Saturday, February 27, 2010

“ಎಡಿ ಒಯ್ಯನು ಬಾರೆ ದೇವರಿಗೆ”----ಶರೀಫ ಸಾಹೇಬರು

ಇಂದು ಈದ ಮಿಲಾದ ಹಬ್ಬ. ಇಸ್ಲಾಮ ಧರ್ಮದ ಪ್ರವರ್ತಕರಾದ ಮೊಹಮ್ಮದ ಪೈಗಂಬರರ ಹುಟ್ಟುದಿನ.
ಮುಸ್ಲಿಮ್ ಶಿವಯೋಗಿ ಎಂದು ಕರೆಯಬಹುದಾದ ಶಿಶುನಾಳ ಶರೀಫರು ಹಿಂದು ಹಾಗು ಮುಸ್ಲಿಮ ಧರ್ಮಗಳಲ್ಲಿ ಸಾಧಿಸಿದ ಸಾಮರಸ್ಯವನ್ನು ಅರಿಯಬೇಕಾದರೆ ಅವರು ರಚಿಸಿದ ಈ ಹಾಡನ್ನು ನೋಡಬಹುದು:

ಎಡಿ ಒಯ್ಯನು ಬಾರೆ ದೇವರಿಗೆ
ಎಡಿ ಒಯ್ಯನು ಬಾರೆ ||ಪಲ್ಲ||

ಎಡಿ ಒಯ್ಯನು ಬಾ
ಮಡಿಹುಡಿಯಿಂದಲಿ
ಪೊಡವಿಗಧಿಕ ಎನ್ನ
ಒಡಿಯ ಅಲ್ಲಮನಿಗೆ ||ಅನುಪಲ್ಲ||

ಕರ್ಮದ ಕುರಿ ಕೊಯ್ಸಿ ಅದಕೆ
ಗುರುಮಂತ್ರವ ಜಪಿಸಿ
ಅರುವಿನ ಎಡಿಯನು
ಕರದೊಳು ಪಿಡಿಕೊಂಡು
ಸ್ಥಿರವಾದ ದೇವರು
ಇರುವ ಮಸೀದಿಗೆ ||೧||

ಆದಿ ಅಲ್ಲಮ ಗುರುವು ದೊಡ್ಡ
ಪಾದಗಟ್ಟಿ ಏರು
ದಿಮಿ ದಿಮಿ ಸದ್ಗುರು
ಆದಿ ಶಿಶುನಾಳ
ಸಾಧು ಇರುವ ಬ್ರಹ್ಮ-
ನಾದ ಮಸೀದಿಗೆ  ||೨||

ಶರೀಫರು ಅಲ್ಲಮ ಎಂದು ಹೇಳುವಾಗ ಶಿವಯೋಗಿ ಅಲ್ಲಮನನ್ನು ಸೂಚಿಸುವಂತೆಯೇ, ‘ಅಲ್ಲಾ’ ನನ್ನೂ ಸೂಚಿಸುತ್ತಾರೆ. ಆದಿ ಅಲ್ಲಮ ಗುರು ಎಂದರೆ ಇಡೀ ವಿಶ್ವಕ್ಕೆ ಗುರುವಾದ ದೇವರು. ಅಲ್ಲಮ ಪದವನ್ನು ಶೂನ್ಯಾರ್ಥದಲ್ಲಿ ಗ್ರಹಿಸಿದಾಗ ಈ ಪದವು ನಿರ್ಗುಣ ಬ್ರಹ್ಮನನ್ನೂ ಸೂಚಿಸುತ್ತದೆ.

34 comments:

ಸೀತಾರಾಮ. ಕೆ. / SITARAM.K said...

