Friday, January 27, 2012

ಶ್ರೀಮತಿ ಮೆರೆಡಿಥ್ ಅಲೆಕ್ಝಾಂಡರರಿಗೆ ಕೃತಜ್ಞತೆಗಳು

ಶ್ರೀಮತಿ ಮೆರೆಡಿಥ್ ಅಲೆಕ್ಝಾಂಡರ ಎನ್ನುವ ಧೀರ, ಪ್ರಜ್ಞಾಶೀಲ ಮಹಿಳೆಗೆ ನನ್ನ ಕೃತಜ್ಞತೆಗಳು. ೨೦೧೨ರ ಲಂಡನ್ ಓಲಿಂಪಿಕ್ಸ್ ಸಸ್ಟೇನಿಬಿಲಿಟಿ ಕಮಿಟಿಗೆ ಇವರು ಇದೇ ಜನೇವರಿ ೨೬ರಂದು ರಾಜೀನಾಮೆ ಕೊಟ್ಟಿದ್ದಾರೆ.

ಡಿಶಂಬರ ೧೯೮೪ರಲ್ಲಿ ಭೋಪಾಲದಲ್ಲಿ ಜರುಗಿದ ಘೋರ ದುರಂತಕ್ಕೆ ಕಾರಣವಾದ, ಅಮೇರಿಕಾದ ಯೂನಿಯನ್ ಕಾರ್ಬೈಡ ಕಂಪನಿಯ ಕೀಟನಾಶಕ ಕಾರಖಾನೆಯು ೨೦೦೧ರಲ್ಲಿ ಡೋವ್ ಕೆಮಿಕಲ್ ಕಂಪನಿಗೆ ಹಸ್ತಾಂತರಿತವಾಯಿತು. ಭೋಪಾಲದ ನಿವಾಸಿಗಳಿಗೆ ಸಮುಚಿತವಾದ ಪರಿಹಾರ ಇನ್ನೂ ದೊರೆತಿಲ್ಲ, ಯೂನಿಯನ್ ಕಾರ್ಬೈಡ ಕಂಪನಿಯ ಉಚ್ಚಾಧಿಕಾರಿಗೆ ಶಿಕ್ಷೆಯಾಗಿಲ್ಲ.

೨೦೧೨ರ ಲಂಡನ್ ಓಲಿಂಪಿಕ್ಸಿನ ಪ್ರಾಯೋಜಕರಲ್ಲಿ ಡೋವ್ ಕೆಮಿಕಲ್ ಕಂಪನಿಯೂ ಒಂದು. ಇದನ್ನು ಪ್ರತಿಭಟಿಸಿ ಶ್ರೀಮತಿ ಮೆರೆಡಿಥ್ ಅಲೆಕ್ಝಾಂಡರರು ಕೊಟ್ಟ ಹೇಳಿಕೆ ಹೀಗಿದೆ:
"I don't want to be party to a defence of Dow Chemicals, the company responsible for one of the worst corporate human rights violations in my generation. It is appalling that 27 years on, the site has still not been cleaned up and thousands upon thousands of people are still suffering. I believe people should be free to enjoy London 2012 without this toxic legacy on their conscience."

ನಮ್ಮ ರಾಜಕಾರಣಿಗಳಲ್ಲಿ ಕಾಣದಿರುವ ನೈತಿಕ ಪ್ರಜ್ಞೆಯನ್ನು ಶ್ರೀಮತಿ ಮೆರೆಡಿಥ್ ಅಲೆಕ್ಝಾಂಡರ ತೋರಿಸಿದ್ದಾರೆ.
May her tribe increase!

19 comments:

ದಿನಕರ ಮೊಗೇರ said...

houdu..avarigondu salaam...

naitikate innu uLidide ennuvudakke saakshi....
nammavaru kaliyali...

Dr.D.T.Krishna Murthy. said...

ಸುನಾತ್ ಸರ್;ಅವರಿಗಿರುವ ಪ್ರಜ್ಞೆ ನಮ್ಮವರಿಗಿಲ್ಲವಲ್ಲಾ!ಅವರಿಗೊಂದು ಸಲಾಂ.

