.
ಇಲ್ಲಿ ಅವರು ತಮ್ಮ ಅವ್ವನನ್ನು ‘ಬನದ ಕರಡಿ’ ಎಂದು ಬಣ್ಣಿಸುತ್ತಾರೆ.
ತನ್ನ ಗಂಡನ ಲಂಪಟತನ, ಬೇಜವಾಬ್ದಾರಿ ವರ್ತನೆ, ಮಕ್ಕಳನ್ನು ತಾನೇ ಸಾಕಬೇಕಾದ ಹೊಣೆಗಾರಿಕೆ ಇವೇ ಅವಳನ್ನು ಕರಡಿಯನ್ನಾಗಿ ಪರಿವರ್ತಿಸಿದ ಕಾರಣಗಳು.
ಅವರ ‘ಮೈಲಿ ಮುಖದ ಹಜಾಮ’ ಸಹ ಒಬ್ಬ ಮನುಷ್ಯನು ಮತ್ತೊಬ್ಬ ಮನುಷ್ಯನನ್ನು ನಂಬಲಾರದಂತಹ ಮಾನವ ಪರಿಸರವನ್ನು ತೋರಿಸುತ್ತದೆ.
ವಿಶ್ವಸಾಹಿತ್ಯದಲ್ಲಿ ಸ್ಥಾನ ಪಡೆಯುವಂತಹ ಕತೆಗಳನ್ನು ಬರೆದ ದೇವನೂರು ಮಹಾದೇವ ಇವರ ಮೂಲ ಆಶಯಗಳೇನು?
ಶೋಷಣೆಯ ಸ್ಥಿತಿಯು ಯಾವ ರೀತಿಯಲ್ಲಿ ಮನುಷ್ಯನನ್ನು compromise ಮಾಡಿಸುತ್ತದೆ ಎನ್ನುವದು ದೇವನೂರರ motif.
ನಮ್ಮ ಸಮಾಜದಲ್ಲಿ ಹೆಣ್ಣು ಪಡುವ ಯಾತನೆಯನ್ನು, ಅವಳ ಅಸಹಾಯಕತೆಯನ್ನು ಭೈರಪ್ಪನವರಷ್ಟು ಚೆನ್ನಾಗಿ ಯಾರೂ ತೋರಿಸಿಲ್ಲ.
ಇದು ಭೈರಪ್ಪನವರ ಸಾಹಿತ್ಯದ ಮೂಲ ಆಶಯ.
ಆದರೆ ಇದರ ಜೊತೆಗೇ ‘ಅಗಂಭ್ರವಿ’ಯ motif ಸೇರಿಕೊಂಡಿರುವದು ಅವರ ದುರದೃಷ್ಟ.
ಅಥವಾ ಇದು ಕನ್ನಡಿಗರ ದುರದೃಷ್ಟವೆ?
………………………………………………………………………………………
ಸಹೃದಯರಿಗೆಲ್ಲ ಹೊಸ ವರ್ಷದ ಶುಭಾಶಯಗಳು!
Tuesday, December 30, 2008
Subscribe to:
Post Comments (Atom)
35 comments:
ಕಾಕಾ, ನೀವಂದಿದ್ದು ನಿಜ.
ಒಂದು ಸಾಹಿತ್ಯ ಕೃತಿಯನ್ನು ಓದುವಾಗ ಅದರ ಕಥಾ ಹಂದರದ ಜೊತೆಗೇ ಅದರ ಆಶಯ ಕೂಡಾ ಮುಖ್ಯವಾಗುತ್ತದೆ. ಅಂದರೂ ಕೂಡಾ, ನೀವು ವಿಶ್ಲೇಷಿಸಿದ ಯಾವುದೇ ಕಾದಂಬರಿಯಲ್ಲಿ (at least ನಾನು ಓದಿರುವ ಕಾದಂಬರಿಗಳಲ್ಲಿ) ಮೂಲ ಕಥೆಯ ಹಂದರಕ್ಕೆ, ಅದರ ಆಶಯಕ್ಕೆ ಈ "ಅಗಂಭ್ರವಿ" ಅನಗತ್ಯ ಅಂತ ನಿಚ್ಚಳವಾಗಿ ತೋರಿಬರುತ್ತದೆ. ನಾನೊಬ್ಬ ಹೆಣ್ಣಾದ್ದರಿಂದ ಅದು ನನಗೆ ಅಪಥ್ಯವಾಯಿತೇನೋ ಅಂತ ಅಂದುಕೊಂಡಿದ್ದೆ. ಇಲ್ಲಿ ಇಷ್ಟೆಲ್ಲ ಚರ್ಚೆ ಓದಿದಾಗ ನಾನು ಒಂಟಿಯಲ್ಲ, ನಿಮ್ಮಂಥ ಹಿರಿಯರೂ ಇದೇ ಅಭಿಪ್ರಾಯ ಹೊಂದಿದ್ದೀರಿ ಅಂತ ಗೊತ್ತಾಯ್ತು. (ಒಂದಿಷ್ಟು ಖುಷಿಯೂ ಆಗಿದೆ!)
