ತರವಲ್ಲ ತಗಿ ನಿನ್ನ ತಂಬೂರಿ
ಸ್ವರ ಬರದೆ ಬಾರಿಸದಿರು ತಂಬೂರಿ ||ಪಲ್ಲ||
ಸರಸ ಸಂಗೀತದ ಕುರುಹುಗಳನರಿಯದೆ
ಬರದೆ ಬಾರಿಸದಿರು ತಂಬೂರಿ ||ಅ.ಪ.||
ಮದ್ದಲಿ ದನಿಯೊಳು ತಂಬೂರಿ ಅದ
ತಿದ್ದಿ ನುಡಿಸಬೇಕು ತಂಬೂರಿ
ಸಿದ್ಧ ಸಾಧಕರ ಸುವಿದ್ಯೆಗೆ ಒದಗುವ
ಬುದ್ಧಿವಂತಗೆ ತಕ್ಕ ತಂಬೂರಿ ||೧||
ಬಾಳ ಬಲ್ಲವರಿಗೆ ತಂಬೂರಿ ದೇವ-
ಬಾಳಾಕ್ಷ ರಚಿಸಿದ ತಂಬೂರಿ
ಹೇಳಲಿ ಏನಿದರ ಹಂಚಿಕೆ ಅರಿಯದ
ತಾಳಗೇಡಿಗೆ ಸಲ್ಲ ತಂಬೂರಿ ||೨||
ಸತ್ಯಶರಧಿಯೊಳು ತಂಬೂರಿ
ಉತ್ತಮರಾಡುವ ತಂಬೂರಿ
ಬತ್ತೀಸರಾಗದಿ ಬಗೆಯನರಿಯದಂಥ
ಕತ್ತೀಗಿನ್ಯಾತಕೆ ತಂಬೂರಿ ||೩||
ಅಸಮ ಸುಮ್ಯಾಳಕ ತಂಬೂರಿ
ಕುಶಲರಿಗೊಪ್ಪುವ ತಂಬೂರಿ
ಶಿಶುನಾಳಾಧೀಶನ ಓದು ಪುರಾಣದಿ
ಹಸನಾಗಿ ಬಾರಿಸೊ ತಂಬೂರಿ ||೪||
ಕನ್ನಡ ಕವಿಗಳು ಸುಸಂಯೋಜಿತ, ಸಮರಸಪೂರ್ಣ ಬದುಕನ್ನು ವರ್ಣಿಸಲು ತಂಬೂರಿಯ ಪ್ರತಿಮೆಯನ್ನು ಬಳಸುತ್ತಲೇ ಬಂದಿದ್ದಾರೆ.
ಶರೀಫರು ತಂಬೂರಿಯ ಪ್ರತಿಮೆಯನ್ನು ಸಾಧಕನ ಮನಸ್ಸಿಗೆ ಹೋಲಿಸಿ ಹಾಡಿದ್ದಾರೆ.
ತರವಲ್ಲ ತಗಿ ನಿನ್ನ ತಂಬೂರಿ
ಸ್ವರ ಬರದೆ ಬಾರಿಸದಿರು ತಂಬೂರಿ ||ಪಲ್ಲ||
ಸರಸ ಸಂಗೀತದ ಕುರುಹುಗಳನರಿಯದೆ
ಬರದೆ ಬಾರಿಸದಿರು ತಂಬೂರಿ ||ಅ.ಪ.||
ದೇವರನ್ನು ಮನಸ್ಸಿನಲ್ಲಿ ತುಂಬಿಕೊಂಡು, ತನ್ನ ಬಾಳನ್ನು ದೇವರಿಗೆ ಅರ್ಪಿಸಿ ಬದುಕುವದೇ ನಿಜವಾದ ಸಾಧನೆ.
ಈ ರೀತಿಯಾಗಿ ಮಾಡಲು ಅರಿಯದವನು, ದೇವರು ಕೊಟ್ಟ ತಂಬೂರಿಯನ್ನು ಸರಿಯಾಗಿ, ಸುಸ್ವರದಲ್ಲಿ ಬಾರಿಸುತ್ತಿಲ್ಲ; ಆತನಿಗೆ ಸರಸ ಸಂಗೀತದ ಕುರುಹೇ ಗೊತ್ತಿಲ್ಲ! ಅವನು ತನ್ನ ಮನಸ್ಸೆಂಬ ತಂಬೂರಿಯನ್ನು ಅಪಸ್ವರದಲ್ಲಿ ಬಾರಿಸುತ್ತಾನೆ. ಅಂಥವನು ಸಾಧನೆಯಿಂದ ತನ್ನ ಮನಸ್ಸು ಪಕ್ವವಾಗುವ ತನಕ ಕಾಯಬೇಕು.
ಚಾಮರಸ ಕವಿ ಬರೆದ “ಪ್ರಭುಲಿಂಗ ಲೀಲೆ”ಯಿಂದ ತುಂಬಾ ಪ್ರಭಾವಿತರಾದ ಶರೀಫರು ತಮ್ಮ ಕವನಗಳಲ್ಲಿ ಮದ್ದಲೆಯ ಪ್ರತಿಮೆಯನ್ನು ಬಳಸಿದಾಗೆಲ್ಲ, ಆ ಮದ್ದಲೆಯನ್ನು ಬಾರಿಸುವವನು ಸ್ವತಃ ಪ್ರಭುವೇ ಎನ್ನುವ ಭಾವವನ್ನು ತಾಳಿರುತ್ತಾರೆ. ಆ ಕಾರಣದಿಂದಲೇ ಅವರು,
“ಮದ್ದಲಿ ದನಿಯೊಳು ತಂಬೂರಿ ಅದ
ತಿದ್ದಿ ನುಡಿಸಬೇಕು ತಂಬೂರಿ”
ಎಂದು ಹೇಳುವಾಗ, ಸ್ವತಃ ಭಗವಂತನೇ, ಈ ಬಾಳಿನ ಯೋಜನೆಯನ್ನು ರೂಪಿಸಿದವನು;ಆತ ಬಾರಿಸುತ್ತಿರುವ ಮದ್ದಲೆಗೆ ತಕ್ಕಂತೆ ನಾವು ತಂಬೂರಿಯನ್ನು ನುಡಿಸಬೇಕು ಎಂದು ಅಭಿಪ್ರಾಯ ಪಡುತ್ತಾರೆ.
“ಸಿದ್ಧ ಸಾಧಕರ ಸುವಿದ್ಯೆಗೆ ಒದಗುವ
ಬುದ್ಧಿವಂತಗೆ ತಕ್ಕ ತಂಬೂರಿ”
ಈ ರೀತಿಯಾಗಿ ಸಾಧಕನು ತನ್ನ ಮನಸ್ಸಿನ ತಂಬೂರಿಯನ್ನು ದೇವನ ಮದ್ದಲೆಗೆ ಹೊಂದಿಸಿಕೊಂಡರೆ, ಆತ ಸಿದ್ಧ ಸಾಧಕನಾಗುತ್ತಾನೆ, ಬುದ್ಧಿವಂತನಾಗುತ್ತಾನೆ.
ಶರೀಫರು ಶಾಕ್ತ ಪಂಥದ ಸಾಧಕರು. ಈ ಪಂಥದಲ್ಲಿ “ವಿದ್ಯೆ” ಎಂದರೆ ಶಾಕ್ತವಿದ್ಯೆ.
ಈ ವಿದ್ಯೆಯನ್ನು ಸಾಧಿಸಿದವನಿಗೆ ಅನೇಕ ಅಲೌಕಿಕ ಸಿದ್ಧಿಗಳು ಪ್ರಾಪ್ತವಾಗುವವು.
ಇಂತಹ ಸಿದ್ಧಿಗಳು ಶರೀಫರ ಸಮಕಾಲೀನರಾದ ನವಲಗುಂದದ ನಾಗಲಿಂಗ ಸ್ವಾಮಿಗಳಿಗೆ, ಗರಗದ ಮಡಿವಾಳಪ್ಪನವರಿಗೆ ಪ್ರಾಪ್ತವಾಗಿದ್ದವು.
ಶರೀಫರಿಗೆ ಬಹುಶಃ ಇಂತಹ ಸಿದ್ಧಿಗಳು ದೊರೆತಿರಲಿಕ್ಕಿಲ್ಲ. ಅವರ ಕವನ ಒಂದರಲ್ಲಿ ಇದರ ಸೂಚನೆ ದೊರೆಯುತ್ತದೆ:
“ಎಲ್ಲರಂಥವನಲ್ಲ ನನಗಂಡಾ
ಬಲ್ಲಿದನು ಪುಂಡಾ
.........
…………………..
ಸೊಂಟಮುರಿ ಹೊಡೆದಾ
ಒಣ ಪಂಟುಮಾತಿನ
ಗಂಟುಗಳ್ಳರ ಮನೆಗೆ ಬರಗೊಡದಾ”
ಆದುದರಿಂದ ಬುದ್ಧಿವಂತನಾದವನು, ಈ ಸಿದ್ಧಿಗಳನ್ನು ಮೋಜಿಗಾಗಿ ಅಥವಾ ಸ್ವಾರ್ಥಕ್ಕಾಗಿ ಬಳಸದೆ, ಆತ್ಮೋನ್ನತಿಗಾಗಿ ಬಳಸಬೇಕು.
ಬಾಳ ಬಲ್ಲವರಿಗೆ ತಂಬೂರಿ ದೇವ-
ಬಾಳಾಕ್ಷ ರಚಿಸಿದ ತಂಬೂರಿ
ಹೇಳಲಿ ಏನಿದರ ಹಂಚಿಕೆ ಅರಿಯದ
ತಾಳಗೇಡಿಗೆ ಸಲ್ಲ ತಂಬೂರಿ
ಈ ತಂಬೂರಿಯು ಬಾಳಾಕ್ಷದೇವನು ನಿರ್ಮಿಸಿದ ತಂಬೂರಿ. ಶರೀಫರು ಇಲ್ಲಿ pun ಉಪಯೋಗಿಸಿದ್ದಾರೆ. ಬಾಳಾಕ್ಷ ಅಂದರೆ ಭಾಲಾಕ್ಷ, ಅಂದರೆ ಶಿವ. ಇದು ನೇರವಾದ ಅರ್ಥ. ಒಳಗೆ ಹುದುಗಿದ ಅರ್ಥವೆಂದರೆ, ಬಾಳಿಗೆ ಅಕ್ಷನಾದ ಅಂದರೆ ಕಣ್ಣಾದ ದೇವನು. ಇದರ ಹಂಚಿಕೆಯನ್ನು ಅಂದರೆ ರಚನೆಯ ವಿಧಾನವನ್ನು, ಚಾತುರ್ಯವನ್ನು ತಿಳಿಯದೇ ಬಾರಿಸಲು ಹೊರಟವನು ತಾಳಗೇಡಿಯಾಗುತ್ತಾನೆ.
ಈ ಬಾಳು ದೇವನ ದೇಣಿಗೆ ಎನ್ನುವದನ್ನು ಅರಿತುಕೊಂಡು, ದೇವರು ನೀಡಿದ ಬುದ್ಧಿಶಕ್ತಿ, ಶ್ರದ್ಧೆ, ಭಕ್ತಿ ಇವುಗಳನ್ನು ಸಮರಸಗೊಳಿಸಿ, ಯಾವುದಕ್ಕೂ ಆಸೆಪಡದೆ ಬಾಳಿದರೆ, ಅದು ಸಮಂಜಸವಾದ ಬಾಳು.
ಇಂತಹ ಬಾಳಿನಲ್ಲಿ ಮಾತ್ರ ಬಾಳಾಕ್ಷ ಕೊಟ್ಟ ತಂಬೂರಿಯ ಸುನಾದ ಹೊರಡಲು ಸಾಧ್ಯ.
ಇಂತಹ ತಂಬೂರಿಯನ್ನು ಸತ್ಯವಂತರಿಗಲ್ಲದೆ ಬೇರೊಬ್ಬರಿಗೆ ನುಡಿಸಲು ಸಾಧ್ಯವಾದೀತೆ?
ಆದುದರಿಂದ ಉತ್ತಮರಿಗೆ ಮಾತ್ರ ಸರಿಯಾಗಿ ನುಡಿಸಲು ಸಾಧ್ಯವಾಗುವ ತಂಬೂರಿ ಇದು.
“ಸತ್ಯಶರಧಿಯೊಳು ತಂಬೂರಿ
ಉತ್ತಮರಾಡುವ ತಂಬೂರಿ
ಬತ್ತೀಸರಾಗದಿ ಬಗೆಯನರಿಯದಂಥ
ಕತ್ತೀಗಿನ್ಯಾತಕೆ ತಂಬೂರಿ”
ಬತ್ತೀಸ ರಾಗಗಳು ಅಂದರೆ ಶಾಸ್ತ್ರೀಯ ಸಂಗೀತದ ಮೂವತ್ತೆರಡು ಮೂಲರಾಗಗಳು.
ಈ ಎಲ್ಲ ರಾಗಗಳಲ್ಲಿ ಬಾರಿಸಲು ಪ್ರಯತ್ನಿಸಿದರೂ, ರಾಗದ ಬಗೆಯನ್ನು (=ಮನಸ್ಸು, ಲಕ್ಷಣ) ತಿಳಿಯದೆ, ಬಾರಿಸುವವನು ಕತ್ತೆ ಇದ್ದಂತೆ.
ಈ ತಂಬೂರಿಯು ಅಸಮ(=unequalled, matchless) ಸುಮೇಳದಲ್ಲಿ (=orchestra, harmony) ನುಡಿಸಬೇಕಾದ ತಂಬೂರಿ.
ಇದನ್ನು ಕುಶಲರೇ ನುಡಿಸಬಲ್ಲರು.
ಆ ಕೌಶಲ್ಯವನ್ನು ಪಡೆಯುವ ಬಗೆ ಹೇಗೆ?
ಶಿಶುನಾಳಧೀಶನಾದ ದೇವನಲ್ಲಿ ಮನಸ್ಸಿಟ್ಟು, ಅವನನ್ನೇ ಓದಿ, ಅವನನ್ನೇ ಅರಿತು, ಬಾಳನ್ನು ಹಸನಾದ(=clean) ರೀತಿಯಲ್ಲಿ ಬಾಳಿದರೆ, ಈ ತಂಬೂರಿ ಆ ಸಾಧಕನಿಗೆ ಕರಗತವಾಗುವದು.
ಅಸಮ ಸುಮ್ಯಾಳಕ ತಂಬೂರಿ
ಕುಶಲರಿಗೊಪ್ಪುವ ತಂಬೂರಿ
ಶಿಶುನಾಳಾಧೀಶನ ಓದು ಪುರಾಣದಿ
ಹಸನಾಗಿ ಬಾರಿಸೊ ತಂಬೂರಿ
(ಶರೀಫರು ಅಸಮ ಸುಮೇಳ ಎನ್ನುವಾಗ, ಒಂದು apparent ವಿರೋಧಾರ್ಥ ಬಳಸಿದ್ದಾರೆ:
ಅಸಮ ಸುಮೇಳ=Disharmonius orchestra)
ಹುಟ್ಟುತ್ತಲೆ, ಪ್ರತಿ ಜೀವಿಯೂ ಅಪಾರ ಸಾಧನೆ ಮಾಡಬಲ್ಲ ಮನಸ್ಸನ್ನು ದೇವರಿಂದ ಪಡೆಯುತ್ತಾನೆ.
ಅದು ದೇವರು ಆತನಿಗೆ ಕೊಟ್ಟ ತಂಬೂರಿ.
ಅದರಂತೆ ಈ ಬಾಳೂ ಸಹ ತಂಬೂರಿಯೆ.
ಬಾಳಿನ ಪ್ರತಿ ಕರ್ಮವೂ ಈ ತಂಬೂರಿಯನ್ನು ನುಡಿಸಿದಂತೆ.
ಬಾಳಿನಲ್ಲಿ ದೊರೆಯಬಹುದಾದ ಸಾಮರ್ಥ್ಯಗಳು ಹಾಗೂ ಸಿದ್ಧಿಗಳು ಈ ತಂಬೂರಿಯ ಭಾಗಗಳೇ.
ಇವೆಲ್ಲವನ್ನು ಸರಿಯಾಗಿ ಬಳಸಿ, ಪ್ರಭುವಿನ ಮದ್ದಲೆಗೆ ಸರಿಯಾಗಿ ತಂಬೂರಿ ನುಡಿಸಿದರೆ, ಸುಸ್ವರ ಹೊರಡುವದು.
ಈ ಸುಸ್ವರದಿಂದ ಮಹದಾನಂದ ದೊರೆಯುವದು.
ಅದರ ಬದಲಾಗಿ ತನ್ನ ಸಾಮರ್ಥ್ಯವನ್ನು ದುರುಪಯೋಗಿಸಿಕೊಂಡರೆ, ತಂಬೂರಿಯಲ್ಲಿ ಅಪಶ್ರುತಿ ಹೊರಡುವದು.
ಇದೇ ಶರೀಫರ ಸಂದೇಶ.
Tuesday, November 18, 2008
Saturday, November 8, 2008
ಸಾಚಾರ ಸಮಿತಿಯ ಒಡಕು ತಂಬೂರಿ
ಭಾರತೀಯ ಸಂಗೀತದಲ್ಲಿ ತಂಬೂರಿಗೆ ಮಹತ್ವದ ಸ್ಥಾನವಿದೆ. ಗಾಯಕನಿಗೆ ಸ್ವರ ಹೊಂದಿಸಿಕೊಳ್ಳಲು ತಂಬೂರಿ ಬೇಕೆ ಬೇಕು. ಇಂತಹ ತಂಬೂರಿಯಲ್ಲಿ ನಾಲ್ಕು ತಂತಿಗಳಿರುತ್ತವೆ. ತಂಬೂರಿಯಿಂದ ಸುಸ್ವರದ ಆಲಾಪ ಬರಬೇಕಾದರೆ, ಈ ನಾಲ್ಕೂ ತಂತಿಗಳಿಂದ ಮಧುರವಾದ ಒಂದೇ ಸ್ವರ ಬರಬೇಕು. ಹಾಗಿಲ್ಲದೆ, ಒಂದೊಂದು ತಂತಿಯಿಂದ ಒಂದೊಂದು ಸ್ವರ ಬಂದರೆ ಕರ್ಕಶ ಧ್ವನಿ ಕೇಳಿಸುವದು. ನಮ್ಮ ಭಾರತವೆನ್ನುವ ತಂಬೂರಿಗೆ ನಾಲ್ಕಲ್ಲ, ನೂರಾರು ತಂತಿಗಳಿವೆ. ಪ್ರತಿಯೊಂದು ತಂತಿಯೂ ಝೇಂಕಾರದ ಬದಲು ಠೇಂಕಾರವನ್ನು ಮಾಡುತ್ತಿದೆ. ಇಂತಹ ಅಪಲಾಪವನ್ನು ಬೆಂಬಲಿಸುವ ಬುದ್ಧಿಜೀವಿಗಳು, “ಭಾರತವು ಒಂದು ಬಹುಸಂಸ್ಕೃತಿಯ ರಾಷ್ಟ್ರ” ಎಂದು ಬೊಬ್ಬೆಯಿಡುತ್ತಿದ್ದಾರೆ.
ಭಾರತವು ಬಹುಸಂಸ್ಕೃತಿಯ ರಾಷ್ಟ್ರವಲ್ಲ, ಇದು ವೈವಿಧ್ಯಮಯವಾದ ರಾಷ್ಟ್ರ. ಭಾರತೀಯನೊಬ್ಬನು ಪರದೇಶಕ್ಕೆ ಹೋದರೆ, ಅವನ ಭಾಷೆ, ಧರ್ಮ, ವೇಷಭೂಷಣ ಏನೆ ಇರಲಿ, ಅವನನ್ನು ಭಾರತೀಯನೆಂದೇ ಗುರುತಿಸುತ್ತಾರೆಯೇ ಹೊರತು ಅವನನ್ನು ತಮಿಳಿಗ, ಬಂಗಾಲಿ, ಹಿಂದೂ ಅಥವಾ ಮುಸ್ಲಿಮ್ ಎಂದಲ್ಲ.
