Monday, June 23, 2008

ಶಂಕರ ಭಟ್ಟರ ವಾದದಲ್ಲಿಯ ದೋಷಗಳು

ಶಂಕರ ಭಟ್ಟರ ಪ್ರತಿಪಾದನೆಯಲ್ಲಿ ಕೆಳಗಿನ ಲೋಪದೋಷಗಳಿವೆ:

‘ಮೇಲ್ವರ್ಗ’ದವರು ‘ಕೆಳವರ್ಗ’ದವರನ್ನು ಶೋಷಿಸುವ ಉದ್ದೇಶದಿಂದಲೇ ಕನ್ನಡ ಲಿಪಿಯಲ್ಲಿ ೫೦ ಅಕ್ಷರಗಳನ್ನು ಇಟ್ಟುಕೊಂಡಿದ್ದಾರೆ ಎಂದು ಭಟ್ಟರು ಪ್ರತಿಪಾದಿಸುತ್ತಾರೆ.(ಪುಟ ೧: ಸಾಲು ೨, ಸಾಲು ೧೭; ಪುಟ ೨೬: ಸಾಲು ೮; ಪುಟ:೫೯,ಸಾಲು ೨; ಪುಟ ೯೩: ಸಾಲು ೨,ಸಾಲು ೨೫ ಇತ್ಯಾದಿ).

ಹೀಗೆ ಹೇಳುವದು absolutely presumptive statement ಹಾಗು ಲಿಪಿ ಕಡಿತಕ್ಕೆ ತಾಂತ್ರಿಕ ಕಾರಣವಾಗುವದಿಲ್ಲ. ಕನ್ನಡದಲ್ಲಿ ಇತರ ಭಾರತೀಯ ಭಾಷೆಗಳ ಹಾಗೂ ಅನೇಕ ಅಭಾರತೀಯ ಭಾಷೆಗಳ ಪದಗಳು ಸಮ್ಮಿಳಿತವಾಗಿವೆ. ಇವುಗಳ ಸರಿಯಾದ ಉಚ್ಚಾರ ಮಾಡಲು ಈಗ ಕನ್ನಡದಲ್ಲಿರುವ ಧ್ವನಿಸಂಕೇತಗಳನ್ನು ನಾವು ಉಳಿಸಿಕೊಂಡರೆ ಸಾಕು. (ಉದಾ:ಖುದಾ, ಖಾನದಾನೀ, ಖೋಮೆನಿ, ಘೋಟಾಳೆ ಇ.)

ಎರಡನೆಯದಾಗಿ ಅವಶ್ಯವಾದರೆ, ಇನ್ನೂ ಹೆಚ್ಚಿನ ಧ್ವನಿಸಂಕೇತಗಳನ್ನೂ ನಾವು ರೂಢಿಸಿಕೊಳ್ಳಬೇಕು. ಉದಾಹರಣೆಗಾಗಿ, ಇಂಗ್ಲೀಶಿನಲ್ಲಿರುವ doctor, profit ಮೊದಲಾದ ಪದಗಳನ್ನು ಬರೆಯುವಾಗ ನಾಗರಿ ಲಿಪಿಯಲ್ಲಿ ‘ಡಾ’ ಅಥವಾ ‘ಪ್ರಾ’ ಅಕ್ಷರಗಳ ಮೇಲ್ಗಡೆಯಲ್ಲಿ ಅರ್ಧಚಂದ್ರದ ಸಂಕೇತವನ್ನು ಬಳಸುತ್ತಾರೆ. ಕನ್ನಡದಲ್ಲೂ ಸಹ ಇದನ್ನು ಬಳಸಲಾಗುತ್ತಿತ್ತು. ಇದೀಗ ಅರ್ಧಚಂದ್ರ ಸಂಕೇತಕ್ಕೆ ಕನ್ನಡದಲ್ಲಿ ಅರ್ಧಚಂದ್ರಪ್ರಯೋಗವಾಗಿದ್ದರಿಂದ, ಈ ಧ್ವನಿಯನ್ನು ಸಮರ್ಥವಾಗಿ ಬರೆಯಲು ಆಗುತ್ತಿಲ್ಲ.
ಒಂದು ಉದಾಹರಣೆ: ಕನ್ನಡಿಗರಲ್ಲಿ John ಹೆಸರಿನ ವ್ಯಕ್ತಿಗಳು ಇದ್ದಾರಷ್ಟೆ. ಇವರು ತಮ್ಮ ಹೆಸರನ್ನು ಜಾನ್ ಎಂದು ಬರೆದುಕೊಂಡರೆ ಅದನ್ನು ಅನೇಕರು ಇಂಗ್ಲೀಶಿನ ‘ಒ’ಕಾರವಿಲ್ಲದೇ ಉಚ್ಚರಿಸುತ್ತಾರೆ. ಇದನ್ನು ತಪ್ಪಿಸಲು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ John ಪದವನ್ನು ‘ಜೋನ್’ ಎಂದು ಬರೆಯುತ್ತಾರೆ. ಆದರೆ Joan ಎನ್ನುವ ಹೆಸರೂ ಇದೆ ಎನ್ನುವದನ್ನು ಗಮನಿಸಿ. ಇಂತಹ ಆಭಾಸವನ್ನು ತಪ್ಪಿಸಲು ‘ಜಾ’ ಅಕ್ಷರದ ಮೇಲೆ ಅರ್ಧಚಂದ್ರ ಕೊಡುವದೇ ಸರಿಯಾದ ಉಪಾಯ.
ಮತ್ತೊಂದು ಉದಾಹರಣೆ: ಕನ್ನಡಿಗರು Collage ಹಾಗು College ಅನ್ನುವ ಎರಡು ವಿಭಿನ್ನ ಪದಗಳನ್ನು ಮಾತಿನಲ್ಲಿ ಬಳಸುತ್ತಾರೆ ಹಾಗು ಬರಹದಲ್ಲೂ ಉಪಯೋಗಿಸುತ್ತಾರೆ. ಒಂದಕ್ಕೆ ಕೊಲೇಜ ಎಂದು ಬರೆಯುವದು ಸರಿ. ಮತ್ತೊಂದಕ್ಕೂ ಹಾಗೆ ಬರೆಯುವದು ತಪ್ಪಲ್ಲವೆ? ಅದಕ್ಕೆ ಬೇಕು ಮೇಲೊಂದು ಅರ್ಧಚಂದ್ರವುಳ್ಳ ‘ಕಾ’. ಅರ್ಥಾತ್, ನಮಗೆ ಹೆಚ್ಚೆಚ್ಚು ಧ್ವನಿಸಂಕೇತಗಳು ಬೇಕಾದಂತೆ, ಅವುಗಳನ್ನು ಸೃಷ್ಟಿಸಿಕೊಂಡರೆ ತಪ್ಪೇನು? ಲಿಪಿ ಹೆಚ್ಚೆಚ್ಚು ವಿಕಾಸವಾದರೆ ಅದರಲ್ಲಿ ತಪ್ಪೇನಿದೆ?

ಶಂಕರ ಭಟ್ಟರು ತಮಿಳು ಲಿಪಿಯನ್ನು ಬಹುವಾಗಿ ಮೆಚ್ಚಿಕೊಂಡಿದ್ದಾರೆ. (ಮೊದಲ ಮುದ್ರಣ, ಪುಟ ೬೮ರಿಂದ ಪುಟ ೭೩ರವರೆಗೆ).
ಮೂಲ ಬ್ರಾಹ್ಮಿ ಲಿಪಿಯಿಂದ ಭಾರತೀಯ ಲಿಪಿಗಳು ವಿಕಾಸಗೊಳ್ಳುವ ಸಂದರ್ಭದಲ್ಲಿ, ಒಂದು ಕಾಲದಲ್ಲಿ ತಮಿಳು ಹಾಗು ಕನ್ನಡದಲ್ಲಿ ಕೆಲವೇ ಅಕ್ಷರಗಳು ಇದ್ದಿರಬಹುದು. ಆದರೆ ಕನ್ನಡ ಲಿಪಿಯು ವಿಕಾಸಗೊಂಡಿತು. ತಮಿಳು ಲಿಪಿ ಹಳೆಯ ಸ್ಥಿತಿಯಲ್ಲಿಯೇ ಉಳಿದುಕೊಂಡಿತು. ಇದನ್ನು ಮಂಗನಿಂದ ಮಾನವನಾದ(=ಕನ್ನಡ) ಹಾಗು ಮಂಗನಾಗಿಯೇ ಉಳಿದ (=ತಮಿಳು) ಡಾರ್ವಿನ್ ವಿಕಾಸವಾದಕ್ಕೆ ಹೋಲಿಸಬಹುದು. ನನ್ನ ಈ ಲೇವಡಿ ಮಾತಿಗೆ ಚಕೋರರಂತಹ sensitive persons ವಿರೋಧ ವ್ಯಕ್ತಪಡಿಸಬಹುದು. ಆದರೆ ನನ್ನ ಮಾತನ್ನು ಸ್ಪಷ್ಟ ಪಡಿಸಲು ನನಗೆ ಬೇರೊಂದು ಹೋಲಿಕೆ ಹೊಳೆಯುತ್ತಿಲ್ಲ. I apologise.

ಹೀಗಾಗಿ ಕನ್ನಡದಲ್ಲಿ ಕೆಳೆಯ/ಗೆಳೆಯ, ತಬ್ಬು/ದಬ್ಬು ಮೊದಲಾದ ಭಿನ್ನ ಅರ್ಥವುಳ್ಳ ಪದಗಳು ಸಾಧ್ಯವಾದರೆ ಇದು ತಮಿಳಿನಲ್ಲಿ ಸಾಧ್ಯವಿಲ್ಲ. ( ‘ಕೆಳೆಯನು ಕೆಳದಿಯನ್ನು ತಬ್ಬಿದನು’ ಎನ್ನುವ ವಾಕ್ಯವನ್ನು ‘ಗೆಳೆಯನು ಗೆಳತಿಯನ್ನು ದಬ್ಬಿದನು’ ಎಂದೂ ಸಹ ತಮಿಳಿನಲ್ಲಿ ಓದಬಹುದು ಅಂತ ಕಾಣುತ್ತೆ).

ಶಂಕರ ಭಟ್ಟರೆ ಸ್ವತಃ ತಮ್ಮ ವಾದವನ್ನು ಮಂಡಿಸುತ್ತ, ತಮಿಳಿನಲ್ಲಿ ಯಾವ ರೀತಿಯಿಂದ ಸಂಸ್ಕೃತ ಪದಗಳನ್ನು ತಮಿಳಿನಲ್ಲಿ ಬರೆಯುತ್ತಾರೆ ಹಾಗೂ ಓದುತ್ತಾರೆ ಎನ್ನುವ ಉದಾಹರಣೆಗಳನ್ನು ಕೊಟ್ಟಿದ್ದಾರೆ.
ಭಟ್ಟರು ಕೊಟ್ಟ ಉದಾಹರಣೆಗಳು:

ಪುಟ ೭೧:
ಸಂಸ್ಕೃತ ಪದ--- ತಮಿಳು ಪದ
ಬುದ್ಧಿ------ ಪುತ್ತಿ
ಭಕ್ತಿ------ ಪಕ್ತಿ
ಧಾನ್ಯ----- ತಾನಿಯ
ಅಧಿಕ----- ಅತಿಕ
ಶೀಘ್ರ------ ಚೀಕ್ಕಿರ
ಗೋಷ್ಠಿ----- ಕೋಷ್ಟಿ
ಮುಖ್ಯ----- ಮುಕ್ಕಿಯ
ಮಾಂಗಲ್ಯ----------- ಮಾಙ್ಕಲ್ಯ
ಸಂದೇಹ----- ಚನ್ತೇಕ
ಪೂಜಾರಿ----- ಪೂಚಾರಿ
ತಾಂಬೂಲ----------- ತಾಮ್ಪೂಲ
ತಾಂಡವ------ ತಾಣ್ಟವ
ಋಷಿ------- ರಿಷಿ
ಕೃಷ್ಣ------ ಕಿರುಷ್ಣ
ತೃಪ್ತಿ------ ತಿರುಪ್ತಿ
ದುರದೃಷ್ಟ---------- ತುರತಿರುಷ್ಟ
ಪ್ರಯಾಣ------------ ಪಿರಯಾಣ
ಪ್ರಯೋಗ------------ ಪಿರಯೋಕ
ದ್ವಾಪರ----- ತುವಾಪರ
ಗ್ರಾಮ------- ಕಿರಾಮ
ಧ್ಯಾನ------ ತಿಯಾನ
ಬ್ರಹ್ಮ------ ಪಿರಮ್ಮ
ಉಪದೇಶ------------ ಉಪತೇಚ
ದರ್ಶನ------ ತರಿಚನ
ಅತಿಶಯ------ ಅತಿಚಯ
ದಿಶಾ------- ತಿಚೈ
ಗೌರವ------ ಕೌರವ
ಗುಣ------- ಕುಣ
ದುಃಖ------ ತುಕ್ಕ
ದೀಪ------- ತೀಪ

