Saturday, December 20, 2008

ಭೈರಪ್ಪನವರು ಹಾಗು super-male-fantasy

ಎಸ್.ಎಲ್.ಭೈರಪ್ಪನವರು ಕನ್ನಡದ ಜನಪ್ರಿಯ ಸಾಹಿತಿಗಳು.
ಸಾಧಾರಣವಾಗಿ ಅವರ ಕಾದಂಬರಿಗಳಲ್ಲಿ ಮೂರು ಮುಖ್ಯ ಲಕ್ಷಣಗಳನ್ನು ಗುರುತಿಸಬಹುದು:
(೧) passionate ಬರವಣಿಗೆ.
(೨) ತತ್ವಜಿಜ್ಞಾಸೆ.
(೩) obsession with sex.

ಭೈರಪ್ಪನವರ ಪಾತ್ರಗಳು, ವಿಶೇಷತ: ನಾಯಕರು ಛಲವಾದಿಗಳು, ತೀವ್ರವಾದ ತಳಮಳದಲ್ಲಿ ತೊಳಲಾಡುವಂಥವರು.
ನಾಯಕ ಹಾಗೂ ನಾಯಕಿಯಲ್ಲದೆ, ಇತರ ಪಾತ್ರಗಳೂ ಸಹ ನಿರ್ಣಾಯಕ ಸಮಯದಲ್ಲಿ ಭಯಂಕರ ತತ್ವಜಿಜ್ಞಾಸೆಯಲ್ಲಿ ತೊಡಗಿಕೊಳ್ಳುವಂಥವರು. ಇದು ಬರವಣಿಗೆಯಲ್ಲಿ passion ತುಂಬಲು ಸಹಾಯಕವಾಗಿದೆ.
ಇದೆಲ್ಲದರ ಹಿಂದೆ, ಕೆಲವೊಮ್ಮೆ ಮುಕ್ತವಾಗಿ, ಕೆಲವೊಮ್ಮೆ ಗುಪ್ತವಾಗಿ ಮತ್ತೊಂದು ವಿಶೇಷತೆಯನ್ನು ಕಾಣಬಹುದು.
ಈ ವಿಶೇಷತೆಗೆ ನಾವು super- male- fantasy ಎಂದು ಕರೆಯಬಹುದು.

ಬಹುಶಃ ಎಲ್ಲ ಗಂಡಸರು ತಾವು ಹೆಣ್ಣಿಗಿಂತ ಎಲ್ಲ ವಿಧದಲ್ಲಿಯೂ ಹೆಚ್ಚಿನವರು, ವಿಶೇಷತ: sexually ಹೆಚ್ಚು ಸಾಮರ್ಥ್ಯವುಳ್ಳವರು ಎಂದು ಕಲ್ಪಿಸಿಕೊಳ್ಳುತ್ತಾರೆ.
ಆದರೆ, ನಿಸರ್ಗದ ಯೋಜನೆ ಅಥವಾ ವಿಧಾನ ಹಾಗಿಲ್ಲ.
ಮಾನವಕುಲದಲ್ಲಿ ಗಂಡು ಹಾಗೂ ಹೆಣ್ಣುಗಳ ಪ್ರಮಾಣ ಸುಮಾರಾಗಿ ಸರಿಸಮವಾಗಿದೆ.
ಮಾನವಕುಲದಲ್ಲಿ ಹೆಚ್ಚಿಗೆ ಸಂತಾನವಾಗಬೇಕಾದರೆ, ರತಿಕ್ರಿಯೆಯಲ್ಲಿ ತೊಡಗಿದ ಗಂಡಸಿನ ಕ್ರಿಯೆ ಶೀಘ್ರಮುಕ್ತಾಯ ಕಾಣಬೇಕು ; ಹಾಗೂ ಹೆಣ್ಣಿನಲ್ಲಿ ರತಿಕ್ರಿಯೆ ಬಲಶಾಲಿ ಹಾಗೂ ನಿಧಾನವಾಗಿರಬೇಕು so that she can receive more & more males.
ಇದು ನಿಸರ್ಗದ ಸಂವಿಧಾನ.

ಆದರೆ ಮಾನವಕುಲದ ಅಹಂಕಾರಿ ಗಂಡುಜಾತಿಗೆ ಈ ನಿಸರ್ಗಯೋಜನೆ ಅಪಥ್ಯವಾಗಿದೆ.
ಆದುದರಿಂದ ಆತ ಪ್ರಕೃತಿಯ ಈ ವಿಧಾನವನ್ನು ಮನಸಾ ಒಪ್ಪಿಕೊಳ್ಳಲಾರದೆ ತೊಳಲಾಡುತ್ತಾನೆ.
ರತಿಕ್ರಿಯೆಯನ್ನು ದೀರ್ಘಗೊಳಿಸಲು ಕೃತ್ರಿಮ ವೈದ್ಯಕೀಯ ವಿಧಾನಗಳಿಗೆ ಶರಣಾಗುತ್ತಾನೆ.
ಅದು ಸಾಧ್ಯವಾಗದಾಗ ತನ್ನ ಸಾಮರ್ಥ್ಯವನ್ನು fantasyಯಲ್ಲಿ ಕಾಣಬಯಸುತ್ತಾನೆ.
ಈ fantasyಯು ಕೇವಲ ವೈಯಕ್ತಿಕ ಹಗಲುಗನಸುಗಳಿಗೆ ಸೀಮಿತವಾಗದೆ, ಸಾಹಿತ್ಯದಲ್ಲಿಯೂ ಸಹ ವ್ಯಕ್ತಗೊಳ್ಳುತ್ತಲೇ ಇದೆ.
ಸಾಹಿತ್ಯದಲ್ಲಿ ವ್ಯಕ್ತವಾಗುವ ಇಂತಹ fantasyಯನ್ನು super- male- fantasy ಎಂದು ಕರೆಯಬಹುದು.

ಸಾಮಾನ್ಯವಾಗಿ super- male- fantasy ಯಲ್ಲಿ ಎರಡು categoryಗಳನ್ನು ಮಾಡಬಹುದು:
(೧) ಜಾಗತಿಕವಾಗಿ ಅಥವಾ ಸಾರ್ವತ್ರಿಕವಾಗಿ applicable ಆಗುವಂತಹ super- male- fantasy ಹಾಗೂ
(೨) ಭಾರತೀಯರಿಗೇ ವಿಶಿಷ್ಟವಾಗಿರುವ super- male- fantasy.

ಸಾರ್ವತ್ರಿಕ super- male- fantasy ಯ ಎರಡು ಲಕ್ಷಣಗಳು ಹೀಗಿವೆ:
(೧) ಹೆಣ್ಣು ಗಂಡಿನ ದಾಸಿಯಂತೆ ವರ್ತಿಸುವದು.
(೨) ಹೆಣ್ಣನ್ನು ಗಂಡು ರತಿಕ್ರಿಯೆಯಲ್ಲಿ ಸೋಲಿಸುವದು !

ಭಾರತೀಯರು ಸಾಮಾನ್ಯವಾಗಿ ದೃಢವಾದ ನೈತಿಕ ಬುದ್ಧಿಯುಳ್ಳವರು. ಇವರು ತಮ್ಮ fantasyಯಲ್ಲಿ ಸಹ ನೈತಿಕ ಹಾಗೂ ಧಾರ್ಮಿಕ ಕಟ್ಟಳೆಗಳನ್ನು ಉಲ್ಲಂಘಿಸಲಾರರು.
ಆದುದರಿಂದ ಭಾರತೀಯರಿಗೆ ವಿಶಿಷ್ಟವಾದ super- male- fantasy ಯ ವಿಶೇಷ ಲಕ್ಷಣಗಳನ್ನು ಹೀಗೆ ಗುರುತಿಸಬಹುದು:

(೧) ತಾನು ಹೆಣ್ಣಿಗೆ ಸೋಲದ ನಿಷ್ಠಾವಂತ ಬ್ರಹ್ಮಚಾರಿಯಾಗಿರಬೇಕು.
(೨) ಒಂದು ವೇಳೆ ಅಕಸ್ಮಾತ್ ಹೆಣ್ಣಿಗೆ ಸೋತು ರತಿಕ್ರಿಯೆ ಸಂಭವಿಸಿದರೆ, ಅದು compulsive circumstancesದಲ್ಲಿ ಆಗಿರಬೇಕೇ ಹೊರತು, ಅದರಲ್ಲಿ ಒಳಗೊಂಡವರ ಕಾಮದ ಬಯಕೆಯಿಂದ ಸಂಭವಿಸಿರಕೂಡದು.
ಅಂದರೆ ತಾನು ಹಾಗೂ ಆ ಹೆಣ್ಣು ಅಕ್ರಮ ರತಿಕ್ರಿಯೆಯೆ ನಂತರವೂ innocent ಹಾಗೂ virtuous ಆಗಿಯೇ ಉಳಿದಿರಬೇಕು.

Indian super- male- fantasy ಯ ಕತೆಗಳು ಭಾರತದಲ್ಲಿ ಪುರಾಣಕಾಲದಿಂದಲೂ ಚಾಲ್ತಿಯಲ್ಲಿವೆ.
ಮಹಾಭಾರತದ ಭೀಷ್ಮನು ಅಖಂಡ ಬ್ರಹ್ಮಚಾರಿಯಾಗಿ ಉಳಿದುಕೊಂಡು ಈ super-fantasyಯ super hero ಆಗಿ ಖ್ಯಾತಿ ಪಡೆದ.
ಭೀಷ್ಮನ ಮಲತಾಯಿಯಾದ ಮತ್ಸ್ಯಗಂಧಿಯೊಡನೆ ಪರಾಶರ ಮುನಿಗಳು ಡೋಣಿಯಲ್ಲಿ ಹೋಗುವಾಗ ನದಿಯ ಮಧ್ಯದಲ್ಲಿ ಅವರೀರ್ವರ ಮಿಲನವಾಯಿತು.
ಅವರು ಮುನಿಗಳಾಗಿದ್ದರಿಂದ ಅವರಿಗೆ ನೈತಿಕತೆಯ ಬಂಧನವಿಲ್ಲ.
ಮುನಿಗೆ ಮೈಕೊಟ್ಟಿದ್ದರಿಂದ ಅವಳ ನೈತಿಕತೆಗೂ ಧಕ್ಕೆಯಿಲ್ಲ.
ಅಲ್ಲದೆ ಅವಳಿಗೆ ಮತ್ತೆ ಕನ್ಯತ್ವವನ್ನು ಪ್ರಸಾದಿಸುವ ಮೂಲಕ ಅವಳ virtueಅನ್ನು ಅವರು restore ಮಾಡಿದರು.
ಇಂತಹ ಶಕ್ತಿ ಇದ್ದುದರಿಂದ ಅವರ ವ್ಯಕ್ತಿತ್ವಕ್ಕೆ ಮತ್ತಷ್ಟು ಘನತೆ ದೊರೆಯಿತೇ ಹೊರತು, ಅವರ ನೈತಿಕತೆ ಅಪಮೌಲ್ಯಕ್ಕೊಳಗಾಗಲಿಲ್ಲ.

ಆಧುನಿಕ ಕಾಲದಲ್ಲಿ ಇಂತಹ ಋಷಿ-ಮುನಿಗಳು ಸಿಗುವದು ಸಾಧ್ಯವಿಲ್ಲ.
ಆದುದರಿಂದ ಆಧುನಿಕ ಸಾಹಿತ್ಯದಲ್ಲಿ ಹಾಗೂ ಸಿನೆಮಾಗಳಲ್ಲಿ ನಾಯಕ ಹಾಗು ನಾಯಕಿಯರ ಆತ್ಮನಿಯಂತ್ರಣವನ್ನು ಮುರಿದು ಹಾಕುವಂತಹ ನೈಸರ್ಗಿಕ ಘಟನೆಗಳು ( compulsive circumstances) ಅವಶ್ಯವಾಗುತ್ತವೆ.

ಅನೇಕ ಹಿಂದಿ ಹಾಗೂ ಕನ್ನಡ ಚಿತ್ರಗಳಲ್ಲಿ ನಾಯಕ ಹಾಗೂ ನಾಯಕಿಯರ ಮಿಲನದ ದೃಶ್ಯವು ಹೀಗಿರುತ್ತದೆ:
ಧಾರಾಕಾರವಾಗಿ ಮಳೆ ಬೀಳುತ್ತಿದೆ; ನಾಯಕ ಹಾಗೂ ನಾಯಕಿ ಇಬ್ಬರೂ ಅಡವಿಯ ನಡುವಿನ ಪಾಳು ಗುಡಿಸಿಲಿನಲ್ಲಿ ಸಿಕ್ಕುಬಿದ್ದಿದ್ದಾರೆ.
ನಾಯಕಿಯ ಅಲ್ಪಸ್ವಲ್ಪ ಬಟ್ಟೆ ಸಹ ತೊಯ್ದು ತೊಪ್ಪಡಿಯಾಗಿವೆ.
ಇಂತಹ ಕಠಿಣ(!) ಪರಿಸ್ಥಿತಿಯಲ್ಲಿ ಅವರ ಸಂಯಮದ ಕಟ್ಟೆ ಸಡಿಲಾಗುತ್ತದೆ.
ಆದುದರಿಂದ ಅದು ಕ್ಷಮ್ಯ.
ಅವರ ನೈತಿಕತೆಗೆ ಅದರಿಂದ ಧಕ್ಕೆ ಇಲ್ಲ.
ಇದು Indian movies’ formula.

ಪುರಾಣಗಳ ನಂತರ ಹಾಗೂ Indian ಸಿನೆಮಾಗಳ ನಂತರ, ಈ Indian super- male- fantasyಯನ್ನು ತಮ್ಮ ಕಾದಂಬರಿಗಳ ಮೂಲಕ ಮುಂದುವರೆಸಿಕೊಂಡು ಬಂದಂತಹ ಸಾಹಿತಿಗಳೆಂದರೆ ಶ್ರೀ ಭೈರಪ್ಪನವರು ಎಂದು ಧಾರಾಳವಾಗಿ ಹೇಳಬಹುದು.
ಆದರೆ ಅವರು ತಮ್ಮ ಕಾದಂಬರಿಗಳಲ್ಲಿ compulsive circumstancesದಂತಹ ಕೀಳು formula ಬಳಸಲಾರರು. ಇದು ಅವರಿಗೆ ಶೋಭಿಸುವಂತಹದಲ್ಲ.

ಭೈರಪ್ಪನವರ ಕಾದಂಬರಿಗಳಲ್ಲಿ ಭಾರತದ ಸಾಂಪ್ರದಾಯಕ ಮೌಲ್ಯಗಳಿಗೆ ವಿಶೇಷ ಗೌರವ ಕಂಡುಬರುತ್ತದೆ.
ಸಾಂಪ್ರದಾಯಕ ಹಾಗೂ ಆಧುನಿಕ ಮೌಲ್ಯಗಳ ತಿಕ್ಕಾಟವೇ ಅವರ ೫ನೆಯ ಕಾದಂಬರಿ ‘ವಂಶವೃಕ್ಷ’ದ ಕಥಾವಸ್ತುವಾಗಿದೆ.
ಈ ಕಾದಂಬರಿಯ ಘನತೆವೆತ್ತ ಪಾತ್ರವಾದ ಶ್ರೋತ್ರಿಗಳ ಜೀವನದಲ್ಲಿಯೂ ಸಹ ಒಂದು ಸೂಕ್ಷ್ಮ ಪ್ರಸಂಗ ಬರುತ್ತದೆ.
Indian super- male- fantasyಯ ನಿಷ್ಠಾವಂತ ಬ್ರಹ್ಮಚರ್ಯದ ಆ fantasy ಹೀಗಿದೆ:
ಶ್ರೋತ್ರಿಗಳ ಹೆಂಡತಿಯು ತನ್ನ ಗಂಡನಿಗೆ ಶರೀರಸುಖವನ್ನು ಕೊಡಲು ಅಸಮರ್ಥಳಾಗಿದ್ದಾಳೆ.
ಹೀಗಾಗಿ ತಮ್ಮ ಮನೆಯಲ್ಲಿ ಕೆಲಸ ಮಾಡುವ ಓರ್ವ ಹೆಣ್ಣುಮಗಳನ್ನು ತನ್ನ ಬದಲಿಯಾಗಲು ಒಪ್ಪಿಸುತ್ತಾಳೆ.
ಶ್ರೋತ್ರಿಗಳು ಮೊದಲು ಒಪ್ಪಿಕೊಂಡರೂ ಸಹ, ಮಿಲನದ ರಾತ್ರಿಯಂದು ತಮ್ಮ ಮನಸ್ಸಿನಲ್ಲಿಯೇ ಭಯಂಕರ ತತ್ವಜಿಜ್ಞಾಸೆಯನ್ನು ಮಾಡಿ, ಬಳಿಗೆ ಬಂದ ಹೆಣ್ಣನ್ನು ದೂರೀಕರಿಸುತ್ತಾರೆ.
ಅವರ ಮನ ನಿರಾಳವಾಗುತ್ತದೆ.
ನಿಷ್ಠಾವಂತ ಬ್ರಹ್ಮಚರ್ಯದ Indian super- male- fantasy ಯ ಹೀರೋನಿಗೆ ಜಯ ಲಭಿಸುತ್ತದೆ!

ಈಗ Indian super- male- fantasyಯ ಎರಡನೆಯ ಲಕ್ಷಣವಾದ compulsive circumstances ಅನ್ನು ನೋಡೊಣ:
ನಾಯಕನು ಜಾರುವಂತಹ ಪ್ರಸಂಗವಿದ್ದಾಗ ಏನು ಮಾಡಬೇಕು?
ಸಾಮಾನ್ಯವಾಗಿ ಅನೇಕ ಲೇಖಕರು Compulsive circumstances ಅನ್ನುವ formula ಬಳಸುತ್ತಾರೆ.
ಆದರೆ ಭೈರಪ್ಪನವರು ಇದಕ್ಕಿಂತಲೂ ಹೆಚ್ಚಿನ ಒಂದು super formulaವನ್ನು ಹುಡುಕಿದ್ದಾರೆ.
ಅದು Inborn innocence ಎನ್ನುವ formula.

ಅವರ ೭ನೆಯ ಕಾದಂಬರಿಯಲ್ಲಿ (‘ನಾಯಿ ನೆರಳು’) ಇಂತಹ ಒಂದು ಸಂದರ್ಭವಿದೆ.
ಈ ಕಾದಂಬರಿಯ ನಾಯಕನಿಗೆ ಪೂರ್ವಜನ್ಮದ ಸ್ಮೃತಿ ಬಂದಿದೆ.
ಇವನ ಪೂರ್ವ ಜನ್ಮದ ತಂದೆ, ತಾಯಿ ಹಾಗೂ ಹೆಂಡತಿ ಇವನನ್ನು ಒಪ್ಪಿಕೊಂಡಿದ್ದಾರೆ.
ಪೂರ್ವ ಜನ್ಮದ ಹೆಂಡತಿಯೊಡನೆ ಇವನು ಮಲಗಿಕೊಳ್ಳುತ್ತಿದ್ದಾನೆ.
ಸಹಜವಾಗಿಯೇ ಅವಳು ಇವನ ದುಪ್ಪಟ್ಟು ವಯಸ್ಸಿನವಳು.
ಆದರೇನಾಯಿತು, ತನ್ನ ಗಂಡ ತನಗೆ ಜನ್ಮಾಂತರದಲ್ಲಿಯಾದರೂ ಸಿಕ್ಕಿದ್ದು ತನ್ನ ಪುಣ್ಯವೆಂದು ಆ ಮುತ್ತೈದೆ ಭಾವಿಸಿಕೊಂಡು ತನ್ನನ್ನು ಅವನಿಗೆ ಒಪ್ಪಿಸಿಕೊಳ್ಳುತ್ತಿದ್ದಾಳೆ.
(=formula of devotion and innocence!)

ಈ ನಾಯಕ ಒಮ್ಮೆ ತೋಟದ ಕಡೆಗೆ ನಡೆದಾಗ ಅಲ್ಲಿ ಒಬ್ಬಳು ತರುಣ ಕೆಲಸದಾಕೆಯನ್ನು ನೋಡುತ್ತಾನೆ.
ಇವನ ಮನಸ್ಸಿನಲ್ಲಿ ಅವಳನ್ನು ಕೂಡಬೇಕು ಎನ್ನುವ ಭಾವನೆ ಅತ್ಯಂತ ಸಹಜವಾಗಿ ಹುಟ್ಟುತ್ತದೆ.
ಇದು ಸಾಮಾನ್ಯ ಮಾನವರ ಮನದಲ್ಲಿ ಮೂಡುವ ನೀಚಕಾಮವಲ್ಲ!
ನಿಸರ್ಗದ ಮಕ್ಕಳ ಹಾಗೆ ಅವರು ಅತ್ಯಂತ ಸಹಜವಾಗಿ ಕೂಡುತ್ತಾರೆ.
ಮತ್ತೊಮ್ಮೆ formula of innocenceದ ವಿಜಯವಾಗುತ್ತದೆ!

