Tuesday, May 27, 2008

ಗೊಂಡರು, ಮಂಡರು

ನಾಲ್ಕು ಲಕ್ಷ ಜನಸಂಖ್ಯೆಯುಳ್ಳ ಗೊಂಡ ಜನಾಂಗವು ಭಾರತದಲ್ಲಿ ಅತ್ಯಂತ ದೊಡ್ಡ ಆದಿವಾಸಿ ಜನಾಂಗವಾಗಿದೆ. ಕೇರಳ, ಕರ್ನಾಟಕ, ಆಂಧ್ರಪ್ರದೇಶ, ಮಹಾರಾಷ್ಟ್ರ, ಮಧ್ಯಪ್ರದೇಶ, ಓಡಿಸಾ, ಛತ್ತೀಸಗಡ, ಬಿಹಾರ, ಝಾರಖಂಡ, ಬಂಗಾಲ, ಗುಜರಾತ ಈ ಎಲ್ಲ ರಾಜ್ಯಗಳಲ್ಲಿ ಗೊಂಡ ಜನಾಂಗವು ಹರಡಿಕೊಂಡಿದೆ.

ಗೊಂಡ ಅಥವಾ ಕೊಂಡ ಪದದಿಂದ ಪ್ರಾರಂಭವಾಗುವ ೨೬೮ ಗ್ರಾಮಗಳು ಕರ್ನಾಟಕದಲ್ಲಿವೆ. ಉದಾಹರಣೆಗಳು: ಕೊಂಡಗುಲಾ, ಕೊಂಡಜ್ಜಿ, ಕೊಂಡರಹಳ್ಳಿ, ಕೊಂಡಲಗಿ, ಕೊಂಡವಾಡಿ, ಕೊಂಡಸಕೊಪ್ಪ, ಕೊಂಡಸಂದ್ರ, ಗೊಂಡನಹಳ್ಳಿ, ಗೊಂಡಗಾವಿ, ಗೊಂಡೇನೂರು ಇತ್ಯಾದಿ.

ಮಹಾರಾಷ್ಟ್ರದಲ್ಲಿ ಆಗಿ ಹೋದ ಪ್ರಸಿದ್ಧ ಸಂತ ಬ್ರಹ್ಮಚೈತನ್ಯ ಮಹಾರಾಜರ ಊರ ಹೆಸರು ‘ಗೋಂದಾವಲಿ’. ಇದು ‘ಗೊಂಡಾವಳಿ’ಯ ರೂಪಾಂತರ. ಯಾವ ರೀತಿಯಲ್ಲಿ ‘ಮಲ್ಲಪ್ರಭೆ’ಯು ‘ಮಲಪ್ರಭೆ’ಯಾಯಿತೊ, ಅದೇ ರೀತಿಯಲ್ಲಿ ‘ಗೊಂಡಾವರಿ’ ನದಿ ಸಹ ‘ಗೋದಾವರಿ’ ನದಿಯಾಗಿದೆ. ಅತ್ಯಂತ ದಟ್ಟವಾದ ಅಡವಿಯಲ್ಲಿ ಈ ಗೊಂಡರು ವಾಸಿಸುತ್ತಿದ್ದರಿಂದಲೇ, ದಟ್ಟಡವಿಗೆ ‘ಗೊಂಡಾರಣ್ಯ’ವೆಂದು ಕರೆಯುವ ಪರಿಪಾಠವಾಯಿತು. ಇವರು ಯಾವ ನದಿಯ ಎಡಬಲದಲ್ಲಿ ತಮ್ಮ ನೆಲೆಯನ್ನು ರೂಪಿಸಿಕೊಂಡಿದ್ದರೊ, ಆ ನದಿ ಗೊಂಡಾವರಿ ನದಿಯಾಗಿ, ಬಳಿಕ ಗೋದಾವರಿ ಎಂದು ಆರ್ಯೀಕರಣಗೊಂಡಿತು. ಈ ವಿಶಾಲ ದೇಶಭಾಗವು ‘ಗೊಂಡವನ’ವೆಂದೇ ನಿರ್ದೇಶಿಸಲ್ಪಟ್ಟಿದೆ. ಒಂದು ಕಾಲದಲ್ಲಿ, ಎಲ್ಲ ಖಂಡಗಳೂ ಒಂದೇ ಭೂಪ್ರದೇಶವಾಗಿದ್ದು, ಬಳಿಕ ಒಡೆದು ಹೋಗಿ ಬೇರೆ ಬೇರೆ ಖಂಡಗಳಾದವಷ್ಟೆ. ಈ ಮೂಲಭೂಪ್ರದೇಶಕ್ಕೆ ವಿಜ್ಞಾನಿಗಳು ಕೊಟ್ಟ ಹೆಸರು ‘ಗೊಂಡವನಖಂಡ’.