[ಟಿಪ್ಪಣಿ:
ಶಾಂತಿಯುತ ಸಹಬಾಳ್ವೆ ನಡೆಸುತ್ತಿದ್ದ ಜನಕುಲಗಳು ಪ್ರಾಚೀನ ಭಾರತದಲ್ಲಿ ಎಲ್ಲೆಡೆಯೂ ನೆಲೆಸಿದ್ದವು.
ಇಂದು ಓಡಿಸಾದಲ್ಲಿ ಜಗಳಾಡುತ್ತಿರುವ ಪಣ ಮತ್ತು ಕಂದ ಆದಿವಾಸಿಗಳು ಒಂದು ಕಾಲದಲ್ಲಿ ಭಾರತದಲ್ಲೆಲ್ಲ ಹರಡಿಕೊಂಡಿದ್ದರು. ಪಣರು ಕರ್ನಾಟಕ ಹಾಗು ಗೋವಾದಲ್ಲಿ ನೆಲೆಯಾಗಿದ್ದರೆನ್ನುವದಕ್ಕೆ ಸಾಕ್ಷಿಯಾಗಿ ‘ಪಣ’ (ಹನ)ಹೆಸರಿನಿಂದ ಪ್ರಾರಂಭವಾಗುವ ಅನೇಕ ಊರುಗಳು ಈ ಭಾಗದಲ್ಲಿವೆ. ಉದಾ: ಪಣಜಿ, ಪಣಂಬೂರು, ಪಣಗುತ್ತಿ, ಹನಸೋಗೆ, ಹಣಜಿ ಇತ್ಯಾದಿ.
ಕಂದರಂತೂ ಅಫಘಾನಿಸ್ತಾನದಿಂದ ಕರ್ನಾಟಕದವರೆಗೆ ಎಲ್ಲೆಡೆಯೂ ಇದ್ದರು. ‘ಕಂದ’ ಪದದಿಂದ ಪ್ರಾರಂಭವಾಗುವ ಊರುಗಳು: ಕಂದಹಾರ (ಅಫಘಾನಿಸ್ತಾನದಲ್ಲಿ), ಕಂದಹಾರ (ಮಹಾರಾಷ್ಟ್ರದಲ್ಲಿ), ಕಂದಕೂರು,ಕಂದಲಿ, ಕಂದಾಪುರ, ಖಂಡಾಲಾ ಇತ್ಯಾದಿ.
ಹೆಚ್ಚಿನ ಮಾಹಿತಿಗಾಗಿ ಇಲ್ಲಿ ನೋಡಿರಿ.]
ಪರಿಸ್ಥಿತಿ ಹೀಗಿರುವಾಗ, ಭಾರತೀಯರಲ್ಲಿ ಭಿನ್ನತೆ ಕಲ್ಪಿಸುವ ವಿಪರೀತ ಬುದ್ಧಿ ಯಾವಾಗ ಪ್ರಾರಂಭವಾಯಿತು? ಅದರಂತೆ ‘ಅಲ್ಪಸಂಖ್ಯಾತರು’ ಎನ್ನುವ concept ಯಾವಾಗ ಪ್ರಾರಂಭವಾಯಿತು? ಬಹುಶಃ ಬ್ರಿಟಿಶರು ಈ ಪರಿಕಲ್ಪನೆಯನ್ನು ಹುಟ್ಟುಹಾಕಿದರೆ? ಅದೇನೇ ಇದ್ದರೂ, ಅದರ ಲಾಭ(?)ವನ್ನು ಪಡೆದವರು ಹಾಗೂ ಪಡೆಯಲು ಯತ್ನಿಸುತ್ತಿರುವವರು ಮಾತ್ರ ಸ್ವಾರ್ಥಿಗಳಾದ ರಾಜಕಾರಣಿಗಳು ಹಾಗೂ ಈ ರಾಜಕಾರಣಿಗಳ ಎಂಜಲು ತಿಂದಿರುವ, ತಿನ್ನುತ್ತಿರುವ ಅಜ್ಞಾನಪೀಠಸ್ಥರು.
ಅಲ್ಪಸಂಖ್ಯಾತರೆನ್ನುವ pervert ಕಲ್ಪನೆಯ ಪ್ರಥಮ ಫಲಾನುಭವಿ ಎಂದರೆ ಜಿನ್ನಾ. ಭಾರತದಲ್ಲಿ ರಕ್ತದ ಓಕುಳಿ ಹರಿಸಿ, ಭಾರತವನ್ನು ಒಡೆದು, ತಾನೂ ಸಹ ‘ರಾಷ್ಟ್ರಪಿತ’ನಾದ. ಎರಡನೆಯ ಫಲಾನುಭವಿ ಅಂದರೆ ಭಾರತೀಯ ರಾಜಕಾರಣಿ ; ತನಗೆ ವೋಟುಗಳು ಸಿಗಬೇಕಾದರೆ, ತಾನು ಭಾರತವನ್ನು ಛಿದ್ರ ಛಿದ್ರವಾಗಿ ಒಡೆಯಬೇಕೆಂದು ತಿಳಿದುಕೊಂಡವ.
ಪಿ. ವಿ. ನರಸಿಂಹರಾಯರು ಭಾರತದ ಪ್ರಧಾನಿಯಾದಾಗ ವಿವಿಧ ಮಾಧ್ಯಮಗಳಲ್ಲಿ ಒಂದು ಜಾಹೀರಾತು ಪದೇ ಪದೇ ಬರುತ್ತಿತ್ತು. ಅದು ಹೀಗಿದೆ:
ಪಿ.ವಿ.ನರಸಿಂಹರಾಯರ ಚಿತ್ರ; ಅವರ ಪಕ್ಕದಲ್ಲಿ ಒಂದು ಬಸ್ಸು; ಕೆಳಗಡೆ ಒಂದು ಘೋಷಣೆ:
“ಪ್ರಯಾಣಿಕರು ಬಸ್ಸನ್ನು ಹತ್ತಬೇಕಾದರೆ, ಚಾಲಕನು ಪ್ರಯಾಣಿಕರ ಧರ್ಮವನ್ನು ಕೇಳುತ್ತಾನೆಯೆ?”
ಘೋಷಣೆಯೇನೊ ಸರಿಯಾದದ್ದೇ.
ಆದರೆ ಒಂದು ಸತ್ಯವನ್ನು ಇಲ್ಲಿ ಉದ್ದೇಶಪೂರ್ವಕವಾಗಿ ಮರೆಮಾಚಲಾಗಿದೆ:
ಬಸ್ಸಿನಲ್ಲಿ ಎಲ್ಲ ಪ್ರಯಾಣಿಕರು ಶಿಸ್ತಿನಿಂದ ಕೂಡಬೇಕು.
ಒಬ್ಬಾತ ನಿಂತುಕೊಂಡಾಗ, ಮತ್ತೊಬ್ಬಾತ ಮಲಗಿಕೊಂಡಿರಕೂಡದು, ಇನ್ನೊಬ್ಬಾತ ಸೀಟಿನ ಮೇಲೆ ಕುಣಿಯುತ್ತಿರಬಾರದು.
ಇತರ ಪ್ರಯಾಣಿಕರೊಂದಿಗೆ ಜಗಳ ತೆಗೆಯಬಾರದು.
ಬಸ್ಸಿಗೆ ಹಾನಿ ಮಾಡಬಾರದು.
ಇವೆಲ್ಲ ಬಸ್ಸಿನ ಪ್ರಯಾಣಿಕರು ಅನುಸರಿಸಬೇಕಾದ ಸಾಮಾನ್ಯ ನಿಯಮಗಳು.
ಆದರೆ ಭಾರತದಲ್ಲಿ ಒಬ್ಬೊಬ್ಬ ಪ್ರಯಾಣಿಕನಿಗೆ ಒಂದೊಂದು ನಿಯಮ.
ಏಕೆಂದರೆ, ಭಾರತವು ಬಹುಸಂಸ್ಕೃತಿಯ ದೇಶ ; ಭಾರತವು ಅಲ್ಪಸಂಖ್ಯಾತರ ದೇಶ !
ಅಲ್ಪಸಂಖ್ಯಾತರೆನ್ನುವ pervert concept ಅನ್ನು ಒಪ್ಪಿಕೊಳ್ಳೋಣ.
ಅಲ್ಪಸಂಖ್ಯಾತರಿಗೆ ಯಾವ ರೀತಿಯ ಸವಲತ್ತುಗಳನ್ನು ಕೊಡಬೇಕೆನ್ನುವದನ್ನು ಮಾತ್ರ ನಮ್ಮ ಸರಕಾರ ಅರ್ಥ ಮಾಡಿಕೊಂಡಿಲ್ಲ.
ಅಥವಾ ಮಾಡಿಕೊಂಡರೂ ಸಹ, ಉದ್ದೇಶಪೂರ್ವಕವಾಗಿ ತಿರುಚುತ್ತಿದೆ. (ಚುನಾವಣೆಯಲ್ಲಿ ಮತಗಳಿಕೆಗಾಗಿ).
ಅಲ್ಪಸಂಖ್ಯಾತರ ಸಂಸ್ಕೃತಿಯ ವೈಶಿಷ್ಟ್ಯಗಳು ಬಹುಸಂಖ್ಯಾತರ ಸಂಸ್ಕೃತಿಯಲ್ಲಿ ಮುಚ್ಚಿ ಹೋಗದಿರಲಿ ಎನ್ನುವದೇ ಅವರಿಗೆ ಕೊಡಬೇಕಾದ ರಕ್ಷಣೆಯ ಮುಖ್ಯ ಉದ್ದೇಶ. ನಮ್ಮಲ್ಲಿ ಅಲ್ಪಸಂಖ್ಯಾತರ ಧರ್ಮಾಚರಣೆಗೆ ಅಥವಾ ಸಂಸ್ಕೃತಿಯ ಪೋಷಣೆಗೆ ಏನಾದರೂ ಬಾಧಕಗಳಿವಿಯೆ?
In fact, contrary is the case.
ಮೊದಲಿನಿಂದಲೂ ನಮ್ಮ ಒಕ್ಕಲಿಗರೆಲ್ಲರೂ ಸೋಮವಾರದ ದಿನ ‘ಬಸವಣ್ಣನ ದಿನ’ ಎಂದು ತಮ್ಮ ಕೆಲಸಗಳಿಗೆ ಬಿಡುವು ಕೊಡುತ್ತಿದ್ದಾರೆ.
ಬ್ರಿಟಿಶರ ಆಡಳಿತಕ್ಕಿಂತ ಮೊದಲು ರವಿವಾರದ ರಜೆ ನಮ್ಮಲ್ಲಿ ಇರಲಿಲ್ಲ.
ಆದರೆ ಈಗ ನಮ್ಮಲ್ಲಿ ಶೇಕಡಾ ೧ಕ್ಕಿಂತ ಕಡಿಮೆ ಇರುವ ಅಲ್ಪಸಂಖ್ಯಾತ ಕ್ರಿಶ್ಚಿಯನ್ನರಿಗಾಗಿ ಒಂದು ವರ್ಷದಲ್ಲಿ ೫೨ ರಜಾದಿನಗಳನ್ನು (ರವಿವಾರದ ಪ್ರಾರ್ಥನೆಗಾಗಿ) ಸರಕಾರವು ನೀಡಿದೆ.
ಮುಸ್ಲಿಮ್ ದೇಶಗಳಲ್ಲಿ ಶುಕ್ರವಾರದಂದು ವಾರದ ರಜೆ ಕೊಡುತ್ತಾರೆ. (ಭಾರತದಲ್ಲಿಯ ಮುಸ್ಲಿಮ್ ವಿದ್ಯಾಸಂಸ್ಥೆಗಳೂ ಸಹ ರವಿವಾರದ ಬದಲಾಗಿ ಶುಕ್ರವಾರವೇ ರಜೆ ಕೊಡುತ್ತಾರೆ.)
ಪರಿಸ್ಥಿತಿ ಹೀಗಿದ್ದಾಗ, ಭಾರತದಲ್ಲಿ ಬಹುಸಂಖ್ಯಾತ ಹಿಂದು ಧರ್ಮೀಯರು ಅಲ್ಪಸಂಖ್ಯಾತರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ ಎನ್ನುವದು ಸರಿಯೆ?
[ಭಾರತದ ಸಂವಿಧಾನವು ಹೀಗೆ ಹೇಳುತ್ತದೆ:
Article 14:
The State shall not deny to any person equality before the law or the equal protection of the laws within the territory of India.
Article 15:
Prohibition of discrimination on grounds of religion, race, caste, sex or place of birth.
ಆದುದರಿಂದ ಭಾರತದ ಸಂವಿಧಾನಕ್ಕೆ ಧರ್ಮನಿರಪೇಕ್ಷ ಎನ್ನಬೇಕಾಗುತ್ತದೆ.
ಆದರೆ ಮುಸ್ಲಿಮ್ ರಾಷ್ಟ್ರವೊಂದರಲ್ಲಿ ಇರುವ ಶಾಸನವನ್ನು ಗಮನಿಸಿ:
ಸುಮಾರು ೪೦ ವರ್ಷಗಳ ಹಿಂದೆ The Illustrated Weekly of India ಎನ್ನುವ ವಾರಪತ್ರಿಕೆಯಲ್ಲಿ ಪ್ರಕಟವಾದ ವರದಿ ಹೀಗಿತ್ತು:
ಅರಬ ರಾಷ್ಟ್ರವೊಂದರ factory ಒಂದರಲ್ಲಿ ಕೆಲಸ ಮಾಡುತ್ತಿದ್ದ ಗ್ರೀಸ್ ದೇಶದ ಫೋರ್ಮನ್ನನು factoryಯ ಒಳಗಡೆ ವಾಹನ ಚಲಾಯಿಸುತ್ತಿದ್ದಾಗ, ಅಕಸ್ಮಾತ್ತಾಗಿ ಭಾರತೀಯ ಕಾರ್ಮಿಕನ ಮೇಲೆ ವಾಹನ ಚಲಾಯಿಸಿದ್ದರಿಂದ ಕಾರ್ಮಿಕನು ಸಾವಿಗೀಡಾದನು. ಪರಿಹಾರ ಕೊಡಿಸುವ ನ್ಯಾಯಾಲಯವು ಮೃತ ಕಾರ್ಮಿಕನು ಭಾರತೀಯನಾದದ್ದರಿಂದ ನಿಕೃಷ್ಟ ಪರಿಹಾರವನ್ನು ನಿಗದಿಗೊಳಿಸಿತು. ತೀರ್ಪು ನೀಡಿದ ಬಳಿಕ, ಆ ಭಾರತೀಯನು ಹಿಂದೂ ಧರ್ಮದವನು ಎಂದು ಮತ್ತೆ ತಿಳಿದು ಬಂದದ್ದರಿಂದ, ಈ ಮೊದಲು ನಿಗದಿ ಪಡಿಸಿದ ಪರಿಹಾರವನ್ನು ಎರಡು ಮೂರಾಂಶಕ್ಕೆ ಮರು ನಿಗದಿಪಡಿಸಲಾಯಿತು.
ಅರಬ ರಾಷ್ಟ್ರಗಳಲ್ಲಿ ಭಾರತೀಯರಿಗೆ ಹಾಗೂ ಹಿಂದೂಗಳಿಗೆ ಕೊಡುವ ನ್ಯಾಯ ಇದು!]
ಭಾರತದಲ್ಲಿ ಮಾತ್ರ ಅಲ್ಪಸಂಖ್ಯಾತರರೇ ಬಹುಸಂಖ್ಯಾತರರಿಗಿಂತ ಹೆಚ್ಚು ಸಮಾನರು! ಉದಾಹರಣೆಗಳನ್ನು ಕೊಡುತ್ತೇನೆ:
ಭಾರತ ದೇಶದಲ್ಲಿ ಈಗ ಅತ್ಯಂತ ಬಡತನದ ಸ್ಥಿತಿಯಲ್ಲಿ ಇರುವವನೆಂದರೆ ಒಕ್ಕಲಿಗ.
ಸುಮಾರಾಗಿ ಎಲ್ಲ ಒಕ್ಕಲಿಗರೂ ಹಿಂದುಗಳೇ.
ನೂರಾರು ಜನ ಒಕ್ಕಲಿಗರು ಪ್ರತಿ ವರ್ಷವೂ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ.
ಭಾರತ ಸರಕಾರ ರೈತರ ಸ್ಥಿತಿ ಸುಧಾರಣೆಗೆ ಏನು ಮಾಡಿದೆ? ಅವರಿಗೆ ಯಾವ ಸವಲತ್ತುಗಳನ್ನು ಕೊಟ್ಟಿದೆ?
(ಭಾರತದಲ್ಲಿ ಈಗಾಗಲೇ ೧,೨೫,೦೦೦ ರೈತರು ಕುಲಾಂತರಿ ಬೀಜಗಳಿಂದಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು, ಬ್ರಿಟನ್ನಿನ ರಾಜಕುಮಾರ ಚಾರ್ಲ್ಸ್ಇಲ್ಲಿ ಹೇಳಿದ್ದಾರೆ.
ನಮ್ಮ ಸಹಪ್ರಯಾಣಿಕ ಅಮರ ಅವರ ಕೃಪೆಯಿಂದ ಈ ಮಾಹಿತಿ ಲಭ್ಯವಾಗಿದೆ.)
ಆದರೆ, ಅಲ್ಪಸಂಖ್ಯಾತರು, ವಿಶೇಷತಃ ಮುಸಲ್ಮಾನರು ಬಡತನದಲ್ಲಿ ಬಳಲುತ್ತಿದ್ದಾರೆ ಎಂದು ಭಾಷಣ ಬಿಗಿಯುತ್ತ, ಅವರ ಸ್ಥಿತಿ ಸುಧಾರಣೆಯ ವರದಿಗಾಗಿ, ಭಾರತ ಸರಕಾರವು ‘ಸಾಚಾರ ಸಮಿತಿ’ಯನ್ನು ನಿಯಮಿಸಿತು.
ತನ್ನ ಯಜಮಾನನಿಗೆ ಏನು ಬೇಕೆನ್ನುವದು ಈ ಸಮಿತಿಗೆ ಚೆನ್ನಾಗಿ ಗೊತ್ತು.
ಅಂತೆಯೇ ಸಮಿತಿಯು ಸರಕಾರಕ್ಕೆ ಒಂದು tailor-made ವರದಿಯನ್ನು ಸಮರ್ಪಿಸಿತು.
ಈ ವರದಿಯು ಮುಸಲ್ಮಾನರ ಸ್ಥಿತಿಗತಿಗಳ ಬಗೆಗೆ ಮಾತ್ರ ವರದಿ ನೀಡುವ ಬದಲು, ಅವರು ಹೇಗೆ ಬಹುಸಂಖ್ಯಾತರಿಗಿಂತ ಭಿನ್ನರು ಎಂದು ಹೇಳುವದಕ್ಕೆ ಕಸರತ್ತು ಮಾಡಿದೆ.
