Friday, June 20, 2008

I accuse

ಕನ್ನಡ ಬರಹದಲ್ಲಿ ನುಸುಳಿರುವ ಭಾಷಾದೋಷಗಳನ್ನು ಪರಿಶೀಲಿಸುತ್ತಿರುವಾಗಲೆ, ಶ್ರೀ ಶಂಕರ ಭಟ್ಟರ “ಕನ್ನಡ ಬರಹವನ್ನು ಸರಿಪಡಿಸೋಣ” ಕೃತಿಯ ಪ್ರಸ್ತಾವನೆ ಬಂದುದರಿಂದ, ನಮ್ಮೆಲ್ಲರ ಚರ್ಚೆ ಆ ದಿಕ್ಕಿಗೆ ಹೊರಳಿದೆ.

ಈ ಕೃತಿಯಲ್ಲಿ ಶ್ರೀ ಶಂಕರ ಭಟ್ಟರು ಎರಡು ಕ್ರಾಂತಿಗಳ ಬಗೆಗೆ ಪ್ರಸ್ತಾಪಿಸಿದ್ದಾರೆ:
೧) ಅಕ್ಷರಕ್ರಾಂತಿ
೨) ಪದಕ್ರಾಂತಿ

ಶ್ರೀ ಶಂಕರ ಭಟ್ಟರ ಕ್ರಾಂತಿಗೆ ಪ್ರೇರಣೆ, ಅವರೇ ಹೇಳುವ ಪ್ರಕಾರ: “ಕೆಳವರ್ಗದ ಮೇಲಿನ ಕಳಕಳಿ”. ಈ ಘೋಷಣೆಯ ಸತ್ಯಾಸತ್ಯತೆಯನ್ನು ಪರೀಕ್ಷಿಸುವದು ಇದೀಗ ನಮ್ಮ ಮುಂದಿರುವ ಕಾರ್ಯ.

ರಾಷ್ಟ್ರಕೂಟ ಚಕ್ರವರ್ತಿ ನೃಪತುಂಗನು ಕನ್ನಡಿಗರ ಬಗೆಗೆ ಒಕ್ಕಣಿಸಿದ ಮೆಚ್ಚುಗೆಯ ಮಾತುಗಳು ಮಾಧ್ಯಮಿಕ ಶಿಕ್ಷಣ ಪಡೆದ ಪ್ರತಿಯೊಬ್ಬ ಕನ್ನಡಿಗನಿಗೂ ಗೊತ್ತಿರುವವೇ:
ಕನ್ನಡಿಗರು “ಕುರಿತೋದುದೆಯುಮ್ ಕಾವ್ಯಪ್ರಯೋಗಪರಿಣತ ಮತಿಗಳ್….”

ಈ “ಕುರಿತೋದುದೆಯಮ್” ಪದದ ಅರ್ಥವೇನು?
ನೃಪತುಂಗ ಚಕ್ರವರ್ತಿಯ ಕಾಲದಲ್ಲಿ ‘universal formal education’ ಎನ್ನುವದು ಇರಲಿಲ್ಲವಷ್ಟೆ?
ಕುಲವೃತ್ತಿಯ ಮೇರೆಗೆ, ಹುಡುಗರು ತಮ್ಮ ಅಜ್ಜ, ಅಪ್ಪಂದಿರ ಕೈಯಲ್ಲೆ apprentices ಆಗಿ, heredity knowledgeಅನ್ನು ಪಡೆಯುತ್ತಿದ್ದರಷ್ಟೆ? ಹೆಣ್ಣು ಮಕ್ಕಳಿಗಂತೂ ಶಿಕ್ಷಣವೆಂದರೆ ಮನೆಗೆಲಸದ ಶಿಕ್ಷಣವಷ್ಟೆ ಆಗಿತ್ತು.

ಇಷ್ಟಾದರೂ ಸಹ ಜಾನಪದ ಸಾಹಿತ್ಯ ಎಂತಹ ಉಚ್ಚಮಟ್ಟದಲ್ಲಿ ಇತ್ತು ಎನ್ನುವದು ನಮಗೆಲ್ಲರಿಗೂ ಗೊತ್ತಿದ್ದ ವಿಷಯವೇ ಆಗಿದೆ. ಹೆಣ್ಣುಮಕ್ಕಳ ಕುಟ್ಟುವ ಹಾಡುಗಳು, ಬೀಸುವ ಹಾಡುಗಳು ಇವುಗಳ ಬಗೆಗಂತೂ ಹೇಳುವದೇ ಬೇಡ. ಇಂತಹ ಒಂದು ತ್ರಿಪದಿಯ ಒಂದು ಸಾಲನ್ನು ಇಲ್ಲಿ ಉದ್ಧರಿಸುತ್ತೇನೆ:
“…ಮಗ ನಿನ್ನ ಹಡೆವಾಗ ಮುಗಿಲಿಗೇರ್ಯಾವ ಜೀವ…”.

ಹೆಣ್ಣು ಮಗಳು ತನ್ನ ಕೂಸನ್ನು ಹೆರುವ ಸಮಯದಲ್ಲಿ ಅವಳು ಅನುಭವಿಸುವ ನೋವು ಹಾಗು ಕೂಸು ಹುಟ್ಟಿದ ತಕ್ಷಣ ಅವಳಿಗಾಗುವ ಆನಂದ –the Agony and Ecstacy—ಈ ಎರಡೂ ಭಾವಗಳು “ಮುಗಿಲಿಗೇರ್ಯಾವ ಜೀವ” ಎನ್ನುವ ಒಂದೇ ಸಾಲಿನಲ್ಲಿ ಅಡಕವಾಗಿವೆ.
ಇಂತಹ ಸಾಲು ಯಾವ classical literatureನಲ್ಲಿ ಸಿಕ್ಕೀತು?
ಇಂತಹ ಸಾಮಾನ್ಯ ಕನ್ನಡಿಗರನ್ನು ಕುರಿತೇ ಚಕ್ರವರ್ತಿ-ಕವಿ ಹೇಳಿದ ಮಾತುಗಳಿವು:
ಕುರಿತೋದುದೆಯುಮ್ ಕಾವ್ಯಪ್ರಯೋಗಪರಿಣತ ಮತಿಗಳ್….”

ಸರ್ವಜ್ಞ ಕವಿ ತನ್ನನ್ನೇ ಕುರಿತು ತನ್ನ ಒಂದು ವಚನದಲ್ಲಿ ಹೀಗೆ ಹೇಳಿದ್ದಾನೆ:
“ಸರ್ವಜ್ಞನೆಂಬುವನು ಗರ್ವದಿಂದಾದವನೆ?
ಸರ್ವರೊಳಗೊಂದೊಂದು ನುಡಿಗಲಿತು ವಿದ್ಯೆಯಾ
ಪರ್ವತವೆ ಆದ ಸರ್ವಜ್ಞ”.

ಸರ್ವಜ್ಞನಿಗೂ formal schooling ಇರಲಿಲ್ಲ. ಆದರೆ ಅವನು ವಿದ್ಯೆಯ ಪರ್ವತವೆ ಆಗಿದ್ದ.

ಇಂಥವರ ಬಗೆಗೆ ನಮ್ಮ ಶಂಕರ ಭಟ್ಟರ ಅಭಿಪ್ರಾಯವೇನು? ಅವರ ಪುಸ್ತಕದ ‘ಮುನ್ನೋಟ’ದ ಸಾರಾಂಶ ಹೀಗಿದೆ:-

“ಜನಸಾಮಾನ್ಯರು ಕೆಳವರ್ಗದವರು.
ಮೇಲ್ವರ್ಗದವರು ಇವರನ್ನು ಶೋಷಿಸುತ್ತಿದ್ದಾರೆ. ಯಾಕೆಂದರೆ, ಮೇಲ್ವರ್ಗದವರು ಕನ್ನಡದಲ್ಲಿರುವ ೫೦ ಅಕ್ಷರಗಳನ್ನು ಸುಲಭವಾಗಿ ಕಲಿಯಬಲ್ಲರು; ಆದರೆ ಕೆಳವರ್ಗದವರಿಗೆ ೫೦ ಅಕ್ಷರಗಳನ್ನು mastery ಮಾಡುವದು ಕಠಿಣವಾಗುವದರಿಂದ, ಅದರಲ್ಲಿಯ ೧೭ ಅಕ್ಷರಗಳಿಗೆ ಕತ್ತರಿ ಹಾಕೋಣ. ಕನ್ನಡ ಸುಲಭವಾಗುತ್ತದೆ. ಕೆಳವರ್ಗದವರ ಶೋಷಣೆ ತಪ್ಪುತ್ತದೆ!”

ವಾಹ್, ಭಟ್ಟರೆ! ಕನ್ನಡದ ಲಿಪಿಯನ್ನು ಕತ್ತರಿಸಲಿಕ್ಕೆ ನೀವು ಬೇರಾವದೊ ತಾಂತ್ರಿಕ ಕಾರಣಗಳನ್ನು ತೋರಿಸಿದ್ದರೆ,ಒಪ್ಪಿಕೊಳ್ಳಬಹುದಾಗಿತ್ತು. ಆದರೆ, ನೀವು ಬ್ರಿಟಿಶರ ಹಳೆಯ ‘Devide and Rule policy’ಯನ್ನು ಉಪಯೋಗಿಸಲು ಪ್ರಯತ್ನಿಸುತ್ತಿದ್ದೀರಿ, ಅಲ್ಲವೆ? ಕೆಳವರ್ಗ, ಮೇಲ್ವರ್ಗ ಹಾಗು ಶೋಷಣೆ ಎನ್ನುವ ಪದಗಳನ್ನು ಉಪಯೋಗಿಸಿ blackmailಗೆ ಪ್ರಯತ್ನಿಸುತ್ತಿದ್ದೀರಾ?
ಈ ಕತ್ತರಿಪ್ರಯೋಗಕ್ಕೆ ನಿಮಗಿರುವ role-model ಯಾವುದು?
ತಮಿಳು, of course!