ಭಟ್ಟರ ಪ್ರಕಾರ, ಕನ್ನಡಿಗರಿಗೂ ಸಹ ಇದೇ ಸರಿಯಾದ ಮಾರ್ಗ. (ತಮಿಳು ಜನಾಃ ಯೇನ ಗತಾ: ಸಃ ಪಂಥಾಃ?)
ಭಟ್ಟರೆ,ನೀವು ಪ್ರಗತಿಚಕ್ರವನ್ನು reverse ಮಾಡುತ್ತೇನೆಂದರೆ, ಅದು ತಪ್ಪು ಕಣ್ರೀ.
ಜಗತ್ತು ಎಷ್ಟು fast ಆಗಿ ಓಡ್ತಾ ಇದೆ ಅನ್ನುವದು ನಿಮಗೆ ಕಾಣೋದಿಲ್ವೆ? ಕನ್ನಡಿಗರು ಈಗ ಕನ್ನಡದ ಸಾಮರ್ಥ್ಯವನ್ನು ಹೆಚ್ಚಿಸಬೇಕಾಗಿದೆ. ಕನ್ನಡಕ್ಕೆ ಬೇರೆ ಬೇರೆ ಭಾಷೆಗಳ ಪದಗಳನ್ನು ತರಬೇಕಾಗಿದೆ. ಆ ಸಂದರ್ಭದಲ್ಲಿ ಬೇರೆ ಭಾಷೆಯ ಪದಗಳ ಮೂಲಧ್ವನಿಗೆ ನಾವು ಸಾಧ್ಯವಾದಷ್ಟೂ ಅನ್ಯಾಯ ಮಾಡಬಾರದು.

ಒಂದು ಉದಾಹರಣೆ: ‘ಯೇಶು’ ಇದು ಪ್ರೀತಿ ಹಾಗು ಶಾಂತಿಯ ಸಂದೇಶವನ್ನು ಜಗತ್ತಿಗೆ ನೀಡಿದ ಪುಣ್ಯಾತ್ಮನ ಸರಿಯಾದ ಹೆಸರು. ಇದನ್ನು ಫ್ರೆಂಚ್ ಭಾಷೆಯಲ್ಲಿ ಬಹುಶ: JESUS ಎಂದು ಬರೆದು ‘ಯೇಶು’ ಎಂದು ಉಚ್ಚಾರ ಮಾಡುತ್ತಾರೆ. ಇಂಗ್ಲೀಶರು ಫ್ರೆಂಚ್ spelling ತೆಗೆದುಕೊಂಡರು; ಇಂಗ್ಲಿಶ್ ಉಚ್ಚಾರ ಮಾಡಿದರು.
ಹೀಗಾಗಿ ಇಂದು ಇಂಗ್ಲಿಶ್ ಅನ್ನು ಒಂದು ಮುಖ್ಯ ಭಾಷೆಯಾಗಿ ಕಲಿತವರು, ಯೇಶುವನ್ನು ಜೀಸಸ್ ಎಂದು ವಿರೂಪಗೊಳಿಸಿದ್ದಾರೆ. (ಸಾಧ್ಯವಾದಷ್ಟೂ ಅನ್ಯಾಯ ಮಾಡಬಾರದು ಎಂದು ಬರದದ್ದೇಕೆನ್ನುವದಕ್ಕೆ ಇಲ್ಲೊಂದು ಉದಾಹರಣೆ: ಫ್ರೆಂಚ್ ಭಾಷೆಯಲ್ಲಿ ‘ಪ್ರೋಗ್ರಾಮ್’ ಪದದಲ್ಲಿಯ ‘ಪ್ರೊ’ ಅನ್ನು ಅವರು ಪ್ರೋ ಹಾಗು ಬ್ರೋ ಧ್ವನಿಗಳ ಮಿಶ್ರಣದಂತೆ ಉಚ್ಚರಿಸುತ್ತಾರೆ. ತಮಿಳಿನಲ್ಲೂ ಸಹ ಳ ಮತ್ತು ಝ ಧ್ವನಿಗಳ ಮಿಶ್ರ ಧ್ವನಿ ಇದ್ದಂತೆ.)

ಬೆಂಗಳೂರಿಗೆ ಬ್ಯಾಂಗ್ಲೋರ್ ಎಂದು ಕರೆಯುವದನ್ನು ನಾವು ವಿರೋಧಿಸಲಿಲ್ಲವೆ? ಅಂದ ಮೇಲೆ ಯೇಶುವನ್ನು ಜೀಸಸ್ ಎಂದು ಕರೆಯುವದು ತಪ್ಪಲ್ಲವೆ?
ಈಗ ನೋಡಿ: ‘ಕನ್ನಡ ಸಾಹಿತ್ಯ ಚರಿತ್ರೆ’ಯನ್ನು ಬರೆದ ಶ್ರೀ ರಂ. ಶ್ರೀ. ಮುಗಳಿ ತಮಿಳಿನಲ್ಲಿ ಏನಾಗುತ್ತಾರೆ ಎಂದು ವಿಚಾರ ಮಾಡಿದರೆ ಮೈ ಉರಿದು ಹೋಗುತ್ತದೆ. ಆದರೆ ಇದು ‘ತಿರು ಸಂಕರ ಪತ್ತ’ರಿಗೆ ಅತ್ಯಂತ ಯೋಗ್ಯವಾದ ಮಾರ್ಗವಾಗಿ ಕಾಣುತ್ತದೆ.

ಮತ್ತೆ ಅವರ ಸಮರ್ಥನೆ ಏನು? ‘ಕೆಳವರ್ಗ’ದವರ ಉದ್ಧಾರ.
‘ಕೆಳವರ್ಗ’ ಎಂದು ಯಾರಿಗೆ ಭಟ್ಟರು ಕರೆಯುತ್ತಾರೊ ಅವರಲ್ಲಿಯ ಅನೇಕರು, ತಮ್ಮ ಪ್ರತಿಭೆಯ ಮೂಲಕ ಇಂದು ಉಚ್ಚ ಸ್ಥಾನಗಳನ್ನು ಪಡೆದಿಲ್ಲವೆ? ಕನ್ನಡದ ಅನೇಕ ಶ್ರೇಷ್ಠ ಸಾಹಿತಿಗಳು the so called ಕೆಳವರ್ಗದವರಲ್ಲವೆ? ಅನೇಕರು high postsಗಳಿಲ್ಲವೆ? ಇವರಿಗೆ ಕನ್ನಡ ಲಿಪಿ ಅಡ್ಡ ಬಂದಿತೆ? ಅನೇಕ ‘ಮುಂದುವರಿದ’ ವರ್ಗದವರು ಕೆಳಸ್ತರಗಳಲ್ಲಿ ಇಲ್ಲವೆ? ಇವರಿಗೆ ಕನ್ನಡ ಲಿಪಿ ಸಹಾಯ ಮಾಡಿತೆ?

ಆದುದರಿಂದ ಭಟ್ಟರ (೧) ಉದ್ದೇಶದಲ್ಲಿ ಅರ್ಥವಿಲ್ಲ ಹಾಗು (೨) ಲಿಪಿಕ್ರಾಂತಿಯಲ್ಲಿ ಅನರ್ಥವಿದೆ. ಆದರೆ ಅವರ ಪದಕ್ರಾಂತಿಯ ಮೇಲೆ ಈ ಆರೋಪಗಳನ್ನು ಹೊರಿಸಲಾಗುವದಿಲ್ಲ. ಅವುಗಳನ್ನು ಮುಂದಿನ postನಲ್ಲಿ ನೋಡೋಣ.

ಹೊಸ ಟಿಪ್ಪಣಿ: ಶ್ರೀ ಹಂಸಾನಂದಿಯವರು ಈ ರೀತಿ commentiಸಿದ್ದಾರೆ:
" ತಮಿಳಿನಲ್ಲೂ ಸಹ ಳ ಮತ್ತು ಝ ಧ್ವನಿಗಳ ಮಿಶ್ರ ಧ್ವನಿ ಇದ್ದಂತೆ"

ಈ ಅಕ್ಷರಕ್ಕೆ ಇಂಗ್ಲಿಷ್ ನಲ್ಲಿ ಸೂಚಿಸುವಾಗ ’zh' ಎಂದು ಬರೆಯುವುದು ರೂಢಿಯಾದರೂ, ಅದು ಳ ಮತ್ತು ಝ ಧ್ವನಿಗಳ ಮಿಳಿತವೇನೂ ಅಲ್ಲ.ೞ ಎಂಬ ಹಳೆಗನ್ನಡದ ಅಕ್ಷರವೇ ಅದು. ಹೆಚ್ಚಿನಂಶ ಳ ವನ್ನು ಹೋತರೂ, retroflextion ಇನ್ನೂ ಹೆಚ್ಚಿರುವ ಉಚ್ಚಾರ ಅದರದ್ದು

77 comments:

hamsanandi said...

ನಾನು ಶಂಕರಭಟ್ಟರ ಪುಸ್ತಕ ಓದಿಲ್ಲ - ಓದಿದರೂ, ತಮಿಳಿನ ಶೈಲಿಯ ಬರವಣಿಗೆ ಕನ್ನಡಕ್ಕೆ ಸಲ್ಲದು ಎನ್ನುವುದು ನನ್ನ ತಿಳಿವು ಹಾಗೂ ನಿಲುವು.

ಉದಾಹರಣೆಗೆ ನಂಬಿಕೆ ಅನ್ನುವ ಪದವನ್ನು ತಮಿಳಲ್ಲಿ ಬರೆಯಲು ಸಾಧ್ಯವೇ ಇಲ್ಲ - ಅದು ನಂಬಿಗೆಯಾಗುತ್ತೆ ;) ಇಲ್ಲದೆ ಹೋದರೆ ಇಲ್ಲದ ಒತ್ತಕ್ಷರದ ಉಚ್ಚಾರದೊಡನೆ ನಂಬಿಕ್ಕೆ ಎಂದು ಬರೆಯಬೇಕಾಗುತ್ತೆ :)!!

ಶಂಕರಭಟ್ಟರಿಗಿಂತ ಬಹಳ ಹಿಂದೇ ಬಿ.ಎಂ.ಶ್ರೀ ಅವರೂ ಇಂತಹ ಒಂದು ಸುಧಾರಣೆ (!) ಮಾಡುವ ಸಲಹೆ ಕೊಟ್ಟಿದ್ದರು ಎನ್ನುವುದು ಓದಿದ ನೆನಪು - ಆದರೆ ಆ ಕಾಲಕ್ಕೆ ಅದು ಮುದ್ರಣಕ್ಕೆ ಸುಲಭಮಾಡುವ ಮಾತಾಗಿತ್ತು ಅಂತ ಕಾಣುತ್ತೆ. ಈ ಸಲಹೆ ಯಾರದ್ದೇ ಆಗಲಿ, ನನಗೆ ಸ್ವಂತವಾಗಿ ಅದರಲ್ಲಿ ಹೆಚ್ಚುಗಾರಿಕೆ ಕಾಣದು, ಬದಲಾಗಿ ತೊಡಕುಗಳೇ ಕಾಣುತ್ತವೆ.