ಪಾಶ್ಚಾತ್ಯ ಸಂಸ್ಕೃತಿಯಲ್ಲಿ ಗಂಡು ಹೆಣ್ಣು ಬೆರೆಯುವದಕ್ಕೆ ಯಾವುದೇ ನೈತಿಕ ಪ್ರತಿಬಂಧ ಉಳಿದಿಲ್ಲ.
ಹೀಗಾಗಿ ಅಲ್ಲಿಯ ಕಾದಂಬರಿಕಾರರಿಗೆ ಇಂತಹ formulaಗಳ ಅವಶ್ಯಕತೆ ಬರುವದಿಲ್ಲ.

Indian-super-male-fantasyಯ ಉದಾಹರಣೆಗಳನ್ನು ಪುರಾಣಗಳಲ್ಲಿ, ಸಿನೆಮಾಗಳಲ್ಲಿ ಹಾಗೂ ಭೈರಪ್ಪನವರ ಕೆಲವು ಕಾದಂಬರಿಗಳಲ್ಲಿ ನೋಡಿದ್ದಾಯ್ತು.
ಇದೀಗ ಸಾರ್ವತ್ರಿಕ super-male-fantasyಯ ಲಕ್ಷಣಗಳು ಭೈರಪ್ಪನವರ ಕಾದಂಬರಿಗಳಲ್ಲಿ ವ್ಯಕ್ತವಾದ ಬಗೆಯನ್ನು ನೋಡೋಣ:
ಈ fantasyಯ ಮೊದಲ ಗುರುತು ಎಂದರೆ ‘ಹೆಣ್ಣು ಗಂಡಿನ ದಾಸಿ ಅಥವಾ ಆರಾಧಕಿಯಂತೆ’ ವರ್ತಿಸುವದು.
ಭೈರಪ್ಪನವರ ೪ನೆಯ ಕಾದಂಬರಿ ‘ಮತದಾನ’ದ ಪುಟ ೧೬೯ರಲ್ಲಿ ಕಾದಂಬರಿಯ ನಾಯಕಿ ರಂಗಲಕ್ಷ್ಮಿಯು ನಾಯಕನಿಗಾಗಿ ಹಪಾಪಿಸುವದನ್ನು ಓದಿರಿ:
“ ತಾನು ಯಾರ ಬಗ್ಗೆ ಅತ್ಯಂತ ಗೌರವ ತಳೆದು,ಯಾರಿಗೆ ತನ್ನನ್ನು ತಾನು ಸಮರ್ಪಿಸಿಕೊಳ್ಳಲು ಎರಡು ವರ್ಷಗಳ ಹಿಂದೆ ತವಕಪಡುತ್ತಿದ್ದಳೊ ಅವರು ಈ ದಿನ ತನ್ನ ಎದುರು ಕುಳಿತು, ‘ನಾವಿಬ್ಬರು ಒಂದಾಗೋಣ ಬಾ’ ಎಂದು ಕರೆಯುತ್ತಿದ್ದಾರೆ. ಅವರ ಸ್ವಭಾವ, ಉಚ್ಚ ಆದರ್ಶ ಮತ್ತು ಪ್ರಾಮಾಣಿಕ ಜೀವನಗಳು ಅವಳಿಗೆ ತಿಳಿದಿವೆ. ಅವುಗಳಿಗೆ ತನ್ನ ಜೀವನದ ಶಕ್ತಿಯನ್ನು ಬೆರಸಿ ಬೆಳೆಸುವದಕ್ಕಿಂತ ಸಾರ್ಥಕವಾದ ಜೀವನವಿಲ್ಲ.”
ಭೈರಪ್ಪನವರ ನಾಯಕಿಯರ ಅತ್ಯುಚ್ಚ ಸಾಧನೆ ಹಾಗೂ ಆದರ್ಶ ಅಂದರೆ, ನಾಯಕನ ಛಾಯಾನುವರ್ತಿಯಾಗಿ ವರ್ತಿಸುವದು!

‘ದೂರ ಸರಿದರು’ ಇದು ಬೈರಪ್ಪನವರ ಮೂರನೆಯ ಕಾದಂಬರಿ.
ಈ ಕಾದಂಬರಿಯಲ್ಲಿ ಕಾಲೇಜೊಂದರ ವಿದ್ಯಾರ್ಥಿನಿ ಉಮಾ ಎನ್ನುವವಳು ತನ್ನ ಮುಂದಿನ ಕ್ಲಾಸಿನಲ್ಲಿರುವ ವಸಂತ ಎನ್ನುವ ವಿದ್ಯಾರ್ಥಿಯನ್ನು ಪ್ರೀತಿಸುತ್ತಾಳೆ.
ತತ್ವಶಾಸ್ತ್ರದ ವಿದ್ಯಾರ್ಥಿನಿಯಾದ ಇವಳು ತನ್ನಲ್ಲಿ ಪ್ರೀತಿ ಹುಟ್ಟುವವರೆಗೂ ಗಂಡು ಹೆಣ್ಣು ಸಮಾನರು ಎಂದು ತಿಳಿದವಳು.
ಆದರೆ, ತನ್ನ senior ವಿದ್ಯಾರ್ಥಿಯೊಬ್ಬನಲ್ಲಿ ಪ್ರೀತಿ ಹುಟ್ಟಿದ ಬಳಿಕ ಹೆಣ್ಣು ಗಂಡಿನ ಸಮಾನಳಲ್ಲ ಎಂದು ತಿಳಿದುಕೊಂಡು ಬಿಡುತ್ತಾಳೆ !
ಆ ಕಾದಂಬರಿಯ ೮೭ನೆಯ ಪುಟದಲ್ಲಿ ಆಕೆ ತನ್ನಲ್ಲಿ ಮೂಡುವ ಭಾವನೆಗಳನ್ನು ತನ್ನ ಪ್ರಿಯಕರನಿಗೆ ಈ ರೀತಿಯಾಗಿ ಹೀಗೆ ಹೇಳುತ್ತಾಳೆ:
“…ಸಮಾನತೆ ಎನ್ನುವದರಲ್ಲೂ ಹುರುಳು ಕಾಣುತ್ತಿಲ್ಲ. ನಾನು ನಿಮಗಿಂತ ಚಿಕ್ಕವಳು, ವಯಸ್ಸಿನಲ್ಲಿ ಮಾತ್ರವಲ್ಲ-ಬುದ್ಧಿಯಲ್ಲಿ, ಭಾವದಲ್ಲಿ-ಎಲ್ಲದರಲ್ಲಿ ಚಿಕ್ಕವಳು ಅನಿಸುತ್ತಿತ್ತು. ನಿಮ್ಮೆದುರಿಗೆ ನನ್ನ ಸ್ವತಂತ್ರ ವ್ಯಕ್ತಿತ್ವವೆಂದರೆ ಅದು ನನಗೆ ಬೇಡವಾದ ಒಂದು ಶತ್ರು ಅನಿಸುತ್ತಿತ್ತು”

ಇದೇ ಕಾದಂಬರಿಯ ಮತ್ತೊಂದು ಪಾತ್ರವಾದ ವಿನತೆ ಎನ್ನುವವಳ fantasyಯನ್ನು ನೋಡಿರಿ (ಪುಟ೨೨೧):
“…ಅವರ ವೃದ್ಧ ತಾಯಿಗೆ ತಾನು ಸೊಸೆಯಾಗಿ ಅವರ ಸೇವೆ ಮಾಡುತ್ತಿರುವಂತೆ ಅವಳು ಮನಸ್ಸಿನೊಳಗೇ ಚಿತ್ರಿಸಿಕೊಳ್ಳುವಳು. ಮುಂಜಾವಿನಿಂದ ಸಂಜೆಯವರೆಗೂ ಓದಿ ಅವನಿಗೆ ಆಯಾಸವಾದಾಗ, ತಾನು ಅವನ ಮನಸ್ಸನ್ನು ಅರಳಿಸಿ ಉಪಚರಿಸುವ ಕನಸನ್ನೂ ಕಾಣುವಳು. ಅವನು ಓದುವ ಪುಸ್ತಕಗಳ ಟಿಪ್ಪಣಿ ಬರೆದುಕೊಡುವದು, ಅವನ ಬರಹಗಳ ಉತ್ತಮ ಪ್ರತಿ ಮಾಡುವದು, ಅವನ ಬಟ್ಟೆಬರೆಗಳನ್ನು ಒಗೆದು ಮನೆಗೆಲಸ ಮಾಡುವದು, ಮೊದಲಾದವುಗಳಲ್ಲಿ ಕಾಲ ಕಳೆಯುವಂತೆ ಭಾವಿಸುವಳು……”

So, ಭೈರಪ್ಪನವರ ನಾಯಕಿಯರು ಭಾರತೀಯ ಪತಿವ್ರತಾ ನಾರಿಯರ ಅಪರಾವತಾರಗಳು.
ಹೆಣ್ಣು ಗಂಡಸಿನ ದಾಸಿ ಅಥವಾ ಆರಾಧಕಿಯಾಗಿರಬೇಕೆನ್ನುವ ಜಾಗತಿಕ male-fantasyಯನ್ನು ನಾವು ೫೦ ವರ್ಷಗಳ ಹಿಂದಿನ ಇಂಗ್ಲಿಶ ಕಾದಂಬರಿಗಳಲ್ಲೂ ಕಾಣುತ್ತೇವೆ.
ಈ ಧೋರಣೆಯನ್ನು ಕನ್ನಡದಲ್ಲಿ ಭೈರಪ್ಪನವರು emphatically ಮುಂದುವರಿಸಿಕೊಂಡು ಬರುತ್ತಿದ್ದಾರೆ.

‘ಭೀಮಕಾಯ’ ಇದು ಭೈರಪ್ಪನವರ ಮೊದಲನೆಯ ಕಾದಂಬರಿ.
ಈ ಕಾದಂಬರಿಯ ನಾಯಕ ಒಬ್ಬ ತರುಣ ಭೀಮಕಾಯ ಜಟ್ಟಿ.
ಈತ ಅನೇಕ ಮಹಾಜಟ್ಟಿಗಳನ್ನು ಚಿತ್ ಮಾಡಿ ಒಗೆದಿದ್ದಾನೆ.
ಇವನನ್ನು ಓರ್ವ ತರುಣ ವೇಶ್ಯೆಯೇ ಮೋಹಿಸುತ್ತಾಳೆ.
ಭೀಮಕಾಯನೂ ಅವಳನ್ನು ಮೋಹಿಸಿದ ಎಂದು ಬರೆದರೆ, ಅವನ ನೈತಿಕತೆ ಹಾಳಾದಂತಲ್ಲವೆ?
ಆದುದರಿಂದ, ಭೈರಪ್ಪನವರು plot ಒಂದನ್ನು ಹೆಣೆಯುತ್ತಾರೆ.
ತನ್ನ ವಿರೋಧಿಗಳ ಕುತಂತ್ರದಿಂದಾಗಿ, ಈ ಭೀಮಕಾಯ ಆ ತರುಣಿಯ ಬಲೆಯಲ್ಲಿ ಬೀಳುತ್ತಾನೆ.
ಆದರೇನು, ಆ ವೇಶ್ಯೆ ಇವನನ್ನು ಮನಸಾ ಆರಾಧಿಸುತ್ತಾಳೆ.
ಆದುದರಿಂದ ಇವನಿಂದ ದುಡ್ಡು ತೆಗೆದು ಕೊಳ್ಳುವದಿಲ್ಲ ; ಇವನಿಂದ ಮಗುವನ್ನು ಪಡೆಯುತ್ತಾಳೆ.
ಈ ಭೀಮಕಾಯನಿಗೆ ಓರ್ವ ಬಾಲಿಕೆಯೊಡನೆ ಮದುವೆ ನಿಶ್ಚಯವಾದಾಗ ಆ ಹುಡುಗಿಯನ್ನು ಮದುವೆಯಾಗಲು ಅವನಿಗೆ ಬುದ್ಧಿ ಹೇಳುತ್ತಾಳೆ.

ಆ ವೇಷ್ಯೆಗಷ್ಟೆ ಇಂತಹ ಆರಾಧನಾ ಭಾವ ಇತ್ತು ಎಂದಲ್ಲ.
ತಮ್ಮ ಪ್ರಥಮ ರಾತ್ರಿಯಂದು, ಭೀಮಕಾಯನು ತನ್ನ ಬಾಲಿಕಾ ವಧುವಿಗೆ ಎಲ್ಲ ಸಂಗತಿಯನ್ನು ತಿಳಿಸುತ್ತಾನೆ.
ಇಡೀ ರಾತ್ರಿ ತನ್ನ ಗಂಡನ ವೇಷ್ಯಾಪುರಾಣ ಕೇಳಿದ ಅವಳೂ ಸಹ ತನ್ನ ಹೊಸ ಪತಿಯ ಬಗೆಗೆ ಅಷ್ಟೇ ಆರಾಧನಾ ಭಾವನೆಯನ್ನು ತೋರಿಸುತ್ತಾಳೆ.
ತನ್ನ ಗಂಡನ ಮನಸ್ಸನ್ನು ಗೆದ್ದ ಆ ವೇಷ್ಯೆಯ ಮನೆಗೆ ತಕ್ಷಣವೇ ಗಂಡನೊಡನೆ ತೆರಳಿ, ಅವಳ ಆಶೀರ್ವಾದ ಪಡೆಯುತ್ತಾಳೆ, ಚುಮುಚುಮು ನಸುಕಿನಲ್ಲಿ !
Indian-super-male-fantasyಯ “ದಾಸಿ-ಒಡೆಯ-ಆರಾಧನಾ-syndrome”ದ ಉತ್ಕಟ ಉದಾಹರಣೆ ಅಲ್ಲವೆ ಇದು?

Compulsive circumstances formulaಅನ್ನು ಭೈರಪ್ಪನವರು ತಮ್ಮ ‘ಗ್ರಹಣ’ ಕಾದಂಬರಿಯಲ್ಲಿ ಯಶಸ್ವಿಯಾಗಿ ಪ್ರಯೋಗಿಸಿದ್ದಾರೆ.
ಇದು ಭೈರಪ್ಪನವರ ೧೧ನೆಯ ಕಾದಂಬರಿ.
ಇಲ್ಲಿ ಆಧುನಿಕ ವಿಚಾರಗಳಿರುವ ಹಾಗೂ ಉಚ್ಚ ಧ್ಯೇಯಗಳಿರುವ ಸ್ವಾಮಿಗಳು ಕಾದಂಬರಿಯ ನಾಯಕರು. ಅಂತಹದೇ ವಿಚಾರಗಳ ಹಾಗೂ ಡಾಕ್ಟರ ವೃತ್ತಿಯ ನಾಯಕಿ ಇವನ ಆರಾಧಕಳು.
ಒಮ್ಮೆ ಭಯಂಕರ ಮಳೆ ಬೀಳುತ್ತದೆ.ನಾಯಕ ಹಾಗೂ ನಾಯಕಿ ತೊಯ್ದು ತೊಪ್ಪಡಿಯಾಗಿದ್ದಾರೆ.
ನಾಯಕ ಹಾಗೂ ನಾಯಕಿ ಅವನ ಗುಡಿಸಲಿಗೆ ಓಡಿ ಬರುತ್ತಾರೆ.
ಗುಡಿಸಲೂ ಸಹ ಸೋರುತ್ತಿದೆ. (ಸೋರುತಿಹದು ಮನೆಯ ಮಾಳಿಗೆ!)
ನಾಯಕನ ಸಂಯಮ ಕುಸಿದು, ಆತ ನಾಯಕಿಯ ಮೇಲೆ ಎರಗುತ್ತಾನೆ.
ನಾಯಕಿ ಆತನನ್ನು ತುಂಬು ಮನಸ್ಸಿನಿಂದ ಸ್ವೀಕರಿಸುತ್ತಾಳೆ!

Compulsive circumstances ಹಾಗೂ ಆರಾಧನಾ ಭಾವ ಅನ್ನುವ ಎರಡು ಲಕ್ಷಣಗಳಲ್ಲದೆ, Indian-super-male-fantasyಯ ಮೂರನೆಯ ಲಕ್ಷಣ ಸಹ ಈ ಕಾದಂಬರಿಯಲ್ಲಿದೆ.
ಅದು ನಾಯಕನ ರತಿಸಾಮರ್ಥ್ಯ!

ಇದೇ (‘ಗ್ರಹಣ’) ಕಾದಂಬರಿಯ ೧೦೫ನೆಯ ಪುಟದದಲ್ಲಿ ನಾಯಕಿ ವರ್ಣಿಸುವ ನಾಯಕನ ರತಿಸಾಮರ್ಥ್ಯದ ವೈಭವವನ್ನಷ್ಟು ಓದಿರಿ:
“……..ಅವರ ಕೈ, ತೋಳು, ಎದೆ, ಕುತ್ತಿಗೆ, ಕಾಲಿನ ಕಂಬ, ಮೀನಖಂಡಗಳೆಲ್ಲವೂ ಇನ್ನೂ ಬಿಗಿಯಾಗಿಯೇ ಇವೆ. ತನ್ನ ತೋಳು ಸೋತು ಮಲಗಿರುವಾಗ ಅವರ ಬಾಹುಗಳು ಮೊದಲಿಗಿಂತ ಗಟ್ಟಿಯಾಗುತ್ತಿವೆ. ಇನ್ನು ಸಾಕೆಂದು ಅವರಿಗೆ ಹೇಗೆ ಹೇಳುವದು?
ತಾನು ವೈದ್ಯಶಾಸ್ತ್ರವನ್ನು ಶ್ರದ್ಧೆಯಿಂದ ಅಭ್ಯಾಸ ಮಾಡಿರುವ ಹೆಂಗಸು. ಪ್ರಥಮ ಘಟನೆ, ಸ್ತ್ರೀಯ ಅನುಭವ, ಉದ್ದೀಪನ, ಪುರುಷನ ಧಾರಣ, ಕಾಲಾವಧಿ, ಸಾಪೇಕ್ಷ ಶಕ್ತಿಗಳ ಬಗೆಗೆ ತಿಳಿದುಕೊಂಡಿದ್ದವಳು. ಆದರೆ ಇದು ತನ್ನ ಕಲ್ಪನೆಯನ್ನೇ ಕುಸಿಸಿ ಮುಳುಗಿಸುತ್ತಿದೆ. ಇವರ ಧಾರಣಶಕ್ತಿ ಪ್ರಚಂಡವಾದದು. ಪ್ರಥಮ ಅನುಭವದಲ್ಲೇ ತನ್ನನ್ನು ರತಿಯ ತಲಾತಲಗಳಿಗೆ ತಲುಪಿಸಿದ್ದಾರೆ. ಪೌರುಷವೇ ಸಾಕ್ಷಾತ್ಕಾರವಾಗಿ ಚಲಿಸುವ ಇವರಿಗೆ ನಾನೊಬ್ಬಳಲ್ಲ, ನನ್ನಂತಹ ಹಲವು ಸ್ತ್ರೀಯರಾದರೂ ಸಾಲದೇನೋ!”

ಇದೇ (‘ಗ್ರಹಣ’) ಕಾದಂಬರಿಯ ೧೩೧ನೆಯ ಪುಟದಲ್ಲಿ, ಸ್ತ್ರೀಯ ಮೇಲೆ ಪುರುಷನ ವಿಜೃಂಭಣೆಯ ಮತ್ತೊಂದು ಪ್ರಕಾರವನ್ನು ಕಾಣಬಹುದು:
“ಸರೋಜ ಮಾತನಾಡದೆ ನಿಂತುಕೊಂಡಳು. ಆದರೆ ದೃಷ್ಟಿಯನ್ನು ಕೆಳಗೆ ಮಾಡದೆ ಕುತ್ತಿಗೆಯನ್ನು ಹಿಂದಕ್ಕೆ ತಿರುಗಿಸಿ, ಮಂಚದ ಮೇಲೆ ಮಲಗಿ ಕೈಕಾಲು ಅದರಿಸುತ್ತಿದ್ದ ರೋಗಿಯನ್ನು ನೋಡುತ್ತಿದ್ದಳು.
ತಮ್ಮ ಎಡಗಾಲನ್ನು ಮೇಲೆ ಎತ್ತಿ ಸ್ವಾಮಿಗಳು, ‘ಹೇಡಿ’ ಎಂದು ಅವಳ ಸೊಂಟಕ್ಕೆ ಒದೆದು ತೋಳನ್ನು ಬಿಟ್ಟರು. ಅವಳು ಉರುಳಿ ಕೆಳಗೆ ಬಿದ್ದಳು.
ಅವರು ಅವಳನ್ನು ತಿರುಗಿ ನೋಡಲಿಲ್ಲ. ಕಲ್ಲುಚಪ್ಪಡಿಯ ಮೆಟ್ಟಲನ್ನು ಇಳಿದರು.”