ಶ್ರೀ ಶಂಕರ ಭಟ್ಟರು ಕೊಡುವ ಈ ಕಾರಣವು ಸರಿ ಎನ್ನಿಸುವದೆ? ನನಗಂತೂ ಇದು ಹಸಿ ಮೋಸ ಎನಿಸುತ್ತಿದೆ.
Shankar Bhat, I accuse you of hypocrisy!

ಇದಷ್ಟೇ ಅಲ್ಲ, ಇದರಲ್ಲಿ ದುರುದ್ದೇಶವೇನಾದರೂ ಅಡಗಿರಬಹುದೆ?
ಈಗ ನೋಡಿ, ಕನ್ನಡದ ಪದಗಳಿಂದ ಮಹಾಪ್ರಾಣವನ್ನು ತೆಗೆದುಹಾಕಬೇಕೆನ್ನುವ ಭಟ್ಟರ policyಯನ್ನು ಕರ್ನಾಟಕ ಸರಕಾರದವರು ಪಾಲಿಸಿದರು ಅಂತ ಇಟ್ಟುಕೊಳ್ಳಿ.
ಆಗ ಏನಾಗುತ್ತೆ?

ಕನ್ನಡಿಗರ ಉಚ್ಚಾರದಲ್ಲಿ ಮಹಾಪ್ರಾಣ ಮರೆಯಾಗಿ ಬಿಡುತ್ತದೆ. ಅಲ್ಪಪ್ರಾಣ ಇವರಿಗೆ ಸ್ವಾಭಾವಿಕವಾಗಿ ಬಿಡುತ್ತದೆ. ಈ tendencyಯು ಕನ್ನಡಿಗರ ಇಂಗ್ಲಿಶ್ ಉಚ್ಚಾರದಲ್ಲೂ ಸೇರಿಕೊಳ್ಳುತ್ತದೆ. (ಈಗ ತಮಿಳರು, ಮರಾಠಿಗರು etc. ತಮ್ಮದೇ strange English pronunciation ಮಾಡುವದಿಲ್ಲವೇ?—ಹಾಗೆ).

ಕರ್ನಾಟಕದಿಂದ ಪರದೇಶಗಳಿಗೆ ಹೋದ ಅನೇಕ ಕನ್ನಡಿಗರಿದ್ದಾರೆ. Call centreಗಳಲ್ಲಿ ಕೆಲಸ ಮಾಡುವ ಅನೇಕ ಕನ್ನಡಿಗರಿದ್ದಾರೆ. ಇವರ ಇಂಗ್ಲಿಶ್ ಉಚ್ಚಾರದಿಂದ ಮಹಾಪ್ರಾಣ ಮರೆಯಾಯಿತೆನ್ನಿ.
ಆಗ ಕನ್ನಡಿಗರಾದ ಒಬ್ಬ ಕ್ರಿಕೆಟ್ ಅಂಪೈರ್ ಇಂಗ್ಲಿಶ್‌ನಲ್ಲಿ ಹೇಗೆ ಕಮೆಂಟರಿ ಹೇಳಬಹುದು?

“ದೋನಿ ಪೇಸ್ಡ್ ದ ಬಾಲ್ ವುಯಿತ್ ಕರೇಜ್.
(==ಧೋನಿ ಫೇಸ್ಡ್ ದ ಬಾಲ್ ವುಯಿಥ್ ಕರೇಜ್).

ಶಂಕರ ಭಟ್ಟರೆ, ನಿಮಗೆ ಇದು ಸರಿ ಕಾಣಿಸುವದೆ?
‘ಸರಿ ಕಾಣುತ್ತಿದೆ’ ಎಂದು ನೀವು ಹೇಳಿದರೆ, ನಿಮ್ಮ ಅಜ್ಞಾನವನ್ನು ಕ್ಷಮಿಸಿ ಬಿಡಬಹುದು. ತಿಳಿದೂ ತಿಳಿದೂ ನೀವು ಈ ಪ್ರಸ್ತಾವನೆಯನ್ನು ಮಾಡುತ್ತಿದ್ದರೆ, ಇದು ನೀವು ಕನ್ನಡಿಗರಿಗೆ ಬಗೆಯುತ್ತಿರುವ ದ್ರೋಹವೆಂದಾಗುತ್ತದೆ.

Shankar Bhat, I accuse you of hypocrisy!
(ಭಟ್ಟರ ಅಕ್ಷರಕ್ರಾಂತಿ ಹಾಗು ಪದಕ್ರಾಂತಿಗಳ ಬಗೆಗೆ ಮುಂದಿನ ಲೇಖನದಲ್ಲಿ ಗಮನಿಸೋಣ.)

20 comments:

ಅಂತರ್ವಾಣಿ said...

naanu nimmannu opputtEne!

ee shankar bhat avarige yaake ee buddhi baMditO? kannada bhaasheyannu hosadaagi rUpisOke ivaru yaaru?

ಸುಪ್ತದೀಪ್ತಿ suptadeepti said...

ಶಂಕರ ಭಟ್ಟರ ಪುಸ್ತಕ ಓದಲೇಬೇಕೆಂಬ ಕುತೂಹಲ ಹುಟ್ಟಿದೆ, ಊರಿಗೆ ಹೋದಾಗ ಖಂಡಿತಾ ಕೊಳ್ಳುವೆ.

ಕಾಕಾ, ಸರ್ವಜ್ಞನ ಮಾತುಗಳು ನೂರಕ್ಕೆ ನೂರು ಸತ್ಯ. ಕೆಲವು ನೂರು ವರ್ಷಗಳ ಹಿಂದಿನ ಕನ್ನಡಿಗರು ನಿಜಕ್ಕೂ "(ಸಾಹಿತ್ಯ) ಕುರಿತು- ಓದದೆಯುಂ ಕಾವ್ಯಪ್ರಯೋಗಪರಿಣತ ಮತಿಗಳ್" ಆಗಿದ್ದವರು.

Unknown said...

ಸುನಾಥರೆ,
ನಾನೇನು ಶಂಕರ ಭಟ್ಟರ ಪುಸ್ತಕವನ್ನು ಓದಿದವಳಲ್ಲ. ಒಂದು ಭಾಷೆಗೆ ಅದರದೇ ಆದ ಪರಂಪರೆ,ಅದರದೇ ಆದ ವೈಶಿಷ್ಟ್ಯ ಇರುತ್ತವಲ್ಲವೆ? ಇವನ್ನು ತಿರುಚವ ಪ್ರಯತ್ನ ಮಾಡುವದು ಉಚಿತವಲ್ಲ.

sunaath said...

ಸರಿಯಾಗಿ ಹೇಳಿದಿರಿ, ಅಂತರ್ವಾಣಿಯವರೆ.
ಇವರು ಕನ್ನಡ ಭಾಷೆಯನ್ನು ರೂಪಿಸುತ್ತಿಲ್ಲ, ವಿರೂಪಿಸುತ್ತಿದ್ದಾರೆ!

sunaath said...

ಜ್ಯೋತಿ,
ಶಂಕರ ಭಟ್ಟರ ಪುಸ್ತಕ ಓದಿದ ಮೇಲೆ ತಲೆನೋವು, ಜ್ವರ ಮೊದಲಾದ ದುಷ್ಪರಿಣಾಮಗಳು ಆಗಬಹುದೆನ್ನುವ ಎಚ್ಚರಿಕೆಯನ್ನು ನಿನಗೆ ಮೊದಲೇ ನೀಡುತ್ತೇನೆ.

sunaath said...

ವನಮಾಲಾ,
"ಪರಂಪರೆಯನ್ನು ತುಳಿಯುವದೆ ಪ್ರಗತಿಯಲ್ಲ", ಎಂದು ಮಾಸ್ತಿಯವರು ಹೇಳಿದ್ದಾರೆ. ಭಟ್ಟರ ಪ್ರಯತ್ನ ಅಧೋಗತಿ ಎಂದು ನನಗೆ ಭಾಸವಾಗುತ್ತದೆ.

sunaath said...
This comment has been removed by the author.
Shriniwas M Katti said...

ಶಂಕರಭಟ್ಟರಿಗೆ ಕನ್ನಡ ನುಡಿಯ ಕುರಿತು ಎಷ್ಟು(ಸಾತ್ವಿಕ ಮತ್ತು ಪ್ರಾಮಾಣಿಕ) ಪ್ರೀತಿ, ಕಳಕಳಿ ಇದೆಯೊ ನಾನರಿಯೆ. ಕನ್ನಡದ ಅಕ್ಷರ, ಭಾಷೆ ಈಗಿದ್ದ ಹಾಗೆ ಇದ್ದರೆ, ಅವರಿಗೇನು ಕಷ್ಟ ? ಭಾಷೆಯ ಲಿಪಿ, ವ್ಯಾಕರಣದ ಚೌಕಟ್ಟು ಬದಲಿಸಿದರೆ ಆಗುವ ಅನಾಹುತಗಳ ಕಲ್ಪನೆ ಅವರಿಗೆ ಖಂಡಿತವಾಗಿಯೂ ಇಲ್ಲ. ಇದ್ದಿದ್ದರೆ ಬಹುಶಃ ಈ ಪುಸ್ತಕ ಬರೆಯುವ ಸಾಹಸವನ್ನೂ ಮಾಡುತ್ತಿರಲಿಲ್ಲ.

Anonymous said...

ಕನ್ನಡದ ಬಗ್ಗೆ ಶಂಕರಭಟ್ಟರಿಗೆ ಅಸಹ್ಯವಿದೆ. ಅದಕ್ಕೇ ತಲೆ-ಬಾಲವಿಲ್ಲದ ಪುಸ್ತಕ ಬರೆದಿದ್ದಾರೆ.

ಚೋರನಿಂದಿಸಿ ಶಶಿಯ ಬೈದಡೆ,
ಕ್ಷೀರವನು ಕ್ಷಯರೋಗಿ ಹಳಿದರೆ,
ವಾರಾಣಸಿಯ ಹೆಳವ ನಿಂದಿಸಿ ನಕ್ಕರೇನಹುದು ?
ವರ ಕನ್ನಡದ ಸೌಂದರ್ಯವನು
ಕ್ರೂರ ಕರ್ಮಿಗಳೆತ್ತ ಬಲ್ಲರು ?

