Saturday, July 7, 2012

ಅಶ್ವವೃತ್ತಾಂತ


--೧--
ಕಾಡೆದೆಯಲ್ಲಿ ಕುದುರೆಯ ಹೇಂಕಾರ,
ನರನರಗಳಲಿ ಅದರ ಮಾರ್ದನಿ ಸಿಡಿತ,
ಕಾಡುಕುದುರೆಯ ಸೆಣೆಸಿ ಸವಾರಿ ಮಾಡುವ
ಬಯಕೆ ಭೂತಾಕಾರ
ಚಿಮ್ಮಿ ನನ್ನನು ಕುದುರೆಯ ಬೆನ್ನ ಮೇಲೆ,
ದಿಕ್ಕು ದೆಸೆ ನೋಡದೆ ಓಡುತಿರೆ ಅಮಲಿನಲಿ,
ನಾನೆ ವಿಕ್ರಮರಾಯನೆಂಬ ಠೇಂಕಿನಲಿ,
ಎದೆಯನ್ನು ಬೀಗಿಸುತ ಝೀಂಗುಟ್ಟೆ ಗಾಳಿಯಲಿ,
. . . . . . . . . . . . . . . . . . . . . . . . . . .
ಕಣ್ಣು ಕತ್ತಲೆ, ತೊಡೆಯಲ್ಲಿ ನೋವಿನ ಸೆಳಕು,
‘ರಾಮಾ!’ ಎಂದೆನುತ ಕಣ್ಣಗಲಿಸಿರಲಿಲ್ಲ ಇನ್ನೂ
. . .. ಕಾಡೆದೆಯೊಳಗಿಂದ ಕುದುರೆಯ ಹೇಂಕಾರ,
                         ನರನರಗಳಲಿ ಮಾರ್ದನಿ!

--೨
ಏನೆಲ್ಲ ಕಸರತ್ತು ಮಾಡಿದರೂ
ಏಳದೀ ಘೋಡಾ!
ಹಾಗೆಲ್ಲ ತೀರದು ಸವಾರಿಯ ಚಟ,
ಮುದಿ ಕುದುರೆಯನ್ನೇ ಏರುವ ಹಟ,
ಮುಗ್ಗುರಿಸಿ ಬೀಳಲು ಅಕಟಕಟಾ!

ನಗುತಿಹಳು ಬಾಳಸಂಗಾತಿ:
‘ಜೊತೆಜೊತೆಗೆ ನಡೆದರೆ ಸಾಲದೆ? ಸವಾರಿಯೇ ಬೇಕೆ?’

--೩--
ಈಲಿಯಟ್ ಹೇಳಿದ್ದು ಖರೆ:
This is the way the world ends
This is the way the world ends
This is the way the world ends
Not with a bang but a whimper.

-೪-
ಕೊಟ್ಟ ಕುದುರೆಯನೇರಬೇಕು, ಅಲ್ಲಮಪ್ರಭುಗಳಂತೆ.
ಪ್ರಾಯದಲಿ ಅದು ರೇಸ್ ಗೆಲ್ಲುವ ಚದುರೆ,
ಇಳಿವಯಸಿನಲಿ ಜಟಕಾ ಕುದುರೆ!

45 comments:

Badarinath Palavalli said...

೧. ವಾರೇವ್ಹಾ, ವಿಕ್ರಮರಾಯನ ಠೇಂಕಾರ ಮತ್ತು ಕುದುರೆಯ ಹೇಂಕಾರ!

ರೋಚಕ ವಿವರಣೆ ಸಾರ್.

೨. ಆಹಾ ರಸಿಕ ಕವಿಯೇ, ಏನು ನಿನ್ನ ಹೋಲಿಕೆ?
ನಕ್ಕಳು ಬಾಳ ಸಂಗಾತಿ!!!

೩. ನಿಜ ದೊಡ್ಡ ಹೊಡೆತವೇ ಬೇಕಿಲ್ಲ, ಸೋಲು ಮುಗ್ಗರಿಸಿದಾಗಲೂ ಸಂಭವ!!

೪. ಹೌದಲ್ಲಾ, ನಸೀಬ್ ಇದ್ದ ಹಾಂಗೆ ಸವಾರಿ ಕುದುರೆಯೂ ಕೂಡ...

(ಇನ್ನೂ ಒಂದಿದೆ)

ಪೆದ್ದ ಕವಿ ಬದರಿನಾಥ ಪಲವಳ್ಳಿ ತನ್ನ ಬಗ್ಗೆಯೇ ಬರೆದುಕೊಂಡಂತೆ:

"ನಷ್ಟ ಜಾತಕ ಕುದುರೆಯು
ತೇಕುತಲೇ ಇರಬೇಕು ಎಳೆದೆಳೆದು ಜಟಕ..."