ಅದೇ (‘ಗ್ರಹಣ’) ಕಾದಂಬರಿಯ ೧೪೨ನೆಯ ಪುಟದಲ್ಲಿ ನಾಯಕಿಗೆ ಮತ್ತೆ ನಾಯಕನ ಪೌರುಷದ ಸ್ಮರಣೆಯಾಗುವ ಬಗೆಯನ್ನು ಓದಿರಿ:
“ಅಂಗಳದ ಭಾಗವನ್ನು ನೋಡುತ್ತಿದ್ದಾಗ, ತಾನು ಇಲ್ಲಿಗೆ ಬಂದಿದ್ದ ಕೊನೆಯ ದಿನದ ಮನಃಸ್ಥಿತಿ ಮತ್ತು ಅನುಭವಗಳ ನೆನಪಾಯಿತು. ಅದೆಂತಹ ಪೌರುಷ ಅವರದು! ಗಟ್ಟಿ ತೋಳಗಳು, ಕಸುವಿನ ಎದೆಕಟ್ಟು, ತಾನು ಸೋತು, ಬಳಲಿ, ನರನರಗಳೂ, ಸ್ನಾಯುಗಳೂ ಸಡಿಲವಾದಂತಾಗಿ ನಿಶ್ಚೇತನಳಾದ, ಮಾದಕತೆಯಿಂದ ಕಣ್ಣುಗತ್ತಲೆ ಬಂದಂತಹ ಅನುಭವ.”

ಭೈರಪ್ಪನವರ ೧೩ನೆಯ ಕಾದಂಬರಿ “ಅನ್ವೇಷಣೆ”ಯಲ್ಲಿ ಬರುವ ಒಬ್ಬ ಸನ್ಯಾಸಿಯು ಮುಂಬಯಿಯ ಸೂಳೆಯೊಬ್ಬಳಲ್ಲಿ ತೋರಿಸುವ ರತಿಸಾಮರ್ಥ್ಯದ ವರ್ಣನೆ ಹೀಗಿದೆ:
“ಅವರು ನಾಲ್ಕು ದಿನ ಆ ಮಹಡಿಯಿಂದ ಕೆಳಗೆ ಇಳಿಯಲಿಲ್ಲ. ತನಗೂ ಅವಳಿಗೂ ಅಲ್ಲಿಗೇ ಊಟ ಬರುತ್ತಿತ್ತು. ಐದನೆಯ ಬೆಳಗ್ಗೆ ಕೆಳಗಿಳಿದು ಬಾಂಬೆ ಸೆಂಟ್ರಲ್ ಸ್ಟೇಶನ್ನಿನ ಅದೇ ಜಾಗಕ್ಕೆ ಹೋಗಿ ಕುಳಿತಾಗ ಅನ್ನಿಸಿತು:
ಒಳ್ಳೆಯ ಹುಡುಗಿ. ಅಖಂಡ ಸುಖ ಕೊಟ್ಟಳು. ನನ್ನಲ್ಲಿ ಇಷ್ಟು ಶಕ್ತಿ ಇದೆ ಅಂತ ನನಗೇ ಗೊತ್ತಿರಲಿಲ್ಲ. ನಾಲ್ಕು ಹಗಲು ನಾಲ್ಕು ರಾತ್ರಿ. ಅವಳು ಎಷ್ಟು ಬಳಲಿದಳೋ! ನನಗೇನೂ ಬಳಲಿಕೆ ಇಲ್ಲ.”


ಭೈರಪ್ಪನವರ ೧೬ನೆಯ ಕಾದಂಬರಿ ‘ಸಾಕ್ಷಿ’ಯಂತೂ Super-male-fantasyಯ ಪರಮೋಚ್ಚ ಉದಾಹರಣೆ ಎನ್ನಬಹುದು.
ಈ ಕಾದಂಬರಿಯ (ಖಳ)ನಾಯಕ ಮಂಜಯ್ಯನೆನ್ನುವನು ಒಬ್ಬ Casanova.
ಈತ ೧೭ ವರ್ಷದವನಿರುವಾಗಲೇ ೩೫ ವರ್ಷದ ಪತಿವ್ರತಾ ಹೆಂಗಸೊಬ್ಬಳನ್ನು ತನ್ನ ಬಲೆಯಲ್ಲಿ ಅತಿ ಸುಲಭವಾಗಿ ಬೀಳಿಸುತ್ತಾನೆ. (ಹೆಣ್ಣಿನಲ್ಲಿರುವ ಆರಾಧನಾ ಗುಣದ ಮೂಲಕ!)
ತನಗೆ ೫೧ ವರ್ಷ ವಯಸ್ಸಾದಾಗ ಅದೇ ಸ್ತ್ರೀಯ ೧೭ ವರ್ಷದ ಹೆಣ್ಣು ಮಗಳನ್ನು ಅದೇ ರೀತಿಯಲ್ಲಿ ಬಲೆಗೆ ಕೆಡವಿಕೊಳ್ಳುತ್ತಾನೆ.
ಆಕೆ ತನ್ನ ಅಪ್ಪನ ವಿರೋಧವಿದ್ದಾಗಲೂ ಈತನನ್ನು ಮದುವೆಯಾಗುತ್ತಾಳೆ.
ಆಬಳಿಕ ಈ ಮಂಜಯ್ಯನು ಆ ಊರಿನ ಕೂಲಿಯೊಬ್ಬನನ್ನು ಕೊಂದು ಹಾಕಿ, ಅವನ ಹೆಂಡತಿಯನ್ನು ಬುಟ್ಟಿಗೆ ಹಾಕಿಕೊಂಡು ಅವಳ ಜೊತೆಗೆ ಅಕ್ರಮ ಸಂಬಂಧ ಸ್ಥಾಪಿಸುತ್ತಾನೆ.
ಆಬಳಿಕ ಅವಳ ಮಗಳನ್ನೂ ಸಹ ಬುಟ್ಟಿಗೆ ಬೀಳಿಸಿಕೊಳ್ಳುತ್ತಾನೆ.
SUPER CASANOVA !
ಈಗ ಈ Casanovaನ ಸಾಮರ್ಥ್ಯವನ್ನಷ್ಟು ನೋಡಿರಿ:
(ತನ್ನ ಗಂಡನ ಕೊಲೆಗಾರನಾದ ಮಂಜಯ್ಯನ ಬಗೆಗೆ ಮೋಹ ತಳೆದ ಲಕ್ಕಿ ಎನ್ನುವ ಹೆಂಗಸಿನ ವಿಚಾರವನ್ನು ಅರಿಯಲು ಈ ‘ಸಾಕ್ಷಿ’ ಕಾದಂಬರಿಯ ೩೫ನೆಯ ಪುಟವನ್ನು ನೋಡಿರಿ:)

“……ತಾನು ಈ ವಯ್ಯನನ್ನು ಕೂಡಿರುವದು ಈಗ ಎರಡನೆಯ ದಫ. ಮೊದಲನೆ ದಫ ಗ್ಯಾಪಿಸಿಕೊಂಡರೆ ಯವ್ವೇ ಎದೆ ಜಲ್ ಅಂತದೆ. ನಂಗೇ ಗೊತ್ತಿಲ್ಲದ್ಹಂಗೆ ಈವಯ್ಯ ಮಂತ್ರ ಹಾಕಿ, ಎಂಗಸೆಂದರೆ ಸೋತ ಎಣ್ಣು ನಾಯಿ ಮಾಡಿಬಿಡ್ತಾನೆ. ಕ್ವಾಟೆ ಬೀದಿ ನಾಗೀನ ಒಂದು ಸಲ ನಾನು ಕೇಳಿದ್ದಕ್ಕೆ ಅದೇನು ಕಂಡು ಆವಯ್ಯಂಗೆ ಗಂಟು ಬಿದ್ದೀದೀಯಮ್ಮಿ? ಅಂತ, ಯಕ್ಕಾ ಒಂದು ದಫಾ ಆವಯ್ಯನನ್ನು ಕೂಡಿಬಿಟ್ಟರೆ ಸಾಕು ಮುಂದೆ ಏಳೇಳು ಜನ್ಮಕ್ಕೂ ಅವನ ಜೀತದ ಆಳಾಗಿಯಾದರೂ ಅವನ ತಾವವೇ ಇರಬೇಕು ಅನ್ನಿಸ್ತದೆ ಅಂದಿದ್ದಳು, ಆಗ ನಂಗೆ ತಿಳಿದಿರಲಿಲ್ಲ ಹಿಂಗಿರ್ತದೆ ಅಂತ………”

ಇವರಿಬ್ಬರ ಮೊದಲ ಸಂಗಮದ ವರ್ಣನೆಯನ್ನಷ್ಟು ನೋಡಿರಿ:
“……..ಅವಳಿಗೆ ಅರ್ಥವಾಗುವ ಮೊದಲೇ, ಅರ್ಥ ಮಾಡಿಕಳುಕ್ಕೆ ಅವಕಾಶವನ್ನೇ ಕೊಡದೆ ತಬ್ಬಿ ಉರುಳಿಸಿಕೊಂಡು ಮೇಲೆ ಬಂದು, ಪ್ರವೇಶಿಸಿ ಕೊಸರಾಡದ ಹಾಗೆ ಪಟ್ಟು ಹಾಕಿ, ‘ಬ್ಯಾಡ ಕಣಯ್ಯಾ ಬ್ಯಾಡ ಕಣಯ್ಯಾ, ಇನ್ನೂ ಸೂತಕ ಕಣಯ್ಯಾ,’ ಅನ್ನುತ್ತಿದ್ದ ಬಾಯಿಗೆ ನನ್ನ ಬಾಯಿ ಕೊಟ್ಟು ಮುಚ್ಚಿಸಿಬಿಟ್ಟೆ ಎಂದುಕೊಂಡಾಗ ಮಂಜಯ್ಯ ಎಡಕ್ಕೆ ತಿರುಗಿ ನೋಡಿದ……ಶುರುವಿನಲ್ಲಿ ಮೆಟ್ಟಿಕೊಂಡು ಕೊಸರಾಟವನ್ನು ಹತೋಟಿಗೆ ತರಬೇಕಾದರೂ ನಿಧಾನವಾಗಿ ಇವಳು ಕೊಸರುವದನ್ನು ಬಿಟ್ಟು ಸಡಿಲಗೊಂಡು ಒಪ್ಪಿಸಿಕೊಂಡು ಕೊನೆಗೆ ಇವಳ ನಾಡಿಗಳನ್ನು ಕಂಡು ಹಿಡಿದು ಮಿಡಿದು ವರಸೆ ವೈಖರಿಗಳನ್ನು ಪ್ರಯೋಗಿಸಿದ ಮೇಲೆ ತಾನೂ ತೆವಲೇರಿ ನರಳುಕ್ಕೆ ಶುರು ಮಾಡಿದಳಲ್ಲ………”

ಈಗ ಈ ಮಂಜಯ್ಯ ಎನ್ನುವ ೫೧ ವಯಸ್ಸಿನ ಪಾತ್ರ, ತನ್ನನ್ನು ಬಿಟ್ಟು ಹೋಗಿ, ತನ್ನಿಂದ ೧೭ವರ್ಷಗಳ ವರೆಗೆ ದೂರವಾಗಿ ಉಳಿದ ತನ್ನ ೩೪ ವಯಸ್ಸಿನ ಹೆಂಡತಿಯ ಮೇಲೆ ಅತ್ಯಾಚಾರ ಎಸಗುವ ವರ್ಣನೆ ಹಿಗಿದೆ:
“…ತಡ ಮಾಡದೆ ಅವನು ಎವೆಯಿಕ್ಕುವದರೊಳಗೆ, ‘ಸಾವಿತ್ರಿ, ನಿನ್ನ ಕೈಲಿ ಮಾತಾಡಬೇಕು. ಇಲ್ಲಿ ಕೇಳು’ ಎನ್ನುತ್ತಾ ಬಾಗಿಲು ಮುಚ್ಚಿ ಅವಳ ಹತ್ತಿರಕ್ಕೆ ಹಾರಿ ಒಂದೇ ಅಪ್ಪಳಿಕೆಗೆ ಅವಳನ್ನು ತಬ್ಬಿ ಹಿಡಿದು ಬಾಯಿಯ ಮೇಲೆ ಕೈಇಟ್ಟು ಕಾಲಿಗೆ ಟಾಂಗು ಕೊಟ್ಟು ಕೆಡವಿಕೊಂಡು ಹೊರಳಾಡಲು ಬಿಡಿಸಿಕೊಳ್ಳಲು ಆಗದಂತೆ ಪಟ್ಟುಹಾಕಿ ಬಾಯಲ್ಲಿ ನನ್ನ ಮಾತು ಕೇಳು ನನ್ನ ಮಾತು ಕೇಳು ಎಂದು ಅನುನಯಿಸುತ್ತಾ ತೆಕ್ಕೆಬಿದ್ದು ಆಕ್ರಮಿಸಿಬಿಟ್ಟ. ಸರೋಜಾಕ್ಷಿಯೊಡನೆ ಮಾಡಿದ ತಪ್ಪು ಮಾಡದೆ ಆಕ್ರಮಣವು ಸಂಪೂರ್ಣವಾದ ನಂತರವೂ ಅವಳಿಗೆ ಕಿರುಚಿಕೊಳ್ಳಲು ಅವಕಾಶ ಕೊಡದಂತೆ ಬಾಯಿ ಮುಚ್ಚಿಸಿ ತನ್ನ ದೇಹದ ಎಲ್ಲ ಲಂಪಟ ಭಾಗಗಳಿಂದಲೂ ಅವಳನ್ನು ಉದ್ದೀಪಿಸತೊಡಗಿದ. ಅವಳು ವಿರೋಧಿಸುತ್ತಿದ್ದಳು. ಹೊರಳಲು, ಕೆಡವಲು, ನುಣುಚಿಕೊಳ್ಳಲು ಹೆಣಗಿದಳು. ದೈಹಿಕವಾಗಿ ಅವಾವುವೂ ಸಾಧ್ಯವಾಗದ ಹಿಡಿತವನ್ನು ಬಿಗಿಮಾಡುತ್ತಲೇ ನಡೆದಂತೆ ಬಿಡಿಸಿಕೊಳ್ಳುವದು ಅಸಾಧ್ಯವೆಂದರಿತ ಅವಳು ಸೋತು ಸುಮ್ಮನಾದಳು……………..”

ಈ ಅತ್ಯಾಚಾರದ ಕೊನೆಯಲ್ಲಿ ಅವಳಲ್ಲಿ ಉಕ್ಕಿದ ಭಾವನೆಗಳು ಹೀಗಿವೆ:
“…………ಅವನು ಮಾಡಿದ ಅತ್ಯಾಚಾರದ ಕೊನೆಕೊನೆಗೆ ನಾನು ಸೋತಿದ್ದೆ. ಭಾಗಿಯಾಗಿದ್ದೆ. ಅದು ಅವನಿಗೆ ಅರ್ಥವಾಗಿದೆ. ನನ್ನ ಸೋಲು,ನನ್ನ ನಾಚಿಕೆಯ ಅಂಶ ಅದು .”

ಇದೆಲ್ಲ super-fantasyಯ ಭಾಗವಾದ ರತಿಸಾಮರ್ಥ್ಯದ ಲಕ್ಷಣವಾಯಿತು. ಈಗ ಇನ್ನೊಂದು ಲಕ್ಷಣವನ್ನು ನೋಡಿರಿ.
ಅಂದರೆ ಹೆಣ್ಣನ್ನು ಆಳಬಯಸುವ ಮನೋಭಾವವನ್ನು ಇಲ್ಲಿ ವ್ಯತ್ಯಸ್ತವಾಗಿ ಹೇಳಲಾಗಿದೆ.
ಅರ್ಥಾತ್, ಹೆಣ್ಣೇ ಗಂಡಸಿನಿಂದ ಆಳಿಕೊಳ್ಳಲು ಬಯಸುತ್ತಾಳೆ ಎಂದು ಹೇಳುವ ಮೂಲಕ ವರ್ಣಿಸಲಾಗಿದೆ.

ಇದೇ (‘ಸಾಕ್ಷಿ’) ಕಾದಂಬರಿಯಲ್ಲಿಯ ಸರೋಜ ಎನ್ನುವ ಪಾತ್ರ ತನ್ನ ಗಂಡನ ಬಗೆಗೆ ಹೇಳುವ ಮಾತುಗಳು ಹೀಗಿವೆ:
“…ಎಂಥ ಗಂಡ ಈತ! ಕೆಟ್ಟವರಲ್ಲ. ಕೇಡಿಗರಲ್ಲ. ಸತ್ವಹೀನ, ಯಾರನ್ನೂ ಏನನ್ನೂ ಆಳಲಾರದವ…..ಇಂಥ ವಿಧೇಯತೆಯನ್ನು ಕಳೆಸಿ ಇವರನ್ನೊಬ್ಬ ಸಮರ್ಥ ಗಂಡಸನ್ನಾಗಿ ಮಾಡಬೇಕೆಂದು ಎಷ್ಟು ವಿಧದಲ್ಲಿ ಪ್ರಯತ್ನಿಸಿದೆ? ಹೆಂಗಸು ಮೆಚ್ಚುವ ಗಂಡಸಿನ ಗುಣಲಕ್ಷಣಗಳನ್ನು ಎಷ್ಟು ಆಪ್ತವಾಗಿ ಬಿಡಿಸಿ ಹೇಳಿದೆ?.........”

‘ಸಾಕ್ಷಿ’ ಕಾದಂಬರಿಯಲ್ಲಿ ಉದ್ದಕ್ಕೂ ಲಂಪಟತನವಿದೆ ; explicit ರತಿವರ್ಣನೆ ಇದೆ.
ಇವೆಲ್ಲವನ್ನೂ ಸಂಭಾವಿತವಾಗಿ cover ಮಾಡುವ ಉದ್ದೇಶದಿಂದ ಪುಟಗಟ್ಟಲೆ ಬರೆದ ಸೋಗಲಾಡಿ ತತ್ವಜಿಜ್ಞಾಸೆ ಇದೆ. ಭೈರಪ್ಪನವರು ತಮ್ಮ ನೈಜ ಉದ್ದೇಶವನ್ನು ಮರೆಮಾಚಲು ಈ ಕಾದಂಬರಿಯಲ್ಲಿ ಬಲು ವಿಚಿತ್ರವಾದ ತಂತ್ರವನ್ನು ಬಳಸಿದ್ದಾರೆ. ಅದು ಹಿಗಿದೆ:

ಯಮಧರ್ಮರಾಯನ ಆಸ್ಥಾನದಲ್ಲಿ ವಿಚಾರಣೆ ನಡೆಯುತ್ತಿದೆ.
ಯಮಧರ್ಮನಿಗೆ ಹಾಗೂ ಚಿತ್ರಗುಪ್ತರಿಗೆ ಸತ್ಯದ ಪೂರ್ಣ ಅರಿವಿದೆ.
ಆದರೂ ಸಹ ಅಲ್ಲಿ ನಿಂತಿರುವ ಆತ್ಮಕ್ಕೆ ತನ್ನ ಸಮರ್ಥನೆಯನ್ನು ಹೇಳಲು ಒಂದು ಅವಕಾಶ ಕೊಟ್ಟಿದ್ದಾರೆ.
ಅಲ್ಲಿಂದ ಕಾದಂಬರಿಯ flashback ಪ್ರಾರಂಭವಾಗುತ್ತದೆ.

ಕೊನೆಯಲ್ಲಿ ಮತ್ತೊಮ್ಮೆ ಯಮಧರ್ಮನ ಆಸ್ಥಾನದ ವರ್ಣನೆ, ಹಾಗೂ ಸತ್ಯದ proclamation ಆಗುತ್ತದೆ !
ಈ ತಂತ್ರಕ್ಕೆ ಹೊಂದುವಂತೆ, ಕಾದಂಬರಿಗೆ ‘ಸಾಕ್ಷಿ’ ಎಂದು ಹೆಸರಿಸಲಾಗಿದೆ.
ಭೈರಪ್ಪನವರು ಸತ್ಯಕ್ಕೆ ನಿಜವಾಗಿಯೂ ಬೆಲೆ ಕೊಡುತ್ತಿದ್ದರೆ, ಈ ಕಾದಂಬರಿಗೆ ‘ಒಬ್ಬ ಕಾಮಪಿಶಾಚಿಯ ಸಾಹಸಗಳು’ ಎನ್ನುವ ಶೀರ್ಷಿಕೆಯನ್ನು ಕೊಟ್ಟಿರುತ್ತಿದ್ದರು.

ಹಾಗಂತ, ಈ ಲೇಖನದಲ್ಲಿ ನಾನು ಭೈರಪ್ಪನವರ ಶೈಲಿಯ ಅಥವಾ ಇತರ ಉತ್ತಮ ಗುಣಗಳ ವಿಮರ್ಶೆಯನ್ನು ಮಾಡುತ್ತಿಲ್ಲ.
ಈ ಲೇಖನದ ಉದ್ದೇಶ ತುಂಬಾ limited ಆಗಿದೆ.
ಬಹಿರಂಗದಲ್ಲಿ ಕಾಣುವ ಕತೆ ಹಾಗೂ ಅಂತರಂಗದ stuff ಹೇಗೆ ಬೇರೆಯಾಗಿರಬಲ್ಲವು ಎಂದು ತೋರಿಸುವದಷ್ಟೇ ಈ ಲೇಖನದ ಸೀಮಿತ ಉದ್ದೇಶ.