ಇನ್ನೊಂದು ವಿಷಯ - ನೀವು ಹೀಗಂದಿರಿ :
" ತಮಿಳಿನಲ್ಲೂ ಸಹ ಳ ಮತ್ತು ಝ ಧ್ವನಿಗಳ ಮಿಶ್ರ ಧ್ವನಿ ಇದ್ದಂತೆ"

ಈ ಅಕ್ಷರಕ್ಕೆ ಇಂಗ್ಲಿಷ್ ನಲ್ಲಿ ಸೂಚಿಸುವಾಗ ’zh' ಎಂದು ಬರೆಯುವುದು ರೂಢಿಯಾದರೂ, ಅದು ಳ ಮತ್ತು ಝ ಧ್ವನಿಗಳ ಮಿಳಿತವೇನೂ ಅಲ್ಲ.ೞ ಎಂಬ ಹಳೆಗನ್ನಡದ ಅಕ್ಷರವೇ ಅದು. ಹೆಚ್ಚಿನಂಶ ಳ ವನ್ನು ಹೋತರೂ, retroflextion ಇನ್ನೂ ಹೆಚ್ಚಿರುವ ಉಚ್ಚಾರ ಅದರದ್ದು.

sunaath said...

ಹಂಸಾನಂದಿಯವರೆ,
ಮಾಹಿತಿಗಾಗಿ ಧನ್ಯವಾದಗಳು. ಬಿ.ಎಮ್.ಶ್ರೀಯವರೂ ಸಹ ಕನ್ನಡ ಬರಹದ ಬದಲಾವಣೆಗಾಗಿ ಸಲಹೆ ಕೊಟ್ಟಿದ್ದರು. ಅದು ಒಂದು ರೀತಿಯ spelling writing ತರಹ ಇತ್ತು.
ಉದಾ: ಬ್‌ಇ. ಎಮ್. ಸ್‌ಹ್‌ರ್‌ಈ‌.=ಬಿ.ಎಮ್.ಶ್ರೀ.
ಕ್‌ಅ‌ನ್‌ನ್‌ಡ್‌=ಕನ್ನಡ.
ನನಗೆ ತಮಿಳು ಬರಹದ ಸರಿಯಾದ ಕಲ್ಪನೆ ಇಲ್ಲ. ನನಗೆ ಅನಿಸುವ ಮಟ್ಟಿಗೆ ಅದೂ ಇಂತಹ spelling writing system ಇರಬೇಕಲಲ್ವೆ?
ಆಷ್ಟೇ ಅಲ್ಲ, ತಮಿಳಿನಲ್ಲಿ 'ಕೌ' ಎಂದು ಬರೆಯಲು 'ಅಕ್‌ಉ' ಎಂದು ಬರೆಯುತ್ತಾರಲ್ಲವೆ?
ದಯವಿಟ್ಟು ಮಾಹಿತಿ ನೀಡಲು ಪ್ರಾರ್ಥಿಸುತ್ತೇನೆ.

sunaath said...

ಹಂಸಾನಂದಿಯವರೆ,
ನೀವು ಳ ದ ಬಗೆಗೆ ನೀಡಿದ ಮಾಹಿತಿಯನ್ನು main postingನ ಟಿಪ್ಪಣಿಯಲ್ಲಿ ಸೇರಿಸಿದ್ದೇನೆ.

Harisha - ಹರೀಶ said...

ಸುನಾಥ್, ನೀವು ಈ ವಿಷಯದ ಬಗ್ಗೆ ಗಂಭೀರವಾಗಿ ಚರ್ಚೆ ಹುಟ್ಟು ಹಾಕುತ್ತಿರುವುದು ಸಂತೋಷದ ಸಂಗತಿ. ಮುಂದುವರೆಸಿ! ನಾವೂ ನಿಮ್ಮ ಜೊತೆಗಿದ್ದೇವೆ.

ತೇಜಸ್ವಿನಿ ಹೆಗಡೆ said...

ಸುನಾಥರೆ,

ತುಂಬಾ ವಿಷಯಗಳನ್ನು ಅದರಲ್ಲೂ ಹೊಸ ಹೊಸ ವಿಷಯಗಳನ್ನು ನಿಮ್ಮ ಲೇಖನಗಳ ಮೂಲಕ ತಿಳಿಯುತ್ತಿದ್ದೇನೆ. ತುಂಬಾ ಧನ್ಯವಾದಗಳು. ಈ ಮೇಲ್ ಜಾತಿ ಕೀಳ್ ಜಾತಿ Concept ಜಾತಿಯನ್ನೂ ಮೀರಿಸುತ್ತಿದೆ ಎಂದೆನ್ನಿಸುತ್ತಿದೆ. ಆ ರೀತಿ ಹೇಳುವುದರಿಂದಲೇ ಇವುಗಳ ನಡುವೆ ಕಂದಕಗಳಾಗುತ್ತಿವೆಯೇನೋ!!

Shriniwas M Katti said...

ಶಂಕರಭಟ್ಟರ ಪುಸ್ತಕ ಓದುವ ಅವಶ್ಯಕತೆಯೇ ಇಲ್ಲ. ಯಾಕೆಂದರೆ ಅದೊಂದು ಅಸಂಗತ ವಿಷಯಗಳ ಕಂತೆ. ಅವರ ಪುಸ್ತಕದಿಂದ ಕನ್ನಡಕ್ಕೆ ಯಾನ ಹಾನಿಯೂ ಆಗುವದಿಲ್ಲ. ಅವರ ಈ ಪುಸ್ತಕದ ವಿಷಯವಾಗಿ, ಇಷ್ಟೊಂದು ಸಮಯ ಹಾಗೂ ಬುದ್ಧಿಯನ್ನು ವ್ಯಯಿಸಿದ್ದೀರಲ್ಲ ? ಇದೇನು ಜಾಣತನವಲ್ಲ. ಇದೇ ಸಮಯದಲ್ಲಿ ನೀವು ಇನ್ನೂ ನಾಲ್ಕು ಸುಂದರ ಲೇಖನಗಳನ್ನು ಬರೆಯಬಹುದಿತ್ತು !!

Anonymous said...

ನಾಯಿ ಬೊಗಳಿದರೆ, ದೇವಲೋಕ ಹಾಳಾಗುವದೆ ?
Respected Shri Shankara Bhat, Pl excuse me for making the harsh comments. I had no other go.

sunaath said...

ಹರೀಶ,
ಧನ್ಯವಾದಗಳು.

sunaath said...

ತೇಜಸ್ವಿನಿ,
ಬರಹ ಸುಧಾರಿಸುವ ನೆವದಲ್ಲಿ ಜಾತಿ ವೈಷಮ್ಯವನ್ನು ಬೆಳೆಸುತ್ತಿರುವದೇ ದೊಡ್ಡ ಸಮಸ್ಯೆಯಾಗಿದೆ. ಶಂಕರ ಭಟ್ಟರು ಅದನ್ನು ಅರಿಯುತ್ತಿಲ್ಲವೇನೊ?

sunaath said...

ಕಟ್ಟಿಯವರೆ,
ಶಂಕರ ಭಟ್ಟರು ಹೊಸ ವ್ಯಾಕರಣದ ಪ್ರತಿಪಾದನೆಯಲ್ಲಿ ಏಕಾಕಿಯಾಗಿಲ್ಲ. ಅವರ ಜೊತೆಗೆ ಇನ್ನೂ ಅನೇಕ ಪಂಡಿತರಿದ್ದಾರಂತೆ. ವ್ಯಾಕರಣವು ನಮ್ಮ ಆಡುಮಾತನ್ನೇ ಅನುಸರಿಸಬೇಕು ಎನ್ನುವದು ಇವರ ತತ್ವ. Just imagine
if it becomes a reality in few more years!

sunaath said...

ಗೀತಾ,
ನಾಯಿ ಬೊಗಳಿದರೆ ದೇವಲೋಕ ಹಾಳಾಗುವದಿಲ್ಲ, ಖರೆ; ಆದರೆ ನಾಯಿಗೆ ಒಂದು ಸಲ ಡೊಣ್ಣೆಯನ್ನು ತೋರಿಸಲೇ ಬೇಕು.

NilGiri said...

ಶಂಕರ ಭಟ್ಟರಿಗೆ ಅನಗತ್ಯ ಪ್ರಚಾರ ಕೊಡುತ್ತಿದ್ದೇವೆ ಅನ್ನಿಸುತ್ತಿದೆ.

sunaath said...

ನೀಲಗಿರಿ,
ನೀವು ಹೇಳುವದು ಸರಿಯೇ. ಆದರೆ ಈ ಕತೆಯನ್ನು ಕೇಳಿ:

ತಕ್ಷಕ ಒಂದು ಹುಳುವಿನ ರೂಪದಿಂದ ಪರೀಕ್ಷಿತ ಮಹಾರಾಜನ ಅರಮನೆಯನ್ನು ಪ್ರವೇಶಿಸಿದ; ಆ ಬಳಿಕ ವಿಷದ ಹಾವಾಗಿ ಅವನನ್ನು ಕಚ್ಚಿದ.

ಶಂಕರ ಭಟ್ಟರನ್ನು ಹಾಗು ಅವರ ಜೊತೆಗಿರುವವರನ್ನು ಉಪೇಕ್ಷಿಸುವದು risky ಅನ್ನಿಸುತ್ತೆ.

hamsanandi said...

ಸುನಾಥರೆ,

ನೀವು ಕೇಳಿದಿರಿ:

"ಆಷ್ಟೇ ಅಲ್ಲ, ತಮಿಳಿನಲ್ಲಿ 'ಕೌ' ಎಂದು ಬರೆಯಲು 'ಅಕ್‌ಉ' ಎಂದು ಬರೆಯುತ್ತಾರಲ್ಲವೆ?
ದಯವಿಟ್ಟು ಮಾಹಿತಿ ನೀಡಿ"

ತಮಿಳು ಲಿಪಿಯಲ್ಲಿ ಕನ್ನಡದಲ್ಲಿರುವಂತೆ ವ್ಯಂಜನಗಳ ಒತ್ತಕ್ಷರಗಳಿಲ್ಲ. ಮತ್ತೆ, ಅದೇ ರೀತಿ ಯಾವುದೇ ಕಾಗುಣಿತದ ಸಂಕೇತಗಳೂ ಸಾಲಿನ ಕೆಳಗೆ, ಅಂದರೆ ಕನ್ನಡದ ಐತ್ವ, ವಟ್ರಸುಳಿ ಮೊದಲಾದ ರೀತಿ, ಬರುವುದಿಲ್ಲ.

ಉದಾಹರಣೆಗೆ,

ಸದ್ದು ಅನ್ನುವ ಪದವನ್ನು ಸದ್‍ದು ಅಂತಲೂ, ಪಲ್ಲಿ ಅನ್ನುವ ಪದವನ್ನು ಪಲ್‍ಲಿ ಅಂತಲೂ ಬರೆಯುತ್ತಾರೆ.

ಕನ್ನಡದಲ್ಲಿ ವ್ಯಂಜನಾಕ್ಷರಗಳನ್ನು ಹೇಳಿಕೊಡುವಾಗ ಸ್ವರಸಮೇತವಾಗಿ ಹೇಳಲಾಗುತ್ತೆ. ಅಲ್ಲವೇ? ಸಾಧಾರಣವಾಗಿ ನಾವು ಕ ಖ ಗ ಘ ಎನ್ನುತ್ತೇವೆ ಹೊರತು ಕ್ ಖ್ ಗ್ ಘ್ ಎನ್ನುವುದಿಲ್ಲ- ನಿಜವಾಗಿ ಕ್ ಅನ್ನುವುದೇ ವ್ಯಂಜನವಾಗಿದ್ದರೂ. ಇದು ಉಚ್ಚಾರಣೆಯ ಸೌಕರ್ಯಕ್ಕೆ ನಾವು ಮಾಡಿಕೊಂಡಿರುವುದಷ್ಟೇ. ತಮಿಳಿನಲ್ಲಿ ಈ ಸ್ವರವನ್ನು ವ್ಯಂಜನದ ಮುಂದೆ ಬದಲು ಹಿಂದೆ ಹಾಕುತ್ತಾರೆ. ಅಂದರೆ ವರ್ಣಮಾಲೆಯನ್ನು ಹೇಳುವಾಗ ಅಕ್, ಅಚ್ ಇತ್ಯಾದಿಯಾಗಿ ಹೇಳಿದರೂ, ಅದು ಕ್, ಚ್ ಗೆ ಸಮಾನ.