ಮತ್ತೆ ಧನ್ಯವಾದಗಳು.
ಹಾಗೇನೇ, ಹೊಸವರುಷದ ಶುಭಾಶಯಗಳೂ. ಹೊಸವರುಷ ನಿಮಗೆಲ್ಲ ಸಂತೋಷ, ನೆಮ್ಮದಿಯನ್ನು ತರಲಿ. ಒಳ್ಳೆಯ ಆರೋಗ್ಯಭರಿತ ಜೀವನ ನಿಮ್ಮದಾಗಲಿ.
ಜ್ಯೋತಿ,
ಕನ್ನಡ ಸಾಹಿತ್ಯವನ್ನು ಬೆಳೆಯಿಸಿದ ಮಹಾನುಭಾವರ ಸಾಹಿತ್ಯದ ಮೂಲ ಆಶಯಗಳನ್ನು ಗುರುತಿಸುವದು ಒಂದು ಉತ್ತಮ ಕೆಲಸವಾದೀತು.
ಉದಾ: ನಿರಂಜನರ ಪ್ರಗತಿಶೀಲ ಧೋರಣೆ.
ಹೊಸವರ್ಷವು ನಿಮಗೆಲ್ಲರಿಗೂ ಶುಭಕರವಾಗಲಿ ಎಂದು ಹಾರೈಸುತ್ತೇನೆ.
ಕಾಕಾ,
ನಿಮ್ಮ ಮೊದಲಿನ ಲೇಖನಕ್ಕಿಂತ ಈ ಲೇಖನ ಮತ್ತೂ ಸ್ಪಷ್ಟವಾಗಿದೆ. ಅರ್ಥವಾಗುವಂತಿದೆ. ನಿಮಗೂ ಹಾಗೂ ಎಲ್ಲಾ ಓದುಗರಿಗೂ ನನ್ನ ಕಡೆಯಿಂದಲೂ ಹೊಸವರುಷದ ಹಾರ್ದಿಕ ಶುಭಾಶಯಗಳು :)
ಅಂದಹಾಗೆ ನಿಜವಾಗಿಯೂ ಹೊಸ ವರುಷದಾರಂಭ ಯುಗಾದಿಯಿಂದಲ್ಲವೇ? ಆದರೂ ಶುಭಾಶಯ ತಿಳಿಸಲು ಯಾವ ದಿನ/ಆಚರಣೆಯ ಹಂಗಿಲ್ಲ ಬಿಡಿ..:)
ತೇಜಸ್ವಿನಿ,
ನಿನಗೂ ಸಹ ಹೊಸ ವರ್ಷದ ಶುಭಾಶಯಗಳು.
ಯುಗಾದಿ ದಿವಸ ಮತ್ತೊಮ್ಮೆ ಹೇಳೋಣವಂತೆ!
ನಿಮಗೆ, ಸೌ. ವನಮಾಲಾರಿಗೆ, ಸಲ್ಲಾಪದ ಸಮಸ್ತ ಬಳಗಕ್ಕೆ ಹೊಸ ವರ್ಷ 2009 ರ ಶುಭಾಷಯಗಳು.
ಈ ಲೇಖನ ಒಂದು ವಿಮರ್ಶೆಯಾಗದೆ, ನಿಮ್ಮ ಮೊದಲಿನ ಲೇಖನವನ್ನು ಸಮರ್ಥಿಸಿಕೊಳ್ಳುವ ಮರಿ ಲೇಖನವಾಗಿದೆ. ನೀವು 'ಸಂಶೋಧಿಸಿದ' ಅಗಂಭ್ರವಿ ಭೈರಪ್ಪನವರ ಕಾದಂರಿಗಳ ಆಶಯವೆಂಬ ನುಮ್ಮ ಅನಿಸಿಕೆಯನ್ನು ಸಿದ್ಧಮಾಡುವದಕ್ಕೆ ಇದು ಎರಡನೆಯ ಪ್ರಮೇಯವೆಂದು ತೋರುತ್ತದೆ ! ನನಗನಿಸುವ ಮಟ್ಟಿಗೆ, ನೀವು ಭೈರಪ್ಪನವರ ಕಾದಂಬರಿಗಳ ಕಥೆಯ ಅಂತಃ ಸತ್ವವನ್ನು ಹುಡುಕುವ ಬದಲು, ಅಗಂಭ್ರವಿಯುಕ್ತ ಭಾಗಗಳನ್ನು ಹುಡುಕುವಲ್ಲಿ ನಿಮ್ಮ ಲಕ್ಷ ಹರಿಸಿದ್ದೀರಿ ; ಅದಕ್ಕೆ ನಿಮಗೆ ಭೈರಪ್ಪನವರ ಕಾದಂಬರಿಗಳಲ್ಲಿ ಎಲ್ಲವೂ ಅಗಂಭ್ರವಿಯಾಗಿಯೇ ಗೋಚರವಾಗುತ್ತಿದೆ. ಅವರ ಕಾದಂಬರಿಗಳಲ್ಲಿ ಅಗಂಭ್ರವಿ ಇದೆಯೆಂದೇ ಒಂದು ನಿಮಿಷಕ್ಕೆ ಒಪ್ಪಿಕೊಳ್ಳೋಣ ! ಆದರೆ, ಅದು ಕಥೆಯ ಬಳ್ಳಿಗೆ ಹಂದರವಾಗಿದೆಯೆ, ಹೊರತು ಅದೇ ಕಥೆಯ ಆಶಯವಾಗಿಲ್ಲವಲ್ಲ ? ಅದೇ ಕಥೆಯ ಆಶಯವಾಗಿದ್ದಿದ್ದರೆ, ಅವರ ಕಾದಂಬರಿಗಳು, ಪಾತ್ರಗಳು, ಓದುಗರ ಮನಸ್ಸನ್ನು ತಟ್ಟುತ್ತಿರಲಿಲ್ಲ ! ಜನಮಾನಸದಲ್ಲಿ ಉಳಿಯುತ್ತಿರಲಿಲ್ಲ !
