`Things
fall apart, the center cannot hold’.
ಇದು
ಆಂಗ್ಲ ಕವಿ ಯೇಟ್ಸನ ಕವನವೊಂದರ ಸಾಲು.
ಈ ಸಾಲನ್ನು ಈಗ ಹೀಗೂ ಹಾಡಬಹುದು:
`ಭಾರತಕೋ ತುಕಡೇ ತುಕಡೇ ಕರೇಂಗೆ!
Let
India fall apart!’
ಬಂಗಾಲ ಸರಕಾರವು ಭಾರತ ದೇಶದ ಲೋಕಸಭೆಯು ಅನುಮೋದಿಸಿದ ಹಾಗು ಇದೀಗ ಶಾಸನವೆಂದು ಅಂಗೀಕೃತವಾದ ‘ನಾಗರಿಕತೆ ಬದಲಾವಣೆ ಶಾಸನ’ವನ್ನು ಒಪ್ಪುವದಿಲ್ಲವೆಂದೂ,
ತಮ್ಮ ರಾಜ್ಯದಲ್ಲಿ ಇದನ್ನು ಚಲಾಯಿಸುವದಿಲ್ಲವೆಂದೂ ಹೇಳಿಕೆ ಕೊಟ್ಟಿದೆ.
ಬಂಗಾಲವನ್ನು ಅನುಕರಿಸಿ ಇತರ ಭಾಜಪೇತರ ರಾಜ್ಯಗಳೂ ಸಹ ಇಂತಹದೇ ಹೇಳಿಕೆ ಕೊಟ್ಟಿವೆ.
ಕೇರಳದ ಮುಖ್ಯ ಮಂತ್ರಿ ಪಿಣರಾಯಿಯವರು
ಭಾರತದ ಹನ್ನೊಂದು ರಾಜ್ಯಗಳಿಗೆ ಈ ಶಾಸನವನ್ನು ಧಿಕ್ಕರಿಸಲು ಕರೆ ಕೊಟ್ಟಿದ್ದಾರೆ! ಹಾಗು ಸರ್ವೋಚ್ಚ ನ್ಯಾಯಾಲಯದ ಬಾಗಿಲನ್ನು ಬಡೆದಿದ್ದಾರೆ.
ಈ ಶಾಸನದ ವಿರೋಧಿಗಳು ಕೊಡುವ ಕಾರಣವೇನೆಂದರೆ, ಈ ಶಾಸನವು
ಅಲ್ಪಸಂಖ್ಯಾಕರ ವಿರೋಧಿಯಾಗಿದೆ ಎನ್ನುವುದು. ಆದರೆ ಭಾರತದ ನೆರೆಹೊರೆಯ ದೇಶಗಳಲ್ಲಿ
ಇದ್ದಂತಹ ಹಾಗು ಧಾರ್ಮಿಕ ದೌರ್ಜನ್ಯಕ್ಕೆ ಒಳಗಾದಂತಹ, ಈ ದೇಶದಲ್ಲಿ ಈಗಾಗಲೇ ಐದು ವರ್ಷಗಳ ವರೆಗೆ ಇದ್ದಂತಹ ಪರದೇಶೀ ಅಲ್ಪಸಂಖ್ಯಾಕರಿಗೆ ಮಾತ್ರ ಭಾರತದಲ್ಲಿ ಆಶ್ರಯ ಕೊಡುವುದು
ಈ ಕಾನೂನಿನ ಉದ್ದೇಶವಾಗಿದೆ. ಭಾರತದಲ್ಲಿ ಇರುವ ಧಾರ್ಮಿಕ ಅಲ್ಪಸಂಖ್ಯಾಕರಿಗೆ ಹಾಗು ಬಹುಸಂಖ್ಯಾಕರಿಗೆ ಇದು ಸಂಬಂಧವೇ ಇಲ್ಲದ ವಿಷಯ! ಹಾಗಿದ್ದರೆ ಭಾರತಿಯ ಧಾರ್ಮಿಕ ಅಲ್ಪಸಂಖ್ಯಾಕರಿಗೆ
ಕಣ್ಕಟ್ಟು ಮಾಡುವ ಈ ಹೋರಾಟಗಳು ಏತಕ್ಕಾಗಿ? ಬಹುಶ: ಈ ತಪ್ಪು ಪ್ರಚಾರದಿಂದ ಮರುಳಾದ ಭಾರತೀಯ ಅಲ್ಪಸಂಖ್ಯಾತರು ಮುಂದಿನ ಚುನಾವಣೆಗಳಲ್ಲಿ ತಮ್ಮ
ಪಕ್ಷಕ್ಕೇ ಮತ ಹಾಕಬಹುದು ಎನ್ನುವ ತರ್ಕ ಇಲ್ಲಿದೆಯೆ?