-- ನಾವು ಕುದುರೆಗಳು

Anil Talikoti said...

ವಾ ಸುನಾಥಜಿ, 'ಲಾ ಜವಾಬ'
ಅಲ್ಪಮತಿಯ ಎರಡಾಣೆಯ ಉತ್ತರ
ಏರಿಬಿಡಬೇಕು, ಇದ್ದಾಗ ಅವಕಾಶ
ನಡೆಯುವದಂತು ಇದ್ದೆ ಇದೆ.
ನಗುವವರನೂ ಆದರೆ ಸಾಥಿ
ಆಗುವದೊಂದು ಒಳ್ಳೆ ಕಥಿ
ಬೇರೆನಿಲ್ಲಾ ಗತಿ -ಅನ್ಯಥಾ ನಾಸ್ತಿ.
ನಾವು ದೊರೆಗಳು - ನಮ್ಮವೇ ಕುದುರೆಗಳು!

Keshav.Kulkarni said...

ಏಟ್ಸ್ ಕವಿಯ ನಾಕು ಸಾಲಿಗೆ ನೂರು ಅರ್ಥ ತರುವ ಕವನ. ತುಂಬ ಹಿಡಿಸಿತು.

Subrahmanya said...

ಪುರುಷಾರ್ಥದ ಮುಖ್ಯ ಭಾಗವೊಂದನ್ನು ಕವನದಲ್ಲಿ ಸೊಗಸಾಗಿ ಹೇಳಿದ್ದೀರಿ. ಆದ್ರೂ, ಜಟಕಾಬಂಡಿಯೇ ಕೆಲವೊಮ್ಮೆ ಬೆಸ್ಟು ಮತ್ತು ಅನಿವಾರ್ಯ !

Swarna said...

ಕಾಕಾ,
ಎಲ್ಲ ರೀತಿಯ ಅಶ್ವಗಳು ಕೂಡಿರಲು ಜಗ ಸೊಬಗು :)
ಸವಾರನಿಗೆ ಕುದುರೆ ಏರುವ ಬಯಕೆ ಸಂಗಾತಿಗೆ ಜೊತೆಯೇ ಸ್ವರ್ಗ.
ತುಂಬಾ ಇಷ್ಟವಾಯಿತು.
ಸ್ವರ್ಣಾ

Sushrutha Dodderi said...

:-)

Unknown said...

wah wah.. sooper sir!! :)

Ittigecement said...

ಸುನಾಥ ಸರ್....

ಕುದುರೆ ಏರುವ ಬಯಕೆಯ ಕವನ ತುಂಬಾ ಇಷ್ಟ ವಾಯಿತು.... ಸೂಪರ್ರ್....... !

sunaath said...

ಬದರಿನಾಥರೆ,
ನಿಮ್ಮ line by line ವಿಮರ್ಶೆಗೆ ಧನ್ಯವಾದಗಳು. ಇನ್ನು ನಿಮ್ಮನ್ನು ನೀವು ಪೆದ್ದ ಎಂದು ಕರೆದುಕೊಳ್ಳುವುದು ಸರಿಯಲ್ಲ. ಅಥವಾ ತೆಲುಗಿನಲ್ಲಿ ‘ಪೆದ್ದ’ ಎಂದರೆ ‘ಹಿರಿಯ’ ಎನ್ನುವ ಅರ್ಥವಿದೆ. ಕಾವ್ಯಲೋಕದಲ್ಲಿ ನೀವು ಹಿರಿಯರೇ ಸರಿ.

sunaath said...

ಅನಿಲ,
ಕವನಕ್ಕೆ ಕವನದ ಮಾರುತ್ತರ!
ನೀವು ಅಲ್ಪಮತಿಗಳಲ್ಲ.
ನಿಮ್ಮ ಹಿತನುಡಿಗೆ ಧನ್ಯವಾದಗಳು!

sunaath said...

ಕೇಶವ,
ಈಲಿಯಟ್ ಕವಿಯ ಆ ನಾಲ್ಕು ಸಾಲುಗಳು ಅರ್ಥಗರ್ಭಿತವಾಗಿಯೇ ಇವೆ. ಅವನ್ನು ಎಲ್ಲಿಯೂ ಬಳಸಿಕೊಳ್ಳಬಹುದು!

sunaath said...