(ಮಹಾಕವಿ ಶ್ರೀ ಕುಮಾರವ್ಯಾಸರ ಕ್ಷಮೆ ಕೋರುವೆ)

Anonymous said...

ಸುನಾಥ ಗುರುಗಳ:
ನಾನು ಈಗಾಗಲೆ ಹೇಳಿದಂತೆ ನಿಮ್ಮ ಸ್ಪಷ್ಟ ನಿಲುವಿಗೆ ನನ್ನ ಸಂಪೂರ್ಣ ಬೆಂಬಲವಿದೆ. ಹಾಗಿದ್ದಾಗ್ಗ್ಯೂ, ಮೇಲಿಂದ ಮೇಲೆ ತಮಿಳನ್ನು ಎಳೆದು ತರುವುದು ಅನವಶ್ಯಕ ಎಂದು ನನಗೂ ಅನ್ನಿಸುತ್ತದೆ. ಶಂಕರಭಟ್ಟರ ವಾದಗಳ ಮೂಲ ಪ್ರಭಾವ ತಮಿಳು ಎಂದು ಭಾವಿಸುವುದು ತಾರ್ಕಿಕವಾಗಿ ಸರಿಯಲ್ಲ. ಅಲ್ಲದೆ ನಮ್ಮ ಭಾಷೆಯ ಬಳಕೆಯಲ್ಲಿನ ದೋಷಗಳಿಗೆ ನಾವೇ ಜವಾಬ್ದಾರರು. ನಾವು ಮಹಾಪ್ರಾಣಗಳ ಬಳಕೆಯಲ್ಲಿ ತಪ್ಪು ಮಾಡುವುದು ನಿಜ, ಹಾಗೂ ತಮಿಳಿನಲ್ಲಿ ಮಹಾಪ್ರಾಣಗಳಿಲ್ಲದಿರುವುದೂ ನಿಜ. ಆದರೆ ನಮ್ಮ ತಪ್ಪುಗಳಿಗೆ ತಮಿಳು ಕಾರಣವೇನೋ ಎಂದು ಹೇಳುವುದು ಸರಿಯಾಗದು. (ನೀವು ಹೀಗೆ ವಾದಿಸುತ್ತಿದ್ದೀರೆಂದು ನಾನು ಹೇಳುತ್ತಿಲ್ಲ. ಆದರೆ ನಿಮ್ಮ ಮಾತುಗಳನ್ನು ಹೀಗೆ interpret ಮಾಡಬಹುದಾದ ಸಂಭವವಿದೆ.) ನಮ್ಮ ತಪ್ಪುಗಳಿಗೂ, ತಮಿಳಿನ ಮಹಾಪ್ರಾಣ ತ್ಯಾಗಕ್ಕೂ ಪ್ರಬಲ correlation ಇರಬಹುದು. ಆದರೆ causation ಇದೆ ಎಂದು ಹೇಳಲಾಗುವುದಿಲ್ಲ. ಹಾಗೆ ಹೇಳಿದರೆ ನಾವು cum hoc ergo propter hoc ಅಥವಾ correlation implies causation ಎಂಬ ಮಿಥ್ಯೆಯನ್ನು ಎಸಗಿದಂತಾಗುತ್ತದೆ.

ಅಲ್ಲದೆ, ತಮಿಳು ಕೂಡ ಸಾಕಷ್ಟು ವಿಕಸಿತ ಭಾಷೆ. ಸಾಹಿತ್ಯದಿಂದ ಶ್ರೀಮಂತವಾಗಿರುವ ಭಾಷೆ. ಸಂಸ್ಕೃತದ ದನಿಗಳನ್ನೂ, ಮಹಾಪ್ರಾಣಗಳನ್ನೂ ತ್ಯಜಿಸಿದ್ದರೂ ಕೂಡ ಅದನ್ನು ಅವರು ಹೆಚ್ಚು ಹೆಚ್ಚು ಮೂಲ ತಮಿಳು ಶಬ್ದಗಳನ್ನು ಬಳಸುವ ಮೂಲಕ compensate ಮಾಡಿಕೊಂಡಿದ್ದಾರೆ. ಕೃಪಾ ಎಂಬುದು ಕಿರುಬಾ ಆಗಿದ್ದು ನಮಗೆ ವಿಚಿತ್ರ ಎನ್ನಿಸಬಹುದಾದರೂ ಅವರಿಗೆ ಅದು ಸಹಜವೆ ಆಗಿದ್ದೀತು. ಮತ್ತೆ ಇನ್ನೊಂದು ವಿಷಯವೆಂದರೆ ಪ್ರತಿಯೊಂದು ಭಾಷೆಗೂ ಸಾಕಷ್ಟು limitations ಇರುತ್ತವೆ. ಉದಾಹರಣೆಗೆ, ತಮಿಳರು (ಮತ್ತು ಮಲೆಯಾಳರು) 'zh' ಎಂದು ಇಂಗ್ಲಿಶಿನಲ್ಲಿ ನಮೂದಿಸುವ ಅಕ್ಷರಕ್ಕೆ ಕನ್ನಡದಲ್ಲಿ (at least, ಅಧುನಿಕ ಕನ್ನಡದಲ್ಲಿ) corresponding ಅಕ್ಷರವೇ ಇಲ್ಲ. As a matter of fact, ತಮಿಳ್ (thamizh) ಎಂದು ಕನ್ನಡದಲ್ಲಿ ನಿಖರವಾಗಿ ಬರೆಯಲು ಸಾಧ್ಯವೇ ಇಲ್ಲ!
***

ಇನ್ನು ಶಂಕರಭಟ್ಟರು ನೀವು ಕ್ವೋಟ್ ಮಾಡಿದಂತೆ ಹೇಳಿದ್ದಲ್ಲಿ ಅವರನ್ನು ಗಂಭೀರವಾಗಿ ತೆಗೆದುಕೊಳ್ಳಲು ಸಾಧ್ಯವಿಲ್ಲ. ಅಷ್ಟೆ ಅಲ್ಲ, ಅವರನ್ನು ಪ್ರಬಲವಾಗಿ ವಿರೋಧಿಸಬೇಕು. ಭಾಷೆಯ ನೆಲೆಯಲ್ಲಷ್ಟೆ ಅಲ್ಲ, ಸಾಮಾಜಿಕ ನೆಲೆಯಲ್ಲಿ.

sunaath said...

ಕಟ್ಟಿಯವರೆ,
ಶಂಕರ ಭಟ್ಟರು ಕನ್ನಡವಕ್ಕಿಯ ರೆಕ್ಕೆಗಳನ್ನು ಕತ್ತರಿಸಬಯಸುತ್ತಿದ್ದಾರೆ!

sunaath said...

ಗೀತಾ,
ನೀವು ಕುಮಾರವ್ಯಾಸರ ಕ್ಷಮೆ ಕೋರುವ ಅವಶ್ಯಕತೆ ಇಲ್ಲ. ಅವರೂ ಸಹ ನಮ್ಮ ಜೊತೆಗೂಡುವದರಲ್ಲಿ ಸಂದೇಹವಿಲ್ಲ!

sunaath said...

ಪ್ರಿಯ ಚಕೋರ,
ನಿಮ್ಮ ತರ್ಕಬದ್ಧ ಪ್ರತಿಪಾದನೆಗೆ ಮನಸೋತೆ. ಶಂಕರ ಭಟ್ಟರ ವಾದಕ್ಕೆ ಮೂಲ ಪ್ರಭಾವ ತಮಿಳು ಅಲ್ಲ ಎನ್ನುವ ನಿಮ್ಮ ಹೇಳಿಕೆ ಸರಿಯಾದದ್ದೆ. ಆದರೆ, ಅವರು ತಮ್ಮ ವಾದಕ್ಕೆ ತಮಿಳು ಭಾಷೆಯನ್ನು ಹಾಗು ತಮಿಳು ಲಿಪಿಯನ್ನು ಆಧಾರವೆಂಬಂತೆ ಉಪಯೋಗಿಸುತ್ತಿದ್ದಾರೆ. ಭಾರತೀಯರು ನುಡಿಯುವ ಶಬ್ದಗಳನ್ನು ಕನ್ನಡ ಲಿಪಿಯು ಎಷ್ಟು ಸಮರ್ಥವಾಗಿ ಸಂಕೇತಿಸುತ್ತಿದೆಯೊ, ಅದು ಉಳಿದ ಲಿಪಿಗಳಲ್ಲಿ, especially ತಮಿಳಿನಲ್ಲಿ ಇಲ್ಲದಿರುವದು ನಮಗೆ ಗೊತ್ತಿದ್ದ ಮಾತೇ ಆಗಿದೆ. ಆದರೆ, ಶಂಕರ ಭಟ್ಟರು ತಮಿಳು ಲಿಪಿಯ ಅಪೂರ್ಣತೆಯನ್ನೇ ಒಂದು ಹೆಚ್ಚುಗಾರಿಕೆ ಎನ್ನುವಂತೆ ಬಣ್ಣಿಸುತ್ತಿದ್ದಾರೆ. ಹಾಗೂ, let us follow suit ಎಂದು ಹೇಳುತ್ತಿದ್ದಾರೆ. (ತಮಿಳು ಅಲ್ಲದೆ, ಇತರ ಕೆಲವು ಭಾಷೆಗಳ ಲಿಪಿಗಳನ್ನೂ ಅವರು ಉದಾಹರಿಸುತ್ತಾರೆ.) ಈ ಕಾರಣದಿಂದಾಗಿ, ಅವರಿಗೆ ಪ್ರತಿವಾದದ ರೀತಿಯಲ್ಲಿ ಬರೆಯುವದು, ನನ್ನ ಅನಿವಾರ್ಯತೆಯಾಯಿತು. (ಇದು ತಪ್ಪು ಎಂದು ನನಗೂ ಅನಿಸುತ್ತದೆ. ಆದರೆ, ಮುಳ್ಳನ್ನು ಮುಳ್ಳಿನಿಂದಲೇ ತೆಗೆಯುವ ಅನಿವಾರ್ಯತೆ ಇದು.)