ಭಾರತದ ಆಧುನಿಕ ಸಂವಿಧಾನವು ಧರ್ಮನಿರಪೇಕ್ಷವಾಗಿದೆ
ಹಾಗು ಕೇವಲ ಆ ಕಾರಣಕ್ಕಾಗಿಯೇ ಆಧುನಿಕ ಭಾರತವು ಧರ್ಮನಿರಪೇಕ್ಷವಾಗಿರತಕ್ಕದ್ದು ಎಂದು ಕೆಲವರು ಹೇಳುತ್ತಿದ್ದಾರೆ. ಬಂಧುಗಳೆ, ಆಧುನಿಕ ಸಂವಿಧಾನವು
ಬರುವ ಸಾವಿರಾರು ವರ್ಷಗಳ ಪೂರ್ವದಿಂದಲೂ ಭಾರತವು ಧರ್ಮನಿರಪೇಕ್ಷವಾಗಿಯೇ ಇದೆ. (ಅದೇ ತಪ್ಪಾಯಿತು, ಎನ್ನುತ್ತೀರಾ!) ಭಾರತದ ಮೇಲೆ ತುರ್ಕಸ್ತಾನ, ಅರಬಸ್ತಾನ ಮೊದಲಾದ ಪಶ್ಚಿಮೋತ್ತರ ಹಾಗು
ನಿಕಟಪಶ್ಚಿಮದ ಕಾಡುಜನರು ದಾಳಿ ಮಾಡಿ, ಭಾರತವನ್ನು ಆಕ್ರಮಿಸಿ,
ತಮ್ಮ ಆಡಳಿತವನ್ನು ಸ್ಥಾಪಿಸಿದ ಬಳಿಕವೇ ಇಲ್ಲಿ ಹಿಂಸಾತ್ಮಕ ಧರ್ಮಾಂತರ ಹಾಗು ಧಾರ್ಮಿಕ ಕ್ರೌರ್ಯ
ಪ್ರಾರಂಭವಾಯಿತು. ಹಾಗಿದ್ದರೂ ನಮ್ಮ ಬುದ್ಧಿಜೀವಿಗಳು ಪ್ರಚುರಿಸುತ್ತಿರುವ
ಕೆಲವು ಜಾಣಸುಳ್ಳುಗಳನ್ನು ನೋಡಿರಿ. ನಮ್ಮ ಜ್ಞಾನಪೀಠಿ ಕಾರ್ನಾಡರು ಟೀಪೂಸುಲ್ತಾನನನ್ನು
ವೈಭವೀಕರಿಸಿ ಒಂದು ನಾಟಕವನ್ನು ಬರೆದಿದ್ದಾರೆ. ಓರ್ವ ಪತ್ರಕರ್ತರು ‘ಟೀಪೂಸುಲ್ತಾನನು ಮತಾಂಧನಾಗಿದ್ದನಲ್ಲವೆ’ ಎಂದು ಪ್ರಶ್ನಿಸಿದಾಗ, ಕಾರ್ನಾಡರು ಹೇಳಿದ್ದು ಹೀಗಿದೆ: ‘There
was no concept of secularism at that time!’
ವಾಹ್! ಜ್ಞಾನಪೀಠಿಗಳೇ! ಟೀಪೂಸುಲ್ತಾನನಿಗಿಂತಲೂ
ಸುಮಾರು ಎರಡುನೂರು ವರ್ಷಗಳಷ್ಟು ಮೊದಲೇ ವಿಶಾಲ ಕರ್ನಾಟಕದ ಸಾಮ್ರಾಟನಾಗಿದ್ದ ಕೃಷ್ಣದೇವರಾಯನು ವಿಜಯನಗರದಲ್ಲಿ
ಮುಸಲ್ಮಾನರಿಗಾಗಿ ಮಸೀದಿಗಳನ್ನು ಕಟ್ಟಿಸಿಕೊಟ್ಟಿದ್ದನು ಎನ್ನುವುದು ನಿಮಗೆ ಗೊತ್ತಿರಲಿಕ್ಕಿಲ್ಲವೆ
ಅಥವಾ ಇದು ಜಾಣ ವಿಸ್ಮರಣೆಯೆ? ಅಥವಾ ಟೀಪೂನ ಹಾಗು ಅವನಂಥವರ ಕಾಲಖಂಡದಲ್ಲಿ
secularismದ concept ಅಳಿಸಿ ಹೋಯಿತೆ?
ಭಾರತದ
ಸರ್ವಾಂಗೀಣ ಬೆಳವಣಿಗೆಗೆ ವಿವಿಧ ರಾಜ್ಯಗಳ ಕನಸುಗಳು ಹಾಗು ಆಲೋಚನೆಗಳು ಏನಿವೆ ಎನ್ನುವುದನ್ನು ಅರಿತುಕೊಂಡು ಅವುಗಳನ್ನು ಅಭಿವೃದ್ಧಿನೀತಿಯಲ್ಲಿ ಅಳವಡಿಸಿಕೊಳ್ಳೋಣ ಎನ್ನುವ ಕಾರಣಕ್ಕಾಗಿಯೇ ಪ್ರಧಾನಮಂತ್ರಿಯವರು ‘ನೀತಿ ಆಯೋಗ’ವನ್ನು ಸ್ಥಾಪಿಸಿದರು.