ಉದಾಹರಣೆಗಾಗಿ ಆ ವರದಿಯ ಒಂದು ಭಾಗವನ್ನು ಇಲ್ಲಿ ನೋಡಿರಿ:
The three language formula too, has not been implemented properly. Students have to opt for Sanskrit as there is no provision for teaching other languages in many schools, despite the fact that Urdu has been declared a second language in some states. This, in effect, makes Sanskrit a compulsory subject, especially in the Hindi belt. The lack of interest in studying Sanskrit makes Muslim students perform badly thus pulling down their grades. Students are also unable to take their higher secondary examination in Urdu as there is no provision for it and they are forced to take their exams in Hindi.(page 40)
ತ್ರಿಭಾಷಾ ಸೂತ್ರದ ಪ್ರಕಾರ ಮಾತೃಭಾಷೆ ಅಥವಾ ರಾಜ್ಯ ಭಾಷೆಯು ಪ್ರಥಮ ಭಾಷೆಯಾಗಿರುತ್ತದೆ. ಅಂದ ಮೇಲೆ ಉತ್ತರ ಪ್ರದೇಶದಂತಹ ರಾಜ್ಯಗಳಲ್ಲಿ ಹಿಂದಿ ಹಾಗೂ ಉರ್ದು ಎರಡೂ ಪ್ರಥಮ ಭಾಷೆಗಳಾಗುತ್ತವೆ.
ಆದುದರಿಂದ ಸಾಚಾರರ ಮೊದಲನೆಯ ನೆಲೆಗಟ್ಟು ಸುಳ್ಳಿನ ನೆಲೆಗಟ್ಟು ಎಂದಂತಾಯಿತು.
ಈಗ ಸಾಚಾರರ ಮತ್ತೊಂದು ಪೂರ್ವಾಗ್ರಹದ ಹೇಳಿಕೆಯನ್ನು ನೋಡಿರಿ:
The lack of interest in studying Sanskrit makes Muslim students perform badly thus pulling down their grades.
ಮುಸಲ್ಮಾನ ವಿದ್ಯಾರ್ಥಿಗಳಿಗೆ ಸಂಸ್ಕೃತದಲ್ಲಿ ಆಸಕ್ತಿ ಇರಬಾರದು ಎನ್ನುವ ಭಾವನೆ ತಪ್ಪಲ್ಲವೆ?
ನೂರಾರು ವರ್ಷಗಳ ಹಿಂದೆ, ಈ ವಿದ್ಯಾರ್ಥಿಗಳ ಪೂರ್ವಜರು, ಬಲಾತ್ಕಾರದಿಂದಲೊ ಅಥವಾ ಸ್ವಇಚ್ಛೆಯಿಂದಲೊ ಧರ್ಮಾಂತರಿತರಾಗಿರಬಹುದು.
ಆದರೆ ಅವರ ರಕ್ತ, ಅವರ ಸಂಸ್ಕೃತಿ ಹಾಗು ಅವರ ಜನಾಂಗ-ಸ್ಮೃತಿ ಬದಲಾಗಬೇಕೆ?
ನಮ್ಮ ತಾಯಿ ಭಾರತಮಾತೆ ಅಲ್ಲ, ಅವಳು ಅರಬಮಾತೆ ಅಥವಾ ಪರ್ಶಿಯಾಮಾತೆ ಎಂದು ಹೇಳುವದು ಶಕ್ಯವೆ?
ಇಂತಹ ಮಾತನ್ನು ಮುಸಲ್ಮಾನರು ಹೇಳುತ್ತಿಲ್ಲ. ಆದರೆ ಸಾಚಾರರು ಹೇಳುತ್ತಿದ್ದಾರೆ.
ಮುಸಲ್ಮಾನರಿಗೆ ಸಂಸ್ಕೃತ ಭಾಷೆಯಲ್ಲಿ ಆಸಕ್ತಿ ಇರಕೂಡದು ಎನ್ನುವದು ಸಾಚಾರರ ವೈಯಕ್ತಿಕ ನಿರ್ಣಯ.
ಏಕೆಂದರೆ ಸಂಸ್ಕೃತವು ಹಿಂದೂಗಳ ಭಾಷೆ ಹಾಗೂ ಅರೇಬಿಯನ್/ಪರ್ಶಿಯನ್ ಇವು ಮುಸಲ್ಮಾನರ ಭಾಷೆ ಎನ್ನುವದು ಸಾಚಾರರ ಪೂರ್ವಾಗ್ರಹಪೀಡಿತ ಅಭಿಮತ.
ಆದರೆ ನಿಜ ಪರಿಸ್ಥಿತಿ ಹಾಗಿದೆಯೇ?
ಕರ್ನಾಟಕವನ್ನೇ ತೆಗೆದುಕೊಳ್ಳಿರಿ:
ಕರ್ನಾಟಕದಲ್ಲಿ ಸಂಸ್ಕೃತ ಹಾಗೂ ಕನ್ನಡದಲ್ಲಿ ಪರಿಣತಿಯುಳ್ಳ ಎಷ್ಟು ಜನ ಮುಸ್ಲಿಮ್ ಲೇಖಕರಿಲ್ಲ?
ಉರ್ದು ಭಾಷೆಯಲ್ಲಿ ಇಲ್ಲದ ಪರಿಣಿತಿ ಇವರಿಗೆ ಕನ್ನಡ ಹಾಗೂ ಸಂಸ್ಕೃತದಲ್ಲಿದೆ.
ಪದ್ಮಶ್ರೀ ನಿಸಾರ ಅಹ್ಮದ, ನಮ್ಮ ಶ್ರೇಷ್ಠ ಲೇಖಕರಾದ ಕಟ್ಟಪಾಡಿ,ಬೋಳೂರು,ಸಾರಾ ಅಬೂಬಕ್ಕರ,ರಶೀದಾ,ರಹಮತ್ ತರೀಕೆರೆ ಇನ್ನೂ ಅನೇಕರೆಲ್ಲ ಮುಸಲ್ಮಾನರಲ್ಲವೆ?
ಈಗಲೂ ಸಹ ತಮಿಳುನಾಡಿನ ಮುಸಲ್ಮಾನರಿಗೆ ತಮಿಳೇ ಮಾತೃಭಾಷೆಯಾಗಿದೆಯೇ ಹೊರತು, ಉರ್ದು ಅಲ್ಲ.
ಮುಖ್ಯವಾಗಿ ಭಾಷೆ ಬೇಕಾದದ್ದು ಅಂತರ್-ಸಂವಹನೆಗಾಗಿ.
ಕರ್ನಾಟಕದಲ್ಲಿ ಇರುವ ಶೇಕಡಾ ೧೨ರಷ್ಟು ಮುಸಲ್ಮಾನರು ಕೇವಲ ತಮ್ಮ ತಮ್ಮಲ್ಲೇ ವ್ಯವಹರಿಸುತ್ತ ಕೂಡುತ್ತಾರೇನು?
ಉಳಿದ ಶೇಕಡಾ ೮೮ರಷ್ಟು ಜನರೊಡನೆ ಅವರಿಗೆ ವ್ಯವಹಾರ, ಸಂವಹನೆ ಬೇಡವೆ?
ಇದೇ ಮಾತು ಜನಾಂಗ-ಸ್ಮೃತಿಗೂ ಅನ್ವಯಿಸುತ್ತದೆ. ನಮ್ಮ ಪುರಾಣಗಳು ವಾಸ್ತವದಲ್ಲಿ ನಮ್ಮ ಜನಾಂಗದ ಸ್ಮೃತಿಕೋಶಗಳೇ ಆಗಿವೆ.
ಶ್ರೀರಾಮಚಂದ್ರ, ಶ್ರೀಕೃಷ್ಣ ಇವರು ದೇವತಾಪಟ್ಟಕ್ಕೇರಿದ ಐತಿಹಾಸಿಕ ಪುರುಷರು.
ಬೇತಾಳ-ವಿಕ್ರಮ ಕತೆಯಿಂದ ಪ್ರಸಿದ್ಧನಾದ ತ್ರಿವಿಕ್ರಮ ರಾಜನು ಅರಸನೆಂದರೆ ಹೇಗಿರಬೇಕು ಎನ್ನುವದಕ್ಕೆ model ಆದಂತಹ ದಂತಕತೆಯಾದ ರಾಜನು.
ಎಲ್ಲಾ ಭಾರತೀಯರಿಗೂ ಇವರೇ ಮೂಲಪುರುಷರು.
ನಮ್ಮ ಜನಾಂಗಸ್ಮೃತಿ ಇಂತಹ ಮಹಾಪುರುಷರಿಂದ ಆಗಿದೆ.
ಇತ್ತೀಚಿನ ಉದಾಹರಣೆಗಳೆಂದರೆ ತುರುಕರ ಹಾಗೂ ಪರ್ಶಿಯನ್ನರ ವಿರುದ್ಧ ಹೋರಾಡಿದ ಭಾರತೀಯ ರಾಜರು. ರಾಣಾ ಪ್ರತಾಪಸಿಂಹ, ಛತ್ರಪತಿ ಶಿವಾಜಿ, ಗುರು ಗೋವಿಂದಸಿಂಹ ಮೊದಲಾದವರು ಈ ನೆಲದ ಮಕ್ಕಳ ಸಲುವಾಗಿ ವಿದೇಶಿ ಆಕ್ರಮಣಕಾರರ ವಿರುದ್ಧ ಹೋರಾಡಿದ ಭಾರತೀಯರು. ಇವರನ್ನು ಕೃತಜ್ಞತೆಯಿಂದ ನೆನೆಯುವದು ಎಲ್ಲ ಭಾರತೀಯರ (-ಇವರಲ್ಲಿ ಅಲ್ಪಸಂಖ್ಯಾಕರೂ ಸೇರ್ಪಡೆಯಾಗುತ್ತಾರೆ-) ಕರ್ತವ್ಯವಲ್ಲವೆ? ಅದು ಬಿಟ್ಟು ರಾಣಾ ಪ್ರತಾಪಸಿಂಹನನ್ನು ಕೇವಲ ರಜಪೂತರು, ಶಿವಾಜಿಯನ್ನು ಕೇವಲ ಮರಾಠಿಗರು, ಗುರು ಗೋವಿಂದಸಿಂಹನನ್ನು ಕೇವಲ ಸೀಖರು, ವಿಜಯನಗರದ ಅರಸರನ್ನು ಕೇವಲ ಹಿಂದೂಗಳು ಗೌರವಿಸುವದು ಸರಿಯೆ?
ಈಗ ಸಾಚಾರರು ವರದಿಸುವದನ್ನು ನೋಡಿರಿ:
The “communal” content of school textbooks, as well as, the school ethos has been a major cause for concern for Muslims in some states. This is disconcerting for the school going Muslim child who finds a complete absence of any representation of her community in the school text.
ಸಾಚಾರರು ಯಾವುದಕ್ಕೆ communal content ಎಂದು ಕರೆಯುತ್ತಾರೆ?
ಶಿವಾಜಿಯು ಪ್ರಜಾವಿರೋಧಿಯಾದ ಮತಾಂಧ ಔರಂಗಜೇಬನ ವಿರುದ್ಧ ಹೋರಾಡಿದ್ದನ್ನು ಬರೆಯುವದು ಕೋಮುವಾದಿ ಪಠ್ಯವೆ?
ಅಥವಾ ಪುಸ್ತಕದಲ್ಲಿ ರಾಮ. ಕೃಷ್ಣ, ಕಮಲಾ, ವಿಮಲಾ ಎನ್ನುವ ಹೆಸರುಗಳು ಬಂದರೆ ಅದು ಕೋಮುವಾದವೆ? ಮುಸಲ್ಮಾನ ಹುಡುಗರು ಶಾಲೆಗೆ ಬಂದಾಗ (--ಅವರು ಸಾರ್ವಜನಿಕ ಶಾಲೆಗೆ ಬಂದರೆ--), ತಮ್ಮ ಸುತ್ತ ಮುತ್ತಲೂ ರಾಮ, ಕೃಷ್ಣ, ಕಮಲಾ, ವಿಮಲಾ ಇವರುಗಳನ್ನೇ ಕಾಣುತ್ತಾರೆ.
Communal contentಅನ್ನು ತೆಗೆದು ಹಾಕುವದಕ್ಕಾಗಿ ಈ ಹುಡುಗರು ತಮ್ಮ ಹೆಸರನ್ನು ಬದಲಾಯಿಸಿಕೊಳ್ಳಬೇಕೆ?
ನಿಜ ಹೇಳಬೇಕೆಂದರೆ, ಮುಸ್ಲಿಮರು ಕೇವಲ ಅರಬ್ಬಿ ಹೆಸರುಗಳನ್ನಷ್ಟೇ ಇಟ್ಟುಕೊಳ್ಳದೆ, ಭಾರತೀಯ ಹೆಸರುಗಳನ್ನು ಜೋಡಿಸಬಹುದು.
ಇದನ್ನು ಕ್ರಿಶ್ಚಿಯನ್ನರು ಮಾಡುತ್ತಿದ್ದಾರೆ.
ಉದಾಹರಣೆಗೆ ಅನೇಕ ಕ್ರಿಶ್ಚಿಯನ್ ಹೆಸರುಗಳು, ವಿಶೇಷತಃ ಹೆಣ್ಣು ಮಕ್ಕಳ ಹೆಸರುಗಳು ಜೋಡಿಸಿದ ಹೆಸರುಗಳಾಗಿವೆ.
ಉದಾ: ಕಮಲಾ ಮೇರಿ, ಹೇಮಾ ಗ್ರೇಸಿ ಇತ್ಯಾದಿ.
ಮುಸಲ್ಮಾನರೂ ಸಹ ಇದೇ ರೀತಿಯಲ್ಲಿ ತಮ್ಮ ಹೆಸರುಗಳನ್ನು ಫಾತಿಮಾ ಗೌರಿ, ಸಯೀದಾ ಲಕ್ಷ್ಮಿ ಎಂದೆಲ್ಲ ಇಟ್ಟುಕೊಂಡರೆ ಅವರನ್ನು ಬಾಧಿಸುತ್ತಿರುವ ಪರಕೀಯ ಪ್ರಜ್ಞೆ ತಪ್ಪಬಹುದು.
ಸಾಚಾರರ ತಿಪ್ಪರಲಾಗದ ಇನ್ನೊಂದಿಷ್ಟು ಉದಾಹರಣೆ ಇಲ್ಲಿವೆ:
….current research indicates that poverty and financial constraints are the major causes that prevent Muslim girls from accessing ‘modern/secular’ education. (p41)
ಯಾಕೆ? ಕೇವಲ ಮುಸಲ್ಮಾನ ವಿದ್ಯಾರ್ಥಿನಿಯರು ಮಾತ್ರ ಬಡತನದಿಂದಾಗಿ ಶಿಕ್ಷಣ ಪಡೆಯುತ್ತಿಲ್ಲವೆ?
ಹಳ್ಳಿಗಳಲ್ಲಿಯ ನಮ್ಮ ರೈತ ಕೂಲಿಕಾರ ಹೆಣ್ಣು ಮಕ್ಕಳು ಶಾಲೆ ಬಿಟ್ಟು ಹೊಲದಲ್ಲಿ ಕೂಲಿ ಮಾಡಲು ಹೋಗುವದಿಲ್ಲವೆ?
ನಗರಗಳಲ್ಲಿಯೂ ಸಹ ಎಷ್ಟು ಜನ ಮುಸ್ಲಿಮೇತರ ವಿದ್ಯಾರ್ಥಿನಿಯರು ಬಡತನದಿಂದಾಗಿ ಶಾಲೆ ಬಿಟ್ಟಿಲ್ಲ?
ನಗರಗಳಲ್ಲಿ ಕೊಳಚೆ ಹೆಕ್ಕುವ ಕೆಲಸ ಮಾಡುತ್ತಿರುವ rag pickerಗಳಲ್ಲಿ ಒಬ್ಬಳಾದರೂ ಮುಸ್ಲಿಮ್ ಹುಡುಗಿಯನ್ನು ಸಾಚಾರ ತೋರಿಸಲಿ !
ಇವೆಲ್ಲ ಅಂಕಿಸಂಖ್ಯೆಯ ಮಾತಾಯಿತು. ಈಗ ಸಾಚಾರರ ಈ ಹೇಳಿಕೆಯನ್ನು ನೋಡಿರಿ:
Muslim women often face overt discrimination from school authorities while trying to get admission or in availing of scholarships for their children. (p41)
ಇದಂತೂ ಸಾಚಾರರ ಕಲ್ಪನೆಯ ಮಹಾ ಅಪಲಾಪ.
ಏಕೆಂದರೆ, ಇಂತಹ overt discriminationದ ಒಂದಾದರೂ ಉದಾಹರಣೆಗಳನ್ನು ಸಾಚಾರರು ತಮ್ಮ ವರದಿಯಲ್ಲಿ ಉಲ್ಲೇಖಿಸಿಲ್ಲ.
ಇದೇ ರೀತಿಯಲ್ಲಿ ಸಾಚಾರರು ಮುಸಲ್ಮಾನರು ಉದ್ಯೋಗಕ್ಷೇತ್ರದಲ್ಲಿ ಅನುಭವಿಸುತ್ತಿರುವ ಬವಣೆಗಳ ಬಗೆಗೆ ದೀರ್ಘವಾದ ವರದಿ ನೀಡಿದ್ದಾರೆ.
ನಾನೇನೂ ಅವರಿಗೆ ದೀರ್ಘವಾದ ಪ್ರಶ್ನೆ ಹಾಕುವದಿಲ್ಲ. ಒಂದು ಅತಿ ಸಣ್ಣ ಪ್ರಶ್ನೆ.
ಭಾರತದಲ್ಲಿ ಸಾಲದ ಶೂಲಕ್ಕೆ ಸಿಲುಕಿದ ಅನೇಕ ರೈತರು, ತಮ್ಮ ಕುಟುಂಬಕ್ಕೆ ತುತ್ತು ಅನ್ನ ನೀಡಲಾರದ ಅನೇಕ ನಿಸ್ಸಹಾಯಕರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ವರದಿಗಳು ಪತ್ರಿಕೆಗಳಲ್ಲಿ ಬರುತ್ತಲೇ ಇರುತ್ತಿವೆ.
ಇವರಲ್ಲಿ ಒಬ್ಬನಾದರೂ ಮುಸಲ್ಮಾನನು ಇದ್ದಾನೆಯೆ?
God forbid, ನಾನು ಅದನ್ನು ಬಯಸುತ್ತೇನೆ ಎಂದು ಹೇಳುತ್ತಿಲ್ಲ.
ಆದರೆ, suicide is the unfortunate barometer for judging the community that is really suffering ಎನ್ನುವದು ನನ್ನ ಅಭಿಪ್ರಾಯ.
ವಸ್ತುಸ್ಥಿತಿ ಹೀಗಿದ್ದಾಗ, ಸಾಚಾರರು ಮುಸಲ್ಮಾನರಿಗೆ ವಿಶೇಷವಾಗಿ ಉದ್ಯೋಗ ನೀಡಬೇಕು, ಉದ್ಯೋಗಸಾಲ ನೀಡಬೇಕು; ಯಾಕೆಂದರೆ ಅವರ ವಿರುದ್ಧ ಉದ್ದೇಶಪೂರ್ವಕವಾಗಿ ಅನ್ಯಾಯ ನಡೆದಿದೆ ಎಂದು ನಿರ್ಣಯ ನೀಡುತ್ತಾರೆ.
ಇದು ಕಪೋಲಕಲ್ಪಿತವಲ್ಲವೆ?
ನಿಜ ಹೇಳಬೇಕೆಂದರೆ, ಅನೇಕ ಉದ್ಯೋಗಗಳು ಮುಸಲ್ಮಾನ-ಕೇಂದ್ರಿತವೇ ಆಗಿವೆ.
ಉದಾಹರಣೆಗೆ, ಕಾಯಿಪಲ್ಲೆ ಹಾಗೂ ಹಣ್ಣುಗಳನ್ನು ಬೆಳೆದು, ಸಾಲ ಮಾಡಿ, ಕೈ ಸುಟ್ಟುಕೊಂಡು, ಸಂಕಷ್ಟಕ್ಕೆ ಸಿಲುಕಿದಾಗ ಆತ್ಮಹತ್ಯೆಗೆ ಶರಣಾಗುವ ರೈತರು ಸಹಸಾ ಹಿಂದೂಗಳು.