Badarinath Palavalli said...

ಆಕೆಯ ನೈತಿಕ ಪ್ರಜ್ಞೆಗೆ ನಮ್ಮ ಶರಣು ಸಾರ್.

ಗಿರೀಶ್.ಎಸ್ said...

Hats off to her... Great lady..

ರಾಜೇಶ್ ನಾಯ್ಕ said...

ಅಭಿನಂದನಾರ್ಹ!

sunaath said...

ದಿನಕರ ಮೊಗೇರರೆ,
ಡಾ|ಕೃಷ್ಣಮೂರ್ತಿಯವರೆ,
ಬದರಿನಾಥ ಪಳವಳ್ಳಿಯವರೆ,
ಗಿರೀಶರೆ,
ರಾಜೇಶ ನಾಯ್ಕರೆ,
ನಿಮ್ಮ ಸ್ಪಂದನೆಗಾಗಿ ಧನ್ಯವಾದಗಳು. ಭೋಪಾಲ ದುರಂತಕ್ಕಾಗಿ ಪ್ರತಿಭಟಿಸುವವರು--ಎಲ್ಲಿಯವರೇ ಆಗಿರಲಿ--
ಇನ್ನೂ ಇದ್ದಾರಲ್ಲ ಎನ್ನುವದು ನೆಮ್ಮದಿಯ ಸಂಗತಿಯಾಗಿದೆ.

ಈಶ್ವರ said...

ಇಂತವರು ಸಾವಿರವಾಗಲಿ.
ಹಣದಲ್ಲೇ ತೇಲಾಡುವ ನಮ್ಮ ಈಗಿನ ರಾಜಕಾರಣಿಗಳು ಇಂತಹದ್ದಕ್ಕೆಲ್ಲಾ ಯೋಗ್ಯರಲ್ಲ ಎಂದು ಖೇದವಾಗುತ್ತಾ ಇದೆ. ಚೆನ್ನಾಗಿರಲಿ ಮೆರೆಡಿಥ್ ಮೇಡಂ .

ಜಲನಯನ said...

ಸುನಾಥಣ್ಣ.. ನಮ್ಮವರು ಮಾಡಲಾಗದ್ದನ್ನು ಆಕೆ ಮಾಡಿದ್ದಾರೆ. ವಿಶ್ವದ ಗಮನ ಸೆಳೆಯುವುದರಲ್ಲಿ ಇವರು ಖಂಡಿತಾ ಯಶಸ್ವಿಯಾಗಿದ್ದಾರೆ. ಜೈ ಹೋ..ಮಾನವೀಯತೆ ಮೆರೆವವರು ಯಾವ ದೇಶದವರಾದರೇನು..? ಸೆಲ್ಯೂಟ್ ಹೊಡಿಯಲೇ ಬೇಕು.

ಮಂಜುಳಾದೇವಿ said...

ಮಾನವೀಯತೆ ಮೆರೆದ ವ್ಯಕ್ತಿಗೆ ನನ್ನ ನಮನಗಳು.ಉದಾತ್ತ ಮಹಿಳೆಯ ಬಗ್ಗೆ ತಿಳಿಸಿರುವುದಕ್ಕೆ ನಿಮಗೆ ಧನ್ಯವಾದಗಳು.

sunaath said...

ಈಶ್ವರ ಭಟ್ಟರೆ,
ಜಲನಯನ,
ಮಂಜುಳಾದೇವಿಯವರೆ,
ಭಾರತವು ಪ್ರತಿಭಟಿಸಬೇಕು ಎಂದು ಬ್ರಿಟನ್ನಿನ ಶಾಸಕರು ಹೇಳುತ್ತಿದ್ದಾರೆ. ನಮ್ಮವರು ತಮಗೇನೂ ಸಂಬಂಧವೇ ಇಲ್ಲ ಎನ್ನುವಂತಿದ್ದಾರೆ!

ಮನಸು said...

