Monday, March 14, 2011

ಕರ್ಣಪಿಶಾಚಿಯ ಸಂದರ್ಶನಗಳು...೧

ಅನೇಕ ದಿನಗಳಿಂದ ನಮ್ಮ ಪ್ರಿಯ ಮಿತ್ರರಾದ ಅಸತ್ಯಾನ್ವೇಷಿಗಳ ಮುಖವನ್ನೇ ನಾವು ಕಂಡಿಲ್ಲ ; ಅವರ ‘ಬೊಗಳೆ ರಗಳೆ’ಯನ್ನು  ಓದಿಲ್ಲ.  ಅಸತ್ಯಾನ್ವೇಷಿಗಳ ಕಟ್ಟಾ ಅಭಿಮಾನಿ ಹಾಗು ‘ಬೊಗಳೆ ರಗಳೆ’ ಪತ್ರಿಕೆಯ ನಿಯತ ಓದುಗನಾದ ನಮ್ಮ ಕರ್ಣಪಿಶಾಚಿಗೆ ಭಯಂಕರ ಚಡಪಡಿಕೆಯಾಗತೊಡಗಿತು. ‘ಎಲ್ಲಿ ಹೋದರು ನಮ್ಮ ಭೋ-ಜನಪ್ರಿಯ ಸೊಂಪಾದಕರು?’ ಎಂದು ಚಡಪಡಿಸುತ್ತ  ಕರ್ಣಪಿಶಾಚಿ ಎಲ್ಲಾ ಕಡೆಗೂ ಹುಡುಕಾಡಲಾರಂಭಿಸಿತು. ಕೊನೆಗೊಮ್ಮೆ ಅವರು ಸಿಕ್ಕೇ ಬಿಟ್ಟರು..........ಹರಿಶ್ಚಂದ್ರ ಘಾಟಿನಲ್ಲಿ ಗುದ್ದಲಿ ಹಿಡಿದುಕೊಂಡು ಗೋರಿಗಳನ್ನು ಅಗೆಯುತ್ತಿದ್ದರು. ಅವರ ನಡುವೆ ನಡೆದ ಸಂಭಾಷಣೆ ಹೀಗಿದೆ:

ಕ.ಪಿ: ಅಲೋ ಸೊಂಪಾದಕರೆ, ಏನು ಹುಡುಕುತ್ತಿದ್ದೀರಿ?
ಅಸತ್ಯಾನ್ವೇಷಿ: ನನಗೆ ತುಂಬ ಪ್ರಿಯವಾದ ಅಸತ್ಯವನ್ನು. ಅದನ್ನ ಇಲ್ಲೆಲ್ಲೊ ಹೂತು ಹಾಕಿದ್ದಾರೆ.
ಕ.ಪಿ: ಅದು ಹೇಗೆ?
ಅನ್ವೇಷಿ: ಈಗ ಎಲ್ಲೆಲ್ಲೂ ಸತ್ಯದ ತಾಂಡವ ನೃತ್ಯ ನಡೆದಿದೆ. ಹಸ್ತಿನಾಪುರವನ್ನು ಮಮೋ ಸಿಂಗ ಎಂಬ ಧರ್ಮರಾಜರು ಆಳುತ್ತಿದ್ದಾರೆ. ಭಾರತದೇಶದಿಂದ ಲಂಚವನ್ನು ನಿರ್ಮೂಲ ಮಾಡಿ, ಸ್ವಿಸ್ ಬ್ಯಾಂಕುಗಳಿಗೆ ಕಳಿಸಲು ಪಣ ತೊಟ್ಟಿದ್ದಾರೆ!
ಕ.ಪಿ: ಹೋಗಲಿ ಬಿಡಿ? ಕರ್ನಾಟಕದಲ್ಲಾದರೂ ನಿಮಗೆ ಅಸತ್ಯ ಸಿಗಬಹುದಲ್ಲ?
ಅ..ಷಿ: ಹೋಗೋ ದಡ್ಡ ನನ ಮಗನೆ! ಇದು ಕೊಡುಗೈ ದೊರೆ ಚಡ್ಯೂರಪ್ಪನವರ ರಾಜ್ಯ. ಕರ್ನಾಟಕದಲ್ಲಿರುವ ಹತ್ತುಸಾವಿರ ಮಠಗಳಿಗೆ, ಪ್ರತಿ ಮಠಕ್ಕೆ ನೂರು ಕೋಟಿ ರೂಪಾಯಿಗಳಂತೆ ದಾನ ಕೊಟ್ಟಿದ್ದಾರೆ! ಇಂಥಾ ದೊರೆ ಇರೋ ನಾಡಿನಲ್ಲಿ ಅಸತ್ಯ ಎಲ್ಲಿ ಸಿಕ್ಕೀತು? ಭಾರತವರ್ಷದಲ್ಲಿ ಇದೀಗ ಸತ್ಯಯುಗ ಪ್ರಾರಂಭವಾಗಿದೆ.

ಭಯಂಕರ ನಿರಾಶೆಯಲ್ಲಿ ಮುಳುಗಿದ ಕರ್ಣಪಿಶಾಚಿಯು ಅಸತ್ಯಾನ್ವೇಷಿಗಳ ಕಾಯಕಕ್ಕೆ ಶುಭ ಕೋರಿ, ಬೆಂಗಳೂರಿನತ್ತ ಹಾರತೊಡಗಿತು. ಆಗ ಅದು ಕಂಡದ್ದೇನು? ನೈಸ್ ರಸ್ತೆಯ ನಟ್ಟನಡುವೆ ಧಡೂತಿ ಆಸಾಮಿಯೊಂದು ಹಸಿರು ಶಲ್ಲೆ ಹೊತ್ತುಕೊಂಡು ಮಲಗಿದೆ. ಹತ್ತಿರ ಹೋಗಿ ನೋಡಿದಾಗ,....... ಅಹೋ ಇವರು ನಮ್ಮ ವೇದೇಗೌಡರು!

ಕ.ಪಿ: ನಮಸ್ಕಾರ ಗೌಡರೆ! ಖೇಣಿ ವಿರುದ್ಧ ಧರಣಿ ಮಾಡುತ್ತಿದ್ದೀರಾ?
ಗೌಡರು: ಇಲ್ಲಪ್ಪಾ, ಸುಮ್ನೆ ನಿದ್ದೆ ಮಾಡ್ತಾ ಇದ್ದೆ! ವಿಧಾನಸಭೆಯಲ್ಲಿ, ಲೋಕಸಭೆಯಲ್ಲಿ ನಿದ್ದೆ ಮಾಡಿ ಅಭ್ಯಾಸ ಆಗಿಬಿಟ್ಟಿದೆ, ಕಣಪ್ಪಾ!
ಗೌಡರು ನಿಜವನ್ನೇ ನುಡಿಯುತ್ತಿದ್ದಾರೆ! ಕರ್ಣಪಿಶಾಚಿಗೆ ಸಿಡಿಲು ಬಡಿದ ಅನುಭವವಾಯ್ತು. ಆದರೂ ಚೇತರಿಸಿಕೊಂಡ ಕರ್ಣಪಿಶಾಚಿ ಮತ್ತೊಂದು ಪ್ರಶ್ನೆ ಎಸೆಯಿತು.

