Wednesday, August 25, 2010

ಹೇ ರಾಮ್!

‘ದೇಶ ಶ್ರೀಮಂತವಾಗಿರುವಾಗ ಓರ್ವ ವ್ಯಕ್ತಿ ಬಡತನದಲ್ಲಿದ್ದರೆ  ಅವನು ತಪ್ಪುಗಾರ; ದೇಶ ಬಡತನದಲ್ಲಿದ್ದಾಗ ಓರ್ವ ವ್ಯಕ್ತಿ ಸಿರಿವಂತಿಕೆಯಲ್ಲಿದ್ದರೆ ಆ ವ್ಯಕ್ತಿ ಒಬ್ಬ ಪಾಪಿ’ ಎಂದು ಚೀನಾ ದೇಶದ ತತ್ವಜ್ಞಾನಿ ಕನ್‌ಫ್ಯೂಶಿಯಸ್ ಹೇಳಿದ್ದಾನೆ. ಕಾಲ ಹಾಗು ದೇಶದಿಂದ ದೂರದಲ್ಲಿದ್ದ ಆ ತತ್ವಜ್ಞಾನಿಯನ್ನು ಬಿಡೋಣ. ನಾವು ರಾಷ್ಟ್ರಪಿತ ಎಂದು ಸ್ಮರಿಸುವ ಮಹಾತ್ಮಾ ಗಾಂಧಿಯವರು ಅರೆಹೊಟ್ಟೆಯ ಅಡುಗೆ ಹಾಗು ಅರೆಬತ್ತಲೆಯ ಉಡುಗೆಯ ವ್ರತವನ್ನು ಏಕೆ ಆಚರಿಸಿದರು? ತಮ್ಮ ದೇಶವಾಸಿಗಳ ಹೀನಸ್ಥಿತಿಯನ್ನು ನೋಡಿ ಮರುಕಗೊಂಡಿದ್ದಕ್ಕಲ್ಲವೆ? ಮಾನವ ಸಂವೇದನೆಯಿರುವ ಹೃದಯವಂತರು ಮಾಡುವ ಕೆಲಸವಿದು. ಇಂತಹ ಸಂವೇದನೆಯನ್ನು ನಾವು ಚುನಾಯಿಸಿದ ನಮ್ಮ ಶಾಸಕರಲ್ಲಿ ಅಪೇಕ್ಷಿಸುವದು ಹುಚ್ಚುತನವೇ ಸರಿ.

ಇದೀಗ ನಮ್ಮ ಶಾಸಕರು ಅಂದರೆ ಲೋಕಸಭೆಯ ಸದಸ್ಯರು ತಮ್ಮ ಮಾಸಿಕ ವೇತನವನ್ನು ರೂ.೫೦,೦೦೦ಗಳಿಗೆ ಏರಿಸಿಕೊಳ್ಳುವ ಹುನ್ನಾರದಲ್ಲಿದ್ದಾರೆ.. ಅದರ ಜೊತೆಗೆ ರೂ.೪೫,೦೦೦/-ಗಳ ಕ್ಷೇತ್ರಭತ್ತೆ . ಲೋಕಸಭೆ ನಡೆಯುತ್ತಿರುವಾಗ ಪ್ರತಿದಿನ ರೂ.೨೦೦೦/-ಗಳ ಭತ್ತೆ ಬೇರೆ. ಲೋಕಸಭೆಯು ಒಂದು ವರ್ಷದಲ್ಲಿ ಕನಿಷ್ಠ ೧೨೦ ದಿನಗಳವರೆಗೆ ನಡೆಯುವದರಿಂದ ರೂ. ೨,೪೦,೦೦೦ಗಳ ಗಳಿಕೆ ಇಲ್ಲಿಯೇ ಆಗುತ್ತದೆ. ಇದಲ್ಲದೆ ಟೆಲಿಫೋನ್, ವಿಮಾನ ಹಾರಾಟ ಮೊದಲಾದವುಗಳ ಪುಕ್ಕಟೆ ಸೌಲಭ್ಯ.  ಒಟ್ಟಿನಲ್ಲಿ ಓರ್ವ ಸದಸ್ಯನಿಗೆ ವರ್ಷಕ್ಕೆ ಸುಮಾರು ೨೦ ಲಕ್ಷಗಳವರೆಗಿನ ಗಳಿಕೆ. ಇದು ಸಾಮಾನ್ಯ ಭಾರತೀಯನ ವಾರ್ಷಿಕ ಆದಾಯದ ೬೮ ಪಟ್ಟು ಅಧಿಕವಾಗಿದೆ. ಲೋಕಸಭೆಯ ಒಟ್ಟು ಸದಸ್ಯರ ಸಂಖ್ಯೆ ೫೪೩. ಸಂಪುಟ ಸಚಿವರು ಹಾಗು ಉಪಮಂತ್ರಿಗಳಿಗೆ ಹೆಚ್ಚಿನ ಸಂಬಳ. ಅದನ್ನು ಗಣನೆಗೆ ತೆಗೆದುಕೊಳ್ಳದಿದ್ದರೂ ಸಹ, ಲೋಕಸಭೆಯ ವರ್ತಮಾನ ಸದಸ್ಯರಿಗಾಗಿ ಭಾರತೀಯರು ಮಾಡುವ ಖರ್ಚು ವರ್ಷಕ್ಕೆ ರೂ. ೧೦೫ ಕೋಟಿ. ಲೋಕಸಭೆಯ ಸದಸ್ಯರಾಗಿದ್ದವರು, ಮುಂದಿನ ಚುನಾವಣೆಯಲ್ಲಿ ಗೆಲ್ಲದೆ ಹೋದರೆ, ಅವರಿಗೆ ನಿವೃತ್ತಿವೇತನದ ಹೆಸರಿನಲ್ಲಿ ಸಮಾಧಾನಕರ ಬಹುಮಾನ ಲಭ್ಯವಾಗುತ್ತದೆ. (ಇನ್ನು ರಾಜ್ಯಸಭೆಯ ಸದಸ್ಯರ ಸಂಖ್ಯೆ ೨೫೦. ಇವರಿಗೂ ಸಹ ಇಷ್ಟೇ ವೇತನ ಹಾಗು ಇಷ್ಟೇ ಭತ್ತೆ ಇರಬಹುದಲ್ಲವೆ?)