ಎರಡನೆಯದಾಗಿ, ಲಿಪಿ ಹೇಗೇ ಇರಲಿ ಅಥವಾ ಲಿಪಿ ಇಲ್ಲದೇ ಇರಲಿ, ಅದು ಭಾಷೆಯ ಶ್ರೀಮಂತಿಕೆಯನ್ನು ಕಡಿಮೆ ಮಾಡುವದಿಲ್ಲ ಹಾಗು ಸಾಹಿತ್ಯದ ಶ್ರೀಮಂತಿಕೆಗೆ handicap ಆಗುವದಿಲ್ಲ ಎನ್ನುವದನ್ನು ನಾನು ಒಪ್ಪುತ್ತೇನೆ. ತಮಿಳು ಕತೆ ಹಾಗು ಕಾದಂಬರಿಗಳ ಕನ್ನಡ ಅನುವಾದಗಳನ್ನು ನಾನು ನಿಯತಕಾಲಿಕೆಗಳಲ್ಲಿ ಓದಿದ್ದೇನೆ ಮತ್ತು enjoy ಮಾಡಿದ್ದೇನೆ. ತಮಿಳು ಸಾಹಿತ್ಯವನ್ನು ನಾನು ಗೌರವಿಸುತ್ತೇನೆ.

ಇನ್ನು, ಸಂಸ್ಕೃತ ಮೂಲ ಶಬ್ದಗಳನ್ನು ತಮಿಳರು ತಮ್ಮದೇ ರೀತಿಯಲ್ಲಿ ಉಚ್ಚರಿಸುವದು ಅವರಿಗೆ ಸಹಜವೇ ಆಗಿರಬಹುದು ಎಂದು ನೀವು ಹೇಳುತ್ತೀರಿ. (ಉದಾ: ಕೃಪಾ=ಕಿರುಬಾ). ಕನ್ನಡಿಗರಿಗೆ ಕೃಪಾ ಎನ್ನುವದನ್ನು , ಅದೇ ರೀತಿಯಾಗಿ ಉಚ್ಚರಿಸಲು ಹಾಗು ಬರೆಯಲು ಸಾಧ್ಯವಿರುವಾಗ, ನಾವೇಕೆ ತಮಿಳನ್ನು ಅನುಸರಿಸಬೇಕು? (ಶಂಕರ ಭಟ್ಟರು ತಮಿಳು ಅನುಕರಣೆಗೆ ಕರೆ ಕೊಡುತ್ತಿದ್ದಾರೆ).

ಈಗ ನೋಡಿ, ಳ ಮತ್ತು ಝ ಈ ಧ್ವನಿಗಳನ್ನು ಒಳಗೊಂಡ ಒಂದು ಧ್ವನಿ ಹಾಗೂ ಆ ಧ್ವನಿಸಂಕೇತ ತಮಿಳಿನಲ್ಲಿ ಇದೆಯೆಂದು, ತಮಿಳರು ಅಭಿಮಾನದಿಂದ ಹೇಳಿಕೊಳ್ಳುತ್ತಾರಷ್ಟೆ? ಆದರೆ, ನಮ್ಮ ಕನ್ನಡ ಭಟ್ಟರು ಮಾತ್ರ, ಕನ್ನಡ ಲಿಪಿಯ ಅಂಗಚ್ಛೇದ ಮಾಡಲು advocate ಮಾಡುತ್ತಿದ್ದಾರೆ. ( ಇದಕ್ಕೆ ಅವರು ಕೊಡುವ ಕಾರಣವೆಂದರೆ, ಲಿಪಿಯನ್ನು ಸರಳ ಮಾಡುವದರಿಂದ, ಮೇಲ್ವರ್ಗದವರು ಕೆಳವರ್ಗದವರನ್ನು ಶೋಷಿಸುವದು ತಪ್ಪುವದು!)

ಕನ್ನಡ ಲಿಪಿಯು ಕನ್ನಡ ನುಡಿಯ ಶರೀರವಾಗಿದೆ. ಈ ಲಿಪಿಯನ್ನು ಕತ್ತರಿಸುವದೆಂದರೆ, ಕನ್ನಡ ನುಡಿಯ ಶರೀರವನ್ನು ಕತ್ತರಿಸಿದಂತೆ; ಇದು ಭಾಷೆಯ ಮರಣಕ್ಕೆ ಕಾರಣವಾಗುವದು.

ಅಮರ said...

ನನಗಂತು ತಿಳಿಯದು ಈ ಭಾಷಾ ಪಂಡಿತರು ಯಾವ ಸಾಧನೆ ಮಾಡಲು ಕನ್ನಡಕ್ಕೆ ಕತ್ತರಿ ಪ್ರಯೋಗ ಮಾಡಲಿಕ್ಕೆ ಕೈ ಹಾಕಿದ್ದಾರೆ ಎಂದು.
ಕನ್ನಡ ಭಾಷೆಯಲ್ಲೂ ಜಾತಿ-ವರ್ಗಗಳನ್ನ ಸೃಷ್ಟಿಸುತ್ತಿರುವುದನ್ನ ಗಮನಿಸಿದರೆ .... ಮುಂದೆ ಕನ್ನಡ ಭಾಷೆಯಲ್ಲೂ ಮೀಸಲಾತಿ ಜಾರಿಯಾದರೂ ಆಗಬಹುದು.
-ಅಮರ

sunaath said...

ಅಮರ,
ಇಂತಹ ಕನ್ನಡ ಪಂಡಿತರಿಂದ ಕನ್ನಡವನ್ನು ಉಳಿಸು ಎಂದು ದೇವರನ್ನು ಪ್ರಾರ್ಥಿಸೋಣವೆ?

Anonymous said...

you accuse who cares!!

why the bye,.... what are you?

ಇಲ್ಲಿ ಇಂಟರ್‍ನೆಟ್ಟಲ್ಲಿ ಕೊಚ್ಚೋದು ಬಿಟ್ಟು ಒಂದು linguistics ಆಗಿ ಹೊತ್ತಗೆ ಬರೀರಿ...

ನೀವು + ನಿಮ್ಮ ತಿಂತಿಣಿ ಚನ್ನಾಗಿದೆ.. ಹೊಸಬರೊಬ್ಬರು ಇದನ್ನು ಓದುತ್ತಿಲ್ಲ...

ಎಲ್ಲ ದಾರವಾಡದವರೇನೋ !! ’ಧಾರವಾಡ ಕನ್ನಡ ಸಂಗೀತದ ಬದಲು ಹಿಂದುಸ್ತಾನಿ ಎಂದು ಹಿಂದಿ ಹಾಡುಗಳನ್ನು ಉದ್ದುದ್ದು ಹಾಡಿ, ಕನ್ನಡದ ಬಗ್ಗೆ ತರಲೆ ಮಾಡುವ ಮಂದಿಗಳ ಜಾಗ, ಮಾದರಿ ರಂಪಾಟದ ಚಂಪಾ’ :)

ಶಂಕರಬಟ್ಟರು ತಮ್ಮ ಪಾಡಿ ತಾವು ಹೊತ್ತಗೆಗಳನ್ನು ಬರೆದುಕೊಂಡು ಇದ್ದಾರೆ. ಅವರು ಒಬ್ಬ linguist ಅದಕ್ಕೆ ಅವರ ಕೆಲಸ linguistic ಆಗಿ ರಿಸರ್ಚ್ ಮಾಡಿ ಬರಹ ಬರೆಯುವುದು. ಅದನ್ನ ಓದು ಮಂದಿಯೇ ಬೇರೆ...

ಅವರ ’ಕನ್ನಡ ನುಡಿ ನಡೆದು ಬಂದ ದಾರಿ’ ಓದಿ, ಕನ್ನಡ ಉಲಿಕೆಗಳ ಬಗ್ಗೆ ಸರಿಯಾಗೇ ಬರೆದಿದ್ದಾರೆ..

ಅವರು ಬರೆದ ಒಂಬತ್ತು-ಹತ್ತು ಹೊತ್ತಗೆಗಳಲ್ಲಿ ’ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ’ ಮತ್ತು ’ಕನ್ನಡ ಬರಹವನ್ನು ಸರಿಪಡಿಸೋಣ’ ಎರಡೇ ಕೆಲವು ಬದಲಾವಣೆಗಳ ಬಗ್ಗೆ ಹೇಳುವುದು. ಅದು ಕೂಡ ಒಪ್ಪತಕ್ಕದ್ದು ಎಂದು ಕೇ.ವಿ.ನಾರಯಣ, ಅಂಗಡಿ ಮುಂತಾದ ಭಾಷಾಜ್ನಾನಿಗಳು ಹೇಳಿದ್ದಾರೆ.

ಅವರದನ್ನು Hypocrisy ಎಂಬು ತೀರಾ ರಂಪಾಟದ ಮಾತು... ಅವರ ಬರೆದುದು ಒಂದು ವಾದವಷ್ಟೇ.!! ಅವರು ಬರೆದ ಹೊತ್ತಗೆಗಳು ಅಂಕಿತದ ಮೊದಲ ಹತ್ತು ಹೊತ್ತಗೆಗಳಲ್ಲಿ ಮೊದಲನೆ ಜಾಗದಲ್ಲಿತ್ತು.

ಮೊದಲು ಅವರ ಬೇರೆ ಹೊತ್ತಗೆಗಳನ್ನು ಓದಿ ಅವರ ಕೊಡಗೆ ಕನ್ನಡಕ್ಕೆ ಎಂತಹದ್ದು ಎಂದು ತಿಳಿಯಿರಿ...

ನಿಮ್ಮ ಬಳಗಕ್ಕೆ ತಲೆ ಹಾಕಿದ್ದಕ್ಕೆ ಮನ್ನಿಸಿರಿ....

ತಿಳಿಗಣ್ಣ said...