ಹಾಗಾಗಿ ನಾವು ಕಕೊಂಬು ಕು ಅಂತ ಹೇಳಿಕೊಡುವ ಹಾಗೆ ಅವರು ಅಕ್ಉ ಕು, ಅಕ್ ಔ ಕೌ ಅಂತ ಹೇಳಿಕೊಬಹುದಷ್ಟೆ.
~

ಸುನಿಲ್ ಜಯಪ್ರಕಾಶ್ said...

ಸುನಾಥರೇ, [http://sampada.net/forum/2697|ಕನ್ನಡದ ಏತ್ವಗಳು] ಚರ್ಚೆಯಲ್ಲಿ John ಈ ರೀತಿಯ ಪದಪ್ರಯೋಗಗಳಿಗೆ ನಾವು ಏನು ಮಾಡಬಹುದು ಎಂಬುದರ ಬಗ್ಗೆ ಕೆಲವು ಚರ್ಚೆಯಾಗಿತ್ತು. ಬಿಡುವಿದ್ದಾಗ ಓದಿ ನೋಡಿ. ಚುಕುಟಾಗಿ ನೋಡಲು ಈ ಇಮೇಜ್ ಲಿಂಕ್ ನೋಡಿ.

ಸುನಿಲ್ ಜಯಪ್ರಕಾಶ್ said...

ಮನ್ನಿಸಿ, ಹಿಂದಿನ ಕಾಮೆಂಟಿನಲ್ಲಿ ಈ ಲಿಂಕ್ ಸೇರಿಸಬೇಕಿತ್ತು.
http://sampada.net/system/files/images/Kedage_font.PNG

ಸುನಿಲ್ ಜಯಪ್ರಕಾಶ್ said...

ಶ್ರೀನಿವಾಸ ಕಟ್ಟಿ, ಶಂಕರ ಭಟ್ಟರ ಪುಸ್ತಕಗಳನ್ನು ಓದುವ ಅವಶ್ಯಕತೆ ಇಲ್ಲ ಅಂತ ಹೇಳಕ್ಕೆ ಆಗಲ್ಲ. ಸುನಾಥರು ಅವರ ಪುಸ್ತಕಗಳನ್ನು ಓದಿದ್ದರಿಂದಲೇ ಅಲ್ಲವೇ, ಅವರು ಅಧಿಕಾರಯುತವಾಗಿ ಅದರ ವಿಮರ್ಶೆ ಮಾಡಲು ಸಾಧ್ಯವಾಗುತ್ತಿರುವುದು. ಹಾಗಾಗಿ, ತಾತ್ವಿಕ ವಿಮರ್ಶೆ, ಟೀಕೆಗಳು ಇರಲಿ, ಆದರೆ ತಿರಸ್ಕಾರ ಬೇಡ.

ಸುನಿಲ್ ಜಯಪ್ರಕಾಶ್ said...

ಸುನಾಥರೇ, ಹೌದು - "ಮೇಲ್ವರ್ಗ" ಮತ್ತು "ಕೆಳವರ್ಗದ" ಹಿನ್ನೆಲೆಯಲ್ಲಿ ಅಕ್ಷರಗಳನ್ನು ಕಡಿತಗೊಳಿಸುವ ಯೋಚನೆ ಅಷ್ಟು ಪ್ರಬುದ್ಧವಾಗಿಲ್ಲ ಅಂತ ನನಗೂ ಕೆಲವೊಮ್ಮೆ ಅನ್ನಿಸಿದೆ. ಈ ರೀತಿಯ ವರ್ಗೀಕರಣದ ಹಿನ್ನೆಲೆಯಿಂದ ಅಕ್ಷರಗಳನ್ನು ಕಡಿತಗೊಳಿಸಿದರೆ, ಆಗ ಒಂದು ರೀತಿಯ "ಇಗ್ನೊರೆನ್ಸ್ ಟು ಕಾಂಪ್ಲೆಕ್ಸಿಟಿ" ಶುರುವಾಗತ್ತೆ.

ಹಾಗೆಯೇ, ಈ ಅಕ್ಷರ ಕಡಿತಗೊಳಿಸುವಿಕೆ ಬಗ್ಗೆ ಬೇರೆ ಯಾವುದಾದರೂ ಆಯಾಮ ಶಂಕರ ಭಟ್ಟರ ಪುಸ್ತಕದಲ್ಲಿ ಸಿಕ್ಕಿದೆಯೇ ? ಅಥವಾ ಜಾತಿಯ ವರ್ಗೀಕರಣದ ಒಂದೇ ಕಾರಣವನ್ನು ಶಂಕರ ಭಟ್ಟರು ಮುಂದಿಟ್ಟಿದ್ದಾರೆಯೇ ?

Anonymous said...

ಹಂಸಾನಂದಿಯವರು ಹೇಳುವ ವರೆಗೂ ಅರಿಯದ ಮಹಾನುಬಾವರು...

Tamizh ಎಂದೇ ಬರೆಯೋದು ಏಕೆಂದರೆ ಅದು ತಮಿೞ್, ತಮಿಳ್ ಅಲ್ಲ..

ಈ ೞ ಹೞಗನ್ನಡದಲ್ಲಿ ಇತ್ತು.. ರಾಗವಾಂಕ ಹರಿಹರರ ಕಾಲದಲ್ಲಿ ಕನ್ನಡದಿಂದ ಹೋಯಿತು..

ಇದನ್ನೂ ಅರಿಯದ ಸ್ವಗೋಶಿತ ಪಂಡಿತರು.

ಹಂಸಾನಂದಿಯವರು ಹೇಳುವಂತೆ ಬಿ.ಎಂ.ಶ್ರೀಗಳೂ ಇದೆ ಮಾತನ್ನು ಹೇಳಿ ೨೮ ಅಕ್ಶರದ ವರ್ಣಮಾಲೆ ನೀಡಿದ್ದರು..

ಏಕೆಂದರೆ ಯಾವುದೇ ಕನ್ನಡದ ಪದದಲ್ಲಿ ಶ, ಷ, ಮಹಾಪ್ರಾಣ, ಋ, ೠ, ಲೃ ಅಃ, ಇಲ್ಲ.

ಒಂಭತ್ತು ಅಲ್ಲ ಒಂಬತ್ತು!

Harisha - ಹರೀಶ said...

Anonymous ಮಹಾನುಭಾವರೇ, ವೈಯಕ್ತಿಕ ದೂಷಣೆ ಯಾವುದೇ ಸಮಸ್ಯೆಗೆ ಪರಿಹಾರವಲ್ಲ. ಮರೆಯಲ್ಲಿದ್ದು ಏಕೆ ಜಗಳ ಆಡುತ್ತೀರಿ. ಹೆಸರು ಹಾಕಲು ಹೆದರಿಕೆಯೇ?

ಇದು ಬ್ಲಾಗ್ ಸ್ವಾಮಿ! ನಿಮ್ಮನ್ನು ಯಾರೂ ಏನೂ ಮಾಡುವುದಿಲ್ಲ.. ನಿಮ್ಮಂಥವರಿಂದ ಕನ್ನಡ ಪೂರ್ತಿ ನಿರ್ನಾಮವಾಗಬೇಕೆಂದು ವಿಧಿಲಿಖಿತವಿದ್ದರೆ ಅದನ್ನು ಯಾರೂ ತಪ್ಪಿಸಲು ಸಾಧ್ಯವಿಲ್ಲ. ಸಂತೋಷದಿಂದಿರಿ.

ಈ ಟಿಪ್ಪಣಿಯಲ್ಲಿ ಅನೇಕ ಮಹಾಪ್ರಾಣಗಳನ್ನು ಉಪಯೋಗಿಸಿದ್ದೇನೆ. ನಿಮಗೆ ಹೇಗೆ ಬೇಕೋ ಹಾಗೆ ತಿರುಚಿಕೊಂಡು ಓದಿಕೊಳ್ಳಿರಿ. ನನ್ನದೇನೂ ಅಭ್ಯಂತರವಿಲ್ಲ.

ಸುನಿಲ್ ಜಯಪ್ರಕಾಶ್ said...

ಈ ಚರ್ಚೆ ಆಸಕ್ತಿದಾಯಕವಾಗಿದೆ. ಆದರೆ ಪರಸ್ಪರ ಆರೋಪಗಳು ಇಲ್ಲದಿರಲಿ ಎಂದು ಆಶಿಸುವೆ.

ಹರೀಶ್, ಒಂದೇ ಒಂದು ಸಲಹೆ. ಅನಾನಿಮಿಕರಾಗಿ ಆಗಿ ಬರೆಯುವವರು ಇದ್ದೇ ಇರ್ತಾರೆ, ಆದರೆ ಅದೇ ಈ ಚರ್ಚೆಯ ಹಾದಿಯನ್ನು ತಪ್ಪಿಸೋದು ಬೇಡ.

>> ಈ ಟಿಪ್ಪಣಿಯಲ್ಲಿ ಅನೇಕ ಮಹಾಪ್ರಾಣಗಳನ್ನು ಉಪಯೋಗಿಸಿದ್ದೇನೆ. ನಿಮಗೆ ಹೇಗೆ ಬೇಕೋ ಹಾಗೆ ತಿರುಚಿಕೊಂಡು ಓದಿಕೊಳ್ಳಿರಿ. ನನ್ನದೇನೂ ಅಭ್ಯಂತರವಿಲ್ಲ.

ಶಂಕರ ಭಟ್ಟರು ಇದರ ಬಗ್ಗೆ ಪ್ರಸ್ತಾಪಿಸಿದ್ದಾರೆ, ಈಗ ನೀವೇ ನೋಡಿ, "ಅಭ್ಯಂತರವಿಲ್ಲ" ಎಂಬ ಬಳಕೆಯನ್ನು ನೀವು ಮಾಡಿದಿರಿ, ಆದರೆ ಅದನ್ನೇ "ಅಡ್ಡಿಯಿಲ್ಲ" ಎಂಬುದಾಗಿಯೂ ಕೂಡ ಯಾವುದೇ ಮಹಾಪ್ರಾಣವಿಲ್ಲದೆ, ಈಗ ನಮಗೆಲ್ಲರಿಗೂ ಇಷ್ಟವಾಗಿರುವ "ಶಿಷ್ಟ ಸುಸಂಸ್ಕೃತ ಕನ್ನಡಕ್ಕೆ" ಯಾವುದೇ ರೀತಿಯ ಅಪಚಾರವಾಗದ ಹಾಗೆ ಹೇಳಬಹುದು. ಕನ್ನಡದ ಬರವಣಿಗೆಯಲ್ಲಿ ಈ ರೀತಿ ಕನ್ನಡದ್ದೇ ಹೆಚ್ಚಿನ ಪದಗಳು ಬಳಕೆಯಾಗಬಹುದಾದರೆ, ಆಗ ಅದು ಹೆಚ್ಚಿನ ಜನರನ್ನು (ಬಹುಶಃ ಇದನ್ನೇ ಕೆಳವರ್ಗ, ಮೇಲ್ವರ್ಗಗಳ ಹಿನ್ನೆಲೆಯಲ್ಲಿ ವಿಮರ್ಶೆಗೈಯುವ ಸಾಹಸವನ್ನು ಶಂಕರ ಭಟ್ಟರು ಮಾಡಿರಬಹುದು) ಮುಟ್ಟುತ್ತದೆ ಎಂಬುದನ್ನು ಹೇಳಿದ್ದಾರೆ. ಅಂದರೆ, "ದೊಡ್ಡ ದೊಡ್ಡ ಸಂಸ್ಕೃತ ಪದಗಳನ್ನು ಬಳಸಿದ್ದನ್ನು ನೋಡಿ ಬರಹವು ಏನೋ ಪ್ರಬುದ್ಧವಾಗಿದೆ" ಎಂದುಕೊಳ್ಳುವ ಭ್ರಮೆ ಸಲ್ಲದು ಎಂಬ ಆಶಯ ಶಂಕರ ಭಟ್ಟರ ಪುಸ್ತಕಗಳಲ್ಲಿ ಕಾಣಿಸುತ್ತದೆ.

Anonymous said...

ಇಲ್ಲಿ ಮಾನ್ಯ ಸುನಾತರು ಹಲವು ತಪ್ಪುಗಳನ್ನು ಎಸಗಿದ್ದಾರೆ.
ಶಂಕರಬಟ್ಟರು ಹೇಳಿರುವ ಕನ್ನಡ ಅಕ್ಕರಸರ ಹೀಗಿದೆ.