ಭೈರಪ್ಪನವರ ಕಾದಂಬರಿಗಳ ಮುಖ್ಯ ಪಾತ್ರಗಳ ಕೆಲವು ಲಕ್ಷಣಗಳನ್ನು ಓದುಗರು ದಯವಿಟ್ಟು ಗಮನಿಸಬೇಕು.
(೧) ಈ ನಾಯಕರಲ್ಲಿ ಒಂದೋ ಬ್ರಹ್ಮಚರ್ಯದ ಬಗೆಗೆ ದೃಢವಾದ ಶ್ರದ್ಧೆ ಇರುತ್ತದೆ ಅಥವಾ ಅಗಾಧವಾದ ಕಾಮುಕ ಶಕ್ತಿ ಇರುತ್ತದೆ.
(೨) ನಾಯಕ ಮತ್ತು ನಾಯಕಿಯರಲ್ಲಿ ಸಾಮಾನ್ಯರಿಗೆ ಸಾಧ್ಯವಾಗದಷ್ಟು ತೀವ್ರವಾದ ತಳಮಳ ಹಾಗೂ ತತ್ವಜಿಜ್ಞಾಸೆ ಇರುತ್ತವೆ.

ಈ ಅಸಾಮಾನ್ಯ ಗುಣಗಳಿಗೆ ನನ್ನದೇನೂ ಆಕ್ಷೇಪಣೆ ಇಲ್ಲ. ಆದರೆ ಈ ಗುಣಗಳು ಅನೇಕ ಸಲ ಕಾದಂಬರಿಯನ್ನು ನಿರ್ದಿಷ್ಟ ದಿಕ್ಕಿನಲ್ಲಿ ಒಯ್ಯುವ ಅನುಕೂಲದ ಸಾಧನೆಗಳಾಗಿ ಹಾಗೂ ಲಂಪಟತನಕ್ಕೆ coverage ಆಗಿ ಬಳಕೆಯಾಗಿವೆಯೇ ಹೊರತು, ಪಾತ್ರಗಳ ಆಂತರಿಕ ಅವಶ್ಯಕತೆಯಿಂದಾಗಿ ಅಲ್ಲ.
ಇದರಿಂದ ದೊರೆಯುವ ಅನುಕೂಲವೆಂದರೆ, ಪಾತ್ರಗಳ ವರ್ತನೆಯನ್ನು ತತ್ವಜಿಜ್ಞಾಸೆಯಲ್ಲಿ ಮುಚ್ಚಿಹಾಕಬಹುದು.

ಇದಕ್ಕೆ ಉದಾಹರಣೆ ಎಂದು ಭೈರಪ್ಪನವರ ‘ಅಂಚು’ ಕಾದಂಬರಿಯನ್ನು ತೆಗೆದುಕೊಳ್ಳಬಹುದು.
ಈ ಕಾದಂಬರಿಯಲ್ಲಿ ಆರ್ಕಿಟೆಕ್ಟ ಆದ ನಾಯಕನಿಗೆ ಒಬ್ಬಳು neurotic ನಾಯಕಿಯೊಡನೆ ಭೆಟ್ಟಿಯಾಗುತ್ತದೆ.
ನಾಯಕನ ಹೆಂಡತಿ ಹಾಗೂ ಮಗ conveniently ನಾಲ್ಕು ವರ್ಷದ ಹಿಂದೆ ಸತ್ತಿದ್ದಾರೆ.
ನಾಯಕಿ, ತನ್ನ ಗಂಡನನ್ನು ಬಿಟ್ಟು, ಇಬ್ಬರು ಚಿಕ್ಕ ಮಕ್ಕಳೊಡನೆ ಮೈಸೂರಿನಲ್ಲಿ, conveniently ಒಬ್ಬಂಟಿಯಾಗಿ ವಾಸಿಸುತ್ತಿದ್ದಾಳೆ.

೩೫೦ ಪುಟಗಳ ಈ ಕಾದಂಬರಿಯಲ್ಲಿ ೪೪ನೆಯ ಪುಟದಲ್ಲಿ ನಾಯಕ ಹಾಗೂ ನಾಯಕಿಯರ ಸಂಗಮವಾಗುತ್ತದೆ.
ಆನಂತರ, ಓದುಗರಿಗೆ bore ಆಗುವಷ್ಟು ಸಲ ಸಂಗಮವು repeat ಆಗುತ್ತದೆ.
ನಾಯಕಿ neurotic ಇರುವದರಿಂದ, ರಿವಾಲ್ವರನಿಂದ ಗುಂಡು ಹೊಡೆದುಕೊಂಡು ಸಾಯಲು ಅನೇಕ ಸಲ ಪ್ರಯತ್ನಿಸುತ್ತಾಳೆ; ಚಾಮುಂಡಿ ಬೆಟ್ಟದಿಂದ ಕೆಳಗೆ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳಲೂ ಸಹ ಅಷ್ಟೇ ಸಲ ಪ್ರಯತ್ನಿಸುತ್ತಾಳೆ.
ಆತ್ಮಹತ್ಯೆಯ ಪ್ರಯತ್ನದ ಮೊದಲು ಪ್ರತಿ ಸಲವೂ ಕನಿಷ್ಠ ಎರಡು ಪುಟದಷ್ಟು ತತ್ವಜಿಜ್ಞಾಸೆ(ಸ್ವಗತದಲ್ಲಿ) ಮಾಡುತ್ತಾಳೆ.
ಓದುಗನಿಗೆ ತಲೆಚಿಟ್ಟು ಹಿಡಿದು ಹೋಗುತ್ತದೆ.
ಯಾವಾಗ ಈ ನಾಯಕಿಯು ಆತ್ಮಹತ್ಯೆಯಲ್ಲಿ ಸಫಲಳಾಗಿ, ತನಗೆ ಮುಕ್ತಿ ಕೊಡುತ್ತಾಳೊ ಎಂದು ಓದುಗ ಕಾಯುತ್ತಾನೆ.
ಆದರೆ, ಅವಳು ಕೊನೆಗೂ ಸಾಯುವದಿಲ್ಲ!
ಭೈರಪ್ಪನವರು ಸುಖಾಂತ ಮಾಡಿ ಮುಗಿಸುತ್ತಾರೆ.
(ಅಂದರೆ, ಮುಗಿದದ್ದೇ ಒಂದು ಸುಖ ಅಂತ!)

ಭೈರಪ್ಪನವರ ಬಹುತೇಕ ಕಾದಂಬರಿಗಳಲ್ಲಿ explicit sex ಇದೆ.
ಈ obsessionದ ಮನೋವೈಜ್ಞಾನಿಕ ಕಾರಣ ಏನು ಅಂತ ಹುಡುಕುವದು ನಮ್ಮ ಕೆಲಸವಲ್ಲ.
ಭೈರಪ್ಪನವರು ತತ್ವಜಿಜ್ಞಾಸೆಯನ್ನು cover ರೂಪದಲ್ಲಿ ಉಪಯೋಗಿಸಿಕೊಳ್ಳದಿದ್ದರೆ, ಈ ಕಾದಂಬರಿಗಳನ್ನು soft porn ಎಂದು ಕರೆಯಬಹುದಾದ ಮಟ್ಟಿಗೆ ಇಲ್ಲಿ sex ಇದೆ.

ಆದರೆ, ತತ್ವಜಿಜ್ಞಾಸೆಯನ್ನು ಓದುವದರಿಂದ ಓದುಗನಿಗೆ ಖುಶಿಯಾಗುತ್ತದೆ.
ತಾನು ಯಾವುದೋ ಒಂದು ಬೌದ್ಧಿಕ ಸಾಹಿತ್ಯವನ್ನು ಓದುತ್ತಿದ್ದೇನೆ ಎನ್ನುವ ಭ್ರಮೆ ಅವನಲ್ಲಿ ಹುಟ್ಟುತ್ತದೆ.
ಅದರ ಜೊತೆಗೆ ಓದುಗನ super-male-fantasyಯು ಸಹ ತೃಪ್ತವಾಗುತ್ತದೆ.
ದುರ್ದೈವದಿಂದ ಭಾರತೀಯ ಸ್ತ್ರೀಯರೂ ಸಹ ಈ super-male-fantasyಗೆ ಒಗ್ಗಿ ಹೋಗಿದ್ದಾರೆ.
(ಇದಕ್ಕೆ ಸಾವಿರಾರು ವರ್ಷಗಳ social conditioning ಕಾರಣವಾಗಿದೆ.)
ಅಲ್ಲದೆ soft pornದ ಖುಶಿ ಸಹ ಸಿಗುತ್ತದೆ.
(ಹಾಗೆಂದು ಈ ಕಾದಂಬರಿಗಳನ್ನು ಮುಚ್ಚಿ ಓದುವ ಕಾರಣವಿಲ್ಲ ; ಇದು ಗಂಭೀರ ಸಾಹಿತ್ಯ!)
ಈ ತಂತ್ರಗಳೇ ಭೈರಪ್ಪನವರ ಕಾದಂಬರಿಗಳ ಜನಪ್ರಿಯತೆಗೆ ಕಾರಣವಾಗಿವೆ ಎನ್ನಬಹುದು.

ಈ ಲೇಖನ ಭೈರಪ್ಪನವರ ಕಾದಂಬರಿಗಳ ವಿಮರ್ಶೆ ಅಲ್ಲ.
ಅವರ ಕಾದಂಬರಿಗಳಲ್ಲಿ ಕಂಡುಬರುವ ಕೆಲವು ಗುಣಲಕ್ಷಣಗಳನ್ನು ತೋರಿಸುವ ಪ್ರಯತ್ನ ಮಾತ್ರ.
ನಿಜ ಹೇಳಬೇಕೆಂದರೆ ಭಾರತೀಯ ಸಮಾಜದಲ್ಲಿಯ ಹೆಣ್ಣುಮಕ್ಕಳ ಬವಣೆಯನ್ನು , ಯಾತನೆಯನ್ನು ಅವರಷ್ಟು ಸಮರ್ಥವಾಗಿ ಹಾಗೂ ವಿಪುಲವಾಗಿ ಬೇರೆ ಯಾವ ಲೇಖಕನೂ ತೋರಿಸಿಲ್ಲ.

‘ಗೃಹಭಂಗ’ ಹಾಗು ‘ಸಾರ್ಥ’ ಇದಕ್ಕೆ ಉತ್ತಮ ಉದಾಹರಣೆಗಳು.
ಅದರಲ್ಲೂ ಸಹ, ‘ಸಾರ್ಥ’ವು ನನ್ನ ನೆಚ್ಚಿನ ಕಾದಂಬರಿ.
‘ಗೃಹಭಂಗ’ ಕಾದಂಬರಿಯಲ್ಲಿ super-male-fantasyಯ ಯಾವ ವರ್ಣನೆಯೂ ಇಲ್ಲ.
ಇಲ್ಲಿಯ ನಾಯಕ ಒಬ್ಬ ಹೇಪ್ಲ್ಯಾ ಹಾಗೂ ಅವಿವೇಕಿ ಗಂಡಸು.
ಅದಾಗ್ಯೂ ಸಹ ನಾಯಕಿಯು ಎಲ್ಲ ಸಂಕಷ್ಟಗಳನ್ನು ಎದುರಿಸುತ್ತಾ ಸಂಸಾರದ ಬಂಡಿಯನ್ನು ತಾನೇ ಎಳೆಯುತ್ತಾಳೆ.
‘ಸಾರ್ಥ’ ಕಾದಂಬರಿಯಲ್ಲಿ super-male-fantasyಯ ಒಂದು ಘಟನೆ ಇದ್ದರೂ ಸಹ, ಒಟ್ಟಾರೆ ಕಾದಂಬರಿಯಲ್ಲಿ ಆ ಘಟನೆ ಗೌಣವಾಗಿ ಬಿಡುತ್ತದೆ.
‘ಗೃಹಭಂಗ’ ಹಾಗು ‘ಸಾರ್ಥ’ ಕಾದಂಬರಿಗಳಲ್ಲಿ ಓದುಗರ ಮನಸ್ಸಿನಲ್ಲಿ ಕೊನೆಗೂ ನಿಲ್ಲುವವರು ಆ ಕಾದಂಬರಿಗಳ ನಾಯಕಿಯರೇ.

51 comments:

Anonymous said...

ಹಾಗೆ ನೋಡಿದರೆ ಭೈರಪ್ಪನವರ ಕಾದಂಬರಿಗಳಲ್ಲಷ್ಟೇ ಯಾಕೆ,
ನೀವು ಹೇಳಿದಂತೆ ನಮ್ಮ ಮಹಾಭಾರತದಲ್ಲಿ ಬರುವ ಉಪಕಥೆಗಳೂ
ಇದಕ್ಕೆ ಹೊರತಾಗಿಲ್ಲ.ಮಹಾಭಾರತದಲ್ಲಿ ಪ್ರತಿ 7-8 ಪುಟಕ್ಕೊಂದರಂತೆ
ಇಂಥ ಅಕ್ರಮ ಕಥೆಗಳಿವೆ.ಯಾರದೋ ಹೆಂಡಿಂದರನ್ನು ಇನ್ಯಾವನೊ ಹೊತ್ತೊಯ್ಯುವದು,
ಗುರುಗಳ ಮಗಳನ್ನ ಅಥವಾ ಗುರುಪತ್ನಿಯನ್ನೇ ಅನುಭವಿಸುವದು-ಬರೀ ಇಂಥವೇ..
ತಮಾಷೆಯೆಂದರೆ ಇವು sophisticated ಚರಿಷ್ಮಾದ ಹೆಸರಿನಲ್ಲಿ ಕಂಗೊಳಿಸುತ್ತವೆ!
ಅಗಲ ಎದೆಯ,ಕೈಕಾಲುಗಳಿಗೆ ಕಬ್ಬಿಣದ ಸರಪಳಿ ಹಾಕಿರುವ ಹೊಳೆವ ಕಣ್ಣುಗಳ ಫಕೀರನೊಬ್ಬ
ಅಮಾಯಕ ಬಾಲೆಯೊಬ್ಬಳನ್ನು ಗುಡ್ಡದ ಮೇಲೆ ಹೊತ್ತೊಯ್ದರೆ-ಅಂಥದೊಂದು ಕ್ರಿಯೆ "ಸಮ್ಮೊಹನ" ಪದದೊಳಗೆ
(ಅಕೆಯ ಆರ್ತನಾದ ಕೂಡ!) ಕಮರಿಹೋಗುತ್ತದೆ.ಅದೇ ಕೆಲಸ ಆರ್ಡಿನರಿ ಗೌಡನೊಬ್ಬ ಮಾಡಿದರೆ ಹಾದರ!
ಕಥೆ ಹೆಣೆಯುವ ಬೄಹಸ್ಪತಿಗಳಿಗೆ technique ಅನ್ನೋದು ಎಷ್ಟು ಸಲೀಸು ನೋಡಿ.
ಭೈರಪ್ಪನವರೂ ಇದಕ್ಕೆ ಹೊರತಾಗಿಲ್ಲ.ವ್ಯಾಸರೂ ಕೂಡ..
-ರಾಘವೇಂದ್ರ ಜೋಶಿ.

sunaath said...

rj,
Well said!

shivu.k said...

ಸುನಾಥ್ ಸಾರ್,
ಸತ್ಯ ಹೇಳುತ್ತೀನಿ ನಿಮ್ಮ ಬರಹದ ಒಳಾರ್ಥವನ್ನು ಅರ್ಥಮಾಡಿಕೊಳ್ಳಲು ಎರಡೆರಡು ಬಾರಿ ಓದಿದೆ. super-male-fantasy ಬಗ್ಗೆ ಬೈರಪ್ಪನವರ ಕಾದಂಬರಿಯಲ್ಲಿ ಆದೆಷ್ಟು ತಾಳ್ಮೆಯಿಂದ ಅದ್ಯಾಯನ ಮಾಡಿದ್ದೀರಿ.. ಕೊನೆಗೆ ಅದರ ಬೈ ಪ್ರಾಡಕ್ಟ್ ಆಗಿ ನೀವು ನಿಮ್ಮದೆ ರೀತಿಯಲ್ಲಿ ನಮಗೆ ಕೊಟ್ಟಿರುವುದಂತೂ ಅದ್ಬುತ! ಗಂಡು ಹೆಣ್ಣಿನ ಸಂಗಮದ ಕುರಿತಾದ ಆರಾಧನ ಭಾವನೆಯನ್ನು ಎಷ್ಟುವಿಧದಲ್ಲಿ ನಮಗೆ ಅರ್ಥೈಸಿದ್ದೀರಿ...ನನಗನ್ನಿಸುತ್ತೆ ನಿಮಗೆ ಷರೀಫರ ಪದ್ಯವಾಗಲಿ, ಬೈರಪ್ಪನವರ ಕಾದಂಬರಿಗಳ sex ವಿಚಾರವಾಗಲಿ ನಮಗೆ ಹೊಸ ವಿಚಾರಧಾರೆಯಾಗಿ ನಿಮ್ಮಿಂದ ಕೊಡಲು ಮಾತ್ರ ಸಾಧ್ಯ ಅನ್ನಿಸುತ್ತೆ. ....ನೋಡೋಣ ಇನ್ನು ಭತ್ತದ ಖಜಾನೆಯಲ್ಲಿ ಇನ್ನೂ ಏನೇನು ಆಡಗಿದೆಯೋ ಕಾಯುವು ಕಾತುರ ನನ್ನದು.

sunaath said...

ಶಿವು,
ವಂದನೆಗಳು.
ನಾವೆಲ್ಲರೂ ವಿಚಾರಗಳನ್ನು, ಅನುಭವಗಳನ್ನು ಹಾಗೂ ಸಂತೋಷವನ್ನು ಹಂಚಿಕೊಳ್ಳುತ್ತಿದ್ದೇವೆ, ಅಲ್ಲವೆ?

ಬಾನಾಡಿ said...

ಸೂಪರ್ ಮೇಲ್ ಫ್ಯಾಂಟಸಿಯ ತಕ್ಕಡಿಯಲ್ಲಿ ಬೈರಪ್ಪನವರ ಬರಹಗಳನ್ನು ತೂಗಿಸಿ ವಿಮರ್ಶಿಸಿದ ಪರಿ ಹೊಸತು. ಬೈರಪ್ಪನವರ ಕಾದಂಬರಿಗಳನ್ನು ಮುಟ್ಟಲೂ ಹೆದರುತ್ತಿದ್ದವರು ಓಡೋಡಿ ಕೊಂಡೊಯ್ಯಬಹುದು. ಅವರ ಕಾದಂಬರಿಗಳು ದಾಖಲೆ ಮಟ್ಟಕ್ಕೆ ಮಾರಾಟವಾಗಲು ಕಾರಣರಾದವರು ಸ್ವಲ್ಪ ಮುಜುಗರ ಪಡೆಬಹುದು.
ನಿಮ್ಮ ವಿಮರ್ಶೆಯ ಓಘ ಅದ್ಭುತ. ದಿನಮೂಡುವ ಸೂರ್ಯನ ಬಿಸಿಲಲ್ಲೂ ಹೊಸತೊಂದನ್ನು ತೋರಿಸುವ ನಿಮ್ಮ ಬರಹ ಅಪೂರ್ವವಾಗಿತ್ತು. ಅಭಿನಂದನೆಗಳು.
ಒಲವಿನಿಂದ
ಬಾನಾಡಿ

Ittigecement said...

ಸುನಾತ ಸರ್..

ನಾನು ನಿಮ್ಮ ಅಭಿಮಾನಿಯಾದೆ...
ಇಷ್ಟು ಸಾಹಿತ್ಯ ಅಧ್ಯಯಿನಿಯಾದ ತಾವು ಸಿವಿಲ್ ಇಂಜೀನಿಯರ್ ಹೇಗೆ ಆದ್ರಿ..?

ತಾವು ಬರೆದ ಲೆಖನದ ಬಗೆಗೆ (ನನಗೆ ತಿಳಿದ ಅಲ್ಪ ಜ್ನಾನದಲ್ಲಿ)

ಭೈರಪ್ಪನವರೂ ಮನುಷ್ಯರು..

ಕಥೆಯ..ಕಾದಂಬರಿಯ ಸಂದರ್ಭಕ್ಕೆ ಅನುಗುಣವಾಗಿ " " ನ್ನು ಬಳಸಿದ್ದಾರೆ..
ಅದು ಕಥೆಗೆ ಪೂರಕವಾಗಿ...
ಇಂಥಹ ಸಂದರ್ಭಗಳಲ್ಲಿ ನೀವು ಪ್ರತಿಪಾದಿಸಿದವುಗಳು.."ಕಾಕತಾಳೀಯವಾಗಿರಬಹುದು"..ಅಲ್ಲವೆ...

ಆ "ಕಾಕತಾಳೀಯ ಗಳನ್ನಿಇಟ್ಟುಕೊಂಡು ವಿಮರ್ಶೆ ಮಾಡುವದು ಎಷ್ಟು ಸಹಜ..?

ಹಾಗೆ ಎಷ್ಟು ಔಚಿತ್ಯ..?

ಒಂದೊಂದು ಕ್ರತಿಗಳೂ..ವಿಭಿನ್ನ ಕಥವಸ್ತು ಹೊಂದಿರುತ್ತದೆ..
ವಿಭಿನ್ನ ಸಂದರ್ಭಗಳನ್ನು ಸನ್ನಿವೇಷ ಹೊಂದಿರುತ್ತದೆ...