ನೀವು accuse ಮಾಡಿರುವ ಶಂಕರ ಬಟ್ ಅವರ ಪರಿಚಯ

http://kn.wikipedia.org/wiki/%E0%B2%A1%E0%B2%BF._%E0%B2%8E%E0%B2%A8%E0%B3%8D._%E0%B2%B6%E0%B2%82%E0%B2%95%E0%B2%B0_%E0%B2%AD%E0%B2%9F%E0%B3%8D%E0%B2%9F

ಡಿ. ಎನ್. ಶಂಕರ ಭಟ್ಟ
Wikipedia ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

'ಡಿ. ಎನ್. ಶಂಕರಭಟ್ಟ.'

(೧೫, ಜುಲೈ, ೧೯೩೫-)

'ದರ್ಬೆ ನಾರಾಯಣಭಟ್ಟ ಶಂಕರ ಭಟ್ಟ'.

ಡಿ. ಎನ್. ಎಸ್ ರವರು, ವಿದ್ಯಾಬ್ಯಾಸದ ನಂತರ, ೧೯೬೨ ರಿಂದ ಕೊನೆಯವರೆಗೆ ಅವರು ರಾಜ್ಯದ ಹೊರಗೇ ಹೆಚ್ಚಾಗಿದ್ದರು. ಅಂತಹಸಮಯದಲ್ಲೂ ಅನೇಕ ಮೌಲಿಕ ಕೃತಿರಚನೆಗಳಿಂದ ಕನ್ನಡಕ್ಕೆ ಮಾಡಿದ ಸೇವೆ ಅನನ್ಯ. ಕನ್ನಡದ ಬಗ್ಗೆ ತುಡಿತವಿರುವ ವ್ಯಕ್ತಿ ಎಲ್ಲಿದ್ದರೂ ಹೇಗೆ ಒಂದು ಉನ್ನತ ಕೊಡುಗೆಯನ್ನು ಕೊಡಲು ಸಾಧ್ಯತೆಗಳಿವೆ ಎಂಬುದನ್ನು ಅವರು ತಿಳಿಸಿಕೊಟ್ಟಿದ್ದಾರೆ. ಶಂಕರ ಭಟ್ಟರಂತೆ ಹಲವಾರು ಕನ್ನಡ ಭಾಷಾಶಾಸ್ತ್ರಜ್ಞರು ಕನ್ನಡನಾಡಿನ ಹೊರಗಡೆಇದ್ದು ಕನ್ನಡಕ್ಕಾಗಿ ದುಡಿಯುತ್ತಿದ್ದಾರೆ. ಉದಾಹರಣೆಗೆ, ಎ. ಎಸ್. ಬಿಳಿಗಿರಿ, ಎಸ್. ಎನ್ ಶ್ರೀಧರ್, ಎಚ್ ಎಸ್. ಅನಂತನಾರಾಯಣ, ಇತ್ಯಾದಿ. ಕನ್ನಡದಲ್ಲಿ ಭಾಷಾಶಾಸ್ತ್ರ, ವ್ಯಾಕರಣ ಛಂದಸ್ಸು, ಮುಂತಾದ ಅಧ್ಯಯನಶಿಸ್ತುಗಳು ಬೆಳೆದುಬಂದಿವೆ. ಇತ್ತೀಚಿನ ದಶಕಗಳಲ್ಲಿ ಕನ್ನಡ ಭಾಷೆಯನ್ನು ಕುರಿತು ಇಂಗ್ಲೀಷ್ ಮತ್ತು ಕನ್ನಡದಲ್ಲಿ ನಡೆದಿರುವ ಕೆಲಸಗಳು, ನಮ್ಮ ಸ್ನಾತಕೋತ್ತರ ಪಾಠಕ್ರಮದ ಪರಿಧಿಯಿಂದ ಆಚೆಗೆ ಉಳಿದಿವೆ. ಅವನ್ನು ಅವಲೋಕಿಸುವವರು, ಮತ್ತು ಕಲಿಯುವವರು ಇಬ್ಬರೂ ಆಧ್ಯಯನ ಚಿಂತನೆಗಳನ್ನು ಗ್ರಹಿಸುವ ಆಸಕ್ತಿಯನ್ನು ತೋರಿಸುತ್ತಿಲ್ಲ. ಕನ್ನಡದ ಬಗ್ಗೆ ಅಪಾರ ಸಂಶೋಧನೆ, ಭಟ್ಟರ ವಿಶಿಷ್ಟ ಸಾಧನೆ.
ಪರಿವಿಡಿ
[ಅಡಗಿಸು]

* ೧ ಡಿ. ಎನ್ ಎಸ್. ರವರ, ಜನನ ಹಾಗೂ, 'ವಿದ್ಯಾಭ್ಯಾಸ' :
* ೨ ಮೊದಲನೆಯ ಹಂತ
* ೩ ಡಾ. ಶಂಕರಭಟ್ಟ ವಿದೇಶಗಳ ವಿಶ್ವವಿದ್ಯಾಲಯಗಳಲ್ಲಿಯೂ, ದುಡಿದರು
* ೪ ಪುಣೆಯಲ್ಲಿ
* ೫ ಎರಡನೆಯ ಹಂತದಲ್ಲಿ, ಅವರು ರಚಿಸಿದ ವಿಚಾರಾತ್ಮಕ, ಹಾಗೂ ಅತ್ಯಂತ ಉಪಯುಕ್ತ ಕೃತಿರಚನೆ-'ಕನ್ನಡ ಭಾಷಾ ಚರಿತ್ರೆ' :
* ೬ ೧೫, ಪುಸ್ತಕಗಳು, ಇಂಗ್ಲೀಷ್ ನಲ್ಲಿವೆ. ಕೆಲವನ್ನು ಇಲ್ಲಿ ದಾಖಲಿಸಲಾಗಿದೆ.
* ೭ 'ಡಾ. ಶಂಕರ ಭಟ್,' ಪ್ರತಿಪಾದಿಸುವ, ತಾತ್ವಿಕತೆಯ ಹಿನ್ನೆಲೆ :
* ೮ 'ಡಾ. ಶಂಕರ ಭಟ್'- 'ಶ್ರೇಷ್ಠ ಭಾಷಾಶಾಸ್ತ್ರಜ್ಞ', 'ಕನ್ನಡಭಾಷಾಪ್ರೇಮಿ', 'ಸಂಶೋಧಕ', ಹಾಗೂ 'ವಿನಮ್ರಮಾನವತಾವಾದಿ',

[ಬದಲಾಯಿಸಿ] ಡಿ. ಎನ್ ಎಸ್. ರವರ, ಜನನ ಹಾಗೂ, 'ವಿದ್ಯಾಭ್ಯಾಸ' :

ಶಂಕರಭಟ್ಟರು ಸುಸಂಸ್ಕೃತ ಪಂಡಿತರ ಮನೆಯಲ್ಲಿ ಜನಿಸಿದರು. ಮದ್ರಾಸ್ ವಿಶ್ವವಿದ್ಯಾಲಯದಲ್ಲಿ ಭಾಷಾಶಾಸ್ತ್ರದಲ್ಲಿ, ಪಿ.ಎಚ್.ಡಿ [೧೯೬೨] ಗಳಿಸಿದರು. ೧೯೬೬ ರಲ್ಲಿ (British Council) ಬ್ರಿಟಿಷ್ ಕೌನ್ಸಿಲ್ ನಲ್ಲಿ, (Fellowship), ಫೆಲೋಶಿಪ್ ಆಯ್ಕೆಯಾಗಿ, ಇಂಗ್ಲೀಷ್ ನಲ್ಲಿ, ಉಪಭಾಷಾಪರಿವೀಕ್ಷಣೆಯ ವಿಧಾನಗಳನ್ನು ಕುರಿತು ಅಧ್ಯಯನ ಮಾಡಿದರು. ಶಂಕರಭಟ್ಟರು, ವೃತ್ತಿಜೀವನದಲ್ಲಿ ಅನೇಕ ಮಹತ್ವದಹೊಣೆಗಳನ್ನು ನಿಭಾಯಿಸಿದ್ದಾರೆ.

[ಬದಲಾಯಿಸಿ] ಮೊದಲನೆಯ ಹಂತ

* ೧. ಪುಣೆ ವಿಶ್ವ ವಿದ್ಯಾಲಯದಿಂದ "ದ್ರಾವಿಡಿಯನ್ ಭಾಷಾಶಾಸ್ತ್ರ" ದ ಅಧ್ಯಯನ. (೧೯೬೨-೬೫)

* ೨. ಪುಣೆ ಡೆಕ್ಕನ್ ಕಾಲೇಜ್ ನಲ್ಲಿ "ಟಿಬೆಟೊ ಬರ್ಬನ್ ಭಾಷೆ" ಗಳ ರೀಡರ್ ಆಗಿ, (೧೯೬೫-೭೯)

* ೩. ತಿರುವನಂತಪುರ ISDL ನಲ್ಲಿ, 'ಭಾಷಾ ಪ್ರಾಧ್ಯಾಪಕ,' (೧೯೭೯-೮೫)

* ೪. ಮಣಿಪುರದ ರಾಜಧಾನಿ, 'ಇಂಫಾಲ್'-ಮಹಾವಿಶ್ವವಿದ್ಯಾಲಯ 'ಭಾಷಾ ಪ್ರಾಧ್ಯಾಪಕರಾಗಿ'. (೧೯೮೮-೯೫)

* ೫. ಮೈಸೂರ್ ನ, ಸಿ. ಐ.ಎಲ್ ನಲ್ಲಿ (UGC) 'ಯು.ಜಿ.ಸಿ' ವತಿಯಿಂದ, ನಿಯೋಜಿತ 'ಪ್ರಖ್ಯಾತವಿಜ್ಞಾನಿ' ಯಾಗಿ ಸೇವೆಸಲ್ಲಿಸಿದರು.