ಅ ಆ ಇ ಈ ಉ ಊ ಎ ಏ ಒ ಓ ಅಂ
ಕ ,ಗ
ಚ,ಜ
ಟ,ಡ,ಣ
ತ,ದ,ನ
ಪ,ಬ,ಮ
ಯ,ರ,ಲ,ವ,ಶ,ಸ,ಹ,ಳ
(ಒಟ್ಟು ೩೨ ಅಕ್ಕರಗಳು)

ಐ ಬದಲು 'ಅಯ್'
ಔ ಬದಲು 'ಅವ್'
ಋ ಬದಲು 'ರಿ'/ 'ರು'
ಅಃ ಬದಲು 'ಅಹ'
ನಮಗೆ ಗೊತ್ತಿರುವ ಎಲ್ಲ ಕನ್ನಡ ಪದಗಳನ್ನು ಈ ಅಕ್ಕರಪಟ್ಟಿ ಬಳಸಿ ಬರೆಯಬಹುದು. ಯಾರಾದರೂ ತೋರಿಸಿ ಯಾವ ಕನ್ನಡ ಪದ ಬರೆಯಲಾಗದೆಂದು ನೋಡೋಣ.

ಅಲ್ಲದೆ ಈ ಅಕ್ಕರಪಟ್ಟಿಯನ್ನು ಬಳಸಿ ಸಕ್ಕದದ ಪದಗಳನ್ನು ಬರೆಯಬೇಕು ಯಾಕಂದರೆ ಹೆಚ್ಚು ಕನ್ನಡಿಗರ ಮಾತಿನಲ್ಲಿ ಈ ಅಕ್ಕರಗಳೇ ಬಳಕೆಯಾಗುತ್ತವೆ.

ಅಂದರೆ ಈಗಿರುವ ಅಕ್ಕರಪಟ್ಟಿಯಲ್ಲಿ ಬಿಟ್ಟಿರುವ ಅಕ್ಕರಗಳು
ಋ,
ಐ,ಔ,ಖ,ಘ,ಙ್,ಛ,ಝ,ಞ್,ಠ,ಢ,ಥ,ಧ,ಫ,ಭ,ಷ

ಶಂಕರಬಟ್ಟರು ಹೇಳಿರುವುದು ತಮಿಳಿಗರ ಮಾತಿಗೆ ಅವರ ಅಕ್ಕರಪಟ್ಟಿ ಸರಿಯಾಗಿದೆ. ಆದರೆ ನಾವು ನಮ್ಮ(ಕನ್ನಡದ) ಮಾತಿಗೆ ತಕ್ಕಂತೆ ಅಕ್ಕರಪಟ್ಟಿ ಮಾಡಿಕೊಂಡಿಲ್ಲ ಎಂಬ ವಾದವನ್ನು ಮುಂದಿಟ್ಟಿದಾರೆಯೆ ಹೊರತು ತಮಿಳು ಅಕ್ಕರಪಟ್ಟಿಯನ್ನು ನಾವು ಬಳಸಬೇಕೆಂದು ಎಲ್ಲೂ ಹೇಳಿಲ್ಲ.

ಮಾನ್ಸ ಸುನಾತರೆ, ತಾವು ಈ ಶಂಕರಬಟ್ಟರ ಹೊತ್ತಿಗೆಗಳನ್ನು ಸರಿಯಾಗಿ ಓದಿ, ಆಮೇಲೆ ಬರೆಯಿರಿ. ನೀವು ಬರೀದೆ ಇದ್ದರೂ ಪರ್ವಾಗಿಲ್ಲ ಆದರೆ ತಪ್ಪು ಅರಿಮೆಗಳನ್ನು ಹಂಚಬೇಡಿ.
೧. ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ
೨. ಕನ್ನಡ ಬರಹವನ್ನು ಸರಿಪಡಿಸೋಣ
೩. ನಿಜಕ್ಕೂ ಹಳೆಗನ್ನಡ ವ್ಯಾಕರಣ ಎಂತಹುದು?
೪. ಕನ್ನಡ ನುಡಿ ನಡೆದು ಬಂದ ದಾರಿ.

ನಾವು ಹ್ಯಾಗೆ ನಡುಗನ್ನಡದಲ್ಲಿ 'ೞ್, ಱ್' ಅಕ್ಕರಗಳನ್ನು ಬರಹದಲ್ಲಿ ಬಿಟ್ಟೆವೊ ಹಾಗೆಯೇ ಬೇಡದೆ ಇರುವ ಅಕ್ಕರಗಳನ್ನು(ಋ,
ಐ,ಔ,ಖ,ಘ,ಙ್,ಛ,ಝ,ಞ್,ಠ,ಢ,ಥ,ಧ,ಫ,ಭ,ಷ
) ಹೊಸಗನ್ನಡ ಬರಹದಲ್ಲಿ ಬಿಡಬಹುದು. ಇದು ನುಡಿಗಳಲ್ಲಿ ಹೊತ್ತು ಹೊತ್ತಿಗೆ ಆಗುವ ಬದಲಾವಣೆಗಳು ಎಂದು ನುಡಿಬಿನ್ನಣಿಗಳು ಹೇಳುತ್ತಾರೆ.


--

Harisha - ಹರೀಶ said...

Joey, ನಾನು ಉಪಯೋಗಿಸಿದ ಅಭ್ಯಂತರವಿಲ್ಲ ಎಂಬ ಪದ ಇಲ್ಲಿನ ಕೆಲವರಿಗೆ ಅರ್ಥವಾಗಿಲ್ಲ ಎಂಬುದು ನಿಮ್ಮ ವಾದವೇ?

Anonymous, ನಿಮಗೆ ಇಷ್ಟವಿರದಿದ್ದರೆ ಕರೆಯದೆ ಬಿಟ್ಟುಬಿಡಿ; ಸುನಾಥರ ಹೆಸರನ್ನು ಹಾಳು ಮಾಡಬೇಡಿ. ನಾತ ಎಂಬುದಕ್ಕೆ ಕನ್ನಡದಲ್ಲಿ ಒಂದು ಅರ್ಥವಿದೆ ಎಂಬುದನ್ನು ಮರೆಯದಿರಿ.

ಅಕ್ಷರ ಬೇಡದೆ ಇದ್ದರೆ ಉಪಯೋಗಿಸದಿದ್ದರಾಯಿತು. ಅದನ್ನು ಬಿಟ್ಟು ಅಕ್ಷರಮಾಲೆಯಿಂದಲೇ ತೆಗೆಯಬೇಕೆಂದು ಹೇಳುವುದು ಯಾವ ನ್ಯಾಯ? ನೀವು ಬಹುಶಃ ಇಲ್ಲಿ ನಾನು ಬರೆದ ಬರಹವನ್ನು ಓದಿಲ್ಲವೆಂದೆನಿಸುತ್ತದೆ. ನಿಮ್ಮ ಅವಗಾಹನೆಗಾಗಿ ಅದರ ಒಂದು ಭಾಗ...

ವಿಚಾರ ಮಾಡಿ ನೋಡಿ: ಇಂಗ್ಲಿಷಿಗಿಂತ ಎರಡಕ್ಷರ ಕಡಿಮೆ ಹೊಂದಿರುವ ಗ್ರೀಕ್ ಭಾಷೆ ಏಕೆ ಹೆಚ್ಚಾಗಿ ಬಳಕೆಯಲ್ಲಿಲ್ಲ? ೨೦೦೦೦ಕ್ಕೂ ಹೆಚ್ಚು ಅಕ್ಷರಗಳನ್ನು ಹೊಂದಿರುವ ಜಪಾನೀ ಭಾಷೆ ಇನ್ನೂ ಹೇಗೆ ಬಳಕೆಯಲ್ಲಿದೆ? ಅದಕ್ಕೂ ಹೆಚ್ಚು ಅಕ್ಷರಗಳಿರುವ ಚೀನೀ ಭಾಷೆ ಹೇಗೆ ಪ್ರಪಂಚದಲ್ಲೇ ಅತಿ ಹೆಚ್ಚು ಜನರು ಮಾತನಾಡುವ ಭಾಷೆಯಾಗಿದೆ? ಇವೆಲ್ಲವನ್ನು ಗಮನಿಸಿದರೆ ಒಂದು ಅಂಶ ಸ್ಪಷ್ಟ: ಒಂದು ಭಾಷೆಯ ಬಳಕೆಗೂ, ಅದರಲ್ಲಿನ ವರ್ಣಮಾಲೆಗೂ ಯಾವ ಸಂಬಂಧವೂ ಇಲ್ಲ.

ಹಾಗೇ ಇಲ್ಲೂ ಕಣ್ಣು ಹಾಯಿಸಿ.

Anonymous said...

ಹರೀಶರು ಕೂಡ ವಿಚಾರ ಮಾಡಿ

ಇಂಗ್ಲೀಶಿಗಿಂತ ಇಮ್ಮಡಿ ಅಕ್ಷರಗಳಿರುವ ಸಂಸ್ಕೃತ ಎಶ್ಟು ಮಂದಿಗೆ ಗೊತ್ತು? :) ಅದರ ಪಾಡು ಗ್ರೀಕಿಗಿಂತ ಕೇಡು.

ಸುನಾತ ಎಂದು ಹೇಳಲು ಅವರಿಗೆ ಹಕ್ಕು ಇದೆ.ಸುನಾಥ ಕನ್ನಡಪದವಲ್ಲವಲ್ಲ

ಶಂಕರಬಟ್ಟರನ್ನು ’hypocrisy' ಎಂದು ತೆವಲಿನಿಂದ ಹೆಸರು ಕೆಡಿಸಿಕೊಂಡವರು ಅವರೇ!

ಸುನಿಲ್ ಜಯಪ್ರಕಾಶ್ said...

ಹರೀಶ್,
>> ನಾನು ಉಪಯೋಗಿಸಿದ ಅಭ್ಯಂತರವಿಲ್ಲ ಎಂಬ ಪದ ಇಲ್ಲಿನ ಕೆಲವರಿಗೆ ಅರ್ಥವಾಗಿಲ್ಲ ಎಂಬುದು ನಿಮ್ಮ ವಾದವೇ?
"ಇಲ್ಲಿನ" ಅಂತಲ್ಲ, "ಎಲ್ಲಕಡೆಯ" ಜನರಿಗೆ ಸುಲಭವಾಗಿ ತಿಳಿಯುವಂತಹ ಪದಬಳಕೆಗಳ ಬಗ್ಗೆ ಶಂಕರ ಭಟ್ಟರು ಹೇಳ್ತಾ ಇರೋದು. ನಾನು ಇದಕ್ಕೆ ಉತ್ತರನೀಡಲೇಬೇಕು ಎನ್ನುವುದಾದರೆ, ಹೌದು, "ಅಭ್ಯಂತರ, ಅಭ್ಯಂಜನ" ಎಲ್ಲರಿಗೂ ತಿಳಿಯತ್ತೆ ಎಂಬ ಭ್ರಮೆ ನನ್ನಲ್ಲಿಲ್ಲ. ಅದೂ ಅಲ್ಲದೆ, ಇದರಲ್ಲಿ ಮೂರು ಪದಗಳಿವೆ. ಅಭಿ+ಅಂತರ+ಇಲ್ಲ. ಇದಕ್ಕಿಂತ ಕನ್ನಡದ, ಅಡ್ಡಿ + ಇಲ್ಲ ಬಳಸುವುದೇ ಸರಳ. ನನ್ನ ಮಾತನ್ನು ನೀವು ತಪ್ಪು ಎನ್ನಬಹುದು, ಅಡ್ಡಿಯಿಲ್ಲ. ಆದರೆ ನಿಮ್ಮ ಮನೆಯಲ್ಲಿರುವವರು, ನಿಮ್ಮ ತಮ್ಮಂದಿರು, ನಿಮ್ಮ ಮನೆ ಕೆಲಸದವರು ಇವರಿಗೆ ಕೇಳಿಸಿ ನೋಡಿ.