ಆ ಕ್ರತಿಗಳನ್ನು ಓದುವಾಗ..ಅದು ಅನಗತ್ಯ ಎಂದು ಅನ್ನಿಸುವದಿಲ್ಲ....
( ಒಂದೆರಡು ಕ್ರತಿಗಳನ್ನು ಬಿಟ್ಟು)

ಹಾಗಾಗಿ ಅವರ ಕ್ರತಿಗಳಿಂದ ಅವರ "ಪ್ರತಿಪಾದನೆಯನ್ನು" ಪ್ರಶ್ನಿಸುವದು ಎಷ್ಟರ ಮಟ್ಟಿಗೆ ಸರಿ..?

ಯಾರೂ ಏನೇ ಹೇಳಿದರೂ ಅವರ ಕ್ರತಿಗಳ ಮಾರಾಟ ಅವರ ಸಮರ್ಥನೆಗೆ ಬಂದಾವು...

ನಿಮ್ಮ ವಸ್ತುನಿಷ್ಠ ಬರಹಕ್ಕೆ ಮನ ಸೋತಿದ್ದೇನೆ..

ನಿಮ್ಮಿಂದ ಸಕಾರತ್ಮಕ ವಿವರಣೆ ನಿರೀಕ್ಷಿಸಿದ್ದೇನೆ..
ತಪ್ಪಿದ್ದಲ್ಲಿ..ವಯಸ್ಸಿನಲ್ಲೂ..ಅನುಭವದಲ್ಲು ಸಣ್ಣವನಿದ್ದೇನೆ..
ಕ್ಷಮೆ ಇರಲಿ..

ವಂದನೆಗಳು...

sunaath said...

ಧನ್ಯವಾದಗಳು, ಬಾನಾಡಿ. ಭೈರಪ್ಪನವರನ್ನು ವಿಮರ್ಶಿಸುವ ಯೋಗ್ಯತೆ ನನಗಿಲ್ಲ. ಆದರೆ, ಕೆಲವೊಂದು points ಕಣ್ಣಿಗೆ ಕಾಣುವಂತೆ ಇದ್ದುದರಿಂದ, ಅವನ್ನಷ್ಟು ತೋರಿಸಲು ಪ್ರಯತ್ನಿಸಿದ್ದೇನೆ.

sunaath said...

ಪ್ರಕಾಶ,
ನಿಮ್ಮ comment ತುಂಬಾ ಯೋಗ್ಯವಾದದ್ದಿದೆ.
ಯಾರದೇ ಕಾದಂಬರಿಯಲ್ಲಿಯೂ sex ಬರಬಹುದು. ಅದು ಕಥಾನಕಕ್ಕೆ ಅವಶ್ಯವಾಗಿರಲೂ ಬಹುದು.

ನಮ್ಮ elite ಲೇಖಕರು ಬರೆಯುವ ಕತೆಗಳಲ್ಲಿ ರತಿಕ್ರಿಯೆಯ ನೇರ ವರ್ಣನೆ ಕಡಿಮೆ. (ಕುವೆಂಪುರವರ 'ಮಲೆಗಳಲ್ಲಿ ಮದುಮಗಳು' ಕಾದಂಬರಿಯೊಂದು ಇದಕ್ಕೆ ಅಪವಾದ.)
ಆದರೆ, ಭೈರಪ್ಪನವರ most ಕಾದಂಬರಿಗಳಲ್ಲಿ ರತಿಕ್ರಿಯೆಯ ನೇರ ವರ್ಣನೆ ಇದೆ. ಹಾಗೂ ಈ ವರ್ಣನೆ heavily-ಪುರುಷ-biased ಇದೆ.
ಈ ವಿಷಯವನ್ನು ಗಮನಿಸಿದಾಗ, ರತಿಕ್ರಿಯೆಯ ವರ್ಣನೆ ಇಲ್ಲದೆ, ಇವರು ಕಾದಂಬರಿಯನ್ನು ಬರೆಯಬಹುದಾಗಿತ್ತೆ ಎಂದು ನಾನು ಆಲೋಚಿಸಿದೆ. ಅದು ಸಾಧ್ಯವಿತ್ತು ಎಂದು ನನಗೆ ತೋರಿತು.
ಇದು ಕೇವಲ ನನ್ನ ದೃಷ್ಟಿಕೋನವಾಗಿದ್ದು, ನನ್ನದೇ ತಪ್ಪಿರಬಾರದೆಂದೆನೂ ಅಲ್ಲ. ವಿಭಿನ್ನ ಪ್ರತಿಪಾದನೆಗಳನ್ನು ಮುಕ್ತ ಮನಸ್ಸಿನಿಂದ ಸ್ವೀಕರಿಸಲು ನಾನು ಸಿದ್ಧನಿದ್ದೇನೆ.

Anonymous said...

ನಿಮ್ಮದೇ ಆದ ದೃಷ್ಟಿಕೋನದಲ್ಲಿ ಶ್ರೀ ಭೈರಪ್ಪನವರ ಕಾದಂಬರಿಗಳನ್ನು, ಕಾದಂಬರಿಯ ಪಾತ್ರಗಳನ್ನು ವಿವೇಚನೆಗೆ-ವಿಮರ್ಶೆಗೆ ಒಳಪಡಿಸಿದ್ದೀರಿ. ನನಗೆ ಅನಿಸಿದಂತೆ,ನಿಮ್ಮ ವಿಮರ್ಶೆ ಲೈಂಗಿಕತೆಯ ಪ್ರಖರ ಬೆಳಕಿನಲ್ಲಿ, ತತ್ವಜಿಜ್ಞಾಸೆಯನ್ನು ಮಂಕಾಗಿಸಿದೆ. ಪ್ರಪ್ರಥಮವಾಗಿ, ಬಹುಪತಿತ್ವ ( ಬಹಳ ಗಂಡುಗಳ ಬಯಕೆ )ಹೆಣ್ಣಿನ ಸಾಮಾನ್ಯ ಮನೋದರ್ಮ ಅಲ್ಲವೇ ಅಲ್ಲ. ಪೃಕೃತಿಯಲ್ಲಿ, ಎಲ್ಲ ಜಾತಿಯ ಹೆಣ್ಣು ಪ್ರಾಣಿಗಳು, ಋತು ಬಂದಾಗ ಮಾತ್ರ ಗಂಡಿನ ಸಖ್ಯ ಬಯಸುತ್ತವೆಯೆ ಹೊರತು, ಹೆಚ್ಚು-ಹೆಚ್ಚು ಗಂಡುಗಳನ್ನು ಬಯಸುವದಿಲ್ಲ. ಮಾನವರದೂ ಮೂಲತಃ ಇದೇ ಸ್ವಭಾವ ಇದ್ದಿರಬಹುದು. ಮನುಷ್ಯನಿಗೆ ವಿಕೃತ ಬುದ್ಧಿ ಬೆಳೆದಂತೆ, ವಿಕೃತ ಕಾಮವೂ ಬೆಳೆದಿರಬಹುದು. ಆಸೆ ಬೆಳೆದಂತೆ, ವಿಕೃತ ಕಾಮೇತ್ಸೆಯೂ ಬೆಳೆದಿರಬಹುದು. ಅದೇ ಮೂಲಸ್ವಭಾವವಾಗಿ ಪರಿವರ್ತಿತವಾಗಿರುವ ಸಂಭವವೂ ಇದೆ. ಇಂತಹ ಮೂಲಸ್ವಭಾವವನ್ನು ಮೀರಿ, ಮನಸ್ಸಿನಲ್ಲಿ ತತ್ವಜಿಜ್ಷಾಸೆ ಉಂಟಾಗಿ, ವಿಕೃತಕಾಮವನ್ನು ಜಯಿಸುವದು ಮಾನವರಿಗೆ ಅಸಾಧ್ಯವೇನಲ್ಲ. ಅದಕ್ಕೆ ಬೇಕಾಗುವದು ಮನಸ್ಸಿನ ಸ್ಥಿರತೆ, ಬಾಲ್ಯದ ಸಂಸ್ಕಾರ. ಈ ಸಂಸ್ಕಾರ ಶ್ರೀ ಭೈರಪ್ಪನವರ ಪಾತ್ರಗಳಲ್ಲಿ ನೋಡಲು ದೊರೆಯುತ್ತದೆ. ತತ್ವಜಿಜ್ಞಾಸೆಯ ಪ್ರಖರ ಬೆಳಕಿನಲ್ಲಿ, ಕಾಮವನ್ನು ಹಿಂಜಿ ನೋಡಿದರೆ ಈ ಸತ್ಯ ಅರ್ಥವಾಗುವದು ಕಷ್ಟವೇನಲ್ಲ. ಪೃಕೃತಿಯು ಸಂತಾನೋತ್ಪತ್ತಿಯ ವಿಷೇಶ ಹೊಣೆಯನ್ನು ಹೆಣ್ಣಿಗೇ ವಹಿಸಿದ್ದರಿಂದ, ದೈಹಿಕವಾಗಿ ಹೆಣ್ಣು ಗಂಡಿಗಿಂತ ಕಡಿಮೆಯಾಯಿತು. ಗಂಡು ಇದರ ದುರ್ಲಾಭವನ್ನೂ ತೆಗೆದುಕೊಂಡದ್ದಿದೆ. ಹೀಗಾಗಿ, ಹೆಣ್ಣಿಗಿಂತ ಗಂಡು ಬಲಶಾಲಿ. ಉತ್ತರದಾಯಿತ್ವ ಕಡಿಮೆ. ಅದಕ್ಕೆ, ಪೃಥ್ವಿಯ ಎಲ್ಲ ದೇಶಗಳಲ್ಲಿ ಪುರುಷ ಪ್ರಧಾನತೆ ಕಂಡುಬರುವದು. ಈ ತಥ್ಯ ಶ್ರೀ ಭೈರಪ್ಪನವರ ಕಾದಂಬರಿಯ ಪಾತ್ರಗಳಲ್ಲಿ ಸಮರ್ಥವಾಗಿ ಚಿತ್ರಿತವಾಗಿದೆ.

ನಿಮ್ಮಷ್ಟು ಓದಿ ವಿವೇಚನೆ ಮಾಡಿಲ್ಲ. ನನ್ನ ಅಳವಿನಲ್ಲಿ, ನನ್ನ ಅಲ್ಪ ಬುದ್ಧಿಗೆ ಹೊಳೆದದ್ದನ್ನು ಬರೆದಿರುವೆ. ಶ್ರೀ ಭೈರಪ್ಪನವರ ಎಲ್ಲ ಕಾದಂಬರಿಗಳನ್ನೂ ( "ಭೀಮಕಾಯ"ದ ಹೆಸರೇ ಕೇಳಿಲ್ಲ} ಓದಿದ್ದೇನೆ. ನಿಮ್ಮ ವಿಮರ್ಶೆಯಲ್ಲಿ "ಪರ್ವ"ದ ಹೆಸರೇ ಇಲ್ಲದ್ದು ಆಶ್ಚರ್ಯ.

sunaath said...

ಕಟ್ಟಿಯವರೆ,
ನಾನು ಮೊದಲೆ ತಿಳಿಸಿದಂತೆ, ಇದು ಕೇವಲ ಒಂದು ಕೋನದಿಂದ ನೋಡಿದ ನೋಟ.

ಯಾವುದೇ ಜೀವಿಯ ಆದ್ಯ identityಯು biological identity ಅಂದರೆ gender identity ಆಗಿರುತ್ತದೆ. ಆಬಳಿಕ ಉಳಿದ social identityಗಳು ಪ್ರಾರಂಭವಾಗುತ್ತವೆ.

ಯಾವುದೇ ಜೀವಿಯ ಆದ್ಯ ಕರ್ತವ್ಯ ಅಂದರೆ ಉಳಿಯುವದು ಹಾಗೂ ಬೆಳೆಸುವದು. ನಿಸರ್ಗವು ಈ ಬೆಳೆಸುವ ಕಾರ್ಯವನ್ನು ಬೇರೆ ಬೇರೆ ಪ್ರಾಣಿಕುಲಕ್ಕೆ ಬೇರೆ ಬೇರೆಯಾಗಿ ರೂಪಿಸಿದೆ.
ಮಾನವಕುಲವು ಎಲ್ಲ ಪ್ರಾಣಿಕುಲಗಳಲ್ಲಿ physiologically ಅತ್ಯಂತ weak ಕುಲ. ಅದುದರಿಂದ ಬೆಳೆಸುವ ಕಾರ್ಯಕ್ಕೆ ಇಲ್ಲಿ ವಿಶೇಷ ಪ್ರಾಶಸ್ತ್ಯ. ಹಾಗಾಗಿ polyandry ಹಾಗು polygamy ಈ ಕುಲಕ್ಕೆ ಅವಶ್ಯ.

ಮಾನವ ನಾಗರಿಕತೆ ಬೆಳೆದಂತೆ, ಈ ಪ್ರಾಶಸ್ತ್ಯಗಳು ಬದಲಾಗಿ, monondry ಹಾಗೂ monogamy(except in a few cultures) ಬೆಳೆದು ಬಂದಿವೆ.
ಆದರೆ ಶಿವರಾಮ ಕಾರಂತರು ಒಂದೆಡೆ ಹೇಳಿದಂತೆ, ನಿಸರ್ಗದ ವಿರುದ್ಧ ಹೋಗುವದೆ ನಾಗರಿಕತೆ ಆಗಿದೆ.

'ಭೀಮಕಾಯ'ವು ಭೈರಪ್ಪನವರ ಮೊದಲ ಕಾದಂಬರಿ. ಆದರೆ
ಪ್ರಕಟಣೆಗೆ ಧೈರ್ಯ ಸಾಲದೆ, ಪ್ರಕಟಿಸಿದ್ದಿಲ್ಲ ಎಂದು ಭೈರಪ್ಪನವರು ಒಂದೆಡೆಗೆ ಹೇಳಿದ್ದರು. ಆದರೆ, ಆ ಕಾದಂಬರಿಯಲ್ಲಿ ತೋರಿಸಿದ ಮೇರೆಗೆ ಅದರ ಮೊದಲ ಮುದ್ರಣವು ೧೯೫೮ರಲ್ಲಿ ಆಗಿದೆ.

ಈ ಲೇಖನ ಬರೆಯುವಾಗ, referance ಬರೆಯಲು ಪರ್ವ ಕಾದಂಬರಿಯು ನನಗೆ ಲಭ್ಯವಾಗಲಿಲ್ಲ.

Anonymous said...

ಕಾಕಾ,

Indian super- male- fantasy ಮತ್ತು ಭೈರಪ್ಪನವರ ಕಾದಂಬರಿಗಳ ಬಗ್ಗೆ ಉತ್ತಮವಾಗಿ ವಿಮರ್ಶಿಸಿದ್ದಿರಿ, ಧನ್ಯವಾದಗಳು.

ನಿಮ್ಮ ಲೇಖನಗಳನ್ನು ಓದುತ್ತಿದ್ದರೆ ಮುಂಬಯಿ ಬಿಟ್ಟು ಮತ್ತೆ ಶಾಲ್ಮಲೆಯ ತೀರಕ್ಕೆ ಬರುವ ಆಸೆಯಾಗುತ್ತಿದೆ ಮತ್ತು ಇನ್ನು ಎಷ್ಟೆಲ್ಲಾ ಓದಬೇಕಿದೆ ಎಂದೆನಿಸಿದೆ.

ಪ್ರೀತಿಯಿರಲಿ

ಶೆಟ್ಟರು, ಮುಂಬಯಿ

Harisha - ಹರೀಶ said...

ಇಷ್ಟು ಆಳವಾಗಿ ಅಧ್ಯಯನ ಮಾಡಿ ಸುದೀರ್ಘವಾದ ಲೇಖನದಲ್ಲಿ ವಿಮರ್ಶಿಸಿರುವ ನಿಮ್ಮ ತಾಳ್ಮೆಗೆ ಮೆಚ್ಚಿದೆ!

Arun said...

ಮಿ.ಸುನಾತ,
ನನಗೆ ನಿಮ್ಮ ಬ್ಲೊಗಿನ ಪರಿಚಯವಾದುದು ಇತ್ತೀಚಿಗೆ, ನಾನೊಬ್ಬ ಹೊರನಾಡಿನ ಕನ್ನಡಿಗ. ಮೊದಲು ನನಗೂ ಓದುವ ಹವ್ಯಾಸ ಬಹಳ ಇತ್ತು, ಆದರೆ ಆಗ್ತಾ ಇರಲಿಲ್ಲ. ಈಗ ನಿಮ್ಮ ಬ್ಲಾಗಿಗೆ ಭೆಟ್ಟಿ ಕೊಟ್ಟಾಗಿನಿಂದ ಮತ್ತೆ ಕನ್ನಡ ಸಾಹಿತ್ಯ ಓದುವ ಆಸೆ ಬೆಳಿತಾ ಇದೆ !!
ತುಂಬಾ ಧನ್ಯವಾದಗಲು
ಅರುಣ ದೇಶಪಾಂಡೆ,ಚಿಂಚವಾಡ, ಪುಣೆ

sunaath said...

ಬರ್ರಿ ಶೆಟ್ಟರ,
ಧಾರವಾಡಕ್ಕ ಒಮ್ಮೆ ಬಂದು fresh ಆಗರಿ.
ಶಾಲ್ಮಲಾ ತೀರ, ಕರ್ನಾಟಕ ಯುನಿವರ್ಸಿಟಿ, ನೀಲಿ ಛತ್ರಿ ಇವನ್ನೆಲ್ಲಾ ಮತ್ತೊಮ್ಮೆ enjoy ಮಾಡೀರಂತ.

sunaath said...

ಧನ್ಯವಾದಗಳು, ಹರೀಶ.
ಸಾಹಿತಿಯ ಗುಟ್ಟು ಕೆಲವೊಮ್ಮೆ ಅವರ ಸಾಹಿತ್ಯದಲ್ಲಿ ರಟ್ಟಾಗಿ ಬಿಡುತ್ತದೆ!

sunaath said...

ಅರುಣ,
ಕನ್ನಡ ಸಾಹಿತ್ಯ ಈಗ ಬಹಳ ವಿಸ್ತಾರ ಆಗೇದ.
ಆದರ, ಮರಾಠಿ ಸಾಹಿತ್ಯದಾಗ ಹಾಸ್ಯಪ್ರಜ್ಞೆ ಕನ್ನಡಕ್ಕಿಂತ ಜಾಸ್ತಿ ಅಂತ ಹೇಳತಾರ.
ನೀವು blog ಚಾಲೂ ಮಾಡಿ, ಮರಾಠಿ ಸಾಹಿತ್ಯದ ಪರಿಚಯ
ಯಾಕ ಮಾಡಿಕೊಡಬಾರ್ದು?

Unknown said...

'ಜಲಪಾತ'ದಲ್ಲಿ ವಾಕರಿಕೆಯಾಗುವಶ್ಟು ಈ 'ಬೇಟ'(ಸೆಕ್ಸ್)ದ ಬಗ್ಗೆ ಬರೆಯಲಾಗಿದೆ. ಓದುವಾಗ ತುಂಬ ಮುಜುಗರವಾಯಿತು. ಅಲ್ಲಿ ಒಳ್ಳೆ ಮಯ್ಕಟ್ಟು ಇಲ್ಲದವರು ಇದಕ್ಕೆ ತಕ್ಕುರಲ್ಲವಂತೆ ಅಂತ ಒಂದು ಪಾತ್ರದ ಮೂಲಕ ಹೇಳಲಾಗಿದೆ. ಇದು ಎಶ್ಟು ಮಾನವೀಯತೆಯಿಲ್ಲದ ನಿಲುವು ಅಲ್ಲವೆ?

ಆದರೆ ಮನುಸ್ಯನ ಪೀಕಲಾಟ, ಒದ್ದಾಟಗಳ ಬಗ್ಗೆ ಬರೆಯುವಲ್ಲಿ ಬಯ್ರಪ್ಪನವರು ನಿಸ್ಸೀಮರು. ಅದಕ್ಕೆ 'ಜಲಪಾತ' ದಲ್ಲಿ ಬರುವ ಹೆರಿಗೆ ಪಾಪೆಗಳು/ಚಿತ್ರಗಳು ಪುರಾವೆಯಂತೆ ನಿಲ್ಲುತ್ತವೆ.

- ಬರತ್
http://ybhava.blogspot.com

sunaath said...

ಭರತ,
ನೀವು ಗುರುತಿಸಿದಂತೆ, ಜಲಪಾತದಲ್ಲಿಯೂ ಸಹ ಇಂತಹ ಪೂರ್ವಾಗ್ರಹಪೀಡಿತ ಘೋಷಣೆಗಳು ಇವೆ. ಇವು ಭೈರಪ್ಪನವರ
compulsive obsession ಇರಬಹುದು.
ಭರತ, ವಿನಯಪೂರ್ವಕವಾಗಿ ನಿಮಗೆ ಒಂದು correction
ಹೇಳಬಯಸುತ್ತೇನೆ.
ಬೇಟ ಅಂದರೆ wooing ಅಂತ ಅರ್ಥ ಇದೆ;sex ಅಂತ ಅಲ್ಲ.

Ittigecement said...

ಸುನಾತ ಸರ್....