[ಬದಲಾಯಿಸಿ] ಡಾ. ಶಂಕರಭಟ್ಟ ವಿದೇಶಗಳ ವಿಶ್ವವಿದ್ಯಾಲಯಗಳಲ್ಲಿಯೂ, ದುಡಿದರು

* ೧. 'ಸ್ಟಾನ್ ಫರ್ಡ್' ವಿಶ್ವ ವಿದ್ಯಾಲಯದಲ್ಲಿ '(Research Associate)', ಭಾಷಾ ಶಾಸ್ತ್ರಗಳನ್ನು '(Language Univarsals) ಕುರಿತಂತೆ, ಯೋಜನೆಗಳಲ್ಲಿ ಭಾಗವಹಿಸಿದರು. [೧೯೭೩-೭೫]

* ೨. ೧೯೯೭ ರಲ್ಲಿ ಬೆಲ್ಜಿಯಂ ನ, "ಆಂಟ್ ವರ್ಪ್," ನ ವಿಶ್ವವಿದ್ಯಾಲಯ ದಲ್ಲಿ '(Visiting Scholar),'ಆಗಿ, ಆಸ್ಟ್ರೇಲಿಯದಲ್ಲಿ, ಮೆಲ್ಬೊರ್ನ್ ನಗರದ 'Law Brobe' ವಿಶ್ವ ವಿದ್ಯಾಲಯದಲ್ಲಿ '(Visiting Professor)' ಅತಿಥಿ ಪ್ರಾಧ್ಯಾಪಕ [೨೦೦೦]

* ೩.'Germany)' 'ಜರ್ಮನಿ' ಯ, ಲೀಪ್ಝಿಗ್ ನಗರದಲ್ಲಿ, "Maxplanc Institute" ನಲ್ಲಿ, "Evolutionarey" ಅತಿಥಿವಿಜ್ಞಾನಿಯಾಗಿ, [೨೦೦೭]

[ಬದಲಾಯಿಸಿ] ಪುಣೆಯಲ್ಲಿ

ನಿಯೋಜಿತ ಕನ್ನಡದ ನೇರ ಸಂಬಂಧವಿಲ್ಲ. ಆದರೂ ಕನ್ನಡದಲ್ಲಿ ಅಪಾರಸಾಧನೆ, ಮಾಡಿದ್ದಾರೆ. ವಿಶಿಷ್ಟಸಾಧನೆ, ಬರವಣಿಗೆಯ ವೈಶಾಲ್ಯತೆ, ವ್ಯಾಪ್ತಿ, ಗಹನವಾದ ಇಂಗ್ಲೀಷ್ ನಲ್ಲಿ, ೧೫ ಪುಸ್ತಕಗಳನ್ನು ವಿಶ್ವವಿಖ್ಯಾತ ಪ್ರಕಟನಾಲಯಗಳು ಪ್ರಕಟಿಸಿವೆ. ಇದು ಅವರ ಕನ್ನಡಪರ ಚಟುವಟಿಕೆಯ ಪ್ರಥಮ ಭಾಗ. ಪುಣೆಯ, 'ಡೆಕ್ಕನ್ ಕಾಲೇಜ್' ನಲ್ಲಿ ಪ್ರಕಟವಾದ, ಮಾಹಿತಿ ಸಂಗ್ರಹ. 'ತುಳು', 'ಬೋಡೊ', 'ಥಂಕುರ್', 'ನಾಗಾ'', 'ಹವ್ಯಕ್,' 'ಕೊರಗ ಭಾಷೆ.'

[ಬದಲಾಯಿಸಿ] ಎರಡನೆಯ ಹಂತದಲ್ಲಿ, ಅವರು ರಚಿಸಿದ ವಿಚಾರಾತ್ಮಕ, ಹಾಗೂ ಅತ್ಯಂತ ಉಪಯುಕ್ತ ಕೃತಿರಚನೆ-'ಕನ್ನಡ ಭಾಷಾ ಚರಿತ್ರೆ' :

ಸೈದ್ಧಾಂತಿಕ, ಇಂಗ್ಲೀಷ್ ಕೃತಿಗಳು. ಇದರಲ್ಲಿ ಹಲವು ಕೃತಿಗಳು ಕನ್ನಡಕ್ಕೆ ಸಂಬಂಧಿಸಿವೆ. 'ಕನ್ನಡದ ಬಗ್ಗೆ ನೀವೇನು ಬಲ್ಲಿರಿ ? [೧೯೭೦] ಭಾರತೀಯ ಸ್ವರೂಪ. ಮತ್ತು ಬರಹ, ರೊ. ಗು ಇಂದ್ರಜಾಲ' ಮುಂತಾದ ಬರಹ ಬಗ್ಗೆ ವೈಜ್ಞಾನಿಕ ಸಂಗತಿ. ಸರಳ ಸಂಪತ್ತಿನ ಭಾಷೆ ವಿವರಿಸುತ್ತಾರೆ. ಇವೆಲ್ಲಾ 'ಸುಧಾ ಪತ್ರಿಕೆ,' ಯಲ್ಲಿ ಪ್ರಕಟವಾದವು. 'ಕನ್ನಡ ಭಾಷೆ, ಮತ್ತು ವ್ಯಾಕರಣಗಳ ಇತಿಹಾಸದ ಮರುನಿರ್ಮಾಣ' ತೀವ್ರ ಆಸಕ್ತಿಗಳಲ್ಲಿ ಒಂದು. ೧೯೭೮ ಪ್ರಕಟವಾದ, 'ಕನ್ನಡ ಭಾಷಾ ಚರಿತ್ರೆ' ಮೊದಲ ಪ್ರಯತ್ನ. ಕನ್ನಡಪದ ರಚನೆ. ಶೈಲಿ ನಿಖರವಾಗಿದೆ. ಶಾಸ್ತ್ರರಚನೆಗೆ ಸೂಕ್ತ. ಭಾಷೆಯ ಚಾರಿತ್ರಿಕ ಮುಖ, ಸಮಕಾಲೀನ ಆಸಕ್ತಿಗಳು, ಪರಸ್ಪರ ಪೂರಕ. ಶಂಕರ ಭಟ್ಟರು, ಅಂತರರಾಷ್ಟ್ರೀಯ ಖ್ಯಾತಿಯ ಭಾಶಾಶಾಸ್ತ್ರಜ್ಞರು. ಗ್ರಹಿಸಿ ಬಗ್ಗೆ ಜಾಣತನ. ಕನ್ನಡ ಭಾಷೆಯ ಸಾಹಿತ್ಯ, ಮತ್ತು ವ್ಯಾಕರಣ, ಛಂದಸ್ಸು, ಅಧ್ಯಯನ, ಇತಿಹಾಸದ ಮರುನಿರ್ಮಾಣ ಅವರ ಆಸಕ್ತಿಗಳಲ್ಲೊಂದು. ೧೯೭೮-'ಕನ್ನಡ ಭಾಷೆಯ ಚರಿತ್ರೆ' ಮೊದಲ ಹೆಜ್ಜೆ. ಇತ್ತೀಚೆಗೆ ರಚಿಸಿದ, ಪ್ರೌಢಪ್ರಯತ್ನ. ಇಲ್ಲಿ ಗಮನಿಸಬೇಕಾದದ್ದು ಸಂಸ್ಕೃತವನ್ನು ಅವಲಂಭಿಸದೇ, ದ್ರಾವಿಡಭಾಷೆಯ ವರ್ಗಕ್ಕೆ ಸಹಜವಾದ ಇತಿಹಾಸವನ್ನು ಕಟ್ಟಿಕೊಡುವ ಪ್ರಯತ್ನ. ಕನ್ನಡವಾಕ್ಯಗಳು [೧೯೭೮], ಕನ್ನಡ ಶಬ್ದರಚನೆ, [೧೯೯೯] [ಕನ್ನಡ ಸರ್ವನಾಮಗಳು], ಅನನ್ಯಕೃತಿಗಳೆಂದು ಗುರುತಿಸಲಾಗಿವೆ. ಅವರ ಇನ್ನೊಂದು ಅತ್ಯಂತ, ಮುಖ್ಯಕೃತಿ, 'ಕನ್ನಡಕ್ಕೆ ಬೇಕು, ಕನ್ನಡದ್ದೇ ವ್ಯಾಕರಣ.' ಅವರ ಸಂಶೋಧನೆಗಳ ತಾತ್ವಿಕ ನೆಲೆಗಳು, ಅತ್ಯಂತ ಮುಖ್ಯ. ಇಲ್ಲಿ ಎರಡು ಮುಖ್ಯ ಆರ್ಯಮೂಲದ ಸಂಸ್ಕೃತ, ಇನ್ನೊಂದೆಡೆ ಪಾಶ್ಚಾತ್ಯಮೂಲದ ಇಂಗ್ಲೀಷ್-ಕನ್ನಡ ಭಾಷೆಯ ಸ್ವರೂಪ, ಹಾಗೂ ಇತಿಹಾಸಗಳಲ್ಲಿ, ಇಂತಹ ಅನನ್ಯತೆಯ ಅನ್ವೇಷಣೆಯನ್ನು ನಿರಂತರವಾಗಿ ಮಾಡುತ್ತಾಬಂದಿದ್ದಾರೆ. ಅವರ ತಾತ್ವಿಕ ನಿಲವುಗಳ ಫಲವಾಗಿ ಇವು ಹೊರಹೊಮ್ಮಿವೆ. ಕೆಳಗೆ ನಮೂದಿಸಿದ ಪುಸ್ತಕಗಳು ಅತಿಮಹತ್ವದ್ದಾಗಿವೆ.

* ೧. 'ಕನ್ನಡ ಭಾಷೆಯ ಕಲ್ಪಿತ ಚರಿತ್ರೆ',

* ೨. 'ಕನ್ನಡ ವ್ಯಾಕರಣ ಪರಂಪರೆ',

* ೩. 'ಕನ್ನಡ ಬರಹವನ್ನು ಸರಿಪಡಿಸೋಣ,'

[ಬದಲಾಯಿಸಿ] ೧೫, ಪುಸ್ತಕಗಳು, ಇಂಗ್ಲೀಷ್ ನಲ್ಲಿವೆ. ಕೆಲವನ್ನು ಇಲ್ಲಿ ದಾಖಲಿಸಲಾಗಿದೆ.