ಸುನಾಥರೇ ಶರೀಫ಼ರ ಒಳ್ಳೇ ಕವನವೊ೦ದನ್ನು ಈದ್-ಮಿಲಾದ್ ಪ್ರಯುಕ್ತ ಸ೦ಧರ್ಭದಲ್ಲಿ ನೆನಪಿಸಿದ್ದಿರಾ... ಕರ್ಮದ ಕುರಿ ಕೊಯ್ಯಿಸಿ ಸೂಕ್ತವಾದ ಸಾಲುಗಳು.
ಧನ್ಯವಾದಗಳು.
ತಾವು ಬಿಡುವು ಮಾಡಿಕೊ೦ಡು ನನ್ನ ಬ್ಲೊಗ್-ಗೆ ಭೇಟಿ ನೀಡಿ ತಮ್ಮ ಅಭಿಪ್ರಾಯ ಮತ್ತು ಮಾರ್ಗದರ್ಶನ ನೀಡಬೇಕೆ೦ದು ವಿನ೦ತಿಸುವೆ.

RJ said...

ಸಾರ್,
ಇದರ ಜೊತೆಗೇ ಸ್ವಲ್ಪ ವಿವರಣೆ ಅಥವಾ ವಿಮರ್ಶೆ ಮಾಡಿದ್ದರೆ
ಇನ್ನೂ ಚೆನ್ನಾಗಿರ್ತಿತ್ತು..
-RJ

Subrahmanya said...

ಕಾಕಾಶ್ರೀ...
ಸೂಕ್ತ ಸಂದರ್ಭದಲ್ಲಿ, ಸೂಕ್ತವಾದದದ್ದು ನಿಮ್ಮಿಂದ ಎಲ್ಲರಿಗೂ ನೆನಪಿಸಲ್ಪಟ್ಟಿದೆ. ಈ ಗೀತೆ ಗೊತ್ತಿರಲಿಲ್ಲ. ಇನ್ನಷ್ಟು ಭಾಷ್ಯ ಬರೆದಿದ್ದರೆ ನನ್ನಂತಹವರಿಗೆ ಅನುಕೂಲವಾಗುತ್ತಿತ್ತು.:)..
ಈದ್ ಮುಬಾರಕ್ ..ಎಲ್ಲರಿಗೂ..ನಿಮಗೂ !. ಧನ್ಯವಾದ

sunaath said...

ಸೀತಾರಾಮರೆ,
ನಿಮಗೂ ಧನ್ಯವಾದಗಳು.

sunaath said...

RJ,
ಶರೀಫರ ಅಂತರಂಗವನ್ನು ಈ ಹಾಡು ಕನ್ನಡಿಯಂತೆ ಪ್ರತಿಫಲಿಸುತ್ತಿದೆ. ಮತ್ತೇಕೆ ಇದಕ್ಕೆ ನನ್ನ ಟಿಪ್ಪಣಿ?

sunaath said...

ಈದ ಮುಬಾರಕ್,ಪುತ್ತರ್!
ಶರೀಫರ ಈ ಹಾಡು ತಿಳಿಯಾದ ಕೊಳದಂತಿದೆ. ನೀವೇ ಬೇಕಾದಷ್ಟು ಮೊಗೆದುಕೊಂಡು ಕುಡಿಯಬಹುದು. ನನ್ನ ಭಾಷ್ಯದ ಅವಶ್ಯಕತೆ ಈ ಹಾಡಿಗೆ ಇಲ್ಲ ಎಂದು ನನಗೆ ಅನಿಸುತ್ತದೆ.
-ಕಾಕಾಶ್ರೀ

shivu.k said...

ಸುನಾಥ್ ಸರ್,

ಈದ್ ಮಿಲಾದ್ ದಿನದಂದೂ ಶಿಶುನಾಳ ಶರೀಫರ ಪದ್ಯವನ್ನು ವಿವರಿಸಿದ್ದೀರಿ...
ಧನ್ಯವಾದಗಳು.

PARAANJAPE K.N. said...

ಶರೀಫರ ಹಾಡುಗಳಲ್ಲಿ ಅಡಗಿರುವ ಸಾಮರಸ್ಯ ಅನುಕರಣೀಯ. ಸಕಾಲಿಕವಾಗಿ ನಿಮ್ಮಿ೦ದ ಬ೦ದ ಈ ಬರಹ ಇಷ್ಟವಾಯಿತು.

ಮನಮುಕ್ತಾ said...