>> ೨೦೦೦೦ಕ್ಕೂ ಹೆಚ್ಚು ಅಕ್ಷರಗಳನ್ನು ಹೊಂದಿರುವ ಜಪಾನೀ ಭಾಷೆ ಇನ್ನೂ ಹೇಗೆ ಬಳಕೆಯಲ್ಲಿದೆ?
ಜಪಾನೀ ಭಾಷೆ ನಮ್ಮ ರೀತಿಯ ಫೊನೆಟಿಕ್ ನುಡಿಯಲ್ಲ. ಅದರ ಅಕ್ಷರಗಳು ಚಿತ್ರಗಳ ರೀತಿಯದ್ದು. ನಮ್ಮಲ್ಲಿ ಅ, ಆ ಇರುವಂತೆ ಅವರಲ್ಲಿ ಇಲ್ಲ. ನಮ್ಮಲ್ಲಿನ ದೊಡ್ಡ ದೊಡ್ಡ ಪದಗಳನ್ನು, ಒಂದೇ ಒಂದು ಚಿತ್ರದ ಸಂಕೇತದ ಅಕ್ಷರದ ಮೂಲಕ ಹೇಳಬಹುದು. ಹಾಗಾಗಿ ಇವೆರಡನ್ನು ಕಂಪೇರ್ ಮಾಡಕ್ಕೆ ಬರುವುದಿಲ್ಲ.

Harisha - ಹರೀಶ said...

Anonymous, ಖಂಡಿತವಾಗಿ ವಿಚಾರ ಮಾದಬೇಕಾದ್ದೆ. ಅದಕ್ಕೇ ನಾನು ಹೇಳಿದ್ದು, ಇರುವ ಅಕ್ಷರಗಳಿಗೂ ಭಾಷೆಯ ಉಪಯೋಗಕ್ಕೋ ಯಾವುದೇ ಸಂಬಂಧವಿಲ್ಲವೆಂದು. ಕನ್ನಡ ವರ್ಣಮಾಲೆಯ ಅಕ್ಷರಗಳನ್ನು ಕಡಿಮೆ ಮಾಡಿದರೆ ಎಲ್ಲರೂ ಉಪಯೋಗಿಸುವಂತಾಗುತ್ತದೆ ಎಂದು ವಾದಿಸುವುದು ಮೂರ್ಖತನ.

Anonymous said...

ಮಾನ್ಯ ಹರೀಶರೆ,
".. ಕನ್ನಡ ವರ್ಣಮಾಲೆಯ ಅಕ್ಷರಗಳನ್ನು ಕಡಿಮೆ ಮಾಡಿದರೆ ಎಲ್ಲರೂ ಉಪಯೋಗಿಸುವಂತಾಗುತ್ತದೆ ಎಂದು ವಾದಿಸುವುದು ಮೂರ್ಖತನ.."

ಕಡಿಮೆ ಯಾರು ಮಾಡ್ತಾ ಇರೋದು. ಇರೋದು ೩೨ ಅಕ್ಕರಗಳೆ, ಆದರೆ ಕನ್ನಡಕ್ಕೆ ಬ್ಯಾಡವಾಗಿರೋ ಅಕ್ಕರಗಳನ್ನು ತೆಗೆಯಿರಿ ಅಂತಾನೆ ಹೇಳ್ತಾ ಇರೋದು. ಪರಪಂಚದಲ್ಲಿರುವ ಅಕ್ಕರಗಳನ್ನೆಲ್ಲ ಕನ್ನಡದಲ್ಲಿ ಸೇರಿಸಿ ಕನ್ನಡ ಕಲಿಯುವವರ ಹೊರೆ ಹೆಚ್ಚು ಮಾಡಬೇಡಿ. ಕನ್ನಡ ಸಕ್ಕದದ ಹಾಗೆ ಎರಡು ಸಾವಿರ ವರುಶದ ಹಿಂದಿನ ಬಾಶೆಯನ್ನಾಗಿ ಮಾಡಬೇಡಿ.

'ಸುನಾತ' ಅಂತ ಕರೆಯುವುದಕ್ಕೆ ನನಗೆ ಹಕ್ಕಿದೆ. ನನಗೆ ಉಲಿಯಕ್ಕೆ ಬರುವುದು ಹೀಗೆಯೆ.
ಈಗ ಹೇಳಿ ಇದರಲ್ಲಿ ಯಾವುದು ಸರಿ

ಇಂಗ್ಲೀಶ್/ ಇಂಗ್ಲೀಷ್
ಶೇಕ್ಸ್ ಪಿಯರ್/ ಷೇಕ್ಸ್ ಪಿಯರ್

ಇಂಗಲೀಸಲ್ಲಿ "ಷ್' ಅಕ್ಕರ ಇದಿಯಾ. ಹಾಗಾದರೆ ಇಂಗಲೀಸ್ ಬರೆಯುವಾಗ "ಷ್" ಅಕ್ಕರ ಯಾಕೆ,

ವಸಿ ಉಂಕಿಸಿ ಮಾನ್ಯ ಹರೀಶರವರೆ

Anonymous said...

ಕನ್ನಡದಲ್ಲಿ fa ಮತ್ತು za ಗಳನ್ನು ಗುರುತಿಸಲು ಅಕ್ಕರಗಳು ಬೇಕು ಅಂತ ನಾಳೆ ಯಾರಾದರೂ ಕೇಳಿದರೆ ಅದನ್ನು ತುಂಬಬೇಕಾಗುತ್ತದೆ.ಫ ಕೆಳಗೆ ಎರಡು ಚುಕ್ಕಿ ಇಟ್ಟರೆ fa ಆಗುತ್ತೆ ಅಂತ ಯಾರು ಹೇಳಿದ್ದು. ಇದು ಯಾವ ಕನ್ನಡದ ವ್ಯಾಕರಣ ಹೊತ್ತಿಗೆಯಲ್ಲಿದೆ.

ಇವೆಲ್ಲ ಬೇಕಾ? ನಾವು ನಮ್ಮ ಮಕ್ಕಳಿಗೆ ತಿಳಿಯಾದ, ಸುಲಿದ ಬಾಳೆಹಣ್ಣಿನಂತಿರುವ ಕನ್ನಡವನ್ನು ಕಲಿಸೋಣ. ಕನ್ನಡದ ಬರಹದಲ್ಲಿ( ಮಾತಿನಲ್ಲಲ್ಲ) ಹೆಚ್ಚಿರುವ ಸಕ್ಕದದ ಒರೆಗಳನ್ನು ಕಡಿಮೆ ಮಾಡಿ ಕನ್ನಡವನ್ನು ಸಲೀಸುಗೊಳಿಸೋಣ.

-ಕನ್ನಡದಕೂಸು

Harisha - ಹರೀಶ said...

Joey, ಅಭ್ಯಂತರವಿಲ್ಲ ಬದಲಾಗಿ ಅಡ್ಡಿಯಿಲ್ಲ ಎಂಬಂತಹ ಸುಲಭವಾಗಿ ಅರ್ಥವಾಗುವ ಕನ್ನಡ ಪದಗಳನ್ನು ಉಪಯೋಗಿಸಬಹುದು ಎಂಬುದೇನೋ ಸರಿಯಾದ ವಾದ. ಆದರೆ ನೀವೇ ಉಪಯೋಗಿಸಿದ "ಭ್ರಮೆ" ಪದದ ಬದಲು ಬೆಮೆ, ಮೆಳ್ಪಡೆ ಎಂದೆಲ್ಲಾ ಉಪಯೋಗಿಸಿದರೆ "ಮೇಲ್ವರ್ಗ" "ಕೆಳವರ್ಗ" ಎರಡಕ್ಕೂ ತಿಳಿಯದೆ ಅನರ್ಥವಾಗುತ್ತದೆ. ಇಂಥ ಇನ್ನೂ ಹಲವಾರು ಪದಗಳಿವೆ. ಇದರಿಂದ ಭಾಷೆಯ ಮೂಲ ತತ್ವವಾದ ಸಂವಹನಕ್ಕೇ ಕೊಡಲಿ ಪೆಟ್ಟು ಹಾಕಿದಂತಾಗುತ್ತದೆ. ಕನ್ನಡ ಮಾತನಾಡುವವರು ಇನ್ನೂ ಕಡಿಮೆಯಾಗುತ್ತಾರೆ.

ಜಪಾನೀ ಭಾಷೆಯ ಅಕ್ಷರಗಳ ಆಳ ಜ್ಞಾನ ನನಗಿಲ್ಲ. ಹಾಗಾಗಿ ಏನನ್ನೂ ಹೇಳಲಾರೆ.

Anonymous,
>> ಇರೋದು ೩೨ ಅಕ್ಕರಗಳೆ..
ಹಾಗಾದರೆ ಉಳಿದ ಅಕ್ಷರಗಳೆಲ್ಲಿಂದ ಬಂದುವು? ನಮ್ಮ ಹಿರಿಯರು/ತಿಳಿದವರು ಅವುಗಳ ಅಗತ್ಯ/ಅವಶ್ಯಕತೆ ಕಂಡಿದ್ದರಿಂದಲೇ ಸೇರಿಸಿರಬೇಕಲ್ಲವೇ?

Anonymous said...

>> ಇರೋದು ೩೨ ಅಕ್ಕರಗಳೆ..
>>ಹಾಗಾದರೆ ಉಳಿದ ಅಕ್ಷರಗಳೆಲ್ಲಿಂದ ಬಂದುವು? ನಮ್ಮ >>ಹಿರಿಯರು/ತಿಳಿದವರು ಅವುಗಳ ಅಗತ್ಯ/ಅವಶ್ಯಕತೆ >>ಕಂಡಿದ್ದರಿಂದಲೇ ಸೇರಿಸಿರಬೇಕಲ್ಲವೇ?

ಅವಶ್ಯಕತೆ - ಸಕ್ಕದದ ಪದಗಳನ್ನು ಕನ್ನಡದ ಬರಹದಲ್ಲಿ ಬರೆಯುವುದಕ್ಕೆ. ಇದೆ ದೊಡ್ಡ ತಪ್ಪು.

ಹಾಗಾದರೆ ನಮ್ಮದೇ ಆದ ೞ್, ಱ್ ಬರಹದಲ್ಲಿ ಬಿಟ್ಟಿದ್ದೇಕೆ? ನಿಮಗೆ ಗೊತ್ತಾ?

ೞ್- ಳ
ಱ್ - ರ
ಇವುಗಳ ಉಲಿಕೆಯಲ್ಲಿ ಇಂದಿಗೂ ಹಲಗನ್ನಡಿಗರು ಬೇರೆತನ ತೋರಿಸುತ್ತಾರೆ.

ಹ್ಯಾಗೆ ನಾವು ೞ್, ಱ್ ಬರೀ ಹಳೆಗನ್ನಡ ಓದುವುದಕ್ಕೆ ಬರೆಯುವುದಕ್ಕೆ ಬೇಕಾದಾಗ ತೀರ ಅಪರೂಪವಾಗಿ ಬಳಸುತ್ತೇವಯೊ ಹಾಗೆ ಈ ಅಕ್ಕರಗಳನ್ನು (ಋ,
ಐ,ಔ,ಖ,ಘ,ಙ್,ಛ,ಝ,ಞ್,ಠ,ಢ,ಥ,ಧ,ಫ,ಭ,ಷ
) ತೀರ ಅಪ್ರೂಪವಾಗಿ ಬಳಸಬಹುದು.

ಬರೀ ಹೊಸಗನ್ನಡ ಕಲಿಯುವವರು ಈ ಅಕ್ಕರಗಳನ್ನು ಕಲಿಯಬೇಕಾಗಿಲ್ಲ.

ಅಡಿಯೊತ್ತು(bottomline):-

ೞ್,ಱ್ ಆದ ಗತಿಯೇ ಈ ಅಕ್ಕರಗಳಿಗೂ(ಋ,
ಐ,ಔ,ಖ,ಘ,ಙ್,ಛ,ಝ,ಞ್,ಠ,ಢ,ಥ,ಧ,ಫ,ಭ,ಷ
)) ಆಗ್ಬೇಕು.

--ಕನ್ನಡದಕೂಸು

Harisha - ಹರೀಶ said...

