Friday, July 15, 2011

ನಮ್ಮದೇ ಹಣ- -ನಮ್ಮದೇ ಹೆಣ!

ಭಾರತೀಯ ನಾಗರಿಕರು ವಿದೇಶಿ ಬ್ಯಾಂಕುಗಳಲ್ಲಿ ಇಟ್ಟಿರುವ ಕಪ್ಪುಹಣವು ೧೬೦೦ ಬಿಲಿಯನ್ ಡಾಲರ್ ಎಂದು ಒಂದು ಅಂದಾಜು ಇದೆ. ಇದು ಕಪ್ಪುಹಣವಾಗಿರುವದರಿಂದ ಅಕ್ರಮ ಮಾರ್ಗದಿಂದಲೇ ಅಂದರೆ ಹವಾಲಾ ಮುಖಾಂತರವೇ ವಿದೇಶವನ್ನು ಸೇರಿರಬೇಕು. ಈ ಹವಾಲಾ ಧಂಧೆಯನ್ನು ನಿಯಂತ್ರಿಸುವವರು ದಾವೂದ ಇಬ್ರಾಹಿಮನಂಥವರು. ಇವರು ಭಯೋತ್ಪಾದಕರ ಸೃಷ್ಟಿಕರ್ತರು ಹಾಗು ಪೋಷಕರು. ಅಂದ ಮೇಲೆ ಭಾರತೀಯರೇ ಈ ಭಯೋತ್ಪಾದಕರನ್ನು ಬೆಳೆಯಿಸುತ್ತಿದ್ದಾರೆ ಎಂದಾಯಿತು. ಯಾರು ಈ ಕಪ್ಪು ಹಣದ ಒಡೆಯರು? ರಾಜಕೀಯದಲ್ಲಿ ಉನ್ನತ ಸ್ಥಾನಗಳನ್ನು ಆಕ್ರಮಿಸಿಕೊಂಡು ಕಮಿಶನ್, ಕಿಕ್‍ಬ್ಯಾಕ್ ಮುಂತಾದವುಗಳನ್ನು ತಿನ್ನುತ್ತಿರುವವರೇ ಈ ಕಪ್ಪು ಹಣವನ್ನು ಸಂಗ್ರಹಿಸುತ್ತಿರುವ ರಾಜಕಾರಣಿಗಳು.