ಕ.ಪಿ: ಗೌಡರೆ, ನೀವು ಮುಂದಿನ ಜನ್ಮದಲ್ಲಿ ಮುಸ್ಲಿಮನಾಗಿ ಹುಟ್ಟುತ್ತೇನೆ ಎಂದು ಘೋಷಿಸಿದ್ದು ಯಾಕೆ? ಇದು ಮತ ರಾಜಕಾರಣದ ಸುಳ್ಳು ಘೋಷಣೆಯೆ?
ಗೌಡರು: ಖಂಡಿತವಾಗಿಯೂ ಅಲ್ಲ. ‘ಇಬ್ಬರು ಹೆಂಡಿರ ಮುದ್ದಿನ ಗೌಡನಾಗಿ’ ಮೆರೆಯೋ ಆಸೆ ನನಗೆ. ಆದರೆ ನಮ್ಮ ಗೊಡ್ಡು ಹಿಂದೂ ಕಾನೂನಿನಲ್ಲಿ ಅದಕ್ಕೆ ಅವಕಾಶವಿಲ್ಲ. ಮುಂದಿನ ಜನ್ಮದಲ್ಲಾದರೂ ಆ ಆಸೇನ ಪೂರೈಸಿಕೊಳ್ಳೋಣ ಅಂತ!

ಗೌಡರ ಬಾಯಿಂದ ಮತ್ತೊಂದು ಸತ್ಯವಾಕ್ಯ! ಕರ್ಣಪಿಶಾಚಿಯ ಜಂಘಾಬಲವೇ ಉಡುಗಿ ಹೋಯಿತು. ಆದರೂ ಹಠ ಬಿಡದ ಬೇತಾಳನಂತೆ ಮತ್ತೊಂದು ಪ್ರಶ್ನೆ ಎಸೆಯಿತು.
ಕ.ಪಿ: ಮುಂದಿನ ಜನ್ಮದಲ್ಲಿ ಕರ್ನಾಟಕದಲ್ಲಿ  ಹುಟ್ಟೋದಿಲ್ಲ ಅಂತ ನೀವು ಹೇಳಿದ್ದೀರಂತೆ?
ಗೌಡರು: ಇಲ್ಲೇನು ಉಳಿದಿದೆ ಮಣ್ಣು? ಡಿನೋಟಿಫಿಕೇಶನ್ನು ಮಾಡಿ ಎಲ್ಲಾ ಮಣ್ಣನ್ನೂ ತಾನೇ ತಿಂದಿದ್ದಾನಲ್ಲ ಚಡ್ಯೂರಿ! ಅದಕ್ಕೆ ಗುಜರಾತ ರಾಜ್ಯದಲ್ಲಿ ಹುಟ್ಟಿ ಅಲ್ಲಿಯ ಮಣ್ಣನ್ನು ಮುಕ್ಕುವ ಆಸೆ ಇದೆ ನನಗೆ! ಇನ್ನು ನೀನು ಹೋಗಪ್ಪ. ನಾನೀಗ ನಿದ್ದೆ ಮಾಡಬೇಕು. ಸತ್ಯಮೇವ ಜಯತೇ! ಜೈಹಿಂದ!

ಕರ್ಣಪಿಶಾಚಿಗೆ ಆಘಾತದ ಮೇಲೆ ಆಘಾತ! ಭಾರತದ ರಾಜಕಾರಣಿಗಳು ಸತ್ಯ ಹರಿಶ್ಚಂದ್ರರಾಗಿ ಬಿಟ್ಟಿದ್ದಾರಲ್ಲ. ಇನ್ನು ಸುಳ್ಳಿಗೆಲ್ಲಿಯ ನೆಲೆ? ಕರ್ಣಪಿಶಾಚಿಯ ಮನದಲ್ಲಿ ಮಿಂಚು ಹೊಡೆದಂತಾಯಿತು. ನಮ್ಮ ಸಾಹಿತಿಗಳು! ಸುಳ್ಳಿಗೂ ಸಾಹಿತಿಗಳಿಗೂ ಬಿಡದ ನಂಟು. ಅವರನ್ನೇ ಹಿಡಿಯೋಣ ಎಂದುಕೊಂಡ ಕರ್ಣಪಿಶಾಚಿ ಸೀದಾ ವಿಶ್ವಕನ್ನಡ ಸಮ್ಮೇಳನದತ್ತ ಹಾರಿತು. ಮೊದಲು ಕಾಣಿಸಿದ್ದು ಧಾರವಾಡ.

ಧಾರವಾಡದಲ್ಲಿ ಕರ್ಣಪಿಶಾಚಿಗೆ ಮೊದಲು ಸಿಕ್ಕವರೇ ಗುರಡ್ಡಿ ಗೋವಿಂದರಾಜರು.
ಕ.ಪಿ: ನಮಸ್ಕಾರ ಗುರಡ್ಡಿಯವರೆ! ಕನ್ನಡಕ್ಕೆ ಇಂಗ್ಲೀಶಿನಿಂದ ಅಪಾಯವಿದೆಯೆ, ಹೇಳಿ.
ಗುರಡ್ಡಿ: ಕನ್ನಡಕ್ಕೆ ಇಂಗ್ಲೀಶಿನಿಂದ ಏನೇನೂ ಅಪಾಯವಿಲ್ಲ. ಆದರೆ ಇಂಗ್ಲೀಶಿಗೆ ಮಾತ್ರ ಕನ್ನಡದಿಂದ, ಕನ್ನಡಿಗರಿಂದ ಸಾಕಷ್ಟು ಅಪಾಯವಿದೆ.
ಕ.ಪಿ: ಅದು ಹೇಗೆ?
ಗುರಡ್ಡಿ: ಕನ್ನಡ ಬಾಲಕರೆಲ್ಲ ನರ್ಸರಿಯಿಂದಲೇ ಇಂಗ್ಲೀಶಿನಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಅರ್ಥಾತ್ ಇಂಗ್ಲೀಶೇ ಇದೀಗ ಕನ್ನಡಿಗರ ಮಾತೃಭಾಷೆಯಾಗಿದೆ. ಕನ್ನಡಿಗರು ತಮ್ಮ ಮಾತೃಭಾಷೆಯನ್ನು ಬಜ್ಜಿ ಮಾಡುವದರಲ್ಲಿ ನಿಪುಣರು. ಅಂದ ಮೇಲೆ ಇಂಗ್ಲೀಶಿನ ಗತಿ ಏನಾಗಬೇಡ?
ಕ.ಪಿ: ಉದಾಹರಣೆ ಕೊಡುತ್ತೀರಾ?
ಗುರಡ್ಡಿ: ಇಂಗ್ಲೀಶ ಮಂದಿ ‘ಬಿಜಿ’ ಅನ್ನೋದನ್ನ ಕನ್ನಡಿಗರು ‘ಬ್ಯುಜಿ’ ಎನ್ನುತ್ತಾರೆ. ಅವರು ‘ಸsರ್’ ಅನ್ನೋದನ್ನ ಇವರು ‘ಸಾsರ್’ ಅಂತಾರೆ. ಉದಾಹರಣೆ ಸಾಕೊ, ಇನ್ನೂ ಬೇಕೊ?