ಮೊದಲು ನಾನು ಪ್ರತಿಕ್ರಿಯೆ ಕೊಟ್ಟಾಗ ಅಳುಕು ಇತ್ತು...
ಅಧಿಕಪ್ರಸಂಗಿತನ ಮಾಡುತ್ತಿದ್ದೇನೆಯೆ..? ಎಂದು.
ನಿಮ್ಮ ಪ್ರತಿಕ್ರಿಯೆ ಓದಿದ ಮೇಲೆ..ನಿರಾಳವಾಯಿತು..
ನಾನು ಹೆಚ್ಚಿಗೆ ಓದಿಲ್ಲ..
ಹಾಗಾಗಿ ಅಳುಕು..
ಅಗಲೇ ವಂದನೆ ಹೇಳಬೇಕೆಂದಿದ್ದೆ..
ಯಾರದರೂ ನನ್ನ ಥರಹ ಅಭಿಪ್ರಾಯ ಕೊಡುತ್ತಾರೋ ಎಂದು ಕಾದು ಕುಳಿತೆ...
ನನಗೆ ನಿಜಕ್ಕೂ ನಿರಾಸೆ ಆಯಿತು..
ಇದು ಒಳ್ಳೆಯ ಚರ್ಚೆಗೆ ಗ್ರಾಸವಾದ ವಿಷಯ..

ನಿಮ್ಮಷ್ಟು ಯಾರೂ ಅಭ್ಯಾಸ ಮಾಡಿಲ್ಲ..
ಎಲ್ಲ ನನ್ನಂಥವರೆ...
ಮಾಡಿದವರೂ ನಿಮ್ಮ ಅಭಿಪ್ರಾಯ ಒಪ್ಪುತ್ತಾರೆ ಅಂದುಕೊಂಡು ಬಿಡೋಣವೇ..?

ಮನುಷ್ಯನ ಬಲಹೀನತೆ ಅವನ ಕ್ರತಿಯಲ್ಲಿ ನುಸುಳಿ ಬಿಡುತ್ತದೆಯೇನೊ...
ನಡೆ..ನುಡಿಯಲ್ಲೋ..ಓದು..ಬರವಣಿಗೆಯಲ್ಲೋ..?
ನಿರ್ಣಯ ಕೊಡುವ ಸ್ಥಾನ..ಸ್ಥಿತಿಯಲ್ಲಿ ನಾನಿಲ್ಲ...

ನಿಮ್ಮ ಬರಹ ನನ್ನ ತಲೆಯಂತೂ ಕೆಡಿಸಿದೆ...
ಧನಾತ್ಮಕವಾಗಿ...

ನಿಮ್ಮ ಅಧ್ಯಯನಶೀಲತೆಗೆ..
ಪರೀಶ್ರಮಕ್ಕೆ...
ಟಿಕೆಯನ್ನು ಧನಾತ್ಮಕವಾಗಿ ತೆಗೆದು ಕೊಳ್ಳುವ ರೀತಿಗೆ
ಸರ್...

ನನ್ನದೊಂದು...
ಸಲಾಮ್...
ವಂದನೆಗಳು...

sunaath said...

ಪ್ರಕಾಶ,
ಅಳುಕು ಯಾಕೆ?
ಭೈರಪ್ಪನವರ ಕಾದಂಬರಿಗಳಲ್ಲಿ ಅನೇಕ positive ಹಾಗೂ negative ಗುಣಗಳಿವೆ.
ಹೀಗಾಗಿ ಅವರ ಸಾಹಿತ್ಯವು ಉತ್ತಮ ಚರ್ಚೆಗೆ ಉತ್ತಮ ಗ್ರಾಸವಾಗಬಲ್ಲುದು. ನಾನು ಇಲ್ಲಿ ಬರೆದ ಅಂಶವನ್ನು ವಿರೋಧಿಸಿ, ಹೆಚ್ಚಿಗೆ ಟಿಪ್ಪಣಿಗಳು ಬರದೆ ಇರಲು ಕಾರಣವೆಂದರೆ, ನನ್ನ ಲೇಖನವು ತೀರ limited ಅಂಶವನ್ನು ಎತ್ತಿಕೊಂಡಿದೆ. ನಿಮ್ಮ ಟಿಪ್ಪಣಿಗಳನ್ನು ನಿಸ್ಸಂಕೋಚವಾಗಿ ನೀಡಿರಿ.
ನಿಮ್ಮ blogನಲ್ಲಿ ಎಷ್ಟು ವಿನೋದಮಯ ಲೇಖನ ಬರೆಯುವಂತಹ ನಿಮಗೆ ನಾನು ಹೆಚ್ಚಿಗೆ ಹೇಳುವದೇನಿದೆ?

Unknown said...

ಸುನಾತರೆ,

ಎಮನೊ ಮತ್ತು ಬರೊ ಅವರ ಒರೆಗಂಟಲ್ಲಿ 'ಬೇಟ'ಗೆ ಈ ಕೆಳ್ಕಂಡ ತಿರುಳು(sexual passion) ಕೊಡಲಾಗಿದೆ.
ಈ ತಿರುಳೇ ಹಲಹಳೆಗನ್ನಡಗಬ್ಬಗಳಲ್ಲಿ ಕಾಣಲು ಸಿಗುತ್ತವೆ.
http://dsal.uchicago.edu/cgi-bin/philologic/search3advanced?dbname=burrow&query=beta&matchtype=exact&display=utf8

bēṭa, bēṇṭa longings, sexual passion, amorous pastime

ವಿನಾಯಕ ಕೆ.ಎಸ್ said...

sunaatare,
nanage vimrsheya paribhashe artvaagadu. vimarsheyannu oppuvavanu alla. aadare bairappa ee shatamaana kanda adbuta lekhakaru. ella vicharavannu, ella vargada jana oduva haage bareyuttaare. enanteera?

sunaath said...

ಭರತರೆ,
’ಬೇಟ’ಈ ಪದವು ’ಬೇಡು’ ಎನ್ನುವ ಧಾತುವಿನ ನಾಮಪದ.
ಗಂಡು ಹೆಣ್ಣಿಗೆ ಬೇಡುವದಾದರೂ ಏನು?
ಅಂದರೆ ಬೇಡು(>ಬೇಟ)ಇದು ಕೂಡು(>ಕೂಟ) ಎಂಬುದಕ್ಕಿಂತ ಮೊದಲಿನ ಸ್ಥಿತಿ.
ಆದುದರಿಂದ ಬಿ.ಎಮ್.ಶ್ರೀಕಂಠಯ್ಯನವರು ಮೊದಲ ಬಾರಿಗೆ ’ಬೇಟ’ವನ್ನು ಹೊಸಗನ್ನಡದ ತಮ್ಮ ಪದ್ಯದಲ್ಲಿ ಬಳಸಿದರು, wooing ಎನ್ನುವ ಅರ್ಥದಲ್ಲಿ.

sunaath said...

ವಿನಾಯಕರೆ,
ವಿಮರ್ಶೆ ಅನ್ನುವದು ಕಾಲಕಾಲಕ್ಕೆ ಬದಲಾಗುತ್ತಲೇ ಹೊರಟಿದೆ.
ವಿಮರ್ಶಕರು ತಾವು ಮೆಚ್ಚಿದ ಲೇಖಕನನ್ನು ಹೊಗಳಲು ಅಥವಾ ಬೇಡವಾದ ಲೇಖಕನನ್ನು ತೆಗಳಲು ವಿಮರ್ಶೆಯನ್ನು ಬೇಕಾಬಿಟ್ಟಿ ಬಳಸುತ್ತಲೇ ಇದ್ದಾರೆ.
ಭೈರಪ್ಪನವರನ್ನು ವಿಮರ್ಶಿಸಲು ನಾನು ಹೋಗಲಾರೆ.ಆದರೆ ಅವರ ಸಾಹಿತ್ಯದ ಕೆಲವು ಲಕ್ಷಣಗಳನ್ನು ತೋರಿಸಲು ಪ್ರಯತ್ನಪಡಬಹುದಷ್ಟೆ.
ಭೈರಪ್ಪನವರ ಕಾದಂಬರಿಗಳಲ್ಲಿ ಸೂಕ್ಷ್ಮತೆ ಹಾಗು ಕುಶಾಗ್ರ ಬುದ್ಧಿ ಇದೆ. ಇದನ್ನು ತಿಳಿಯಬೇಕಾದರೆ ಭೈರಪ್ಪನವರು ಬರೆದ ’ಪರ್ವ’ ಕಾದಂಬರಿಯನ್ನು ಮಲೆಯಾಳದ ಹೆಸರಾಂತ ಲೇಖಕ ವಾಸುದೇವ ನಾಯರ ಬರೆದ ’ಭೀಮಾಯಣ’ಕ್ಕೆ ಹೋಲಿಸಿ ನೋಡಬಹುದು. ಆಗ ಭೈರಪ್ಪನವರ ಹೆಚ್ಚುಗಾರಿಕೆಯ ಅರಿವಾಗುತ್ತದೆ.
ಹಾಗೆಂದು ಭೈರಪ್ಪನವರ ಕಾದಂಬರಿಗಳೆಲ್ಲ ಸರ್ವಶ್ರೇಷ್ಠ ಎಂದಲ್ಲ. ಅವುಗಳಲ್ಲಿ ಕೆಲವು ಅವಗುಣಗಳೂ ಇವೆ.

Anonymous said...

ಸಂದರ್ಭ: ವಿನಾಯಕರ ಅಭಿಪ್ರಾಯಕ್ಕೆ ನಿಮ್ಮ ಉತ್ತರ:
ದೋಷವಿಲ್ಲದ ವಸ್ತು ಈ ವಿಶ್ವದಲ್ಲಿ ಯಾವದು ? ಭೈರಪ್ಪನವರ ಕೃತಿಗಳು ಸಂಪೂರ್ಣ ದೋಷಮುಕ್ತವಿರಬೇಕೆಂದು ಏಕೆ ಬಯಸುತ್ತೀರಿ ? ನೀವು ಈ ಮೊದಲು ಹೊಗಳಿದ ಬೇಂದ್ರೆ ಮತ್ತು ಶರೀಫರ ಕೃತಿಗಳು ದೋಷಮುಕ್ತವೆ ? ನನಗೆ ತಿಳಿಯುವಂತೆ, ಭೈರಪ್ಪನವರ ಕಾದಂಬರಿಗಳು ಶ್ರೇಷ್ಠ ಮಟ್ಟದ ಸಾಹಿತ್ಯ ಕೃತಿಗಳು. ನನಗೆ ಗೊತ್ತಿರುವ 3-4 ಭಾಷೆಗಳ ಉತ್ತಮ ಕೃತಿಗಳನ್ನು ಹೋಲಿಸಿದಲ್ಲಿ, ಭೈರಪ್ಪನವರು ಉತ್ತಮ ಬರಹಗಾರರೆಂದೇ ನನ್ನ ಅಭಿಪ್ರಾಯ. ನೀವು ಆರೋಪಿಸಿದ ಪುರುಷ ಶ್ರೇಷ್ಠತೆಯ ದಂತಕಥೆ ಭೈರಪ್ಪನವರ ಕಾದಂಬರಿಗಳಲ್ಲಿ ಇಲ್ಲವೇ ಇಲ್ಲ ! ನನಗನಿಸುವಂತೆ, ಸಾರ್ಥದ ಕೇಂದ್ರಬಿಂದು ನಿಮಗರ್ಥವಾಗಿಲ್ಲ ! ನನ್ನದೋಂದು ಸಣ್ಣ ಸಲಹೆ. ಭೈರಪ್ಪನವರ ಕಾದಂಬರಿಯ ಪಾತ್ರಗಳನ್ನು ಅಥವಾ ಘಟನೆಗಳನ್ನು ಭಾಗಶಃ ವಿಮರ್ಶಿಸದೆ, ಕಥೆಯ ಹಂದರ, ಪರಿಸರ, ಪಾತ್ರಗಳು, ಕಾಲ ಇವುಗಳನ್ನು ಸಮಗ್ರವಾಗಿ ಚಿಂತಿಸಿ ವಿಮರ್ಶಿಸಿದರೆ, ಭೈರಪ್ಪನವರಿಗೆ ನ್ಯಾಯ ಮಾಡಿದಂತಾಗುವದು. ಇದಲ್ಲದೇ, ಅವರ ಕೆಲವೇ ಕಾದಂಬರಿಗಳನ್ನು ನೀವು ಉಲ್ಲೇಖಿಸಿದ್ದೀರಿ. ಇದರ ಬದಲು, ಅವರ ಎಲ್ಲ ಕಾದಂಬರಿಗಳನ್ನು ಮತ್ತು ಅವರ ಇತರ ಗ್ರಂಥಗಳಾದ ಸತ್ಯ ಮತ್ತು ಸೌಂದರ್ಯ, ಭಿತ್ತಿಗಳನ್ನೂ ಓಳಗೋಂಡು ಓಂದು ಸಮಗ್ರ ವಿಮರ್ಶೆ ಬರೆಯಿರಿ.

ನಿಮ್ಮ ಮುಂದಿನ ಲೇಖನವನ್ನು ಎದುರು ನೊಡುತ್ತದ್ದೇನೆ.

Anonymous said...

ಮೇಲೆ ಬರೆದ ಕಿರು ಕಾಗದದಲ್ಲಿ ನುಸುಳಿರುವ ಬರಹದ ದೋಷಗಳಿಗೆ ಕ್ಷಮೆ ಇರಲಿ. ದೋಷಗಳು ಜಾಸ್ತಿಯೇ ಆಗಿವೆ.

Unknown said...

ಸುನಾಥರೆ,
ಭೈರಪ್ಪನವರ ಕಾದಂಬರಿಗಳ ಬಗೆಗಿನ ನಿಮ್ಮ ವಿಮರ್ಶೆ ಏನೇ ಇರಲಿ, ’ಆವರಣ’ ಕಾದಂಬರಿಯಲ್ಲಿ ಕಂಡು ಬರುವ ಅವರ
ಐತಿಹಾಸಿಕ ಸಂಶೋಧನಾ ಸಾಮರ್ಥ್ಯವನ್ನು ಯಾರೇ ಆದರೂ ಮೆಚ್ಚತಕ್ಕದ್ದು. ಅವರ ಸತ್ಯನಿಷ್ಠೆಗೆ ಹಾಗೂ ನೇರನುಡಿಗೆ ಓದುಗರು ಮಾರು ಹೋಗುವರು.
ಅವರ ಅನೇಕ ಕಾದಂಬರಿಗಳನ್ನು ವಿಶ್ಲೇಷಿಸಿ, ನೀವು ತೋರಿಸಿದ ಸಾಮಾನ್ಯ ಲಕ್ಷಣವು ಮನವರಿಕೆಯಾಗುತ್ತದೆ.

sunaath said...

ಕಟ್ಟಿಯವರೆ,
ಬೇಂದ್ರೆ ಹಾಗೂ ಶರೀಫರೂ ಸಹ ಕೆಲವೊಂದು ಸಾಮಾನ್ಯ ಗೀತೆಗಳನ್ನು ರಚಿಸಿದ್ದಾರೆ. ಅಂದ ಮೇಲೆ ಭೈರಪ್ಪನವರಿಂದ perfectionಅನ್ನು expect ಮಾಡಲು ಹೇಗೆ ಸಾಧ್ಯ?
ಭೈರಪ್ಪನವರು ಒಬ್ಬ ಉತ್ತಮ ಲೇಖಕರು ಎನ್ನುವದು ನಿಜ. ಆದರೆ ಅವರಲ್ಲಿಯ ಒಂದು ಅವಗುಣದಿಂದಾಗಿ, ಅವರ ಅನೇಕ ಕಾದಂಬರಿಗಳು ಸಾಮಾನ್ಯ ದರ್ಜೆಗೆ ಇಳಿದು ಬಿಡುತ್ತವೆ. ಆ ಅವಗುಣವನ್ನು ಮತ್ತೊಂದು ಲೇಖನದಲ್ಲಿ ಚರ್ಚಿಸುವೆ.

sunaath said...

ವನಮಾಲಾ,
ಭೈರಪ್ಪನವರ ಐತಿಹಾಸಿಕ ಸಂಶೋಧನಾ ಸಾಮರ್ಥ್ಯವನ್ನು ಅವರ ’ಆವರಣ’ ಹಾಗೂ ’ಸಾರ್ಥ’ ಕಾದಂಬರಿಗಳಲ್ಲಿ ನೋಡಬಹುದು. ಅಲ್ಲದೆ, ಪೌರಾಣಿಕ ಕಥನಗಳನ್ನು ಅವರು ಎಷ್ಟು ಸತ್ಯನಿಷ್ಠವಾಗಿ ಬಳಸುವರು ಎನ್ನುವದಕ್ಕೆ ’ಪರ್ವ’ವೇ ಸಾಕ್ಷಿ.
ಆದರೆ, ಉತ್ತಮ ಕಾದಂಬರಿಯ ರಚನೆಗೆ ಇವಿಷ್ಟೇ ಸಾಲವು.
ಭೈರಪ್ಪನವರ ಒಂದು prime ಅವಗುಣವು ಹೇಗೆ ಅವರ ಸಾಹಿತ್ಯವನ್ನು ಮೇಲ್ಮಟ್ಟಕ್ಕೇರಲು ಅಡ್ಡಿಗೊಳಿಸುತ್ತದೆ ಎನ್ನುವದನ್ನು ಇನ್ನೊಂದು ಲೇಖನದಲ್ಲಿ ಬರೆಯುವೆ.

Anonymous said...

ನಿಮ್ಮ ಮುಂದಿನ ಲೇಖನವು ಭೈರಪ್ಪನವರ ಕೆಲವು ಕಾದಂಬರಿಗಳ, ಕೆಲವು ಪಾತ್ರ ಅಥವಾ ಕೆಲವು ಘಟನೆಗಳ ವಿಮರ್ಶೆಯಾಗಿರದೆ, ಸಮಗ್ರವಾಗಿದ್ದರೆ, ಅರ್ಥಪೂರ್ಣವಾಗುವದು. 'ಮಲ್ಲಿನಾಥ' ಎಂಬುವವರು ನೂರಾರು ವರ್ಷಗಳ ಹಿಂದೆ ಕಾಳಿದಾಸನ ಕಾವ್ಯ ಮತ್ತು ನಾಟಕಗಳ ವಿಮರ್ಶೆಯನ್ನು ಸಂಸ್ಕೃತದಲ್ಲಿ ಮಾಡಿರುವರು. ಅದರಂತೆ ಮಹಾಮಹೋಪಾಧ್ಯಾಯ ಪಿ. ವಿ. ಕಾಣೆಯವರು ಕಾಳಿದಾಸ ಮತ್ತು ಮಲ್ಲಿನಾಥರ ವಿಮರ್ಶೆಯನ್ನು ಇಂಗ್ಲಿಷದಲ್ಲಿ ಮಾಡಿರುವರು. ವಿಮರ್ಶೆಗಳು ಅತ್ಯಂತ ವಸ್ತುನಿಷ್ಠ ಹಾಗೂ ಸುಂದರವಾಗಿವೆ. ನಿವೂ ಒಮ್ಮೆ ಓದಬೇಕು !

Anonymous said...

sunaatare,
nimma maataannu oppiddene.
kodsara

sunaath said...

ಕೊಡಸರರೆ,
ಧನ್ಯವಾದಗಳು.

Keshav.Kulkarni said...

ಸುನಾಥ,
ನಾನು ಭೈರಪ್ಪನವರ ಎಲ್ಲ ಕಾದಂಬರಿಗಳನ್ನೂ ಓದಿಲ್ಲ. ನಿಮ್ಮ ಈ ಅತಿ-ಗಂಡಸುತನ-ಭ್ರಾಂತಿ(ಅಗಭ್ರಾ)ಯ ಕಲ್ಪನೆಯೇ ನನಗೆ ಹೊಸತು. ನಾನಂತೂ ಯಾವ ಕನ್ನಡ ವಿಮರ್ಶಕರೂ ಈ ಪದ ಉಪಯೋಗಿಸಿದ್ದನ್ನು ಓದಿಲ್ಲ, ಇಂಗ್ಲೀಷಿನಲ್ಲೂ ನಾನು ಓದಿಲ್ಲ.

ಬಹುಷಃ ಯಾವ ಪುರುಷ ಕಾದಂಬರಿಕಾರನೂ ಈ ಅಗಭ್ರಾ ಸಿಂಡ್ರೋಮಿನಿಂದ ಹೊರತಲ್ಲ ಎನಿಸುತ್ತದೆ. ಗೇಬ್ರಿಯಲ್ ಮಾರ್ಕ್ವೇಜನ "ಕಾಲರಾ ಕಾಲದ ಪ್ರೇಮ"ದ ನಾಯಕನೂ, ಖುಷ್‍ವಂತ್‍ಸಿಂಗನ "ಹೆಂಗಸರ ಸಂಗ"ದ ನಾಯಕನೂ, ನೀವು ವಿವರಿಸಿದ ಭೈರಪ್ಪನವರ ಪಾತ್ರಗಳೂ ಈ ಅಗಭ್ರಾ ಸಿಂಡ್ರೋಮಿನಿಂದ ಬಳಲುವಂಥವುಗಳೇ!