ರಾಜಕಾರಣಿಗಳ ಭ್ರಷ್ಟಾಚಾರ ಭಾರತದಲ್ಲಿ ನಡೆಯುತ್ತಲೇ ಇದ್ದರೂ, ಅಂತರರಾಷ್ಟ್ರೀಯ ಮಟ್ಟದ ಭ್ರಷ್ಟಾಚಾರದ ಮೊದಲ ಸಂಶಯ ಬಂದದ್ದು ‘ಬೋಫೋರ್ಸ್’ ತೋಪುಗಳನ್ನು ಖರೀದಿಸಿದ ಸಂದರ್ಭದಲ್ಲಿ. ಕಾಮನ್‍ವೆಲ್ಥ ಹಗರಣ, ೨-ಜಿ ಹಗರಣ ಇವೆಲ್ಲ
ಇತ್ತೀಚಿನವು. ಸರಿ, ಈ ಹಗರಣಗಳ ಮೂಲಕ ರಾಜಕಾರಣಿಗಳು ಸಂಪಾದಿಸುವ ಅಪಾರ ಸಂಪತ್ತು ಎಲ್ಲಿಂದ ಸಂಗ್ರಹವಾಗುತ್ತದೆ? ಇದಕ್ಕೆ ನೇರ ಹಾಗು ಸರಳ ಉತ್ತರ: ಪ್ರಜೆಗಳು ಕೊಡುವ ತೆರಿಗೆಗಳ ಮುಖಾಂತರ! ಉದಾಹರಣೆಗೆ ಭಾರತದಲ್ಲಿ ಒಂದು ಲಿಟರ ಪೆಟ್ರೋಲಿಗೆ ಸುಮಾರು ೭೦ ರೂಪಾಯಿಗಳನ್ನು ನಾವು ಕೊಡುತ್ತೇವೆ. ಅದೇ ಏಶಿಯಾ ಖಂಡದ ಬಡದೇಶಗಳಾದ ಬಾಂಗ್ಲಾದೇಶ ಹಾಗು ಮಲೆಯೇಶಿಯಾದಲ್ಲಿ ಈ ಬೆಲೆ ೪೫ ರೂಪಾಯಿಗಳ ಆಸುಪಾಸಿನಲ್ಲಿದೆ. ನಮ್ಮ ಹಣಕಾಸು ಮಂತ್ರಿಗಳು ಅಂತರರಾಷ್ಟ್ರೀಯ ದರ ಏರಿದೆ ಎಂದು ನಮ್ಮ ಕಿವಿಯ ಮೇಲೆ ಹೂವನ್ನು ಇಡುತ್ತಿದ್ದಾರೆ. ಇದರಂತೆ ರಾಷ್ಟ್ರಮಟ್ಟದಲ್ಲಿ ರಸಗೊಬ್ಬರ ಸಬ್ಸಿಡಿ, ಕೃಷಿ ಉಪಕರಣಗಳ ಸಬ್ಸಿಡಿ ಮೊದಲಾದವುಗಳ ಮೂಲಕವೂ ರಾಜಕಾರಣಿಗಳು ಕಪ್ಪು ಹಣವನ್ನು ಕೊಳ್ಳೆ ಹೊಡೆಯುತ್ತಿದ್ದಾರೆ. ಇದರಿಂದಾಗಿ ಬೆಲೆಗಳು ಏರುತ್ತಲೇ ಹೋಗುತ್ತವೆ. ಬೆಲೆ ಏರಿಕೆ ಆದಷ್ಟೂ ರಾಜಕಾರಣಿಗಳಿಗೆ ಕಪ್ಪು ಹಣದ ಸುಗ್ಗಿ. ದುರ್ದೈವದ ಸಂಗತಿ ಎಂದರೆ ಈ ಕಪ್ಪು ಹಣವು ಹವಾಲಾ ಮೂಲಕ ಭಯೋತ್ಪಾದಕರನ್ನೇ ತಲಪುತ್ತಿರುವದು. ಅರ್ಥಾತ್, ನಮ್ಮನ್ನು ಕೊಲ್ಲಿಸಿಕೊಳ್ಳುವ ಸಲುವಾಗಿ ನಾವೇ ಭಯೋತ್ಪಾದಕರಿಗೆ ಹಣ ಪೂರೈಸುತ್ತಿದ್ದೇವೆ. ನಮ್ಮದೇ ಹಣ, ನಮ್ಮದೇ ಹೆಣ!

ನಮ್ಮ ರಾಜಕಾರಣಿಗಳಿಗೆ ಹಾಗು ನಮ್ಮ ಚುನಾಯಿತ ಪ್ರತಿನಿಧಿಗಳಿಗೆ ಇದೆಲ್ಲವೂ ಗೊತ್ತಿದೆ. ಆದರೂ ಸಹ ಕಪ್ಪು ಹಣವನ್ನು ವಿದೇಶದಿಂದ ಹಿಂಪಡೆಯಲು ಅವರು ತಯ್ಯಾರ ಇಲ್ಲ. ಅಣ್ಣಾ ಹಜಾರೆಯವರ ‘ಜನ ಲೋಕಪಾಲ’ ಶಾಸನದ ಮೂಲಕ ಭ್ರಷ್ಟಾಚಾರವನ್ನು ನಿಗ್ರಹಿಸಬಹುದು. ಅದೇ ಅವರಿಗೆ ಬೇಡವಾಗಿದೆ. ನೋಡುತ್ತಿರಿ, ಲೋಕಪಾಲ ಮಸೂದೆ ಒಂದು ವೇಳೆ ಲೋಕಸಭೆಯಲ್ಲಿ ಮಂಡಿತವಾದರೆ, ಬಹುತೇಕ ಶಾಸಕರುಯಾವುದೇ ಪಕ್ಷದವರಾಗಿರಲಿ---ಅಣ್ಣಾ ಹಜಾರೆಯವರ ಸೂತ್ರಕ್ಕೆ ಬೆಂಬಲ ನೀಡುವದಿಲ್ಲ. ಇಂಥವರನ್ನು ಶಾಸನಸಭೆಗಳಿಗೆ ಚುನಾಯಿಸುತ್ತಿದ್ದೇವಲ್ಲ; ನಾವೇ ಮುಠ್ಠಾಳರು!