ಇದಲ್ಲದೆ ಲೋಕಸಭೆಯಲ್ಲಿ  ಮತದಾನ ಮಾಡುವಾಗ ಅಡ್ಡಮತ ನೀಡಲು, ವಿಶ್ವಾಸಮತ ನೀಡಲು ಲಂಚ ಸ್ವೀಕರಿಸಿದ ಉದಾಹರಣೆಗಳು ನಮ್ಮ ಎದುರಿಗಿವೆ. ಪ್ರಶ್ನೆ ಕೇಳುವ ಸಲುವಾಗಿ ಕೆಲವು ಸದಸ್ಯರು ಆಸಕ್ತ ಉದ್ದಿಮೆಪತಿಗಳಿಂದ ಲಂಚ ಪಡೆಯುತ್ತಾರೆ ಎನ್ನುವ ಆರೋಪ ಸಹ ಕೇಳಿ ಬಂದಿದೆ. ಒಟ್ಟಿನಲ್ಲಿ ಲೋಕಸಭೆಯ ಸದಸ್ಯನಾಗಿರುವದು ಅತ್ಯಂತ ಲಾಭದಾಯಕ ಧಂಧೆಯಂತೆ ಭಾಸವಾಗುತ್ತದೆ. ಈ ಧಂಧೆಯಲ್ಲಿಯ ಅತ್ಯಂತ ಆಕರ್ಷಕ ಅಂಶವೆಂದರೆ, ಲೋಕಸಭೆಯಲ್ಲಿ ಪಡೆದ ಲಂಚವು ಅಪರಾಧವಲ್ಲ ಎಂದು ಸರ್ವೋಚ್ಚ ನ್ಯಾಯಾಲಯವೇ ತೀರ್ಪು ಕೊಟ್ಟುಬಿಟ್ಟಿದೆ. (ಸೋರೇನ ಶಿಬು ಮತ್ತು ನರಸಿಂಹರಾವ ಪ್ರಕರಣ.)

ಕಳ್ಳಧಂಧೆ ಮಾಡುವದರಲ್ಲಿ ಹೆಸರು ಮಾಡಿದ ಅನೇಕ ವ್ಯಕ್ತಿಗಳಿದ್ದಾರೆ: ಹಾಜಿ ಮಸ್ತಾನ, ಛೋಟಾ ಶಕೀಲ, ವೀರಪ್ಪನ್ ಇತ್ಯಾದಿ. ಕಾಯದೆಯ ಕೈಯಿಂದ ತಪ್ಪಿಸಿಕೊಳ್ಳುವ ಸಲುವಾಗಿ ಕೆಲವು ಅಪರಾಧಿಗಳು ಭಾರತೀಯ ಅಪರಾಧಿಗಳ ಸ್ವರ್ಗವಾದ ದುಬೈಯಲ್ಲಿ ನೆಲಸಿದ್ದಾರೆ. ಕೆಲವರು ಮುಖಾಮುಖಿಯಲ್ಲಿ ನೆಗೆದು ಹೋಗಿದ್ದಾರೆ. ಲೋಕಸಭೆಯ ಸದಸ್ಯರಿಗೆ ಮಾತ್ರ ಇಂತಹ ಯಾವುದೇ risk ಇಲ್ಲ. ಲೋಕಸಭೆಯಲ್ಲಿ ಘಟಿಸಿದ ಇವರ ಆರ್ಥಿಕ ಅಪರಾಧಗಳು ಭಾರತೀಯ ದಂಡಸಂಹಿತೆಯ ಅಡಿಯಲ್ಲಿ ಗಣನೆಗೆ ಬರುವದಿಲ್ಲ. ಇತರ ಕೆಲವು ಕ್ಷುಲ್ಲಕ ಅಪರಾಧಗಳಿಗಾಗಿ (ಉದಾ: ರೇಪ್, ಕೊಲೆ, ಅಪಹರಣ ಇ.) ಇವರು ಜೇಲಿನಲ್ಲಿ ಇರಬೇಕಾದರೂ ಸಹ, ಅಲ್ಲಿ ಅವರಿಗೆ ಸ್ವರ್ಗಸೌಲಭ್ಯಗಳು ಲಭ್ಯವಿರುತ್ತವೆ. ೨೦೦೪ರ ಲೋಕಸಭೆಯಲ್ಲಿ ೧೨೦ ಸದಸ್ಯರ ಮೇಲೆ ಕ್ರಿಮಿನಲ್ ಪ್ರಕರಣಗಳಿದ್ದವು. ಆದುದರಿಂದ ನಮ್ಮ ಲೋಕಸಭೆಗೆ ‘ಅಪರಾಧಿಸಭಾ’ ಎಂದು ಕರೆದರೆ ತಪ್ಪಾಗಲಿಕ್ಕಿಲ್ಲ.

ಲೋಕಸಭೆಯ ಸದಸ್ಯರಿಗಾಗಿ ರೂ.೮೦ ಸಾವಿರಕ್ಕಿಂತ ಹೆಚ್ಚಿನ ಮಾಸಿಕ ವೇತನವಿರಬೇಕು ಎನ್ನುವದು ಸನ್ಮಾನ್ಯ ಸದಸ್ಯರಾದ ಲಾಲೂ ಪ್ರಸಾದ ಯಾದವರ ಒತ್ತಾಯ. ಯಾಕೆಂದರೆ ಸರಕಾರದ ಕಾರ್ಯದರ್ಶಿಗಳು  ರೂ.೮೦ ಸಾವಿರಕ್ಕಿಂತ ಹೆಚ್ಚಿನ ಮಾಸಿಕ ವೇತನ ಪಡೆಯುತ್ತಾರಂತೆ. ಲೋಕಸಭಾ ಸದಸ್ಯರ ದರ್ಜೆಯು ಸರಕಾರದ ಕಾರ್ಯದರ್ಶಿಗಳ ದರ್ಜೆಗಿಂತ ಹೆಚ್ಚಿನದಾಗಿರುವದರಿಂದ, ಇವರಿಗೆ ಮಾಸಿಕ ರೂ.೮೦ ಸಾವಿರಕ್ಕಿಂತ ಹೆಚ್ಚಿಗೆ ವೇತನ ಬೇಕಂತೆ. ಅಲ್ಲಾ ಸ್ವಾಮಿ, ಸರಕಾರದ ಕಾರ್ಯದರ್ಶಿಗಳು ಭಾರತೀಯ ಆಡಳಿತಾತ್ಮಕ ಸೇವಾ ಪರೀಕ್ಷೆಯಲ್ಲಿ ಉತ್ತೀರ್ಣರಾದಂತಹ ಪ್ರತಿಭಾವಂತರಾಗಿರುತ್ತಾರೆ. ದಯವಿಟ್ಟು ನಿಮ್ಮನ್ನು ಅವರ ಜೊತೆಗೆ ಹೋಲಿಸಿಕೊಳ್ಳಬೇಡಿ. ಲೋಕಸಭಾ ಸದಸ್ಯರಿಗೂ ಸಹ ಒಂದು common entrance test ಇಟ್ಟರೆ ನಿಮ್ಮ ಹೂರಣ ಹೊರಬೀಳುತ್ತದೆ. ಈ ಪರೀಕ್ಷೆಯಲ್ಲಿ ಎಷ್ಟು ಅಭ್ಯರ್ಥಿಗಳು ಪ್ರಾಮಾಣಿಕವಾಗಿ ತೇರ್ಗಡೆ ಹೊಂದುತ್ತಾರೆ ಎನ್ನುವದು ಚರ್ಚಾತ್ಮಕ ವಿಷಯ!