"ಅತಿ-ಗಂಡಸುತನದ-ಭ್ರಮಾಲೋಕ" ಭ್ರಮಾ-ವಿಲಾಸಕ್ಕಿಂತಲೂ ಸರಿಯಾದ ಪದಪುಂಜವಾಗುವದಲ್ಲವೆ ?
ನಿಮಗೂ ಮತ್ತು ’ಸಲ್ಲಾಪ’ದ ಸಮಸ್ತ ಬಳಗಕ್ಕೂ ಹೊಸ ವರ್ಷದ ಹಾರ್ದಿಕ ಶುಭಕಾಮನೆಗಳು.
ಈ ಹೊಸ ವರುಷದಲ್ಲಿ ನಿಮ್ಮಿಂದ ಹೊಸ ಹೊಸ ವಿಚಾರಗಳು ಹೊರಬರಲಿ.ಹಾಗೆಯೇ ಅರ್ಥಪೂರ್ಣ
ಚರ್ಚೆಗಳನ್ನು ಹುಟ್ಟುಹಾಕುವಂತಾಗಲಿ ಎಂದು ಹಾರೈಸುತ್ತೇನೆ..
-ರ್ಆಘವೇಂದ್ರ ಜೋಶಿ.
ಶ್ರೀ ಕಟ್ಟಿಯವರೆ,
ನಿಮಗೂ ಹಾಗೂ ನಿಮ್ಮ ಕುಟುಂಬವರ್ಗಕ್ಕೂ ಹೊಸ ವರ್ಷದ ಶುಭಾಶಯಗಳು.
ನಿಮ್ಮ ಆಕ್ಷೇಪಣೆಗಳಿಗೆ ನನ್ನ ಸಮಾಧಾನ ಹೀಗಿದೆ:
‘ಅಗಂಭ್ರವಿ’ಯು ಭೈರಪ್ಪನವರ ಕಾದಂಬರಿಗಳ ಆಶಯವೆಂದು ನಾನು ಎಲ್ಲೂ ಹೇಳಿಲ್ಲ.
ಅದನ್ನು ಸಂಶೋಧಿಸುವ ಅಥವಾ ಅಂತಹ ಭಾಗಗಳನ್ನು ಹುಡುಕುವ ಅಗತ್ಯವೇ ನನಗಿಲ್ಲ. ಏಕೆಂದರೆ ಅಂಗೈ ಹುಣ್ಣಿಗೆ ಕನ್ನಡಿ ಏಕೆ?
ಅಗಂಭ್ರವಿಯು ಕತೆಯ ಬಳ್ಳಿಗೆ ಹಂದರವಾಗಿದೆಯೇ ಹೊರತು ಅದೇ ಕತೆಯ ಆಶಯವಾಗಿಲ್ಲ ಎಂದು ನೀವು ಹೇಳಿದ್ದೀರಿ. ಬಳ್ಳಿಗೆ ಹಂದರ ಹಬ್ಬಿಸುವಾಗ ಭೈರಪ್ಪನವರು ಮಲ್ಲಿಗೆ ಹಂದರ ಹಬ್ಬಿಸಿದ್ದಾರೊ ಅಥವಾ ಹೇಸಿಗೆ ಹೂವಿನ ಹಂದರ ಹಬ್ಬಿಸಿದ್ದಾರೊ ಎನ್ನುವದನ್ನು ನೀವೇ ಪರೀಕ್ಷಿಸಿ ನೋಡಿರಿ!
ಒಂದು ಕತೆ ಅಥವಾ ಕಾದಂಬರಿ ಜನಮಾನಸದಲ್ಲಿ ಉಳಿಯಬೇಕಾದರೆ ಅದಕ್ಕೆ ಅನೇಕ ಕಾರಣಗಳಿರುತ್ತವೆ.