ಕಪ್ಪು ಹಣವೆಲ್ಲ ವಿದೇಶಿ ಬ್ಯಾಂಕುಗಳಿಂದ ಭಾರತಕ್ಕೆ ಮರಳಿ ಬಂದರೆ, ಅದನ್ನು ಬಡ ಭಾರತೀಯರಲ್ಲಿ ಹಂಚಬಹುದೆಂದು ಕೆಲ ರಾಜಕಾರಣಿಗಳು ಬುರುಡೆ ಹೊಡೆಯುತ್ತಿದ್ದಾರೆ. ಹಾಗೆ ಹಂಚಿದರೆ ಈಗಿರುವ ಬೆಲೆಗಳು ನೂರು ಪಟ್ಟು ಏರುವದರಲ್ಲಿ ಸಂದೇಹವಿಲ್ಲ! ಆಗ ಗೋಣಿಚೀಲದಲ್ಲಿ ನೋಟುಗಳನ್ನು ಒಯ್ದು ಜೋಬಿನಲ್ಲಿ ಕಾಯಿಪಲ್ಲೆ ತರಬೇಕಾದೀತು. ಅಲ್ಲದೆ, ಅಲ್ಲಿಯೂ ಭ್ರಷ್ಟಾಚಾರ ಮತ್ತೆ ತಲೆ ಎತ್ತುವದೇ! ಆದುದರಿಂದ ಈ ಹಣವನ್ನು ಮುಖ್ಯವಾಗಿ ಶಿಕ್ಷಣಕ್ಕಾಗಿ ಖರ್ಚು ಮಾಡಬೇಕು. ಸೂರಿಲ್ಲದ, ಶಿಕ್ಷಕರಿಲ್ಲದ ಸರಕಾರಿ ಶಾಲೆಗಳು ಎಷ್ಟಿಲ್ಲ? ಇಂಜನಿಯರಿಂಗ ಅಥವಾ ವೈದ್ಯಕೀಯ ಶಿಕ್ಷಣವನ್ನು ಹಣದ ಅಭಾವದಿಂದಾಗಿ ಪಡೆಯಲಾರದ ಎಷ್ಟು ವಿದ್ಯಾರ್ಥಿಗಳಿಲ್ಲ? ಇವರೆಲ್ಲರ ಕಲ್ಯಾಣವನ್ನು ಈ ಕಪ್ಪು ಹಣದಿಂದ ಸಾಧಿಸಬಹುದು. ಇದು ನಾವೇ ತೆರಿಗೆಯೆಂದು ನೀಡಿದ ಹಣ ಎನ್ನುವದನ್ನು ನೆನಪಿಟ್ಟುಕೊಳ್ಳೋಣ.

ಭಯೋತ್ಪಾದಕರ ದಾಳಿ ನಡೆದಾಗೊಮ್ಮೆ, ಮಂತ್ರಿವರ್ಯರು ಎಲ್ಲೆಡೆಯೂ ‘ಕಟ್ಟೆಚ್ಚರ’ವನ್ನು ವಹಿಸುವಂತೆ ಪೋಲೀಸರಿಗೆ ಆದೇಶವೀಯುತ್ತಾರೆ. ಇರುವ ಹತ್ತು ಪೋಲೀಸರು ಎಲ್ಲೆಲ್ಲಿ ‘ಕಟ್ಟೆಚ್ಚೆರ’ವನ್ನು ವಹಿಸಬೇಕು? ಅಲ್ಲದೆ, ಸಂಶಯಾಸ್ಪದ ವ್ಯಕ್ತಿಗಳನ್ನು ಪೋಲೀಸರು ಬಂಧಿಸಿದರೆ, ತಕ್ಷಣವೇ ಸ್ವಾರ್ಥಿ ರಾಜಕಾರಣಿಗಳು ಗಲಾಟೆ ಪ್ರಾರಂಭಿಸುತ್ತಾರೆ. ಮಾನವ ಹಕ್ಕುಗಳ ಹೋರಾಟಗಾರರು ಆಂದೋಲನ ಪ್ರಾರಂಭಿಸುತ್ತಾರೆ. ಈಗಂತೂ ಭಯೋತ್ಪಾದನೆಯ ವಿರುದ್ಧದ ಶಾಸನಗಳನ್ನು ವೋಟು-ರಾಜಕೀಯಕ್ಕಾಗಿ ತೆಗೆದೊಗೆಯಲಾಗಿದೆ. ಇದರರ್ಥ ಏನೆಂದರೆ ‘ನಿಮ್ಮ ಹೆಣಗಳ ಮೇಲೆ ನಾವು ಚುನಾಯಿತರಾಗುತ್ತೇವೆ ಹಾಗು ನಿಮ್ಮ ಹಣವನ್ನು ಲೂಟಿ ಮಾಡುತ್ತೇವೆ.’