ಕಾಕಾ,
ಈದ್ ಮಿಲಾದ್ ಹಬ್ಬದ ಸ೦ಧರ್ಭದಲ್ಲಿ ಹಿ೦ದು ಮುಸ್ಲಿಮ್ ಧರ್ಮಗಳ ಸಾಮರಸ್ಯವನ್ನು ತಿಳಿಸುವ೦ತಹ ಶರೀಫರ ಕವನವನ್ನು ತಿಳಿಸಿಕೊಟ್ಟಿದ್ದೀರಿ.ಧನ್ಯವಾದಗಳು.
ಎಲ್ಲರಿಗೂ ಈದ್ ಹಬ್ಬ ಶುಭ ತರಲಿ.

Unknown said...

ನಲುಮೆಯ ಸುನಾತರೆ,
ಬಾರಿ ಚಲೊ ಆಯ್ತ್ ರೀ ಈ ಸಾಲ್ಗಳು...ತಾವು ಇದನ್ನ ಹೆಕ್ಕಿ ತೆಗೆದ್ ತೋರಿದ್ದಕ್ಕೆ ನನ್ನಿಗಳ್. ಎರಡ್ನೆ ಅಕ್ಕರದ್ ಪ್ರಾಸ ಬಲ್ ಚಲೊ ಅಯ್ತ್ ರೀ.

ಗೊತ್ತಿಲ್ಲದವರಿಗೆ,

ಎಡೆ (ಎಡಿ)= ನೈವೇದ್ಯ
ಪೊಡವಿ = ಬೂಮಿ, ನೆಲ.

ಅದು ’ಮಡಿಹುಡಿ’ಅಲ್ಲ ಅನ್ಸುತ್ತೆ....ಮಡಿಯುಡಿ ಇರಬಹುದಾ?(ಮಡಿಯುಟ್ಟು).

ಹದುಳವಿರಲಿ
-ಬರತ್

Prabhuraj Moogi said...

ಸುನಾಥ್ ಸರ್, ಒಳ್ಳೊಳ್ಳೆ ಹಳೇ ಕವನಗಳನ್ನು ತಂದೊ ನಮಗೆ ಓದಿಸುತ್ತಿದ್ದೀರಿ ಬಿಡಿ... ಇದಂತೂ ನಾನೆಲ್ಲೂ ಓದಿರಲಿಲ್ಲ.

V.R.BHAT said...

ಸುನಾಥರೇ,

ಧರ್ಮವೆಂಬುದು ಮನುಜಮತದ ತತ್ವವದಕ್ಕು
ಕರ್ಮವೆಂಬುದು ನಮ್ಮ ಕ್ರಿಯೆಯ ಪ್ರಕ್ರಿಯೆಯು
ನಿರ್ಮಾಣಮಾಡು ನೀ ವಿಶ್ವ ಕುಟುಂಬವನು
ಮರ್ಮವರಿಯುತ ಬದುಕೋ | ಜಗದಮಿತ್ರ

'ಜಗದಮಿತ್ರ' ನಾಗಿ ಕಗ್ಗದ ನುಡಿಗಳನ್ನು ಅನುಸರಿಸುತ್ತ ನನ್ನದೇ ಶಬ್ಧಗಳಲ್ಲಿ ತಮಗೆ ಹೇಳಿದ್ದೇನೆ,ಕಾವ್ಯ ಚೆನ್ನಾಗಿದೆ-ಸತ್ವಯುತವಾಗಿದೆ, ಧನ್ಯವಾದಗಳು

ಚುಕ್ಕಿಚಿತ್ತಾರ said...

ಕಾಕ .
ಈ ಹಾಡು ಕೇಳಿರಲಿಲ್ಲ ಈ ಮೊದಲು.
ಪರಿಚಯಿಸಿದ್ದಕ್ಕೆ ವ೦ದನೆಗಳು.

ಚಿತ್ರಾ said...