ಇದೇ ಮಾಪನದಿಂದ ಕನ್ನಡದ ಇತರ ಪುರುಷ ಕಾದಂಬರಿಕಾರರನ್ನೂ ವಿಶ್ಲೇಸಿಸಿದರೆ ಹೆಚ್ಚಿನ ವ್ಯತ್ಯಾಸವೇನೂ ಸಿಗದೇನೋ ಎಂದು ನನ್ನ ಊಹೆ!

- ಕೇಶವ (www.kannada-nudi.blogspot.com)

sunaath said...

ಕೇಶವ,
ಈ ’ಅಗಭ್ರಾ’ ಎಲ್ಲ ಗಂಡಸರಲ್ಲಿಯೂ ತಕ್ಕ ಮಟ್ಟಿಗೆ ಇದ್ದೇ ಇರುತ್ತದೆ. ವಿವಿಧ ಲೇಖಕರಲ್ಲಿ ಇದು ವಿವಿಧ ಶೈಲಿಗಳಲ್ಲಿ ಹಾಗೂ ವಿವಿಧ ಪ್ರಮಾಣಗಳಲ್ಲಿ ವ್ಯಕ್ತವಾಗುತ್ತದೆ.
ಖುಶವಂತ ಸಿಂಗ ಬಗೆಗೆ ನೀವು ಹೇಳುವದು ನೂರಕ್ಕೆ ನೂರು ಸತ್ಯ.
ಖುಶವಂತ ಸಿಂಗ ಹಾಗೂ ನಮ್ಮವರೇ ಆದ ಇಬ್ಬರು ಬುದ್ಧಿಜೀವಿ ಜ್ಞಾನಪೀಠಸ್ಥ ಸಾಹಿತಿಗಳಲ್ಲೂ ಸಹ ಸಾಕಷ್ಟು sexual obsession ಕಂಡುಬರುತ್ತದೆ.
ಖುಶವಂತ ಸಿಂಗರು ತಾವು ಆಧುನಿಕ ಕಾಲದವರೆಂದು ತೋರಿಸಿಕೊಳ್ಳುವ ಏಕಮೇವ ಉದ್ದೇಶದಿಂದ ಸತ್ವವಿಲ್ಲದ ಕೀಳು jokesಗಳನ್ನು ಬರೆಯುತ್ತ ಹೋದರು.
ಇನ್ನು ನಮ್ಮವರೇ ಆದ ಬುದ್ಧಿಜೀವಿ ಜ್ಞಾನಪೀಠಸ್ಥ ಮೂರ್ತಿಗಳು ಸಾಂಪ್ರದಾಯಕ ಮನೋವೃತ್ತಿಯ ಮೇಲೆ ಕಾಮದ ವಿಜಯವೇ ಆಧುನಿಕ ಮನೋವೃತ್ತಿಯ ಪ್ರಮಾಣವೆಂದು ಬಗೆದು, ಅದರಲ್ಲಿಯೇ ಮುಳುಗೇಳಲು ಪ್ರಾರಂಭಿಸಿದರು. ಇವರ ಅನುಯಾಯಿಯಾದ ಮತ್ತೊಬ್ಬ ಜ್ಞಾನಪೀಠಿ ಬುದ್ಧಿಜೀವಿಗಳಂತೂ ತಮ್ಮ ಕೆಲವೊಂದು ಬರಹದಲ್ಲಿ ಅಶ್ಲೀಲ ಶಬ್ದಗಳನ್ನು ಮುಕ್ತವಾಗಿ ಬಳಸುತ್ತಿದ್ದಾರೆ.

ಒಟ್ಟಿನಲ್ಲಿ ’ಅಗಭ್ರಾ’ ಯಾವ ಲೇಖಕನನ್ನೂ ಬಿಟ್ಟಿಲ್ಲ, ಅಲ್ಲವೆ! ಯಾಕೆಂದರೆ, ಇದು ನಮ್ಮ ಸಮಾಜದ ಭಾಗವೇ ಆಗಿದೆ.

Ittigecement said...

ಸುನಾಥ...ಸರ್...

ಮತ್ತೊಮ್ಮೆ ಬರುತ್ತಿರುವೆ ಅನ್ಯಥಾ..ಭಾವಿಸಬೇಡಿ...

ಕಾದಂಬರಿ, ಒಬ್ಬಲೇಖಕನ ಕಲ್ಪನಾ ಕೂಸು...
ಅದಕ್ಕೆ ಬೇಕಾದ ಸನ್ನಿವೇಷ, ಸಂದರ್ಭಗಳಿಗುಣವಾಗಿ "ಅದರ" ವರ್ಣನೆ ಇರಬಹುದು..
ಯಾವುದೇ ಜ್ನಾನ ಪೀಠ ಪ್ರಶಸ್ತಿಯವರಿರಲಿ.., ಶ್ರೇಷ್ಠ ಲೇಖಕರಿರಲಿ..
ಸಹಜ ದೌರ್ಬಲ್ಯ ಇರಬಾರದೆನ್ನುವದಿಲ್ಲವಲ್ಲ...
ಅವರೂ ಮನುಷ್ಯರು..
ಈ ನೆಲೆಗಟ್ಟಿನಲ್ಲಿ ನೋಡಿದಾಗ..
ಭೈರಪ್ಪನವರ ಒಂದೆರಡು ಕಾದಂಬರಿಗಳಲ್ಲಿ "ಅತೀಯಾದ" ವರ್ಣನೆ ಇದೆ..
ಇದು ತಾವು ಸಮರ್ಥವಾಗಿ ಸಾದರ ಪಡಿಸಿದ್ದೀರಿ..

ನನಗೆ ಭೈರಪ್ಪನವರು ತುಂಬಾ ಇಷ್ಟ..ಅವರ ಕಾದಂಬರಿಗಳ ಮೂಲಕ..
ನನ್ನ ಜೀವನದಲ್ಲಿ,ನನ್ನ ವಿಚಾರ ಧಾರೆಯಲ್ಲಿ, ನನ್ನ ವ್ಯಕ್ತಿತ್ವದಲ್ಲಿ ಅವರ ಹಾಗೂ ಕಾರಂತಜ್ಜನ ಪ್ರಭಾವ ಬಹಳ...

ಹಾಗಂತ ಸಂಕುಚಿತ ಮನೋಭವದಿಂದ ಸಮರ್ಥನೆಮಾಡಲಾರೆ...

ನಿಮ್ಮ ಲೇಖನ ನನ್ನ ತಲೆಯಂತೂ ಕೆಡಿಸಿದ್ದು ನಿಜ..
ಅದು ಧನಾತ್ಮಕವಾಗಿ..

ಬಾಲ್ಯದಿಂದ ಪ್ರಭಾವ ಬೀರಿದ ಕಾದಂಬರಿಕಾರ ಅವರು..
ಆ ಮೆಧಾವಿಯವರ...
ಕಾದಂಬರಿಗಳ ಇನ್ನೂ ವಿಶ್ಲೇಷಣೆ ಮಾಡಿ...

ಇದು ನನ್ನ ಸವಿನಯ ವಿನಂತಿ...

Anonymous said...

ಸಾರ್,
ಒಟ್ಟಿನಲ್ಲಿ ಇಂಥದೊಂದು ಲೇಖನ ಬರೆದ ನೀವು ಕೊಂಚ ಮಟ್ಟಿಗಾದರೂ
ಸಂಚಲನ ಮಾಡಿದ್ದಂತೂ ನಿಜ.
ನನಗೆ ತೋಚಿದಂತೆ ಒಂದು ಮಾತು ಹೇಳಬಯಸುತ್ತೇನೆ.
ಇಷ್ಟಕ್ಕೂ ಯಾವುದೇ ಕಥೆ/ಕಾದಂಬರಿಗಳಲ್ಲಿ ಕಾಮದ ವಿಜೃಂಭಣೆಗೆ ಆಯಾ
ಕಥೆಯಲ್ಲಿನ ವಸ್ತು ಮತ್ತು ಸದರಿ ಕಥೆ ರೂಪಗೊಂಡ ಕಾಲಘಟ್ಟಗಳೂ
ಅದಕ್ಕೆ ಸಾಥ್ ಕೊಡುತ್ತವೆ.
ಕಾಮದ ವಿವರಣೆ ಇಷ್ಟಿರಬೇಕಾಗಿತ್ತಾ ಅಥವಾ ಇಷ್ಟೇ
ಇರಬೇಕಾಗಿತ್ತಾ?ಅನ್ನೋದು ಉತ್ತರವಿಲ್ಲದ ಪ್ರಶ್ನೆಯೇನೋ..
ಉದಾಹರಣೆಗೆ ರಾಮಾಯಣ ಮತ್ತು ಮಹಾಭಾರತವನ್ನೇ ನೋಡಿ:
ಇವೆರಡೂ ನಮ್ಮ ಪಾಲಿಗೆ ಇವತ್ತಿಗೂ ಸರ್ವೋತ್ತಮ ಕಥೆಗಳು.
ಒಂದರಲ್ಲಿ ಆದರ್ಶ ತುಂಬಿ ತುಳುಕಾಡುತ್ತಿದೆ;ಇನ್ನೊಂದಲ್ಲಿ ಕಾಮ ಹೊತ್ತಿ ಉರಿದಿದೆ..
ರಾಮ ಎಷ್ಟೇ ಅಗೋಚರ ತಪ್ಪುಗಳನ್ನು ಮಾಡಿದ್ದರೂ ಕೂಡ ಆತ ನಮಗೆ ಆದರ್ಶ ಪುರುಷೋತ್ತಮನೇ!
"ರಾಮರಾಜ್ಯ"ದ ವಿಜೃಂಭಿಸುವ ಹುಮ್ಮಸ್ಸಿನಲ್ಲಿ ಕಥೆಗಾರರು ಬೇಕೆಂದೇ ರಾಮನ ಅವಗುಣವನ್ನು
blur ಮಾಡಿದರೆ..?
ಗರ್ಭಿಣಿ ಹೆಂಡತಿಯನ್ನೇ ಕಾಡಿಗೆ ಅಟ್ಟಿದವನನ್ನು ಹ್ಯಾಗೆ role model ಆಗಿ ನೋಡೋಣ?
ಕೇವಲ ತನಗೆ ಸುಗ್ರೀವ ಶರಣಾಗತನಾದ ಅಂದ ಮಾತ್ರಕ್ಕೆ ವಾಲಿಯನ್ನು ಮೋಸದಿಂದ ಕೊಲ್ಲಬಹುದಾ?
ಮಹಾಭಾರತದ ಸ್ವಚ್ಛಂದ ಕಾಮವನ್ನ ಕಲಿಯುಗದ ಕಲ್ಪನೆಗೆ ಅನುಗುಣವಾಗಿ ಹೆಣೆಯಲಾಯಿತೆ?
ಆಯಾ ಕಾಲಘಟ್ಟಗಳಲ್ಲಿನ ಜನತೆಯ ಪ್ರತಿಬಿಂಬಗಳನ್ನೇ ಈ ಎಲ್ಲ ಕಥೆಗಳಲ್ಲಿ ಬಿಂಬಿಸಲಾಯಿತೇನೋ..

-ರಾಘವೇಂದ್ರ ಜೋಶಿ.

Anonymous said...

'ಅಗಂಭ್ರಾ' ಪುರುಷರ ಕಾದಂಬರಿಗಳಲ್ಲಿ ಮಾತ್ರವಲ್ಲ ; ಮಹಿಳೆಯರು ಬರೆದ ಕಾದಂಬರಿಗಳಲ್ಲಿಯೂ ಅತಿಯಾಗಿರದಿದ್ದರೂ, ಸಾಕಷ್ಟಿದೆ. ಅಯಾನ್ ರ್ಯಾಂಡ ಇದಕ್ಕೆ ಉದಾಹರಣೆ. ಅಮೇರಿಕ, ಯುರೋಪ್, ಆಸ್ಟ್ರೇಲಿಯ, ಫ್ರೆಂಚ್ ಮತ್ತು ರಶ್ಯನ್ ಮಹಿಳಾ ಲೇಖಕರ ಕಾದಂಬರಿಗಳಲ್ಲಿ ಯಾವದೇ ಮಡಿವಂತಿಕೆ ಇಲ್ಲದೇ ಲೈಂಗಿಕ ಕ್ರಿಯೆಯನ್ನಯ, ಅದರಲ್ಲಿಯೂ 'ಅಗಂಭ್ರಾ'ವನ್ನು ವರ್ಣಿಸಿರುವರು. ಭೈರಪ್ಪನವರು ಸನ್ನಿವೇಶದ ಉತ್ಕಟಯೆಯನ್ನು ಯಥಾವತ್ತಾಗಿ ವರ್ಣಿಸಿದ್ದರೆ ತಪ್ಪೇನು ? ಇದೇನು ಅವಗುಣವಲ್ಲ ! ಅವಗುಣ ನೋಡುವ ದೃಷ್ಟಿಯಲ್ಲಿದೆಯೇ ಹೊರತು, ಭೈರಪ್ಪನವರ ಲೇಖನಿಯಲ್ಲಿಲ್ಲ.

sunaath said...

rj,ಪ್ರಕಾಶ,anonymus,
ನಿಮ್ಮ ಟಿಪ್ಪಣಿಗಳ ಮೂಲಕ ಒಂದು ಉತ್ತಮವಾದ ಚರ್ಚೆಯನ್ನು
ಹುಟ್ಟುಹಾಕಿರುವಿರಿ;ಧನ್ಯವಾದಗಳು.
ರಾಮಾಯಣದಲ್ಲಿ ರಾಮಚಂದ್ರನ ನಡವಳಿಕೆ ಕೆಲವೊಂದು ಕಡೆಗೆ
ತಪ್ಪು ಅಥವಾ ಅಧಾರ್ಮಿಕ ಎನ್ನಿಸಬಹುದು. ಆದರೆ ಆತ ಪ್ರತಿನಿಧಿಸುತ್ತಿರುವದು ತ್ಯಾಗಧರ್ಮವನ್ನು whereas ರಾವಣ
ಪ್ರತಿನಿಧಿಸುವದು ಭೋಗಧರ್ಮವನ್ನು.
ಭಾರತೀಯ ಧರ್ಮಸಾಸ್ತ್ರಗಳೆಲ್ಲ ತ್ಯಾಗವನ್ನೇ ವೈಭವೀಕರಿಸಿ, ಭೋಗಜೀವನವನ್ನು ತುಚ್ಛೀಕರಿಸುತ್ತವೆ. ಆದುದರಿಂದಲೇ ರಾಮಚಂದ್ರ ಭಾರತೀಯರಿಗೆ Idol.
ಮಹಾಭಾರತದ ಕಾಲದಲ್ಲಿ ಆರ್ಯರ ವಿಜಯಘಟ್ಟ ಮುಗಿದುಹೋಗಿತ್ತು. ಅನಾರ್ಯಕುಲಗಳು ಆರ್ಯಕುಲಗಳೊಡನೆ ಸಮ್ಮಿಲತವಾಗತೊಡಗಿದ್ದವು. ಅನಾರ್ಯ ಶಾಸ್ತ್ರಗಳ ಪ್ರಮುಖ ವಕ್ತಾರನೆಂದರೆ ಕೃಷ್ಣ.
ಹೀಗಾಗಿ ಮಹಾಭಾರತದಲ್ಲಿ ಧರ್ಮಜಿಜ್ಞಾಸೆ ಮುಖ್ಯ ವಿಷಯವಾಗಿದೆ. ಭೀಷ್ಮನು ಶರಪಂಜರದ ಮೇಲೆ ಮಲಗಿಕೊಂಡಾಗಲೂ ಸಹ ಧರ್ಮರಾಜನು ಆತನನ್ನು ಸುಮ್ಮನೆ ಬಿಡದೆ, ರಾಜಧರ್ಮವನ್ನು ಕೇಳಿದ್ದಾನೆ. ’ವಿಷ್ಣುಸಹಸ್ರನಾಮ’ವನ್ನು ಭೀಷ್ಮನು ತನ್ನ ಮರಣಶಯ್ಯೆಯಲ್ಲಿ ಧರ್ಮನಿಗೆ ಹೇಳಿದ್ದಾನೆ.
ಆದುದರಿಂದ,ಅನೇಕ ಆರ್ಯ ಹಾಗೂ ಅನಾರ್ಯಕುಲಗಳ ಸಂಪ್ರದಾಯಗಳು, ವಿವಾಹಪದ್ಧತಿ ಇವೆಲ್ಲ ಮಹಾಭಾರತದಲ್ಲಿ ವರ್ಣಿತವಾಗಿವೆ. ಈ ವರ್ಣನೆಗಳಲ್ಲಿ ’ಆರ್ಯ ಅಗಭ್ರಾ’ ಸೇರಿದೆ.
ಆದರೆ, ಭೈರಪ್ಪನವರ ಕಾದಂಬರಿಗಳಲ್ಲಿ ತತ್ವಜಿಜ್ಞಾಸೆ ಮೇಲ್ನೋಟಕ್ಕೆ ಹಾಗೂ ಕಾಮಜಿಜ್ಞಾಸೆ(ಅಗಭ್ರಾ) ಆಂತರ್ಯದಲ್ಲಿ ಸೇರಿಕೊಂಡಿವೆ.
ಇನ್ನು ಇಂಗ್ಲಿಶ್ ಕಾದಂಬರಿಗಳಲ್ಲಿ ಅಗಭ್ರಾ ಇದೆಯೆಂದು ನಾನೂ ಸಹ ಹೇಳಿದ್ದೇನೆ. ಇದಕ್ಕೆ ಉದಾಹರಣೆಯೆಂದು
ಹಳೆಯ ಇಂಗ್ಲಿಶ್ ಲೇಖಕಿ Daphne du Maurier ಬರೆದ Frenchman's Creek ಅನ್ನು ಉಲ್ಲೇಖಿಸಿದ್ದೇನೆ.

ಸುಪ್ತದೀಪ್ತಿ suptadeepti said...

ಕಾಕಾ, ನಿಮ್ಮ ಪರಿಮಿತ ಕೋನದ ಸಮಗ್ರ ವಿಶ್ಲೇಷಣೆಗೆ ಶರಣು.

ಭೈರಪ್ಪನವರು ನನಗೂ ಇಷ್ಟದ ಲೇಖಕ. ಹಾಗಂತ ಅವರು ಬರೆದದ್ದೆಲ್ಲವೂ ವೇದವಲ್ಲ. ನೀವು ತಿಳಿಸಿದಂತೆ- ಸಾಕ್ಷಿ, ಅಂಚು, ಅನ್ವೇಷಣ, (ಜೊತೆಗೆ ಮಂದ್ರ ಕೂಡಾ) ಹೇಸಿಗೆ ತರಿಸುವಷ್ಟು ಕಾಮಭರಿತವಾಗಿವೆ. ಅವನ್ನೆಲ್ಲ ಓದಿದಾಗ "ಇಷ್ಟೊಂದು explicit and indulging ಆಗಿಲ್ಲದೆಯೂ ಬರೆಯಬಹುದಿತ್ತಲ್ಲ ಈ ಕಥೆಯನ್ನು" ಎಂದು ಅನಿಸಿದ್ದಿದೆ. ಆದರೆ, ಪರ್ವದಲ್ಲೂ ಇಂಥ ಸನ್ನಿವೇಶಗಳು ಸ್ವಲ್ಪ ಮಟ್ಟಿಗೆ ಬಂದಿದ್ದರೂ ಅಲ್ಲಿ ಅದು ಯಾಕೋ ಅತಿ ಅನಿಸುವುದಿಲ್ಲ; ನನಗದು ಅಚ್ಚರಿ ಮೂಡಿಸಿದ್ದೂ ಇದೆ. ಅದೇ ಕಥೆಯನ್ನು ಪುರಾಣವಾಗಿ ಓದುವುದಕ್ಕೂ, ಸಾಮಾಜಿಕ ಚೌಕಟ್ಟಿನಲ್ಲಿ ಓದುವುದಕ್ಕೂ ಅದೇ ವ್ಯತ್ಯಾಸವೇನೋ!

"ಅಂಚು ಓದುತ್ತಿದ್ದಾಗ, ಓದಿ ಮುಗಿಸಿದಾಗ ನಮ್ಮೊಳಗೇ ಒಂಥರಾ suicidal tendency ಆವರಿಸಿಕೊಂಡು ಬಿಡತ್ತೆ" ಅಂತ ನನ್ನದೊಂದು ಸ್ನೇಹಿತೆ ಹೇಳಿದ್ದರು. ನನಗೂ ಸಣ್ಣ ಮಟ್ಟಿನ ಡಿಪ್ರೆಶನ್ ಮೂಡ್ ಹಬ್ಬಿಕೊಂಡಿದ್ದು ನಿಜ. ಆ ಥರದ ಮೂಡ್ ಅಂಚು, ಸಾಕ್ಷಿ, ಅನ್ವೇಷಣ, ತಂತು, ಮಂದ್ರ- ಎಲ್ಲದರ ಓದಿನ ನಂತರವೂ ಅಮರಿಕೊಂಡದ್ದು ಆ ರೀತಿಯ ವಸ್ತುವಿನಿಂದಾಗಿಯೇ ಅನ್ನುವುದು ನನ್ನ ಊಹೆ. ಯಾಕಂದ್ರೆ, ಪರ್ವ, ಆವರಣ, ಭಿತ್ತಿ ಓದಿದಾಗ ಮಂಕುತನ ಬರೋದಿಲ್ಲ. ಒಳ್ಳೆಯ ಸಾಹಿತ್ಯ ಖುಷಿ ಕೊಡಬೇಕೇ ಹೊರತು ಮಂಕುತನವನ್ನಲ್ಲ.