ಇದು ತಪ್ಪಬೇಕಾದರೆ, ಮತದಾರರು ಭ್ರಷ್ಟ ರಾಜಕಾರಣಿಗಳನ್ನು ಚುನಾಯಿಸಬಾರದು---(ಅವರು ಯಾವುದೇ ಪಕ್ಷದವರಿರಲಿ.) ಚುನಾವಣೆಯಲ್ಲಿ ನನಗೆ ವೋಟು ಕೇಳಲು ಬರುವ ರಾಜಕಾರಣಿಗೆ ನಾನು ಕೇಳುವ ಪ್ರಶ್ನೆಗಳಿವು:
(೧) ನೀವು ಜನಲೋಕಪಾಲ ಶಾಸನದ ಪರವಾಗಿ ಇರುವಿರೊ ಅಥವಾ ವಿರುದ್ಧವಾಗಿರುವಿರೊ?
(೨) ಒಂದು ವೇಳೆ ನೀವು ಆರಿಸಿ ಬಂದರೆ, ಪೂರ್ಣ ಅವಧಿಯವರೆಗೆ ಪಕ್ಷಕ್ಕೆ ನಿಷ್ಠರಾಗಿ ಉಳಿಯುವಿರೊ, ಇಲ್ಲವೊ?

ಈ ಪ್ರಶ್ನೆಗಳಿಗೆ ‘ಎಸ್’ ಎಂದು ಉತ್ತರಿಸುವ ರಾಜಕಾರಣಿ ಬಹುಶಃ ಸಿಗಲಿಕ್ಕಿಲ್ಲ. ಹಾಗಾದರೆ, ಭಯೋತ್ಪಾದಕರ ಮತ್ತೊಂದು ದಾಳಿಗಾಗಿ ನಾವು ಸಿದ್ಧರಾಗಿರೋಣ!

27 comments:

Subrahmanya said...

"ಇಂತಹವರನ್ನು ಚುನಾಯಿಸುತ್ತಿರುವ ನಾವೇ ಮುಠ್ಠಾಳರು"
ನಿಜ, ಆದರೆ ನಮಗೆ option ಆದ್ರೂ ಎಲ್ಲಿದೆ ?.
ಕರಡಿಗೆ ಮೈಯೆಲ್ಲಾ ಕೂದಲಿರುತ್ತೆ, differentiate ಮಾಡೋದು ಕಷ್ಟವೇ ಸರಿ !. ಯಾರೋ ಹೇಳಿದ್ರು ೨೦೬೦ ಕ್ಕೆ ನಮ್ಮ ಜನಸಂಖ್ಯೆ stabilize ಆಗುತ್ತೆ ಅಂತ, ಬಹುಷಃ ಆ ವೇಳೆಗೇ ನಮ್ಮ ದೇಶದ ಸಮಸ್ಯೆಗಳೂ ಬಗೆಹರಿಯಬಹುದೇನೋ !.
ಮುಂದಿನ ಯುದ್ಧಕ್ಕೆ ನಾನಂತೂ ಸಿದ್ದನಾಗಿದ್ದೇನೆ.

sunaath said...