ನಾಗರು, ಮಲ್ಲರು ಹಾಗು ಕಂದರು ಆರ್ಯರೊಡನೆ ಹೋರಾಡಿ ಸೋತು ಹೋದ ಸಮುದಾಯಗಳಾಗಿವೆ. ಆದರೆ, ಗೊಂಡರು ಮಾತ್ರ ಇಂತಹ ಹೋರಾಟಗಳಿಗೆ ಒಳಗಾಗಿಲ್ಲ. ಇದರ ಕಾರಣ ಹೀಗಿರಬಹುದು. ಆರ್ಯರು ಭಾರತ-ಪ್ರವೇಶವನ್ನು ಮಾಡಿದಾಗ ನಾಗರು, ಮಲ್ಲರು ಹಾಗು ಕಂದರು ಹಿಮಾಲಯದ ಅಡಿಭಾಗದಲ್ಲಿ ಹಾಗು ಗಂಗಾ ನದಿಯ ದಂಡೆಯಲ್ಲಿ ವಾಸಿಸುತ್ತಿದ್ದರು. ಇಲ್ಲಿ ಘರ್ಷಣೆ ನಡೆದದ್ದು ಸಹಜ. ನಾಗರು, ಮಲ್ಲರು ಹಾಗು ಕಂದರು ಇವರೆಲ್ಲ ಕೇವಲ ಶಸ್ತ್ರಧಾರಿಗಳು. (ಕೈಯಲ್ಲಿ ಹಿಡಿದು ಹೋರಾಡುವ ಉಪಕರಣಕ್ಕೆ ಶಸ್ತ್ರ ಎನ್ನುತ್ತಾರೆ. ಉದಾಹರಣೆಗೆ: ಖಡ್ಗ, ಬರ್ಚಿ, ಗದೆ; ಕೈಯಿಂದ ಬಿಡಬಹುದಾದ ಉಪಕರಣಗಳಿಗೆ ಅಸ್ತ್ರ ಎನ್ನುತ್ತಾರೆ. ಉದಾಹರಣೆಗೆ: ಬಿಲ್ಲು-ಬಾಣ, ಚಕ್ರ.) ಆರ್ಯರು ಅಸ್ತ್ರಧಾರಿಗಳು ಹಾಗು ಅಶ್ವಾರೋಹಿಗಳು. ಹೀಗಾಗಿ ಭಾರತದ ಮೂಲಜನಾಂಗಗಳು ಈ ಘರ್ಷಣೆಯಲ್ಲಿ ಸೋತುಹೋದವು.
(ಭಾರತೀಯರು ಯಾವಾಗಲೂ ಸೋಲುತ್ತಿರುವದಕ್ಕೆ ಇದೊಂದು ಮಹತ್ವದ ಕಾರಣ. ಇವರಲ್ಲಿ ಶೌರ್ಯದ ಕೊರತೆ ಇಲ್ಲ; ಅತ್ಯಾಧುನಿಕ ಆಯುಧಗಳ ಕೊರತೆಯೆ ಇವರ ದೌರ್ಬಲ್ಯ. ಇದನ್ನು ಅರಿತೇ, ಭಾರತದ ಪ್ರಥಮ ಪ್ರಧಾನಿ ನೆಹರೂರವರು ಅಣುಶಕ್ತಿಯ ಉತ್ಪಾದನೆಗೆ—ತನ್ಮೂಲಕ ಅತ್ಯಂತ ರಹಸ್ಯಮಯ ವಾತಾವರಣದಲ್ಲಿ ಅಣ್ವಸ್ತ್ರಗಳ ಉತ್ಪಾದನೆಗೆ—ಚಾಲನೆ ಕೊಟ್ಟರು.)