ಕರ್ಣಪಿಶಾಚಿಗೆ ಅಚ್ಚರಿಯೋ ಅಚ್ಚರಿ! ಗುರಡ್ಡಿಯವರು ಖ್ಯಾತ ವಿಮರ್ಶಕರಾದರೂ ಸಹ ಸತ್ಯವನ್ನೇ ಮಾತನಾಡುತ್ತಿದ್ದಾರಲ್ಲ! ತಟ್ಟನೆ ಕರ್ಣಪಿಶಾಚಿಗೆ ಗುರಡ್ಡಿಯವರ ‘ಹಿಡಿಯದ ಹಾದಿ’ ಪ್ರಬಂಧಸಂಕಲನದ ನೆನಪಾಯಿತು.
ಕ.ಪಿ: ಗುರಡ್ಡಿಯವರೆ, ‘ಧಾರವಾಡದಲ್ಲಿ ಎಲ್ಲಿ ನಿಂತು ಕಲ್ಲು ಬೀಸಿದರೂ, ಅದು ಒಬ್ಬ ಕವಿಯ ಮನೆಯ ಮೇಲೆ ಬೀಳುತ್ತದೆ’ ಎಂದು ನಿಮ್ಮ ಸಂಕಲನದಲ್ಲಿ ಬರೆದಿದ್ದೀರಿ. ಇದು ಸುಳ್ಳಲ್ಲವೆ?
ಗುರಡ್ಡಿ; ಇದು ಅಪ್ಪಟ ಸತ್ಯ! ಧಾರವಾಡದ ಮಂದಿಗೆ ಕಲ್ಲು ಒಗೆಯೋ ಚಟವಿದೆ. ಕಾಶ್ಮೀರದ ಉಗ್ರವಾದಿಗಳಿಗೆ ಕಲ್ಲು ಒಗೆಯಲು ಕಲಿಸಿದವರೇ ಧಾರವಾಡದವರು. ಧಾರವಾಡಿಗಳ ಈ ಹುಚ್ಚನ್ನು ನೋಡಿಯೇ ಇಲ್ಲಿ ಹುಚ್ಚಾಸ್ಪತ್ರೆ ಕಟ್ಟಿಸಿದ್ದಾರೆ.
ಕ.ಪಿ: ಈ ಕಲ್ಲೆಸೆಯುವ ಕಾಯಕದ  ಗುರು ಯಾರೆಂದು ಹೇಳುತ್ತೀರಾ?
ಗುರಡ್ಡಿ: ಮತ್ಯಾರು? ಹುಚ್ಚಾಸ್ಪತ್ರೆಯ ಪಕ್ಕದಲ್ಲೇ ಮನೆ ಮಾಡಿಕೊಂಡು ಇದ್ದರಲ್ಲ ಚಂಪಾ! ಕನ್ನಡಕ್ಕೆ ಅವರಿಂದಲೇ ಅಪಾಯವಿದೆ. ಅವರನ್ನು ಕರ್ನಾಟಕದಿಂದ ಗಡೀಪಾರು ಮಾಡಿದರೆ ಮಾತ್ರ ಪಾಟೀಲ ಪುಟ್ಟಪ್ಪ, ಪಟ್ಟಣಶೆಟ್ಟಿ  ಹಾಗು ನಾನು ಇಲ್ಲಿ ನೆಮ್ಮದಿಯಿಂದ ಬದುಕಬಹುದು!

ಕರ್ಣಪಿಶಾಚಿಗೆ ಭಯಂಕರ ನಿರಾಸೆಯಾಯಿತು. ವಿಮರ್ಶಕರೂ ಸಹ ಸತ್ಯವನ್ನೇ ಹೇಳುತ್ತಿದ್ದಾರಲ್ಲ! ಇನ್ನು ಸುಳ್ಳಿಗೆ ಎಲ್ಲಿಯ ನೆಲೆ, ಎಲ್ಲಿಯ ಬೆಲೆ ಎನ್ನುತ್ತಿರುವಾಗ ಅದಕ್ಕೆ ಕರ್ನಾಟಕ ವಿಶ್ವವಿದ್ಯಾಲಯದ ಗೋಪುರ ಕಣ್ಣಿಗೆ ಬಿದ್ದಿತು. ವಿಶ್ವವಿದ್ಯಾಲಯಗಳು ಸುಳ್ಳಿನ ಭಂಡಾರಗಳು ಎಂದು ಗೆಲುವಾದ ಕರ್ಣಪಿಶಾಚಿಯು ಆ ದಿಕ್ಕಿನತ್ತ ಮುನ್ನಡೆಯಿತು. ಅಲ್ಲಿ ಮೊದಲು ಕಂಡವರೇ ಖ್ಯಾತ ಪ್ರಾಚ್ಯಸಂಶೋಧಕ ಕಲಬುರ್ಗಿಯವರು.

ಕರ್ಣಪಿಶಾಚಿ: ನಮಸ್ಕಾರ, ಕಲಬುರ್ಗಿಯವರೆ! ನೀವು ಇತಿಹಾಸ ಸಂಶೋಧಕರು. ಅಂದ ಮೇಲೆ ನೀವು ಸಾಕಷ್ಟು ಸುಳ್ಳನ್ನು ಹುಡುಕಿ ತೆಗೆದಿರಬಹುದು, ಅಲ್ಲವೆ?
ಕಲಬುರ್ಗಿ: ಛೇ! ಛೇ! ನಾನು ಯಾವಾಗಲೂ ಸತ್ಯವನ್ನು ಮಾತ್ರ ಹುಡುಕುತ್ತೇನೆ. ಉದಾಹರಣೆಗೆ ಇತ್ತೀಚೆಗೆ ಅಣ್ಣೀಗೇರಿಯಲ್ಲಿ ಹಡ್ಡಿ ತೆಗೆದ ತಲೆಬುರುಡೆಗಳನ್ನೇ ತೆಗೆದುಕೊಳ್ಳಿರಿ. ಅವೆಲ್ಲ ತಲೆಬುರುಡೆಗಳು  ಸಾಹಿತಿಗಳ ಬುರುಡೆಗಳು ಎನ್ನುವದನ್ನು ನಾನು ಸಂಶೋಧನೆ ಮಾಡಿ ಹೇಳಿದ್ದೇನೆ. ಆದರೆ, ಆ ಚಿದಾನಂದ ಮೂರ್ತಿ ಇದ್ದಾರಲ್ಲ, ಅವರು ಬರಿ ಸುಳ್ಳು ಸಂಶೋಧನೆ ಮಾಡುತ್ತಾರೆ.
ಕ.ಪಿ: ಹೌದಾ? ಅವರೇನು ಹೇಳುತ್ತಿದ್ದಾರೆ?
ಕಲಬುರ್ಗಿ: ಅವು ರಾಜ್ಯಪಾಲರ ಹಾಗು ಅವರ ಸಿಬ್ಬಂದಿಯವರ ಬುರುಡೆಗಳಂತೆ!
ಕ.ಪಿ: ಏನು? ಹಂಸರಾಜ ಭಾರದ್ವಾಜರ ಬುರುಡೆಯೇ?
ಕಲಬುರ್ಗಿ: ಅಲ್ಲಯ್ಯ, ಮೂರ್ಖ ಶಿಖಾಮಣಿ! ಪಂಪನ ಕಾಲದಲ್ಲಿ ಅಣ್ಣೀಗೇರಿಯಲ್ಲಿ ರಾಜ್ಯಪಾಲರಾಗಿದ್ದ ಕಂಸರಾಜರ ಬುರುಡೆ!