ಕಾಕಾ,
ಶರೀಫರ ಈ ಗೀತೆಯ ಬಗ್ಗೆ ಗೊತ್ತೇ ಇರಲಿಲ್ಲ ! ಪರಿಚಯಿಸಿದ್ದಕ್ಕೆ, ಚಿಕ್ಕ -ಚೊಕ್ಕ ವಿವರಣೆಗೆ ಧನ್ಯವಾದಗಳು . ಇದೇ ಸಾಮರಸ್ಯ ಇಂದಿಗೂ ಉಳಿದಿದ್ದರೆ .... ಭಾರತದ ಭವಿಷ್ಯವೇ ಬದಲಾಗುತ್ತಿತ್ತೇನೋ !

sunaath said...

ಶಿವು,
ಶರೀಫರು ಮುಸ್ಲಿಮ್ ಹಬ್ಬವನ್ನು ಹಿಂದು ಬಗೆಯಲ್ಲಿ ತಿಳಿದುಕೊಂಡ ರೀತಿ ಅನನ್ಯವಾಗಿದೆ, ಅಲ್ಲವೆ?

sunaath said...

ಪರಾಂಜಪೆಯವರೆ,
ಹಿಂದು-ಮುಸ್ಲಿಮ್ ಸಾಮರಸ್ಯದ ಇಂತಹ ಹರಿಕಾರ ಕರ್ನಾಟಕದಲ್ಲಿ ಮತ್ತೊಬ್ಬ ಇದ್ದಾನೊ, ಇಲ್ಲವೊ?

sunaath said...

ಮನಮುಕ್ತಾ,
ನಿಮಗೂ ಈದ ಶುಭಾಶಯಗಳು. ಶರೀಫರು ಇಂತಹ ಇನ್ನೂ ಅನೇಕ ಹಾಡುಗಳನ್ನು ರಚಿಸಿದ್ದಾರೆ.

sunaath said...

ಭರತ,
ಧನ್ಯವಾದಗಳು. ‘ಮಡಿ ಹುಡಿ’ ಎನ್ನದು ಒಂದು ಜೋಡು ಶಬ್ದವಾಗಿದೆ.
ಉದಾಹರಣೆ: "ಅವರ ಮನಿಯೊಳಗ ಮಡಿ ಹುಡಿ ಭಾರಿ ಜೋರು ಇರ್ತದ."

sunaath said...

ಪ್ರಭುರಾಜ,
ಶರೀಫರ ಕೆಲವು ಹಾಡುಗಳು ಮಾತ್ರ ಬಹಳ ಪ್ರಸಿದ್ಧವಾಗಿವೆ. ಅವರು ಮುಸ್ಲಿಮ್ ಹಬ್ಬಗಳಿಗೆ ಸಂಬಂಧಿಸಿದಂತೆ ಹಾಡುಗಳನ್ನು ಹಾಗು ಕವ್ವಾಲಿಯನ್ನು ಸಹ ರಚಿಸಿದ್ದಾರೆ. ಇವು ಅಷ್ಟಾಗಿ ಪ್ರಸಿದ್ಧಿಯಲ್ಲಿ ಇಲ್ಲ.

sunaath said...

‘ಜಗದ ಮಿತ್ರ’ ವ್ಹಿ.ಆರ್.ಭಟ್ಟರೆ,
ನೀವು ಸೊಗಸಾದ ಕವನರೂಪಿ ಪ್ರತಿಕ್ರಿಯೆಯನ್ನೇ ನೀಡಿದಿರಿ!

sunaath said...

ವಿಜಯಶ್ರೀ,
ಶರೀಫರ ಒಡಪಿನ ಹಾಡುಗಳಿಗೆ ಬಂದಷ್ಟು ಪ್ರಸಿದ್ಧಿ ಉಳಿದ ಅನೇಕ ಹಾಡುಗಳಿಗೆ ಬಂದಿಲ್ಲ. ಹೀಗಾಗಿ ಇವೆಲ್ಲ ಶ್ರವಣಬಾಹ್ಯವಾಗಿ ಉಳಿದಿವೆ.

sunaath said...