ಸುಬ್ರಹ್ಮಣ್ಯರೆ,
ವಾನಪ್ರಸ್ಥಾಶ್ರಮದ ಅವಧಿಯಲ್ಲಿ ಮೂರನೆಯ ಪುರುಷಾರ್ಥವು ಜಟಕಾ ಕುದುರೆಯೇ ಆದರೆ ಅಚ್ಚರಿ ಏನಿಲ್ಲ!

sunaath said...

ಹೌದು ಸ್ವರ್ಣಾ,
ಸವಾರನಿಗೆ ಮತ್ತು ಜೊತೆಗಾತಿಗೆ ಇರುವ ವ್ಯತ್ಯಾಸವೇ ಅದು.

sunaath said...

ಸುಶ್ರುತ,
ಹುಡುಗಾ, ನಿನ್ನಾಟ ಮುಂದೆ ಇದೆ!

sunaath said...

ರವಿಕಾಂತ,
ಕುದುರೆಯ ಬೆನ್ನು ಚಪ್ಪರಿಸುತ್ತಿರುವದಕ್ಕೆ ಧನ್ಯವಾದಗಳು.

sunaath said...

ಪ್ರಕಾಶ,
ಯಾವತ್ತೋ ಒಮ್ಮೆ ಬರೆಯುವ ಕವನ.
ನೀವು ಮೆಚ್ಚಿಕೊಂಡಿದ್ದಕ್ಕೆ ಧನ್ಯವಾದಗಳು.

Dr.D.T.Krishna Murthy. said...

ಸುನಾತ್ ಸರ್;ಚೆಂದದ ಕವನ.'ಇಳಿ ವಯಸ್ಸಿನಲ್ಲಿ ಜಟಕಾ ಕುದುರೆ'!ಅದಕ್ಕೇ ಡಿ.ವಿ.ಜಿ.ಯವರು 'ಬದುಕು ಜಟಕಾ ಬಂಡಿ'ಎಂದು ಹೇಳಿರಬಹುದೇ?!ನಮಸ್ಕಾರ.

ಚುಕ್ಕಿಚಿತ್ತಾರ said...

ಇಷ್ಟವಾಯಿತು..:)

Badarinath Palavalli said...

ಈವತ್ತು ನಿಮ್ಮ ಈ ಬ್ಲಾಗ್ ಲಿಂಕ್ ಅನ್ನು ಫೇಸ್ ಬುಕ್ಕಿನಲ್ಲಿ ಹಾಕುತ್ತ ಪ್ರಕಾಶ್ ಹೆಗಡೆಯವರು:
"ಕನ್ನಡ ಸಾಹಿತ್ಯದ "ಪ್ರಶಸ್ತಿಗಳು" ಬರುವ ಯಾವುದಾದರೂ ಬ್ಲಾಗ್ ಇದ್ದಲ್ಲಿ...
ಅದು ಈ ಬ್ಲಾಗ್....

ಇವರು ಕನ್ನಡ ಬ್ಲಾಗ್ ಪಿತಾಮಹ...

ಅವರ ಅಧ್ಯಯನ ನಿಜಕ್ಕೂ ಬೆರಗು ಗೊಳಿಸುತ್ತದೆ..

ಬೇಂದ್ರೆ.. ಶರೀಫರ ಸಾಹಿತ್ಯದ ಬಗೆಗೆ ಅಷ್ಟು ನಿಖರವಾಗಿ ಬರೆಯಬಲ್ಲವರು ತುಂಬಾ ಅಪರೂಪ.."

ಇದು ಅತಿಶಯೋಕ್ತಿಯಲ್ಲ.

ಇದಕ್ಕೆ :
Azad IS ಕನ್ನಡ ಸಾಹಿತ್ಯ ಅದರಲ್ಲೂ ವರಕವಿ ಬೇಂದ್ರೆಯವರ ಕವನಗಳ ಬಲು ಸುಲಭದ ಮತ್ತು ವಿವಿಧ ಆಯಾಮ ತೋರುವ ವಿವರಗಳು ಸುನಾಥಣ್ಣ ನ "ಸಲ್ಲಾಪ" ದಲ್ಲಿ ಕಾಣಬಹುದು.

Tejaswini Hegde Prakashanna... 100% True...Sunaath kaakara baravaNigeya Panditya.. avara vinayate... saraLate ellarigU maadari..

Raghavendra Joshi ಹೌದು.'ಸಲ್ಲಾಪ' ನಿಜಕ್ಕೂ ಒಳ್ಳೆಯ ಬ್ಲಾಗ್.