Options ಯಾಕಿಲ್ಲ, ಸುಬ್ರಹ್ಮಣ್ಯರೆ? ರಾಜಕಾರಣಿಗಳು ನಮ್ಮನ್ನು ಬಲು ಉದಾರವಾಗಿ ಕೇಳುತ್ತಲೇ ಇದ್ದಾರೆ:
"ಹ್ಯಾಂಗ ಸಾಯಬೇಕಂತಿ ಬೋರೆಗೌಡಾ? ನಿನ್ನೇನು ಉರಲು ಹಾಕಿ ಕೊಲ್ಲಬೇಕೊ? ನೀರಾಗ ಮುಳುಗಸಬೇಕೊ?
ಅಥವಾ ಸುಮ್ಮನ ಹಸಿವೀಲೆ ಸಾಯತೇನಿ ಅಂತೀಯೊ?"

ಚುಕ್ಕಿಚಿತ್ತಾರ said...

ನಮ್ಮದೇ ಹಣ, ನಮ್ಮದೇ ಹೆಣ!
ವಿಷಾದವಾಗುತ್ತೆ..

ಬಾಲು said...

ಭಾರತದಲ್ಲಿ ಬಡವನಾಗಿ ಮಾತ್ರ ಹುಟ್ಟಬಾರದು. ಒಬ್ಬ ಕೂಲಿ ಕಾರ್ಮಿಕ, ರೈತ, ಇಲ್ಲಿ ನಗರದಲ್ಲಿ ಬಾಂಬ್ ಧಾಳಿ ಗೆ ಹೆಸರಿಲ್ಲದಂತೆ ಸಾಯುವ ಸಾಮಾನ್ಯ ನಾಗರೀಕ ... ಇಡಿ ಭಾರತದ ನತದೃಷ್ಟ ಪ್ರಜೆಗಳು. ಈ ಬ್ರಷ್ಟಾಚಾರ, ಅಕ್ರಮ, ಮೋಸ, ಮತಾಂದರು, ಇವರೆಲ್ಲರ ದುಷ್ಟತನ ದಲ್ಲಿ ನಮ್ಮೆಲ್ಲರ ಪಾತ್ರ ಸಾಕಷ್ಟು ಇದೆ ಅಲ್ವ? ನಮ್ಮನ್ನು ನಾವು ಬೈದುಕೊಬೇಕೋ, ಅಥವಾ ನಾವೇ ಶ್ರುಷ್ಟಿಸಿರೋ ವ್ಯವಸ್ತೆಗೆ ದೂರಬೇಕೋ ಗೊತ್ತಾಗ್ತಾ ಇಲ್ಲ.
ಮತ್ತೊಂದು ಕಾಮೆಡಿ ಗೊತ್ತ? ನಮ್ಮ ಸರ್ಕಾರ ಹೇಳ್ತಾ ಇದೆ, ಬಾಂಬ್ ಧಾಳಿ ಗುಪ್ತಚರ ವಿಭಾಗದ ವೈಪಲ್ಯ ಅಲ್ಲವಂತೆ! ಆದ್ರೆ ಅವರಿಗೆ ಗೊತ್ತಿತ್ತ? ಗೊತ್ತಿದ್ರು ಸುಮ್ಮನಿದ್ರ?

ಮತ್ತೊಂದು ವಿಷ್ಯ, ಬಾಂಗ್ಲ ದೇಶದಲ್ಲಿ ಒಂದು ಲೀಟರ್ ಪೆಟ್ರೋಲ್ ಗೆ ೭೬ ಟಾಕ.

ಸಾಗರದಾಚೆಯ ಇಂಚರ said...

100% true,

namma henada mele naave hodkotivi ashte

PARAANJAPE K.N. said...

ನಿಮ್ಮ ಲೇಖನದ ಆಶಯ, ಆಕ್ರೋಶ ಅರ್ಥವಾಯ್ತು. ನಮ್ಮ ದೇಶದ ರಾಜಕಾರಣಿಗಳನ್ನು, ಜನರನ್ನು ಸುಧಾರಿಸಿ ಸರಿದಾರಿಗೆ ತರುವುದು, ಸಾಧ್ಯವೇ ಇಲ್ಲವೆನಿಸುತ್ತದೆ.

ಮನಮುಕ್ತಾ said...

ನಿಜ..ತು೦ಬಾ ವಿಷಾದನೀಯ ಪರಿಸ್ಥಿತಿ..