ಬುರುಡೆಗಳ DNA ಪರೀಕ್ಷೆ ಆಗದ ಹೊರತು ಕಲಬುರ್ಗಿ ಸುಳ್ಳರೊ, ಚಿ.ಮೂ. ಸುಳ್ಳರೊ ಅಥವಾ ಇಬ್ಬರೂ ಸುಳ್ಳರೊ ಎಂದು ಗೊತ್ತಾಗುವದಿಲ್ಲ. ಇರಲಿ, ಇಲ್ಲಿ ಸ್ವಲ್ಪ ಭರವಸೆಯ ಬೆಳಕಿದೆ ಎಂದುಕೊಂಡ ಕರ್ಣಪಿಶಾಚಿಯು ಬೆಳಗಾವಿಯತ್ತ ಮುಖ ಮಾಡಿ ಹಾರಿತು.

ಬೆಳಗಾವಿಯಲ್ಲಿ ವಿಶ್ವ ಕನ್ನಡ ಸಮ್ಮೇಳನದ ಸಂಭ್ರಮ. ಅಲ್ಲಿ ನಾರಾಯಣ ಮೂರ್ತಿಗಳು ಉದ್ಘಾಟನೆ ಮಾಡುತ್ತಿದ್ದಾರೆ. ಮೂರ್ತಿಗಳು ಉದ್ದಿಮೆದಾರರು. ಸುಳ್ಳು ಹೇಳುವದು ಅವರಿಗೆ ಅವಶ್ಯವಾದ ಒಂದು ಬಿಜಿನೆಸ್ ಕಲೆ. ಇವರನ್ನೇ ಹಿಡಿಯುವೆ ಎಂದುಕೊಂಡ ಕರ್ಣಪಿಶಾಚಿಯು ಮೂರ್ತಿಯವರ ಸಂದರ್ಶನ ಪ್ರಾರಂಭಿಸಿತು.

ಕ.ಪಿ: ಹಲೋ ಮೂರ್ತಿಯವರೆ, ನೀವು ಕನ್ನಡಕ್ಕಿಂತ ಇಂಗ್ಲೀಶಿಗೆ ಹೆಚ್ಚು ಮಹತ್ವ ಕೊಡುತ್ತೀರಿ ಎನ್ನುವ ಆಪಾದನೆ ಇದೆಯಲ್ಲ. ಇದಕ್ಕೆ ಏನು ಹೇಳುತ್ತೀರಿ?
ಮೂರ್ತಿ: ಅದು ಹಾಗಲ್ಲ. ಬೆಂಗಳೂರಿನ ಕನ್ನಡಿಗರು ಕನ್ನಡವನ್ನು ಮಾತನಾಡುವದೇ ಇಂಗ್ಲೀಶಿನಲ್ಲಿ. ಕೆಲವರ ಸ್ಪೀಚಿನಲ್ಲಿ ಕನ್ನಡ ten percent ಇರಬಹುದು, ಕೆಲವರ ಸ್ಪೀಚಿನಲ್ಲಿ five percent  ಇರಬಹುದು. ನಮ್ಮ infosysದ ಕನ್ನಡದಲ್ಲಿ ಕನ್ನಡವು zero percent ಇರ್ತದೆ.
ಕ.ಪಿ: ಎಂತಹ ಕನ್ನಡ ಕಟ್ಟಾಳು ಇದ್ದೀರಿ, ಮೂರ್ತಿಯವರೆ! ನಿಮಗೆ ನನ್ನ Hats off!

ಕರ್ಣಪಿಶಾಚಿಗೆ ಭಯಂಕರ ನಿರಾಶೆ ಆಯಿತು. ಜೋಲು ಮುಖ ಹಾಕಿಕೊಂಡು ಹೊರಬೀಳುತ್ತಿರುವ ಕರ್ಣಪಿಶಾಚಿಯ ಕಣ್ಣಿಗೆ ಬಿದ್ದದ್ದು  ಬಿಳಿ ಬಣ್ಣದ ಹೋತದ ಗಡ್ಡವನ್ನು ಹಚ್ಚಿಕೊಂಡ ಮುಖ. ಓ! ಇವರು ನಮ್ಮ ಅಜ್ಞಾನಮೂರ್ತಿಗಳು! ಕರ್ಣಪಿಶಾಚಿಗೆ ಖುಶಿಯೋ ಖುಶಿ!
‘ಸುಳ್ಳು ನಮ್ಮಲ್ಲಿಲ್ಲವಯ್ಯಾ, ಸುಳ್ಳೇ ನಮ್ಮನಿ ದೇವರು’ ಎಂದು ಹಾಡಿದ ದಾಸರ ಪರಂಪರೆಯವರಲ್ಲವೇ ಇವರು ಎಂದು ಉಬ್ಬಿ ಉಬ್ಬಿ ಬಲೂನಿನಂತಾಯ್ತು ನಮ್ಮ ಕ.ಪಿ.