ಗೊಂಡರು ಗೊಂಡಾರಣ್ಯದಲ್ಲಿ ವಾಸಿಸುತ್ತಿದ್ದರಿಂದ ಆರ್ಯರೊಡನೆ ಇವರಿಗೆ ಹೋರಾಡುವ ಸಂದರ್ಭ ಬರಲಿಲ್ಲ. ರಾಮಚಂದ್ರನ ವನವಾಸದಲ್ಲಿ ಹಾಗು ತನ್ನಂತರ ಸೀತೆಯನ್ನು ಹುಡುಕುತ್ತ ಅಲೆಯುವಾಗ, ಗೊಂಡರ ಜೊತೆಗೆ ರಾಮಚಂದ್ರನ ಗೆಳೆತನವಾಯಿತು. ಶಬರ(=ಭಿಲ್ಲ) ಜನಾಂಗದವರಂತೂ ರಾಮಚಂದ್ರನನ್ನು ಆರಾಧಿಸತೊಡಗಿದರು.

ಗೊಂಡಾರಣ್ಯವನ್ನು ದಾಟಿದ ರಾಮಚಂದ್ರನಿಗೆ ಸಿಕ್ಕವರು ಕಿಷ್ಕಿಂಧೆಯ ವಾನರರು. ಇವರು ಬಹುಶಃ ಕೃತಕ ಬಾಲವನ್ನು ತಮ್ಮ ಅನುಕೂಲಕ್ಕಾಗಿ ಉಪಯೋಗಿಸುತ್ತಿದ್ದರೆ? ವಾಲಿ ಎನ್ನುವ ಹೆಸರಿನ ಅರ್ಥ ವಾಲ (= ಬಾಲ) ಉಳ್ಳವನು ಎಂದು. ಈ ವಾನರರೂ ಸಹ ಕೇವಲ (ಕಟ್ಟಿಗೆಯ) ಗದಾಧಾರಿಗಳು. ಇವರಲ್ಲಿ (ಕಬ್ಬಿಣದ) ಖಡ್ಗ ಸಹ ಇರಲಿಲ್ಲ. ಹೀಗಾಗಿ ಬಿಲ್ಲು-ಬಾಣ ಉಳ್ಳ ರಾಮಚಂದ್ರನ ಜೊತೆಗೆ ಸುಗ್ರೀವನು ಸಖ್ಯ ಸಾಧಿಸಿ, ದಾಯಾದಿ ವಾಲಿಯನ್ನು ಕೊಲ್ಲಿಸಿದನು.

ಈ ಪ್ರದೇಶದಲ್ಲಿ ವಾಸಿಸುತ್ತಿದ್ದ ಇತರ ಆದಿವಾಸಿಗಳೆಂದರೆ ಜಾಂಬವರು. ಕರಡಿಯನ್ನು ಪ್ರಾಣಿ-ಲಾಂಛನ (=totem)ವಾಗುಳ್ಳ ಸಮುದಾಯದವರು. ಕರ್ನಾಟಕದಲ್ಲಿ ಆದಿಜಾಂಬವ ಸಮುದಾಯವು ಇನ್ನೂ ಇದೆ.

ರಾವಣನ ಹೆಂಡತಿ ಮಂಡೋದರಿ ‘ಮಂಡ’ ಕುಲದವಳು. ಕರ್ನಾಟಕದಲ್ಲಿ ‘ಮಂಡ’ ಹಾಗು ‘ಮಂಟ’ ಪದದಿಂದ ಪ್ರಾರಂಭವಾಗುವ ೫೮ ಗ್ರಾಮಗಳಿವೆ. ಉದಾಹರಣೆಗಳು: ಮಂಟೂರು, ಮಂಟ್ಯ, ಮಂಡರವಳ್ಳಿ, ಮಂಡ್ಯ, ಮಂಡ್ಯಾಲ ಇತ್ಯಾದಿ. ಕರ್ನಾಟಕದ ಹೊರಗೆ ಮಹಾರಾಷ್ಟ್ರದಲ್ಲಿ ಮಾಂಡವಿ ಎನ್ನುವ ಊರಿದೆ. ಗೋವಾದಲ್ಲಿ ಹರಿಯುವ ಮಾಂಡವಿ ನದಿಯು ಮಂಡ ಮುನಿಯ ಮಗಳೆಂದು ಹೇಳಲಾಗುತ್ತದೆ. ದಮನದಲ್ಲಿಯೂ ಸಹ ಮಾಂಡವಿ ಎನ್ನುವ ನದಿಯಿದೆ. ಭಾರತದ ಹೊರಗಿದ್ದ ಪ್ರಸಿದ್ಧ ಸ್ಥಳವೆಂದರೆ, ಮೈನ್ಮಾರದಲ್ಲಿದ್ದ ‘ಮಂಡಾಲೆ.’ ಬ್ರಿಟಿಶ್ ಸರಕಾರವು ಮಂಡಾಲೆಯ ಸೆರೆಮನೆಯಲ್ಲಿ ಲೋಕಮಾನ್ಯ ತಿಲಕರನ್ನು ೬ವರ್ಷಗಳ ಕಾಲ ಇಟ್ಟಿದ್ದಿತು. ಮಂಡಾಲೆ ಎಂದರೆ ಮಂಡಹಾಳ , ಅರ್ಥಾತ್ ಮಂಡ ಸಮುದಾಯ ವಾಸಿಸುವ ಗ್ರಾಮ. ಭಾರತೀಯರು ಬ್ರಹ್ಮದೇಶವೆಂದು ಕರೆಯುತ್ತಿದ್ದ ಮೈನ್ಮಾರದ ಪಶ್ಚಿಮ ಭಾಗದಲ್ಲಿ ಮಂಡ ಸಮುದಾಯವು ಇದ್ದಿರಬೇಕು. ಆರ್ಯರ ಆಕ್ರಮಣದ ಕಾಲದಲ್ಲಿ, ಅಲ್ಲಿಂದ ದಕ್ಷಿಣಕ್ಕೆ ಓಡಿರಬಹುದು.