ಆಶೆಬುರುಕತನ ತೋರಿಸುವ ಇಂತಹ ಶಾಸಕರಿಗೆ ನಾವು ಮತ ನೀಡಬೇಕೆ? ವೇತನ ಹೆಚ್ಚಿಸಿಕೊಳ್ಳಲು ಮತ ನೀಡಿದ ಯಾವ ಶಾಸಕನಿಗೂ ಮುಂದಿನ ಚುನಾವಣೆಯಲ್ಲಿ ನಾನು ಮತ ನೀಡಲಾರೆ. ಇಂತಹ ‘ಶಾಸಕ-ತಿರಸ್ಕಾರ’ ಚಳುವಳಿಯು ನಮ್ಮ ದೇಶದಲ್ಲಿ ರೂಪಗೊಳ್ಳಬೇಕು. ಶಾಸಕಾಂಗಕ್ಕೆ ಪರಮೋಚ್ಚ ಅಧಿಕಾರವಿದೆ ಎಂದು ಶಾಸಕರು ಹೇಳುತ್ತಾರೆ. ಪರಮೋಚ್ಚ ಅಧಿಕಾರವಿರುವದು ನಾಗರಿಕರಿಗೆ ಎನ್ನುವದನ್ನು ಪ್ರಜ್ಞಾವಂತ ನಾಗರಿಕರು ತೋರಿಸಿ ಕೊಡಬೇಕು.

ಮಹಾತ್ಮಾ ಗಾಂಧೀಜಿಯವರನ್ನು ೩೦ ಜನೆವರಿ ೧೯೪೮ರಂದು ನಾಥೂರಾಮ ಘೋಡಸೆ ಗುಂಡಿಟ್ಟು ಕೊಂದ ಎಂದು ಹೇಳುತ್ತಾರೆ. ಇದು ತಪ್ಪು ಹೇಳಿಕೆ. ನಮ್ಮ ಶಾಸಕರು ರಾಷ್ಟ್ರಪಿತನನ್ನು ಪ್ರತಿದಿನವೂ ಕೊಲ್ಲುತ್ತಿದ್ದಾರೆ.

ಹೇ ರಾಮ್!

53 comments:

PARAANJAPE K.N. said...

ಸರ್ ಜೀ,

ಸ೦ಸದರಿಗೆ, ಶಾಸಕರಿಗೆ ಸ೦ಬಳದ ಅಗತ್ಯವೇ ಇಲ್ಲ, ಅವರ ಆದಾಯ ತೆರಿಗೆ ಘೋಷಣಾ ಪತ್ರ ಗಮಿಸಿ, ಹೆಚ್ಚಿನವರೆಲ್ಲ ಕೋಟಿಪತಿಗಳು. ಅವರಿಗೆ ಈ ಜುಜುಬಿ ಸ೦ಬಳ ಯಾತಕ್ಕೆ. ಜನಸೇವೆಗೆ ಬ೦ದಿರುವ ಈ ಜನ "ಶೇವೆ" ಗೆ ಇಲಿಯಬಾರದಲ್ಲ, ನಮ್ಮ ಸ೦ಸದರೆಲ್ಲ ಸ೦ಬಳ ತ್ಯಜಿಸಿದರೆ ನಿರಾಶ್ರಿತ ಬಡವರಿಗೆ ಅದೆಷ್ಟು ಮನೆ ಕಟ್ಟಿಸಿ ಕೊಡಬಹುದು? ಸ೦ಬಳ ಮಾತ್ರ ಹೆಚ್ಚಿಸಿ ಎ೦ದು ಹುಯಿಲೆಬ್ಬಿಸುವ ಇವರಲ್ಲಿ ತಮ್ಮ ಜವಾಬ್ದಾರಿಗಳ ಬಗ್ಗೆ accountability ಇದೆಯೇ ? ಸ೦ಸತ್ ಕಲಾಪಗಳಿಗೆ ಗೈರು ಹಾಜರಾಗಿ ಎಲ್ಲೋ ಮಜಾ ಉಡಾಯಿಸುವ ಇವರನ್ನು ಕೇಳುವವರೇ ಇಲ್ಲವಾಗಿದೆಯಲ್ಲ ?

prabhamani nagaraja said...

ಲೇಖನ ಸಕಾಲಿಕವಾಗಿದ್ದು ಚಿ೦ತನ ಯೋಗ್ಯವಾಗಿದೆ. ಧನ್ಯವಾದಗಳು.

ತೇಜಸ್ವಿನಿ ಹೆಗಡೆ said...

"ವೇತನ ಹೆಚ್ಚಿಸಿಕೊಳ್ಳಲು ಮತ ನೀಡಿದ ಯಾವ ಶಾಸಕನಿಗೂ ಮುಂದಿನ ಚುನಾವಣೆಯಲ್ಲಿ ನಾನು ಮತ ನೀಡಲಾರೆ"
ಎಂದಿರುವಿರಿ... ನಿಮ್ಮೊಂದಿಗೆ ನಾನೂ ಸಹ...!

ಹಿಂದೆ ನನ್ನ ಮಗನನ್ನು/ಮಗಳನ್ನು ಡಾಕ್ಟರ್ ಮಾಡುತ್ತೇನೆ... ಇಂಜಿನೀಯರ್ ಮಾಡುತ್ತೇನೆ ಎನ್ನುತ್ತಿದ್ದರು ಕೆಲವು ಹಣ/ಕೀರ್ತಿ ಆಕಾಂಕ್ಷಿ ಹೆತ್ತವರು. ಇನ್ನು ಮುಂದೆ ಅಂತಹವರೆಲ್ಲಾ ಹೇಳುವುದು ಒಂದೇ ನನ್ನ ಮಗುವನ್ನು ಲೋಕಸಭೆಯ ಶಾಸಕನನ್ನಾಗಿಸುತ್ತೇನೆ!

ಶಿವಪ್ರಕಾಶ್ said...

ಬೇಲಿಯೇ ಎದ್ದು ಹೊಲವ ಮೇಯ್ದಂತೆ...
ಇವರಿಗೆ ಹೇಳುವವರು, ಕೇಳುವವರು ಯಾರಿದ್ದಾರೆ....??

ದಿನಕರ ಮೊಗೇರ said...

janasaamaanyana bagge chinte maadade tamma vetanada bagge tale keDisikonDa namma aaLuvavara bagge kanikara ide.... avara bageginta namma bagge ide....

aarisi kaLisida tappige....

ಮನಮುಕ್ತಾ said...