ಯಾವ ರಾಜಕಾರಣಿಗೆ ವೋಟು ಹಾಕಬೇಕೆ೦ದು ತೀರ್ಮಾನಿಸುವುದು ಕೂಡಾ ಕಷ್ಟವೇ..

sunaath said...

ವಿಜಯಶ್ರೀ,
ಹಣ ಹೋದರೆ ಹೋಗಲಿ, ನಾವು ಹೆಣವಾಗದಿದ್ದರೆ ಸಾಕು, ಅಲ್ಲವಾ!

sunaath said...

ಬಾಲು,
ವಿನಿಮಯದರದ ತಪ್ಪು ಗ್ರಹಿಕೆಯಿಂದಾಗಿ ನಾನು ಬಾಂಗ್ಲಾ ಹಾಗು ಪಾಕಿಸ್ತಾನದಲ್ಲಿ ಪೆಟ್ರೋಲಿನ ದರಗಳನ್ನು ತಪ್ಪಾಗಿ ನಮೂದಿಸಿದ್ದೆ. ನಿಮ್ಮ ಪ್ರತಿಕ್ರಿಯೆಯನ್ನು ನೋಡಿದ ಬಳಿಕ, ಇದೀಗ ಬಾಂಗ್ಲಾ ಹಾಗು ಮಲೆಯೇಶಿಯಾ ದೇಶದ ಪೆಟ್ರೋಲ್ ದರಗಳನ್ನು ಸರಿಪಡಿಸಿ ನಮೂದಿಸಿದ್ದೇನೆ. ನಿಮಗೆ ಧನ್ಯವಾದಗಳು.
ಇನ್ನು ಸರಕಾರವೇ ವಿಫಲವಾದಾಗ,ಸರಕಾರದ ಸಚಿವರು ಜೋಕರುಗಳಂತೆ ಮಾತನಾಡುತ್ತಿರುವಾಗ, ಗುಪ್ತಚರ ಇಲಾಖೆ ಏನು ಮಾಡೀತು!

sunaath said...

ಗುರುಮೂರ್ತಿಯವರೆ,
ಕುವೆಂಪುರವರ ಕವನವೊಂದನ್ನು ಸ್ವಲ್ಪ ಬದಲಾಯಿಸಿ ಹೀಗೆ ಹೇಳಬಹುದು:
"ನಾನಳಿವೆ, ನೀನಳಿವೆ, ನಮ್ಮೆಲುವುಗಳ ಮೇಲೆ
ಮೂಡುವದು ರಾಜಕಾರಣಿಗಳ ಭ್ರಷ್ಟ ಲೀಲೆ!"

sunaath said...

ಪರಾಂಜಪೆಯವರೆ,
It is a downhill journey ಅಂತ ಅನ್ನಿಸುತ್ತದೆ.

sunaath said...

ಮನಮುಕ್ತಾ,
ಎಲ್ಲ ರಾಜಕೀಯ ಸ್ಪರ್ಧಿಗಳನ್ನು ತಿರಸ್ಕರಿಸುವ ಅಧಿಕಾರ ಮತದಾರನಿಗೆ ಬೇಕು!

ಅಪ್ಪ-ಅಮ್ಮ(Appa-Amma) said...

ಸುನಾಥ್ ಕಾಕಾ,
ವಿಷಾದನೀಯ ಸಂಗತಿಗಳನ್ನು ನೇರವಾಗಿ ಹೇಳಿದ್ದಿರಿ
ಸಬಕೋ ಸನ್ಮತಿ ದೇ ಭಗವಾನ್

sunaath said...

ಅಪ್ಪ-ಅಮ್ಮ,
HE is the last resort!

ಮನಸು said...

ಈ ದೇಶದ ಕಥೆ ಇಷ್ಟೇ ಕಣಮ್ಮೋ...ಚಿಂತೆ ಮಾಡಿ ಲಾಭ ಇಲ್ಲಮ್ಮೋ ...ಎಂಬ ಸಾಲು ನಿಜಕ್ಕೂ ಒಪ್ಪುತ್ತೆ ಅಲ್ಲವೇ ಕಾಕ..!!..... ಬದಲಾವಣೆಯ ಹಾದಿ ಬೇಕಿದೆ.

umesh desai said...