(೧) ಭೈರಪ್ಪನವರು ತಮ್ಮ ಕಾದಂಬರಿಗಳ ಹಂದರವನ್ನು ಚಾಣಾಕ್ಷತನದಿಂದ ಹಾಗೂ ಪರಿಶ್ರಮಪೂರ್ವಕವಾಗಿ ಹೆಣೆಯುತ್ತಾರೆ.
(೨) ತೀವ್ರ ತಳಮಳದ, ಛಲವಾದಿ ನಾಯಕ / ನಾಯಕಿಯೊಂದಿಗೆ ಓದುಗನಿ/ಳಿಗೆ identification ಸುಲಭವಾಗುತ್ತದೆ ಹಾಗು satisfactory ಆಗುತ್ತದೆ.
(೩) ತತ್ವಜಿಜ್ಞಾಸೆಯ ಸೋಗಲಾಡಿತನ ಓದುಗನ ಮನಸ್ಸಿಗೆ ಸಮಾಧಾನ ನೀಡುತ್ತದೆ.
(೪) Explicit ರತಿವರ್ಣನೆಯ ಮೊದಲು / ನಂತರ / ಜೊತೆ ಜೊತೆಗೆ ತತ್ವಜಿಜ್ಞಾಸೆ ಇರುವದರಿಂದ (porno ಓದುತ್ತಿರುವಾಗಿನ) guilt complex ಬರುವದಿಲ್ಲ.
ಇತ್ಯಾದಿ.
ಮುಕ್ತ ಚರ್ಚೆಗಾಗಿ ಧನ್ಯವಾದಗಳು.
anonymusರೆ,
'ಭ್ರಮಾಲೋಕ' ಎನ್ನುವದು ನಿಜಕ್ಕೂ ಉತ್ತಮ ಪದಪುಂಜ.
Fantasy ಪದಕ್ಕೆ 'ಭ್ರಮಾವಿಲಾಸ'ದ ಬದಲು 'ಭ್ರಮಾಲೋಕ' ಎನ್ನುವದೇ ಹೆಚ್ಚು ಸರಿಯಾದೀತು.
rj,
ಧನ್ಯವಾದಗಳು.
ಸಲ್ಲಾಪದ ಚರ್ಚಾಕೂಟದಲ್ಲಿ ಅರ್ಥವತ್ತಾಗಿ ಭಾಗವಹಿಸಿ ಸಲ್ಲಾಪವು ಹೆಚ್ಚು ಅರ್ಥಪೂರ್ಣವಾಗುವದಕ್ಕೆ ಕೊಡುಗೆ ನೀಡಿದ್ದೀರಿ.
ಹೊಸ ವರ್ಷವು ನಿಮಗೆ ಹಾಗು ನಿಮ್ಮ ಕುಟುಂಬವರ್ಗಕ್ಕೆ ಹರ್ಷಕರವಾಗಲಿ ಎಂದು ಹಾರೈಸುತ್ತೇನೆ.
ಸುನಾಥರೇ,
ನಾನು ಸುಮ್ಮನೇ ಕಾದಂಬರಿ ಓದುತ್ತೇನೆ, ನೀವು ಬಹಳಷ್ಞು ಓದಿದ್ದೀರಿ, ಆ ಬಗ್ಗೆ ಸಾಕಷ್ಟು ಸಂಶೋಧನೆ ಕೂಡಾ ಮಾಡಿದ್ದೀರಿ...ಈ ಹೊಸತೊಂದು ದೃಷ್ಟಿಕೋನ ಆಸಕ್ತಿದಾಯಕ ..
೨೦೦೯ ನಿಮಗೆ, ನಿಮ್ಮ ಕುಟುಂಬಕ್ಕೆ ಜೀವನಪ್ರೀತಿಯನ್ನು ಸದಾ ಪೂರೈಸಲಿ ಎಂದು ಹಾರೈಸುವೆ
ಕಾಕ,
ಒಂದು ಹೊಸ ದೃಷ್ಟಿಕೂನ ದಿಂದ ಭೈರಪ್ಪನವರ ಕಾದಂಬರಿಯಲ್ಲಿ ಕಾಣಬರುವ ಅತಿ ಗಂಡಸ್ತನ ಭ್ರಮಾಲೋಕವನ್ನು ತೋರಿಸಿದ್ದಕ್ಕೆ ಧನ್ಯವಾದಗಳು.
ಹೊಸ ವರ್ಷದ ಹಾರ್ದಿಕ ಶುಭಾಶಯಗಳು.
-ಬಾಲ.
ವೇಣು,
ಧನ್ಯವಾದಗಳು.
ಹೊಸ ವರ್ಷವು ನಿಮಗೆ ಹರ್ಷದಾಯಕವಾಗಲಿ.
ಬಾಲಗ್ಲೋಬಲ್,
ನಿಮಗೂ ಸಹ ಹೊಸ ವರ್ಷದ ಹಾರ್ದಿಕ ಶುಭಾಶಯಗಳು.