‘ನೀತಿ ಆಯೋಗ’ದ ಮೊದಲ ಸಭೆಯನ್ನು ಪ್ರಧಾನಿಯವರು ಫೆಬ್ರುವರಿ ೨೦೧೫ರಲ್ಲಿ ಕರೆದಿದ್ದರು. ಆ ಸಭೆಗೆ ಕೆಲವು ರಾಜ್ಯಗಳ ಮುಖ್ಯ ಮಂತ್ರಿಗಳು ಉಪಸ್ಥಿತರಾಗಲಿಲ್ಲ.
ದೇಶದ
ಪ್ರಗತಿಗಾಗಿ ವಿಚಾರವಿನಿಮಯ ಮಾಡಬಯಸುವ ಒಂದು ಸಭೆಯ ಮೊದಲ ಕಾರ್ಯಕ್ರಮಕ್ಕೆ ಈ ತರಹದ ಪ್ರತಿರೋಧ ಏಕೆ? ಭಾರತವು ‘ಸಹಕಾರಿ ಒಕ್ಕೂಟ’ ಎಂದು ತೆರಪಿಲ್ಲದೆ
ಸಾರುತ್ತಿರುವವರು ಕೇಂದ್ರ ಸರಕಾರಕ್ಕೆ ಅಸಹಕಾರ ತೋರುತ್ತಿರುವ ಕಾರಣವೇನು? ಸಮಗ್ರ ಭಾರತದ ಪ್ರಧಾನಿಯವರನ್ನು ತಿರಸ್ಕರಿಸುವ ಮೂಲಕ ಇವರು ಯಾವ ಸಂದೇಶವನ್ನು ಭಾರತೀಯರಿಗೆ
ಕೊಡಲು ಬಯಸುತ್ತಿದ್ದಾರೆ? `ಭಾರತಕೋ ತುಕಡೇ ತುಕಡೇ ಕರೇಂಗೆ! Let India fall apart!’ ಎನ್ನುವುದು ಇವರ ಆಶಯವಾಗಿರಬಹುದೆ?
ಪ್ರಧಾನಿಯವರು ಬಾಂಗ್ಲಾ ದೇಶದ ಜೊತೆಗೆ ನದೀನೀರಿನ ಒಪ್ಪಂದ ಮಾಡಿಕೊಳ್ಳಲು ಕೋಲಕತ್ತೆಗೆ ಹೋಗಿದ್ದರು. ಈ ಸಂದರ್ಭದಲ್ಲಿ ಒಪ್ಪಂದವು ಸುಲಭವಾಗಲಿಲ್ಲ ; ಬಂಗಾಲದ ಮುಖ್ಯ ಮಂತ್ರಿಗಳು ಒಪ್ಪಂದಕ್ಕೆ ಅನುಕೂಲರಿರಲಿಲ್ಲ ಎಂದು ಹೇಳಲಾಗುತ್ತದೆ. ತಮ್ಮ ರಾಜ್ಯದ ಹಿತವು ಬೇರೆಯಾಗಿದೆ ಎಂದು ಅವರು ಭಾವಿಸಿದ್ದರೆಂದು ಹೇಳಲಾಗುತ್ತದೆ. ಅಥವಾ ಬಂಗಾಲದ ಮುಖ್ಯ ಮಂತ್ರಿಗಳು ಭಾರತದ ಪ್ರಧಾನಿಗೆ, ‘ನನ್ನೆದುರಿಗೆ ನೀನ್ಯಾವ ಬಾಜೀರಾಯ!’ ಎಂದು ಸವಾಲು ಹಾಕಿದರು ಎಂದೂ ಕೆಲವರು ಹೇಳುತ್ತಾರೆ
. ಏತಕ್ಕಾಗಿ ಈ ಸವಾಲು? ಪ್ರಧಾನ ಮಂತ್ರಿಗಳನ್ನು ಧಿಕ್ಕರಿಸುವುದರಿಂದ ತಮ್ಮ ರಾಜ್ಯದಲ್ಲಿ ತಮಗೊಂದು ರಾಜಕೀಯ ಪ್ರಭಾವಳಿ ಸಿಗುತ್ತದೆ ಎನ್ನುವ ತರ್ಕ ಇಲ್ಲಿರಬಹುದೆ? ಅಥವಾ ಇದು
Let India fall apart ಎನ್ನುವುದರ ಪೂರ್ವಭಾವೀ ಪ್ರಯತ್ನವಾಗಿರಬಹುದೆ?!