ಕಾಕಾ ನಿಮ್ಮ ಮಾತು ಸೋಳಾಅಣೆ ಖರೆ. ಮತದಾನ ಮಾಡಬೇಕು ನಿಜ
ಆದ್ರ ಒಮ್ಮೊಮ್ಮೆ "ಮತದಾನ ವಿಮುಖತೆ"ಯ ಆಯ್ಕೆಯೂ ಬೇಕೇಬೇಕು ಅನಿಸತದ.
ಏನು ಮಾಡೋದು ನಾವು ಪಾಕಿಸ್ತಾನದವರಿಗಿಂತ ಛಲೋ ಇದ್ದೇವಿ ಅಂತ ಡಿಗ್ಗಿ ಹೇಳತಾನ
ಕನ್ನಡ್ಯಾಗ ಮಾರಿ ಹೊಳಿಯುವುದ ಇಲ್ಲ ಅಂತ ಹಟಾ ಹಿಡದದ

Raghu said...

Ee Deshad Kathe Ishte Kanarappo..!!

http://www.youtube.com/watch?v=y2K260kRg6w

Nimmava,
-Raghu

sunaath said...

ಮನಸು,
ಅಮಾಯಕ ಮತದಾರರು ಸ್ವಾರ್ಥಿ ರಾಜಕಾರಣಿಗಳ ಕಾಲಕೆಳಗೆ ಸಿಕ್ಕು ಬಿದ್ದಿದ್ದಾರೆ. ಅವರು ಜಾಣರಾದರೆ, ಸ್ಥಿತಿ ಬದಲಾದೀತು. ಇಲ್ಲದಿದ್ದರೆ ಪರಿಸ್ಥಿತಿ ಮತ್ತಿಷ್ಟೂ ಕೆಟ್ಟೀತು!

sunaath said...

ದೇಸಾಯರ,
ಡಿಗ್ಗೀದು ಎಲವಿಲ್ಲದ ನಾಲಗೆ. ಕಲ್ಮಾಡಿಯನ್ನ innocent ಅಂತ ಕರೀತಾನ. ಮುಂಬಯಿ ಬ್ಲಾಸ್ಟಿಗೆ ಹಿಂದು ಸಂಘಟನೆ ಕಾರಣ ಅಂತ ಹೇಳತಾನ. ರಾಹುಲ ಗಾಂಧೀಗೆ ಪಟ್ಟ ಕಟ್ಟಬೇಕಂತಾನ! ಇವನ ಮುಕ್ತಾಫಲಗಳನ್ನು ಕಾದು ಕೇಳೋಣ!

sunaath said...

Raghu,
Thanks for the URL!

ಗಿರೀಶ್.ಎಸ್ said...

ಎಷ್ಟೇ ಆದರು ನಮ್ಮ ದೇಶದ ರಾಜಕಾರಣಿಗಳನ್ನು ಬದಲಾಯಿಸಲು ಸಾಧ್ಯವಿಲ್ಲ.... ಅವರು ದುಡ್ಡು ತಿಂದೆ ತಿನ್ನುತ್ತಾರೆ...
ಪ್ರತಿಯೊಬ್ಬ ರಾಜಕೀಯ ವ್ಯಕ್ತಿಯು ದುಡ್ಡು ತಿನ್ನುವವರೇ ಆದರೆ ಅವರಲ್ಲಿ ಯಾರಿಗೆ ವೋಟು ಹಾಕಬೇಕು ಎಂಬುದು ನಿರ್ಧರಿಸಲು ಕಷ್ಟ !!!

sunaath said...

ಗಿರೀಶ,
ಅಣ್ಣಾ ಹಜಾರೆಯವರಿಂದ ಏನಾದರೂ ದಾರಿ ಹುಟ್ಟೀತೊ?
ನೋಡಬೇಕು!

Kavitha said...