......are the male characters of Byrappa 'super male fantasy' ? I dont feel so....as....my husband...behaves the same way....even after 16 years of our marriage. He never gets tired....and hid desire never gets tired !
ಸುನಾಥ ಸರ್...
ನಿಮಗೆ ಹೊಸ ಕ್ಯಾಲೆಂಡರ್ ವರ್ಷದ ಹಾರ್ದಿಕ ಶುಭಕಾಮನೆಗಳು..
ಈ ಚರ್ಚೆಯಲ್ಲಿ ಭಾಗವಹಿಸಲು ನಾನು ಇನ್ನೂ ಓದಬೇಕು...
ಓದುತ್ತಿರುವೆ...
ಧನ್ಯವಾದಗಳು...
ಅನಾಮಿಕಾ,
ಒಬ್ಬ ವ್ಯಕ್ತಿಗೆ ಪ್ರಬಲ ಕಾಮೇಚ್ಛೆ ಹಾಗು ಪ್ರಬಲ ಕಾಮಶಕ್ತಿ ಇದ್ದರೆ,it is welcome.
ಆದರೆ, ಆ ತರಹ ಕೇವಲ ಹಗಲುಗನಸು ಕಾಣುವದು ಬೇರೆ ವಿಷಯ. ಈ ಹಗಲುಗನಸು ವೈಯಕ್ತಿಕ ಸ್ಥಳದಿಂದ ಸಾರ್ವಜನಿಕ ಸ್ಥಳಕ್ಕೆ ಬದಲಾದಾಗ, ಸಾಹಿತ್ಯದಲ್ಲಿ ಕಂಡುಬರುವ 'ಅಗಂಭ್ರವಿ'ಯಾಗುತ್ತದೆ.
ರತಿಕ್ರಿಯೆಯಲ್ಲಿ ಹೆಣ್ಣನ್ನು ಸೋಲಿಸಿ ಅವಳ ಮೇಲೆ ‘ವಿಜೃಂಭಿಸುವ’ ಬಯಕೆ ಪ್ರಕೃತಿಯ ಸಂವಿಧಾನಕ್ಕೆ ವಿರುದ್ಧವಾದ ಬಯಕೆ. ಇದು ಶಕ್ಯವಾಗದಿದ್ದಾಗ ಗಂಡಸು ಹಗಲುಗನಸು ಕಾಣುತ್ತಾನೆ. This is ‘ಅಗಂಭ್ರವಿ’.
ನಿಮ್ಮ ಪತಿರಾಯರು most healthy person ಎಂದು ನನ್ನ ಅಭಿಪ್ರಾಯ. May you both continue to enjoy good health for ever.
ಹೊಸ ವರ್ಷದ ಶುಭಾಶಯಗಳು.
ಪ್ರಕಾಶ,
ಅಧ್ಯಯನ ಮಾಡೋಣ, ಚರ್ಚೆ ಮಾಡೋಣ, ಹೊಸ ವಿಚಾರಗಳನ್ನುನೋಡೋಣ, ಪಡೆಯೋಣ.
ಹೊಸ ವರ್ಷದ ಶುಭಾಶಯಗಳು.
Sexual act is mutual. Both partners enjoy and there is no question of one defeating the other ! It is no war !! Nature has designed it for a noble purpose of reproduction ! If it is described explicitly, what is wrong ? I fail to understand what is troubling u in byrappa's novels ?
ಅನಾಮಿಕಾ,
ನಾವೆಲ್ಲರೂ ತಿಳಿದಿರುವ ಪ್ರಕಾರ ಸೃಷ್ಟಿಗೆ ಕಾರಣವಾಗುವದರಿಂದ, ರತಿಕ್ರಿಯೆಯು ಸುಖಕರವಾದದ್ದು. ಇದರಲ್ಲಿ ಯಾರೂ ಯಾರನ್ನೂ ಸೋಲಿಸುವ ಪ್ರಶ್ನೆ ಇಲ್ಲ.
ಈ ರೀತಿಯಾಗಿ ವರ್ಣನೆ ಮಾಡಲಾದ ಸಾಹಿತ್ಯ ನಮ್ಮಲ್ಲಿದೆ. ಇದಕ್ಕೆ ನನ್ನ ಆಕ್ಷೇಪಣೆ ಇಲ್ಲ. ಕುವೆಂಪು ಬರೆದ 'ಮಲೆಗಳಲ್ಲಿ ಮದುಮಗಳು'ಇದರ ಒಂದು ಉದಾಹರಣೆ.ಇದನ್ನು ನೀವು ಲೇಖನದಲ್ಲಿ ಕೊಟ್ಟ "ಮೋಟುಗೋಡೆಯ ಮರೆಯಲ್ಲಿ" linkನಲ್ಲಿ ಓದಬಹುದು.