ಕೇಂದ್ರ
ಸರಕಾರದ ವಿಚಕ್ಷಣಾ ಪಡೆಯು (ಸಿ.ಬಿ.ಐ) ಬಂಗಾಲದ ಓರ್ವ ಪೋಲೀಸ ಅಧಿಕಾರಿಯನ್ನು ವಿಚಾರಣೆಗೆ ಒಳಪಡಿಸಲು ಬಂದಾಗ, ಬಂಗಾಲ ಸರಕಾರವು ಆ ಕಾರ್ಯಕ್ಕೆ ಎನಿತೂ ಸಹಕಾರ ನೀಡಲಿಲ್ಲ. ಸರ್ವೋಚ್ಚ ನ್ಯಾಯಾಲಕ್ಕೆ ಕೇಂದ್ರ ಸರಕಾರವೂ ಹೆದರುತ್ತದೆ. ಅಂತಹದರಲ್ಲಿ ಬಂಗಾಲ ಸರಕಾರವು ಸರ್ವೋಚ್ಚ ನ್ಯಾಯಾಲಕ್ಕೆ ಸ್ವಲ್ಪವೂ ಬೆದರದೆ, ಈ ರಾಜಕುಮಾರನನ್ನು ತಮ್ಮ ಕಣ್ಣು ರೆಪ್ಪೆಯ ಕೆಳಗೆ ಕಾಯ್ದರು. ಏತಕ್ಕಾಗಿ ಈ ಅಸಹಕಾರ? ಇದರ ಅರ್ಥ ಹೀಗಿರಬಹುದೆ: ಬಂಗಾಲಿಗಳೇ, ನೀವು ಭಾರತದ ಪ್ರಜೆಗಳಲ್ಲ; ನೀವು ಬಂಗಾಲದ ಪ್ರಜೆಗಳು ಹಾಗು ಬಂಗಾಲವನ್ನು `ನಾವು’ ಆಳುತ್ತಿದ್ದೇವೆ!
JNUದಲ್ಲಿ ‘ಭಾರತದ ತುಕಡೆ ತುಕಡೆ’ ಆಂದೋಲನ; ಇದೀಗ ಅಲ್ಲಿಯೇ CAAದ ವಿರುದ್ಧ ಘರ್ಷಣೆ! ‘ನಾವೂ ಇಂಡಿಯನ್ಸ; ನಮಗೆ ರಾಷ್ಟ್ರಭಕ್ತಿಯನ್ನು ನೀವು ಕಲಿಸಬೇಕಾಗಿಲ್ಲ’ ಎನ್ನುವುದು ಈ ಹೋರಾಟಗಾರರ ಹಾಗು ಅವರನ್ನು ಬೆಂಬಲಿಸುವ ರಾಜಕಾರಣಿಗಳ ವಿತಂಡವಾದದ ಬೊಬ್ಬೆ!
ವಾಸ್ತವದಲ್ಲಿ ‘ರಾಷ್ಟ್ರಭಕ್ತಿ’ ಎನ್ನುವುದು ಇರುವುದೇ ಇಲ್ಲ. ರಶಿಯಾದ ಖ್ಯಾತ ಪ್ರಾಣಿವರ್ತನಾ ವಿಜ್ಞಾನಿಯಾದ ಪಾವ್ಲೋವನು `ರಾಷ್ಟ್ರಭಕ್ತಿಯು ನಿರಂತರವಾದ ಪ್ರಯತ್ನಗಳ ಮೂಲಕ ಕಲಿಸಬೇಕಾದ ವರ್ತನೆಯಾಗಿದೆ’ ಎಂದಿದ್ದಾನೆ. (Patriotizm-operantnaya-reaktsiya = Patriotism is an operant conditioned reaction).
ಖಂಡಿತವಾಗಿಯೂ ಇದು ಸತ್ಯ. ರಾಷ್ಟ್ರಭಕ್ತಿಯು ಕಲಿಕಾವರ್ತನೆಯಾಗಿದೆ. ಆದರೆ ಸ್ವಾರ್ಥವನ್ನು ಕಲಿಸಬೇಕಾಗಿಲ್ಲ. Selfishness is an instinct!