ಕ.ಪಿ: ನಮಸ್ಕಾರ ಅಜ್ಞಾನಮೂರ್ತಿಗಳೆ! ನೀವು ಗಡ್ಡಬಿಟ್ಟದ್ದು ಯಾಕೆ ಹೇಳ್ತೀರಾ?
ಅ.ಮೂ: ದುಡ್ಡು ಉಳಿಸಲಿಕ್ಕೆ.
ಕ.ಪಿ: ಆದರೆ ಹೋತದ ಗಡ್ಡವು ಬುದ್ಧಿಜೀವಿಗಳ brand mark ಎಂದು ಹೇಳುತ್ತಾರಲ್ಲ.
ಅ.ಮೂ: ಹಾಗೆ ಹೇಳುವವರು ಬುದ್ಧಿ ಇಲ್ಲದ ಜನ. ‘ಜನ ಮರುಳೊ, ಜಾತ್ರೆ ಮರುಳೊ, ಗಡ್ಡಕೆ ಮರುಳೊ ಶಂಕರಲಿಂಗಾ!’ ಎನ್ನುವ ಗಾದೆ ಮಾತು ನೀವು ಕೇಳಿಲ್ಲವೆ?
ಕ.ಪಿ: ಕನ್ನಡಕ್ಕೆ ಯಾವುದರಿಂದ ಅಪಾಯ ಇದೆ ಎನ್ನುವದನ್ನು ಸ್ವಲ್ಪ ವಿವರಿಸ್ತೀರಾ?
ಅ.ಮೂ: ಕನ್ನಡಕ್ಕೆ ಇಂಗ್ಲೀಶಿನಿಂದ ಅಪಾಯವಿದೆ. ಕನ್ನಡದ ಎಲ್ಲಾ ಪದಗಳನ್ನು ಇಂಗ್ಲೀಶಿನವರು ತಮ್ಮ ಡಿಕ್ಶನರಿಯಲ್ಲಿ ಸೇರಿಸಿಕೊಳ್ಳುತ್ತಿದ್ದಾರೆ. ಈಗ ನೋಡಿ, ‘ಬೆಂಗಳೂರು’ ನಮ್ಮ ಕನ್ನಡದ ಪದ ತಾನೆ? ಅದನ್ನು ಈಗ bangalored ಎನ್ನುವ ಇಂಗ್ಲಿಶ್ ಪದವನ್ನಾಗಿ ಬದಲಾಯಿಸಿಕೊಂಡಿದ್ದಾರೆ. ಹೀಗಾದರೆ, ಕನ್ನಡದ ಪದಗಳೆಲ್ಲಾ ಇಂಗ್ಲೀಶಿನಲ್ಲಿ ಸೇರಿ ಹೋಗುವವು.
ಕ.ಪಿ: ಸಂಸ್ಕೃತದಿಂದ ಕನ್ನಡಕ್ಕೆ ಅಪಾಯವಿಲ್ಲವೆ?
ಅ.ಮೂ: ತುಂಬಾ ಅಪಾಯವಿದೆ. ಕನ್ನಡ ಉಳಿದದ್ದೇ ನಮ್ಮ ಹಳ್ಳಿಗಳಲ್ಲಿ. ಆದುದರಿಂದಲೇ ನನ್ನ ಕತೆಗಳನ್ನು ನಾನು ಹಳ್ಳಿಗರಿಗೆ ತಿಳಿಯದಂತಹ ಸಂಕೀರ್ಣ ಸಂಸ್ಕೃತದಲ್ಲಿ ಬರೆಯುತ್ತೇನೆ.
ಕ.ಪಿ: ಅದರಿಂದ ಏನು ಪ್ರಯೋಜನ?
ಅ.ಮೂ: ಬಹಳಷ್ಟು ಪ್ರಯೋಜನವಿದೆ. ಹಳ್ಳಿಗರು ಉಳಿಯುತ್ತಾರೆ, ಹಳ್ಳಿಗಳಲ್ಲಿ ಕನ್ನಡ ಉಳಿಯುತ್ತದೆ. ಹಾಗು ನನ್ನ ಅಜ್ಞಾನಪೀಠ ಪ್ರಶಸ್ತಿ ಉಳಿಯುತ್ತದೆ.
ಕ.ಪಿ: ಅಜ್ಞಾನಮೂರ್ತಿಗಳೇ, ನೀವು ಸತ್ಯವನ್ನೇ ನುಡಿದಿದ್ದರಿಂದ ನನಗೆ ತುಂಬಾ ಬೇಜಾರಾಗಿದೆ. ಸುಳ್ಳು ಹೇಳುವಂಥವರು ನಿಮ್ಮ ಲಿಸ್ಟಿನಲ್ಲಿ ಯಾರಾದರೂ ಇರುವರೆ?
ಅ.ಮೂ: ಸುಳ್ಳು ಹೇಳುವವರು ಈಗ ಸಿಗುವದೇ ಕಷ್ಟ. ಗಿರೀಶ ಕಾರ್ನಾಡ ಹೇಳಿದರೆ ಹೇಳಬಹುದು. ಪ್ರಯತ್ನಿಸಿ ನೋಡಿ. ಸಂಧ್ಯಾಕಾಲದ ಈ ವೇಳೆಯಲ್ಲಿ ಅವರು ನಿಮಗೆ ಸಾರ್ವಜನಿಕ ಮದ್ಯಶಾಲೆಯಲ್ಲಿ ದರ್ಶನ ಕೊಡುವ ಸಾಧ್ಯತೆಗಳಿವೆ. ‘ನಿಶೇದವರ ಮಾತು ಕಿಶೇದಾಗ’ ಎನ್ನುವ ಗಾದೆ ಇದೆ, ನೋಡಿ! ಕುಡಿದಾಗ ಅವರು ಸುಳ್ಳನ್ನೇ ಹೇಳುವ ಚಾನ್ಸ್ ಇದೆ!
ಕರ್ಣಪಿಶಾಚಿಗೆ ಹೋದ ಉಸಿರು ಬಂದಂತಾಯಿತು.

ಕರ್ಣಪಿಶಾಚಿಯು ಕುಣಿಯುತ್ತ ಮದ್ಯಶಾಲೆಯ ಕಡೆಗೆ ಹಾರಿತು. ಅಲ್ಲಿ ಗಲಾಟೆಯೋ ಗಲಾಟೆ.
ಕುಡಿಯುವದು ನಮ್ಮ ಹಕ್ಕು.
ಕುಡಿಯೋಣ ಬಾರಾ, ಕುಡಿಯೋಣ ಬಾ!
ಇತ್ಯಾದಿ ಫಲಕಗಳನ್ನು ಹೊತ್ತಂತಹ, ಜೀನುಧಾರಿ ಗಂಡು,ಹೆಣ್ಣುಗಳ ಮುಂಭಾಗದಲ್ಲಿ ರಾರಾಜಿಸುತ್ತಿದ್ದಾರೆ ಗಿರೀಶ ಕಾರ್ನಾಡರು.

ಕ.ಪಿ: ನಮಸ್ಕಾರ ಕಾರ್ನಾಡರೆ!
ಕಾರ್ನಾಡ: ನಮಸ್ಕಾರ..(ಹಿಕ್!)...ಪಿಶಾಚೀ!
ಕ.ಪಿ: ಕಾರ್ನಾಡರೇ, ಕನ್ನಡ ಯಾರಿಂದ ಉಳಿಯುತ್ತದೆ ಎಂದು ಹೇಳಬಲ್ಲಿರಾ?
ಕಾರ್ನಾಡ: ಬಜರಂಗ ದಳದವರಿಂದ!
ಕ.ಪಿ: ವಿಚಿತ್ರ ಆದರೂ ಸತ್ಯ?
ಕಾರ್ನಾಡ: ಬಜರಂಗ ದಳದವರು ಗಲಾಟೆ ಮಾಡೋದರಿಂದಲೇ..(ಹಿಕ್).. ನನಗೆ ಸ್ಫೂರ್ತಿ ಸಿಗುತ್ತದೆ. ನನ್ನ ನಾಟಕಗಳನ್ನು..(ಹಿಕ್..) ಹಿಂದೀ ಹಾಗು ಇಂಗ್ಲೀಶಿನಲ್ಲಿ ಎಲ್ಲೆಲ್ಲೂ ಆಡಬಹುದು. ಇದರಿಂದಾಗಿ ಕನ್ನಡವು (..ಹಿಕ್..) ಉಳಿಯುತ್ತದೆ!

ಎಂತಹ ಅದ್ಭುತ ತರ್ಕ! ಎಂತಹ ಕಟು ಸತ್ಯ!!
ಕರ್ಣಪಿಶಾಚಿಗೆ ಘೋರ ನಿರಾಶೆಯಾಯಿತು. ತಾನು ಬದುಕಿ ಫಲವಿಲ್ಲ ಎಂದುಕೊಂಡ ಕರ್ಣಪಿಶಾಚಿಯು ಆತ್ಮಹತ್ಯೆಯನ್ನೇ ಮಾಡಿಕೊಳ್ಳೋಣ ಎಂದುಕೊಂಡಿತು. ಊರ ಹೊರಗಿದ್ದ ಆಲದ ಮರವೊಂದನ್ನು ಹುಡುಕಿ ಅಲ್ಲಿಗೆ ಹೋದಾಗ, ಅದಕ್ಕೆ ಕಂಡಿದ್ದೇನು?

(ಮುಂದಿನ ಸಂಚಿಕೆಯಲ್ಲಿ ನೋಡಿರಿ.)

45 comments:

ಚುಕ್ಕಿಚಿತ್ತಾರ said...

ಕಾಕ..
ಬಹು ಸು೦ದರವಾಗಿ ಸತ್ಯವನ್ನೆ ಬರೆದಿದ್ದೀರಿ...!!!!!!

sunaath said...