ಆದರೆ ಭೈರಪ್ಪನವರ ಕಾದಂಬರಿಗಳಲ್ಲಿ ಬರುವ ರತಿಕ್ರಿಯಾವರ್ಣನೆ 'ಹೆಣ್ಣಿನ ಮೇಲೆ ಗಂಡಸಿನ ವಿಜೃಂಭಣೆ'ಯಾಗಿ ವರ್ಣಿಸಲ್ಪಟ್ಟಿದೆ. ಇದರ ಉದಾಹರಣೆಗಳನ್ನು ಕೊಟ್ಟಿದ್ದೇನೆ.
ಸಂದರ್ಭಕ್ಕೆ ಉಚಿತವಾದ ರತಿಕ್ರಿಯಾವರ್ಣನೆಯು ಸಾಹಿತ್ಯದಲ್ಲಿ ಬಂದರೆ ತಪ್ಪಿಲ್ಲ. ಆದರೆ, ಭೈರಪ್ಪನವರು
ವರ್ಣಿಸುವ 'ವಿಜೃಂಭಣೆ'ಸಂದರ್ಭಕ್ಕೆ ಅನಗತ್ಯವಾಗಿದೆ. ಅದನ್ನೂ ಸಹ ನಾನು ಎತ್ತಿ ತೋರಿಸಿದ್ದೇನೆ.
ಇನ್ನು ತತ್ವಜಿಜ್ಞಾಸೆಯನ್ನು ಕಾಮವರ್ಣನೆಯ cover ತರಹ
ಬಳಿಸಿ ಬರೆಯುವದು ಅನುಚಿತ. 'ಸಾಕ್ಷಿ'ಕಾದಂಬರಿ ಇದರ ಪ್ರಖರ ಉದಾಹರಣೆ ಎನ್ನಬಹುದು.
Frank and Open ಚರ್ಚೆಗಾಗಿ ನಾನು ನಿಮಗೆ ಕೃತಜ್ಞನಾಗಿದ್ದೇನೆ.
In Sakshi, the character is a womaniser ! Why don't u go to the basic structure of the characters ? The build up of the characters of the novel is also important! I do not remember the names of the characters but, I do remember that the main theme is with the father of that girl who repents for his Sakshi in the court of this earth and hisrepentance and helplessness comes before the court of Yama. I read the novel long back; but still it is in my memory !
ಸುನಾಥರೆ,
ಶ್ರೀ ಭೈರಪ್ಪನವರು ಶ್ರೇಷ್ಥ ಕಾದಂಬರಿಕಾರರೆಂದೇ ನನ್ನ ವೈಯುಕ್ತಿಕ ಅಭಿಪ್ರಾಯ. ವಿವಾದಾಸ್ಪದವಾದ ಶ್ರೀ ಭೈರಪ್ಪನವರ ಕಾದಂಬರಿಗಳನ್ನು ಬಿಟ್ಟು, ನಿತ್ಯನೂತನವೆನಿಸುವ ಕಾವ್ಯಲೋಕಕ್ಕೇ ಮರಳಿ ಹೋಗೋಣವೆ ? ಕಾವ್ಯ ಯಾವದಾದರೂ ಆಗಬಹುದು. ಕನ್ನಡದಲ್ಲಿ ಕಾವ್ಯಕ್ಕೆ ಕಡಿಮೆಯೆ ? ಕಬ್ಬಿಗರ ನಾಡಿದು ! ಆದಿಕವಿ ಪಂಪನಿಂದ ಆಧುನಿಕ ಕವಿ ಶಿವರುದ್ರಪ್ಪನವರ ವರೆಗೆ ಯಾರಾದರೂ ಆಗಬಹುದು ! ವಚನ ಅಥವಾ ದಾಸ ಸಾಹಿತ್ಯವೂ ಆಗಬಹುದು !
ಅನಾಮಿಕಾ,
ನೀವು ಹೇಳುತ್ತಿರುವದು ಸರಿಯಾಗಿಯೇ ಇದೆ. ಭೈರಪ್ಪನವರ ಯಾವುದೇ ಕಾದಂಬರಿಯನ್ನು ತೆಗೆದುಕೊಂಡರೂ ಸಹ, ಅದರಲ್ಲಿ ಪರಿಶ್ರಮದ ಸಂಶೋಧನೆ, ಚಾಣಾಕ್ಷ ಕಥಾಬೆಳವಣಿಗೆ, ವಿರುದ್ಧ ಮನೋವೃತ್ತಿಯ ಪಾತ್ರಗಳು, ಆ ಕಾರಣದಿಂದಾಗಿಯೇ ಹೊರಹೊಮ್ಮುವ ತತ್ವಜಿಜ್ಞಾಸೆ ಇವೆಲ್ಲ ಕಂಡುಬರುತ್ತವೆ.
ಆದರೆ..!
ಅಷ್ಟೇ ಚಾಣಾಕ್ಷತನದಿಂದ ಕಾಮಭಾವ, super-male-fantasy ಸಹ ಒಳಗೊಳಗೇ ಹೆಣೆದಿವೆ.