ಮಾನವೀಯದೆ ಮೆರೆದ ವ್ಯಕ್ತಿ ಇವರಿಗೆ ನಮ್ಮ ನಮನಗಳು... ನಮ್ಮವರೇ ನಮಗೇ ಮುಳ್ಳಾಗ್ತಾರೆ... ನಮ್ಮ ಭಾರತೀಯ ಧ್ವನಿ ಮಾತ್ರ ಸೊರಗಿಹೋಗಿದೆ ಇವೆಲ್ಲಕ್ಕು ಪರಿಹಾರ ತುಂಬಾ ಕಷ್ಟ ನಮ್ಮ ಭಾರತದಂತ ದೇಶಗಳಲ್ಲಿ.

Ashok.V.Shetty, Kodlady said...

ನಿಜವಾಗಿಯೂ ಮೆಚ್ಚಲೇ ಬೇಕು......ಧನ್ಯವಾದಗಳು ಶ್ರೀಮತಿ ಮೆರೆಡಿಥ್ ಅಲೆಕ್ಝಾಂಡರವರಿಗೆ.....

sunaath said...

ಮನಸು,
ಅಶೋಕ,
ಧನ್ಯವಾದಗಳು

ಮನದಾಳದಿಂದ............ said...

ಸುನಾಥ್ ಜೀ,
ಮಾನವೀಯತೆಯ ಮೌಲ್ಯದ ಅನಾವರಣ!
ಭೋಪಾಲ್ ಅನಿಲ ದುರಂತಕ್ಕೆ ಇಡೀ ಪ್ರಪಂಚವೇ ಮರುಗುತ್ತಿದೆ (ನಮ್ಮವರನ್ನು ಹೊರತುಪಡಿಸಿ) ಎಂಬುದಕ್ಕೆ ಶ್ರೀಮತಿ ಮೆರೆಡಿಥ್ ಅಲೆಗ್ಸಾಂಡರ್ ಜೀವಂತ ಸಾಕ್ಷಿ.
ನಮ್ಮ ಕಡೆಯಿಂದಲೂ ಅವರಿಗೆ ಕೃತಜ್ಞತೆಗಳು.

sunaath said...

ಪ್ರವೀಣರೆ,
ನಮ್ಮ ರಾಜಕಾರಣಿಗಳು
(೧)ಒಳ್ಳೆಯದನ್ನು ನೋಡುವದಿಲ್ಲ!
(೨)ಒಳ್ಳೆಯದನ್ನು ಕೇಳುವದಿಲ್ಲ!
(೩)ಒಳ್ಳೆಯದನ್ನು ಮಾಡುವದಿಲ್ಲ!

ದುರಹಂಕಾರಿ said...

ಡೊವ್ ರಾಸಾಯನಿಕ ಕಂಪನಿಯು "ಯೂನಿಯನ್ ಕಾರ್ಬೈಡ್" ನಿಂದ ಬರುವ ಲಾಭಕ್ಕೆ ಮಾತ್ರಾ ಭಾದ್ಯಸ್ತವಂತೆ, ಕರ್ಮಗಳಿಗಲ್ಲವಂತೆ! "ಆಪ್ಪನ ಆಸ್ತಿ-ದುಡ್ಡು ಮಾತ್ರಾ ಬೇಕು, ಸಾಲ/ಕರ್ಮ ಬೇಡ" ಎನ್ನುವುದೂ ಒಂದು ಮಾತಾ?!
ಇಂಥಾ ಒಂದು ನಿರ್ಲಜ್ಜ ಲಾಬಿಯನ್ನು ವಿರೋಧಿಸಿ 'ಸುದ್ದಿಯಾಗುವಂತೆಯೇ' ಹೊರಬಂದ ಆಕೆಯ ಮನೋಬಲಕ್ಕೆ ದೊಡ್ಡಸಲಾಂ.

In contrast to this, do read what our own CNR Rao has said in an interview :

Q> "You were witness to discussions on the Bhopal Gas Tragedy when you were chairing the Science Advisory Council. Could you share your experience of the ongoing discussion at that time?"