ವಿಜಯಶ್ರೀ,
ಸುಳ್ಳು ಬರೆಯುವದು ಬಹಳ ಕಷ್ಟವಲ್ಲವೇ, ತಾಯಿ?!

Ashok.V.Shetty, Kodlady said...

ಸುನಾಥ್ ಸರ್,

ಅದ್ಭುತ ಬರಹ, ಎಷ್ಟೊಂದು ವಿಷಯಗಳನ್ನು ಬಹಳ ಸುಂದರವಾಗಿ ವಿವರಿಸಿದ್ದೀರಿ...ಎಲ್ಲವೂ ಸತ್ಯ....ಕಟು ಸತ್ಯ......ಮುಂದಿನ ಭಾಗಕ್ಕಾಗಿ ಕುತೂಹಲ ದಿಂದ ಕಾಯುತಿದ್ದೇನೆ....

Ittigecement said...

ಸುನಾಥ ಸರ್...
ಸೊಗಸಾಗಿದೆ..

ಮುಂದಿನ ಭಾಗಕ್ಕಾಗಿ ಕಾಯುತ್ತಿದ್ದೇವೆ...

sunaath said...

ಅಶೋಕ,
ಸತ್ಯವು ಅದ್ಭುತವಾಗಿಯೇ ಇರುತ್ತದೆ!

sunaath said...

ಪ್ರಕಾಶ,
ಧನ್ಯವಾದಗಳು.

PARAANJAPE K.N. said...

ಕರ್ಣಪಿಶಾಚಿ ಪುರಾಣ ಚೆನ್ನಾಗಿದೆ. ಮು೦ದಿನ ಭಾಗ ಬೇಗ ಬರಲಿ.

ಬಾಲು said...

ಸನ್ಮಾನ್ಯ ಸುನಾಥ ಅವರೇ,

ಅಸತ್ಯ ಹೇಳುವುದು ಬದುಕಿನ ಪರಮೋಚ್ಚ ಗುರಿ ಎನ್ನುವುದು ಕರ್ಣಪಿಶಾಚಿಗೆ ಗೊತ್ತಿಲ್ಲ ವಾದ್ದಾರಿಂದ ನಿರಾಸೆಯು ಅತ್ಯಂತ ಸಹಜವಾದುದು. ಆದರೂ ಕರ್ಣಪಿಶಾಚಿ ಯಾ ಸಂದರ್ಶನ ವನ್ನು ನೀವು ಯಾವುದೇ ರೀತಿಯ ಕತ್ತರಿ ಪ್ರಯೋಗ ಮಾಡದೆ ಪ್ರಕಟಿಸುರುವುದು ಸಂತೋಷದ ವಿಶಾರ. :) :)

ಸಂದರ್ಶನ ಉಳಿದ ಭಾಗ ಆದಷ್ಟು ಬೇಗ (ಕೂಡಲೇ ....) ಬರಲಿ.

ಅನಿಲ್ ಬೇಡಗೆ said...

ಚೌಡುರಪ್ಪ, ವೇದೆಗೌಡ್ರು ಹೇಳಿದ್ದ್ದು ಸತ್ಯ ಅಸತ್ಯವೆ..?
ಗಿರಡ್ಡಿಯವರು, ಕಲಬುರ್ಗಿಯವರು ಮಾತುಗಳ ಒಳಗೊಳಗಿನ ಅರ್ಥ, ಪರ್ಥ, ಅಪಾರ್ಥಗಳೆನು..?
ಅಜ್ಞ್ಯಾನಮೂರ್ತಿಗಳ ಗಡ್ಡದ ಹಿಂದಿನ ರಹಸ್ಯ ಗುಡ್ದವೇನು..?
ಕಾಕ್ಟೇಲ್ ಕಾರ್ನಾಡರ ವೇದವಾಕ್ಯಗಳ ಮಹಿಮೆ ಏನು..?
ನಾಣಪ್ಪಾ ಇಂಗ್ಲೀಸು ಗುಡ್ಡು ಗುಡ್ಡ್ಸು ಟಾಕ್ಸು, ಎಸ್ಸು ಇಂಗ್ಲಿಸ್ಸು ನೋ ನೋ ಕನ್ನಡ ಮಿಡಿಯಮ್ಸು,
ವಾಟ್ಸ್ ಇಟ್ ಮೀನ್ಸು..?

ಕ.ಪಿ. ಮಾಹಾಶಯರಿಗೆ ಆಲದ ಮರದ ಬಗ್ಗೆ ಹೇಳಿದವರ್ಯಾರು, ಆ ಆಲದಮರದ ಹತ್ತಿರ ಏನಿತ್ತು.?
ಅಲ್ಲಾದರೂ ಅವರಿಗೆ ಸುಳ್ಳು ಸಿಗಬಹುದೇ...?

ಆಲದಮರದಿಂದ ನೆಗೆದ ಕ.ಪಿ ಗೆ ಧಾರವಾಡ-ಬೆಳಗಾವ ಹೈ-ವೇ ಯಲ್ಲಿನ ಸ್ಪೀಡ್ ಬ್ರೇಕರ್ ಗಳಿಂದ ಏನಾಯ್ತು..?
ಈ ಎಲ್ಲ ಪ್ರಶ್ನೆಗಳ ಉತ್ತರ ಮುಂದಿನ ಸಂಚಿಕೆಯಲ್ಲಿ..!!

ಗೂಡ್ಸು, ನೈಟ್ಸು.. ಕಾಕ್ಟೇಲ್ ಹೀಕ್ ಹೀಕ್ಸು ಫುಲ್ ಟೈಟ್ಸು..!!

ಹೀಂಗೆ ಉಂಟು...! ಹೆಂಗೆಂಗೋ ಅಂಟಂಟು..!!
*****

ಸುನಾಥ ಕಾಕಾ ನಮಸ್ತೆ.
ನಿಮ್ಮ ಲೇಖನಕ್ಕ ನನ್ನದೊಂದು ಸಣ್ಣ ನಿರೂಪಣೆ :) :)
ನಿಮ್ಮ ಲೇಖನ ಮಸ್ತು ಮಸ್ತು.. :)

sunaath said...

ಬಾಲು,
ಸತ್ಯವನ್ನು ಹುಡುಕಿಕೊಂಡು ಹೋದವರು ಕರ್ಣಪಿಶಾಚಿ ತರಹಾ ಆಗ್ತಾರೆ!

sunaath said...

ಪರಾಂಜಪೆಯವರೆ,
ನಾನೂ ಸಹ ಕರ್ಣಪಿಶಾಚಿಯ ಹಾದಿಯನ್ನು ಕಾಯುತ್ತಿದ್ದೇನೆ!

sunaath said...

ಅಯ್ಯೊ A-NIL,
ಕರ್ಣಪಿಶಾಚಿಯ ಗುಟ್ಟೆಲ್ಲ ನಿಮಗೆ ಗೊತ್ತಿರುವ ಹಾಗಿದೆ!

ಮನಮುಕ್ತಾ said...

ತು೦ಬಾ ಚೆನ್ನಾಗಿ ಬರೆದಿದ್ದೀರಿ.. ಕಾಕಾ.
ಮು೦ದಿನ ಭಾಗಕ್ಕಾಗಿ ಕುತೂಹಲದಿ೦ದ ಎದುರು ನೊಡುತ್ತಿದ್ದೇನೆ.

sunaath said...