ಕಾಕಾ,
ವಾಸ್ತವದಲ್ಲಿ ನಡೆಯುತ್ತಿರುವ ವಿಚಾರವನ್ನು ತು೦ಬಾ ಚೆನ್ನಾಗಿ ತಿಳಿಸಿದ್ದೀರಿ..
ರಾಜಕಿಯದಲ್ಲಿ ಹೆಚ್ಚು ದುಸ್ವಾರ್ಥಿಗಳೇ ತು೦ಬಿಕೊ೦ಡಿರುವಾಗ ಯಾರಿಗೆ ಓಟು ಹಾಕುವುದು ಯಾರಿಗೆ ಬಿಡುವುದು?ನಾವು ಓಟು ಹಾಕದಿದ್ದಲ್ಲಿ ನಮ್ಮ ಓಟನ್ನು ಬೇರೆ ಯಾರಾದರೂ ತಮಗೆ ಬೇಕಾದವರಿಗೆ ಹಾಕಿಬಿಡುತ್ತಾರೆ.ಅವರಿಗೆ ಯಾರಿಗೂ ನಷ್ಟವೇ ಇಲ್ಲಾ..ಸಮಗ್ರವಾಗಿ ಯಾವುದಾದರು ಒಳ್ಳೆಯ ವ್ಯವಸ್ಥೆ ರೂಪುಗೊ೦ಡರೆ ಮಾತ್ರಾ ಇದಕ್ಕೆಲ್ಲಾ ಕೊನೆ ಇರಬಹುದು.
ಕಾಕಾ, ನಾನು ಅಷ್ಟೊ೦ದು ವಿಚಾರವಾದಿಯೇನೂ ಅಲ್ಲ.ಸುಮ್ಮನೆ
ಬರೆದೆ.ಬರೆದದ್ದು ಸಮರ್ಪಕವಾಗಿದೇಯೋ ಇಲ್ಲವೋ..ತಪ್ಪಿದ್ದರೆ ಕ್ಷಮೆಇರಲಿ.

sunaath said...

ಪರಾಂಜಪೆಯವರೆ,
ನೀವು ಹೇಳುವದು ಸರಿ. ಶಾಸಕರ ಅಕ್ರಮ ಆದಾಯವೆಲ್ಲ ಸಕ್ರಮಗೊಳ್ಳೂತ್ತಿರುವ ಈ ಸಂದರ್ಭದಲ್ಲಿ, ಅವರಿಗೆ ವೇತನವಾದರೂ ಯಾಕೆ ಬೇಕು?

sunaath said...

ಪ್ರಭಾಮಣಿಯವರೆ,
ಬೇವು ಬಿತ್ತಿದ್ದೇವೆ, ಮಾವು ಸಿಗುವದು ಹೇಗೆ?

sunaath said...

ತೇಜಸ್ವಿನಿ,
ಚಳುವಳಿಯ ಪ್ರಾರಂಭ ನಮ್ಮಿಂದಲೇ ಆಗಲಿ.
ನೀವು ಹೇಳಿದಂತೆ ನಮ್ಮ ಮಗುವನ್ನು ಶಾಸಕನನ್ನಾಗಿ ಮಾಡುತ್ತೇನೆ ಎನ್ನುವದೇ ಮಹತ್ವಾಕಾಂಕ್ಷೆಯ ತಂದೆ,ತಾಯಿ
ಹೇಳಬಹುದು!

sunaath said...

ಶಿವಪ್ರಕಾಶ,
ಪ್ರಜೆಗಳೂ ಸಹ ಭ್ರಷ್ಟರಾಗಿದ್ದಾರೆ.
ಇದು ಭ್ರಷ್ಟರಿಂದ ಚುನಾಯಿತರಾದ, ಭ್ರಷ್ಟರಿಗಾಗಿರುವ ಭ್ರಷ್ಟರ ಸರಕಾರ!

sunaath said...

ದಿನಕರ,
ನೀವು ಹೇಳುವದು ಸರಿ.
"ಬಿನ್ನಹಕೆ ಬಾಯಿಲ್ಲವಯ್ಯಾ,
ಎನ್ನಲ್ಲೆ ಇರಲಾಗಿ ಸಕಲ ಅಪರಾಧಗಳು."

sunaath said...

ಮನಮುಕ್ತಾ,
ನೀವು ಬರೆದದ್ದರಲ್ಲಿ ಏನೂ ತಪ್ಪಿಲ್ಲ.
ಅದಕ್ಕೇ ದಾಸರು ಕೇಳಿದ್ದಾರೆ:
"ದಾರಿ ಯಾವುದಯ್ಯಾ ವೈಕುಂಠಕೆ?"

V.R.BHAT said...

' ಏನೂ ಮಾಡಲಾಗದಿದ್ದರೆ ರಾಜಕೀಯವನ್ನಾದರೂ ಮಾಡು' ಎಂದು ಗಾದೆ ಮಾಡಿದರೆ ಬಹಳ ಒಳ್ಳೆಯದು ಅನಿಸುತ್ತಿದೆ, ಸಿಗುವ ಎಲ್ಲಾ ಮೂಲೆಗಳಿಂದಲೂ ಬರಗಿ ಬರಗಿ ತುಂಬಿಕೊಳ್ಳುವ ಈ ಜನ ಎಂಜಲ ಕಾಸಿಗೂ ಕೈಯ್ಯೊಡ್ಡದೇ ಬಿಡುವವರಲ್ಲ, ನಮ್ಮಲ್ಲಿ ಮಲದಮೇಲೆ[ಮ ಇರುವಲ್ಲಿ ಹೇ ಮಾಡಿಕೊಳ್ಳಿ] ಬಿದ್ದ ನಾಣ್ಯವನ್ನೂ ಬಿಡುವ ಜನವಲ್ಲ. ಇಲ್ಲಿನ ರಾಜಕೀಯ ಸದ್ಯಕ್ಕೆ ಸುಧಾರಿಸಲಾರದ್ದು-ಇದು ನಾವು ಹೇಳುತ್ತಲೇ ಬಂದಿರುವ ವಿಷಯ! ಆದರೆ ಎಲ್ಲರೂ ತಾವು ಪ್ರಾಮಾಣಿಕರು ಎನ್ನುತ್ತಾ ಸಿಗುವ ಸಂಬಳವನ್ನು ಯಾರೂ ಬಿಡಲು ತಯಾರಿರುವುದಿಲ್ಲ. ರಾಜ್ಯದಲ್ಲಿ ಯಾರೆಲ್ಲಾ ದಾನಮಾಡಿ ಉತ್ತರ ಕರ್ನಾಟಕದ ನೆರೆಗೆ ನೆರವು ಇತ್ತರೆ ಅದನ್ನೇ ಕತ್ತಲಲ್ಲಿ ಬಸಿದು ಕುಡಿದ ಜನ! ಇದು ಕರ್ನಾಟಕ ಕಂಡ ಎಮ್ಮೆಯ[ಹೆ ತೆಗೆಯಲಾಗಿದೆ] ಪುತ್ರರ ಕಥೆ ! ಗೂಂಡಾ ರಾಜಕೀಯದಲ್ಲಿ ಯಾವ್ಯಾವ ಕಾಗದಪತ್ರಗಳಾಗಲೀ, ರಾಜ್ಯದ ಬೊಕ್ಕಸವಾಗಲೀ ಸಮರ್ಪಕ ಸ್ಥಿತಿಯಲ್ಲಿದೆ ಎಂದು ಹೇಳುವುದು ಕಷ್ಟ, ತಮ್ಮ ಲೇಖನ ಸಕಾಲಿಕ ಮತ್ತು ಸೂಕ್ತ ಕೂಡ, ತಮಗೆ ಧನ್ಯವಾದಗಳು

sunaath said...