ಹಳೆಗನ್ನಡ ಪದಗಳು ಹೆಚ್ಚು ಬಳಕೆಯಲ್ಲಿಲ್ಲ. ಹಾಗೆಂದು ಅವುಗಳನ್ನು ಬಳಸಬೇಡಿ ಎಂದು ಯಾರೂ ಯಾರಿಗೂ ಹೇಳಿರಲಿಲ್ಲ. ಹಾಗಾಗಿ ೞ್,ಱ್ ಗಳನ್ನೂ ತೆಗೆಯಲಾಯಿತು. ಆದರೆ ಈಗ ಸಂಸ್ಕೃತ ಪದಗಳು ವ್ಯಾಪಕವಾಗಿ ಬಳಕೆಯಲ್ಲಿವೆ. ಅವುಗಳ ಬಳಕೆ ದಿನೇ ದಿನೇ ಹೆಚ್ಚುತ್ತಿದೆ ಕೂಡ. ಹಾಗಾಗಿ ಈಗಿರುವ ಅಕ್ಷರಗಳೂ ಅನಿವಾರ್ಯ.

ಒಂದು ಪುಸ್ತಕ ಬರೆದು ನಾನು ಹೇಳಿದ ರೀತಿಯಲ್ಲಿಯೇ ನೀವೆಲ್ಲ ಮಾತನಾಡಿ ಎಂದು ಹೇಳಿದರೆ ಪಾಣಿನಿಯ ವ್ಯಾಕರಣದಿಂದಾಗಿ ಸಂಸ್ಕೃತಕ್ಕಾದ ಸ್ಥಿತಿಯೇ ಶಂಕರ ಭಟ್ಟರ ಅಥವಾ ಇನ್ನಾವುದೋ ಪಂಡಿತರ ಪುಸ್ತಕದಿಂದ ಕನ್ನಡಕ್ಕೆ ಬರಬಹುದು.

Anonymous said...

ಹರೀಶ

ಮೊದಲು ನೀವು ಶಂಕರಬಟ್ಟರ ಯಾವ ಯಾವ ಹೊತ್ತಗೆಗಳನ್ನು ಓದಿದ್ದೀರಿ...?

ಓದಿ ಮಾತಾಡಿ...

ಲಿಂಗ್ವಿಸ್ಟಿಕ್ ಆಗಿ ಅದರಲ್ಲಿ ದೋಷ ತೋರಿಸಿ...

ನಿಮಗೆ ಲಿಂಗ್ವಿಸ್ಟಿಕ್ subject ಮೇಲೇ ಏನೇನು ಓದಿದ್ದೀರಿ?

ಶಂಕರಬಟ್ಟರು ಏನು ಎತ್ತ ಅಂತ ವಿಕೀಪೀಡಿಯ ನೋಡಬೋದು..

ಸುಮ್ನೆ ನಂದು ಒಂದಿರಲಿ ಅಂತ ಮಾತು ಬೇಡ.. ನಿಮ್ಮ ಸುನಾತರಂತೆ..!!!

Shankar Bhatt is a linguist. And He has written his argument on linguistic basis. You must point the flaws based on linguist basis not some haphazard argument...

First read his books.. I am sure Mr Harish has not read any.. !!

Harisha - ಹರೀಶ said...

ನನ್ನ ಹಿಂದಿನ ಪ್ರತಿಕ್ರಿಯೆಗೆ ಉತ್ತರ ಸಿಗದೇ ಸಿಟ್ಟಾಗಿ ನೀವು ಪ್ರತಿಕ್ರಿಯಿಸಿದಂತಿದೆಯೇ ಹೊರತು ಯಾವುದೇ ಹೊಸ ವಿಷಯವನ್ನು ನನಗೆ ನಿಮ್ಮ ಟಿಪ್ಪಣಿಯಿಂದ ಗ್ರಹಿಸಲಾಗಲಿಲ್ಲ. ಕ್ಷಮೆಯಿರಲಿ.

ನೀವು ಊಹಿಸಿದಂತೆ ನಾನು ಅವರ ಪುಸ್ತಕ ಓದಿಲ್ಲ. ನನಗೆ ಕನ್ನಡವನ್ನು ಓದಲು, ಬರೆಯಲು, ನಿರರ್ಗಳವಾಗಿ ಮಾತನಾಡಲು ಎಷ್ಟು ಬೇಕೋ ಅಷ್ಟು ಪುಸ್ತಕಗಳನ್ನು ನಾನು ಓದಿದ್ದೇನೆ. ಅಸಂಬದ್ಧ ಪ್ರಲಾಪಗಳನ್ನೊಳಗೊಂಡ ಪುಸ್ತಕವನ್ನು ಓದುವ ಅಗತ್ಯವೂ ನನಗೆ ಕಂಡುಬರುತ್ತಿಲ್ಲ.

PS:
ಇಷ್ಟಾಗಿ ಶಂಕರ ಭಟ್ಟರ ವಾದವನ್ನು ಹೊಗಳುವ ನೀವು "ದೋಷ" ಎಂಬ ಸಂಸ್ಕೃತ ಪದವನ್ನು ಉಪಯೋಗಿಸುವ ದೋಷವನ್ನೇಕೆ ಮಾಡಿದಿರಿ? ಆ ಕ್ಷಣಕ್ಕೆ ಸಂಸ್ಕೃತ ದ್ವೇಷ ಬತ್ತಿ ಹೋಯಿತೋ ಅಥವಾ ಕನ್ನಡ ಪದ ನೆನಪಾಗಲಿಲ್ಲವೋ?

sunaath said...

ಹಂಸಾನಂದಿಯವರೆ,
ತಮಿಳು ವರ್ಣಮಾಲೆಯ ಸರಿಯಾದ ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು.

Anonymous said...

ಮೊದಲು ಅವರ ಹೊತ್ತಗೆಗಳನ್ನು ಓದಿ ಆಮೇಲೆ ಮಾತಾಡಿ...

ಸುಮ್ನೆ ಮಾತಾಡಬೇಡಿ..

ಹರೀಶ.

ಇಲ್ಲಿ ಟಾಪಿಕ್ ’"ಶಂಕರ ಭಟ್ಟರ ವಾದದಲ್ಲಿಯ ದೋಷಗಳು"..

ಅವರ ವಾದವನ್ನೇ ಸರಿಯಾಗಿ ತಿಳಿಯದೇ ’ದೋಷ’ಗಳನ್ನು ಹುಡುಕ ಹೊರಟಿದ್ದಾರೆ.

ಇಲ್ಲಿ ಮಾತಾಡೋ ಮೊದಲು ಅದನ್ನ ಓದಬೇಕು ಅಂತ ಅನ್ನಿಸಲ್ವ..

ಸುಮ್ನೆ ಬಂದು ಬಿಟ್ಟಿ ಬರಕ್ಕೆ ನಾಚಿಕೆ ಆಗಬೇಕು...

ಶಂಕರಬಟ್ಟರು ಹೇಳಿದನ್ನೆ ಹಿಂದ ಬಿ.ಎಂ.ಶ್ರೀ ಕೂಡ ಹೇಳಿದ್ದಾರೆ.

ನಿಮಗೆ ಅವರ ಹೊತ್ತಗೆಗಳನ್ನು ಓದಬೇಕು ಎಂದು ಅನ್ನಿಸದಿದ್ದರೆ ಓದಬೇಡಿ.. ಓದದೇ ಅವರ ಬಗ್ಗೆ ಮಾತಾಡಕ್ಕೆ ನಿಮಗೆ ಹುಚ್ಚು ಇಲ್ಲ ಬಿಟ್ಟಿ ಸ್ಕೋಪ್ ತಗೊಳ್ಳೋ ತೆವಲು ನಿಮ್ಮ ಸುನಾತರಂತೆ....

ಒಟ್ನಲ್ಲಿ.. ಇಶ್ಟೇ

ಶಂಕರಬಟ್ಟರು ಒಬ್ಬ ಲಿಂಗ್ವಿಸ್ಟ್.. ಅವರಿಗೆ ಯೋಗ್ಯತೆ ಇದೆ. ಅವರು ಅವರ ಕ್ಷೇತ್ರದಲ್ಲಿ ಕೆಲಸ ಮಾಡಿಕೊಂಡು.. ಅದೇ ಸಬ್ಜೆಕ್ಟ್ ಬಗ್ಗೆ ಹೊತ್ತಗೆಗಳನ್ನು ಬರೆದಿದ್ದಾರೆ.

ಅದನ್ನು ಟೀಕಿಸಬೇಕಾದರೆ ಯೋಗ್ಯತೆಬೇಕು.. ಇಲ್ಲ ಅಟ್‌ಲೀಸ್ಟ್ ಅವರು ಹೊತ್ತಗೆಗಳನ್ನು ಓದಿ, ಅದನ್ನು ಲಿಂಗ್ವಿಸ್ಟಿ ತಳಹದಿ ಮೇಲೆ ನೋಡುವ ಯೋಗ್ಯತೆ ಇರಬೇಕು..

ಅದು ಸುನಾತರಿಗೂ ಇಲ್ಲ ಈ ಹರಿಶರಿಗೂ ಇಲ್ಲ.. ( ನನಗೆ ಇದೆಯೋ ಇಲ್ಲವೋ ಅದು ಬೇಕಾಗಿಲ್ಲ.. ಏಕೆಂದರೆ ನಾವು ಅವರನ್ನು ಟೀಕಿಸುವ ತೆವಲು ತೋರಿಸಿಲ್ಲ )...

ಶಂಕರಬಟ್ಟರನ್ನು ಟೀಕಿಸಲು ಕೇವಿ ನಾರಯಣ, ಕನ್ನಡಪ್ರಬದಲ್ಲಿ ವ್ಯಾಕರಣದ ಬಗ್ಗೆ ಬರೆಯುವ ಅಂಗಡಿ ಮುಂತಾದ ಬಲ್ಲವರಿಗೆ ಯೋಗ್ಯತೆ ಇದೆ.. ಅಂತಹ ಬಲ್ಲವರು ಇಲ್ಲಿ ಯಾರು ಇಲ್ಲ.. ಸುನಾತ, ಹರೀಶ ಅಂತೂ ಅಲ್ಲವೇ ಅಲ್ಲ..!!

ಇಶ್ಟೇ..

sunaath said...

joey,
ಸಂಪದದಲ್ಲಿ ನೀವು ತೋರಿದ ಕೊಂಡಿ ತಕ್ಷಣ ಸಿಗಲಿಲ್ಲ.ಮತ್ತೆ ಪ್ರಯತ್ನಿಸುವೆ. ಧನ್ಯವಾದಗಳು.

sunaath said...

ಹರೀಶ,
ಹೊಸ ಹೊಸ ಮಾಹಿತಿ ಸೇರಿಸುತ್ತಿರುವ ನಿಮಗೆ ಧನ್ಯವಾದಗಳು. ಚರ್ಚಾಕೂಟ ಅರ್ಥಪೂರ್ಣವಾಗುತ್ತಿದೆ.

sunaath said...

ಕಟ್ಟಿಯವರೆ,
ನೀವು ಶಂಕರ ಭಟ್ಟರ ಪುಸ್ತಕ ಓದಲೇ ಬೇಕು. ಅವರು ಹೇಳುತ್ತಿರುವದು ಎರಡೇ ಸಂಗತಿಗಳು: (೧)ಕನ್ನಡ ವರ್ಣಮಾಲೆಯನ್ನು ಕತ್ತರಿಸಬೇಕು. (೨)ಸಂಸ್ಕೃತ ಪದಗಳ ಬದಲಾಗಿ ಕನ್ನಡ ಪದಗಳನ್ನು ಬಳಸಬೇಕು.
ತಮ್ಮ ವಾದ ಮಂಡಿಸಲು ಅವರು ತಾಂತ್ರಿಕ ಕಾರಣಗಳನ್ನು ಕೊಡದೇ ವರ್ಗಭೇದ ಹುಟ್ಟುಹಾಕಲು ಪ್ರಯತ್ನಿಸುತ್ತಿರುವದು ದುರ್ದೈವದ ಸಂಗತಿ.ಎರಡನೆಯದಾಗಿ ಸಂಕ್ಷಿಪ್ತವಾಗಿ ಮಾಡಬಹುದಾದ ವಾದ ಮಂಡನೆಯನ್ನು ಮಾಡಲು ಅನವಶ್ಯಕ ವಿಸ್ತಾರ ವಿಲಂಬನೆಯನ್ನು ಮಾಡಬಹುದೆಂದು ನೋಡಲೂ ನೀವು ಆ ಪುಸ್ತಕ ಓದಬೇಕು.
ಒಂದು ವೇಳೆ ಅವರು ಹೇಳಿದಂತೆ ಮಾಡಿದರೆ, ಕನ್ನಡದ ಗತಿ ಏನಾಗುವದೋ, ದೇವರಿಗೇ ಗೊತ್ತು.