ಮನಮುಕ್ತಾ,
ಧನ್ಯವಾದಗಳು. ನಾನೂ ಸಹ ಮುಂದಿನ ಭಾಗಕ್ಕಾಗಿ ಎದುರು ನೋಡುತ್ತಿದ್ದೇನೆ.

AntharangadaMaathugalu said...

ಕಾಕಾ

ಕರ್ಣ ಪಿಶಾಚಿಯ ಮುಂದಿನ ಭಾಗ ಬೇಗ ಬರುವುದೆಂದ ಕಾಯುತ್ತಿದ್ದೇನೆ.. :-)

ಶ್ಯಾಮಲ

Subrahmanya said...

ಹೆಹೆ...ಅಂತೂ ಟ್ರಾಕಿಗೆ ಬಂದ್ರಿ ಅನ್ನಿ !. ನೀವು ವಿನೋದದ ಆರಾಧಕರೆಂದು ಕೆಳ್ಪಟ್ಟಿದ್ದಷ್ಟೆ ಲಾಭ ಎಂದುಕೊಂಡಿದ್ದ ನನಗೆ ನಿಮ್ಮ ಹಾಸ್ಯ ರಸಾಯನದ ಮೂಲಕ ನಕ್ಕು ನಲಿಯುವಂತೆ ಮಾಡಿದಿರಿ.

ಕರ್ಣಪಿಶಾಚಿಯಿಂದ ಗಿರೀಶಕಾರ್ನಾಡರ ಸಂದರ್ಶನವು ಅಮೋಘವಾಗಿ ಮೂಡಿ ಬಂದಿದೆ..ಮದ್ಯೆ-ಮದ್ಯೆ ’ಹಿಕ್’ ನ ಸ್ಪೆಷಲ್ ಎಫೆಕ್ಟ್ ಕೂಡ ಸೂಪರ್ !.

ಮನದಾಳದಿಂದ............ said...

ಸುನಾಥ್ ಜಿ.........
ನಮ್ಮ ಹೊಟ್ಟೆ ಹುಣ್ಣಾಗಿಸುವ ಬಯಕೆಯೆ???


ಹ್ಹ ಹ್ಹ ಹ್ಹಾ........


ತುಂಬಾ ಚನ್ನಾಗಿದೆ.......

shivu.k said...

ಸುನಾಥ್ ಸರ್,
ಹೊಸ ಪ್ರಯೋಗವನ್ನು ತುಂಬಾ ಚೆನ್ನಾಗಿ ಮಾಡಿದ್ದೀರಿ. ಎಷ್ಟೋ ಅಸತ್ಯಗಳು ಸತ್ಯಗಳಾಗಿ ಹೊರ ಹೊಮ್ಮುವ ಪರಿ ಚೆನ್ನಾಗಿದೆ. ಎಲ್ಲಾ ವಿಚಾರಗಳು ಮತ್ತು ವ್ಯಕ್ತಗಳಿಗೆ ಎಡತಾಕುವಲ್ಲಿ ಯಶಸ್ವಿಯಾಗಿದ್ದೀರಿ ಅನ್ನಿಸುತ್ತೆ...ಇಂಥ ಪ್ರಯೋಗ ಆಗಾಗ ಬರುತ್ತಿರಲಿ ಸರ್..

Mahantesh said...

ಅಸತ್ಯಿಗಳೇ ಕರ್ಣಪಿಶಾಚಿಗಳಾಗಿ ಇಲ್ಲಿ ಪ್ರಾತ್ಯಕ್ಷರಾಗಿದ್ದಾರೆ ಎಂದು ಬೊಗಳರೂನಲ್ಲಿ ವದಂತಿ ಹರಡಿದೆ.

sunaath said...

ಶ್ಯಾಮಲಾ,
ನಾನೂ ಸಹ ಕರ್ಣಪಿಶಾಚಿಗಾಗಿ ಕಾಯುತ್ತಿದ್ದೇನೆ!

sunaath said...

ಸುಬ್ರಹ್ಮಣ್ಯರೆ,
ನಾನು ವಿನೋದದ ಆರಾಧಕನೇ ಹೊರತು, ವಿನೋದಸೃಷ್ಟಿಯಲ್ಲಿ ನುರಿತವನಲ್ಲ. ನಿಮ್ಮ ಲೇಖನಗಳು ವಿನೋದರಸದ ಸರಸ ಲೇಖನಗಳು ಮತ್ತು ನೀವು ಉತ್ತಮ ಕತೆಗಾರರು ಎಂದು ಪ್ರಶಂಸಿಸಲು ನನಗೆ ಸಂತೋಷವೆನಿಸುತ್ತದೆ.

sunaath said...

ಪ್ರವೀಣರೆ,
ನೀವೂ ಸಹ ನಿಮ್ಮ ಲೇಖನಗಳಿಂದ ನಮ್ಮೆಲ್ಲರ ‘ಶಿಕಾರಿ’ ಮಾಡಿದ್ದೀರಿ. ಇದನ್ನು tit for tat ಎನ್ನೋಣವೆ?

sunaath said...

ಶಿವು,
ಕೃತಯುಗದ ಸತ್ಯವು ಕಲಿಯುಗದಲ್ಲಿ ಅಸತ್ಯವಾಗುತ್ತದೆ ಹಾಗು ಅಸತ್ಯವು ಸತ್ಯವಾಗುತ್ತದೆ. ದೈವಲೀಲೆ!

sunaath said...

ಮಹಾಂತೇಶ,
ಕರ್ಣಪಿಶಾಚಿಯು ಅಸತ್ಯಿಗಳ ಕ್ಲೋsssಜ್ ಫ್ರೆಂಡು! ಕೆಲವೊಮ್ಮೆ
ಕರ್ಣಪಿಶಾಚಿಯು ಅವರ ರೂಪ ಧರಿಸಿದಲ್ಲಿ ಆಶ್ಚರ್ಯವಿಲ್ಲ!

ಅನಂತ್ ರಾಜ್ said...

ಸುನಾತ್ ಸರ್ - ಗ೦ಭೀರ ಚೆ೦ತನೆಗಳನ್ನು ಹಾಸ್ಯ ರಸಾಯನದ ಮೂಲಕ ಮನಬೆಚ್ಚುವ೦ತೆ ಚಿತ್ರಿಸಿದ್ದೀರಿ.. ಲೇಖನದಲ್ಲಿ ಉಪಯೋಗಿಸಿದ ಪ್ರತಿಯೊ೦ದು ಪದವೂ ಮೌಲ್ಯಾಧಾರಿತ..! ಮು೦ದಿನ ಭಾಗದ ನಿರೂಪಣೆಯ ನಿರೀಕ್ಷಣೆಯಲ್ಲಿ....ಅನ೦ತ್

sunaath said...

ಅನಂತರಾಜರೆ,
ಧನ್ಯವಾದಗಳು. ಕೆಲವೊಮ್ಮೆ ಕಟುವಾದ ವಿಷಯವನ್ನು ಹಾಸ್ಯದ ಮೂಲಕವೇ ಹೇಳಬೇಕಾಗುತ್ತದೆ, ಅಲ್ಲವೆ!?

umesh desai said...

kaka, please b careful as people mentioned here are powerful . good writeup and a refreshing change

ಅಪ್ಪ-ಅಮ್ಮ(Appa-Amma) said...