ನಾನು ನನ್ನ limited purpose ಲೇಖನದಲ್ಲಿ
'ಅಗಂಭ್ರವಿ'ಯ ಬಗೆಗೆ ಮಾತ್ರ ಬರೆದಿದ್ದೇನೆ.
ಆದುದರಿಂದ ಈ ಲೇಖನವು ಅವರ ಕಾದಂಬರಿಗಳ ವಿಮರ್ಶೆ ಅಲ್ಲ. ಭೈರಪ್ಪನವರು ಒಳ್ಳೆಯ ಹಾಗೂ ಕೆಟ್ಟ ಕೃತಿಗಳನ್ನು
ರಚಿಸಿದ್ದಾರೆ.
ನಮ್ಮ ನಮ್ಮ ದೃಷ್ಟಿಕೋನದ ಮೇಲೆ ನಮ್ಮ ನಮ್ಮ ವಿಮರ್ಶೆ
ನಿಲ್ಲುತ್ತದೆ.
ನಿಮ್ಮ ಅಭಿಪ್ರಾಯವೇನು?
ಕಟ್ಟಿಯವರೆ,
ಸಲ್ಲಾಪದ ಉಪವನದಲ್ಲಿ ಎಲ್ಲ ಹೂಬಳ್ಳಿಗಳಿಗೂ ಸ್ಥಾನವಿದೆ.
ಈ ಕಮಲದ ಹೂವು ಚೆನ್ನಾಗಿದೆಯೊ, ಆ ಗುಲಾಬಿ ಸುಂದರವೊ
ಎನ್ನುವ ಚರ್ಚೆ ಆಗಾಗ ನಡೆಯುವದೇ!
"ಬರುವದೇನುಂಟೊಮ್ಮೆ ಬರುವ ಕಾಲಕೆ ಬಹುದು.
ಬಯಕೆ ಬರುವದರ ಕಣ್ಸನ್ನೆ ಕಾಣಾ!"
-ಕುವೆಂಪು
ಸುನಾತರೆ,
ತಾವು ಈ ಗಂಡಸ್ತನ, ಸೂಪರ್ ಮೇಲ್ ಪಾಂಟಸಿ ಹಿಂದ್ ಯಾಕೆ ಬಿದ್ದಿದ್ದೀರ? ತಾವು ಬಯ್ರಪ್ಪನವರ ಕಾದಂಬರಿಗಳಲ್ಲಿ ಬರುವ ಪಾತ್ರಗಳಲ್ಲಿರುವ ತೊಳಲಾಟ, ಪೀಕಲಾಟ ಮತ್ತು ಪಾತ್ರಗಳಲ್ಲಿ ಮನಸ್ಸಿನಲ್ಲಿ ನಡೆಯುವ ಪರ-ಇದಿರು ಮಾತುಗಳು ಅದನ್ನ ಬಗೆಹರಿಸಿಕೊಳ್ಳುವ ಬಗೆ ಮತ್ತು ಅದಕ್ಕೆ ಆ ಪಾತ್ರಗಳು ಕೊಡುವ ಓಸುಗರಗಳು..ಇವುಗಳ ಬಗ್ಗೆ ಒಂದು ಹೆಬ್ಬರಹವನ್ನು ಬರಯಬಹುದಲ್ಲವೆ? ಇದು 'ನಿರಾಕರಣ'ದಲ್ಲಿ ಹೆಚ್ಚು ಒತ್ತಾಗಿ ಬಂದಿದೆ
-ಬರತ್
http://ybhava.blogspot.com
ಭರತ,
ಭೈರಪ್ಪನವರ ಕಾದಂಬರಿಗಳಲ್ಲಿಯ ಅನೇಕ ಒಳ್ಳೆಯ ಗುಣಗಳ
ಬಗೆಗೆ ಅನೇಕರು ಬರೆದಿದ್ದಾರೆ. ನಾನೂ ಸಹ ಅವುಗಳನ್ನು ಇಲ್ಲಿ list ಮಾಡಿ ಕೊಟ್ಟಿದ್ದೇನೆ.
ಆದರೆ 'ಅಗಂಭ್ರವಿ'ಯ ಬಗೆಗೆ ಯಾರೂ ಬರೆದಿರಲಿಲ್ಲ.
ಆದುದರಿಂದ ನಾನು ಬರೆದೆ.
ಈಗ ಅದರ ಬಗೆಗೆ ಇಲ್ಲಿ ಎಷ್ಟೊಂದು ಚರ್ಚೆ ನಡೆದಿದೆ!
ಟಿಪ್ಪಣಿಗಳಲ್ಲಿ ನನಗೆ ಕೇಳುವ ಪ್ರಶ್ನೆಗಳಿಗೆ ನಾನು ಉತ್ತರಿಸ ಬೇಡವೆ?