* 'Sound Change',

* 'Pronominalization,'

* 'Referents of noun phrases'

* 'Identification' 'Grammatical relations'

* 'The adjectival category'

* 'The prominance of tense aspect and Mood'

* 'Introducing grammatical notions' 'Manipuri Grammar'

* 'An introduction to linguistics,'


೧೫೦ ಸಂಸ್ಕೃತ ಪ್ರಬಂಧಗಳು. ಕನ್ನಡಕ್ಕೂ ಬಂದಿವೆ. ಕನ್ನಡ, ದ್ರಾವಿಡಸಂಸ್ಕೃತಿಯ ಒಡಲಿನಲ್ಲಿ ರೂಪಿತವಾದರೂ, ತನ್ನದೇಅದ ಪ್ರತ್ಯೇಕ ವಿಶಿಷ್ಠ ಅಸ್ತಿತ್ವ, ಮತ್ತು ಲಕ್ಷಣಗಳ ಭಾಷೆಯೆನ್ನುವುದನ್ನು ತೋರಿಸಿಕೊಡುವ ಪ್ರಯತ್ನ. ಹಾಗೆನೋಡಿದರೆ, ಅವರ ಪಾಂಡಿತ್ಯವನ್ನು ನಾವು ಸಂಸ್ಕೃತ ಮತ್ತು ಇಂಡೋ ಅರ್ಯನ್ ಭಾಷೆ ಗಳಲ್ಲಿ ಕಾಣಬಹುದು. ಆದರೆ ಅವು ದ್ರಾವಿಡಚಿಂತನೆಗೆ ಪೂರಕವಾಗಿವೆ. ಭಾಷೆ, ಸಂಸ್ಕೃತಿಯನ್ನು ಉಳಿಸಿ-ಬೆಳೆಸುವ ಸಾಧನಗಳಲ್ಲೊಂದು. ಅದರ ಗ್ರಹಿಕೆ, ಮತ್ತು ಬಳಕೆಯ ಕ್ರಮಗಳು ತಪ್ಪುದಾರಿ ತುಳಿದಾಗ, ಸಂಸ್ಕೃತಿ ವಿಶಿಷ್ಟ ಸಂಗತಿಗಳನ್ನು ಕಳೆದುಕೊಳ್ಳುವ ಅಪಾಯವಿದೆ. " ನಾನು ಶಿಕ್ಷಣತಜ್ಞನಲ್ಲ ; ವಯ್ಯಾಕರಣಿ ಮಾತ್ರ," ಎಂದು ವಿನಯವಾಗಿ ಹೇಳುವ ಅವರು, ಭಾಷಾಶಿಕ್ಷಣಕ್ಕೆ ಹೊಸಆಯಾಮಗಳನ್ನು, ನೀಡುವ ಸಾಮರ್ಥ್ಯವಿರುವ ವಿದ್ವಾಂಸರಲ್ಲಿ, ಪ್ರಮುಖರು.

[ಬದಲಾಯಿಸಿ] 'ಡಾ. ಶಂಕರ ಭಟ್,' ಪ್ರತಿಪಾದಿಸುವ, ತಾತ್ವಿಕತೆಯ ಹಿನ್ನೆಲೆ :

ಭಾಷೆಕಲಿಕೆ, ರಚನೆ ಹಾಗೂ ಬಳಕೆಯಲ್ಲಿ ಸಿದ್ಧಾಂತಗಳಿವೆ. ಅವುಗಳೆಲ್ಲಾ ಏಕಮತೀಯವಲ್ಲ. ವಿರೋಧಗಳೂ ಇವೆ. ಭಾಷಾಶಾಸ್ತ್ರಜ್ಞ ಅವನು ನಂಬಿರುವ, ಸಿದ್ಧಾಂತಗಳಮೇಲೆ, ಮನೋಧರ್ಮವನ್ನೂ ಅದು ಅವಲಂಭಿಸಿರುತ್ತದೆ. ಕನ್ನಡಭಾಷೆಗೆ ವ್ಯಾಕರಣದ ಅಸಾಧ್ಯತೆಗಳು ಖಂಡಿತ ಇವೆ. ಕನ್ನಡಭಾಷೆಯ ನಿರೂಪಣೆಯ ಸ್ವರೂಪ, ವ್ಯಾಪ್ತಿ ಮತ್ತು ನಿಯೋಗಗಳಲ್ಲಿ ಅತ್ಯಂತ ಭಿನ್ನತೆ ಕಾಣಬಹುದು. ಭಾಷೆಯ ಚಾರಿತ್ರಿಕ ಮತ್ತು ಮತ್ತು ಸಮಕಾಲೀನ ಸ್ಥಿತಿ, ಕನ್ನಡದ ಉಪಭಾಷೆಗಳಿಂದ ಲಭ್ಯವಾಗುವ ಮಹಿತಿಗಳನ್ನು ಕಡೆಗಣಿಸಿದ್ದೇವೆ. ಕಾಲೇಜ್ ನಲ್ಲಿ ಓದಿದನಂತರ ವ್ಯಾಕರಣವನ್ನು ಗಂಭೀರವಾಗಿ ತೆಗೆದುಕೊಳ್ಳುವವರು ಅತಿ ಕಡಿಮೆ. ನಮ್ಮ ಶಿಕ್ಷಣವ್ಯವಸ್ಥೆಯೂ ಅದನ್ನು ತಿಳಿಸಿಲ್ಲ. 'ನಾವು ಕಲಿಸುತ್ತಿರುವ ವ್ಯಾಕರಣ, ವ್ಯಾಕರಣ ಅಲ್ಲ' ; ಎಂಬ ಸಂಗತಿಯನ್ನು ಅವರು ಖಡಾಖಂಡಿತವಾಗಿ ಹೇಳುತ್ತಾರೆ. ಇದು ನಮ್ಮೆಲ್ಲರಿಗೆ ಚಿಂತನೆಗೆ ಎಡೆಮಾಡಿಕೊಡುವ ಸಂಗತಿಯಾಗಿದೆ.

[ಬದಲಾಯಿಸಿ] 'ಡಾ. ಶಂಕರ ಭಟ್'- 'ಶ್ರೇಷ್ಠ ಭಾಷಾಶಾಸ್ತ್ರಜ್ಞ', 'ಕನ್ನಡಭಾಷಾಪ್ರೇಮಿ', 'ಸಂಶೋಧಕ', ಹಾಗೂ 'ವಿನಮ್ರಮಾನವತಾವಾದಿ',

ಕನ್ನಡವೂ, ಬೇರೆ ದ್ರಾವಿಡ ಭಾಷೆಭಾಷೆಗಳತರಹ, ಒಂದು ಭಾಷೆ. ಅನ್ಯಭಾಷೀಯ ಮಾದರಿಯನ್ನು ನಾವು ನಿರಾಕರಿಸಬೇಕು. ಜನಬಳಕೆಯ ಮಾದರಿಯನ್ನು ಅನುಸರಿಸಬೇಕು. ಗ್ರಹಿಸಿ ರೂಪಿಸಬೇಕು. ಕನ್ನಡದಲ್ಲಿ ಸಂಶೋಧನೆ ಮತ್ತು ಕಂಪ್ಯೂಟರ್ ತಂತ್ರಜ್ಞಾನಕ್ಕೆ ಅಳಡಿಸಲು, ವ್ಯಾಕರಣದ ಮರುರೂಪಣದ ಅಗತ್ಯತೆಯಿದೆ. ಅವರ ಪುಸ್ತಕ, ಈ ದಿಕ್ಕಿನಲ್ಲಿ ದಾರಿದೀಪ, ಹಾಗೂ ಮಾದರಿಸೂಚಕವೂ ಹೌದು. ೧೨ ಅಧ್ಯಾಯ. ಮೊದಲು, ಕೊನೆ, ಹಿನ್ನೆಲೆ ತಿಳಿಸುತ್ತವೆ. ಮೊದಲೇ ಬೇಕಾದ ಮುಂದಿನ ಸ್ವರೂಪಗಳನ್ನು ತಿಳಿಸುತ್ತವೆ. ಉಳಿದ ೧೦ ಅಧ್ಯಾಯಗಳು, ಸಂಧಿಕಾರ್ಯ, ಪದವರ್ಗ, ಪದರಚನೆ, ಸಮಾಸ, ಪುರುಷ, ಲಿಂಗ, ವಚನ, ವಿಭಕ್ತಿ, ಮತ್ತು ಕಾರಕಗಳು, ವಿಭಕ್ತಿಪಲ್ಲಟ, ಸರ್ವನಾಮ, ಸಂಖ್ಯಾವಾಚಕ, ಕ್ರಿಯಾಪದ, ಎಂಬ ಹಣೆಬರಹದಲ್ಲಿವೆ. ಕೃತಿ ವ್ಯಾಪಕವಾದ ಚರ್ಚೆಗೆ, ಅನುವುಮಾಡಿಕೊಡುತ್ತದೆ. ನಿರ್ದಿಷ್ಟ ಸಂಸ್ಕೃತಿಯ ಚೌಕಟ್ಟಿನಲ್ಲಿ ಅಭ್ಯಾಸಮಾಡುವಾಗ, ಕೆಲವು ಬಳಕೆಗಳು ತಪ್ಪುಗ್ರಹಿಕೆ, ತೀರ್ಮಾನಕ್ಕೆ ದಾರಿಮಾಡಿದೆ. ಸಾಹಿತ್ಯವಿಮರ್ಶೆ, ಜಾನಪದ ಅಧ್ಯಯನ, ಸಂಸ್ಕೃತಿಯ ಅದ್ಯತೆ, ಸ್ತ್ರೀವಾದಿ ಚಿಂತನೆಗಳು, ಮುಂತಾದ ವಲಯಗಳು ಸವಾಲನ್ನು ಎದುರಿಸುತ್ತವೆ. ಶಂಕರ ಭಟ್ಟ ಅಂತರರಾಷ್ಟ್ರೀಯ ಖ್ಯಾತಿಯ ಭಾಷಾಕಾರರು. ನಮ್ಮ ವಿದ್ವತ್ ಪ್ರಪಂಚ, ವಿಶ್ವವಿದ್ಯಾಲಯಗಳು, ಭಾಷಾವಿಭಾಗಗಳು ಗ್ರಹಿಸಿ ಬಳಸುವ ಕೆಲಸಮಾಡಬೇಕು. ಒಬ್ಬಸಮರ್ಥಪಂಡಿತರು, ಇಂತಹ ಕಾರ್ಯಮಾಡುತ್ತಿರುವಾಗ ಅದನ್ನು ನಾವೆಲ್ಲರೂ, ಸ್ವಾಗತಿಸಬೇಕು.