ಭಟ್ಟರೆ,
Politics is the last resort of the scoundrel ಎಂದು ಹೇಳುತ್ತಾರೆ. ಭಾರತದಲ್ಲಿ ಈ ಮಾತನ್ನು
first and ultimate resort ಎಂದು ಬದಲಿಸಿಕೊಳ್ಳಬೇಕಷ್ಟೆ!

ಸೀತಾರಾಮ. ಕೆ. / SITARAM.K said...

ತುಂಬಾ ಮಾರ್ಮಿಕ ಮನದಾಳದ ಲೇಖನ. ಈ ಅಕ್ರೋಶ ನನ್ನಲ್ಲೂ ಅಂದು ವೇತನದ ಬಗ್ಗೆ ಗಲಾಟೆ ನಡೆದಾಗ ಬಂದಿತ್ತು. ಅದಕ್ಕೆ ತಾವು ಭಾಷೆ ಕೊಟ್ಟಿದ್ದಿರಿ.
ತುಂಬಾ ತೀಕ್ಷ್ಣವಾಗಿ ಬರೆದರೂ ಇನ್ನೂ ಕಡಿಮೆ ಅನ್ನಿಸುತ್ತಿದೆ.
accountability ಕೊಟ್ಟು ವೇತನ ಹೆಚ್ಚಲ ಮಾಡಬೇಕು!

sunaath said...

ಸೀತಾರಾಮರೆ,
ಎಷ್ಟು ಬರೆದರೂ ಪ್ರಯೋಜನವಿಲ್ಲ.ಬೋರ್ಕಲ್ಲ ಮೇಲೆ ಮಳೆ ಸುರಿದಂತೆ ಆಗುವದಷ್ಟೆ! ವೇತನ ಹೆಚ್ಚಳದ ವಿರುದ್ಧ ‘ನಾಗರಿಕ ಆಂದೋಲನ’ ಆಗಬೇಕು. ಅದರಿಂದ ಪ್ರಯೋಜನವಾದೀತು.

AntharangadaMaathugalu said...

ಕಾಕಾ...
ಎಲ್ಲರು ಭ್ರಷ್ಟರೇ... ಅಭ್ಯರ್ಥಿಗಳ ಆಯ್ಕೆಯಲ್ಲೇ ಭ್ರಷ್ಟತನ... ಕೊಲೆ, ಸುಲಿಗೆ ಮಾಡುವ ರೌಡಿಗಳಿಗೆ ಟಿಕೀಟು... ಇದೇ ಇಂದಿನ ಪರಿಸ್ಥಿತಿ. ನಾಗರಿಕರು ಆಂಧೋಲನಕ್ಕೆ ತೀವ್ರವಾಗಿ ಇಳಿಯುವವರೆಗೂ ಏನೂ ಬದಲಾವಣೆ ಆಗೋ ಹಾಗೆ ಕಾಣೊಲ್ಲ. ನಿಮ್ಮ ಲೇಖನ ನಿಜಕ್ಕೂ ಮಲಗಿರುವ ನಾಗರಿಕರನ್ನು ಎಚ್ಚರಿಸುವಂತಿದೆ.... ಧನ್ಯವಾದಗಳು.

ಶ್ಯಾಮಲ

Badarinath Palavalli said...

thanks for visiting my blog sir.

politics is a dirty game alwa. nice baraha sir. yavaganna free idhaga ondhu phone madi sir 9972570061

face book profile: palavalli badarinath

shridhar said...

ಈ ರಾಜಕೀಯದಲ್ಲಿ ಇರುವಷ್ಟು ಹೊಲಸು ..ಕೊಚ್ಚೆಯಲ್ಲೂ ಇಲ್ಲವೆನಿಸುತ್ತದೆ ...
ಲೋಕಸಭೆಯಲ್ಲಿ ಇವರುಗಳು ಮೇಜು ..ಕುರ್ಚಿ ಎತ್ತಿ ಹೊಡೆದಾಡುವುದನ್ನು ನೋಡಿದರೆ ಎಂತಾ ಅಭ್ಯರ್ಥಿಗಳಪ್ಪಾ
ಇವರು ಅನಿಸಿ ಬಿಡುತ್ತದೆ. ನಿಜ ಇವರುಗಳಿಗೆಲ್ಲ ಒಂದು CET exam ಇಡಬೇಕು .. ಆಗ ಇವರ ಬಣ್ಣ ಬಯಲಾಗುತ್ತದೆ.
ಅಥವಾ ಅಲ್ಲೂ ಲಂಚಮಯ ಮಾಡಿಬಿಡುತ್ತಾರೋ ಗೊತ್ತಿಲ್ಲ ...

SATISH N GOWDA said...

ಬೇಲಿಯೇ ಎದ್ದು ಹೊಲವ ಮೇಯ್ದಂತೆ...
ಇವರಿಗೆ ಹೇಳುವವರು, ಕೇಳುವವರು ಯಾರಿದ್ದಾರೆ....??
ಬಿಡುವು ಮಾಡಿಕೊಂಡು ಒಮ್ಮೆ ನನ್ನವಳಲೋಕಕ್ಕೆ ಬನ್ನಿ ನಿಮಗೆ ತುಂಬು ಹೃದಯದ ಸ್ವಾಗತ ನೀಡುತ್ತೇನೆ

SATISH N GOWDA
ನನ್ನ ಸ್ನೇಹಲೋಕ (orkut)
satishgowdagowda@gmail.com
nannavalaloka (blog)
http://nannavalaloa.blogspot.com

ಶ್ರೀನಿವಾಸ ಮ. ಕಟ್ಟಿ said...

ಸ್ವಾಮೀ, ಇದೇ ನಮ್ಮ ಪ್ರಜಾಪ್ರಭುತ್ವ! ೪-೫ ಪಟ್ಟು ಸಂಬಳ ಎಂದಾದರೂ, ಯಾವ ಕೆಲಸದವನಿಗೂ, ಸರಕಾರೀ ನವಕರಿಯೇ ಇರಲಿ, ಮತ್ಯಾವದೇ ನವಕರಿ ಇರಲಿ ಹೆಚ್ಚಿದ್ದು ಕೇಳಿದ್ದೀರಾ ? ಅಷ್ಟಕ್ಕೂ ನಮ್ಮ ಜನ-ಪ್ರತಿನಿಧಿಗಳು ಮಾಡುವ ಮಹಾ ಕಾರ್ಯವಾದರೂ ಏನು ? ೨೦% ಸಂಸದರು ಸಂಸತ್ತಿನ ೮೦% ಕಲಾಪದ ಪಾಲುಗಾರರು. ಉಳಿದ ೨೦% ಕಲಾಪಕ್ಕೆ ೫% ಸಂಸದರು ಪಾಲುಗಾರರು. ೭೫% ಸಂಸದರು ಸಂಬಳಕ್ಕುಂಟು, ಕೆಲಸಕ್ಕಿಲ್ಲ.