ನಿಮ್ಮ ಬ್ಲಾಗ್ ಗೆ ನಾನು ಹೊಸಬ. ನಿಮಗೆ ಭೈರಪ್ಪನ ಬಗ್ಗೆ ಪೂರ್ವಾಗ್ರಹ ಇದೆ.
ಸುನಾಥ್ ಅಂಕಲ್...
ನೀವು ಹಿಂದಿನ ಲೇಖನಕ್ಕೆ ಬಂದ ಪ್ರತಿಕ್ರಿಯೆಗಳಿಗೆ ಉತ್ತರಿಸುವಾಗಲೇ ಸ್ಪಷ್ಟವಾಗಿ ಹೇಳಿದ್ದೀರಿ "ಇದು ಕೇವಲ ಒಂದು ಕೋನದಿಂದ ನೋಡಿದ ನೋಟ." ಎಂಬುದಾಗಿ. ಆದುದರಿಂದಲೇ ಈ ಲೇಖನವನ್ನು ಓದಿದಾಗಲೂ ಹಿಂದಿನ ಲೇಖನದಷ್ಟೇ ಇಷ್ಟವಾಯಿತು ಅಂತ ಮಾತ್ರ ಹೇಳಬಲ್ಲೆ.
ನಿಮ್ಮ ಬರಹಗಳು ತುಂಬ ಇಷ್ಟವಾಗುತ್ತವೆ ಅಂಕಲ್.
ಹಾಯ್ ಸುನಾಥ್ ಸರ್...
ನಿಮ್ಮ ಬರಹಗಳು ತುಂಬಾ ಇಷ್ಟ..ಹಾಗೇ ಒಂದೇ ಬಾರಿ ಓದಿದ ಮಾತ್ರಕ್ಕೆ ಅರಗಿಸಿಕೊಳ್ಳೋದು ಕಷ್ಟ. ನಾನೂ ಸಮಯ ಸಿಕ್ಕಾಗ ಕಾದಂಬರಿಗಳನ್ನು ಓದ್ತೀನಿ. ಒಳ್ಳೆ ಚರ್ಚೆಗೆ ವೇದಿಕೆ ಕಲ್ಪಿಸಿಕೊಟ್ಟಿದ್ದೀರಿ. ವಂದನೆಗಳು. ಹಾಗೇ ಹೊಸ ವರುಷದ ಶುಬಾಶಯಗಳು ಸರ್.
-ಚಿತ್ರಾ
ಅಲ್ಲಾಬಕ್ಷರೆ,
ನಿಮಗೆ ಹಾಗೂ ನಿಮ್ಮ ಅಭಿಪ್ರಾಯಕ್ಕೆ ಸ್ವಾಗತ.
ಶಾಂತಲಾ,
"ಲೋಕೋ ಭಿನ್ನ ರುಚಿಃ"
ನನ್ನ ಲೇಖನಗಳು ನಿನಗೆ ಇಷ್ಟವಾದದ್ದು ನನಗೆ ಖುಶಿ ನೀಡುತ್ತಿದೆ.
ಚಿತ್ರಾ,
'ಕಾವ್ಯ ಶಾಸ್ತ್ರ ವಿನೋದೇನ ಕಾಲೋ ಗಚ್ಛತಿ ಧೀಮತಾಮ್'
ಎಂದು ಹೇಳಿದ್ದಾರಲ್ಲವೆ? ಸಾಹಿತ್ಯಕ ಚರ್ಚೆ ಎಂದರೆ ಅದೇ ತಾನೆ?
ನಿಮಗೂ ಸಹ ಹೊಸ ವರ್ಷದ ಹಾರ್ದಿಕ ಶುಭಾಶಯಗಳು!
fantasy - ಅವಾಸ್ತವವಾದ ಕಲ್ಪಿತ ಭ್ರಮಾಚಿತ್ರ, ಅತಿರೇಕದ ಕಲ್ಪನೆ, ಸ್ವೈರ ಕಲ್ಪನೆ
source : http://www.baraha.com/kannada/index.php
ನಮಸ್ಕಾರಾಸುನಾಥ್ ಅವ್ರಿಗೆ. ನಿಮ್ಮ ಬ್ಲಾಗ್ ಓದಿ ಖಿಷಿ ಆತು. ಛೋಲೋ ಬರೀತೀರಿ. ಭೈರಪ್ಪ ಅವ್ರ್ನಬೈದ್ರ ನಂಗ ಯೂಷ್ಯೂವಲೀ ಲೈಕ್ ಆಗಾಂಗಿಲ್ಲ ಆದ್ರೂ
ನೀವೂ ಭಾಳ್ ರಿಸರ್ಚ್ ಮಾಡೇ ಬರ್ದೀರಿ ಅನ್ಸ್ತದ. ಬರ್ಕೊತ ಇರ್ರೀ. ಇಶ್ಟ್ ಅನಲೈಸ್ ಮಾಡೋವ್ರು ಕನ್ನಡದಾಗ್ ಕಡಿಮಿ.
Post a Comment