ನಮ್ಮ ದೇಶ ಉಳಿದರೆ ತಾನೇ ನಾವೂ ಉಳಿಯುವುದು; ಆದುದರಿಂದ ನಾವು ದೇಶಭಕ್ತಿಯನ್ನು ನಮ್ಮ ಪ್ರಜೆಗಳಿಗೆ ಬಾಲ್ಯದಿಂದಲೇ ಒತ್ತಾಯದ ಪ್ರಯತ್ನಗಳ ಮೂಲಕ ಕಲಿಸಲೇಬೇಕಾಗುತ್ತದೆ. ಆ ಕಾರಣಕ್ಕಾಗಿಯೇ ‘ಜೈಹಿಂದ್ ; ವಂದೇ ಮಾತರಮ್’ ಮೊದಲಾದ ಘೋಷಣೆಗಳು ಬೇಕಾಗುತ್ತವೆ. ಆದರೆ ನಮ್ಮವರೇ ಆದ ಕೆಲವು ಭಾರತೀಯರು ‘ಇದು ನಮ್ಮ ಧರ್ಮಾಚಾರದ ವಿರುದ್ಧ; ಆದುದರಿಂದ ನಾವು ‘ವಂದೇ ಮಾತರಮ್’ ಎನ್ನುವುದಿಲ್ಲ ಎನ್ನುವ ವಿಚಿತ್ರ ತರ್ಕವನ್ನು ಪ್ರತಿಪಾದಿಸುತ್ತಾರೆ. ವಿಶ್ವದ ಅನೇಕ ರಾಷ್ಟ್ರಗಳಲ್ಲಿ ಸೈನಿಕ ಶಿಕ್ಷಣ ಹಾಗು ಅಲ್ಪಕಾಲೀನ ಸೈನ್ಯವೃತ್ತಿ ಅಲ್ಲಿಯ ಯುವಕರಿಗೆ ಕಡ್ಡಾಯವಾಗಿದೆ ಎನ್ನುವುದು ಉದಾರಭಾರತದಲ್ಲಿ ವಾಸಿಸುತ್ತಿರುವ ನಮ್ಮವರಿಗೆ ತಿಳಿದಿಲ್ಲ!
ಅಣ್ಣಗಳಿರಾ, ನಮ್ಮ ದೇಶದ ವಿರೋಧಿಗಳಾದ ನಮ್ಮ ನೆರೆಹೊರೆಯವರು ನಮ್ಮ ನಾಶಕ್ಕೆ ಬೆಂಕಿಯನ್ನು ಉಗುಳುತ್ತ ನಿಂತುಕೊಂಡಿದ್ದಾರೆ. ಭಾರತವು ನಾಶವಾಗಿ ಹೋದರೆ, ಯಾವ ಭಾರತೀಯನೂ (-ಯಾವುದೇ ಧರ್ಮದವನಾಗಿರಲಿ-)
ಉಳಿಯುವುದಿಲ್ಲ. ಯಾರಾದರೂ ಉಳಿದುಕೊಂಡರೆ, ಅವರು ನೆರೆಯ ದೇಶಗಳ ಗುಲಾಮರಾಗಿ, ಹಂದಿಗಳ ಕೊಟ್ಟಿಗೆಯಲ್ಲಿ ಬದುಕಬೇಕಾಗುತ್ತದೆ, ಅಷ್ಟೆ!
ಯೇಟ್ಸನ ಕವನವು ಭಾರತಕ್ಕೆ ಭವಿಷ್ಯವಾಣಿಯಾದೀತೆ?
JNUದಲ್ಲಿ ‘ಭಾರತದ ತುಕಡೆ ತುಕಡೆ’ ಆಂದೋಲನ; ಇದೀಗ ಅಲ್ಲಿಯೇ CAAದ ವಿರುದ್ಧ ಘರ್ಷಣೆ! ‘ನಾವೂ ಇಂಡಿಯನ್ಸ; ನಮಗೆ ರಾಷ್ಟ್ರಭಕ್ತಿಯನ್ನು ನೀವು ಕಲಿಸಬೇಕಾಗಿಲ್ಲ’ ಎನ್ನುವುದು ಈ ಹೋರಾಟಗಾರರ ಹಾಗು ಅವರನ್ನು ಬೆಂಬಲಿಸುವ ರಾಜಕಾರಣಿಗಳ ವಿತಂಡವಾದದ ಬೊಬ್ಬೆ!
ವಾಸ್ತವದಲ್ಲಿ ‘ರಾಷ್ಟ್ರಭಕ್ತಿ’ ಎನ್ನುವುದು ಇರುವುದೇ ಇಲ್ಲ. ರಶಿಯಾದ ಖ್ಯಾತ ಪ್ರಾಣಿವರ್ತನಾ ವಿಜ್ಞಾನಿಯಾದ ಪಾವ್ಲೋವನು `ರಾಷ್ಟ್ರಭಕ್ತಿಯು ನಿರಂತರವಾದ ಪ್ರಯತ್ನಗಳ ಮೂಲಕ ಕಲಿಸಬೇಕಾದ ವರ್ತನೆಯಾಗಿದೆ’ ಎಂದಿದ್ದಾನೆ. (Patriotizm-operantnaya-reaktsiya = Patriotism is an operant conditioned reaction).
ಖಂಡಿತವಾಗಿಯೂ ಇದು ಸತ್ಯ. ರಾಷ್ಟ್ರಭಕ್ತಿಯು ಕಲಿಕಾವರ್ತನೆಯಾಗಿದೆ. ಆದರೆ ಸ್ವಾರ್ಥವನ್ನು ಕಲಿಸಬೇಕಾಗಿಲ್ಲ. Selfishness is an instinct!