Ans:> "When I was President of the Indian National Science Academy, I had tried to arrange a meeting thrice to explore the scientific truth of Bhopal. At the last minute, all the speakers would back out; they were forced by their agencies not to attend. I had close friendship with S. Sriramachari, who was the Director General of ICMR and has been quoted in Balaram’s Editorial. He would tell me many things. He wanted to come when the meeting was in Bangalore, but was not allowed. NCL scientists did not come either. Every one of them pulled out. We could not have a meeting on the scientific truth of Bhopal! This is one reason Rajiv Gandhi got upset. My friends, whose names I won’t mention now, were heads of agencies. When I was sitting with Rajiv Gandhi in a meeting, he asked if there was HCN in Bhopal or not. Nobody answered him. Neither yes or no. I told him that there seemed to have been some HCN according to my friend
Sriramachari, but he could never make a public statement. I feel ashamed because I was the President of the Indian National Science Academy, the obvious body to organize a science meeting. That was a tragedy of India as far as science is concerned. We must have scientific honesty and scientific integrity."

Read This at: www.google.com/search?q=cnr+rao+interview+bhopal+tragedy

sunaath said...

ದುರಹಂಕಾರಿಗಳೆ,
ಸಿ.ಎನ್.ರಾವ ಅವರ ಹೇಳಿಕೆ ಹಾಗು ಅವರ ಲಿಂಕ್ ಕೊಟ್ಟಿದ್ದಕ್ಕಾಗಿ ತುಂಬ ಧನ್ಯವಾದಗಳು. ನಮ್ಮಲ್ಲಿಯ ‘ಗಣ್ಯ’ರೂ ಸಹ ಎಂತಹ ಬೆನ್ನೆಲುವಿಲ್ಲದ ಪ್ರಾಣಿಗಳು ಎನ್ನುವದು ಇದರಿಂದ ಅರ್ಥವಾಗುತ್ತದೆ!

ಸೀತಾರಾಮ. ಕೆ. / SITARAM.K said...

ನಿಜಕ್ಕೂ ಅವರೊಬ್ಬ ದಿಟ್ಟ ಮಹಿಳೆ. ಡೋವ್ ಕಂಪನಿ ಬೋಪಾಲ ದುರಂತಕ್ಕೆ ಸಂಬದ ಪಟ್ಟದ್ದು ಎಂದು ಗೊತ್ತಿರಲಿಲ್ಲ. ಎಲ್ಲ ಭಾರತೀಯರು ಅದರ ಬಳಕೆ ಮತ್ತು ಅದರ ಮಾರಾಟ ಇಲ್ಲಿ ಪ್ರತಿರೋಧಿಸಬೇಕು.
ಇಂದಿನಿಂದ ನಾನು ಈ ಕಂಪಾನಿ ಉತ್ಪದನೆಗಳನ್ನು ಬಳಸುವದಿಲ್ಲ.

sunaath said...

ಸೀತಾರಾಮರೆ,
ಭೋಪಾಲ ದುರಂತಕ್ಕೆ ಕಾರಣವಾದ ಕಂಪನಿಯ ಉತ್ಪಾದನೆಗಳನ್ನು ಕೊಳ್ಳದಿರಲು, ರಾಜೀವ ದೀಕ್ಷಿತ ಎನ್ನುವವರು ಅನೇಕ ವರ್ಷಗಳ ಹಿಂದೆ ಒಂದು ಆಂದೋಲನವನ್ನು ಪ್ರಾರಂಭಿಸಿದರು. ಆಗಿನಿಂದ ನಾನು ಎವ್ಹರೆಡಿ ಬ್ಯಾಟರಿ ಸೆಲ್‍ಗಳನ್ನು ಬಿಟ್ಟುಬಿಟ್ಟೆ. ಡೋವ್ ಕಂಪನಿಯ ವಸ್ತುಗಳನ್ನು ಬಿಟ್ಟುಬಿಟ್ಟೆ. ಇನ್ನು ಮುಂದೆ ಡೊವ್ಹ್ ಕಂಫನುಯ ವಸ್ತುಗಳನ್ನೂ ಸಹ ಬಿಡುವೆನು. ನಿಮ್ಮ ಸಂಕಲ್ಪಕ್ಕೆ ಶರಣು.