Suma Sudhakiran yes prakaashanna true . Bendreyavarannu saraLavaagi artha maaDisuva sunatha kaakara sallapa the best blog :)

Shashi Dodderi said...

Good poem- lot of feeling - I will read once again and get back to you.
Regards
shashi

sunaath said...

Krishnamurti/Sir,
DVGmis a great writer and a great philosopher. He inspires us all.

sunaath said...

VijayaShree,
Thank you so much.

sunaath said...

Badarinath,
It is the affectionate nature of Prakash that makes him think like that!

sunaath said...

Shashi,
The first part is the poem of a teenager. The next sequels are of an aging man.

umesh desai said...

ಕಾಕಾ ಏನು ಹೇಳಲಿ..ಕುದುರಿ ಸವಾರಿ ನಿಮ್ಮದು ಅದ್ಭುತ ಅದ
ನೀವು ಇಷ್ಟು ಛಂದಂದು ಕವಿತಾ ಬರದೀರಿ.. ಓದಿ ಹೈರಾಣಾದೆ...
ಕುದುರೆ ಇದು ಪುರಾಣದಿಂದನೂ ಆಧೀನದ ಸಂಕೇತ ಅಲ್ಲೇನ್ರಿ..
ಹಂ ಮತ್ತ ಮೇಲ್ ನೋಡಿದ್ರ ಮುಂದಿನ ತಿಂಗಳ ೨೫ ಮರೀಬ್ಯಾಡ್ರಿ..

sunaath said...

Umesh,
Thank you so much.

Anonymous said...

ಆರ್ಭಟದಿ೦ದ ಪ್ರಾರ೦ಭವಾಗುವ ಜೀವನವನ್ನು ಪ್ರತಿನಿಧಿಸುವ ವಿಕ್ರಮನ ಕುದುರೆ, ಆತ್ಮ ಸಾ೦ಗತ್ಯಕ್ಕೆ ಪ್ರತೀಕವಾಗುವ ಜಟಕಾ ಕುದುರೆ! ಅರ್ಥಪೂರ್ಣ ಕವನ ಸರ್, ನನ್ನ ಬ್ಲಾಗ್ ಬರಹಗಳು ನಿಮ್ಮ ಪ್ರತಿಕ್ರಿಯೆಯ ನಿರೀಕ್ಷೆಯಲ್ಲಿವೆ. ಒಮ್ಮೆ ಭೇಟಿ ಕೊಡಿ.

ರಾಘವೇಂದ್ರ ಜೋಶಿ said...

ಸುನಾಥ್ ಸರ್,
ನಿಮ್ಮ ಕವನ ಏನೆಲ್ಲ,ಎಷ್ಟೆಲ್ಲ render ಮಾಡುತ್ತಿದೆ!
ಮಧ್ಯದಲ್ಲಿ ನೀವು ಎಲಿಯಟ್ ನನ್ನು ತಂದು ಕೂರಿಸಿದ್ದು-
ಕವಿತೆಯ ಸೊಬಗು ಮತ್ತು ಶಕ್ತಿಯನ್ನು ಹೆಚ್ಚಿಸಿಬಿಟ್ಟಿದೆ..
A smile from my side. :-)
-RJ

prabhamani nagaraja said...

ಆರ್ಭಟದಿ೦ದ ಪ್ರಾರ೦ಭವಾಗುವ ಜೀವನವನ್ನು ಪ್ರತಿನಿಧಿಸುವ ವಿಕ್ರಮನ ಕುದುರೆ, ಆತ್ಮ ಸಾ೦ಗತ್ಯಕ್ಕೆ ಪ್ರತೀಕವಾಗುವ ಜಟಕಾ ಕುದುರೆ! ಅರ್ಥಪೂರ್ಣ ಕವನ ಸರ್, ನನ್ನ ಬ್ಲಾಗ್ ಬರಹಗಳು ನಿಮ್ಮ ಪ್ರತಿಕ್ರಿಯೆಯ ನಿರೀಕ್ಷೆಯಲ್ಲಿವೆ. ಒಮ್ಮೆ ಭೇಟಿ ಕೊಡಿ.

ದಿನಕರ ಮೊಗೇರ said...

waav..... nimma bloganalli yaavagalU visheshave iratte....
super sir....
very nice...

sunaath said...

RJ,
Thanks for the lovely smile!

sunaath said...

ಪ್ರಭಾಮಣಿಯವರೆ,
ನಿಮ್ಮ ಲೇಖನಗಳ ನಿಯತ ಓದುಗ ನಾನು. ಆದರೆ ಗಣಕಯಂತ್ರದ ಸಮಸ್ಯೆಯಿಂದಾಗಿ ಅಂತರ್ಜಾಲಕ್ಕೆ ಬರಲು ಆಗಿರಲಿಲ್ಲ. ಇನ್ನು ಬಂದೇ ಬರುವೆ.

sunaath said...