ನಮ್ಮ ದೇಶ ಉಳಿದರೆ ತಾನೇ ನಾವೂ ಉಳಿಯುವುದು; ಆದುದರಿಂದ ನಾವು ದೇಶಭಕ್ತಿಯನ್ನು ನಮ್ಮ ಪ್ರಜೆಗಳಿಗೆ ಬಾಲ್ಯದಿಂದಲೇ ಒತ್ತಾಯದ ಪ್ರಯತ್ನಗಳ ಮೂಲಕ ಕಲಿಸಲೇಬೇಕಾಗುತ್ತದೆ. ಆ ಕಾರಣಕ್ಕಾಗಿಯೇ ‘ಜೈಹಿಂದ್ ; ವಂದೇ ಮಾತರಮ್’ ಮೊದಲಾದ ಘೋಷಣೆಗಳು ಬೇಕಾಗುತ್ತವೆ. ಆದರೆ ನಮ್ಮವರೇ ಆದ ಕೆಲವು ಭಾರತೀಯರು ‘ಇದು ನಮ್ಮ ಧರ್ಮಾಚಾರದ ವಿರುದ್ಧ; ಆದುದರಿಂದ ನಾವು ‘ವಂದೇ ಮಾತರಮ್’ ಎನ್ನುವುದಿಲ್ಲ ಎನ್ನುವ ವಿಚಿತ್ರ ತರ್ಕವನ್ನು ಪ್ರತಿಪಾದಿಸುತ್ತಾರೆ. ವಿಶ್ವದ ಅನೇಕ ರಾಷ್ಟ್ರಗಳಲ್ಲಿ ಸೈನಿಕ ಶಿಕ್ಷಣ ಹಾಗು ಅಲ್ಪಕಾಲೀನ ಸೈನ್ಯವೃತ್ತಿ ಅಲ್ಲಿಯ ಯುವಕರಿಗೆ ಕಡ್ಡಾಯವಾಗಿದೆ ಎನ್ನುವುದು ಉದಾರಭಾರತದಲ್ಲಿ ವಾಸಿಸುತ್ತಿರುವ ನಮ್ಮವರಿಗೆ ತಿಳಿದಿಲ್ಲ!
ಅಣ್ಣಗಳಿರಾ, ನಮ್ಮ ದೇಶದ ವಿರೋಧಿಗಳಾದ ನಮ್ಮ ನೆರೆಹೊರೆಯವರು ನಮ್ಮ ನಾಶಕ್ಕೆ ಬೆಂಕಿಯನ್ನು ಉಗುಳುತ್ತ ನಿಂತುಕೊಂಡಿದ್ದಾರೆ. ಭಾರತವು ನಾಶವಾಗಿ ಹೋದರೆ, ಯಾವ ಭಾರತೀಯನೂ (-ಯಾವುದೇ ಧರ್ಮದವನಾಗಿರಲಿ-)
ಉಳಿಯುವುದಿಲ್ಲ. ಯಾರಾದರೂ ಉಳಿದುಕೊಂಡರೆ, ಅವರು ನೆರೆಯ ದೇಶಗಳ ಗುಲಾಮರಾಗಿ, ಹಂದಿಗಳ ಕೊಟ್ಟಿಗೆಯಲ್ಲಿ ಬದುಕಬೇಕಾಗುತ್ತದೆ, ಅಷ್ಟೆ!
ಯೇಟ್ಸನ ಕವನವು ಭಾರತಕ್ಕೆ ಭವಿಷ್ಯವಾಣಿಯಾದೀತೆ?
14 comments:
ಸರ್ ,
ನಿಮ್ಮ ವಿಚಾರ ತುಂಬಾ ಪ್ರಸ್ತುತ .
ಆದರೆ ಉದಾರ ಭಾರತದಲ್ಲಿ ಉದರ -ನೀತಿಯನ್ನು ಬಿಡಲಾದೀತೇ ?
ಕಾಕಾ ,
ತುಂಬಾ ಉತ್ತಮ ವಿಶ್ಲೇಷಣೆ !
ಕೇವಲ " ಅಲ್ಪಸಂಖ್ಯಾತರಿಗಾಗಿ " ತಾವಿರುವುದು ಎಂಬ ಸೋಗು ಹಾಕುತ್ತಾ , ಜನರಿಗೆ ಸರಿಯಾದ ಮಾಹಿತಿ ಸಿಗದಂತೆ ನೋಡಿಕೊಳ್ಳುತ್ತಾ, ದೇಶದ ಪ್ರಗತಿಗೆ ಅಡ್ಡಗಾಲಿಡುವಂತ " ಪ್ರಗತಿಗಾಮಿ(?) ಗಳಿಂದ ಇಂದು ದೇಶದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗುತ್ತಿದೆ !