ಗಾಂಧಿಯವರ ಬಗ್ಗೆ ಬರೆಯುವದು ಬೇಡ. ನಮ್ಮ ಅಭಿಪ್ರಾಯಗಳು ಹೊಂದಿಕೆಯಾಗುವದಿಲ್ಲ. ಪಂಚಭೂತಗಳಿಂದಾದ ದೇಹವುಳ್ಳ ಯಾವ ಮನುಷ್ಯನೂ ನನ್ನ ದೃಷ್ಟಿಯಲ್ಲಿ ಅಪ್ರಶ್ನಾರ್ಹ ಆಗುವದಿಲ್ಲ. ಗಾಂಧೀಯವರ ಎಲ್ಲ ರಾಜಕೀಯ ನಡೆಗಳು ಪ್ರಾಮಾಣಿಕವಾಗಿದ್ದವೆಂದು ನನಗೆ ಅನಿಸುವದಿಲ್ಲ. ಕ್ಷಮೆ ಇರಲಿ.

sunaath said...

ಶ್ಯಾಮಲಾ,
ನಮ್ಮ ರಾಜಕೀಯವು ಭ್ರಷ್ಟರ ಹಾಗು ಅಪರಾಧಿಗಳ ರಾಜಕೀಯವಾಗಿದೆ. ಇದನ್ನು ನಿವಾರಿಸಲು ದೊಡ್ಡದಾದ ನಾಗರಿಕ ಆಂದೋಲನವು ಇಂದಿನ ಅವಶ್ಯಕತೆ. ಅಂತಹ ನಾಯಕನೊಬ್ಬ ನಮಗೆ ದೊರೆತಾನೆಯೆ?

sunaath said...

ಬದರಿನಾಥರೆ,
Yes, politics is a dirty game!

sunaath said...

ಶ್ರೀಧರ,
ಇವರು ಕಾಲಿಟ್ಟಲ್ಲೆಲ್ಲ ಕೊಳೆಯನ್ನು ನಿರ್ಮಿಸುತ್ತಾರೆ.

sunaath said...

ಸತೀಶ,
ನಿಮ್ಮ ‘ನನ್ನವಳಲೋಕ’ blog ನೋಡಿದೆ. ತುಂಬ ಭಾವಜೀವಿ ನೀವು ಎನಿಸುತ್ತದೆ.

sunaath said...

ಕಟ್ಟಿಯವರೆ,
ಇದೇ ನಮ್ಮ ಮಜಾಪ್ರಭುತ್ವ! ನಾಗರಿಕ ಆಂದೋಲನ ಈಗಿನ ತುರ್ತು ಅವಶ್ಯಕತೆಯಾಗಿದೆ.

umesh desai said...

ಕಾಕಾ ಸಮಯೋಚಿತ ಲೇಖನ ಸರಕಾರ್ ಅಸ್ತು ಅನ್ನುವುದಿಲ್ಲ ಅಂತ ತಿಳದಿದ್ದೆ ಲಾಲೂ ಆಡಿದ ಮಾತು ಕೇಳಿ ನಗಬೇಕೋ ಅಳಬೇಕೋ ಗೊತ್ತಾಗಲಿಲ್ಲ..! ಯಾಕಡೆ ಹೋಗೂದು ತಿಳೀವಲ್ತು ಎಲ್ಲಿ ನೋಡಿದ್ರೂ ಕತ್ತಲೀನ ಅದ

Subrahmanya said...

ಕೆಲವು ವೈಯಕ್ತಿಕ ಕಾರ್ಯಗಳಿಂದ ಸಲ್ಲಾಪಕ್ಕೆ ಬರಲು ಆಗಿರಲಿಲ್ಲ.

"ಇದು ನಿನ್ನದೇ ಮನೆ..." ಯನ್ನು ಓದಿದೆ. ಮೂಲ ಲೇಖಕಿ ಮತ್ತು ಭಾವನುವಾದ ಮಾಡಿದವರಿಗೆ ನಮನಗಳು. ಇಲ್ಲಿ ಕೊಟ್ಟ ನಿಮಗೂ.

ಹೇ ರಾಮ್,

ಇಂದಿನ ಪತ್ರಿಕೆಯಲ್ಲಿ ನಮ್ಮ ಕರ್ನಾಟಕ ಸರಕಾರದ ಶಾಸಕರೂ ತಮ್ಮ ವೇತನವನ್ನು ಹೆಚ್ಚಿಸುವಂತೆ ಆಗ್ರಹಿಸಿದ್ದಾರೆ !. ಸಂತೋಷವೆಂದರೆ ಈ ವಿಷಯದಲ್ಲಿ ಮೂರು ಪ್ರಮುಖ ಪಕ್ಷಗಳು ಒಗ್ಗಟ್ಟನ್ನು ಪ್ರದರ್ಶಿಸಿರುವುದು !. ಎಂತಹ ವಿಷಯಗಳಿಗೆ ನಮ್ಮ ಶಾಸಕರು ಒಗ್ಗಟ್ಟಾಗುತ್ತಾರೆ ನೋಡಿ. ರಾಮಾವತಾರವಾದರೂ, ಆತನನ್ನೂ ಸಪಾಟು ಮಾಡುತ್ತಾರೆ ನಮ್ಮ ನಾಯಕರು.

ಸ್ವತಂತ್ರ ಕೊಡುವ ಮುನ್ನ ವೈಸ್ರಾಯ್ ಹೇಳಿದ್ದ ಮಾತು ನಿಜವಾಗುತ್ತಿದೆ(ಆಗಿದೆ). " ಈ ದೇಶವಿನ್ನು ಪುಂಡರ ಪಾಲಾಗುತ್ತದೆ " !.

sunaath said...

ದೇಸಾಯರ,
ಜಯಪ್ರಕಾಶ ನಾರಾಯಣರ ಚಳುವಳಿಯ ಮೂಲಕ ಮೇಲೆ ಬಂದಂತಹ ಈ ಲಾಲೂಪ್ರಸಾದ ಯಾದವ ಮೊದಲಾದವರು, ಇಂದು ಎಷ್ಟು ಹೊಲಸು ರಾಜಕಾರಣ ಮಾಡ್ತಾರ ಅಂತ ನೋಡಿದರ ಆಶ್ಚರ್ಯ ಆಗತದ. ಎಲ್ಲಾ ರಾಜಕಾರಣಿಗಳು ‘ಸೋಂಗಾಡ್ಯಾ’ ಆಗ್ಯಾರ.

sunaath said...