May be we have to think short term and long term solutions for this.
Short term: its true that 99% of our politicians are corrupt and disgusting. But still strive to identify and vote for that 1% who are genuine. I am recently following how does the political party Lok Satta works. I don't see they are bad. I am not recommending them, but in each one of our locality some politician who is doing good job, vote for them no matter which party. Do not compromise that lets vote to some donkey so that our favorite party comes to power. No compromise in quality. Just vote for the right person.

long term:- its always how we are raised, what values our schools and parents give us. Try to encourage good parenting and invent new ways of educating our kids. At least by the time you and I are going back to claim our pension the kids of today would have set the system right. go talk to schools and give your ideas on how kids needs to be taught. Other than academics, morality, honesty are what they need to be raised with. you may always be rejected when you suggest ideas, but someone like us will listen and implement those ideas. And that's what matters. It may look stupid, my idea. But that's all i could think of and I am working on it. Anything you think to set system right is good no matter how small or stupid that idea looks. Work on your idea or join hands with right people and bring the changes you want to see.

Thanks for this space for expressing my thoughts.
Kavitha.

sunaath said...

Kavita,
You know how complex our predicament is. But I am happy to see the optimism in you. I remember the lines of a very great human from Karnataka:
"ತಮಂಧ ಘನ ಜ್ಯೋತಿ ಕಿರಿದೆನ್ನಬಹುದೆ?"
The Russian writer-fighter Solzhenitsin too did not give up hope. He titled his book as`Candle in the wind.'!

ಶ್ರೀನಿವಾಸ ಮ. ಕಟ್ಟಿ said...

ಕಪ್ಪುಹಣದ ಉತ್ಪಾದನೆಗೆ ಕೇವಲ ರಾಜಕಾರಣಿಗಳೇ ಕಾರಣವಲ್ಲ. IAS, IPS, IFS ಅಲ್ಲದೇ ಅನೇಕ ಕಮೀಶನ್‍ಗಳ ಅಧ್ಯಕ್ಷರು, ವೈದ್ಯಕೀಯ ಕಾಲೇಜಿಗೆ ಅನುಮೋದನೆ ನೀಡುವ ಸಂಸ್ಥೆ ( ಉದಾ: ಡಾ. ಕೇತನ್ ದೇಸಾಯಿ) ಮತ್ತು ಇವರೆಲ್ಲರ್ನ್ನು ಸಹಿಸುವ ನಮ್ಮಂತಹ ಸಾಮಾನ್ಯ ಪ್ರಜೆಗಳು ಎಲ್ಲರೂ ಕಾರಣರು. ಈ ಕಪ್ಪು ಹಣ ಕೇವಲ ಸ್ವಿಸ್ ಬ್ಯಾಂಕನಲ್ಲಿಲ್ಲ. ಅಲ್ಲಿ ಹೋಗಿ, NRI ಹೂಡಿಕೆದಾರರ ಮುಖಾಂತರ ಮತ್ತೆ ಇಲ್ಲಿ ಬಂದು ಬಿಳಿಯಾಗಿಬಿಡುತ್ತದೆ. ಇದಲ್ಲದೆ, ನೀವ್ಯ್ ಅಂದಾಜು ಮಾಡಿರುವ ಹಣದ ಮೂರುಪಟ್ಟು ಹಣ ನಮ್ಮ ದೇಶದಲ್ಲಿಯೇ ಭೂಗತವಾಗಿ ಇದೆ. ಇದು ಹೆಚ್ಚಾಗುತ್ತಿದೆಯೆ ಹೊರತು ಕಡಿಮೆಯಾಗುತ್ತಿಲ್ಲ !ಇದಕ್ಕೆ ಪರಿಹಾರವೆಂದರೆ, ಜನ ಜಾಗೃತಿ. ಜನ ತಮ್ಮ ಹಕ್ಕು, ಅಧಿಕಾರ ಮತ್ತು ಜವಾಬ್ದಾರಿಗಳನ್ನು ಅರಿತು ವರ್ತಿಸಿದರೆ ಕಪ್ಪು ಹಣದ ಉತ್ಪಾದನೆ ಖಂಡಿತ ಕಡಿಮೆಯಾಗುತ್ತದೆ.

ಸೀತಾರಾಮ. ಕೆ. / SITARAM.K said...

ತಮ್ಮ ತರ್ಕ ಸರಿಯಾದದ್ದೇ!

sunaath said...

ಸೀತಾರಾಮರೆ,
ಧನ್ಯವಾದಗಳು.