ದಿನಕರರೆ,
ವಿಶೇಷತೆ ನಿಮ್ಮ ಹೃಗಯದಲ್ಲಿದೆ. ಧನ್ಯವಾದಗಳು.

Ashok.V.Shetty, Kodlady said...

ಸುನಾಥ್ ಸರ್,

ಸುಂದರ,ಅರ್ಥಪೂರ್ಣ ಕವನ.....ಸೂಪರ್ ಸರ್...

sunaath said...

ಧನ್ಯವಾದಗಳು, ಅಶೋಕ!

KalavathiMadhusudan said...

sunath sir, adbhutavaada kavanakke adbhutavaada vivarane,dhanyavaadagalu.

sunaath said...

ಕಲರವ,
ನಿಮಗೆ ಧನ್ಯವಾದಗಳು.

ಈಶ್ವರ said...

ಸುನಾಥ ಕಾಕಾ,

ತುಂಬಾ ಆಳವಾದ ಕವನವೆನಿಸಿತು. ಕುದುರೆಯನ್ನು ಏಳಿಸುವುದು ಹೇಗೋ

ಕವನದಲ್ಲಿ ಸ್ವಲ್ಪ ಜಾಗವನ್ನು ಬಿಟ್ಟು ಬರೆದದ್ದು ರಾಮಚಂದ್ರಶರ್ಮರ ಪ್ರಯೋಗಗಳೇ? ಗೊತ್ತಿಲ್ಲ. ಅದು ಕವನದ ಅಂದವನ್ನೂ/ ಹೇಳಲಾಗದೇ ಉಳಿಸಿದುದನ್ನೂ ಓದುಗನಿಗೆ ಚಿಂತಿಸಲು ಬಿಟ್ಟಂತೆ.. ನೀವೇ ಅಂದಂತೆ "ನರನರಗಳಲಿ ಮಾರ್ದನಿ!

ಖುಷಿಯಾಯಿತು ಓದಿ. ನಾವೆಲ್ಲಿದ್ದೇವೆ ಎಂಬ ಅರಿವೂ.

sunaath said...

ಧನ್ಯವಾದಗಳು, ಈಶ್ವರ!

ಜಲನಯನ said...

ಸುನಾಥಣ್ಣ ಚನ್ನಾಗಿದೆ...
ನಸೀಬ್ ಕಾ ಘೋಡಾ
ನಸೀಬ್ ವಾಲೋಂಕೊ ಮಿಲೆಗಾ
ಬಸ್ ಹೋನಿ ಚಾಹಿಯೆ
ಸವಾರಿ ಕಿ ಹುನರ್, ತೊ ಸಬ್ ಚಲೆಗಾ

sunaath said...

ಅಪನಾ ನಸೀಬ ಹೀ ಗಧಾ ಹೈ, ಭಾಯೀ,
ಸವಾರೀಕೊ ಘೋಡಾ ಕಹಾಂ ಮಿಲೇಗಾ?
ಶುಕ್ರ ಹೈ ರಬ್ಬಾಕಾ, ಸುನಾಥ!
ಹಮೇಂ ಗಧಾ ಭೀ ಚಲೇಗಾ!

Dayananda said...

ನಿಮ್ಮ ಕುದುರೆಯ ಮೇಲೆ ನಮಗೂ ಲಿಫ್ಟ್ ಸಿಗಬಹುದಾ ?

sunaath said...

ಸಾರ್,
ಈ ಕುದುರೆ ಈಗ ನೆಲ ಕಚ್ಚಿಕೊಂಡು ಕೂತಿದೆ. ನೀವು ಬರುವುದಾದರೆ, ನನ್ನ ಅಭ್ಯಂತರವೇನಿಲ್ಲ!

ಸೀತಾರಾಮ. ಕೆ. / SITARAM.K said...

ತಮ್ಮ ಕವನದ ಅರ್ಥ ತುಂಬಾ ಚೆನ್ನಾಗಿದೆ...
ಬಾಲಿನ ಮಜಲನ್ನು ಅಶ್ವ ವೃತ್ತಾಂತ ದಲ್ಲಿ ಅದ್ಭುತವಾಗಿ ಹೇಳಿದ್ದಿರಿ..

sunaath said...

ಧನ್ಯವಾದಗಳು, ಸೀತಾರಾಮರೆ!