ಪುತ್ತರ್,
‘ಇದು ನಿನ್ನದೇ ಮನೆ’ಯ ಅನುವಾದಕಿಗೆ ನಿಮ್ಮ ಧನ್ಯವಾದ ತಿಳಿಸುವೆ.
ಎಲ್ಲಾ ಕಳ್ಳರೂ ಶಾಸನಸಭೆಗಳಲ್ಲಿ ಒಂದಾಗಿದ್ದಾರೆ !

ಮನಸಿನಮನೆಯವನು said...

ಹೌದೌದು..
'ಹೇ ರಾಮ್.. Thisi is INDIAA.....

sunaath said...

ಬೆಳಕಿನ ಮನೆಯವರೆ,
ಧನ್ಯವಾದಗಳು.

ಪ್ರ. ಭೀ.ಸತ್ಯಪ್ಪ said...

ಯಾವದೇ ನಾಗರಿಕ ಅಂದೋಲನ, ವ್ಯವ್ಯಸ್ಥೆಯಾಗಿ ಮಾರ್ಪಡುವದು. ವ್ಯವ್ಯಸ್ಥೆ ಕೆಲವು ಕಾಲದ ನಂತರ ಕೊಳೆಯಲು ಆರಂಭಿಸುವದು.

sunaath said...

ಸತ್ಯಪ್ಪನವರೆ,
ಸತ್ಯವನ್ನೇ ಹೇಳಿದ್ದೀರಿ. ಜಯಪ್ರಕಾಶ ನಾರಾಯಣರ ಆಂದೋಲನವು ಅವರ ಶಿಷ್ಯರ ಕೈಯಲ್ಲಿ ವ್ಯವಸ್ಥೆಯಾಗಿ ಮಾರ್ಪಟ್ಟು ಕೊಳೆಯುತ್ತಿರುವದನ್ನು ನಾವು ನೋಡುತ್ತಿದ್ದೇವೆ.ಅದಾಗ್ಯೂ ಕೊಳೆಯುತ್ತಿರುವ ವ್ಯವಸ್ಥೆಯನ್ನು ಪ್ರತಿಸಲವೂ ವಿರೋಧಿಸಲೇ ಬೇಕಾಗುತ್ತದೆ.

shivu.k said...

ಸುನಾಥ್ ಸರ್,

ಬಿಡುವಿಲ್ಲದ ಕಾರ್ಯಕ್ರಮದಲ್ಲಿ ನಿಮ್ಮ ಬ್ಲಾಗಿಗೆ ನಾನು ಸುಮ್ಮನೇ ಬರಲಾರೆ. ಏಕೆಂದರೆ ನಿಮ್ಮ ಬರಹವನ್ನು ಓದಿ ಅರ್ಥಮಾಡಿಕೊಳ್ಳಲು ಕೊಂಚ ಸಮಯ ಬೇಕೇ ಬೇಕು. ಅದನ್ನು ಸಮಯ ಒದಗುವವರೆಗೆ ನಾನು ನಿದಾನ. ಈಗ ಎಲ್ಲಾ ಓದಿದೆ. ನಿಜಕ್ಕೂ ಒಂದು ಅದ್ಭುತ ಲೇಖನ. ಚಿಂತನೆಗೆ ಹಚ್ಚುವಂತದ್ದು.

ಅಪ್ಪ-ಅಮ್ಮ(Appa-Amma) said...

ಸುನಾಥ್ ಕಾಕಾ,

ಪಾಪ-ಪುಣ್ಯ ಎಲ್ಲದಕ್ಕೂ ಎಳ್ಳು-ನೀರು ಬಿಟ್ಟವರಷ್ಟೇ ರಾಜಕೀಯಕ್ಕೆ ಬರುವದೆಂದು ಗೊತ್ತಿರುವ ವಿಷಯವೇ.

ಇದರ ಜೊತೆ ಈಗಿರುವ ಸಂಸದರಲ್ಲಿ ಬಹುತೇಕರು ಆಗಲೇ ಕೋಟ್ಯಾಧಿಪತಿಗಳಾಗಿದ್ದವರು. ತಮ್ಮ ವೈಯುಕ್ತಿಕ ಕಾರ್ಯಸಾಧನೆಗೆ ಹಣಸುರಿದು ಬಂದವರು.

ಇವರೆಲ್ಲರಿಂದ ಎನು ನಿರೀಕ್ಷಿಸಬಹುದು ?

Ask what you did for your country ಎಂದು ಕೇಳುವುದರಲ್ಲಿ ಏನಾದರೂ ಬೆಲೆಯಿದೆಯೇ ?

sunaath said...

ಶಿವು,
ಅವಸರವಿಲ್ಲ! ಸಾವಕಾಶವಾಗಿ ಓದಿ!

sunaath said...

ಅಪ್ಪ-ಅಮ್ಮ,
ಶಾಸಕರಿಗೆ ನಾವು ಕೇಳಬೇಕಾದದ್ದು ಬೇರೆಯೇ ಇದೆ:"Ask how you have ruined your country!"

ಸಾಗರಿ.. said...

ಒಂದುರೀತಿಯಲ್ಲಿ ಸರ್ಕಾರದಿಂದ ಮಾನ್ಯತೆ ಪಡೆದ ಕಳ್ಳ ದಂಧೆ ಎನ್ನಬಹುದೇನೋ ರಾಜಕೀಯ ವೃತ್ತಿಗೆ. ಅಧಿಕೃತವಾದ ದಂಧೆ. ಕಾಕಾ ನಮ್ಮ ಹಣವೆಲ್ಲ ಅವರ ಗುಡಾಣದಲ್ಲಿಯೇ ಇದೆ.. :-(
ತಮ್ಮ ಹಿಂದಿನ ಎರಡು ಪೋಸ್ಟಗಳನ್ನು ಇನ್ನೂ ಓದಿಯಾಗಿಲ್ಲ ನನಗೆ. ಓದಲೇ ಬೇಕಿದೆ ಅರ್ಜೆಂಟ್.. ಒಂದನ್ನೂ ಮಿಸ್ ಮಾಡಿಕೊಳ್ಳಲು ನಾನು ತಯಾರಿಲ್ಲ.

ಅನಿಕೇತನ ಸುನಿಲ್ said...

ಸತ್ಯವಾದ ಮಾತು.....
ಹೇಯ್ ರಾಮ್.....

ಯಾಕೋ ಏನೋ ಭರವಸೆಗಳೇ ಉಳೀತಿಲ್ಲ ದೇಶದ ಮುಂದಿನ ದಿನಗಳ ಬಗ್ಗೆ........;(

sunaath said...

ಸಾಗರಿ,
ಇದೆಲ್ಲಾ ಅಕ್ರಮ-ಸಕ್ರಮ ಧಂಧೆ!

sunaath said...