ಕಾಯಿಪಲ್ಲೆ ಹಾಗೂ ಹಣ್ಣುಗಳನ್ನು ಪೇಟೆಯಲ್ಲಿ ಮಾರಿ, ಎಂತಹದೇ ಪರಿಸ್ಥಿತಿಯಲ್ಲಿಯೂ ಲಾಭ ಮಾಡಿಕೊಳ್ಳುವ ಬಾಗವಾನರು ಸಹಸಾ ಮುಸಲ್ಮಾನರು.
ನಾನು ಇಲ್ಲಿ ಮುಸಲ್ಮಾನರ ವಿರುದ್ಧ ಮಾತನಾಡುತ್ತಿಲ್ಲ.
ನಾನು ಬರೆಯುತ್ತಿರುವದು ಸಾಚಾರ ವರದಿ ಎಂತಹ ಕೆಲಸಕ್ಕೆ ಬಾರದ ಕಂತೆಯಾಗಿದೆ ಎನ್ನುವದರ ಬಗೆಗೆ ; ಅಂಕಿಅಂಶಗಳನ್ನು ಹೇಗೆ ಸಾಚಾರರು ತಿರುಚಿ ಉಪಯೋಗಿಸಿಕೊಳ್ಳುತ್ತಿದ್ದಾರೆ ಎನ್ನುವದರ ಬಗೆಗೆ.
ಸಾಚಾರ ವರದಿಯಲ್ಲಿ ಏನೂ ‘ಸಾಚಾ’ ಇಲ್ಲ ; ಇದು ನಿಜವಾಗಿಯೂ ‘ಅವಿಚಾರ ವರದಿ’.
ಸುಮಾರು ಎರಡು ಶತಕಗಳ ಹಿಂದೆ ಹಾಡಿದ ಶರೀಫರ ಹಾಡು ಸಾಚಾರ ವರದಿಗೆ ಸರಿಯಾಗಿ ಅನ್ವಯಿಸುತ್ತದೆ:
“ತರವಲ್ಲ ತಗಿ ನಿನ್ನ ತಂಬೂರಿ,
ಸ್ವರ ಬರದೆ ಬಾರಿಸದಿರು ತಂಬೂರಿ!”

Monday, November 3, 2008
ಸಂಯುಕ್ತ ಕರ್ನಾಟಕ: ಅಪಶಬ್ದಕೋಶ
‘ಸಂಯುಕ್ತ ಕರ್ನಾಟಕ’ ದಿನಪತ್ರಿಕೆಯ ಸಂಪಾದಕ ಶ್ರೀ ಕೃಷ್ಣಮೂರ್ತಿ ಹೆಗಡೆ ಇವರಿಗೆ ಈ ವರ್ಷದ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.
ಶ್ರೀಯುತರಿಗೆ ಅಭಿನಂದನೆಗಳು.
ಸಂಯುಕ್ತ ಕರ್ನಾಟಕ ಪತ್ರಿಕೆಗೆ ೭೫ ವರ್ಷಗಳ ಇತಿಹಾಸವಿದೆ.
ಭಾರತದ ಸ್ವಾತಂತ್ರ್ಯ ಹಾಗೂ ಕರ್ನಾಟಕದ ಏಕೀಕರಣಕ್ಕಾಗಿ ಈ ಪತ್ರಿಕೆ ಸಾಕಷ್ಟು ದುಡಿದಿದೆ.
ಆದರೆ,ಇತ್ತೀಚಿನ ದಿನಗಳಲ್ಲಿ ಈ ಪತ್ರಿಕೆ ಕನ್ನಡ ಭಾಷೆಯನ್ನು ಕುಲಗೆಡಿಸುವದರಲ್ಲಿ ಅಪಾರ ಸಾಧನೆ ಮಾಡುತ್ತಿದೆ.
ಕಾಗುಣಿತದ ತಪ್ಪುಗಳ ಮೂಲಕ ‘ಕನ್ನಡ ಅಪಶಬ್ದ ಕೋಶ’ಕ್ಕೆ ಪ್ರತಿದಿನವೂ ಅಪಾರ ಕೊಡುಗೆಯನ್ನು ನೀಡುತ್ತಿರುವದಕ್ಕಾಗಿಯೇ ‘ಸಂಯುಕ್ತ ಕರ್ನಾಟಕ’ಕ್ಕೆ ಈ ಪ್ರಶಸ್ತಿ ಲಭಿಸಿರಬೇಕೆಂದು ನನ್ನ ಭಾವನೆ.
ನಿಜ ಹೇಳಬೇಕೆಂದರೆ ಕನ್ನಡದಲ್ಲಿ ಕಾಗುಣಿತದ ತಪ್ಪುಗಳನ್ನು ಸಂಶೋಧಿಸಲು ಹೊರಟವರಿಗೆ ‘ಸಂಯುಕ್ತ ಕರ್ನಾಟಕ’ ಅದ್ಭುತ ನಿಧಿಯಂತಾಗಿದೆ.
ಅಭಿನಂದನೆಗಳು, ಸಂಪಾದಕರೆ!
ಕನ್ನಡ ಸರಸ್ವತಿಯನ್ನು ಅಪಶಬ್ದಗಳ ಮೂಲಕ ದಿನವೂ ಚುಚ್ಚಿ ಕೊಲ್ಲುತ್ತಿರುವ ನಿಮ್ಮ ಪಾಂಡಿತ್ಯಕ್ಕೆ ಕನ್ನಡಿಗರು ಮೂಕವಿಸ್ಮಿತರಾಗಿದ್ದಾರೆ.
ಎಷ್ಟೇ ಪಾಂಡಿತ್ಯವಿದ್ದರೂ, ಅಪಶಬ್ದಗಳ ಬಗೆಗೆ ಕೆಲವೊಮ್ಮೆ ನಿಮಗೂ ಸಹ ಸಂಶಯ ಬರುವದುಂಟು.
ಅಂತಹ ಸಂದರ್ಭದಲ್ಲಿ ಅಪಶಬ್ದ ಹಾಗೂ ಸರಿಯಾದ ಶಬ್ದಗಳನ್ನು ಸಮಾನ ಪ್ರಮಾಣದಲ್ಲಿ ಬಳಸುವಂತಹ ಜಾಣತನವನ್ನು ನೀವು ತೋರಿಸುತ್ತಿದ್ದೀರಿ.
ಹೀಗೆ ಮಾಡುವದರಿಂದ, ಶೇಕಡಾ ೫೦ರಷ್ಟಾದರೂ ಅಪಶಬ್ದಗಳನ್ನು ಬಳಸಿದಂತಾಗುವದಿಲ್ಲವೆ?
ಉದಾಹರಣೆಗೆ ನವೆಂಬರ ೨ನೆಯ ದಿನಾಂಕದಂದು ಪ್ರಕಟಿಸಿದ ಸಂಯುಕ್ತ ಕರ್ನಾಟಕದ ೧೦ನೆಯ ಪುಟದಲ್ಲಿಯ ವರದಿಯನ್ನು ನೋಡಿರಿ:
’ಶಿಷ್ಟಾಚಾರ ಪಾಲಿಸದ ಜಿಲ್ಲಾಧಿಕಾರಿ’ಎನ್ನುವ ಈ ವರದಿಯಲ್ಲಿ ‘ಶಿಷ್ಟಾಚಾರ’ವನ್ನು ೪ ಬಾರಿ ಹಾಗೂ ‘ಶಿಷ್ಠಾಚರ’ವನ್ನು ೪ ಬಾರಿ ಬಳಸಿದ್ದೀರಿ.
ಎಂತಹ ಜಾಣತನ!
ಸರಿಯಾದ ಪದವು ಗೊತ್ತಿರಲಿ, ಇಲ್ಲದಿರಲಿ, ಅದರ ಬಳಕೆಯನ್ನು ಶೇಕಡಾ ೫೦ಕ್ಕೆ ಮಾತ್ರ ಪರಿಮಿತಗೊಳಿಸಿದಂತಾಗಲಿಲ್ಲವೇ!
ಇನ್ನು ಇದೇ ಪತ್ರಿಕೆಯ ೧೧ನೆಯ ಪುಟದಲ್ಲಿಯ ವರದಿಯನ್ನು ನೋಡಿರಿ.
‘ಗುರುವರ್’ ಪ್ರಶಸ್ತಿಗಾಗಿ ನಾಮಕರಣಗಳ ಪೂರ ಎಂದು ಪ್ರಕಟಿಸಿದ್ದೀರಿ.
ಸ್ವಾಮಿ ‘ವರ್’ ಎನ್ನುವ ಪದ ಕನ್ನಡದಲ್ಲಿ ಇಲ್ಲ.
‘ವರ’ ಎನ್ನುವ ಪದಕ್ಕೆ ಶ್ರೇಷ್ಠ ಎನ್ನುವ ಅರ್ಥವಿದೆ. ಇದು ‘ಗುರುವರ’ ಎಂದಾಗಬೇಕಿತ್ತು.
ಆದರೆ ಅಪಶಬ್ದಕೋಶವನ್ನು ಟಂಕಿಸಲು ಹೊರಟ ನೀವು ‘ಗುರುವರ್’ ಎನ್ನುವ ಪದವನ್ನು ಬಳಸಿದ್ದರಲ್ಲಿ ಅಚ್ಚರಿಯಿಲ್ಲ.
ಕಿಟ್ಟೆಲ್ ಕೋಶದಲ್ಲಿ ಬರೀ ತಪ್ಪುಗಳೇ ತುಂಬಿವೆ; ಆ ಶಬ್ದಕೋಶವನ್ನು ಸರಿಪಡಿಸುವ ಅಗತ್ಯವಿದೆ ಎಂದು ನೀವು ಭಾವಿಸಿದಂತಿದೆ.
ಅದಕ್ಕಾಗಿಯೇ, ಕಿಟ್ಟೆಲ್ ಕೋಶಕ್ಕೆ ಸಮಾಂತರವಾಗಿ ಒಂದು ಅಪಶಬ್ದಕೋಶವನ್ನು ನೀವು ನಿಮ್ಮ ಪತ್ರಿಕೆಯ ಮೂಲಕ ರೂಪಿಸುತ್ತಿರುವಿರಾ?
ನಿಮ್ಮ ಘನ ಪತ್ರಿಕೆಯಲ್ಲಿ ಪ್ರಸೂತವಾದ ಕೆಲವು ಅಪಶಬ್ದಗಳನ್ನು ಹೆಕ್ಕಿಕೊಂಡಿದ್ದೇನೆ.
ಇತರ ಕನ್ನಡಿಗರ ಕಣ್ಣಿಗೂ ಅವು ಬೀಳಲಿ ಎಂದು ಅವನ್ನು ಇಲ್ಲಿ ಕೊಡುತ್ತಿದ್ದೇನೆ.
(ಕನ್ನಡಿಗರೇ, ಎಚ್ಚರಿಕೆ; ಈ ಅಪಶಬ್ದಗಳನ್ನು ನೋಡಿ ಕಣ್ಣು ಕುರುಡಾದರೆ ನಾವು ಜವಾಬುದಾರರಲ್ಲ!)
ಕೆಳಗಿನ ಪಟ್ಟಿಯಲ್ಲಿ ಮೊದಲನೆಯದು ಅಪಶಬ್ದ, ಮುಂದಿನದು ಸರಿಯಾದ ಪದ.
ಉಚ್ಛ…………........ಉಚ್ಚ
ಸರ್ವೋಚ್ಛ………...... ಸರ್ವೋಚ್ಚ
ನಿಚ್ಛಳ…………....... ನಿಚ್ಚಳ
ಸಮುಚ್ಛಯ……....... ಸಮುಚ್ಚಯ
ದ್ರುವೀಕರಣ………...... ಧ್ರುವೀಕರಣ
ಅನುಗೃಹ………....... ಅನುಗ್ರಹ
ಭೋಗಸ್………....... ಬೋಗಸ್
ಥಳಕು ಹಾಕಿದ……...... ತಳಕು ಹಾಕಿದ
ಸೌಹಾರ್ದ್ರ………....... ಸೌಹಾರ್ದ
ಪ್ರಾಂಥ…………....... ಪ್ರಾಂತ
ಸೋಲ್ಲು………....... ಸೊಲ್ಲು
ಧೃವ……………........ ಧ್ರುವ
ಶೃತಿ……………........ ಶ್ರುತಿ
ಖೂಟ…………........ ಕೂಟ
ಛಾಳಿ……………........ ಚಾಳಿ
ನೈರುತ್ಯ…………....... ನೈಋತ್ಯ
ಜಾರ್ಕಂಡ………....... ಝಾರಖಂಡ
ಅಲ್ ಖೈದಾ……...... ಅಲ್ ಕೈದಾ
ಕೃತಗ್ನ…………........ ಕೃತಜ್ಞ
ಕೃತಗ್ನ…………........ ಕೃತಘ್ನ
ಡಾಬ……………....... ಧಾಬಾ
ಕಳ್ಳ ಬಟ್ಟಿ………....... ಕಳ್ಳ ಭಟ್ಟಿ
(ಬೆಳಗಾವಿಯ) ಕುಂದದಂತಹ….(ಬೆಳಗಾವಿಯ) ಕುಂದಾದಂತಹ
ಅಲ್ಲ……………....... ಅಲ್ಲಾ
ಶಿಲನ್ಯಾಸ………....... ಶಿಲಾನ್ಯಾಸ
ಢಾಕ……………........ ಡಾಕಾ
ಇಂತಹ ನೂರಾರು ಅಪಶಬ್ದಗಳನ್ನು ಅನಾಯಾಸವಾಗಿ ನೋಡಬೇಕೆಂದರೆ, ‘ಸಂಯುಕ್ತ ಕರ್ನಾಟಕ’ವನ್ನು ತಪ್ಪದೇ ಓದಿರಿ.
ಆದರೆ ಚಿಕ್ಕ ಮಕ್ಕಳ ಕೈಗೆ ಸಿಗದಂತೆ ಈ ಪತ್ರಿಕೆಯನ್ನು ಜೋಪಾನವಾಗಿ ತೆಗೆದಿರಿಸಿರಿ.
ಎಚ್ಚರ! (statutory warning:)
ಈ ಅಪಶಬ್ದಗಳನ್ನೇ ಸರಿಯಾದ ಶಬ್ದಗಳೆಂದು ಮಕ್ಕಳು ಭಾವಿಸಬಹುದು.

Friday, October 24, 2008
ಸುಷ್ಮಸಿಂಧುರವರ ಕನಸು
ಕನಸುಗಳಿಗಾಗಿಯೇ ಮೀಸಲಾಗಿಟ್ಟ ಕನ್ನಡ ತಾಣವೆಂದರೆ ಸುಷ್ಮಸಿಂಧುರವರ
ಕಂಡೆನೊಂದು ಕನಸು.
ಹಾಗೆಂದು ಇದು ಹಗಲುಗನಸಿನ ತಾಣವಲ್ಲ. ಅವರ ನೈಜ ಕನಸುಗಳ ತಾಣವಿದು.
ಕನಸುಗಳ ವೈಜ್ಞಾನಿಕ ಸಂಶೋಧನೆ ಖ್ಯಾತ ಮನೋವಿಜ್ಞಾನಿ ಫ್ರಾಯ್ಡ್‌ನಿಂದ ಆರಂಭವಾಯಿತೆನ್ನಬಹುದು. ಮನದ ಆಳದಲ್ಲಿ ಸರಿಸಿದ (repressed) ಅಥವಾ ಹುದುಗಿದ (suppressed) ಭಾವನೆಗಳು ಕನಸುಗಳನ್ನು ಹೇಗೆ ರಚಿಸುತ್ತವೆ ಎನ್ನುವದಕ್ಕೆ ಫ್ರಾಯ್ಡ್ ಅನೇಕ ವಿವರಣೆಗಳನ್ನು ನೀಡಿದರು.
ಸುಷ್ಮಸಿಂಧುರವರ ಕನಸುಗಳು ಸಾಮಾನ್ಯ ಕನಸುಗಳಿಗಿಂತ ಭಿನ್ನವಾಗಿವೆ ಎನ್ನುವದನ್ನು ಅವರ ತಾಣಕ್ಕೆ ಭೆಟ್ಟಿಯಿತ್ತವರೆಲ್ಲ ಕಂಡಿದ್ದಾರೆ.
ಈ ಕನಸುಗಳನ್ನು ಆಧರಿಸಿ, ಸುಷ್ಮಸಿಂಧುರವರು “ಪಯಣ ಸಾಗಿದಂತೆ” ಎನ್ನುವ ಒಂದು ಕಥಾಸಂಕಲನವನ್ನೇ ಬರೆದರು (೨೦೦೫).
ಇಲ್ಲಿಯ ಕತೆಗಳೂ ಸಹ ಸಾಮಾನ್ಯ ಕತೆಗಳಿಗಿಂತ ಭಿನ್ನವಾಗಿಯೇ ಇವೆ.
ಈ ಕತೆಗಳನ್ನು ನಾನು ‘ಅಂತರಂಗದ ತೊಳಲಾಟದ ಕತೆಗಳು’ ಎಂದು ಕರೆಯಲು ಬಯಸುತ್ತೇನೆ.
ಪ್ರತಿವ್ಯಕ್ತಿಯ ಮನಸ್ಸಿನಲ್ಲಿಯೂ ಅನೇಕ ದ್ವಂದ್ವಗಳು ಉದ್ಭವಿಸುತ್ತವೆ.
ಈ ದ್ವಂದ್ವಗಳು ಜೊತೆಜೊತೆಯಾಗಿಯೇ ಸಹವಾಸ ಮಾಡುತ್ತವೆ, ಹೋರಾಡುತ್ತವೆ;
ಕೆಲವೊಮ್ಮೆ ಒಂದು normal ಭಾವನೆಯ ಕೈ ಮೇಲಾಗಬಹುದು, ಕೆಲವೊಮ್ಮೆ ಅಸ್ವಾಭಾವಿಕ ಭಾವನೆಯೇ ಮೇಲೇರಬಹುದು.
ಈ ಭಾವನೆಗಳಿಗೆ ವ್ಯಕ್ತಿರೂಪ ನೀಡಿ ಬರೆದ ಕತೆಗಳು ಈ ಸಂಕಲನದಲ್ಲಿವೆ.
ಈ ಸಂಕಲನದ ಮೊದಲ ಕತೆ “ಅನ್ಯ” ಕಸ್ತೂರಿ ಮಾಸಪತ್ರಿಕೆಯಲ್ಲಿ ಪ್ರಕಟವಾಗಿತ್ತು.
ಶವಾಗಾರದ ರಾತ್ರಿ-ಕಾವಲುಗಾರನೊಬ್ಬನ ಕತೆಯಿದು.
ಈ ಕಾವಲುಗಾರನ inter action ಇರುವದು ಅಲ್ಲಿಯ ಶವಗಳ ಜೊತೆಗೆ ಮಾತ್ರ.
ಆತನಿಗೆ real ವ್ಯಕ್ತಿಗಳ ಜೊತೆಗೆ ಸಂಬಂಧ ಸಾಧ್ಯವಿಲ್ಲ.
ತನ್ನ ಅಂತರಂಗದಲ್ಲಿಯೇ ಬಂದಿಯಾದ ವ್ಯಕ್ತಿಯ ಚಿತ್ರಣ ಇಲ್ಲಿ ಸಮರ್ಥವಾಗಿ ಬಂದಿದೆ.
“ಬೆಳಕನ್ನರಸುತ್ತಾ” ಹಾಗು “ಶೋಧನಾ” ಕತೆಗಳಲ್ಲಿ ಕಾಣುವ ಮನೋಸ್ಥಿತಿ ಬೇರೆ ಬಗೆಯದು.
ಅಂತಿಮ ಸತ್ಯ ಏನು ಎನ್ನುವದನ್ನು ಅರಿತುಕೊಳ್ಳಲು ಸಿದ್ಧಾರ್ಥನು ಮಧ್ಯರಾತ್ರಿಯಲ್ಲಿ ಎದ್ದು ಹೋದನಲ್ಲ----ಆ ಬಗೆಯ ತೊಳಲಾಟದ ಕತೆಗಳಿವು.
ಈ ಕಥಾಸಂಕಲನದ ವಿವಿಧ ಕತೆಗಳಲ್ಲಿ ನಾವು ಕಾಣುವದು ಈ ತೊಳಲಾಟವನ್ನು ;
ಪಂಜರದಲ್ಲಿ ಸಿಲುಕಿದ ಹಕ್ಕಿ ಹೊರಹಾರಲೆಂದು ರೆಕ್ಕೆ ಬಡೆಯುವ ಯತ್ನವನ್ನು.
ಉತ್ತಮ ಲೇಖಕಿಯೂ ಆದ ಸುಷ್ಮಸಿಂಧು ತಮ್ಮ ಕನಸುಗಳಿಂದಾಗಿ ನಮ್ಮೆಲ್ಲರ ಕುತೂಹಲ ಕೆರಳಿಸಿದ್ದಾರೆ.
ಅವರ ಮನೋಪಕ್ಷಿಯ ಪಯಣ ಸಫಲವಾಗಲಿ.

Wednesday, October 15, 2008
ವಸುಧೇಂದ್ರರ ಸಂವೇದನಾ ಲೋಕ
ವಸುಧೇಂದ್ರರು ಈವರೆಗೆ ಮೂರು ಕಥಾಸಂಕಲನಗಳನ್ನು ಪ್ರಕಟಿಸಿದ್ದಾರೆ:
(೧) ಮನೀಷೆ
(೨) ಚೇಳು
(೩) ಯುಗಾದಿ.
ಈ ಮೂರು ಕಥಾಸಂಕಲನಗಳಲ್ಲಿ ಒಟ್ಟು ೩೭ ಕಥೆಗಳಿವೆ.
ಈ ಮೂವತ್ತೇಳೂ ಕತೆಗಳನ್ನು ಓದಿದಾಗ ಅವುಗಳಲ್ಲಿ ಮೂರು ಮೂಲಲಕ್ಷಣಗಳನ್ನು ಗುರುತಿಸಬಹುದು:
(೧) ವಸುಧೇಂದ್ರರ ಕತೆಗಳಲ್ಲಿ ಬರುವ ಸಮಾಜಗಳು ಎರಡು ತರಹದವು . ಒಂದು ಸಾಂಪ್ರದಾಯಕ ಸಮಾಜ; ಮತ್ತೊಂದು ಆಧುನಿಕ ಸಮಾಜ. ಇವೆರಡೂ ಸಮಾಜಗಳಲ್ಲಿ ವಸುಧೇಂದ್ರರು ಗುರುತಿಸುವ ಸಾಮಾನ್ಯ ಅಂಶವೆಂದರೆ ನಿಷ್ಕರುಣಿಯಾದ ಸಮಾಜವ್ಯವಸ್ಥೆ. ಕತೆಯ ಹಿನ್ನೆಲೆ ಸಾಂಪ್ರದಾಯಕ ಸಮಾಜದ್ದೇ ಇರಲಿ ಅಥವಾ ಆಧುನಿಕ ಸಮಾಜದ್ದೇ ಇರಲಿ, ಈ ಸಮಾಜವ್ಯವಸ್ಥೆಯು ಎಷ್ಟು ನಿರ್ದಯದಿಂದ ಅಸಹಾಯಕರನ್ನು ಹೊಸಕಿ ಹಾಕುತ್ತದೆ ಎನ್ನುವದು ಇಲ್ಲಿಯ ಕತೆಗಳ ಒಂದು ಮೂಲ ಲಕ್ಷಣ.
(೨) ಸಾಂಪ್ರದಾಯಕ ಸಮಾಜದ ಇಂತಹ ವ್ಯವಸ್ಥೆಯಲ್ಲಿ ತೊಳಲಾಡುತ್ತಿರುವ ಅಸಹಾಯಕ ಜೀವಿಗಳಲ್ಲಿ ಉಳಿದಿರುವ ಮೌಲ್ಯನಿಷ್ಠೆಯ ಚಿತ್ರಣವು ಇಲ್ಲಿಯ ಕತೆಗಳ ಎರಡನೆಯ ಮೂಲಲಕ್ಷಣ.
(೩) ಮೂರನೆಯದಾಗಿ ಇಂತಹ ವ್ಯವಸ್ಥೆಯ ಯಲ್ಲಿ ಸಿಲುಕಿ ನಲುಗುತ್ತಿರುವ ಅಸಹಾಯಕ ಜೀವಿಗಳ ಬಗೆಗೆ ವಸುಧೇಂದ್ರರಿಗೆ ಇರುವ ಅನುಕಂಪ.
ಅಸಹಾಯಕರ ಕತೆಗಳನ್ನು ಬರೆದಿರುವವರಲ್ಲಿ ವಸುಧೇಂದ್ರರು ಮೊದಲಿಗರೇನೂ ಅಲ್ಲ. ಕನ್ನಡದ ಶ್ರೇಷ್ಠ ಕತೆಗಾರರಾದ ದೇವನೂರು ಮಹಾದೇವ ಸಹ feudal ಸಮಾಜವ್ಯವಸ್ಥೆಯಲ್ಲಿ ಸಿಲುಕಿ ನಲುಗುತ್ತಿರುವ ಪಾತ್ರಗಳನ್ನು ಸೃಷ್ಟಿಸಿದ್ದಾರೆ. ಅವರ “ಮಾರಿಕೊಂಡವರು” ಕತೆ ವಿಶ್ವದ ಅತ್ಯುತ್ತಮ ಕತೆಗಳಲ್ಲಿ ಒಂದು ಎಂದು ಹೇಳಬಹುದು. ಆದರೆ ಈ ಕತೆ ಸಾಮಾಜಿಕ ವ್ಯವಸ್ಥೆ ನಿರ್ಮಿಸಿದ ಶೋಷಣೆಯನ್ನು ನಿರುದ್ವಿಗ್ನವಾಗಿ ಹೇಳುವ ಕತೆ. ಅಮರೇಶ ನುಗಡೋಣಿಯವರ ಕತೆಗಳನ್ನೂ ಸಹ ಇದೇ ವರ್ಗದಲ್ಲಿ ಸೇರಿಸಬಹುದು.
ಇನ್ನು ರಾಘವೇಂದ್ರ ಖಾಸನೀಸರು ಸಹ ತಮ್ಮ ಎಲ್ಲ ಕತೆಗಳಲ್ಲಿಯೂ ಅಸಹಾಯಕ ಜೀವಿಗಳನ್ನೇ ಮುಖ್ಯ ಪಾತ್ರಗಳನ್ನಾಗಿ ಮಾಡಿದ್ದಾರೆ. ಆದರೆ ಅವರ ಬಹುತೇಕ ಕತೆಗಳಲ್ಲಿ ವೈಯಕ್ತಿಕ ಅಥವಾ ಕೌಟಂಬಿಕ ಸಮಸ್ಯೆಯೇ ಅಸಹಾಯಕತೆಯ ಕಾರಣವಾಗಿದೆ. ಅವರ ಕತೆಗಳಲ್ಲಿ ಕಾಣುವದು ಕರುಣರಸವೇ ಹೊರತು ಸಹಾನುಭೂತಿಯಲ್ಲ.
ದೇವನೂರ ಮಹಾದೇವ, ಅಮರೇಶ ನುಗಡೋಣಿ ಹಾಗು ರಾಘವೇಂದ್ರ ಖಾಸನೀಸರ ಕತೆಗಳಿಗೂ ಮತ್ತು ವಸುಧೇಂದ್ರರ ಕತೆಗಳಿಗೂ ಇರುವ ಮುಖ್ಯ ವ್ಯತ್ಯಾಸವೆಂದರೆ ಸಮಾಜದ ವ್ಯವಸ್ಥೆಯಲ್ಲಿ ಬಲಿಪಶುಗಳಾದವರಿಗೆ ವಸುಧೇಂದ್ರರ ಹೃದಯದಲ್ಲಿ ಉಕ್ಕುತ್ತಿರುವ ಸಹಾನುಭೂತಿ; ಹೀಗಾಗಿ ಅವರ ಕತೆಗಳಲ್ಲಿ ಅನುಕಂಪವೇ ಪ್ರಧಾನ ರಸವಾಗುತ್ತದೆ.
ಈ ಮೇಲಿನ ಮೂರು ಕಥಾಸಂಕಲನಗಳಲ್ಲಿ, ವಸುಧೇಂದ್ರರು ಮೊದಲು ಒಂದು ಸಾಂಪ್ರದಾಯಕ ಸಮಾಜದ ಕತೆಯನ್ನು, ಆನಂತರ ಒಂದು ಆಧುನಿಕ ಸಮಾಜದ ಕತೆಯನ್ನು ಕೊಡುತ್ತಾ ಹೋಗಿದ್ದಾರೆ. ಈ ರೀತಿಯಾಗಿ ತಮ್ಮ ಸಂಕಲನಗಳಲ್ಲಿ ಒಂದು ರೀತಿಯ ಸಮತೋಲನವನ್ನು ಸಾಧಿಸಲು ಯತ್ನಿಸಿದ್ದಾರೆ. ಆದರೆ ಅವರ ಬಹುತೇಕ ಕತೆಗಳಲ್ಲಿ ಸಂಕಟಪಡುವ ಪಾತ್ರವೆಂದರೆ ಒಬ್ಬ ಅಸಹಾಯಕ ಹೆಣ್ಣು ಮಗಳು.
“ಮನೀಷೆ” ಕಥಾಸಂಕಲನದ ಮೊದಲ ಕಥೆಯಾದ “ನಮ್ಮ ವಾಜೀನ್ನೂ ಆಟಕ್ಕೆ ಸೇರಿಸ್ಕೊಳ್ರೋ” ಕತೆಯನ್ನು ಉದಾಹರಣೆಗೆ ತೆಗೆದುಕೊಳ್ಳಬಹುದು. ಒಂದು ಹಳೆಯ ಕಾಲಘಟ್ಟದ ಬ್ರಾಹ್ಮಣ ಸಮಾಜದ ಚಿತ್ರಣ ಇಲ್ಲಿದೆ.
ಮೈಗೆ ಅಲ್ಲಲ್ಲಿ ಬಿಳುಪು ಹತ್ತುತ್ತಿರುವ ತನ್ನ ಮಗನ ಭವಿಷ್ಯದ ಬಗೆಗೆ ಹೌಹಾರಿದ ವಿಧವೆಯ ಕತೆ ಇದು.
ಮಗನ ರೋಗಶಮನಕ್ಕಾಗಿ ಇವಳಿಗೆ ರಾಘವೇಂದ್ರಸ್ವಾಮಿಗಳ ಹರಕೆಯೇ ದಿವ್ಯೌಷಧ.
ನಡು ವಯಸ್ಸಿನಲ್ಲಿಯೆ ಗಂಡನನ್ನು ಕಳೆದುಕೊಂಡ ಬ್ರಾಹ್ಮಣ ಹೆಣ್ಣುಮಗಳೊಬ್ಬಳು ತನ್ನ ಹಾಗು ತನ್ನ ಚಿಕ್ಕ ಮಗನ ಹೊಟ್ಟೆ ತುಂಬಿಸಲು ಅಡುಗೆ ಕೆಲಸವನ್ನಲ್ಲದೆ ಬೇರಾವ ಕೆಲಸ ಮಾಡಬಲ್ಲಳು? ಇವಳಿಗೆ ಅಣ್ಣನೊಬ್ಬನಿದ್ದಾನೆ. ಆದರೆ ಎಲ್ಲ ಅಣ್ಣಂದಿರಂತೆ ಇವಳ ಅಣ್ಣನೂ ಸಹ ತನ್ನ ಹೆಂಡತಿಯ ಕೈಗೊಂಬೆ. ಅವನಿಗೆ ಇವಳ ಮೇಲೆ, ಇವಳ ಮಗನ ಮೇಲೆ ಕನಿಕರವಿರಬಹುದು. ಆದರೆ ಅದು ಪ್ರಯೋಜನಕ್ಕೆ ಬಾರದ ಕನಿಕರ. ಅಲ್ಲದೆ ಬ್ರಾಹ್ಮಣ ಸಮಾಜದ ಕ್ರೂರ ಕಟ್ಟಳೆಗಳು ಬೇರೆ. ಹೀಗಾಗಿ ಅವನೂ ಅಸಹಾಯಕ.
ಈ ಕತೆಯಲ್ಲಿಯ ಬ್ರಾಹ್ಮಣ ಸಮಾಜ ಕೊಳೆಯುತ್ತಿರುವ ಸಮಾಜವಲ್ಲ ; ಈಗಾಗಲೇ ಕೊಳೆತು ಹೋದ ಸಮಾಜ.
ಬಿಳುಪು ಕಾಣುತ್ತಿರುವ ತನ್ನ ಚಿಕ್ಕ ಮಗನಿಗೆ ಬ್ರಾಹ್ಮಣಸಮಾಜದಲ್ಲಿ acceptance ಕೊಡಿಸಲು ಈ ವಿಧವೆ ಸಂಕಟಪಡುತ್ತಿದ್ದಾಳೆ. ಮಠದ ಸ್ವಾಮಿಗಳ ಸಮಾರಂಭದಲ್ಲಿ, ತಾನು ಅಡುಗೆ ಮಾಡಿ, ತನ್ನ ಮಗನ ಕೈಯಿಂದ ನೀರು ಬಡಿಸಲು ಇವಳು ಶತಪ್ರಯತ್ನ ಮಾಡುತ್ತಾಳೆ. ಆದರೆ, ಕೊನೆಗೂ ಸ್ವಾಮಿಗಳ ಬಾಯಿಂದ ಛೀತ್ಕಾರ:
“ ದೇವರ ಪೂಜೆ ಮಾಡುವ ಈ ಕೈಗಳಿಗೆ, ಈ ತೊನ್ನು ಹತ್ತಿದವನ ಸ್ಪರ್ಷವೇ! ತೊಲಗಿಸಿರಿ ಇವನನ್ನು ಇಲ್ಲಿಂದ!”
ಬಹುಶ: ಈ ಮಾತನ್ನು ಈ ಕತೆಯ climax ಎನ್ನಬಹುದು.
(‘ದಯವೇ ಧರ್ಮದ ಮೂಲವಯ್ಯ’ ಎನ್ನುವ ಬಸವಣ್ಣನವರ ಮಾತು ಅಪ್ರಯತ್ನವಾಗಿ ಓದುಗನ ಮನಸ್ಸಿನಲ್ಲಿ ಆಗ ಸುಳಿಯದಿರದು.)
ಆದರೆ ಕತೆಯ ಹೆಚ್ಚುಗಾರಿಕೆ ಕೇವಲ ಈ climaxನಲ್ಲಿ ಮಾತ್ರವಿಲ್ಲ.
ಈ ಭರ್ತ್ಸನೆಯ ನಂತರವೂ ಆ ವಿಧವೆ ಎದೆಗುಂದುವದಿಲ್ಲ. ತನ್ನ ಮಗನ ಒಳಿತಿಗಾಗಿ ಅವಳ ಹೋರಾಟ ನಿಲ್ಲುವದಿಲ್ಲ.
ಕತೆಯ ಹೆಚ್ಚುಗಾರಿಕೆ ಇರುವದು ಇಂತಹ ಪರಾಭವದಲ್ಲೂ ಆ ವಿಧವೆ ತೋರಿಸುವ ಧೈರ್ಯದಲ್ಲಿದೆ. ಸಾಂಪ್ರದಾಯಕ ಸಮಾಜದ ಮೌಲ್ಯಗಳು ಒಬ್ಬ ಅಸಹಾಯಕ ವಿಧವೆಯಲ್ಲಿ ತುಂಬಬಹುದಾದ ಕೆಚ್ಚನ್ನು ತೋರಿಸುವದರಲ್ಲಿ ಈ ಕತೆಯ ಹೆಚ್ಚುಗಾರಿಕೆ ಇದೆ.
ಸಮಾಜದಿಂದ ಹಾಗೂ ತನ್ನ ಸ್ವಂತ ಗಂಡನಿಂದ ಅನ್ಯಾಯಕ್ಕೊಳಗಾಗಿಯೂ, ಕೆಚ್ಚಿನಿಂದ ಬದುಕು ಸಾಗಿಸಿದ ಹೆಣ್ಣು ಮಗಳ ಚಿತ್ರಣ ಸಿಗುವದು “ಚೇಳು” ಕತೆಯಲ್ಲಿ.
ತನ್ನ ಹೆಂಡತಿಗೆ ಮಕ್ಕಳಾಗಲೆಂದು ಭೈರವ ಬಾಬಾನ ಆಶೀರ್ವಾದ ಪಡೆಯಲು, ಮನಸ್ಸಿಲ್ಲದ ಹೆಂಡತಿಯನ್ನು ಕುರಿಯಂತೆ ನೂಕಿದ ಗಂಡ, ಬಾಬಾನ ಕಾಮಲೀಲೆಯನ್ನು ಕಂಡಾಗ, ಸಾರ್ವಜನಿಕವಾಗಿ ಹೆಂಡತಿಯ ಮಾನ ತೆಗೆಯಲು ಹೇಸುವದಿಲ್ಲ. ಅವಳ ತವರುಮನೆಯವರೂ ಸಹ ಈ ‘ಪತಿತೆ’ಯನ್ನು ತಿರಸ್ಕರಿಸುತ್ತಾರೆ. ಆದರೆ ಬಾಬಾ ತಾನು ಮಾಡಿದ ತಪ್ಪನ್ನು ಅರಿತು, ಈ ಅಸಹಾಯಕ ಹೆಣ್ಣು ಮಗಳಿಗೆ ಚೇಳಿನ ಮಂತ್ರವನ್ನು ಅನುಗ್ರಹಿಸಿ ಹೋಗುತ್ತಾನೆ. ಅವಳ ಬದುಕು ಈ ಚೇಳಿನ ಮಂತ್ರದ ಸಹಾಯದಿಂದ ಹೇಗೋ ಸಾಗುತ್ತಿರುತ್ತದೆ. ಆ ಸಮಯದಲ್ಲಿ ಆಧುನಿಕ ವೈಜ್ಞಾನಿಕ ಅನ್ವೇಷಣೆ ಅವಳ ಬದುಕಿಗೆ ಕುಠಾರವಾಗಿ ಬರುತ್ತದೆ. ಈ ಸಮಸ್ಯೆಗೆ ಅವಳು ಕಂಡುಕೊಳ್ಳುವ ಪರಿಹಾರವು ಅಸಹಾಯಕ ಜೀವಿಗಳು ಮೊರೆ ಹೋಗುವ ಏಕೈಕ ಮಾರ್ಗವಾಗಿದೆ. ಇಂತಹ ದುರಂತ ಕತೆಯನ್ನು ಸಹನೀಯವಾಗಿ ಮಾಡುವದು ವಸುಧೇಂದ್ರರ ವಿನೋದಪೂರ್ಣ ಶೈಲಿ.
ವಸುಧೇಂದ್ರರು ಬರೆದ ಇಂತಹ ಸಾಂಪ್ರದಾಯಿಕ ಸಮಾಜದ ಕತೆಗಳಲ್ಲಿಯೇ ಶ್ರೇಷ್ಠವಾದದ್ದು ‘ಚೇಳು’ ಕಥಾಸಂಕಲನದಲ್ಲಿಯ ಕತೆ: “ ಹೊಟ್ಟೆಯೊಳಗಿನ ಗುಟ್ಟು”.
ವಿಧವೆಯೊಬ್ಬಳು ಬ್ರಾಹ್ಮಣ ಕುಟುಂಬವೊಂದರಲ್ಲಿ ಮನೆಕೆಲಸ ಮಾಡುತ್ತ ಬದುಕು ಸಾಗಿಸುತ್ತಿದ್ದಾಳೆ. ದೀರ್ಘ ಕಾಲದ ನಂತರ ಅವಳ ಯಜಮಾನಿಯೂ ಸಹ ವಿಧವೆಯಾಗಿದ್ದಾಳೆ. ಇದಿಷ್ಟು ಕತೆಯಲ್ಲಿ ಬರೆಯದೆ ಇದ್ದ ಹಿನ್ನೆಲೆ.
ಇದೀಗ, ಯಜಮಾನಿಯ ಶ್ರಾದ್ಧದ ಕೊನೆಯ ವಿಧಿಯಾದ ಕಾಕಪಿಂಡದಿಂದ ಕತೆ ಪ್ರಾರಂಭವಾಗುತ್ತದೆ.
ನಗರದಲ್ಲಿ ವಾಸಿಸುತ್ತಿರುವ ಅವಳ ಮಗ ಶ್ರಾದ್ಧಕರ್ಮಕ್ಕಾಗಿ ಮನೆಗೆ ಬಂದಿದ್ದಾನೆ. ಕಾಕಪಿಂಡ ಆಗುತ್ತಿಲ್ಲ.
ಅಲ್ಲಿರುವ ಸಂಬಂಧಿಕರೆಲ್ಲರೂ ಪ್ರಯತ್ನಿಸುತ್ತಾರೆ. ಆದರೂ ಕಾಕಪಿಂಡ ಆಗುವದಿಲ್ಲ.
ಕೊನೆಗೊಮ್ಮೆ ಈ ಮನೆಕೆಲಸದ ಮುದಿ ವಿಧವೆಯಿಂದ ಕಾಕಪಿಂಡ ಆಗುತ್ತದೆ.
ಅವಳು ತನ್ನ ಯಜಮಾನಿಯ ಪಿಂಡಕ್ಕೆ ಹೇಳಿದ್ದೇನು?
ಅದು ಕತೆಯ ಮುಕ್ತಾಯದಲ್ಲಿಯೂ ಗುಟ್ಟಾಗಿಯೇ ಉಳಿಯುತ್ತದೆ.
ಈ ಕತೆಯಲ್ಲಿ, ಈ ಮನೆಗೆಲಸದ ವಿಧವೆಯ ಸಂಕಷ್ಟಗಳ ಬಗೆಗೆ ಎಲ್ಲಿಯೂ ಪ್ರತ್ಯಕ್ಷವಾಗಿ ಹೇಳಿಲ್ಲ. ಆದರೆ ಓರ್ವ ಅಸಹಾಯಕ ವಿಧವೆಯನ್ನು ಅವಳ ಆಶ್ರಯದಾತರು ಹಾಗೂ ಸಮಾಜ ಯಾವ ರೀತಿಯಲ್ಲಿ ಶೋಷಿಸಿರಬಹುದು, ಅವಳ ತಾಪಗಳಿಗೆ ಅವರು ಎಷ್ಟರ ಮಟ್ಟಿಗೆ insensitive ಆಗಿರಬಹುದು ಎನ್ನುವ ಕಲ್ಪನೆ ಓದುಗನ ಚಿತ್ತದಲ್ಲಿ ಕ್ಷಣಮಾತ್ರಕ್ಕೆ ಮಿಂಚುತ್ತದೆ. ಇಷ್ಟಾಗಿಯೂ ದೈಹಿಕವಾಗಿ ಹಾಗೂ ಆರ್ಥಿಕವಾಗಿ ಶೋಷಿತಳಾದ ಆ ಮುದಿ ವಿಧವೆಯ ಹೃದಯದಲ್ಲಿ ಮಿಣುಕುತ್ತಿರುವ ಸಾಂಪ್ರದಾಯಕ ಮೌಲ್ಯಗಳನ್ನು ತೋರಿಸುವದೇ ವಸುಧೇಂದ್ರರ ಮುಖ್ಯ ಗುರಿಯಾಗಿದೆ.
ಅಸಹಾಯಕತೆಯ ಪರಮಾವಧಿಯನ್ನು ನೋಡಬೇಕಾದರೆ , “ ಹುಲಿಗೆ ಕಾಡೇ ರಕ್ಷೆ, ಕಾಡಿಗೆ ಹುಲಿಯೇ ರಕ್ಷೆ ” ಕತೆಯನ್ನು ಓದಬೇಕು. ಈ ಕತೆಯಲ್ಲಿ ಮನೆಯ ಯಜಮಾನ ಮಾನಸಿಕವಾಗಿ ಅತ್ಯಂತ ಬಲಹೀನ ಮನುಷ್ಯ. ಆತನ ಕುಟುಂಬಕ್ಕೆ ಅವನ ಹೆಂಡತಿಯೇ ಧೈರ್ಯದ ಆಧಾರ. ಆದರೆ, ಸಮಾಜದ ಪಟ್ಟಭದ್ರ ಹಿತಾಸಕ್ತಿಗಳ ವಿರುದ್ಧ ಹೋರಾಡುವ ಸಾಮರ್ಥ್ಯ ಅವರಲ್ಲಿ ಇಲ್ಲ. ಆದರೆ ಶೋಷಣೆಗೆ ಒಳಗಾಗಿಯೂ, ಗಂಡನಲ್ಲಿ ಹಾಗು ಮಕ್ಕಳಲ್ಲಿ ಧೈರ್ಯವನ್ನು ತುಂಬುವವಳು, ಕುಟುಂಬವನ್ನು ಸಂಬಾಳಿಸಿಕೊಂಡು ಹೋಗುವವಳು ಹೆಂಡತಿಯೇ.
ಸಾಂಪ್ರದಾಯಕ ಸಮಾಜದಲ್ಲಿಯ ಅಸಹಾಯಕ ಹೆಣ್ಣುಮಗಳ ಶ್ರೇಷ್ಠ ಕತೆ ಎಂದರೆ “ಸೀಳು ಲೋಟ”. ಈ ಕತೆ ಇಲ್ಲಿ ತೋರಿಸಿದ ಮೂರು ಸಂಕಲನಗಳಲ್ಲಿ ಇಲ್ಲ. ಇದನ್ನು ಓದಬಯಸುವವರು ದಯವಿಟ್ಟು
ಇಲ್ಲಿನೋಡಿರಿ.
ಈ ಕತೆಯಲ್ಲಿಯೂ ಸಹ ಬಲಹೀನ ಗಂಡ, ಅಸಹಾಯಕ ಅಣ್ಣ ಹಾಗು ನೆರೆಹೊರೆಯವರ ಔದಾರ್ಯದ ಮೇಲೆ ಬದುಕು ಸಾಗಿಸಬೇಕಾದಂತಹ ಹೆಂಗಸಿನ ಕತೆ ಇದು.
ಇಷ್ಟೆಲ್ಲ ಕಾರ್ಪಣ್ಯಗಳ ನಡುವೆಯೂ ಆಕೆ ಸಾಂಪ್ರದಾಯಿಕ ಸಮಾಜ ನೀಡಿದ ಸಂಸ್ಕಾರದ ಮೌಲ್ಯಗಳನ್ನು ಬಿಟ್ಟಿಲ್ಲ. ಕತೆಯ ಕೊನೆಕೊನೆಯಲ್ಲಿ ಅವಳು ತನ್ನ ಮಗನಿಂದ ಆಣೆ ಹಾಕಿಸಿಕೊಳ್ಳುವ ಭಾಗವು ಕತೆಯ ಪರಾಕಾಷ್ಠೆ ಎನ್ನಬಹುದು.
ಫ್ರಾನ್ಸ್ ದೇಶದ ಕತೆಗಾರ ಮೊಪಾಸಾನ ಕತೆಗಳನ್ನು ನೆನಪಿಸುವ ಈ ಕತೆ ಕನ್ನಡದ ಒಂದು ಶ್ರೇಷ್ಠ ಕತೆಯಾಗಿದೆ.
ಈ ಎಲ್ಲ ಕತೆಗಳಲ್ಲಿಬರುವ ಹೆಣ್ಣುಮಕ್ಕಳು ಸಮಾಜದ ನೀತಿಯನ್ನು ಒಪ್ಪಿಕೊಂಡಂತಹ ಸಾಮಾನ್ಯ ಜೀವಿಗಳು. ಸಮಾಜದ ವಿಧಿಗಳನ್ನು ದಾಟದಯೇ, ಕೆಚ್ಚಿನಿಂದ ಬದುಕು ಮಾಡಿದವರು. ಸ್ವತಃ ಶೋಷಣೆಗೆ ಒಳಗಾಗಿದ್ದರೂ, ಮಾನವೀಯತೆಯನ್ನು ಮರೆತವರಲ್ಲ. ಅರ್ಥಾತ್, ಇವಳು ಸಾಮಾನ್ಯ ಭಾರತೀಯ ಹೆಣ್ಣು ಮಗಳು. ತನ್ನ ದುಗುಡ ದುಮ್ಮಾನಗಳು ಏನೇ ಇರಲಿ, ಸಂಪ್ರದಾಯವು ತನಗೆ ಚಿಕ್ಕಂದಿನಿಂದ ಕಲಿಸಿದ ಮೌಲ್ಯಗಳನ್ನು ಬಾಳಿನಲ್ಲಿ ಅರಗಿಸಿಕೊಂಡ ಭಾರತೀಯ ಹೆಣ್ಣುಮಗಳು.
ವಸುಧೇಂದ್ರರು ಆಧುನಿಕ ಸಮಾಜದಲ್ಲಿಯ ಅಸಹಾಯಕರ ಕತೆಗಳನ್ನೂ ಸಹ ಕೊಟ್ಟಿದ್ದಾರೆ. “ ಕ್ಷಿತಿಜ ಹಿಡಿಯ ಹೊರಟವರಾರು, ಹೆಡ್ ಹಂಟರ, ಕಣ್ತೆರದು ನೋಡಲ್ಲಿ ಗೆದ್ದಲು ಮರ ಕೆಡವಲಿದೆ, ಗುಳ್ಳೆ ” ಮುಂತಾದವು ಆಧುನಿಕ ಸಮಾಜದಲ್ಲಿಯ ಅಸಹಾಯಕರ ಕತೆಗಳು. ಆಧುನಿಕ ಸಮಾಜದ ಆರ್ಥಿಕ ಆಸೆಬುರುಕತನ ಈ ಎಲ್ಲ ಕತೆಗಳಿಗೆ ಹಿನ್ನೆಲೆಯಾಗಿದೆ.
ಇವಲ್ಲದೆ, ಮತ್ತೊಂದು ವರ್ಗದ ಅಸಹಾಯಕ ಜೀವಿಗಳ ಕತೆಯೂ ಇಲ್ಲಿವೆ. ಸಮಾಜದ ಚೌಕಟ್ಟಿಗೆ ಸಂಬಂಧವಿರದೆ, ತನ್ನೊಳಗಿನ ವೈಯಕ್ತಿಕ ಅಥವಾ ಆರ್ಥಿಕ ಕಾರಣದಿಂದಾಗಿ ಕಷ್ಟಪಡುತ್ತಿರುವ ಅಸಹಾಯಕ ಜೀವಿಗಳ ಕತೆಗಳಿವು.
“ ಅಪಸ್ವರದಲ್ಲೊಂದು ಆರ್ತನಾದ ” ಕತೆಯಲ್ಲಿ ಮನೆಯ ಪರಿಸ್ಥಿತಿಯಿಂದಾಗಿ, ಮದುವೆಯಾಗದೇ ಇರುವ ಒಬ್ಬಳು ಹುಡುಗಿ ಹಾಗೂ ಅವಳ ವಿಧವೆ ಅಮ್ಮನ ತೊಳಲಾಟಗಳ ಚಿತ್ರಣವಿದೆ.
“ ಅನಘ ” ಕತೆಯಲ್ಲಿ ಹಳ್ಳಿಯಲ್ಲಿರುವ transvestite ಹುಡುಗನೊಬ್ಬನ ಸಮಸ್ಯೆಯ ಚಿತ್ರಣವಿದೆ. ಈ ಕತೆಯಲ್ಲಿ ಹುಡುಗನ ಬಲಹೀನತೆ ಹಾಗು ಅವನ ಅಪ್ಪನ ಪೌರುಷಗಳಿಗೆ ಮುಖಾಮುಖಿಯಾಗಿ ನಿಲ್ಲುವದು ಸೂಳೆಯೊಬ್ಬಳಲ್ಲಿ ಮಿನಗುತ್ತಿರುವ ಮಾನವೀಯತೆ.
“ಯುಗಾದಿ” ಕತೆಯಲ್ಲಿ ಬದಲಾದ ಸಾಮಾಜಿಕ ಮೌಲ್ಯಗಳಿಂದಾಗಿ ಒದ್ದಾಡುತ್ತಿರುವ ಹಿರಿಯ ಜೀವಿಯೊಬ್ಬನ ಅಸಹಾಯಕತೆಯ ಚಿತ್ರಣವಿದೆ. ಇಲ್ಲಿಯೂ ಸಹ ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಕೆಳಸ್ತರದಲ್ಲಿರುವ ವ್ಯಕ್ತಿಗಳು ಉಳಿಸಿಕೊಂಡು ಬಂದಿರುವ ಸಾಂಪ್ರದಾಯಕ ಮೌಲ್ಯಗಳೇ ಕತೆಯ ತಿರುಳಾಗಿವೆ.
ಹಾಗಾದರೆ, ವಸುಧೇಂದ್ರರ ಕತೆಗಳು ಕೇವಲ ಅಸಹಾಯಕರ ಕತೆಗಳೇ ಎನ್ನುವ ಸಂದೇಹ ಬರಬಹುದು.
ನಿಜ ಹೇಳಬೇಕೆಂದರೆ, ವಸುಧೇಂದ್ರರ ಕತೆಗಳು ಮೌಲ್ಯವನ್ನು ಹುಡುಕುತ್ತಿರುವ ಕತೆಗಳು.
ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಬಲಹೀನರಾದವರಲ್ಲಿಯೇ ಅಂದರೆ ಶೋಷಣೆಗೆ ಒಳಗಾದವರಲ್ಲಿಯೇ ಈ ಮೌಲ್ಯಗಳು ಉಳಿದುಕೊಂಡಿರುವದು ಈ ಕತೆಗಳಲ್ಲಿಯ ವೈಶಿಷ್ಟ್ಯ.
ವಸುಧೇಂದ್ರರು ಮೌಲ್ಯಗಳನ್ನು ಹುಡುಕಲು ಬಲಹೀನರನ್ನೇ ಆರಿಸಿಕೊಳ್ಳುತ್ತಾರೆಯೇ ಎನ್ನುವ ಪ್ರಶ್ನೆಯೂ ಬರಬಹುದು. ಆದರೆ ಇದು ಕೇವಲ ಸಾಂದರ್ಭಿಕ. ವಸುಧೇಂದ್ರರರದು ಸೂಕ್ಷ್ಮ ಸಂವೇದನಾ ಮನಸ್ಸು. ಎಲ್ಲೇ ಸಂತಾಪ ಕಾಣಲಿ, ಅವರ ಮನ ಮಿಡಿಯುತ್ತದೆ. ಅದರ ಫಲವೇ ಈ ಕತೆಗಳು.
ವಸುಧೇಂದ್ರರ ಕತೆಗಳು ಅವರ ಆಪ್ತ ಪರಿಸರದಿಂದ ಹೊಮ್ಮಿವೆ. ಸಾಂಪ್ರದಾಯಕ ಸಮಾಜದ ಕತೆಗಳೆಲ್ಲ ಸಂಡೂರಿನ ಸುತ್ತಮುತ್ತಲಿನ ಕತೆಗಳು. ಇಲ್ಲಿಯ ಪರಿಸರವನ್ನು ವಿನೋದಪೂರ್ಣವಾಗಿ ಕಟ್ಟಿಕೊಡುವದರಲ್ಲಿ ವಸುಧೇಂದ್ರರು ಯಶಸ್ವಿಯಾಗಿದ್ದಾರೆ. ಈ ಕತೆಗಳು ಸಾಂಪ್ರದಾಯಕ ಸಮಾಜದ ಕೊಳಕನ್ನು ತೋರಿಸುವಂತೆಯೇ, ಆ ಸಮಾಜವು ನೀಡಿದ ಮೌಲ್ಯಗಳನ್ನೂ ತೋರಿಸುತ್ತವೆ.
ಆಧುನಿಕ ಸಮಾಜದ ಕತೆಗಳೆಲ್ಲ ಬೆಂಗಳೂರು ನಗರದ ಕತೆಗಳು. ದುಡ್ಡೇ ದೊಡ್ಡಪ್ಪ ಎನ್ನುವದೇ ಇಲ್ಲಿಯ ಮೌಲ್ಯ.
ತೆಳುವಿನೋದದ ತಿಳಿಲೇಪನವಿರುವದರಿಂದ ವಸುಧೇಂದ್ರರ ಕತೆಗಳಲ್ಲಿಯ ಸಂಕಟವು ಸಹನೀಯವಾಗಿದೆ.

Tuesday, October 7, 2008
ಕೋಡಗನ್ನ ಕೋಳಿ ನುಂಗಿತ
‘ಕೋಡಗನ್ನ ಕೋಳಿ ನುಂಗಿತ’ ಇದು ಶರೀಫರ ಒಡಪಿನ ಅಥವಾ ಬೆಡಗಿನ ಹಾಡು.
ಇಂತಹ ಹಾಡುಗಳನ್ನು ಶರೀಫರಲ್ಲದೆ, ಕನಕದಾಸರು ಹಾಗೂ ಪುರಂದರದಾಸರೂ ಸಹ ರಚಿಸಿದ್ದಾರೆ.
‘ಬಯಲು ಆಲಯದೊಳಗೊ ಆಲಯವು ಬಯಲೊಳಗೊ
ಬಯಲು ಆಲಯವೆರಡು ನಿನ್ನ ಒಳಗೊ’ ಎನ್ನುವ ಕನಕದಾಸರ ಹಾಡನ್ನು ಉದಾಹರಣೆಗೆ ನೋಡಬಹುದು.
ಅದರಂತೆ ಪುರಂದರದಾಸರ ಈ ರಚನೆ ಸಹ ಪ್ರಸಿದ್ಧವಿದೆ:
“ಸುಳ್ಳು ನಮ್ಮಲ್ಲಿಲ್ಲವಯ್ಯಾ
ಸುಳ್ಳೆ ನಮ್ಮನಿ ದೇವರು”.
………………………………………………………….
‘ಕೋಡಗನ್ನ ಕೋಳಿ ನುಂಗಿತ’ ಎನ್ನುವ ಪದದಲ್ಲಿ ಶರಿಫರು ಮನಸ್ಸನ್ನು ಮರ್ಕಟಕ್ಕೆ ಹಾಗು ಜ್ಞಾನೋದಯವನ್ನು ಕೋಳಿಗೆ ಹೋಲಿಸಿ ಹಾಡಿದ್ದಾರೆ. ಸಂಸಾರವೆಂಬ ವೃಕ್ಷಕ್ಕೆ ವಿಷಯಗಳು ಟೊಂಗೆಗಳಿದ್ದಂತೆ. ಮನಸ್ಸೆಂಬ ಮಂಗವು ಸಂಸಾರದಲ್ಲಿ ವಿಷಯದಿಂದ ವಿಷಯಕ್ಕೆ ಹಾರುತ್ತ ಸುಖಪಡುತ್ತದೆ.
ಕೋಳಿಯ ಕೂಗು ಬೆಳಗಿನ ಸೂಚನೆ. ಶರೀಫರ ಹಾಡಿನಲ್ಲಿ ಇದು ಆಧ್ಯಾತ್ಮಿಕ ಬೆಳಗನ್ನು ಸೂಚಿಸುವ ಕೋಳಿ. ಆಧ್ಯಾತ್ಮಿಕ ಜ್ಞಾನೋದಯವು ಕೋಡಗದಂತಿರುವ ಮನಸ್ಸನ್ನು ನುಂಗಿ ಹಾಕುತ್ತದೆ ಎಂದು ಶರೀಫರು ಹೇಳುತ್ತಾರೆ.
ಪುರಂದರದಾಸರೂ ಸಹ ತಮ್ಮ ಒಂದು ರಚನೆಯಲ್ಲಿ ಮರ್ಕಟದಂತಿರುವ ಮನಸ್ಸನ್ನು ಡೊಂಕು ಬಾಲದ ನಾಯಿಗೆ ಹೋಲಿಸಿದ್ದಾರೆ. ತಿದ್ದಲು ಎಷ್ಟೇ ಪ್ರಯತ್ನಿಸಿದರೂ ಸಹ ಈ ಮನಸ್ಸು ನಾಯಿಯ ಬಾಲದಂತೆ ಡೊಂಕಾಗಿಯೇ ಉಳಿಯುತ್ತದೆ. ಅರ್ಥಾತ್ ಈ ಮನಸ್ಸಿಗೆ ಜ್ಞಾನೋದಯವಿನ್ನೂ ಆಗಿಲ್ಲ. ಪುರಂದರದಾಸರ ಈ ಹಾಡಿನಲ್ಲಿ ಒಂದು ವಿಶೇಷತೆ ಇದೆ. ಹಾಡಿನ ಪಲ್ಲವನ್ನು ನೋಡೋಣ:
“ಡೊಂಕು ಬಾಲದ ನಾಯಕರೆ,
ನೀವೇನೂಟವ ಮಾಡಿದಿರಿ?” ||ಪಲ್ಲ||
ಡೊಂಕು ಬಾಲದ ನಾಯಕರು ಎಂದರೆ ‘ನಾಯಿ’ ಎನ್ನುವದು ತಿಳಿದ ವಿಷಯವೇ.
ಆದರೆ ‘ನಾಯಕರು’ ಎನ್ನುವಲ್ಲಿ ಒಂದು ಹೆಚ್ಚಿನ ಅರ್ಥವಿದೆ.
ಪುರಂದರದಾಸರ ಪೂರ್ವಾಶ್ರಮದ ಹೆಸರು: ಶ್ರೀನಿವಾಸ ನಾಯಕ.
ದಾಸರು “ಡೊಂಕು ಬಾಲದ ನಾಯಕರೆ” ಎನ್ನುವಾಗ ತಮ್ಮನ್ನೇ ಸಂಬೋಧಿಸಿಕೊಳ್ಳುತ್ತಿದ್ದಾರೆ !
. . .. .. . . . . . . .. . . . . . . . . . .. . . . . . . .
ಶರೀಫರ ರಚನೆಯ ಪೂರ್ತಿ ಪಾಠ ಹೀಗಿದೆ:
ಕೋಡಗನ್ನ ಕೋಳಿ ನುಂಗಿತ
ನೋಡವ್ವ ತಂಗಿ ||ಪಲ್ಲ||
ಆಡು ಆನೆಯ ನುಂಗಿ
ಗೋಡೆ ಸುಣ್ಣವ ನುಂಗಿ
ಆಡಲು ಬಂದ ಪಾತರದವಳ ಮದ್ಲಿ ನುಂಗಿತ ||೧||
ಒಳ್ಳು ಒನಕಿಯ ನುಂಗಿ
ಬೀಸುಕಲ್ಲು ಗೂಟವ ನುಂಗಿ
ಕುಟ್ಟಲಿಕೆ ಬಂದ ಮುದುಕಿಯ ನೊಣವು ನುಂಗಿತ ||೨||
ಹಗ್ಗ ಮಗ್ಗವ ನುಂಗಿ
ಮಗ್ಗವ ಲಾಳಿ ನುಂಗಿ
ಮಗ್ಗದಾಗಿರುವ ಅಣ್ಣನ ಕುಣಿಯು ನುಂಗಿತ ||೩||
ಎತ್ತು ಜತ್ತಗಿ ನುಂಗಿ
ಬತ್ತ ಬಾನವ ನುಂಗಿ
ಮುಕ್ಕಟ ತಿರುವೊ ಅಣ್ಣನ ಮೇಳಿ ನುಂಗಿತ ||೪||
ಗುಡ್ಡ ಗಂವ್ಹರ ನುಂಗಿ
ಗಂವ್ಹರ ಇರಿವೆ ನುಂಗಿ
ಗುರುಗೋವಿಂದನ ಪಾದ ಆತ್ಮ ನುಂಗಿತ ||೫||
. . .. . . . . .. . . . . . . .. . . . . . . . .. . .
ಶರೀಫರು ಆಧುನಿಕ ಕಾಲದ ಕವಿಗಳಂತೆ, ಮುಚ್ಚಿದ ಕೋಣೆಯಲ್ಲಿ ಕುಳಿತು, ಪೆನ್ನು ಅಥವಾ ಪೆನ್ಸಿಲಿನಿಂದ ಕವನ ಬರೆಯುವ ಕವಿ ಅಲ್ಲ. ತಮ್ಮ ಸುತ್ತ ನೆರೆದಿರುವ ಜನಸಮುದಾಯದ ಎದುರಿಗೆ ಸ್ಫೂರ್ತಿಯುತವಾಗಿ ಕವನ ಹಾಡುವದು ಅವರ ಪದ್ಧತಿ. ಜನಸಮುದಾಯಕ್ಕೆ ಜ್ಞಾನದ ಬೆಳಕು ಸಿಗಲಿ ಎನ್ನುವದು ಅದರ ಉದ್ದೇಶ.
ಹೀಗಾಗಿ ಇವರ ಕವನಗಳ ರಚನೆಯನ್ನು ಗಮನಿಸಿದಾಗ, ಕೆಲವೊಂದು ಕವನದ ಸಾಲುಗಳಲ್ಲಿ repetitiveness ಕಾಣುವದು ಸಹಜ.
‘ಕೋಡಗನ್ನ ಕೋಳಿ ನುಂಗಿತ’ ಕವನದ ಎಲ್ಲಾ ನುಡಿಗಳಲ್ಲಿ ಕಂಡು ಬರುವದು ಒಂದೇ ಅರ್ಥ.
ಮೊದಲ ನುಡಿಯ ನಂತರ, ಕವನ ಮುಂದೆ ಸಾಗಿದಂತೆ ಅರ್ಥದ ಬೆಳವಣಿಗೆ ಸಾಗುವದಿಲ್ಲ.
ಆದರೆ ಆ ಕಾರಣಕ್ಕಾಗಿ ಕವನದ ಸೌಂದರ್ಯವೇನೂ ಕಡಿಮೆಯಾಗಿಲ್ಲ.
ಕವನದ ಪಲ್ಲದಲ್ಲಿ ಕವಿಯು ‘ಕೋಳಿ ಅಂದರೆ ಆಧ್ಯಾತ್ಮಿಕ ಜ್ಞಾನೋದಯವು ಕೋಡಗವನ್ನು ಅಂದರೆ ಮಂಗನಂತಿರುವ ಮನಸ್ಸನ್ನು ತಿಂದು ಹಾಕಿದೆ’ ಎಂದು ಹೇಳುತ್ತಾರೆ. ಇದೇ ಮಾತನ್ನು ಮುಂದಿನ ನುಡಿಯಲ್ಲಿ, ವಿಭಿನ್ನ ರೂಪಕಗಳ ಮೂಲಕ ಮತ್ತೆ ಮತ್ತೆ ಸ್ಪಷ್ಟ ಪಡಿಸುತ್ತಾರೆ:
ಆಡು ಆನೆಯ ನುಂಗಿ
ಗೋಡೆ ಸುಣ್ಣವ ನುಂಗಿ
ಆಡಲು ಬಂದ ಪಾತರದವಳ ಮದ್ಲಿ ನುಂಗಿತ ||೧||
ಆಡು ಅಂದರೆ ಜ್ಞಾನ. ಇದು ಸಣ್ಣದು . ಸಂಸಾರದ ಆಸೆಗಳಿಗೋ ಆನೆಯ ಬಲ.
ಇಂತಹ ಆನೆಯನ್ನು ಆಡಿನಂತಿರುವ ಜ್ಞಾನ ತಿಂದು ಹಾಕಿಬಿಡುತ್ತದೆ ಎಂದು ಶರೀಫರು ಹಾಡುತ್ತಾರೆ.
(ಈ ಸಂದರ್ಭದಲ್ಲಿ ಬಸವಣ್ಣನವರ ವಚನವೊಂದನ್ನು ನೆನಪಿಸಿಕೊಳ್ಳಬಹುದು:
“ತಮಂಧ ಘನ, ಜ್ಯೋತಿ ಕಿರಿದೆನ್ನಬಹುದೆ?” )
ಗೋಡೆ ಎಂದರೆ ಮನಸ್ಸಿನ ಭಿತ್ತಿ. ಜ್ಞಾನೋದಯದ ನಂತರ, ಈ ಗೋಡೆಯ ಮೇಲೆ, ಎಷ್ಟೇ ಸುಣ್ಣ ಹಚ್ಚಲಿ, ಯಾವುದೇ ಬಣ್ಣ ಹಚ್ಚಲಿ, ಅದನ್ನು ಗೋಡೆಯೇ ತಿಂದು ಹಾಕಿ ಬಿಡುತ್ತದೆ. ಗೋಡೆಯ surface ಮತ್ತೂ ನಿರ್ವರ್ಣವಾಗಿ, ಶುಭ್ರವಾಗಿಯೇ ಉಳಿಯುತ್ತದೆ.
ಆಡಲು ಬಂದ ಪಾತರದವಳು ಅಂದರೆ ಕುಣಿಯಲು ಬಂದ ನರ್ತಕಿ, ಅರ್ಥಾತ್ ಸಂಸಾರದಲ್ಲಿ ಆಡಲು ಬಂದ ಜೀವಾತ್ಮ. ಮದ್ದಲೆ ಅಂದರೆ ಪರಮಾತ್ಮ ಬಾರಿಸುತ್ತಿರುವ ಜ್ಞಾನದ ಮದ್ದಲೆ.
ಈ ರೂಪಕಕ್ಕೆ ಒಂದು ವಿಶಿಷ್ಟ ಹಿನ್ನೆಲೆ ಇದೆ. ಚಾಮರಸ ಬರೆದ ‘ಪ್ರಭುಲಿಂಗ ಲೀಲೆ’ ಕಾವ್ಯದಲ್ಲಿ ಅಲ್ಲಮನಿಗೂ, ಮಾಯಾದೇವಿಗೂ ಸ್ಪರ್ಧೆ ಏರ್ಪಡುತ್ತದೆ. ಅಲ್ಲಮ ಮದ್ದಲೆ ಬಾರಿಸುತ್ತಿದ್ದಂತೆ, ಅದರ ತಾಳಕ್ಕೆ ತಕ್ಕಂತೆ ಕುಣಿಯಲು ಮಾಯಾದೇವಿಗೆ ಸಾಧ್ಯವಾಗುವದಿಲ್ಲ. ಅವಳು ಸೋಲೊಪ್ಪಿಕೊಳ್ಳುತ್ತಾಳೆ.
‘ಪ್ರಭುಲಿಂಗ ಲೀಲೆ’ ಶರೀಫರಿಗೆ ಪ್ರಿಯವಾದ ಕಾವ್ಯ.
ತಾವೇ ಮಾಡಿಕೊಂಡ ಇದರ ಹಸ್ತಪ್ರತಿಯೊಂದನ್ನು ಅವರು ಯಾವಾಗಲೂ ತಮ್ಮ ಬಳಿಯಲ್ಲಿಯೇ ಇಟ್ಟುಕೊಳ್ಳುತ್ತಿದ್ದರಂತೆ.
ಎರಡನೆಯ ನುಡಿಯಲ್ಲಿ ಶರೀಫರು ಸಂಸಾರದಲ್ಲಿರುವ ಸಾಧಕನ ಪ್ರಗತಿಯ ರೀತಿಯನ್ನು ವರ್ಣಿಸಿದ್ದಾರೆ:

ಒಳ್ಳು ಹಾಗೂ ಬೀಸುವ ಕಲ್ಲುಗಳನ್ನು ಶರೀಫರು ಸಂಸಾರಕ್ಕೂ, ಒನಕೆ ಹಾಗೂ ಬೀಸುವ ಕಲ್ಲಿನ ಗೂಟವನ್ನು ಸಾಧಕನ ಕರ್ಮಗಳಿಗೂ ಹೋಲಿಸಿದ್ದಾರೆ. ಕುಟ್ಟಲಿಕೆ ಬಂದ ಮುದುಕಿ ಅಂದರೆ ಈ ಸಂಸಾರದಲ್ಲಿ ಬಂದು, ಕರ್ಮಗಳಿಂದ ಪಕ್ವವಾದ ಜೀವಾತ್ಮ.
ಈ ಜೀವಾತ್ಮ is hammered on the anvil of life.
ಆದರೆ ಆತ ಪಕ್ವವಾದಾಗ, ಆತನ ಕರ್ಮಗಳು ಕರಗಿ ಹೋಗುತ್ತವೆ.
ಇಂತಹ ಜೀವಾತ್ಮನನ್ನು ನೊಣದಷ್ಟು ಸಣ್ಣಗಿನ ಜ್ಞಾನ ತಿಂದು ಹಾಕುತ್ತದೆ.
ಮೂರನೆಯ ನುಡಿಯಲ್ಲಿ ಶರೀಫರು ಸಂಸಾರ ಹಾಗೂ ಕರ್ಮಗಳನ್ನು ಬೇರೊಂದು ರೀತಿಯಲ್ಲಿ ವರ್ಣಿಸುತ್ತಾರೆ:
ಹಗ್ಗ ಮಗ್ಗವ ನುಂಗಿ
ಮಗ್ಗವ ಲಾಳಿ ನುಂಗಿ
ಮಗ್ಗದಾಗಿರುವ ಅಣ್ಣನ ಕುಣಿಯು ನುಂಗಿತ
ಮಗ್ಗವೆಂದರೆ ಸಂಸಾರ. ಮಗ್ಗವನ್ನು ಕಟ್ಟಿರುವ ಹಗ್ಗವೆಂದರೆ ಸಂಸಾರಕ್ಕೆ ಜೋತು ಬೀಳುವ ಮನಸ್ಸು.
ಮಗ್ಗದಲ್ಲಿ ಒಮ್ಮೆ ಅತ್ತ(=ಒಳ್ಳೆಯದರತ್ತ) ಒಮ್ಮೆ ಇತ್ತ(=ಕೆಡುಕಿನತ್ತ) ಸರಿಯುವ ಲಾಳಿ ಎಂದರೆ ಜೀವಾತ್ಮನೆಸಗುವ ಕರ್ಮಗಳು.
ಜ್ಞಾನವನ್ನು ಬಯಸುವ ಸಾಧಕನು ಈ ಸಂಸಾರದಲ್ಲಿ ಸಿಲುಕಲಾರ.
ಆತನ ಮನಸ್ಸು ಈ ಸಂಸಾರವನ್ನು ತಿಂದು ಹಾಕುತ್ತದೆ ಅಂದರೆ ನಾಶ ಮಾಡುತ್ತದೆ ಎಂದು ಶರೀಫರು ಹೇಳುತ್ತಾರೆ.
ಇದಾದ ಮೇಲೆ ಸಂಸಾರವೆನ್ನುವ ಮಗ್ಗದಲ್ಲಿ ನೇಯಲು ಕುಳಿತ ಅಣ್ಣನನ್ನು ಅಂದರೆ ಜೀವಾತ್ಮನನ್ನು ಮಗ್ಗದ ಕೆಳಗಿರುವ ಕುಣಿ (=space excavated below the loom for footwork) ನುಂಗಿ ಹಾಕುತ್ತದೆ.
ಅಂದರೆ ಆತನಿಗೆ ಜ್ಞಾನೋದಯವಾಗುತ್ತದೆ !
ನಾಲ್ಕನೆಯ ನುಡಿಯಲ್ಲಿಯೂ ಸಹ ಇದೇ ವಿಷಯವನ್ನು ಶರೀಫರು ಬೇರೆ ರೂಪಕಗಳ ಮೂಲಕ ವಿವರಿಸುತ್ತಾರೆ:
ಎತ್ತು ಜತ್ತಗಿ ನುಂಗಿ
ಬತ್ತ ಬಾನವ ನುಂಗಿ
ಮುಕ್ಕಟ ತಿರುವೊ ಅಣ್ಣನ ಮೇಳಿ ನುಂಗಿತ
ಹೊಲವನ್ನು ಊಳಲು ಎತ್ತಿನ ಕೊರಳಿಗೆ ಜತ್ತಗಿ (=ನೊಗಕ್ಕೆ ಹಾಗು ಎತ್ತಿನ ಕೊರಳಿಗೆ ಕಟ್ಟುವ ಪಟ್ಟಿ) ಕಟ್ಟಿರುತ್ತಾರೆ.
ಸಂಸಾರವೆಂಬ ಹೊಲವನ್ನು ಊಳಲು ಬಂದ ಎತ್ತು ಇದು.
ಇದು ತನ್ನನ್ನು ನೊಗಕ್ಕೆ ಅಂದರೆ ಕರ್ಮಗಳಿಗೆ ಬಂಧಿಸಿದ ಜತ್ತಗಿ ಅಂದರೆ ಕರ್ಮಪಾಶವನ್ನೆ ತಿಂದು ಹಾಕಿದೆ. (ಸಾಧನೆಯ ಸಹಾಯದಿಂದ).
ಬಾನ ಅಂದರೆ ದೇವರೆದುರಿಗೆ ಇಟ್ಟ ಎಡಿ, ನೈವೇದ್ಯ.
ಹೊಲದಲ್ಲಿ ದೇವರ ಎದುರಿಗೆ ಇಡಲಾದ ಈ ನೈವೇದ್ಯದ ಅನ್ನವನ್ನು ಬತ್ತವೇ ತಿಂದು ಹಾಕಿದೆ.
ಅರ್ಥಾತ್ ಈ ಸಾಧಕನ ಕರ್ಮಪಾಕಗಳು ಶಿಥಿಲವಾಗುತ್ತಿವೆ.
ಈ ಸಾಧಕನು ಮುಕ್ಕಟೆಯಾಗಿ (ಬೇಗ ಬೇಗನೇ), ಹೊಲವನ್ನು ಊಳುತ್ತಿದ್ದಾನೆ. ಅವನನ್ನು ಮೇಳಿ (=?) ನುಂಗಿ ಹಾಕಿದೆ. ಮೇಳಿ ಅಂದರೆ ಒಕ್ಕಲುತನದ ಸಾಧನವಿರಬಹುದು.
ಐದನೆಯ ನುಡಿಯಲ್ಲಿ ಶರೀಫರು ಸಾಧಕನು ಆಧ್ಯಾತ್ಮದ ಕೊನೆ ಮುಟ್ಟಿದ್ದನ್ನು ವಿವರಿಸಿದ್ದಾರೆ:
ಗುಡ್ಡ ಗಂವ್ಹರ ನುಂಗಿ
ಗಂವ್ಹರ ಇರಿವೆ ನುಂಗಿ
ಗುರುಗೋವಿಂದನ ಪಾದ ಆತ್ಮ ನುಂಗಿತ
ಬಹುಶ: ಗುಡ್ಡ ಎಂದರೆ ಅನಾದಿ-ಅನಂತನಾದ ಚಿತ್ ಸ್ವರೂಪನಾದ ಪರಮಾತ್ಮ.
ಈ ಪರಮಾತ್ಮನು ಗುಡ್ಡದಲ್ಲಿಯೆ ಇರುವ ಗಂವ್ಹರವನ್ನು (=ಗವಿಯನ್ನು) ಅಂದರೆ ಅನಾದಿ-ಅನಂತವಾದ ಸಂಸಾರವನ್ನು ನುಂಗಿದ್ದಾನೆ.