‘ಲಕ್’ ಈ ದ್ರಾವಿಡ ಪದದ ಅರ್ಥವೇ ದ್ವೀಪ. (ಉದಾಹರಣೆಗೆ ಲಖದೀವ ಎನ್ನುವದು ಲಕ್ ಎನ್ನುವ ದ್ರಾವಿಡ ಪದ ಹಾಗು ದ್ವೀಪ ಎನ್ನುವ ಸಂಸ್ಕೃತ ಪದದ ಕೂಡುಪದ. ಅದೀಗ ಲಕ್ಷದ್ವೀಪ ಎಂದು ನಾಮಕರಣಗೊಂಡಿದೆ.) ಕೆಲವೊಂದು ಸಂಶೋಧಕರು ರಾವಣನು ಇದ್ದದ್ದು ಲಂಕಾದಲ್ಲಿ ಅಲ್ಲ--(ಲಂಕಾ=ಲಕ್=ದ್ವೀಪ); ಆದರೆ ಗೋದಾವರಿ ನದಿಯಲ್ಲಿರುವ ದ್ವೀಪವೊಂದರಲ್ಲಿ ಎಂದು ಹೇಳುತ್ತಾರೆ. ಆದರೆ ರಾಮನು ಕಿಷ್ಕಿಂಧೆಯನ್ನು ಪ್ರವೇಶಿಸಿದ್ದು ಹಾಗು ರಾಮಸೇತುವಿನ ಮೂಲಕ ಸಮುದ್ರವನ್ನು ದಾಟಿದ್ದು, ಇವುಗಳನ್ನು ಪರಿಗಣಿಸಿದರೆ ರಾವಣನ ಲಂಕೆ ಈಗಿನ ಶ್ರೀಲಂಕೆಯೇ ಎಂದು ಭಾಸವಾಗುತ್ತದೆ.

11 comments:

ಸುಪ್ತದೀಪ್ತಿ suptadeepti said...

ಸುನಾಥ್ ಕಾಕಾ, ಧನ್ಯವಾದಗಳು.

ಎಷ್ಟೊಂದು ವಿಷಯದ ಒಟ್ಟಣೆ ಮಾಡಿದ್ದೀರಿ, ಅವನ್ನೆಲ್ಲ ಅಂದವಾಗಿ ಪೋಣಿಸಿ ಕೊಟ್ಟಿದ್ದೀರಿ. ಮತ್ತೆ ಧನ್ಯವಾದಗಳು.

sunaath said...

Thanks, ಜ್ಯೋತಿ.
-ಸುನಾಥ ಕಾಕಾ

ಅಮರ said...

sunathare,
nimagondistu video links kalisiruve noodi .....

http://www.youtube.com/watch?v=by4svWHy6tw&feature=related

http://www.youtube.com/watch?v=rY4Q2xx7BTc

http://www.youtube.com/watch?v=G2vhCPBjqcA&feature=related

http://www.youtube.com/watch?v=FMlisMg4VPo&feature=related

http://www.youtube.com/watch?v=xo4b8EiY9Vk&feature=related

Anonymous said...