ಸುನೀಲರೆ,
ದೇಶದ ಭವಿಷ್ಯ ನಿಜವಾಗಿಯೂ ಕಳವಳಕಾರಿಯಾಗಿದೆ.

ಸಾಗರದಾಚೆಯ ಇಂಚರ said...

ದೇಶ ಎತ್ತ ಸಾಗುತ್ತಿದೆ ಹೇಳುವುದು ಕಷ್ಟ

ಇದು ಸುಧಾರಣೆಯೇ?

ವಿನಾಶವೇ?

sunaath said...

ಗುರುಮೂರ್ತಿಯವರೆ,
ದೇಶದ ಆಂತರಿಕ ಹಾಗು ಬಾಹ್ಯ ಸ್ಥಿತಿ ಗತಿಗಳನ್ನು ಗಮನಿಸಿದಾಗ
ಮತ್ತು ಇವ್ಯಾವುದರ ಪರಿವೆಯೇ ಇಲ್ಲದ ಸ್ವಾರ್ಥಿ (ದು:)ಶಾಸಕರನ್ನು ನೋಡಿದಾಗ, ದೇಶದ ಭವಿಷ್ಯದ ಬಗೆಗೆ ಕಳವಳವಾಗುತ್ತದೆ.

Badarinath Palavalli said...

thanks for visiting my blog sir

Prasad Shetty said...

ಮಹಾತ್ಮರ ಮಾತ್ರವಲ್ಲ, ದೇಶದಲ್ಲಿನ ಜನತೆಯ ಹಗಲು ದರೋಡೆ, ಅದರಲ್ಲೂ tax ಕಟ್ಟುವವರ ಹಗಲು ದರೋಡೆಯಾಗ್ತ ಇದೆ.

sunaath said...

ಪ್ರಸಾದ,
ಹಗಲುದರೋಡೆ ಎನ್ನುವದೇ ಸರಿಯಾದ ಪದ.
ಆದರೆ, ಈ ಬಡ ಭಾರತೀಯನನ್ನು ಎಲ್ಲಿಯವರೆಗೆ ದರೋಡೆ ಮಾಡಿಯಾರು?

Ittigecement said...

ಸುನಾಥ ಸರ್..

ಅವರು ಜನರ ಹಣ ನುಂಗುವದಲ್ಲದೇ..
ಈ ರೀತಿ ವೇತನವನ್ನೂ ಪಡೆಯುವದು ದೊಡ್ಡ ಮೋಸ. !

ಸರ್ ...
ಇಲ್ಲಿ ನಾವು ಧನಾತ್ಮಕವಾಗಿ ಯೋಚಿಸಿದರೇ ಹೇಗೆ?

ಈಗಿನ ಪರಿಸ್ಥಿತಿಯಲ್ಲಿ ...
ನಿಜಕ್ಕೂ ಒಬ್ಬ ಪ್ರಾಮಾಣಿಕ ..
ಲಂಚತೆಗೆದುಕೊಳ್ಳದೆ ಒಬ್ಬ ಶಾಸಕ ಆರಿಸಿ ಹೋದರೆ..
ಉಳಿದ ಲಂಚಗೂಳಿ ಎಂಪಿಗಳ ಹಾಗೆ ಓಡಾಡಲು..
ಮತ್ತು ಜನರ ಬಳಿ ಹೋಗಲು ...ಇತ್ಯಾದಿ ...
ಪ್ರಾಮಾಣಿಕವಾಗಿರಲು ಇದು ಸಹಾಯವಾಗ ಬಹುದಲ್ಲವೆ?

ಅನಧಿಕೃತವಾಗಿ ನುಂಗುವದಕ್ಕಿಂತ ಒಂದಷ್ಟು ಲೆಕ್ಕ ಇಟ್ಟು ತೆಗೆದುಕೊಳ್ಳುವ ವಿಚಾರ ಬಂದಿರ ಬಹುದಾ?

ನುಂಗಣ್ಣರು ಎಂದಿಗೂ ನುಂಗಣ್ಣರೇ..
ಅದರಲ್ಲಿ ಸಂಶಯ ಬೇಡ..
ನುಂಗುವ ಪ್ರಮಾಣ ಕಡಿಮೆ ಆಗಲೆಂದು ಹಾರೈಸೋಣ..

ಸಕಾಲಿಕ ಲೇಖನಕ್ಕೆ ಅಭಿನಂದನೆಗಳು...

Harisha - ಹರೀಶ said...

ಚುನಾವಣೆಯಲ್ಲಿ ಎಲ್ಲ ಅಭ್ಯರ್ಥಿಗಳನ್ನೂ ನಿರಾಕರಿಸುವ ಅಧಿಕಾರ ಮತದಾರರಿಗೆ ಸಿಗುವವರೆಗೂ ಮತ್ತು ಮತದಾರರೆಲ್ಲರಿಗೂ ಬುದ್ಧಿ ಬರುವವರೆಗೂ "ಹೇ ರಾಮ್" ಎಂದು ಹೇಳುತ್ತಲೇ ಇರಬೇಕು...

Ashok.V.Shetty, Kodlady said...

Raajakeeya holasu endu ide kaaranakke heluvudallave, Modalu prakeeyaru nammannu looti maadidaru, iga nammavare nammannu lloti maadutiddare... sakaalika lekhana..

ಕಂಡಿದ್ದರು ಗಾಂಧೀಜಿ ರಾಮರಾಜ್ಯದ ಕನಸು
ರಾಜಕಾರಣಿಗಳು ಮಾಡಿದರು ದೇಶವನ್ನೇ ಹೊಲಸು !!!!!

sunaath said...

ಪ್ರಕಾಶ,
ಹುಲಿಗೆ ರಕ್ತದ ರುಚಿ ಇದ್ದಂತೆ, ಮನುಷ್ಯರಿಗೆ ರೊಕ್ಕದ ರುಚಿ. ಅಂದ ಮೇಲೆ ದುಡ್ಡು ಅಕ್ರಮವಾಗಿಯೇ ಬರಲಿ, ಸಕ್ರಮವಾಗಿಯೇ ಬರಲಿ, ಒಟ್ಟಿನಲ್ಲಿ ಬರುತ್ತಿರಬೇಕು!

sunaath said...

ಹರೀಶ,
ಚುನಾವಣೆಯಲ್ಲಿ ಎಲ್ಲ ಅಭ್ಯರ್ಥಿಗಳನ್ನು ತಿರಸ್ಕರಿಸುವ ಹಕ್ಕು ಬಂದುಬಿಟ್ಟರೆ, ಯಾವ ಅಭ್ಯರ್ಥಿಯೂ ಗೆಲ್ಲಲಿಕ್ಕಿಲ್ಲ! ಇದು ಒಳ್ಳೆಯ ಉಪಾಯ!

sunaath said...

ಅಶೋಕ,
ನಿಮ್ಮ ಚುಟುಕಿನಲ್ಲಿಯೇ ದೇಶದ ಸ್ಥಿತಿ ಅಡಕವಾಗಿದೆ!