Anonymous said...

ಹರೀಶ, ಸುನಾತ,

ನಾವು ಮಾತನಾಡುವ ಪದಪದಗಳಲ್ಲಿಯೂ ಹಳೆಗನ್ನಡವಿದೆ.

ಮಾದರಿ:

ಈಗ ನಾವು
'ನೆಱೆ'ಯನ್ನು 'ನೆರೆ' ಅಂತಲೂ,
'ಹೇೞ್'ಯನ್ನು 'ಹೇಳ್" ಅಂತಲೂ,
'ಅದಱಿಂದ"ವನ್ನು 'ಅದರಿಂದ" ಅಂತಲೂ,
'ಹೊಗೞು'ವನ್ನು 'ಹೊಗಳು' ಅಂತಲೂ ಬರೆಯುತ್ತಿಲ್ಲವಾ.

ನಿಮಗೆ ಆಗ ಏನೂ ಕಿರಿಕಿರಿಯಾಗಲ್ಲವ? ನೀವು ಕನ್ನಡದ ಅಕ್ಕರಗಳಿಗೆ ಮೋಸ ಮಾಡುತ್ತಿಲ್ಲವ?

ಹಾಗಾದರೆ 'ಸುನಾಥ'ವನ್ನು 'ಸುನಾತ' ಅಂತ ಬರೆದರೆ ಏನು ತಪ್ಪು.??

Harisha - ಹರೀಶ said...

ಬೇರೆ ಭಾಷೆಯಿಂದ ಯಾವುದೇ ಪದಗಳನ್ನು ತೆಗೆದುಕೊಳ್ಳಬಾರದು ಎಂಬುದು ಆಗಲಾರದ ಮಾತು. ಹಿಂದೂಗಳ ಹೆಸರಿನಲ್ಲಿ ಎಲ್ಲೋ ಅಲ್ಲೊಂದು ಇಲ್ಲೊಂದು ಬಿಟ್ಟರೆ ಉಳಿದವು ಸಂಸ್ಕೃತ ಪದಗಳಾಗಿವೆ. ನಿಮ್ಮ ತಂದೆ ತಾಯಿ ನಿಮಗೊಂದು ಹೆಸರಿಟ್ಟಿದ್ದಾರೆ ಎಂದಾದರೆ ಅದೂ ಬಹುಶಃ ಸಂಸ್ಕೃತ ಪದವೇ ಇರಬೇಕು. ಹೀಗಿರುವಾಗ ಇದ್ದಕ್ಕಿದ್ದಂತೆ ಯಾವುದೇ ಸಂಸ್ಕೃತ ಪದಗಳನ್ನು ಉಪಯೋಗಿಸಬೇಡಿ ಎಂದರೆ ಅದು ಆಗುವ ಮಾತೇ? ನಿಮ್ಮ ಪೂರ್ವಾಗ್ರಹ ಬಿಟ್ಟು ಯೋಚಿಸಿ.

ನಾನು ಶಂಕರ ಭಟ್ಟರ ಪುಸ್ತಕವನ್ನು ಓದದೇ ಇರಬಹುದು. ಆದರೆ ಅದರ ಬಗ್ಗೆ ಅಂತರ್ಜಾಲದಲ್ಲಿ ಆಗಿರುವ ಚರ್ಚೆಗಳಿಂದಾಗಿ ಅದರಲ್ಲಿರುವ ವಿಷಯಗಳೆಲ್ಲವೂ ನನಗೆ ತಿಳಿದಿದೆ. ಶಂಕರ ಭಟ್ಟರ ಬಗ್ಗೆ ನನಗೆ ಗೌರವವಿದೆ. ಆದರೆ ಅವರ ಈ ವಾದದ ಬಗ್ಗೆ ಎಳ್ಳಷ್ಟೂ ಇಲ್ಲ. ಅಷ್ಟಕ್ಕೂ ಇಲ್ಲಿ ನಾವು ಚರ್ಚಿಸುತ್ತಿರುವುದು ಅವರ ವಾದದ ಬಗ್ಗೆಯೇ ಹೊರತು ಅವರ ಅಥವಾ ಅವರ ಪುಸ್ತಕದ ಬಗ್ಗೆಯಲ್ಲ.

ಭಾಷೆಯನ್ನು ಹೆಚ್ಚು ಹೆಚ್ಚು ಬಳಸುವುದರ ಮೂಲಕ ಜನಪ್ರಿಯಗೊಳಿಸಬೇಕೆ ಹೊರತು ವಿರೂಪಗೊಳಿಸಿ ಅಲ್ಲ.

ವೈಯಕ್ತಿಕ ದೂಷಣೆಯಿಂದ ಏನನ್ನೂ ಸಾಧಿಸಲಾಗುವುದಿಲ್ಲ, ನೆನಪಿಡಿ. ಆದರೆ ಈ ನಿಟ್ಟಿನಲ್ಲಿ ಬಹಳ ಮುಂದೆ ಹೋಗಿರುವ ನಿಮ್ಮ ಬಗ್ಗೆ ಕೆಲವು ಮಾತುಗಳನ್ನು ಹೇಳಲೇಬೇಕಾಗಿದೆ. ಹೆಸರು ಹಾಕಲೂ ಅಂಜುತ್ತಿರುವ ನಿಮಗೆ ನಾಚಿಗೆಯಾಗಬೇಕೇ ಹೊರತು ನಮಗಲ್ಲ. ಶಂಕರ ಭಟ್ಟರ ಭಟ್ಟಂಗಿಯಾಗಿರುವ ನಿಮ್ಮಂಥ ಕೂಪ ಮಂಡೂಕಗಳಿಗೆ ಏನು ಹೇಳಿದರೂ ಅರ್ಥವಾಗುವುದಿಲ್ಲ. ಶಂಕರ ಭಟ್ಟರಿಗೆ ಯೋಗ್ಯತೆಯಿರಬಹುದು. ಅವರ ಬಾಲಹಿಡುಕರಾದ ನಿಮ್ಮಂಥವರಿಗಲ್ಲ. ನಿಮ್ಮ ಯೋಗ್ಯತೆ ಈ ಚರ್ಚೆಯನ್ನು ಗಮನಿಸುತ್ತಿರುವ ಎಲ್ಲರಿಗೂ ಈಗಾಗಲೇ ತಿಳಿದಿರುತ್ತದೆ. ಇನ್ನು ಮುಂದೆ ನೀವು ಯಾವುದೇ ಹುರುಳಿಲ್ಲದೆ ಸುಮ್ಮನೆ ವೈಯಕ್ತಿಕ ದೂಷಣೆಗಿಳಿದರೆ ನಿಮ್ಮ ಟಿಪ್ಪಣಿಗಳಿಗೆ ಉತ್ತರಿಸುವ ಗೋಜಿಗೆ ನಾನು ಹೋಗುವುದಿಲ್ಲ.

Anonymous said...

>>ಈಗ ನಾವು
>>'ನೆಱೆ'ಯನ್ನು 'ನೆರೆ' ಅಂತಲೂ,
>>'ಹೇೞ್'ಯನ್ನು 'ಹೇಳ್" ಅಂತಲೂ,
>>'ಅದಱಿಂದ"ವನ್ನು 'ಅದರಿಂದ" ಅಂತಲೂ,
>>'ಹೊಗೞು'ವನ್ನು 'ಹೊಗಳು' ಅಂತಲೂ ಬರೆಯುತ್ತಿಲ್ಲವಾ.

>>ನಿಮಗೆ ಆಗ ಏನೂ ಕಿರಿಕಿರಿಯಾಗಲ್ಲವ? ನೀವು ಕನ್ನಡದ >>ಅಕ್ಕರಗಳಿಗೆ ಮೋಸ ಮಾಡುತ್ತಿಲ್ಲವ?
>> 'ಸುನಾಥ' ಅನ್ನುವುದರ ಬದಲು 'ಸುನಾತ' ಅಂದರೆ ತಪ್ಪೇನು?

ಮೊದಲು ಇದಕ್ಕೆ ಮರುಲಿಯಿರಿ/ಉತ್ತರ ಕೊಡಿ.

ಬರೀ ಮೇಲ್ ಮೇಲೆ ಮಾತಾಡಬೇಡಿ.

ನೀವು ಬಿಲಾಗು ಬರೆಯುವಾಗ anonymous ಗೆ ಯಾಕೆ ಅನುವು ಮಾಡಿಕೊಟ್ಟಿದ್ದೀರಿ? ನೀವು ಅನುವು ಕೊಟ್ಟಿದ್ದರಿಂದ anonymous ಆಗಿ ಬರೆಯುವ ಹಕ್ಕು ನಮಗಿದೆ.

Harisha - ಹರೀಶ said...

>> ಈಗ ನಾವು
>> 'ನೆಱೆ'ಯನ್ನು 'ನೆರೆ' ಅಂತಲೂ,
>> 'ಹೇೞ್'ಯನ್ನು 'ಹೇಳ್" ಅಂತಲೂ,
>> 'ಅದಱಿಂದ"ವನ್ನು 'ಅದರಿಂದ" ಅಂತಲೂ,
>> 'ಹೊಗೞು'ವನ್ನು 'ಹೊಗಳು' ಅಂತಲೂ ಬರೆಯುತ್ತಿಲ್ಲವಾ.

>> ನಿಮಗೆ ಆಗ ಏನೂ ಕಿರಿಕಿರಿಯಾಗಲ್ಲವ? ನೀವು ಕನ್ನಡದ ಅಕ್ಕರಗಳಿಗೆ ಮೋಸ ಮಾಡುತ್ತಿಲ್ಲವ?

"ಹಳೆಗನ್ನಡ" ಎಂಬ ಪದ ಏಕೆ ಬಂತು? ಅದು ಬದಲಾಗಿ ಇನ್ನೊಂದು ಕನ್ನಡ ಬಂದಿದ್ದಕ್ಕೆ ತಾನೆ?

ೞ, ಱ ಗಳನ್ನು ತೆಗೆದು ಹಾಕಿದ ನಂತರ ಬಂದಿರುವುದೇ ಹೊಸಗನ್ನಡ. ನಾವೀಗ ಹೊಸಗನ್ನಡ ಯುಗದಲ್ಲಿದ್ದೇವೆ. ಹಳೆಗನ್ನಡದ ಅಕ್ಷರಗಳು ಇಲ್ಲಿ ಅಪ್ರಸ್ತುತ.

***

"ಅವಶ್ಯಕತೆ - ಸಕ್ಕದದ ಪದಗಳನ್ನು ಕನ್ನಡದ ಬರಹದಲ್ಲಿ ಬರೆಯುವುದಕ್ಕೆ. ಇದೆ ದೊಡ್ಡ ತಪ್ಪು" ಎಂಬ ನಿಮ್ಮ ಮಾತು ಅಸಮಂಜಸ. ಅದು ಕಾರ್ಯಸಾಧುವೂ ಅಲ್ಲ. ಆಂಗ್ಲ ಭಾಷೆ ಹುಟ್ಟಿಕೊಂಡಾಗ ನೂರಕ್ಕಿಂತಲೂ ಕಡಿಮೆ ಪದಗಳಿದ್ದವು ಎಂದು ಎಲ್ಲೋ ಕೇಳಿದ್ದೇನೆ. ಆ ಭಾಷೆಯಲ್ಲಿಯೂ ಗ್ರೀಕ್, ಲ್ಯಾಟಿನ್ ಮುಂತಾದ ಭಾಷೆಗಳ ಪದಗಳಿಲ್ಲವೇ? ಇಂದಿಗೂ "déjà vu" ಮುಂತಾದ ಪದಗಳನ್ನು ಎರವಲು ಪಡೆಯುವಾಗ ಒತ್ತು (accent) ಇರುವ ಅಕ್ಷರಗಳನ್ನು ಆಂಗ್ಲದಲ್ಲಿ ಉಪಯೋಗಿಸುವುದಿಲ್ಲವೇ?

Anonymous said...

>>ೞ, ಱ ