Sunday, February 15, 2009

ನಿರ್ದೇಶಕರ ಆಶಯ

೧೯೫೦ರ ದಶಕದಲ್ಲಿ ರಾಜಕಪೂರ, ದಿಲೀಪಕುಮಾರ ಹಾಗೂ ದೇವ ಆನಂದ ಇವರು ಹಿಂದಿ ಚಿತ್ರಜಗತ್ತಿನಲ್ಲಿ ಹೆಸರಾಂತ ನಟರಾಗಿದ್ದರು.
ರಾಜಕಪೂರ ತನ್ನ ಸ್ವಂತ ಚಿತ್ರನಿರ್ಮಾಣ ಪ್ರಾರಂಭಿಸಿದ ಮೇಲೆ ಸಾಮಾಜಿಕ ಪ್ರಜ್ಞೆಯುಳ್ಳ ಹಲವು ಚಿತ್ರಗಳನ್ನು (ಉದಾ: ಬೂಟ್ ಪಾ^ಲಿಶ್, ಜಾಗತೇ ರಹೋ, ಜಿಸ್ ದೇಶ ಮೆ ಗಂಗಾ ಬಹತೀ ಹೈ ಇತ್ಯಾದಿ ಚಲನಚಿತ್ರಗಳನ್ನು ನಿರ್ಮಿಸಿದರು.
ಬಹುಶ: ಚಾರ್ಲಿ ಚಾಪ್ಲಿನ್ನನ Tramp ಇಮೇಜಿನಿಂದ ಪ್ರೇರಿತರಾದ ಇವರು ತಮ್ಮ ಅನೇಕ ಚಿತ್ರಗಳಲ್ಲಿ ಸದ್ಭಾವನೆಯಿಂದ ತುಂಬಿದ, ಆದರೆ ವ್ಯವಹಾರ ಬುದ್ಧಿಯಿಲ್ಲದ ಅಮಾಯಕ ತರುಣನ ಪಾತ್ರವನ್ನು ನಿರ್ಮಿಸಿದ್ದಾರೆ.

‘ಅನಾಡಿ’ ಚಲನಚಿತ್ರವು ಇಂತಹ ಒಂದು romantic film.
ರಾಜಕಪೂರ ಇದರಲ್ಲಿ ‘ಅನಾಡಿ’, ಅಂದರೆ ವ್ಯವಹಾರ ಬುದ್ಧಿ ಇಲ್ಲದ ಅಮಾಯಕನಾದ ಒಳ್ಳೆ ಹುಡುಗನ ಪಾತ್ರ ನಿರ್ವಹಿಸಿದ್ದಾರೆ.

ಸರಳ ಬುದ್ಧಿಯ ರಾಜಕಪೂರ ಹೊಟ್ಟೆಪಾಡಿಗಾಗಿ ಹೊಟೆಲ್ ಒಂದರಲ್ಲಿ ವೇಟರ್ ಕೆಲಸಕ್ಕೆ ಸೇರಿಕೊಳ್ಳುತ್ತಾನೆ.
ಅಡುಗೆ ಮನೆಯಿಂದ ತಿಂಡಿ ತಂದು ಗಿರಾಕಿಗಳಿಗೆ ಕೊಡಬೇಕಷ್ಟೆ.
ಆ ಸಮಯದಲ್ಲಿ ತಿಂಡಿ ತಯಾರಿಸುವ ಪದಾರ್ಥದಲ್ಲಿ ಜೊಂಡಿಗವೊಂದು ಬಿದ್ದದ್ದನ್ನು ನೋಡಿದ ಈತ, “ಜೊಂಡಿಗ” ಎಂದು ಗಲಾಟೆ ಮಾಡುತ್ತ ಹೊರಬರುತ್ತಾನೆ.
ಗಿರಾಕಿಗಳು ಬೈಯುತ್ತ ಎದ್ದು ಹೊರಗೆ ಹೋಗುತ್ತಾರೆ.
ಹೊಟೆಲ್ ಮಾಲಕ ಈತನನ್ನು ಒದ್ದು ಹೊರಗೆ ಹಾಕುತ್ತಾನೆ.

ಇಲ್ಲಿಗೆ ಈತನ ಅಮಾಯಕ ಬುದ್ಧಿಯನ್ನು ತೋರಿಸಿದಂತಾಯಿತು.
ಆದರೆ ನಿರ್ದೇಶಕರಿಗೆ ಇರುವ ಆಶಯ ಇನ್ನೂ ಹೆಚ್ಚಿನದು.
ಅವರಿಗೆ ಈ ದಡ್ಡ ವ್ಯಕ್ತಿಯ ಹೃದಯದಲ್ಲಿ ಇರುವ ಕರುಣೆಯನ್ನು , ಜಗದ ಎಲ್ಲ ಜೀವಿಗಳ ಬಗೆಗೆ ಇವನಿಗೆ ಇರುವ ಮರುಕವನ್ನು ತೋರಿಸಬೇಕಾಗಿದೆ.

ಅದಕ್ಕಾಗಿ ಒಂದು ಹಾಡಿನ ದೃಶ್ಯವನ್ನು ತರಲಾಗಿದೆ:
“ಕಿಸೀಕೆ ಮುಸ್ಕುರಾಹಟೋಂಪೆ ಜೀ ಉಠಾ
ಕಿಸೀಕೆ ದರ್ದ ಹೋ ಸಕೇ ತೊ ಲೇ ಉಧಾರ
ಕಿಸೀಕೆ ವಾಸತೆ ಹೊ ದಿಲ್ ಮೆ ಪ್ಯಾರ
ಜೀನಾ ಇಸೀಕಾ ನಾಮ ಹೈ.”

(ಯಾರದೋ ನಗುವಿನಿಂದ ಮನವು ಅರಳಿದೆ,
ಯಾರದೋ ನೋವು ಕಡವಾಗಿ ಬಂದಿದೆ,
ಯಾರಿಗಾಗಿ ಏನೊ ಇಲ್ಲಿ ಪ್ರೀತಿ ತುಂಬಿದೆ,
ಇದೇ ನೋಡು ಜೀವನ ಎಂದು ಅಂದಿದೆ.)

ಈ ಹಾಡನ್ನು ಹಾಡುತ್ತ ರಾಜಕಪೂರ ಹೊರ ಸಾಗಿದಾಗ ಅವನ ಬೂಟಿನ ಕೆಳಗೆ ಒಂದು ಹುಳ ಕಾಣುತ್ತದೆ.
ರಾಜಕಪೂರ ತಕ್ಷಣವೆ ಬಾಗಿ, ಅದನ್ನೆತ್ತಿ ದಾರಿಯ ಬದಿಯಲ್ಲಿ ಬಿಡುತ್ತಾನೆ.
ಈ ಒಂದು ದೃಶ್ಯವನ್ನು ನಿರ್ಮಿಸಲು ನಿರ್ದೇಶಕರು ಎಷ್ಟು ಪರಿಶ್ರಮಪಟ್ಟಿದ್ದಾರು ಎನ್ನುವದನ್ನು ಊಹಿಸಲು ಸಾಧ್ಯವಿಲ್ಲ.
ಮೊದಲಿಗೆ, ಈ ದೃಶ್ಯದ ಕಲ್ಪನೆ, ಬಳಿಕ ಚಿತ್ರಕತೆಯ ಲೇಖಕರೊಂದಿಗೆ ಸನ್ನಿವೇಶದ ಚರ್ಚೆ ಹಾಗೂ ಬರಹ, ಸಂಗೀತಗಾರರು ಹಾಗೂ ಗೀತೆಯ ಲೇಖಕರ ಜೊತೆಗೆ ಚರ್ಚೆ ಹಾಗೂ ಗೀತೆಯ ರಚನೆ ಇವೆಲ್ಲವೂ perfect ಆಗಿ ಬಂದ ಮೇಲೆ, ರಾಜಕಪೂರನಿಂದ ಸನ್ನಿವೇಶದ ಅಭಿನಯ, ಕೆಮರಾ ನಿರ್ದೇಶನ ಆಗಬೇಕು.
ಇವೆಲ್ಲ ಮುಗಿದು ಚಿತ್ರಪ್ರದರ್ಶನದ ಸಮಯದಲ್ಲಿ ಪ್ರೇಕ್ಷಕರ ಸ್ಪಂದನವನ್ನು ನಿರೀಕ್ಷಿಸಬೇಕು.
ಪ್ರೇಕ್ಷಕರು ಶೈಲೇಂದ್ರ ಬರೆದ ಈ ಗೀತೆಯನ್ನು, ಮುಖೇಶ ಅವರ ಹಾಡುಗಾರಿಕೆಯನ್ನು, ಶಂಕರ-ಜೈಕಿಶನ್ ಅವರ ಸಂಗೀತವನ್ನು ಹಾಗೂ ರಾಜಕಪೂರರ ಅಭಿನಯವನ್ನು ಮೆಚ್ಚಿದರೆಂದು ಹೇಳಬೇಕಾಗಿಲ್ಲ.
ಆ ಚಿತ್ರದ ಅತ್ಯಂತ ಯಶಸ್ವೀ ದೃಶ್ಯವಾಯಿತಿದು.
ನಿರ್ದೇಶಕರ ಆಶಯ ಈ ರೀತಿಯಾಗಿ ಸಫಲವಾಯಿತು.

ಇದೇ ರೀತಿಯಾಗಿ ಇರಾಣಿ ನಿರ್ದೇಶಕ ಮಜೀದ ಮಜೀದಿಯವರ ಚಲನಚಿತ್ರಗಳಲ್ಲಿ ಯಾವಾಗಲೂ ಮರುಕದ ಸಂದೇಶವನ್ನು ನೋಡಬಹುದು.
ಅವರ ನಿರ್ದೇಶನದ ‘ಬಚೇಹಾ-ಏ-ಅಸೇಮಾನ್’ (Children of Heaven) ಚಿತ್ರವು ಇರಾಣ ದೇಶದ ಬದುಕನ್ನು ಕಟ್ಟಿಕೊಡುತ್ತದೆ.
ಆ ದೇಶದ ಸಂಪ್ರದಾಯ ಬದ್ಧ ಜೀವನ, ಬಡತನ, ಪುರುಷಪ್ರಧಾನ ಸಮಾಜವ್ಯವಸ್ಥೆ ಇವುಗಳ ಚೌಕಟ್ಟಿನಲ್ಲಿ ಬದಕುತ್ತಿರುವ ಬಡ ಕುಟುಂಬವೊಂದರ ಚಿತ್ರವಿದು.
ಈ ಕುಟುಂಬದಲ್ಲಿರುವ ೧೦-೧೨ ವಯಸ್ಸಿನ ಹುಡುಗ ಹಾಗೂ ಅವನ ೮-೧೦ ವರ್ಷದ ತಂಗಿ ಇವರ ಸುತ್ತ ಕತೆ ಹೆಣೆಯಲಾಗಿದೆ.
ತಂಗಿಯ ಶಾಲಾ ಬೂಟುಗಳನ್ನು ದುರಸ್ತಿಗಾಗಿ ಒಯ್ದ ಅಣ್ಣ ಆಕಸ್ಮಿಕವಾಗಿ ಅವುಗಳನ್ನು ಕಳೆದುಕೊಳ್ಳುತ್ತಾನೆ. ತಂದೆಯ ಎದುರಿಗೆ ಹೇಳಲು ಅವರಿಗೆ ಹೆದರಿಕೆ.
ತಂಗಿಯ ಶಾಲೆ ಬೆಳಗಿನಲ್ಲಿ; ಅಣ್ಣನ ಶಾಲೆ ಮಧ್ಯಾಹ್ನ.
ಆದುದರಿಂದ ತಂಗಿ ಅಣ್ಣನ ಸ್ವಲ್ಪ ದೊಡ್ಡವಿರುವ ಬೂಟುಗಳನ್ನೇ ಹಾಕಿಕೊಂಡು ತನ್ನ ಶಾಲೆಗೆ ಹೋಗಬೇಕು. ಶಾಲೆಯಿಂದ ಓಡೋಡಿ ಬಂದು, ಕಾಯುತ್ತಿರುವ ಅಣ್ಣನಿಗೆ ಬೂಟುಗಳನ್ನು ಕೊಟ್ಟ ಬಳಿಕ ಆತ ಶಾಲೆಗೆ ಹೋಗಬೇಕು.
ಈ ironic situationಅನ್ನು ಮಜೀದಿ ಸಾಕಷ್ಟು ಜಾಣ್ಮೆಯಿಂದ ನಿರ್ದೇಶಿಸಿದ್ದಾರೆ.
ಆದರೆ ಅಲ್ಲಿಗೇ ಅವರು ನಿಲ್ಲುವದಿಲ್ಲ.
Tight screen play ಇರಬೇಕೆನ್ನುವ ನಿರ್ದೇಶಕರ ಗುಂಪಿಗೆ ಅವರು ಸೇರಿದವರಲ್ಲ.
ತಮ್ಮ ಚಿತ್ರದ ಮೂಲಕ ಅನುಕಂಪದ ಸಂದೇಶವನ್ನು ಪ್ರೇಕ್ಷಕರಿಗೆ ತಲುಪಿಸಬೇಕೆನ್ನುವದಷ್ಟೇ ಅವರ ಕಳಕಳಿ. ಆದುದರಿಂದ ಅವರು ಚಿತ್ರದಲ್ಲಿ ಈ ಮುಂದಿನ ದೃಶ್ಯವನ್ನು ಸೇರಿಸಿದ್ದಾರೆ:
ಒಮ್ಮೆ ತಂಗಿಯು ಶಾಲೆಯಿಂದ ಬರುತ್ತಿರುವಾಗ ಧಾರಾಕಾರ ಮಳೆ ಪ್ರಾರಂಭವಾಗುತ್ತದೆ.
ಗಟಾರಗಳು ತುಂಬಿ ಹರಿಯುತ್ತವೆ.
ಈ ಹುಡುಗಿ ಗಟಾರವನ್ನು ದಾಟುವಾಗ, ಒಂದು ಬೂಟು ಕಳಚಿ ಗಟಾರದಲ್ಲಿ ಬಿದ್ದು ತೇಲಿ ಹೋಗುತ್ತದೆ.
ಅದನ್ನು ನೋಡಿದ ಪಕ್ಕದ ಅಂಗಡಿಯಾತ ಅದನ್ನು ಎತ್ತಿಕೊಡಲು ಧಾವಿಸುತ್ತಾನೆ.
ಅವನಿಗೆ ಸಹಾಯ ಮಾಡಲು ಮತ್ತಿಬ್ಬರು ಸೇರಿಕೊಳ್ಳುತ್ತಾರೆ.
ಕೊನೆಗೂ ಬೂಟು ಅವಳಿಗೆ ದೊರೆಯುತ್ತದೆ.

ಇಲ್ಲಿ ನಿರ್ದೇಶಕನಿಗೆ ತೋರಿಸಬೇಕಾದದ್ದು ಆ ಹುಡುಗಿಯ ತೊಂದರೆಗಳನ್ನಲ್ಲ.
ಸಾದಾ ಮನುಷ್ಯರ ಮನದಲ್ಲಿ ಮೂಲಭೂತವಾಗಿ ಇರುವ ಅನುಕಂಪವನ್ನು ತೋರಿಸಲು ಮಜೀದಿ ಪ್ರಯತ್ನಿಸುತ್ತಿದ್ದಾರೆ.
ಆದುದರಿಂದ ಈ ಒಂದು ಬೂಟನ್ನು ಎತ್ತಿಕೊಡಲು ಅದೆಷ್ಟು ಸಾಮಾನ್ಯ ಜನ ಪ್ರಯತ್ನಿಸುತ್ತಾರೆ ಎನ್ನುವದನ್ನು ಮಜೀದಿ ತೋರಿಸಿದ್ದಾರೆ.
ಆ ಚಿತ್ರದ ಹೃದಯಸ್ಪರ್ಶಿ ದೃಶ್ಯಗಳಲ್ಲಿ ಇದೂ ಒಂದು ಎಂದು ಹೇಳಬಹುದು.

ಮಜೀದಿಯವರ ಮತ್ತೊಂದು ಚಿತ್ರ ‘ರಂಗ-ಏ-ಖೊದಾ’ (Color of Paradise)ದಲ್ಲಿ ೧೦-೧೨ ವರ್ಷದ ಕುರುಡ ಹುಡುಗನ ಸುತ್ತ ಕತೆ ಹೆಣೆಯಲಾಗಿದೆ.
ಈ ಕುರುಡ ಹುಡುಗ ಬೇಸಿಗೆಯ ರಜೆಗಾಗಿ ಶಾಲೆ ಬಿಟ್ಟ ಮೇಲೆ, ಕರೆದುಕೊಂಡು ಹೋಗಲು ಬರುವ ತಂದೆಗಾಗಿ ಕಾಯುತ್ತ ರಸ್ತೆಯ ಬೆಂಚಿನ ಮೇಲೆ ಕೂತಿದ್ದಾನೆ.
ರಸ್ತೆಯ ಮತ್ತೊಂದು ಭಾಗದಲ್ಲಿ ಅವನ ಎದುರಿಗೆ ಗಿಡ ಮರಗಳಿದ್ದು ಅಲ್ಲಿ ಹಕ್ಕಿಯೊಂದು ಗೂಡು ಕಟ್ಟಿದೆ. ಕಾಡು ಬೆಕ್ಕೊಂದು ಆ ಹಕ್ಕಿಯ ಮರಿಗಳನ್ನು ತಿನ್ನಲು ಬಂದದ್ದನ್ನು ಈ ಕುರುಡ ಹುಡುಗ ಧ್ವನಿಗಳ ಮೇಲೆ ಅರ್ಥ ಮಾಡಿಕೊಳ್ಳುತ್ತಾನೆ.
ತಕ್ಷಣವೇ ಅಲ್ಲಿ ಅಂದಾಜಿನ ಮೇಲೆ ಹೋಗಿ, ಅಂದಾಜಿನ ಮೇಲೆ ಆ ಮರವನ್ನು ಹತ್ತಿ, ಆ ಹಕ್ಕಿ ಮರಿಯನ್ನು ಉಳಿಸುವದರಲ್ಲಿ ಯಶಸ್ವಿಯಾಗುತ್ತಾನೆ.
ಅವನ ಕಣ್ಣು ಕುರುಡಾಗಿರಬಹುದು, ಆತನ ಮನಸ್ಸಲ್ಲ.

ಇವರ ಹಳ್ಳಿಯಲ್ಲಿ ಈ ಹುಡುಗನ ಅಜ್ಜಿಯೊಬ್ಬಳಿದ್ದಾಳೆ.
ಅವಳು absolutely orthodox.
ಅವಳು ಒಮ್ಮೆ ಮನೆಯ ಎದುರಿನ ತೊರೆಯನ್ನು ದಾಟುವಾಗ, ಅಲ್ಲಿ ಕೆಸರಲ್ಲಿ ಸಿಲುಕಿ ಒದ್ದಾಡುತ್ತಿರುವ ಮೀನನ್ನು ಎತ್ತಿ ಮತ್ತೆ ನೀರಿನಲ್ಲಿ ಬಿಡುವ ದೃಶ್ಯವನ್ನು ತೋರಿಸಲಾಗಿದೆ.

ಕತೆಗೆ ಈ ಎರಡೂ ದೃಶ್ಯಗಳ ಅವಶ್ಯಕತೆ ಏನು ಎಂದು ವಿಚಾರಿಸುವದು ಇಲ್ಲಿ ಅವಶ್ಯಕವಾಗಿದೆ.
ಕುರುಡ ಹುಡುಗನ ತಾಯಿ ತೀರಿಕೊಂಡಿದ್ದಾಳೆ.
ಅವನ ತಂದೆಗೆ ಎರಡನೆಯ ಮದುವೆಯಾಗಬೇಕಾಗಿದೆ.
ಎರಡನೆಯ ಸಂಬಂಧದ ಬೀಗರಿಗೆ ತನ್ನ ಕುರುಡು ಮಗನ ಬಗೆಗೆ ತಿಳಿಯುವದು ಆತನಿಗೆ ಬೇಕಾಗಿಲ್ಲ.
ಈ ವಿಷಯಕ್ಕೆ ಆತನಲ್ಲಿ ಮಾನವ ಸಹಜ ಸ್ವಾರ್ಥ ಅಡಗಿದೆ.
ತನ್ನ ಕುರುಡ ಮಗ ನೀರಲ್ಲಿ ಕೊಚ್ಚಿ ಹೋಗುವಾಗ ಸಹ, ಆತನನ್ನು ರಕ್ಷಿಸಲು ಒಂದು ಅರೆಕ್ಷಣದಷ್ಟು ವಿಳಂಬವನ್ನು ಆತ ಮಾಡುತ್ತಾನೆ.

ಇದಕ್ಕೆ contrast ಆಗಿ, ಕುರುಡ ಹುಡುಗನ ಹಾಗು ಅವನ ಅಜ್ಜಿಯ (ಅಂದರೆ ತಾಯಿಯ ತಾಯಿಯ) ಮಾನವೀಯ ಗುಣಗಳನ್ನು highlight ಮಾಡುವದು ಚಿತ್ರದ ನಿರ್ದೇಶಕನ ಆಶಯವಾಗಿದೆ.
ತನ್ಮೂಲಕ ಕರುಣೆಯ ಸಂದೇಶವನ್ನು ಆತ ಪ್ರೇಕ್ಷಕರಿಗೆ ತಲುಪಿಸಬಯಸುತ್ತಾನೆ.

ಸಂಕಟ, ತೊಂದರೆ ಇವು ಜಗತ್ತಿನ ಎಲ್ಲೆಡೆಯೂ ಇವೆ. ಆದರೆ ಬದುಕನ್ನು ಸುಂದರವಾಗಿ ಮಾಡಲು ಬೇಕಾದದ್ದು ಮಾನವೀಯ ಅನುಕಂಪ ಎನ್ನುವ ಸಂದೇಶವನ್ನು ಮಜೀದ ಮಜೀದಿ ನಮಗೆ ಹೇಳಬಯಸುತ್ತಾರೆ.
……………………………………………………………………….....
[ಟಿಪ್ಪಣಿ: ಮಜೀದ ಮಜೀದಿಯವರ ಚಿತ್ರಗಳ ಪ್ರತಿಗಳನ್ನು ಕೊಟ್ಟಿದ್ದಕ್ಕಾಗಿ ನಾನು
ಶ್ರೀ ಅಮರ ಅವರಿಗೆ ಋಣಿಯಾಗಿದ್ದೇನೆ.
-ಸುನಾಥ]

21 comments:

Keshav.Kulkarni said...

ಸುನಾಥ,
ಈ ಇರಾನೀ ಸಿನೆಮಾ ನೋಡಬೇಕಲ್ಲ?
ಕೇಶವ

sunaath said...

ಕೇಶವ,
ಮಜೀದ ಮಜೀದಿಯವರ ಮತ್ತೊಂದು ಸಿನೆಮಾ ‘ಬರನ’(=ಮಳೆ)ಯನ್ನು ನಾನು ಇಲ್ಲಿ ಉಲ್ಲೇಖಿಸಿಲ್ಲ. ಅಫಘಾನಿಸ್ತಾನದಲ್ಲಿಯ ಅರಾಜಕತೆ ಹಾಗೂ ಬಡತನದಿಂದಾಗಿ ಅಲ್ಲಿಯ ಜನ ಗಡಿದಾಟಿ ಇರಾನಕ್ಕೆ ಬರುತ್ತಿರುತ್ತಾರೆ. ಇರಾಣದಲ್ಲಿ ಈ ನಿರಾಶ್ರಿತರು ಪಡುವ ಬವಣೆಯನ್ನು ಮಜೀದಿ ಈ ಚಿತ್ರದಲ್ಲಿ ನಿರೂಪಿಸಿದ್ದಾರೆ.ಕೆಸರಲ್ಲಿ ಅರಳುವ ಕಮಲ ಎಂದು ನಾವು ಹೇಳುತ್ತೇವಲ್ಲವೆ? ಅದರಂತೆ ಈ ಕಷ್ಟಗಳಲ್ಲಿಯೆ ಅರಳುವ,ಆದರೆ fulfill ಆಗದ ಪ್ರೇಮಕತೆಯೂ ಈ ಚಿತ್ರದಲ್ಲಿದೆ.
ಸಿನೆಮಾಗಳ DVD ಎಲ್ಲೆಡೆಗೂ ಲಭ್ಯವಿವೆ.

shivu.k said...

ಸುನಾಥ್ ಸರ್,

ನಿಮ್ಮ ನೋಡುವ ದೃಷ್ಟಿಕೋನವನ್ನು ಅರಿತ ಮೇಲೇ ನನ್ನ ಶೈಲಿ ಮತ್ತು ನಿಮ್ಮ ಸೂಕ್ಷ್ಮತೆಗಳನ್ನು ಅಳವಡಿಸಿಕೊಂಡು..ಮಾಜಿದ್ ಮಜಿದಿರವರ.ಬರಾನ್, ಕಲರ್ ಅಪ್ ಪ್ಯಾರಡೈಸ್, ಫಾದರ್, ಮತ್ತೆ ಸಿನಿಮಾ ಪ್ಯಾರಡೈಸೋ, ಕುರುಷೋವರವರ ರೋಷೋಮನ್, ಇಕಿರೂ, ಮತ್ತು ಫೋಟೋಗ್ರಫಿ ದೃಷ್ಟಿಕೋನಕ್ಕಾಗಿಯೇ "ರೋಡ್ ಟು ಪರ್ಡಿಷನ್" ಸೇರಿದಂತೆ ಅನೇಕ ಚಿತ್ರಗಳನ್ನು ನೋಡಿದೆ.
ಇದರಿಂದ ನಿರ್ದೇಶಕನ ಸೂಕ್ಷ್ಮತೆಗಳ ಜೊತೆಗೆ [ಕ್ಯಾಮೆರಾ, ಚಿತ್ರಕತೆ, ನಿರೂಪಣೆ, ಬರವಣಿಗೆ, ಅಯ್ಕೆ ಮಾಡುವ ಸ್ಥಳಗಳು, ಇತ್ಯಾದಿ]ಜೊತೆಗಾರರ ಕೈಜೋಡಿಸುವಿಕೆಯೆಲ್ಲಾ ಅರಿವಿಗೆ ಬಂದು ಅವರ ಬಗ್ಗೆ ಗೌರವ ಹೆಚ್ಚಾಗುತ್ತದೆ....ಮತ್ತು ಅವರು ಸಿನಿಮಾ ಮಾಡುವುದು ಹಣ ಮತ್ತು ಹೆಸರಿಗೆ ಆದರೂ, ಅದನ್ನೂ ಮೀರಿ ಇಡೀ ಪ್ರಪಂಚಕ್ಕೆ ಹೊಸತನ್ನು ಕೊಡುವ ಕಾಳಜಿ ಕುತೂಹಲ ಕಾಣಿಸಲ್ಪಡುತ್ತದೆ....
ನೀವು ಕೊಟ್ಟಿರುವ " ಕಲರ್ ಅಪ್ ಪ್ಯಾರಡೈಸ್ ಸಿನಿಮಾ" ದಲ್ಲಿ ಕುರುಡುತನವನ್ನು ಸಕಾರಾತ್ಮಕವಾಗಿ ಬಳಸುವುದು ಹೇಗೆ ಆನ್ನುವುದನ್ನು ನಿರ್ದೇಶಕರು ತುಂಬಾ ಚೆನ್ನಾಗಿ ತೋರಿಸಿದ್ದಾರೆ....
ಆತ ಹೊಲದಲ್ಲಿ ಜೋಳದ ತೆನೆಗಳನ್ನು ಮುಟ್ಟಿ, ಸವರಿ ಅದರೊಳಗೆ ಆಕ್ಷರಗಳನ್ನು ಪದಗಳನ್ನು ತಿಳಿದುಕೊಳ್ಳುವುದು, ನೀರಿನ ಅಲೆಗಳು ಮತ್ತು ಮರಳನ್ನು ಕೈಸೋಕಿಸಿದಾಗ ಅವನಿಗೆ ಆಕ್ಷರಗಳು ಕಾಣಿಸುತ್ತವೆ....ಇಂಥವೇ ಉದಾಹರಣೆಗಳನ್ನು ಅನೇಕ ಸೂಕ್ಷ್ಮಗಳನ್ನು ತೋರಿಸುವಲ್ಲಿ ಸಫಲರಾಗಿದ್ದಾರೆ....children of heaven" ಇಂಥ ಹಲವು ಸೂಕ್ಷ್ಮಗಳು, ಅದರಲ್ಲೂ ಕಣ್ಣಂಚಿನಲ್ಲೇ ಭಾವನೆಗಳನ್ನು ವ್ಯಕ್ತಪಡಿಸುವುದು......ಮತ್ತು ನೀವು ಹೇಳಿದ ಹಲವು ಸೂಕ್ಷ್ಮಗಳು ಗೊತ್ತಾಗುತ್ತವೆ....
ನೋಡೋಣ ನೀವು ಇನ್ನೂ ಇಂಥ ವಿಚಾರಧಾರೆಗಳನ್ನು ಕೊಡುತ್ತಿರುವಾಗ ನಮ್ಮ ಅನುಭವಗಳು ಅದೆಷ್ಟು ಪಕ್ವವಾಗುತ್ತವೋ, ಅಂತ ಅವಕಾಶ ಪಡೆದುಕೊಳ್ಳುವ ಭಾಗ್ಯ ನಮ್ಮದಾಗುತ್ತದೋ ನೋಡೋಣ....ಇದನ್ನು ಮುಂದುವರಿಸಿ ಸರ್.....

PARAANJAPE K.N. said...

ಸುನಾಥ್ ಸರ್,
ನೀವು ಚಲನಚಿತ್ರಗಳನ್ನು ವಿಶ್ಲೇಷಿಸುವ, ಅವುಗಳೊಳಗಿನ ಸೂಕ್ಷ್ಮ ನಿರೂಪಣೆಯ ಎಳೆಯನ್ನು ಅನಾವರಣಗೊಳಿಸುವ ರೀತಿ ಅನನ್ಯವಾದುದು. ನಿಮ್ಮೊಳಗೂ ಒಬ್ಬ ನಿರ್ದೇಶಕನಿದ್ದಾನೆ ಎ೦ದೆನಿಸುತ್ತದೆ. Great.
ಮು೦ದುವರಿಸಿ ಸರ್.

sunaath said...

ಶಿವು,
ಕುರುಡ ಹುಡುಗನು ಕುರುಡನಾಗಿದ್ದರೂ ಸಹ, ನಿಸರ್ಗದೊಡನೆ ಎಂಥ ಸಾಮರಸ್ಯ ಹೊಂದಿದ್ದನೆಂದು ನೋಡಿದಾಗ, thrill ಆಗುತ್ತದೆ, ಅಲ್ವಾ?
Children of Heavenದಲ್ಲೂ ಸಹ, ಅಣ್ಣ ಮತ್ತು ತಂಗಿ ನೀರುಕಟ್ಟೆಯ ಮೇಲೆ ಜೊತೆಯಾಗಿ ಕೂತು ಆಟವಾಡುವದನ್ನು ನೋಡಿದಾಗ, ಎಂಥಾ ಪ್ರೀತಿ ಹುಟ್ಟುತ್ತದೆ, ಅಲ್ವಾ?

sunaath said...

ಪರಾಂಜಪೆಯವರೆ,
ನನ್ನೊಳಗೆ ಎಂಥಾ ನಿರ್ದೇಶಕ ಇದ್ದಾನು? ನಿರ್ದೇಶನವನ್ನು ಅರಿಯಲು ನಾನು ಪ್ರಯತ್ನಿಸುತ್ತಿದ್ದೇನಷ್ಟೆ.

ಸುಪ್ತದೀಪ್ತಿ suptadeepti said...

ಕಾಕಾ, ಈ ಎಲ್ಲಾ ಸಿನೆಮಾಗಳ ಹೆಸರುಗಳನ್ನು ಕೇಳಿದ್ದೇನೆ, ಆದರೆ ಯಾವುದನ್ನೂ ನೋಡಿಲ್ಲ. ನೋಡುವ ಹಂಬಲ ಹುಟ್ಟಿಸಿದ್ದೀರಿ, ಅದಕ್ಕಾಗಿ ವಂದನೆಗಳು.

Prabhuraj Moogi said...

"Children of Heaven" ಸಿನೆಮಾ ಬಗ್ಗೆ ಕೇಳಿದ್ದೆ, ನೀವು ನೆನಪಿಸಿದ ಮೇಲಂತೂ ನೊಡಬೇಕಂಬ ಆಸೆ ಮತ್ತಷ್ಟು ಹಿರಿದಾಗಿದೆ, ಮಕ್ಕಳ ಮನಸ್ಸಿನ ತುಮುಲಗಳನ್ನು ಅದು ಹೇಗೆ ನಿರ್ದೇಶಕ ಅರಿತಿರಬಹುದು, ಅವರ ಬಾಲ್ಯದ ನೆನಪುಗಳು ಸಹಾಯಕವಾಗಿರಲೂಬಹುದು, ಆದರೂ ವಿಶಿಷ್ಟ ಪ್ರಯತ್ನ, ಅದನ್ನು ನೀವು ವಿಶ್ಲೇಶಿಸಿದ್ದು ಚೆನ್ನಾಗಿತ್ತು ಧನ್ಯವಾದಗಳು.

ಮಲ್ಲಿಕಾರ್ಜುನ.ಡಿ.ಜಿ. said...

ಸರ್,
ನಾನು ಮಾಜಿದ್ ಮಜಿದಿಯ ಎಲ್ಲಾ ಚಿತ್ರಗಳನ್ನೂ ನೋಡಿರುವೆ. ನೀವದನ್ನು ಅದ್ಭುತವಾಗಿ ಬರೆದಿರುವಿರಿ. ಮತ್ತೊಮ್ಮೆ ಮೆಲುಕು ಹಾಕುವಂತಾಯ್ತು. ರಾಜ್ ಕಪೂರ್ ಬಗ್ಗೆ ಇನ್ನೂ ಬರೆಯಿರಿ.ಆತನ ಆವಾರ,ಶ್ರೀ೪೨೦ ಹಲವಾರು ಬಾರಿ ನೋಡಿರುವೆ.
ತೆಲುಗಿನ ಶೇಖರ್ ಕಮ್ಮುಲ "ಗೋದಾವರಿ" ಚಿತ್ರದಲ್ಲಿ ನೀವು ಬರೆದಿರುವಂತೆ ಕರುಣಾರಸವನ್ನು ಮನತಟ್ಟುವಂತೆ ನಿರ್ದೇಶಿಸಿದ್ದಾನೆ. ಕೆಲಸವಿಲ್ಲದ ನಾಯಕ,ತನ್ನ ಬೊಟಿಕ್ ಅಂಗಡಿ ಲಾಸ್ ನಲ್ಲಿರುವ ನಾಯಕಿ -ಇಬ್ಬರೂ ತಾವು ಗೆಲ್ಲಬಹುದಾಗಿರುವ treasure hunt ನ ೫೦ಸಾವಿರ ಬಹುಮಾನವನ್ನು ಬಡ ಹುಡುಗ 'ಚಿನ್ನ'ನಿಗೆ ಬಿಟ್ಟುಕೊಡುವುದನ್ನು ತುಂಬಾ ಚೆನ್ನಾಗಿ ಚಿತ್ರಿಸಿದ್ದಾನೆ. ಆ ಚಿತ್ರವನ್ನು ನೋಡಿ, "ಪಾಪಿಕೊಂಡದಿಂದ ಭಾದ್ರಾಚಲಂಗೆ" ಗೋದಾವರಿ ನದಿ ಮೇಲೆ ದೋಣಿಯಲ್ಲಿ ಹೋಗುವ ಕನಸನ್ನು ನಾನು, ಪ್ರಕಾಶ್ ಹೆಗಡೆ ಮತ್ತು ಶಿವು ಹೆಣೆಯುತ್ತಿದ್ದೇವೆ...

Shiv said...

ಸುನಾಥ್ ಸಾರ್,
ಮೂಕಿ ಸಿನಿಮಾದ ಯುಗದ ನಂತರ ಬಹುಷ: ನಿರ್ದೇಶಕರಿಗೆ ತಮ್ಮ ಆಶಯಗಳನ್ನು ಹೇಳಲು ಅನೇಕ ಸಾಧನಗಳು ಸಿಕ್ಕವು.
ಹಾಡುಗಳು ಅಥವಾ ಸಂಭಾಷಣೆಗಳು ಅವುಗಳಲ್ಲಿ ಪ್ರಮುಖವಾದವು.

ಆದರೆ ಮೂಕಿ ಸಿನಿಮಾ(ಚಾರ್ಲಿ ಚಾಪ್ಲಿನ್)ಗಳಲ್ಲಿ ಈ ಸಾಧನಗಳು ಇಲ್ಲದೇ ಅದು ನಿರ್ದೇಶಕನ ಕ್ರಿಯೆಟಿವಿಟಿಗೆ ಒಂದು ಸವಾಲಿಗಿದ್ದಿರಬಹುದು. ಆದರೂ ಚಾಪ್ಲಿನ್ ಇವುಗಳ ನಡುವೆಯೂ ಅದ್ಬುತವೆನ್ನಬಹುದಾದ ಕಲಾಕೃತಿಗಳನ್ನೇ ರಚಿಸಿದ.

ನೀವು ಹೇಳಿದ ಸಾಲಿನಲ್ಲಿ ಇನ್ನೊಂದು ಸಿನಿಮಾ ’ಪುಷ್ಪಕ ವಿಮಾನ’. ಸಿಂಗೀತಂ ಶ್ರೀನಿವಾಸ್ ಸಿರ್ದೇಶನದ ಇದರಲ್ಲಿ ಇಂತಹ ಅನೇಕ symbolic ದೃಶ್ಯಗಳಿವೆ.

KANASU said...

ಅಕ್ಕರೆಯ ಡಾ. ಯು.ಆರ್.ಅನಂತಮೂತರ್ಿಯವರಿಗೊಂದು ಬಹಿರಂಗ ಮನವಿಪತ್ರ

'ನೀವೂ ಬಾಳಿ, ನಮ್ಮನ್ನೂ ಬದುಕಲು ಬಿಡಿ'



ನೆಲಕ್ಕಿಳಿಯದೇ ಸದಾ ಮೇಲೆ ಹಾರಾಡುವ ಸೂಕ್ಷ್ಮತೆ ಸಂವೇದನೆಗಳೆನಿಸಿಕೊಂಡ ಪೀಠಾಧಿಕಾರಿ ಸನ್ಮಾನ್ಯ ಶ್ರೀ ಅನಂತಮೂತರ್ಿಯವರಿಗೆ ಪ್ರೀತಿ ಗೌರವ ಪೂರ್ವಕ ನಮಸ್ಕಾರಗಳು.

ಬಹಳ ವರ್ಷಗಳಿಂದಲೂ ನಮ್ಮ ಪರಿಚಯ ನಿಮಗಿದೆ. ನಾನು ಶಾಂತಿನಗರದ ಅಪಾಟರ್್ಮೆಂಟ್ನಲ್ಲಿ, ಸಾಲುಮರದ ತಿಮ್ಮಕ್ಕನೊಂದಿಗೆ ಯವನಿಕಾದಲ್ಲಿ ನಡೆದ 'ಪರಿಸರ ಪ್ರಜ್ಞೆ ಕಥೆ-ವ್ಯಥೆ' ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ- ಇನ್ನೂ ಅನೇಕ ಸಂದರ್ಭಗಳಲ್ಲಿ ತಮ್ಮೊಂದಿಗೆ ಮಾತನಾಡುವ ಮಹಾಸೌಭಾಗ್ಯ ನನಗೆ ದೊರೆತಿತ್ತು. ನನಗೆ ಗೊತ್ತು ತಾವೀಗ ನೆನಪು ಮಾಸಿ ಹೋದವರಂತೆ ನಟಿಸುತ್ತೀರಿ, ಪರವಾಗಿಲ್ಲ. ವಿಷಯಕ್ಕೆ ಬರೋಣ; ನನ್ನ ಕೆಲವು ಪ್ರಶ್ನೆಗಳಿವೆ; ದಯಮಾಡಿ ಕೋಪಿಸಿಕೊಳ್ಳದೆ, ಸಿಡುಕದೆ ಯೋಚಿಸಿ, ಚಿಂತಿಸಿ ನಿಮ್ಮ ಬುದ್ಧಿವಂತಿಕೆಯ ಕಠಿಣತೆಯಲ್ಲ ಒಡಲ ಮೆದುವಲ್ಲಿ ಅಡಗಿರುವ ಘನ ಧಾವ್ನ ಉತ್ತರ ಕೊಡಿ.
ತಾವು ಸಮಾಜವಾದಿಗಳು. ಧೀಮಂತ ಶಾಂತವೇರಿ ಗೋಪಾಲಗೌಡರೊಂದಿಗೆ ಒಡನಾಟ ಇಟ್ಟುಕೊಂಡಿದ್ದವರು. ಬೇಕಾದಷ್ಟು ಬರೆದು ಎಲ್ಲವನ್ನೂ ಪಡೆದವರು. ಸ್ವಾಮಿ, ತಮಗೊಂದು ವಿಷಯ ನೆನಪು ಮಾಡುತ್ತೇನೆ. ಗೋಪಾಲಗೌಡರವರು ಚುನಾವಣೆಯಲ್ಲಿ ಸೋತು ಸಣ್ಣಮನೆಯ ಮೂಲೆ ಸೇರಿದ್ದಾಗ, ಮುಖ್ಯಮಂತ್ರಿಯೊಬ್ಬರು ಅವರಲ್ಲಿಗೆ ಹೋಗಿ 50000 ರೂಪಾಯಿಗಳ ಹಣನೀಡಲು ಹೋದಾಗ ಗೌಡರು ಹೇಳುತ್ತಾರೆ 'ತಾವು ಬಂದದ್ದು ನನಗೆ ತುಂಬಾ ಸಂತೋಷ, ನಾನಿನ್ನೂ ಬರಿದಾಗಿಲ್ಲ, ಈ ನಾಡಲ್ಲಿ ಯಾರ ಜೇಬಿಗೆ ಕೈ ಹಾಕಿದರೂ ಕನಕಾಂಬರಿಯ 20ರೂಪಾಯಿಯ ನೋಟು ಸಿಕ್ಕೇ ಸಿಗುತ್ತದೆ. ದಯಮಾಡಿ ತಪ್ಪ ತಿಳಿಯದೆ ನಿಮ್ಮ ದುಡ್ಡನ್ನು ವಾಪಸ್ಸು ತೆಗೆದುಕೊಳ್ಳಿ, ನೀವು ಬಂದಿರುವ ಪ್ರೀತಿಯನ್ನು ಬಿಟ್ಟುಹೋಗಿ.' ತದನಂತರ ಕಡಿದಾಳ್ಮಂಜಪ್ಪನವರು ಗೋಪಾಲಗೌಡರ ಬಳಿ ಹೋಗಿ 'ನಿಮ್ಮ ಬಳಿ ಏನೂ ಇಲ್ಲ, ಸಕರ್ಾರದಿಂದ ನಿಮಗೆ ಆರು ಎಕರೆ ಜಮೀನು ಕೊಡುತ್ತಿದ್ದೇವೆ ಒಪ್ಪಿಸಿಕೊಳ್ಳಿ' ಎಂದರು. ಅದಕ್ಕೆ ಮುಗುಳು ನಕ್ಕು ಗೋಪಾಲಗೌಡರು ಹೇಳುತ್ತಾರೆ, 'ಅಲ್ಲ ಕಣಯ್ಯ ಉಳುವವನೇ ಭೂಮಿಯ ಒಡೆಯ ಎಂದು ನಾನು ಸಾರಿಕೊಂಡಿರುವಾಗ ಈ ಭೂಮಿಯನ್ನು ನಾನು ಉಳುವುದಕ್ಕಾಗುತ್ತದೆಯೇ? ನನ್ನ ಮೇಲೆ ಯಾಕಪ್ಪ ನಿನಗೆ ಇಷ್ಟೊಂದು ಕೋಪ? ನೋಡು, ಆ ಬಾಗಿಲಲ್ಲಿ ಆರು ಜನ ಕಡು ಬಡವರು ನೋಡುತ್ತಿದ್ದಾರೆ, ಅವರಿಗೆ ಹಂಚಿಬಿಡು ಈ ಆರು ಎಕರೆ!' ಎಂದು.
ಇನ್ನೊಮ್ಮೆ ಎಮ್ಎಲ್ಎ ಆಗಿದ್ದವರುಗಳಿಗೆ ಬಿಡಿಎ(ಆ ಕಾಲದಲ್ಲಿ ಬಿಡಿಎಗೆ ಬೇರೆ ಹೆಸರಿತ್ತು) ನಿವೇಶನಗಳನ್ನು ಕೊಡುವ ಯೋಜನೆಯ ಸಂದರ್ಭದಲ್ಲಿ ಗೋಪಾಲಗೌಡರಿಗೂ ಕೊಡಲು ಹೋದರು. ಅದಕ್ಕೆ ಗೋಪಾಲಗೌಡರು 'ನನ್ನ ಪಾಲನ್ನು ತೆಗೆದಿಟ್ಟಿರಿ, ಮೊದಲು ನಾಡಿನ ಕಡುಬಡವರಿಗೆಲ್ಲ ನಿವೇಶನ ಕೊಡಿ. ನನ್ನ ಪಾಲನ್ನು ನಾನೇ ಬಂದು ತೆಗೆದುಕೊಂಡು ಹೋಗುವೆ'
ಸ್ವಾಮಿ ಅನಂತಮೂತರ್ಿಯವರೇ, ಆ ಪುಣ್ಯಾತ್ಮ ಗೋಪಾಲಗೌಡರು ಕೊನೆಗೂ ಪಾಲು ತೆಗೆದುಕೊಳ್ಳಲಿಲ್ಲ! ಅವರ ಒಡನಾಡಿಯಾದ ತಾವು ಸಮಾಜವಾದಿಯಲ್ಲವೇ? ರಾಜರೋಷವಾಗಿ ಮನೆಯಿದ್ದೂ ಬಿಡಿಎನ ಕಾನೂನು ಕಟ್ಟಳೆಗಳ ಮುರಿದು ನಿವೇಶನವೂ ಸಾಲದಾಗಿ ಕೋಟಿ-ಕೋಟಿ ಬೆಲೆ ಬಾಳುವ ಡಾಲರ್ಸ್ ಕಾಲೋನಿಯಲ್ಲಿ ಮನೆಯನ್ನ ಪಡೆದಿರುವಿರಿ. ತಮಗೆ ಆಸೆ ಅತಿ, ಅಂತಃಕರಣ ಕಮ್ಮಿ. ಈ ಗುಣದಿಂದಾಗಿಯೇ ಸಾವಿರಾರು ಸುಂದರ ಜೀವಿಗಳು ಇಂದು ನಾಮಾವಶೇಷಗೊಂಡಿವೆ. ಇನ್ನೂ ಸಾವಿರಾರು ಜೀವಿಗಳು ನಿನರ್ಾಮಗೊಳ್ಳುವ ಹಂತಕ್ಕೆ ಬಂದು ತಲುಪಿವೆ. ನಮಗೆ ಗೊತ್ತು ಈ ಬರಹ ನಮ್ಮನ್ನು ಕಾಡು ಪ್ರಾಣಿಗಳಂತೆ ಕಾಣಿಸುತ್ತದೆ. ಒಪ್ಪಿಕೊಳ್ಳುತ್ತೇವೆ, ನಾವು ಕಾಡಿನ ಪ್ರಾಣಿಗಳೇ. ನೀವು ತಿಳಿದಂತೆ ನಾವು ಯಾರಿಗೆ ಯಾರೂ ಶತ್ರುಗಳಲ್ಲ. ಆದರೆ, ನಾವೆಲ್ಲ ಸಾಮಾನ್ಯವಾಗಿ ಒಬ್ಬ ಪ್ರಾಣಿಗೆ ಹೆದರಿಕೊಳ್ಳುತ್ತೇವೆ. ಆ ಪ್ರಾಣಿ ಯಾರೆಂದಿರ? ತಮ್ಮಂತ ಮನುಷ್ಯರು.
ತಾವು ಕಲಾಪ್ರಿಯರು ಸಾಹಿತ್ಯ ಸಾರ್ವಭೌಮರು, ಹಾಗೂ ಉನ್ನತ ಪೀಠಾಧಿಪತಿಗಳು. ತಮ್ಮ ಶ್ರೇಷ್ಠ ಕಲಾವಂತಿಕೆಗಾಗಿ ನೊಂದು ಬೆಂದ ಜೀವಗಳನ್ನು ಬೇಟೆಯಾಡುವಿರಿ. 'ದುಷ್ಟಮೃಗಗಳ ಬೇಟೆ' ರಾಜನ ಪರಮಕರ್ತವ್ಯವನ್ನಾಗಿಯೂ ಸೂತ್ರೀಕರಿಸಿದ ಸಂವೇದನಾಶೀಲ ಸಾಹಿತಿ ನೀವು. ತಾವು ತಿಳಿದಂತೆ ಈ ನಾಡಲ್ಲಿ ಕಡುಬಡವರೆಲ್ಲಿದ್ದಾರೆ? ಹೇಳಿ. ಮುರುಕು ರೊಟ್ಟಿಯ ಚೂರಿಗಾಗಿ ಸಾವಿರಾರು ಅವ್ವಂದಿರು ಅಳುತ್ತಾ ಕುಳಿತಿದ್ದಾರೆ. ಬತ್ತಿದ ಎದೆಮೊಲೆಗೆ ಸಾವಿರಾರು ಮಕ್ಕಳು ಬಾಯೊಡ್ಡಿವೆ. ಘನತೆಯೊತ್ತ ತಾವು ನೀಟಾಗಿ ಟ್ರಿಮ್ ಮಾಡಿಸಿದ ಗಡ್ಡ ನೀವಿಕೊಳ್ಳುತ್ತ ಗರಿಗರಿಯಾದ ದೇಸಿ ಬಟ್ಟೆಯೊಂದಿಗೆ, ಡಾಲರ್ಸ್ ಕಾಲೋನಿಯಿಂದ ಮನುಕುಲ ಬೆಳಗುವ ಮಾತನಾಡಲು ಊರುಕೇರಿಗೆ ಬರುತ್ತೀರ. 'ಹಾಳಾದ್ದು ಇಲ್ಲಿ ಊರು ಊರೇ ಹಾಗಿದೆ, ಕೇರಿ ಕೇರಿಯಾಗುತ್ತಲೇ ಇದೆ' ಮುಂಚೆ ಊರ ಒಳಗಿದ್ದ ಕೇರಿ ಉರ ಹೊರಗಿದೆ. ಕಾನೂನು ಕಟ್ಟಳೆಗಳು, ಜನಪ್ರಿಯ ಯೋಜನೆಗಳು ನಯನಾಜೂಕಾಗಿ ಕೇರಿಯನು ಹೊರಕ್ಕಿಟ್ಟಿವೆ. ಇನ್ನೂ ನೀವು ಊರಿಗೆ ಬಂದರೂ ಕೇರಿಗೂ ಬಂದರೂ ಸುದ್ಧಿಯೋ, ಸುದ್ಧಿ. ತಾವೇ ಬಾಳುವ ಕಲೆ ತಮಗೇ ಚೆನ್ನಾಗಿ ಗೊತ್ತು. ತಮ್ಮ ಭಾಷಣಕೇಳಿ ನೋವುಂಡವರ ಮುಖದಲ್ಲಿ ನೋವಕಲೆ ಇನ್ನೂ ಹಾಗೇ ಇದೆ. ಹಾರಾಡುವ ನಿಮ್ಮ ಜೊತೆ ಕೂಡಲು ದಲಿತ, ಶೂದ್ರ ಮಂದಿಗೇನು ಕಮ್ಮಿಯಿಲ್ಲ ಬಿಡಿ. ಅವರೂ ನಿರ್ಧರಿಸಿದ್ದಾರೆ ಹಿನ್ನುಡಿ, ಮುನ್ನುಡಿ, ಬೆನ್ನುಡಿ ಬರೆಸಿಕೊಂಡು ಬರುವ ಇನ್ನೊಂದು ಕಾಲಕ್ಕೂ ತಮ್ಮನ್ನು ಸಾಹಿತ್ಯಲೋಕದ ಚಕ್ರವತರ್ಿಯನ್ನಾಗಿಸಲು. ನನ್ನದೇ ಒಂದೆರಡು ಸಾಲು ಪದ್ಯವೋ, ಗದ್ಯವೋ, ವಾಚ್ಯವೋ, ಪಾಚ್ಯವೋ ಗೊತ್ತಿಲ್ಲ: ಆ ಊರಿಗೇ ದೊಡ್ಡದಾದ ಅಸ್ತಿಪಂಜರವೊಂದು ಸಹಜ ಭಾವ ಭಾವನೆ ತೊರೆದು, ತನ್ನದೇ ಮಾಯಾ, ಮಂತ್ರ, ತಂತ್ರವ ಕಾಲನಾಗಿಸಿಕೊಂಡು ವೇಷ, ಭೋಗ, ಅನುಮಾನ, ಸೇಡು-ಕೇಡುಗಳನೇ, ಮನುಕುಲ ಬೆಳಗುವ ಬೆಳಗೆಂದು ಜಗಕೆ ಸಾರುತಾ ಬಾಳುತಿದೆ. ತಬ್ಬಲಿ ಹಸಿವಿನ ಜೇಡ ಬದುಕ ಗೂಡ ಹೆಣೆಯಲು ಅದು ಜಾಗಕೊಡುವುದೇ?

ತಾವು ಅಭಿನವ ಪ್ರಕಾಶನದ 'ಮಾತುಸೋತ ಭಾರತ'ದಲ್ಲಿ ತಾವು ಪಡೆದ ಬಿಡಿಎ ನಿವೇಶನ ನಂತರದ ಕೋಟಿ-ಕೋಟಿ ಬೆಲೆಬಾಳುವ ಡಾಲರ್ಸ್ ಕಾಲೋನಿ ಮನೆ ಕುರಿತು ತಮ್ಮ ಮನದಾಳದ ಮಾತುಗಳಲ್ಲಿ ಪಿ.ಲಂಕೇಶ್, ಡಾ. ಜಿ.ರಾಮಕೃಷ್ಣ ಸತ್ಯ ಅರಿಯದೇ ತಮ್ಮ ವಿರುದ್ಧ ಕಿಡಿ ಕಾರಿರುವರೆಂದು ಬರೆದುಕೊಂಡಿದ್ದೀರಿ. ಸ್ವಾಮಿ, ಲೋಕಸಂಸಾರಿ ಡಾ.ಜಿ.ಆರ್ ಎಲ್ಲಿ? ನೊಂದು ಬೆಂದವರ ಕತ್ತಲ ಬದುಕಿಗೆ ಬೆಳಕಾದ ಲಂಕೇಶ್ ಎಲ್ಲಿ? ಸತ್ಯವ ಅರೆದು, ಕುಡಿದು ನೀಟಾಗಿ ಬಡವರ ಬೋಳಿಸುವ ತಮ್ಮ ದಾಡಿಯಂತೆ ತಮ್ಮ ಬರವಣಿಗೆಯೂ ನನಗೆ ಕಾಣಿಸುತ್ತಿದೆ. ಸತ್ಯವ ಬಗೆದರೆ ನಮ್ಮ ದುರಾದೃಷ್ಟ ನೋವಿನಿಂದ ನೋಡಿದರೆ ತಾವು ಅಸ್ತಿಪಂಜರವಾಗಿ ಬಿಡುತ್ತೀರ.

ನಮ್ಮ ಅವ್ವನ ಆಣೆಗೂ ಹೇಳುತ್ತೇನೆ ತಾವೆಂದರೆ ನನಗೆ ಬಹಳ ಇಷ್ಟ. ಯಾಕೆಂದರೆ ತಾವು ಪೂತರ್ಿ ಕೆಟ್ಟವರಲ್ಲ. ಬೇರೆಬೇರೆ ಸ್ತರಗಳಲ್ಲಿ ಒಂದಿಷ್ಟು ಒಳಿತನ್ನೂ ಮಾಡಿದ್ದೀರಿ. ತಮ್ಮ ಬಾಳು ಬರಿ ಸಪ್ಪೆಯಲ್ಲ ಅದಕ್ಕೆ ಒಂದುಕಲ್ಲು ಉಪ್ಪಾಕಿದ್ದೇನೆ. ಎಸ್ತರ್ ಅವ್ವನ ಜೊತೆ ತಮ್ಮ ಬಾಳು ನಮಗೆ ಸ್ಪೂತರ್ಿ. ಡಾಲರ್ಸ್ ಕಾಲೋನಿ ಮಾತ್ರ ನಮಗೆ ನೋವಾಗಿ ಒಂದು ಪದ್ಯವೋ, ಗದ್ಯವೋ ಹೊರಬಂದಿದೆ ಸಾಧ್ಯವಾದರೆ ಓದಿ:





ಮುಖದ ಆದೇಶ ಮೀರಿ ಬಾಲ ಅಲುಗಿತ್ತು

ಸಂಸ್ಕೃತಿ, ಇತಿಹಾಸ, ಪದ, ಪದಾರ್ಥ, ಅಕ್ಷರ, ಧರ್ಮ, ಪಕ್ಷ, ರಾಜಕೀಯದ ನಡುವೆ ನಿಂತ ಆನೆ-ಅಂಬಾರಿಗಳು ಅವುಗಳ ಬೆನ್ನಮೇಲೆ ಹೊಳೆವ ಚಿನ್ನದ ಛತ್ರಿ. ಅದರ ನೆರಳ ಕೆಳಗೆ ಯಾವುದೋ ನಾಟಕದ ಪಾತ್ರಗಳಂತೆ, ಪಾತ್ರದ ವೇಷ ಧರಿಸಿದ ತಾವು.
ಮೆರವಣಿಗೆಯ ಸುತ್ತ ನೀವು ಹೇಳಿದ್ದನ್ನೇ ಸತ್ಯವೆಂದು ನಂಬಿದವರ ಉಘೇ, ಉಘೇ, ಉಘೇ ಜೈಕಾರ. ಮುಗ್ಧ ಜನರ ಮುಖಭಾವದಲಿ ಮೂಡಿದೆ ಕನ್ನಡಿಯೊಳಗಿನ ಸಾಹಿತ್ಯಗಂಟಿಗೆ ಕೈ ಚಾಚಿ ನಿಂತ ಸಾಲು ಸಾಲು ಜನರ ಕಡೆದಿಟ್ಟ ಭಿತ್ತಿಚಿತ್ರ. ಪೀಠದ ಕತ್ತಿ ಹಿರಿದರಷ್ಟಕ್ಕೇ ರಾಜನಾಗಬಹುದೇ? ಬಡಜನರ ರಕ್ಷಣೆಯ ಸೂತ್ರ ನಿಮ್ಮಲ್ಲಿದೆಯೇ? ಪದಾರ್ಥ, ರಾಜಕೀಯ, ವಿದ್ಯೆ, ಧರ್ಮಗಳು ತಮಗೊಂದು ರಾಜಪ್ರಭಾವಳಿ ಒದಗಿಸಿವೆ ಅಲ್ಲವೇ? ರಾಜನೆಂದ ಮೇಲೆ ಮುಂದೆ ಬೆಳಕು ಹಿಂದೆ ಕತ್ತಲು, ಕತ್ತಲೊಳಗೆ ಮಡುಗಟ್ಟಿ ಹರಿವ ರಕ್ತ. ಡಾಲರ್ಸ್ ಕಾಲೋನಿ ರಾಜನಿಗೆ ಇದಲ್ಲ ಸಾಮನ್ಯ ಸಂಗತಿ. ಹಗಲು ಬಿಳಿ ಪಾರಿವಾಳಗಳ ಹಾರಿಸಿ, ರಾತ್ರಿ ಅವುಗಳತ್ತ ಕವಣೆ ಕಲ್ಲುಗಳ ಬೀಸಿದಂತೆ ಬದುಕು ಬರವಣಿಗೆಯ ಬೇರೆ ಬೇರೆ ಮಾಡಿದಿರಿ. ನಿಮ್ಮ ಗೆಲುವಿನ ರಹಸ್ಯ ನೀವು ನಡೆದು ಹೋಗುತ್ತಿರುವ ಹೆಜ್ಜೆ ಗುರುತುಗಳ ಕೆಳಗೆ ಹೀಗೆ ಕಠಿಣಗೊಂಡಿದೆ. ಜನರಿಗೆ ನಿಮ್ಮ ವಿಷಯವನ್ನು ಸತ್ಯವೆಂದು ನಂಬಿಸಲೋದಿರಿ. ಸಾಧ್ಯವಾಗದಾದಗ ನಿಮ್ಮ ವಿಷಯ ಹೇಳುವುದರ ಮೂಲಕ ಅವರ ವಿಷಯದ ದಾರಿ ತಪ್ಪಿಸಿ ಗೆಲುವು ನಿಮ್ಮದಾಗಿಸಿಕೊಂಡಿರಿ.
ತಾವು ಆಥರ್ಿಕವಾಗಿಯೂ, ಸಾಮಾಜಿಕವಾಗಿಯೂ ತುಂಬಾ-ತುಂಬಾ ಮೇಲ್ಸ್ತರದಲ್ಲಿದ್ದೀರಿ. ಯೂನಿವಸರ್ಿಟಿ, ಅಕಾಡೆಮಿ, ಸಂಸ್ಥೆಗಳು ಯಾವುದನ್ನೂ ಬಿಟ್ಟುಕೊಟ್ಟವರಲ್ಲ. ನೊಂದು ಬೆಂದವರ ಕುರಿತು ಮಾತನಾಡುವ ತಾವು ಸಿಕ್ಕ ಎಲ್ಲ ಸ್ಥಾನಗಳನ್ನೂ ನಿಸ್ಸಂಕೋಚವಾಗಿ ಸ್ವೀಕರಿಸುತ್ತೀರಿ. ಕನರ್ಾಟಕ, ಇಂಡಿಯಾ ಹಾಗೂ ಇಡೀ ವಿಶ್ವದ ವಕ್ತಾರರು ತಾವೇ ಆಗಿದ್ದೀರ ಎಲ್ಲಿ ಹೋದರೂ ತಮ್ಮ ಮೂತರ್ಿಯ ಆರಾಧನೆ ನಡೆದೇ ಇರುತ್ತದೆ. ಬಿಟ್ಟು ಕೊಡುವುದರಲ್ಲಿ ಬಾಳಿಸುವ ಕಲೆ ತಮ್ಮಿಂದ ದೂರಾಗಿದೆ. ಇನ್ನೊಂದು ವಿಷಯ ರಾಷ್ಟ್ರೀಯ, ಅಂತರರಾಷ್ಟ್ರೀಯ ಸಭೆ ಸಮಾರಂಭಗಳಲ್ಲಿ ಯಾರಾದರೂ ತಮಗೆ ನಿಮ್ಮ ನಾಡಲ್ಲಿ ಚೆನ್ನಾಗಿ ಬರೆಯುವ ಅಂತಃಸತ್ವವುಳ್ಳ ಮಂದಿಯ ಹೆಸರೇಳಿ ಅಂದರೆ; 'ಯಾರೂ ಇಲ್ಲ' ಎಂದೇಳಿ ನಿಮ್ಮ ಪೀಠವನ್ನು ಬಲು ಭದ್ರವಾಗಿಸಿಕೊಳ್ಳುತ್ತೀರ. ಸದಾ ಚಾಲ್ತಿಯಲ್ಲಿರಬೇಕಲ್ಲ ನಿಮ್ಮ ಚಕ್ರವತರ್ಿ ಪಟ್ಟ. ಕೊಡುವುದರಲ್ಲಿ ಪಡೆವ ಸುಖ ಕಾಣಿ ಸ್ವಾಮಿ.
ಇನ್ನೊಂದು ವಿಷಯ ತಮ್ಮ 'ಸಂಸ್ಕಾರ' ಕಾದಂಬರಿ ಹಾಗೂ ಚಲನಚಿತ್ರ ಕುರಿತದ್ದು; ಒಮ್ಮೆ ಶಾಂತವೇರಿ ಗೋಪಾಲಗೌಡರು ಅವರಷ್ಟೇ ಧೀಮಂತ ವ್ಯಕ್ತಿತ್ವವುಳ್ಳ ಮೌನದಲ್ಲೇ ರಾಜಕಾರಣದ ಧ್ಯಾನ ಮಾಡುತ್ತಿರುವ ಕೆ.ಎಚ್.ರಂಗನಾಥ್ರವರು ಸಂಸ್ಕಾರ ನೋಡಿದರಂತೆ; ಗೌಡರು 'ರಂಗನಾಥ ಪರವಾಗಿಲ್ಲ ಅಲ್ವೇನೊ? ಅಂದರಂತೆ ಅದಕ್ಕೆ ರಂಗನಾಥ್ ಅವರು ಹೆಳಿದರಂತೆ 'ಏನೋ ಸರ್ ನನಗಿಷ್ಟವಾಗಿಲ್ಲ. ಭೋಗ ಕ್ರಾಂತಿಯಾಗಬಾರದು ಕೊನೆ ಕೊನೆಗೆ ಬ್ರಾಹ್ಮಣ್ಯ ನೋಡಿ, ಆಳದಲ್ಲಿ ಉಳಿದೇ ಬಿಡುತ್ತದೆ. ಚಂದ್ರಿ ನನಗರ್ಥವಾಗಿದ್ದಾಳೆ. ನನ್ನ ಮಂದಿಗಿನ್ನೂ ಅರ್ಥವಾಗಿಲ್ಲ. ಕಾಲ ಅರ್ಥವಾಗಿಸುತ್ತದೆ' ಎಂದು. ಅದಕ್ಕೆ ಗೌಡರು 'ನಿಂದು ಪೂರ್ವಗ್ರಹ ಅನ್ನಿಸುತ್ತದೆ. ಬಾ ಇನ್ನೊಮ್ಮೆ ಸಂಸ್ಕಾರ ನೋಡೋಣ' ಎಂದು ಕರೆದುಕೊಂಡು ಹೋದರಂತೆ. ಮತ್ತೊಮ್ಮೆ ನೋಡಿ 'ಯಪ್ಪಾ ರಂಗನಾಥ, ನಾವು ಎಷ್ಟು ಮೋಸ ಹೋದೆವು, ನಾಜೂಕಾಗಿ ಎಂಥ ಎಡವಟ್ಟು ಮಾಡಿರುವನು. ಕಷ್ಟ, ಕಷ್ಟ' ಎಂದೇಳಿ ನೊಂದು ಕೆ.ಎಚ್.ರಂಗನಾಥ್ರವರ ಮೌನದ ಆಳದಲ್ಲಿರುವ ಮಾತುಗಳಿಗೆ ದನಿಯಾದರಂತೆ. ತಾವೊಮ್ಮೆ ತಮ್ಮ ಸಂಸ್ಕಾರವನ್ನು ಮತ್ತೆ ಓದಿ ನೋಡಿ. ಸತ್ಯ ನಿಮಗೇ ಗೊತ್ತಾಗುವುದು. ಅದನ್ನಾದರೂ ದಾಖಲಿಸಿ.
ಇನ್ನೊಂದು ವಿಷಯ ಬಿಟ್ಟುಕೊಡುವ ಬಗ್ಗೆ:
ಒಬ್ಬ ಮುಖ್ಯಮಂತ್ರಿಯ ಒಡನಾಟ ನನಗಿತ್ತು. ಅವರೂ ಕೆ.ಎಚ್.ರಂಗನಾಥರು ತಮ್ಮ ಸಂಪುಟದಲ್ಲಿ ಸಲಹೆ ಸೂಚನೆ ನೀಡುವ ಸಲುವಾಗಿ ಸ್ವತಃ ಅವರೇ ಕಾರು ಚಾಲನೆ ಮಾಡಿಕೊಂಡು ಹೋಗಿ ಒಪ್ಪಿಸಿದರಂತೆ. ನಾನು ವಿಧಾನಸೌಧದಲ್ಲಿ ಈ ಮುಖ್ಯಮಂತ್ರಿಯ ಜೊತೆಯಲ್ಲಿಯೇ ಇರುವಾಗ ಒಂದನ್ನು ಗಮನಿಸುತ್ತಿದ್ದೆ. ಅದೇನೆಂದರೆ; ಮುಖ್ಯಮಂತ್ರಿಯ ಕಾಣಲು ಕೆ.ಎಚ್.ರಂಗನಾಥ್ ಅವರು ಬರುವಾಗ ಗಜಗಾಂಭಿರ್ಯದಂತೆ ನಡೆದು ಬರುತ್ತಿದ್ದರು. ಮುಖ್ಯಮಂತ್ರಿಯ ಕೋಣೆಯಲ್ಲಿ ಖಗರ್ೆ, ಧರಮ್ಸಿಂಗ್, ಪಾಟೀಲ್, ಶ್ರೀಕಂಠಯ್ಯ ಮುಂತಾದ ಘಟಾನುಘಟಿಗಳಿಗೂ ಮುಖ್ಯಮಂತ್ರಿಯವರು ಮುಖ್ಯಮಂತ್ರಿ ಕುಚರ್ಿಯಲ್ಲಿಯೇ ಕುಳಿತು ಮಾತನಾಡುತ್ತಿದ್ದರು. ಆದರೆ ರಂಗನಾಥ್ ಅವರು ಬಂದರೆ ಆ ಕುಚರ್ಿಬಿಟ್ಟು ಪಕ್ಕದ ಸೋಫಾದಲ್ಲಿ ಮಾತನಾಡುತ್ತಿದ್ದರು. ಇದು ನಾನು ಬಹಳಷ್ಟ ಸಾರಿ ಕಂಡ ಚಿತ್ರಣ. ನನಗೆ ಈ ಕುರಿತು ದಿನದಿನವೂ ಕುತೂಹಲ. ಯಾಕೇ? ಹೀಗೆ ಎಂಬ ಪ್ರಶ್ನೆ. ಕೊನೆಗೆ ಉತ್ತರ ಸಿಕ್ಕಿತು. ಅದೇನು ಗೊತ್ತೆ? ಇಂದಿರಾಗಾಂಧಿಯವರ ಬಳಿ ವಿಸéಿಟಿಂಗ್ ಕಾಡರ್್ ಇಲ್ಲದೇ, ಅಪಾಯಿಂಟ್ಮೆಂಟ್ ಇಲ್ಲದೇ ಭೇಟಿಯಾಗುವ ಧೀಮಂತ ವ್ಯಕ್ತಿತ್ವ ಸಮಾಜದಲ್ಲಿ ಇನ್ನೂ ಸಾಮಾಜಿಕ ತಾಪ ಅನುಭವಿಸುತ್ತಿರುವ ಕೆ.ಎಚ್.ರಂಗನಾಥ್ ಅವರಿಗಿತ್ತು. ಒಮ್ಮೆ ಕೆ.ಎಚ್.ರಂಗನಾಥ್ರವರು ಮತ್ತು ನನಗೆ ಪರಿಚಯವಿದ್ದ ಆ ಮುಖ್ಯಮಂತ್ರಿಯೂ ಇಂದಿರಾಗಾಂಧಿಯವರ ಬಳಿ ಹೋದರಂತೆ. ಆಗ ಇಂದಿರಾಗಾಂಧಿಯವರು 'ಮಿಸ್ಟರ್ ರಂಗನಾಥ್, ನನಗೆ ಅರಸು ವಿಷಯದಲ್ಲಿ ತುಂಬಾ ಬೇಸರವಾಗಿದೆ. ಪಯರ್ಾಯ ವ್ಯಕ್ತಿಗಾಗಿ ಯೋಚಿಸಿದ್ದೇನೆ' ಒಂದು ನಿಮಿಷ ಮೌನವಾಗಿದ್ದ ರಂಗನಾಥ್ ಅವರು 'ಆಲ್ಟ್ನರ್ೆಟೀವ್ ಪರ್ಸನ್ ಯಾರು ಮೇಡಂ?' ಎಂದು ಕೇಳಿದರಂತೆ. ಅದಕ್ಕೆ ಇಂದಿರಾಗಾಂಧಿ ಅವರು 'ಐ ಯಾಮ್ ಥಿಂಕಿಂಗ್ ಆಫ್ ಯೂ' ಅಂದರಂತೆ. ತಕ್ಷಣವೇ ಕೆ.ಎಚ್.ರಂಗನಾಥ್ ಅವರು 'ನಾನಿನ್ನೂ ಆ ಅಸ್ಪೃಶ್ಯತೆಯ ತಾಪವನ್ನು ಅನುಭವಿಸುತ್ತಲೇ ಇದ್ದೇನೆ. ಇದರೊಂದಿಗೆ ಮುಂದೆ ಮಿತ್ರದ್ರೋಹಿ ಎಂಬ ಹಣೆ ಪಟ್ಟಿ ಹೊತ್ತ ಇತಿಹಾಸದ ಕಪ್ಪುಚುಕ್ಕೆಯಾಗಲಾರೆ. ಐ ಯಾಮ್ ವೆರಿ, ವೆರಿ ಸಾರಿ ಮೇಡಂ' ಎಂದೇಳಿ ಹೊರಬಂದರಂತೆ.
ಒಡಲವ್ಯಕ್ತಿತ್ವದ ಪಿ.ಲಂಕೇಶ್ರನ್ನು ಲಘುವಾಗಿ ಕಾಣುವ ತಾವು ಸ್ನೇಹದ ಬಗ್ಗೆ ಒಂದು ಸಂಗತಿ ತಿಳಿಯಬೇಕಾಗಿದೆ. ಮುಖ್ಯಮಂತ್ರಿಯಾಗಿದ್ದ ದೇವರಾಜಅರಸು ಅವರು ನಡುರಾತ್ರಿಯಲಿ ರಂಗನಾಥ್ರಿಗೆ ಫೋನ್ ಮಾಡಿ ಅಳುತ್ತಾ ಒಂದು ಕೇಳಿದರಂತೆ; 'ರಂಗನಾಥರವರೆ, ನಾನು ಬಾಲ್ಯದಲ್ಲಿ ಕಡುಬಡವನಾಗಿದ್ದಾಗ ಉಣ್ಣಲು, ಉಡಲು ಏನೂ ಸಿಗುತ್ತಿರಲಿಲ್ಲ. ನಡುರಾತ್ರಿ ಮಡಿಕೆ ತಳದ ಸೀಕನ್ನು ಸಲೀಸಾಗಿ ಬಿಡಿಸಿಕೊಳ್ಳುವ ಸಲುವಾಗಿ ಹಿಟ್ಟು ಬೇಯಿಸಿದ ಮಡಿಕೆಗೆ ನೀರ ತುಂಬಿಸಿ, ಬೆಳ್ಳಂಬೆಳಗ್ಗೆ ಹೊಟ್ಟೆ ಚುರುಗುಟ್ಟಿದಾಗ ಮಡಿಕೆಯ ನೀರಿಗೆ ಕೈ ಹಾಕಿ ಸಲೀಸಾಗಿ ಸೀಕ ಬಿಡಿಸಿಕೊಂಡು ಗಬಕ್ಕನೇ ತಿಂದುಬಿಡುತ್ತಿದ್ದೆ.' ಈ ಕಥೆ ರಂಗನಾಥರ ಅರಸುರವರ ಮೈತ್ರಿ ಘನ ಸ್ನೇಹವಾಗಿ ರಂಗನಾಥ್ರವರು ಮುಖ್ಯಮಂತ್ರಿ ಪಟ್ಟ ಧಿಕ್ಕರಿಸಿದರು. ಅದಕ್ಕೆ ನನಗೆ ಈ ಕತೆಗಳು ಕಾಡುತ್ತವೆ. ತಾವು ತಲೆಯಿಂದ ಬರೆದ ಅನುಮಾನ, ಸಂಶಯಗಳ ಬರಹಗಳೆಲ್ಲವೂ ಕಾಲ ಕಾಲಕ್ಕೆ ಅರ್ಥವಾಗಿಲ್ಲವೇನೋ! ಮಳೆಗಾಲ, ಚಳಿಗಾಲ, ಬೇಸಿಗೆಕಾಲ ಬದಲಾಗುವ ಕಾಲದಲ್ಲಿ ಮೈಚರ್ಮ ಒಡೆದು ಉದುರಿ ಬೀಳುವ ತಡವತೊಟ್ಟುವಿನಂತೆ ಒಳಗಿಳಿಯದೇ ಉದುರಿಹೋಗುತ್ತಿದೆ. ತುಂಬಾ, ತುಂಬಾ ದುಃಖವೂ ಆಗುತ್ತಿದೆ. ತಾವು ಮತ್ತು ತಮ್ಮ ಬರವಣಿಗೆ ನಮ್ಮ ಒಳಗಿಳಿಯಬೇಕು. ಆ ಕಾಲದ ತಮ್ಮ ಪದಾರ್ಥವಲ್ಲದ ಪ್ರಸಾದದ ಕಾಯಕಕ್ಕಾಗಿ ಕಾಯುತ್ತಲೇ ಇರುವೆ. ನಿಜವಾದ ಗುರುವಾದವನು ಶಿಷ್ಯನ ಸೃಷ್ಟಿಸುವುದಿಲ್ಲ. ಗುರುವನ್ನೇ ಸೃಷ್ಟಿಸುತ್ತಾನೆ. ಪದಾರ್ಥವ ಕೈಬಿಟ್ಟು ಪ್ರಸಾದ ಕೊಡುವ ಆ ನಿಜವಾದ ಗುರು ನೀವಾಗಬೇಕೆಂಬುದೇ ನನ್ನ ಆಸೆ ಮತ್ತು ಕನಸು ಕೂಡ.
ಸನ್ಮಾನ್ಯ ಶ್ರೇಷ್ಠ ಸಾಹಿತಿ ಸನ್ಮಾನ್ಯ ಶ್ರೀ ಅನಂತಮೂತರ್ಿಯವರೇ ಸತ್ಯದ ವಿಷಯ ಹೇಳಿದ್ದಕ್ಕೆ ತಮಗೆ ಸಿಟ್ಟು ಬಂದಿರುವುದಕ್ಕೆ ನಾವು ಹೊಣೆಗಾರರಲ್ಲ. ಸತ್ಯವೇ ಹೊಣೆಯ ಹೊರುವುದು. ಆದರೂ ತಾವು ಖಂಡಿತವಾಗಿಯೂ ಒಂದಲ್ಲ ಒಂದು ದಿನ ಸತ್ಯಕ್ಕೆ ತಲೆಬಾಗಿ ಡಾಲರ್ಸ್ ಕಾಲೋನಿ ಮನೆಯ ಕಡುಬಡವರಿಗೆ ಹಂಚಿಬಿಡುವಿರೆಂದು ಅಂಗಲಾಚಿ ಧೈನ್ಯತೆಯಿಂದ ತಮ್ಮ ಶಿರಕ್ಕೆ ತಲೆಬಾಗಿ ಕೋರುತ್ತೇನೆ. ನನ್ನಿಂದ ತಮ್ಮ ಮನಸ್ಸಿಗೆ ನೋವಾಗಿದ್ದರೆ, ತಮ್ಮ ಒಡಲಿಗೆ ಒಪ್ಪಿಸಿಕೊಳ್ಳಿ. ತಮ್ಮಲ್ಲಿ ಕಳೆದು ಹೋಗಿರುವ ತಾಯ್ತನದ ಪ್ರೀತಿಯನ್ನು ಕೋರಿ ತಮ್ಮೊಂದಿಗೆ ನಾನೂ ಬಾಳುವ ಸಲುವಾಗಿ ಕೂಸಾಗಿ ಕ್ಷಮೆಯಾಚಿಸುವೆ. ಹೇಳಲಿಕ್ಕೆ ಇನ್ನೂ ಬೇಕಾದಷ್ಟಿದೆ. ಸದ್ಯಕ್ಕೆ ಇಷ್ಟು ಸಾಕು. ತಾವು ತಾಯಿಯಾಗದಿದ್ದರೆ; ಅಂಕಿ-ಅಂಶ, ಸತ್ಯಗಳೊಂದಿಗೆ ಆ ಕೋಟರ್್ನ ಮೆಟ್ಟಿಲು ಹತ್ತಲು ಕೂಸಾಗಿ ಸಿದ್ಧನಿರುವೆ. ದಯಮಾಡಿ ತಪ್ಪುತಿಳಿಯಬೇಡಿ ನೊಂದುಕೊಳ್ಳಬೇಡಿ. ನೀವು ಮತ್ತು ಎಸ್ತರ್ ಅವ್ವ ಚೆನ್ನಾಗಿರಬೇಕು. ನೀಷೆಗೆ ಹೊಳೆದ ಸತ್ಯ ತಮಗೆ ಗೊತ್ತು 'ಯಾವುದೇ ಪ್ರತಿಭಾಶಾಲಿಯಲ್ಲಿ ಕೃತಜ್ಞತೆ, ಪ್ರಾಮಾಣಿಕತೆ, ತಾಯ್ತನ ಇಲ್ಲವಾದರೆ ಆತನನ್ನು ಸಹಿಸಿಕೊಳ್ಳುವುದು ಬಲು ಕಷ್ಟದ ಕೆಲಸ' ಇದಕ್ಕಾಗಿಯೇ ಇಷ್ಟೆಲ್ಲಾ.
ಕೊನೆಯದಾಗಿ,
ನೀ ಕೈ ಬಿಟ್ಟಾಗ ನನ್ನೊಳಗಿಳಿದ ನಿಶೆ
ಸಾವಲ್ಲೂ ಜಗವ ಬಾಳುವುದು.
-ಇಂತಿ ಪ್ರೀತಿ ಗೌರವಗಳೊಂದಿಗೆ
ನಿಮ್ಮವ
ನಾಗತಿಹಳ್ಳಿ ರಮೇಶ
nagathihalliramesh@gmail.com
nagatihalliramesh@gmail.com

Archu said...

kaka,
sumaaru dina aaytu nimma blog ge bheti kodade..
eega baniddene..halavu lekhanagaLu odalikkive!! ondondaagi oduttene..

preetiyinda,
archu

ಚಂದ್ರಕಾಂತ ಎಸ್ said...

ಸುನಾಥ್

ಬಹಳ ಚೆನ್ನಾಗಿ, ಅಚ್ಚುಕಟ್ಟಾಗಿ ನಿರ್ದೇಶಕನ ಆಶಯವನ್ನು ವಿಶ್ಲೇಷಣೆ ಮಾಡಿರುವಿರಿ. ಈಗಿನ ಎಷ್ಟೋ ನಿರ್ದೇಶಕರಿಗೆ ‘ ಆಶಯ’ ಎಂದರೆ ಏನೆಂದೇ ಗೊತ್ತಿರುವುದಿಲ್ಲ.

sunaath said...

ಜ್ಯೋತಿ,
ಎಲ್ಲ ಚಿತ್ರಗಳೂ ಎಲ್ಲಾ ಅಂಶಗಳಲ್ಲಿ ಹಾಗೂ ಮೊದಲಿನಿಂದ ಕೊನೆಯವರೆಗೆ ಚೆನ್ನಾಗಿವೆ ಅಂತಲ್ಲ. ಅಲ್ಲದೆ ಹಳೆಯ ತಂತ್ರಜ್ಞಾನದಿಂದಾಗಿ ಅವು ಬೋರು ಹೊಡೆಸಲೂ ಬಹುದು.
ಆದರೆ, ಈ ಚಿತ್ರಗಳಲ್ಲಿ there is inventiveness.
-ಕಾಕಾ

sunaath said...

ಪ್ರಭುರಾಜ,
ಮಜೀದಿಯವರ ಈ ಚಿತ್ರಗಳನ್ನು ನೋಡಿರಿ:
Children of Heaven, Colour of Paradise, Baran.

sunaath said...

ಮಲ್ಲಿಕಾರ್ಜುನ,
Wish you all success in "ಪಾಪಿಕೊಂಡದಿಂದ ಭದ್ರಾಚಲಮ್‍ವರೆಗೆ"

sunaath said...

ಶಿವು,
ಪುಷ್ಪಕ ವಿಮಾನ is great!

sunaath said...

ಅರ್ಚು,
ಸ್ವಾಗತ, ಸುಸ್ವಾಗತ!
-ಕಾಕಾ

sunaath said...

ಚಂದ್ರಕಾಂತಾ,
ಆಶಯ ಹೊಂದಿದ ಚಿತ್ರನಿರ್ದೇಶಕರು ಈಗ ಕಡಿಮೆಯಾಗುತ್ತಿದ್ದಾರೆ!

ಚಿತ್ರಾ ಸಂತೋಷ್ said...

ಸರ್...ನಿಮ್ಮ ಬ್ಲಾಗಿಗೆ ಒಂದು ಸಲ ಕಣ್ಣು ಹಾಯಿಸಿದರೆ ಸಾಕು ತುಂಬಾ ವಿಷಯಗಳು ಗೊತ್ತಾಗುತ್ತವೆ ಸರ್.
-ಚಿತ್ರಾ

sunaath said...

ಧನ್ಯವಾದಗಳು, ಚಿತ್ರಾ!
ವಯಸ್ಸಾಗುತ್ತಿರುವದರಿಂದ ಕೆಲವೊಂದು ಮಾಹಿತಿಗಳು ತಿಳಿಯುತ್ತ
ಬಂದಿವೆ, ಅಷ್ಟೇ!