ಹಲವು ರಾಜ್ಯಗಳು ತಾವು ಭಾರತದ ಭಾಗವೇ ಅಲ್ಲ ಎಂಬಂತೆ ವರ್ತಿಸುತ್ತಿರುವುದು ಅಕ್ಷಮ್ಯವೇ ಸರಿ ! ಇದು ಆ ರಾಜ್ಯಗಳ ರಾಜಕಾರಣಿಗಳು ಸಂವಿಧಾನಕ್ಕೆ ಮಾಡುತ್ತಿರುವ ಅಪಮಾನವಲ್ಲವೇ?
ನಾರಾಯಣ ಭಟ್ಟ, Sir, ನೀವು ಹೇಳಿದಂತೆ ‘ಉದರ ನೀತಿ’ಯೇ ಮುಖ್ಯವಾದಾಗ, ಉದಾರನೀತಿ ಎನ್ನುವುದು ‘ಉದ್ದರಿ ನೀತಿ’ಯಾಗಿ ಮಾತ್ರ ಉಳಿಯುವುದು!
ಚಿತ್ರಾ ಮೇಡಮ್, ಯಾರಿಗೆ ಬೇಕು ಸಂವಿಧಾನ?-- ರಾಜಕಾರಣಿಗಳಿಗೆ ಬೇಕಾಗಿರುವುದು ವಿಧಾನ(ಸಭೆಯ) ಕುರ್ಚಿ! ಒಂದು ವೇಳೆ ಇವರ ವಿರುದ್ಧ ಯಾರಾದರೂ ನ್ಯಾಯಾಲಯಕ್ಕೆ ಹೋದರೂ ಸಹ, ನ್ಯಾಯನಿರ್ಣಯ ಹೊರಬರಲು ಹತ್ತು ವರ್ಷಗಳೇ ಬೇಕು!
ಕಾಕಾ.... �������������� ಆದರೆ ಎಷ್ಟು ಹೇಳಿದರೂ ಕೋಣನ ಮುಂದೆ ಕಿನ್ನರಿ ಬಾರಿಸಿದಂತೇ... ರಾಹುಲ್ ಪಂಡಿತ್ ಅವರ Our moon has blood clots ಕನ್ನಡದಲ್ಲಿ 'ಕದಡಿದ ಕಣಿವೆ' biography ಓದಿದ ಮೇಲೆ ತಲ್ಲಣಿಸಿ ಹೋಗಿದ್ದೇನೆ!! ಪಂಡಿತರಿಗಾದ ಆ ಹೀನ ಸ್ಥಿತಿ ಯಾರಿಗೂ ಬೇಡ.. ಅಷ್ಟೇ ಹೇಳಲು ಇಚ್ಛಿಸುವೆ. ����
ಶೋಚನೀಯ ಪರಿಸ್ಥಿತಿಯನ್ನು ಅರ್ಥವಾಗುವಂತೆ ವಿಶ್ಲೇಷಿಸಿದ್ದೀರಾ ಸಾರ್.
ಬದರಿನಾಥರೆ, ಪರಿಸ್ಥಿತಿ ಬಹಳ ಗಂಭೀರವಾಗುತ್ತಿದೆ. ಸ್ವಾರ್ಥಿಗಳು ದೇಶವನ್ನು ಹರಿದು ಹಂಚಿಕೊಳ್ಳಲು ಹೊರಟಿದ್ದಾರೆ. ದೇವರೇ ಕಾಪಾಡಬೇಕು!
ತೇಜಸ್ವಿನಿ, ಪಂಡಿತರಿಗೆ ಇನ್ನಾದರೂ ನ್ಯಾಯ ದೊರೆಯಲಿ ಎಂದು ದೇವರಲ್ಲಿ ಬೇಡಿಕೊಳ್ಳಬೇಕಾಗಿದೆ.
ಭಾರತದ ಅಖಂಡತೆ ಇಂದು ನಿನ್ನೆಯಲ್ಲ, ನೂರಾರು ವರ್ಷಗಳಿಂದಲೇ ದುಷ್ಟರ ಕಣ್ಣಿಗೆ ಈಡಾಗುತ್ತ ಬಂದಿದೆ.ಒಳಗಿನ ಶತ್ರುಗಳು ಇಂದು ಹಿಂದೆಂದಿಗಿಂತಲೂ ಅತ್ಯಂತ ಹೆಚ್ಚು ಪ್ರಮಾಣದಲ್ಲಿ ರಕ್ತಬೀಜಾಸುರರಂತೆ ಎದ್ದು ನಿಂತಿದ್ದಾರೆ.Things fall apart..ಭವಿಷ್ಯವನ್ನು ನಿಜವಾಗಿಸಲು ಸಹಾಯಕರಾಗಿದ್ದಾರೆ.ವಿನಾಶದ ಬಗ್ಗೆ ಕುರುಡರಾಗಿ ತಿಳಿ ಹೇಳಲು ಯತ್ನಿಸಿದವರ ತೇಜೋವಧೆ ಮಾಡುತ್ತಾರೆ.