-'ತವರುಮನೆಯಲ್ಲೇ ಆಗುಂತಕ '-'ಡಿ. ಎನ್. ಶಂಕರಭಟ್ ', ಪು. ೧೭೧, "ನಮಸ್ಕಾರ", 'ಡಾ. ಎಚ್. ಎಸ್. ರಾಘವೇಂದ್ರ ರಾವ್'
"http://kn.wikipedia.org/wiki/%E0%B2%A1%E0%B2%BF._%E0%B2%8E%E0%B2%A8%E0%B3%8D._%E0%B2%B6%E0%B2%82%E0%B2%95%E0%B2%B0_%E0%B2%AD%E0%B2%9F%E0%B3%8D%E0%B2%9F" ಇಂದ ಪಡೆಯಲ್ಪಟ್ಟಿದೆ
ವರ್ಗ: ಕನ್ನಡ ಭಾಷಾಶಾಸ್ತ್ರದ ಪ್ರಾಧ್ಯಾಪಕರು

Anonymous said...

ನೀವು ಹೇಳೋದು ಸರಿನಾ?
“ದೋನಿ ಪೇಸ್ಡ್ ದ ಬಾಲ್ ವುಯಿತ್ ಕರೇಜ್.
(==ಧೋನಿ ಫೇಸ್ಡ್ ದ ಬಾಲ್ ವುಯಿಥ್ ಕರೇಜ್).

ಇಲ್ಲಿ with ಅನ್ನ ವುಯಿಥ್ ಅಂತ ಬರೆದಿದ್ದೀರಿ. ಇಂಗಲೀಸಲ್ಲಿ ಯಾವ ಮಹಾಪ್ರಾಣ ಇದೆ. ಇಂಗಲೀಸಲ್ಲಿ 'ಥ್' ಅಂತ ಅಕ್ಕರ ಇದಿಯ? ನಂಗೊತ್ತಿಲ್ಲಪ್ಪ.
ವುಯಿತ್ ಅಂದರೇನ್ ತಪ್ಪು. ವುಯಿಥ್ ಹೇಗೆ ಸರಿ
ಬಿಡಿ, ನಿಮ್ಮ ಅಗ್ನಾನವನ್ನ/ಅರಿಯಮಿಕೆಯನ್ನು ಮನ್ನಿಸೋಣ.

ಶಂಕರಬಟ್ಟರು 'ತಮಿಳ'ನ್ನು ಒಂದು ಉದಾಹರಣೆಯಾಗಿ ಕೊಟ್ಟಿದ್ದಾರೆ. ಹಾಗೆ 'ಅಸ್ಸಾಮಿ', ಪಂಜಾಬಿಯ ಉದಾಹರಣೆಗಳನ್ನು ಕೊಟ್ಟಿದ್ದಾರೆ.ಇದರಿಂದ ನಿಮಗೇನು ಕಶ್ಟ ?
ನಿಮ್ಮ ಅನುಕೂಲಕ್ಕೆ ತಕ್ಕಂತೆ ಮಾತಾಡಬೇಡಿ.

ನೀವು ಕೊಟ್ಟಿರುವ ಕವಿರಾಜಮಾರ್ಗದಲ್ಲೇ ಹೀಗಿದೆ.

ಕವಿರಾಜಮಾರ್ಗ ಬಿಡಿ-೧ , ೫೮ ನೇ ಪದ್ಯ
ತಱಿಸಂದಾ ಸಕ್ಕದಮುಮ
ನಱಿಯದೆ ಕನ್ನಡಮುಮಂ ಸಮಾಸೋಕ್ತಿಗಳೊಳ್
ಕುಱಿತು ಬೆರೆಸಿದೊಡೆ ವಿರಸಂ
ಮಱುಗುವ ಪಾಲ್ಗಳೆಯ ಪನಿಗಳಂ ಬೆರೆಸಿದವೋಲ್

ಕುದಿಯುವ ಹಾಲಿಗೆ ಮಜ್ಜಿಗೆ ಹನಿಗಳನ್ನ ಸೇರಿಸಿದರೆ ಹೇಗಾಗುತ್ತದೆ ಹೀಗೆ ನಾವು ಸಕ್ಕದವನ್ನು ಬೆರೆಸುತ್ತಾ ಹೋದರೆ.
೯ನೇ ನೂರೇಡಿನಲ್ಲಿ ಸಿರಿವಿಜಯ ಹೇಳಿದ್ದರು ನೀವು ಇನ್ನು ಅರಿತಿಲ್ಲವಲ್ಲ ಅಂತ ಬೇಸರವಾಗುತ್ತಿದೆ.

ಶಂಕರಬಟ್ಟರ ವಾದಕ್ಕೂ ಇದಕ್ಕೂ ಎತ್ತಣ ನಂಟಯ್ಯ
"...ಕನ್ನಡಿಗರು “ಕುರಿತೋದುದೆಯುಮ್ ಕಾವ್ಯಪ್ರಯೋಗಪರಿಣತ ಮತಿಗಳ್….”.."

ಸಿರಿವಿಜಯ ಹೇಳಿರುವುದು ಕನ್ನಡಿಗರು ಕಬ್ಬ ನೆಗೞುವುದರಲ್ಲಿ ಮುಂದು ಅಂತ ಹೇಳಿದ್ದಾನೆ ಹೊರತು ಕನ್ನಡಿಗರು ಸಕ್ಕದದೆಲ್ಲ ಪದಗಳನ್ನೆಲ್ಲ ಉಲಿಯಬಲ್ಲರು ಅಂತ ಹೇಳಿದ್ದಾನೆ.

ಕವಿರಾಜಮಾರ್ಗ ಬಿಡಿ-೧ , ೪೮ ನೇ ಪದ್ಯ
"ದೋಸಮಿನಿತೆಂದು ಬಗೆದು
ದ್ಬಾಸಿಸಿ ತಱಿಸಂದು ಕನ್ನಡಂಗಳೊಳೆಂದುಂ
ವಾಸುಗಿಯುಮ್..."

ಇಲ್ಲಿ ಸಿರಿವಿಜಯ ಬಳಸಿರುವ ಪದ ನೋಡಿ. ಒಂಬತ್ತನೆ ನೂರೇಡಿನಲ್ಲೇ 'ದೋಸ' ಅಂತ ಬಳಸಿದ್ದಾನೆ ಹೊರತು 'ದೋಷ' ಅಂತ ಅಲ್ಲ. ನಾವು ಈಗ 'ದೋಷ' ಅಂತ ಬರೆದು ಸಿರಿವಿಜಯನಿಗೆ ಅವಮಾನ ಮಾಡುತ್ತಿದ್ದೀವಿ.
ಶಂಕರಬಟ್ಟರು ಅದನ್ನ 'ದೋಶ' ಅಂತ ಬರೆಯಿರಿ ಅಂತ ಹೇಳಿದ್ದಾರೆ. ಈಗ ಹೇಳಿ ನೀವು ಕೋಟ್ ಮಾಡಿರುವ ಕವಿರಾಜಮಾರ್ಗಕಾರನ ಬಗ್ಗೆ ನಿಮಗೆ ಗವ್ರವ ಇಲ್ಲ ಅಂತಾಯ್ತು.

ಈಗ ತಾವು ಸಿರಿವಿಜಯನ ಮೇಲೂ ಆಪಾದನೆ ಮಾಡುತ್ತೀರ?
-ಕನ್ನಡದಕೂಸು

sunaath said...

ಪ್ರಿಯ ....ರವರೆ,
ಶಂಕರ ಭಟ್ಟರ ಪರಿಚಯಕ್ಕಾಗಿ ಧನ್ಯವಾದಗಳು.
ವ್ಯಕ್ತಿ ಎಷ್ಟೆ ಪಂಡಿತನಿರಲಿ,ಅವನ ಕಣ್ಣು ಮಸಕಾಗಬಹುದು ಎಂದು ನನಗೆ ಭಾಸವಾಗುತ್ತದೆ. ನಮ್ಮಂತಹ ಸಾಮಾನ್ಯರಿಗೆ ಕಾಣುತ್ತಿರುವದು ಅವರಿಗೆ ಕಾಣಲಿಕ್ಕಿಲ್ಲ.

Anonymous said...

ನೀವು ಸಾಮಾನ್ಯ, ಶಂಕರಬಟ್ಟರು ಅಸಾಮಾನ್ಯ. ಅವರೊಬ್ಬ ಹೆಸರುವಾಸಿಯಾದ ನುಡಿಬಿನ್ನಣಿ. ಹಾಗಾಗಿ ಅವರು ಹೇಳುವುದನ್ನ ನಿಮಗೆ ಅರ್ತ ಮಾಡ್ಕೊಳ್ಳುವುದಕ್ಕೆ ಹೊತ್ತು ಹಿಡಿಯುತ್ತದೆ.

ಈಗ ನಮ್ಮ ಮಯ್ಗೆ ತೊಂದರೆಯಾದಾಗ ನಾವು ಡಾಕ್ಟರ್ ಹತ್ತಿರ ಹೋಗುತ್ತೇವೆ. ಹಾಗೆ ನಮ್ಮ ನುಡಿಗೆ ತೊಂದರೆಯಾದಾಗ ನಾವು ನುಡಿಬಿನ್ನಣಿಗಳ ಹತ್ತಿರ ಹೋಗುತ್ತೇವೆ.ಹೋಗಬೇಕು.
'ನಮಗೆ ಗೊತ್ತು' ಎಂಬ ಸುಳ್ಳು ಹೆಮ್ಮೆಯಿಂದ ನಾವು ನಮ್ಮ ನುಡಿಯನ್ನು ಹಾಳು ಮಾಡುವುದು ಬೇಡ ಎಂಬುದು ನನ್ನ ಕಳಕಳಿಯ ಕೋರಿಕೆ