ಈ ಸಂಸಾರವು ತನ್ನಲ್ಲಿರುವ ಇರಿವೆಯನ್ನು ಅಂದರೆ ಕಾಲ ದೇಶದಿಂದ ಬಂಧಿತನಾದ ಅಸ್ತಿತ್ವವನ್ನು ಅಂದರೆ ಜೀವಾತ್ಮನನ್ನು ನುಂಗಿ ಹಾಕಿದೆ.
ಇದರರ್ಥವೆಂದರೆ ಪರಮಾತ್ಮನಲ್ಲಿ ಜೀವಾತ್ಮ ಲೀನವಾಗಿದೆ.
ಇದೇ ಮಾತನ್ನು ಶರೀಫರು ಹೀಗೂ ಹೇಳಿದ್ದಾರೆ:
‘ಗುರುಗೋವಿಂದನ ಪಾದ ಆತ್ಮ ನುಂಗಿತ ’.
ಶರೀಫರ ಈ ಒಡಪಿನ ಗೀತೆಯಲ್ಲಿರುವ ಒಂದು ರಚನಾವೈಶಿಷ್ಟ್ಯವನ್ನು ಗಮನಿಸಬೇಕು.
ಪ್ರತಿಯೊಂದು ನುಡಿಯಲ್ಲಿ ಮೊದಲ ಎರಡು ಸಾಲುಗಳು ನಿರ್ಜೀವ ಉಪಕರಣಗಳನ್ನು ಬಣ್ಣಿಸುತ್ತವೆ.
ಉದಾ: ಒಳ್ಳು, ಒನಕೆ, ಬಿಸುವ ಕಲ್ಲು. ಗೋಡೆ, ಹಗ್ಗ, ಮಗ್ಗ ಇತ್ಯಾದಿ.
ಪ್ರತಿ ನುಡಿಯ ಕೊನೆಯ ಸಾಲಿನಲ್ಲಿ ಜೀವಾತ್ಮನ ವರ್ಣನೆ ಇದೆ;
ಉದಾ: ಪಾತರದವಳು, ಮುದಕಿ, ಅಣ್ಣ ಹಾಗು ಆತ್ಮ .
ಈ ರೀತಿಯಾಗಿ, ಸಂಸಾರದಲ್ಲಿಳಿದ ಸಾಧಕನ ಜ್ಞಾನೋದಯವಾಗುತ್ತಿರುವ ಘಟ್ಟದಿಂದ ಪ್ರಾರಂಭಿಸಿ, ಆತ ಪರಮಾತ್ಮನಲ್ಲಿ ಲೀನವಾಗುವ ಘಟ್ಟದವರೆಗಿನ ವರ್ಣನೆ ಇಲ್ಲಿದೆ.
ಆದರೆ, ಕವನದಲ್ಲಿ ಸಾಧಕನ ಹಂತಹಂತದ ಬೆಳವಣಿಗೆಯನ್ನು ತೋರಿಸಿಲ್ಲ.
ವಿಭಿನ್ನ ರೂಪಕಗಳನ್ನು ಉಪಯೋಗಿಸುತ್ತ, ಅದೇ ಸಾರವನ್ನು ಶರೀಫರು ಮತ್ತೆ ಮತ್ತೆ ಹೇಳಿದ್ದಾರೆ.
ಇದರಲ್ಲಿ ತಪ್ಪೇನೂ ಇಲ್ಲ.
ಏಕೆಂದರೆ ಇದು ಕೋಣೆಯಲ್ಲಿ ಕುಳಿತು ರಚಿಸಿದ ಕವನವಲ್ಲ .
ತಮ್ಮ ಎದುರಿಗೆ ನೆರೆದು ನಿಂತಿರುವ ಸಾಮಾನ್ಯ ಹಳ್ಳಿಗರನ್ನು ಉದ್ದೇಶಿಸಿ, ಸ್ಫೂರ್ತಿ ಉಕ್ಕಿದಾಗ ಹಾಡಿದ ಹಾಡಿದು.
ಹಾಡು ಕೇಳುತ್ತಿರುವ ಸಾಮಾನ್ಯ ಹಳ್ಳಿಗನಿಗಾಗಿ ಅವನ ಹೃದಯಕ್ಕೆ ಅರ್ಥವಾಗುವಂತಹ ಭಾಷೆಯಲ್ಲಿ ಹಾಡಿದ ಹಾಡಿದು.
………………………………………………………..
( ಈ ಲೇಖನ ಬರೆಯುವಾಗ ಸಹಾಯ ಮಾಡಿದ ನನ್ನ ಶ್ರೀಮತಿ ವನಮಾಲಾಳಿಗೆ ಋಣಿಯಾಗಿದ್ದೇನೆ.)

Friday, October 3, 2008
ಅಳಬೇಡ ತಂಗಿ ಅಳಬೇಡ
ಶಿಶುನಾಳ ಶರೀಫರು ೪೦೦ಕ್ಕೂ ಹೆಚ್ಚು ಗೀತೆಗಳನ್ನು ರಚಿಸಿದ್ದಾರೆ. ಅವುಗಳಲ್ಲಿ ಅನೇಕ ಗೀತೆಗಳು ಸಂದರ್ಭಾನುಸಾರವಾಗಿ ಹೊರಹೊಮ್ಮಿದ ಹಾಡುಗಳು. ಇಂತಹ ಹಾಡುಗಳಲ್ಲಿ “ಬಿದ್ದೀಯಬೆ ಮುದುಕಿ”, “ಗಿರಣಿ ವಿಸ್ತಾರ ನೋಡಮ್ಮ” , “ಅಳಬೇಡ ತಂಗಿ ಅಳಬೇಡ” ಮೊದಲಾದವು ಪ್ರಸಿದ್ಧವಾದ ಹಾಡುಗಳಾಗಿವೆ.
ಶರೀಫರು ಒಮ್ಮೆ ತಮ್ಮ ಊರಿನಲ್ಲಿ ನಡೆದು ಹೋಗುತ್ತಿದ್ದಾಗ, ಅದೇ ಮದುವೆಯಾದ ಹುಡುಗಿಯನ್ನು ಗಂಡನ ಮನೆಗೆ ಕಳಸಿ ಕೊಡುತ್ತಿರುವ ನೋಟವನ್ನು ನೋಡಿದರು. ಶರೀಫರ ಕಾಲದಲ್ಲಿ ಬಾಲ್ಯವಿವಾಹಗಳೇ ನಡೆಯುತ್ತಿದ್ದವು. ಹೀಗಾಗಿ, ಗಂಡನ ಮನೆಗೆ ಹೋಗುತ್ತಿರುವ ಹುಡುಗಿ ಅಳುವದು ಸಾಮಾನ್ಯ ದೃಶ್ಯವಾಗಿತ್ತು.
ಆಗ ಶರೀಫರ ಬಾಯಿಂದ ಹೊರಹೊಮ್ಮಿದ ಹಾಡು: ಅಳಬೇಡ ತಂಗಿ ಅಳಬೇಡ.
ಆ ಹಾಡು ಹೀಗಿದೆ:
ಅಳಬೇಡ ತಂಗಿ ಅಳಬೇಡ ನಿನ್ನ
ಕಳುಹಬಂದವರಿಲ್ಲಿ ಉಳುಹಿಕೊಂಬುವರಿಲ್ಲ ||ಪಲ್ಲ||
ಖಡೀಕೀಲೆ ಉಡಿಯಕ್ಕಿ ಹಾಕಿದರವ್ವಾ ಒಳ್ಳೆ
ದುಡಕೀಲೆ ಮುಂದಕ ನೂಕಿದರವ್ವಾ
ಮಿಡಕ್ಯಾಡಿ ಮದಿವ್ಯಾದಿ ಮೋಜು ಕಾಣವ್ವ ಮುಂದ
ಹುಡುಕ್ಯಾಡಿ ಮಾಯದ ಮರವೇರಿದೆವ್ವಾ ||೧||
ಮಿಂಡೇರ ಬಳಗವು ಬೆನ್ನ್ಹತ್ತಿ ಬಂದು ನಿನ್ನ
ರಂಡೇರೈವರು ಕೂಡಿ ನಗುತಲಿ ನಿಂದು
ಕಂಡವರ ಕಾಲ್ಬಿದ್ದು ಕೈಮುಗಿದು ನಿಂತರ
ಗಂಡನ ಮನಿ ನಿನಗ ಬಿಡದವ್ವ ತಂಗಿ ||೨||
ರಂಗೀಲಿ ಉಟ್ಟೀದಿ ರೇಶ್ಮಿದಡಿಶೀರಿ ಮತ್ತs
ಹಂಗನೂಲಿನ ಪರವಿ ಮರತೆವ್ವ ನಾರಿ
ಮಂಗಳ ಮೂರುತಿ ಶಿಶುನಾಳಧೀಶನ
ಅಂಗಳಕ ನೀ ಹೊರತಾದೆವ್ವ ಗೌರಿ ||೩||
..................................
ಹಾಡು ಪ್ರಾರಂಭವಾಗುವದು ಸಮಾಧಾನಪಡಿಸುವ ಮಾತುಗಳಿಂದ:
“ತಂಗೆವ್ವಾ, ನೀ ಎಷ್ಟs ಅತ್ತರೂ, ಅದರಿಂದ ಏನೂ ಪ್ರಯೋಜನ ಇಲ್ಲ.
ಇಲ್ಲಿ ಕೂಡಿದವರು ನಿನ್ನನ್ನು ಕಳಸುವವರೇ ಹೊರತು, ಉಳಿಸಿಕೊಳ್ಳೋರಲ್ಲಾ”.
ಈ ಮಾತುಗಳಲ್ಲಿಯ ವ್ಯಂಗ್ಯವನ್ನು ಗಮನಿಸಬೇಕು. ತೊಂದರೆ ಕೊಟ್ಟವನನ್ನು ಅಥವಾ ಅಪಕಾರ ಮಾಡಿದವನನ್ನು ಬೈಯಲು ಉಪಯೋಗಿಸುವ ಪದಪುಂಜವಿದು : “ ಏನಪಾ, ನಮ್ಮನ್ನೇನ ಕಳಸಬೇಕಂತ ಮಾಡಿಯೇನ?”
ಆದರೆ, ಇಲ್ಲಿ ಕಳಿಸುತ್ತಿರುವದು ಗಂಡನ ಮನೆಗೆ, ಅಂದರೆ ಸಂಸಾರವೆಂಬ ಮಾಯಾಲೋಕಕ್ಕೆ. ಇಂತಹ ಮಾಯಾಪ್ರಪಂಚಕ್ಕೆ ಈ ಹುಡುಗಿಯನ್ನು ನೂಕುತ್ತಿರುವವರ ಸಡಗರ ನೋಡಿರಿ:
“ಖಡೀಕೀಲೆ ಉಡಿಯಕ್ಕಿ ಹಾಕಿದರವ್ವಾ ಒಳ್ಳೆ
ದುಡಕೀಲೆ ಮುಂದಕ ನೂಕಿದರವ್ವಾ”.
ಗಂಡನ ಮನೆಗೆ ಕಳಿಸುವಾಗ ಮಗಳ ಉಡಿಯಲ್ಲಿ ಅಕ್ಕಿ ತುಂಬಿ ಕಳಿಸುವ ಸಂಪ್ರದಾಯವಿದೆಯಲ್ಲವೆ?
ಹಾಗಾಗಿ, ಈ ಹುಡುಗಿಯ ಉಡಿಯಲ್ಲಿ ಖಡಕ್ಕಾಗಿ (=full) ಅಕ್ಕಿ ತುಂಬಿ, ಬಳಿಕ ದುಡುಕುತ್ತ(=ಜೋರಿನಿಂದ) ಅವಳನ್ನು ಮುಂದೆ ನೂಕಿದರಂತೆ!
ಇದೆಲ್ಲ ಹುಡುಗಿಗೂ ಬೇಕಾದದ್ದೆ! ಅವಳು ಮಿಡುಕಿ, ಮಿಡುಕಿ ಅಂದರೆ ಹಂಬಲಿಸಿ ಮದುವೆಯಾದವಳು.
ಈ ಮಾಯೆಯ ಸಂಸಾರವನ್ನು ತಾನೇ ಹುಡುಕಿ ಹೊಕ್ಕವಳು.
ಒಮ್ಮೆ ಹೊಕ್ಕ ಮೇಲೆ ಮುಗಿಯಿತು.
ಇನ್ನು ಅವಳಿಗೆ ಮರಳುವ ಮಾರ್ಗವಿಲ್ಲ. This is path of no return.
ಈಗಾಗಲೇ ಅವಳಿಗೆ ಮಿಂಡರು ಗಂಟು ಬಿದ್ದಿದ್ದಾರೆ.
ಮಿಂಡರು ಅಂದರೆ ಮನಸ್ಸನ್ನು ಹಾದಿಗೆಡಿಸುವ ಪ್ರಲೋಭನೆಗಳು.
ತನ್ನಲ್ಲಿ ಸಂಪತ್ತು ಕೂಡಬೇಕು, ತನ್ನ ಅಂತಸ್ತು ಇತರರಿಗಿಂತ ಹೆಚ್ಚಾಗಬೇಕು, ತಾನು ಸರೀಕರೆದುರಿಗೆ ಮೆರೆಯಬೇಕು, ಇಂತಹ ಸಾಮಾನ್ಯ ಅಪೇಕ್ಷೆಗಳು ಮನಸ್ಸನ್ನು ಸನ್ಮಾರ್ಗದಿಂದ ದೂರ ಸರಿಸುವದರಿಂದ ಇವೆಲ್ಲ ಮಿಂಡರಿದ್ದ ಹಾಗೆ.
ದೇವರ ಆಲೋಚನೆ ಅಂದರೆ ಪಾತಿವ್ರತ್ಯ ; ಇತರ ಆಲೋಚನೆಗಳು ಹಾದರ.
ಇಷ್ಟೇ ಅಲ್ಲದೆ, ಇವಕ್ಕೆಲ್ಲ ಪ್ರೋತ್ಸಾಹ ಕೊಡುವ ‘ಐವರು ರಂಡೆಯರು’ ಅಂದರೆ ನಮ್ಮ ಪಂಚ ಇಂದ್ರಿಯಗಳು : ಕಣ್ಣು, ಕಿವಿ, ಮೂಗು,ನಾಲಗೆ ಹಾಗು ಚರ್ಮ.
ಈ ಐದು ಇಂದ್ರಿಯಗಳೂ ಸಹ ಸುಖಾಪೇಕ್ಷೆ ಮಾಡುತ್ತವೆ, ಅಲ್ಲವೆ?
“ಇಷ್ಟೆಲ್ಲ ಬಂಧನಗಳು ಇದ್ದಾಗ, ಇಲ್ಲಿ ಬಂದಿರುವ ಬಂಧುಗಳ ಕಾಲಿಗೆ ಬಿದ್ದರೆ, ನಿನಗೆ ಸದ್ಗತಿ ಹೇಗೆ ಸಿಕ್ಕೀತು, ತಂಗೆವ್ವಾ? ಇನ್ನು ನಿನಗೆ ಮಾಯಾಸಂಸಾರ ತಪ್ಪದು. ಮೋಜು ಬಯಸಿ ಮದಿವ್ಯಾದಿ, ಈಗ ಮೋಜನ್ನು ಅನುಭವಿಸು”, ಎಂದು ಶರೀಫರು ಹೇಳುತ್ತಾರೆ.
ಶರೀಫರು ಆ ಹುಡುಗಿಗೆ ಈ ಮಾಯಾಸಂಸಾರದಲ್ಲಿದ್ದ ಉತ್ಸಾಹವನ್ನು , ಆಸಕ್ತಿಯನ್ನು ಗಮನಿಸಿ ಈ ರೀತಿ ಹೇಳುತ್ತಾರೆ:
“ರಂಗೀಲಿ ಉಟ್ಟೀದಿ ರೇಶ್ಮಿದಡಿಶೀರಿ ”
ದಡಿ ಅಂದರೆ ಅಂಚು. ರಂಗೀಲಿ(=ರಂಗಿನಲ್ಲಿ) ಅಂದರೆ ಉತ್ಸಾಹದಿಂದ ರೇಶಿಮೆ ಸೀರೆ ಉಟ್ಟಿದ್ದಾಳೆ.
ಆದರೆ, ಈ ಹುಡುಗಿ ಹಂಗನೂಲಿನ ಪರವಿಯನ್ನು ಮರೆತು ಬಿಟ್ಟಿದ್ದಾಳೆ.
ಹಂಗನೂಲು ಅಂದರೆ, ಕೈಯಿಂದ ತಯಾರಿಸಿದ ಹತ್ತಿಯ ನೂಲು. ಅದರ ಪರವಿಯನ್ನು ಈ ಹುಡುಗಿ ಮರೆತಿದ್ದಾಳೆ. ಪರವಿ ಅಂದರೆ ಪರವಾಹ್ ಅನ್ನುವ ಉರ್ದು ಪದ ಅಂದರೆ ಕಾಳಜಿ, ಚಿಂತೆ, care, bother.
ಹೇಗೆ ಕೈಮಗ್ಗದ ಹತ್ತಿಯ ಬಟ್ಟೆ ನಿಸರ್ಗಸಹಜವಾಗಿದೆಯೊ ಹಾಗೆಯೇ ದೇವರ ನೆನಪು ನಮ್ಮ ಮನಸ್ಸಿಗೆ ಹತ್ತಿರವಾದದ್ದು. ಕೃತಕ ಹಾಗು ಆಡಂಬರದ ರೇಶಿಮೆ ಸೀರೆ ಎಂದರೆ ಸಂಸಾರದ ವೈಭವ. ಈ ವೈಭವಕ್ಕೆ ನೀನು ಮನಸೋತರೆ, ನೀನು ಮಂಗಳಮೂರುತಿ ದೇವರ ಸಾನ್ನಿಧ್ಯಕ್ಕೆ ಹೊರತಾಗುತ್ತೀ ಎಂದು ಶರೀಫರು ಎಚ್ಚರಿಸುತ್ತಾರೆ.
ಶರೀಫರು ‘ಮಂಗಳಮೂರುತಿ’ ಎನ್ನುವ ಪದವನ್ನು ಉದ್ದೇಶಪೂರ್ವಕವಾಗಿ ಬಳಸಿದ್ದಾರೆ. ಏಕೆಂದರೆ, ultimately ನಮಗೆ ಮಂಗಳವಾಗುವದು ಪಾರಮಾರ್ಥಿಕ ಚಿಂತನೆಯಿಂದಲೇ ಹೊರತು, ಸಾಂಸಾರಿಕ ಆಡಂಬರದಿಂದಲ್ಲ.
ಲೌಕಿಕ ಪ್ರತಿಮೆಗಳಿಗೆ ಆಧ್ಯಾತ್ಮಿಕ ಅರ್ಥವನ್ನು ನೀಡುವದು ಶರೀಫರ ವೈಶಿಷ್ಟ್ಯವಾಗಿದೆ. ಮಿಂಡೇರ ಬಳಗ, ರೇಶಿಮೆ ಸೀರಿ ಮೊದಲಾದ ಪ್ರತಿಮೆಗಳು ಅಚ್ಚ ದೇಸಿ ಪ್ರತಿಮೆಗಳು. ಇದರ ಜೊತೆಗೇ ಮಾಯದ ಮರದಂತಹ ಅಚ್ಚರಿಯ ಪ್ರತಿಮೆಗಳನ್ನೂ ಅವರು ಸಂಯೋಜಿಸುತ್ತಾರೆ. ಈ ರೀತಿಯಲ್ಲಿ ಶರೀಫರು ಲೌಕಿಕವಾಗಿ ಪ್ರಾರಂಭಿಸಿದ ಹಾಡನ್ನು ಆಧ್ಯಾತ್ಮಿಕ ಚಿಂತನೆಗೆ ಅತ್ಯಂತ ಸಹಜವಾಗಿ ತಿರುಗಿಸುತ್ತಾರೆ.

Subscribe to:
Posts (Atom)