ಚಿತ್ರಾ,
ಹಿಂದು-ಮುಸ್ಲಿಮ್ ಸಾಮರಸ್ಯದ ಮೊದಲ ಪ್ರತಿಪಾದಕನೆಂದು ಸೂಫಿ ಸಂತನಾದ ಅಮೀರ ಖುಸ್ರೋನನ್ನು ಗುರುತಿಸಲಾಗುತ್ತಿದೆ. ಅಲ್ಲಿಂದ ಇಲ್ಲಿಯವರೆಗೆ ಅನೇಕ ಏಕತಾವಾದಿಗಳು ಆಗಿ ಹೋದರು. ಆದರೆ ಸ್ವಾರ್ಥ ರಾಜಕೀಯಕ್ಕಾಗಿ ಪ್ರತ್ಯೇಕತಾವಾದಿಗಳೂ ಇದ್ದೇ ಇರುತ್ತಾರೆ, ಅಲ್ಲವೆ?

umesh desai said...

ಕಾಕಾ ನೀವ ಅಂದಂಗ ಅದು ಅಲ್ಲ ನ ಇರಬೇಕು ಅವರ ಒಂದು ಭಜನ್ಯಾಗ ಹಿಂಗ್ ಅಂತಾರ
ಅಲ್ಲಾ ಅಲ್ಲಮ ಭೇದನ ಸಮಝೊ ರಾಮ ರಹೀಮಾ ಏಕ್ ಹಿ ಸಮಝೊ...

sunaath said...

ದೇಸಾಯರ,
ಸರಿಯಾದ ಸಾಲುಗಳನ್ನೇ ಎತ್ತಿ ಕೊಟ್ಟಿರುವಿರಿ. ಧನ್ಯವಾದಗಳು.

Unknown said...

ಷರೀಫರ ಈ ಹಾಡು ಸಮಯಕ್ಕೆ ಸರಿಯಾಗಿ ಬಂದಿದೆ. ಹಾಡಿನ ಪರಿಚಯ ಮಾಡಿಸಿದಕ್ಕೆ ಧನ್ಯವಾದಗಳು ಸರ್..

sunaath said...

RP,
The pleasure is mine!

ಸಾಗರದಾಚೆಯ ಇಂಚರ said...

ಸುನಾಥ ಸರ್
ತುಂಬ ಚೆನ್ನಾಗಿದೆ
ಸಂದರ್ಭಕ್ಕೆ ತಕ್ಕಂತೆ ಹೊಂದಿಕೊಳ್ಳುತ್ತದೆ

ತೇಜಸ್ವಿನಿ ಹೆಗಡೆ said...

ಕಾಕಾ,

ಉತ್ತಮ ಸೌಹಾರ್ದತೆಯನ್ನು ಬಿಂಬಿಸುವ ಶರೀಫರ ಹಡು ತುಂಬಾ ಚೆನ್ನಾಗಿದೆ. ಧನ್ಯವಾದಗಳು.

ಮನಸಿನಮನೆಯವನು said...

'sunaath' ಅವ್ರೆ..,

ಚಂದೈತಿ..

ನನ್ನ 'ಮನಸಿನಮನೆ'ಗೊಮ್ಮೆ ಬನ್ನಿ:http://manasinamane.blogspot.com/

Unknown said...

Chennaagide

sunaath said...

ಗುರುಮೂರ್ತಿಯವರೆ,
ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು.

sunaath said...

ತೇಜಸ್ವಿನಿ,
ಶರೀಫರ ಬಾಳೇ ಸೌಹಾರ್ದತೆಯ ಕಾವ್ಯವಾಗಿತ್ತು ಎನ್ನಬಹುದು.
ಅವರ ಹಾಡುಗಳಲ್ಲಿ ಆ ಭಾವ ಬರುವದು ಸಹಜವೇ.

sunaath said...

ಗುರು-ದೆಸೆ,
ಹಾಡು ನಿಮಗೆ ಚಂದಾಗಿ ಕಾಣಿಸಿತು; ಅದು ನನಗೆ ಸಂತೋಷದ ವಿಷಯ.

sunaath said...

ರವಿಕಾಂತ,
ನಿಮಗೆ ಧನ್ಯವಾದಗಳು.