ಆದರೆ... ಭೈರಪ್ಪ ಇಂಥ ಕಥಾಹಂದರ ಹೆಣೆದ ಮಾತ್ರಕ್ಕೆ ಅವರೊಳಗೇ ಅಂಥ ವಿಕೃತತೆ ಇದೆ, ಅಥವಾ ಅವರ ವಿಚಿತ್ರ ಮನಃಸ್ಥಿತಿಯ by products ಇಂಥ ಕಾದಂಬರಿಗಳು ಅನ್ನುವ ವಾದ (ಇದ್ದರೆ) ನಾನು ಒಪ್ಪುವುದಿಲ್ಲ. ಒಬ್ಬ ಒಳ್ಳೆಯ ಲೇಖಕ, ಸಮಾಜದಲ್ಲಿ ಅಲ್ಲಿ-ಇಲ್ಲಿ ತಾನು ಕಂಡ ಕೇಳಿದ ಘಟನೆಗಳನ್ನು, ನಡೆವ/ ನಡೆಯಬಹುದಾದ ಪ್ರಸಂಗಗಳನ್ನು ಸಮರ್ಥವಾಗಿ ತನ್ನ ಕಥಾನಕದಲ್ಲಿ ಹೆಣೆದುಕೊಳ್ಳಬಲ್ಲ. ಅದು ಅತಿಯಾದಾಗ ಮಾತ್ರ ವಾಕರಿಕೆ ತರಿಸುತ್ತದೆ. ಆ ಬಗ್ಗೆ ಭೈರಪ್ಪನವರು ಜಾಗ್ರತೆ ವಹಿಸಿಲ್ಲ; ಅಥವಾ ತಲೆಕೆಡಿಸಿಕೊಂಡಿಲ್ಲ ಅಂತ ಕಾಣುತ್ತೆ.

ಇನ್ನು "ಅಗಂಭ್ರಾ" ಮಾನವ ಸಮಾಜವನ್ನು ಎಂದಿಗೂ ಬಿಡದ ಭ್ರಮೆ. ಅದನ್ನು ನೀವು ಈ ವಿಶ್ಲೇಷಣೆಗೆ ಬಳಸಿಕೊಂಡ ರೀತಿ ಮತ್ತು ಅದರದ್ದೇ ವಿವರಣೆಗಳು ಸಿಂಪ್ಲೀ ಸುಪರ್ಬ್.
ಮತ್ತೆ ಧನ್ಯವಾದಗಳು.

sunaath said...

ಜ್ಯೋತಿ,
ಲೇಖಕನ ಮನೋವೈಜ್ಞಾನಿಕ ವಿಶ್ಲೇಷಣೆ ನಮಗೇಕೆ ಎನ್ನುವದು ಸರಿಯಾದ ಮಾತು. ಆ ಸಾಹಿತ್ಯದಿಂದ ಮನಸ್ಸು ತಿಳಿಯಾದರೆ ಸಾಕು.
ಭೈರಪ್ಪನವರ ಕೆಲವು ಕಾದಂಬರಿಗಳು ಹೊಸ ಬೆಳಕನ್ನು ತೋರಿಸುತ್ತವೆ. ಮತ್ತೆ ಕೆಲವು ಕಾದಂಬರಿಗಳು ನಮ್ಮನ್ನು depressionಗೆ ನೂಕುತ್ತವೆ.

ಪುರಾಣಕಾಲದಲ್ಲಿ, ಮಾತೃಪ್ರಧಾನ ಕುಟುಂಬಗಳಿದ್ದ ಕಾಲದಲ್ಲಿ ಬಹುಶಃ 'ಅಗಂಭ್ರಾ'ಇದ್ದಿರಲಿಕ್ಕಿಲ್ಲ!
ಕಾಲ ಬದಲಾದಂತೆ ಅದು ಹೋದರೂ ಹೋದೀತು!

Parisarapremi said...

ಅಬ್ಬಾಹ್, ನಾನು ಯಾವ ಕೃತಿಯನ್ನೂ ವಿಮರ್ಶಾತ್ಮಕವಾಗಿ ಓದೇ ಇಲ್ಲ ನೋಡಿ, ನನಗೆ "ಮುಜುಗರ" ಅಥವಾ ಇನ್ಯಾವುದೇ ಅನ್‍ಇಂಟರೆಸ್ಟಿಂಗ್ ಪ್ರಸಂಗಗಳು ಬಂದರೆ ಸುಮ್ಮನೆ ಒಂದೆರಡು ಪ್ಯಾರಾಗಳನ್ನು ಹಾರಿಸಿಬಿಡುವ ದುಶ್ಚಟವನ್ನು ರೂಢಿಸಿಕೊಂಡುಬಿಟ್ಟಿದ್ದೇನೆ...

ಒಳ್ಳೇ ವಿಮರ್ಶೆ! :-)

sunaath said...

ಅರುಣ,
ನಿಮ್ಮದು ನಿಜವಾಗಿಯೂ ಉತ್ತಮ ಉಪಾಯ!

hamsanandi said...

ನಾನು ಸಾಕ್ಷಿ ಓದಿಲ್ಲ. ಅನ್ವೇಷಣ ಓದಿದ ನೆನಪಿಲ್ಲ. ಆದ್ರೆ ಮಂದ್ರ ಮತ್ತೆ ಅಂಚು ಅಂತೂ ಹೋಪ್ಲೆಸ್ ಅನ್ನಿಸಿತು. ’ಅಂಚು’ವನ್ನು ಓದಿದ ಮೇಲೆ ಮನಸ್ಸಿಗಾಗುವ ಡಿಪ್ರೆಸಿವ್ ಮೂಡ್ ಅಂತೂ ನಿಜವೇ. ನನ್ನ ಕೇಳಿದರೆ ಕಾದಂಬರಿ ಹೇಗಿರಬಾರದು ಅನ್ನೋದಕ್ಕೊಂದು ಉದಾಹರಣೆ ಅದು.

sunaath said...

ಹೌದು, ಹಂಸಾನಂದಿ,
ಮಂದ್ರ ಹೋಪ್ಲೆಸ್ ಕಾದಂಬರಿ; ಅಂಚು depressive.

Anonymous said...

ನಾನು ಭೈರಪ್ಪನವರ ಬಹುಪಾಲು ಕಾದಂಬರಿಗಳನ್ನೂ, ಪ್ರಬಂಧಗಳನ್ನೂ ಓದಿದ್ದೇನೆ.

ನಿಮ್ಮ ಲೇಖನ ಓದಿ ನಗು ಬಂತು. ನಿಮ್ಮ ವಿಶ್ಲೇಷಣೆ ತುಂಬಾ ತಮಾಷೆಯಾಗಿದೆ. ಸಾರ್ವತ್ರಿಕ - ಭಾರತೀಯ ಎನ್ನುವ ನಿಮ್ಮ ಎರಡು "category" ಗಳು ಹಾಸ್ಯಾಸ್ಪದವಾಗಿದೆ. ಭಾರತೀಯ - ಭಾರತೇತರ ಎಂದು ಹೇಳಿ ಅಥವಾ ಸಾರ್ವತ್ರಿಕವಾಗಿ ಹೇಳಿ ಭಾರತೀಯರ ವಿಶೇಷತೆಯನ್ನು ತಿಳಿಸಿ. ನಿಮ್ಮ "super- male- fantasy" ಪ್ರಮೇಯಕ್ಕೆ ಏನಾದರೂ ವೈಜ್ಞಾನಿಕ ಆಧಾರವಿದೆಯೆ? ಇದು ಯಾವ ಅಂತರಾಷ್ಟೀಯ ಜರ್ನಲ್‍ನಲ್ಲಿ ಪ್ರಕಟವಾಗಿದೆ? ಇಲ್ಲವಾದರೆ ನೀವೇಕೆ ಪ್ರಕಟಿಸಬಾರದು?

"ತಾನು ಹೆಣ್ಣಿಗೆ ಸೋಲದ ನಿಷ್ಠಾವಂತ ಬ್ರಹ್ಮಚಾರಿಯಾಗಿರಬೇಕು." - ಹೀಗೆ ನಮ್ಮ ಧರ್ಮದಲ್ಲಿ ಎಲ್ಲಿ ಹೇಳಿದೆ? ನಮ್ಮ ಧರ್ಮವು ಗೃಹಸ್ಥಾಶ್ರಮಕ್ಕೆ ಹೆಚ್ಚು ಪ್ರಾಶಸ್ತ್ಯಕೊಟ್ಟಿದೆ. ಮಹಾಭಾರತದ "super hero" ಯಾರು? ಆಜೀವ ಬ್ರಹ್ಮಚಾರಿಯಾಗಿದ್ದ ಭೀಷ್ಮನೋ ಅಥವಾ ಹದಿನೆಂಟು ಸಾವಿರದ ನೂರೆಂಟು ಜನರನ್ನು ಮದುವೆಯಾದ ಕೃಷ್ಣನೋ? (ಮತ್ತೆ ನೀವು ಅಷ್ಟೊಂದು ಜನರನ್ನು ಮದುವೆಯಾಗುವುದು "super- male- fantasy" ಪ್ರಮೇಯವನ್ನು ಸಮರ್ಥಿಸುತ್ತದೆ ಎಂದು ಹೇಳಬೇಕಾಗಿಲ್ಲಾ :P). ಸಾವಿರಾರು ವರ್ಷಗಳಿಂದ ಲಿಂಗ ಪೂಜೆ ಮಾಡುತ್ತಿರುವ ಈ ದೇಶದಲ್ಲಿ ಕಾಮವೆಂದರೆ ಮಹಾಪಾಪ ಎಂಬ ಭಾವನೆ ಇದೆ ಎಂಬಂತೆ ಚಿತ್ರಿಸಿದ್ದೀರಿ. ವಾಸ್ತವದಲ್ಲಿ ಕಾಮವೂ ಪುರುಷಾರ್ಥವೆಂದು ಧರ್ಮವು ಸಾರಿ ಹೇಳಿದೆ. ಈ ಪಾಪ ಭಾವನೆಯು ಬಹುಶ ಇತ್ತೀಚಿಗೆ ಇಂಗ್ಲೀಷರ (ಕ್ರೈಸ್ತಮತದ) ಸಂಪರ್ಕದಿಂದ ಬಂದದ್ದು. ಇಲ್ಲವಾದರೆ ವಾತ್ಸಾಯನ, ಚಾರ್ವಾಕರಂತಹವರು ಎಲ್ಲಿರುತ್ತಿದ್ದರು?:P

ನಿಮ್ಮ ಪ್ರಮೇಯದಲ್ಲೇ ಇಷ್ಟೊಂದು ಸಂದೇಹಗಳಿರುವಾಗ ಇನ್ನು ನೀವು ಭೈರಪ್ಪನವರ ಬಗ್ಗೆ ಹೇಳಿರುವುದನ್ನು ಪ್ರಶ್ನಿಸ ಹೊರಟರೆ ದೊಡ್ಡ ಲೇಖನವಾಗುತ್ತದೆ. ಆದರೂ ಒಂದೇ ಒಂದು ಪ್ರಶ್ನೆ :P

ಈ ತಂತ್ರಗಳೇ ಭೈರಪ್ಪನವರ ಕಾದಂಬರಿಗಳ ಜನಪ್ರಿಯತೆಗೆ ಕಾರಣವಾಗಿವೆ ಎನ್ನಬಹುದು.
(ತಂತ್ರ = ಬೌದ್ಧಿಕ ಸಾಹಿತ್ಯವನ್ನು ಓದುತ್ತಿದ್ದೇನೆ ಎನ್ನುವ ಭ್ರಮೆ + super-male-fantasyಯ ತೃಪ್ತಿ)

ನನ್ನ ಪ್ರಶ್ನೆ ಏನೆಂದರೆ - ಈ ತಂತ್ರವನ್ನೇ ಆಧರಿಸಿ ಎಷ್ಟೊಂದು ಟಿವಿ ಚಾನಲ್‍ಗಳು ಇರುವಾಗ, ಎಷ್ಟೊಂದು ಜಾಲತಾಣಗಳು ಇರುವಾಗ, ನೂರಾರು ರೂಪಾಯಿ ದುಡ್ಡು ತೆತ್ತು ನನ್ನಂತಹ ಎಷ್ಟೋ ಜನ ಭೈರಪ್ಪನವರ ಕಾದಂಬರಿಗಳನ್ನೇ ಏಕೆ ಓದುತ್ತಾರೆ? ಅದೂ ಕೆಲವೊಮ್ಮೆ "depressive" ಮೂಡ್ ಉಂಟುಮಾಡುವಾಗ? :P

ಮೊದಲು ನಿಮ್ಮ ಪ್ರಮೇಯವನ್ನು, ಅದರ ಹೊಸತನವನ್ನು, ಅದರ ವೈಜ್ಞಾನಿಕ ಹಿನ್ನಲೆಯನ್ನು ಸ್ಪಷ್ಟವಾಗಿ ನಿರೂಪಿಸಿ. ಆನಂತರ ಸಾಹಿತ್ಯದಲ್ಲಿ ನಿಮ್ಮ ಪ್ರಮೇಯದ ಇರುವಿಕೆಯನ್ನು ಚರ್ಚಿಸಿ. ಆನಂತರ ಬೇಕಿದ್ದರೆ ಭಾರತೀಯ ದೃಷ್ಟಿಕೋನದಿಂದ ನೋಡಿ. ಆಮೇಲೆ ಕನ್ನಡ ಸಾಹಿತ್ಯ, ನಂತರ ಭೈರಪ್ಪ! ಅದು ಭೈರಪ್ಪನವರ ಜನಪ್ರಿಯತೆ ಮೇಲೆ ಬೆಳಕು ಚೆಲ್ಲಿದರೆ ಅದು ಉಪೋತ್ಪನ್ನವಷ್ಟೆ (by-product).

ಇಲ್ಲವಾದರೆ ವಿಶ್ಲೇಷಣೆಯ ಭ್ರಮೆಯಲ್ಲಿ ನಿಮ್ಮ ಪೂರ್ವಾಗ್ರಹವನ್ನು ತೋರ್ಪಡಿಸಿಕೊಳ್ಳುತ್ತಿದ್ದೀರೆಂದು ಸ್ಪಷ್ಟವಾಗುತ್ತದೆ!!

(ನೀವು ಇದನ್ನು ಅಳಿಸಿಹಾಕಿದರೆ ಏನೂ ಬೇಜಾರಿಲ್ಲ. ಬರೆಯ ಬೇಕೆನಿಸಿತು, ಬರೆದೆ ಅಷ್ಟೆ.)

-ಕಲ್ಯಾಣ್

Unknown said...

ನಿಮ್ಮ ವಿಮರ್ಶೆ ಚೆನ್ನಾಗಿದೆ.
"ಜಲಪಾತ" ಒಂದರಿಂದಲೇ ನಿಮ್ಮ "ಅಗಭ್ರಾ ವಾದ" ವನ್ನು ಸಮರ್ಥಿಸಲು ಸಾಧ್ಯ. ಹೆಚ್ಚುವರಿಯಾಗಿ ಪಶುವೈದ್ಯನೊಬ್ಬನ ಪಾತ್ರ ಇದನ್ನು ಅಡ್ವೋಕೇಟ್ ಮಾಡುವಂತೆಯೂ ಚಿತ್ರಣವಿದೆ.
ಒಂದು ಉತ್ತಮ ಬರಹ ಕೊಟ್ಟಿದ್ದಕ್ಕೆ ವಂದನೆಗಳು.

ಗುರು ಬಾಳಿಗ

ಸೋಮಶೇಖರ ಹುಲ್ಮನಿ said...

sunathravare ,
nimma comapritive study mattu analysis tumbane interesting aagide.

Anonymous said...

http://simhasn.blogspot.in/2011/05/article-on-byrappas-novels.html

-- shree kar

ಕನಸು said...

ತುಂಬಾ ತಡವಾಗಿ ಪ್ರತಿಕ್ರಿಯಿಸುತ್ತಿದ್ದೇನೆ.ಆದರೆ,ಈ ಲೇಖನ ಓದಿದ್ದೇ ಈಗ.
ನೀವು ಬೈರಪ್ಪನವರ ಕೆಲವು ಕಾದಂಬರಿಗಳನ್ನು ಮಾತ್ರ ಇಲ್ಲಿ ವಿಮರ್ಶೆಗಾಗಿ ಬಳಸಿದ್ದೀರಿ. ನಿಮ್ಮ ಈ ವಿಮರ್ಶೆ ಎರಡು ಅಥವಾ ಮೂರು ಕಾದಂಬರಿಗಳ ಮಟ್ಟಿಗೆ ಸರಿ ಎನ್ನಿಸಬಹುದು. ಆದರೆ,ಅವರ ಬಹುತೇಕ ಕಾದಂಬರಿಗಳಲ್ಲಿ ಚಿತ್ರಿತವಾಗಿರುವ ನಾಯಕಿಯರ ಗಟ್ಟಿತನ ಮತ್ಯಾವ ಲೇಖಕರ ಕಾದಂಬರಿಗಳಲ್ಲೂ ನನಗೆ ಕಂಡು ಬಂದಿಲ್ಲ. ಇಲ್ಲಿ ಯಾಕೋ ಅವರ ದಾಟು ಕೃತಿ ಬಗ್ಗೆ ಮಾತನಾಡಿಲ್ಲ. ನನ್ನ ಮಟ್ಟಿಗಂತೂ ದಾಟುವಿನ ಸತ್ಯಭಾಮ ಕನ್ನಡ ಸಾಹಿತ್ಯ ಲೋಕ ಕಂಡ ಅತ್ಯಂತ ಶಕ್ತಿಶಾಲಿ ಪಾತ್ರಗಳಲ್ಲಿ ಒಂದು. ನಿಮ್ಮ ದೃಷ್ಟಿಕೋನವನ್ನು ಸಂಪೂರ್ಣವಾಗಿ ನಾನು ಅಲ್ಲಗೆಳೆಯದಿದ್ದರೂ,ಅತ್ಯಂತ ಗಟ್ಟಿ ಮಹಿಳಾ ಪಾತ್ರಗಳನ್ನು ನೀಡಿದ ಅವರ ಕಾದಂಬರಿಗಳು ಅಂತರ್ಯದಲ್ಲಿ Soft porn ಎಂಬ ನಿಮ್ಮ ಮಾತು ನಾನು ಒಪ್ಪಲಾರೆ. Having said that, I would like to confess one thing, his recent novels have disappointed me a lot in all aspects.

sunaath said...

ಕನಸು,
ಭೈರಪ್ಪನವರ ಬಹುತೇಕ ಕಾದಂಬರಿಗಳಲ್ಲಿ ನಾಯಕಿ secondary roleಅನ್ನು ಮಾಡುತ್ತಾಳೆ. ನನಗೆ ಅನ್ನಿಸುವಂತೆ ‘ಸಾರ್ಥ’ ಕಾದಂಬರಿ ಮಾತ್ರ ಒಂದು ಅಪವಾದವಾಗಿದೆ. ಇಲ್ಲಿಯ ನಾಯಕಿಗೆ ಭೈರಪ್ಪನವರು ಪೂರ್ಣ ಸ್ವಾತಂತ್ರ್ಯ ಕೊಟ್ಟಿದ್ದಾರೆ. ಅಲ್ಲದೆ ಅವಳು ಏನೆಲ್ಲ ಸಂಕಷ್ಟಗಳನ್ನು ಎದುರಿಸಿದರೂ, ಅವಳ ಮನೋಬಲ ಕುಂದುವುದಿಲ್ಲ. ಆದುದರಿಂದ ಈ ಕಾದಂಬರಿಯನ್ನು ನಾನು ಮೆಚ್ಚಿಕೊಂಡಿದ್ದೇನೆ. ಆದರೆ ಉಳಿದ ಕಾದಂಬರಿಗಳಲ್ಲಿ ಭೈರಪ್ಪನವರು ಹೆಣ್ಣನ್ನು ಚಿತ್ರಿಸುವ ರೀತಿ ನನಗೆ ಮೆಚ್ಚಿಕೆಯಾಗಿಲ್ಲ. ‘ದಾಟು’ ಕಾದಂಬರಿಯಲ್ಲಿ ಸತ್ಯಭಾಮಾಳಿಗೆ ವಿಶೇಷತೆ ಇದ್ದರೂ ಸಹ, ಅದು ಭಾರತೀಯ ಸಂಸ್ಕೃತಿಯನ್ನು ಮೆರಗುಗೊಳಿಸುವದಕ್ಕೆ ಸೀಮಿತವಾಗಿದೆ!
ನಿಮ್ಮ ಪ್ರತಿಕ್ರಿಯಾತ್ಮಕ ಚರ್ಚೆಗಾಗಿ ಧನ್ಯವಾದಗಳು.

Anonymous said...

Mandra hopeless novel Anthe😂😁 saraswathi samman bandirodhu adhe novel ge thane..adesto sahithigalu bariyodhello Bari vikruthigale avrge compare maddhre S l byrappa is the best..