ಜಯಶ್ರೀ ಮೇಡಮ್, ಅಖಂಡ ಭಾರತವು ಸಾವಿರಾರು ವರ್ಷಗಳಷ್ಟು ಹಳೆಯದು. ಈ ದೇಶವನ್ನು ಖಂಡತುಂಡ ಮಾಡಲು ಪ್ರಯತ್ನಿಸುತ್ತಲೇ ಇದ್ದಾರೆ. ೧೯೪೭ರಲ್ಲಂತೂ ಇದು ಎರಡು ಹೋಳಾಯಿತು. ಇನ್ನೆಷ್ಟು ತುಂಡಾಗುವುದೋ ವಿಧಿಗೇ ತಿಳಿದಿರಬಹುದು!
ಕಾಕಾ, ಬಹಳ ತಿಂಗಳುಗಳ ನಂತರ ನಿಮ್ಮ ಬ್ಲಾಗ್ ಓದಿದೆ. ಪಂಡಿತರಿಗಾದ ಅನ್ಯಾಯದ ಬಗ್ಗೆ ಹೇಳಲು ಮಾತು ಬಾರದು. ನ್ಯಾಯ ಸತ್ಯ ಇವೆಲ್ಲವನ್ನೂ ಹಿಡಿದಿಟ್ಟು ಕೊಳ್ಳಬಲ್ಲ ಶಕ್ತಿ ಕೇಂದ್ರವೊಂದು ಉದಯಿಸಲಿ ಎನ್ನುವ ಆಶಯ ನಮ್ಮೆಲ್ಲರದು.
ಸ್ವರ್ಣಾ, ನಮ್ಮೆಲ್ಲರ ಆಶಯ ಫಲಿಸಲಿ ಎನ್ನುವುದೇ ನಮ್ಮ ಈಗಿನ ಪ್ರಾರ್ಥನೆ.
ಬಹಳ ಉತ್ಮಮ ವಿಶ್ಲೇಷಣೆ ಸರ. .ಮೋದಿಯವರು ಯವರು ಪ್ರಧಾನಿಯಾದ ನಂತರ ಅಸಹಿಷ್ಣುತೆ ಎಂಬ ಕಪೋಲಕಲ್ಪಿತ ಮನೋಭಾವ ಬುದ್ದಿಜೀವಿಗಳಲ್ಲಿ ಅಚಾನಕ್ಕಾಗಿ ಹುಟ್ಟಿಕೊಂಡು ಬಾಲ ಸುಟ್ಟ ಬೆಕ್ಕಿನಂತೆ ಎಗಾರಾಡುವುದನ್ನು ತಮ್ಮಬೌದ್ದಿಕ ದಾರಿದ್ರ್ಯ ್ಳನ್ನು ಆಗಾಗ ಪ್ರದರ್ಶಿಸುವುದನ್ನು ನೋಡುತ್ತಿದ್ದರೆ ಅತಿಯಾದ ಬೇಸರ , ವಿಷಾಧ ಮೂಡುತ್ತೆ.(ಭಾರತದ ಭವಿಷ್ಯದ ಕಡೆಗೆ)
ಅಲ್ಪ ಸಂಖ್ಯಾತರಿಗೆ , ತುಕಡೆ ಗ್ಯಾಂಗುಗಳಿಗೆ , ಒಳಗಿಂದಲೆ ಕುಮ್ಮಕ್ಕು ನೀಡುತ್ತಿರುವ ಎಡ ಪಕ್ಷಗಳ ಓಟು ಬ್ಯಾಂಕಿನ ಹೊಲಸು ನೀತಿ , ಅದು ಸಹ part tym ಅನುಕೂಲ ಸಿಂಧು ನಡೆಯೆ ಸರಿ.
ಭಾರತದ ನಿರಪೇಕ್ಷ ನೀತಿಯೆ ಇದನ್ನೆಲ್ಲ ಸಹಿಸಿ ಇವರನ್ನೆಲ್ಲ
ಗೌರವದಿಂದ ನೋಡುತ್ತಿರುವುದನ್ನು ಇವರು ಮರೆಯಬಾರದು.
ಬೇರೆ ಮುಸ್ಲಿಮ್ ದೇಶದಲ್ಲಿ ಇಂತಾ ದೇಶ ದ್ರೋಹಿಗಳಗೆ ಜೇಲು ಬಿಡಿ ಅವರು ಜೀವಸಹಿತ ಉಳಿಯುವುದಿಲ್ಲ.
ಸರಿಯಾಗಿ ಹೇಳಿದಿರಿ, ಆರತಿ ಮೇಡಮ್! ದೇಶದ್ರೋಹಿಗಳನ್ನು ಪರಲೋಕಕ್ಕೆ ಕಳುಹಿಸಿದರೆ ಮಾತ್ರ ದೇಶ ಉಳಿದೀತು!
Post a Comment