Registration- Seminar on the ocassion of KSC's 8th year Celebration

On the occasion of 8th year celebration of Kannada saahithya.com we are arranging one day seminar at Christ college.

As seats are limited interested participants are requested to register at below link.

Please note Registration is compulsory to attend the seminar.

If time permits informal bloggers meet will be held at the same venue after the seminar.

For further details and registration click on below link.

http://saadhaara.com/events/index/english

http://saadhaara.com/events/index/kannada


Please do come and forward the same to your like minded friends

sunaath said...

ಅಮರ,
ವಿಡಿಯೊ ಲಿಂಕ್‌ಗಾಗಿ ತುಂಬಾ ಧನ್ಯವಾದಗಳು. ಮುಳುಗಿ ಹೋದ ದ್ವಾರಕಾದ ಬಗೆಗೆ ತಿಳಿದು ದುಃಖವಾಯಿತು. By the way,ಒಂದು historical comparison. ಶ್ರೀಕೃಷ್ಣನು ಇದ್ದದ್ದು ಸುಮಾರು ೩೨೦೦ ಬಿ.ಸಿ.ಯಲ್ಲಿ. ಮಥುರೆಯಿಂದ ದ್ವಾರಕೆಗೆ ಸುಮಾರು ೨೦೦೦ ಕಿ.ಮಿ. ಗಳಷ್ಟಾಗಬಹುದೇನೊ? ಇಷ್ಟು ದೂರದವರೆಗೆ ಆತ ತನ್ನ ಅನುಯಾಯಿಗಳನ್ನು ಕರೆದುಕೊಂಡು ಬಂದ--ಅತ್ಯಾಚಾರಿ ಸರ್ವಾಧಿಕಾರಿಗಳಿಂದ ರಕ್ಷಿಸಿ, ಹೊಸ ಬಾಳು ಕೊಡಲು.
ಮೋಶೆ ಇದ್ದುದು ಸುಮಾರು ೧೫೦೦ ಬಿ.ಸಿ.ಯಲ್ಲಿ. ಆತನೂ ಸಹ ಈಜಿಪ್ತದ ಸರ್ವಾಧಿಕಾರಿಗಳಿಂದ ತಪ್ಪಿಸಿಕೊಳ್ಳಲು,ಜ್ಯೂ ಜನರನ್ನು ಸುಮಾರು ಅಷ್ಟೇ ದೂರದ ಇಸ್ರೇಲಿಗೆ ಕರೆದುಕೊಂಡು ಹೋದ.
ಇವೆರಡಕ್ಕೂ longest human escape ಅನ್ನಬಹುದೆ?

sunaath said...

anonymus,
thanx.

ತೇಜಸ್ವಿನಿ ಹೆಗಡೆ said...

ಸುನಾಥರೆ,

ತುಂಬಾ ವಿಷಯಗಳ ಪರಿಚಯವಾಯಿತು ನಿಮ್ಮ ಲೇಖನದಿಂದ..ಧನ್ಯವಾದಗಳು. ಬರೆಯುತ್ತಿರಿ.

Anonymous said...

ಅಸ್ತ್ರ ಮತ್ತು ಶಸ್ತ್ರಗಳ ಭಿನ್ನತೆ ಗೊತ್ತಾಯಿತು. ಇನ್ನುಳಿದಂತೆಯೂ ಹೊಸ ಮಾಹಿತಿ ದೊರೆಯಿತು. ಉಪಯುಕ್ತ ಲೇಖನ.
--Sanket

sunaath said...

ತೇಜಸ್ವಿನಿ, ಸಂಕೇತ,
ಇಗೊ ನಿಮ್ಮ ಸೇವೆಯಲ್ಲಿ!

Anonymous said...

ನಾವು ಗೊಂಡ (ಲಳಾ ಗೊಂಡರು) ಆದರೆ ಗೊಂಡ ಪದದ ಅರ್ಥ ಗೊತ್ತಿರಲಿಲ್ಲ ಇದರಲ್ಲಿ ಸವಿಸ್ತಾರ ವಾಗಿ ತಿಳಿಸಿದ್ದೀರಿ ತುಂಬಾ ಧನ್ಯವಾದಗಳು

sunaath said...

ಧನ್ಯವಾದಗಳು, Anonymus!