ಸುನಾಥ್ ಕಾಕಾ,

ಮೊದಲು ನೋಡಿದಾಗ ಇದು ಸಲ್ಲಾಪವೋ ಅಥವಾ ಬೊಗಳೆ ರಗಳೆಯೋ ಎನ್ನುವ ಅನುಮಾನ ಬಂತು :)

ಕಪಿ ಮತ್ತು ಅಸತ್ಯಿಗಳ ಸಂಭಾಷಣೆ ಮನಮೋಹಕವಾಗಿ ಬಂದಿದೆ !

ಎಂದಿನ ನಿಮ್ಮ ಅಧ್ಯಯನಶೀಲ ಲೇಖನಗಳ ನಡುವೆ ಈ ತರದ್ದು ಖುಷಿ ನೀಡುತ್ತದೆ. ನಿಮ್ಮ ಈ ಶೈಲಿಯ ಲೇಖನಗಳು ಇನ್ನೂ ಬರಲಿ..

Unknown said...

karna pishaachi mast aagide.. Munduvaresi :)

KalavathiMadhusudan said...

asatyada hodukaata vaividhyamayavaagide.dhanyavaadagalu.

sunaath said...

ದೇಸಾಯರ,
Thanks.

sunaath said...

ಅಪ್ಪ-ಅಮ್ಮ,
ಬೊಗಳೆ ರಗಳೆಯಿಂದ ಪ್ರಭಾವಿತನಾಗಿಯೇ ನಾನು ಈ ತರಹದ ಲೇಖನ ಬರೆದೆ ಎನ್ನಬಹುದು.

sunaath said...

ರವಿಕಾಂತ,
ಕರ್ಣಪಿಶಾಚಿಯ ಬಾಲವನ್ನು ಹಿಡಿದುಕೊಂಡ ಹಾರುವದು ನನ್ನಿಂದ ಆದೀತೆ?

sunaath said...

ಕಲರವ,
ಅಸತ್ಯವೇ ರೋಚಕವಾದದ್ದು, ನಾನಾ ಮುಖಗಳುಳ್ಳದ್ದು.
ಅಸತ್ಯದ ಹುಡುಕಾಟವು thrilling!

V.R.BHAT said...

ಬಹಳದಿನ ತಡೆದುಕೊಂಡು ಒಮ್ಮೆಲೇ ಗಕ್ಕನೆ ನಕ್ಕ ಪರಿಸ್ಥಿತಿ ನನ್ನದು; ಅದಕ್ಕೆ ಕಾರಣೀಭೂತರು ನೀವು. ಕರ್ಣಪಿಶಾಚಿ ಬಹಳ ಪ್ರಾಚೀನಕಲದ್ದೋ ಅಥವಾ ’ಮಣ್ಣಿನ ಮಗ’ ಹುಟ್ಟಿದಮೇಲೆ ಹುಟ್ಟಿದ್ದೋ ತಿಳಿಸಿರಿ. ಕ.ಪಿ. ಗೆ ಇನ್ಫೋಸಿಸ್ಸಿನ ಕ್ಯಾಂಪಸ್ಸನ್ನು ಕಂಡು ಭಯವಾಯಿತೋ ಸಂತೋಷವಾಯಿತೋ ತಿಳಿಯಲಿಲ್ಲ, ಸೆಕ್ಯುರಿಟಿಗಳಿಂದ ತಪ್ಪಿಸಿಕೊಂಡು ಅದು ಯಾವ ಗವಾಕ್ಷಿಯಿಂದ ಒಳಗೆ ನುಗ್ಗಿತು ಎಂಬುದೂ ಕೂಡ ನಾರಾಯಣ ಮೂರ್ತಿಗೇ ಗೊತ್ತು! ಹಲವರ ಸಂದರ್ಶನ ಮಾಡುತ್ತಿರುವ ಕ.ಪಿ. ಗೆ ನನ್ನ ಅಭಿನಂದನೆಗಳು ಮತ್ತು ಮುಂದಿನ ಸಂದರ್ಶನಗಳ ಕೆಲಸ ಸುಗಮಸಾಗಲೆಂದು ಶುಭಹಾರೈಕೆಗಳು.

ಮಂಜುಳಾದೇವಿ said...

ಕ ಪಿ ನಡೆಸಿರುವ ಸಂದರ್ಶನ ಸೊಗಸಾಗಿದೆ.
ಮುಂದಿನ ಕಂತಿಗಾಗಿ ಕಾಯುವಂತೆ ಮಾಡಿದ್ದೀರಿ.

Kavitha said...

Hi Sunaath,

this is the wrong place to ask you for this, but I am planning to write an article in kannada. My vocabulary is not enough and I want some specific words in kananda. I would want to contact you in this regards. please let me know what is your email address.
thanks.

sunaath said...

ಭಟ್ಟರೆ,
ಕರ್ಣಪಿಶಾಚಿಯು ಅನಾದಿ ಹಾಗು ಅನಂತ!
ನಿಮ್ಮ ಹಾರೈಕೆಯ ಬಲದಿಂದ ಕರ್ಣಪಿಶಾಚಿಯು ಎಲ್ಲಾದರೂ ಹಾರೀತು! ಧನ್ಯವಾದಗಳು

sunaath said...

ಮಂಜುಳಾದೇವಿಯವರೆ,
ಕರ್ಣಪಿಶಾಚಿಯು ಮುಂದಿನ ಸಂದರ್ಶನಕ್ಕಾಗಿ ತೆರಳಿದೆ. ಅದರ ಹಾದಿಯನ್ನೇ ಕಾಯುತ್ತಿದ್ದೇನೆ.

sunaath said...

Kavita,
My email: sunaath@gmail.com
You are always welcome.

prabhamani nagaraja said...

ಸುನಾಥ್ ಸರ್,
ಅದ್ಭುತ ವಿಡ೦ಬನಾತ್ಮಕ ಲೇಖನ. ನಾನು ಮು೦ದಿನ ಸ೦ಚಿಕೆ ಓದಿ ಕುತೂಹಲದಿ೦ದ ಹಿ೦ದಕ್ಕೆ ಬ೦ದೆ. ಬಹಳ ಚೆನ್ನಾಗಿ ನಗಿಸಿದ್ದೀರಿ. ಅಭಿನ೦ದನೆಗಳು.

ಶಿವಪ್ರಕಾಶ್ said...

soooooooper :)

ಸೀತಾರಾಮ. ಕೆ. / SITARAM.K said...

adbhuta vidambane lekhana

Harisha - ಹರೀಶ said...

ಕಾಕಾ, ಬಹಳ ದಿನಗಳಾಗಿದ್ದವು, ಬ್ಲಾಗ್ ಸುತ್ತದೆ.
ಅಸತ್ಯಾನ್ವೇಷಿಗಳ ರೀತಿಯಲ್ಲೇ ಸತ್ಯಾನ್ವೇಷಣೆ ಮಾಡಿದ್ದೀರಿ.. ಚೆನ್ನಾಗಿದೆ :)

ಈಶ್ವರ said...

ತುಂಬಾ ತಡವಾಗಿ ಓದುತ್ತಿದ್ದೇನೆ ಅಂತ ನನ್ ಮೇಲೆ ಬೇಸರ!.

ಕಪಿಯನ್ನ ಇಷ್ಟ ಪಡುತ್ತಿದ್ದೇನೆ .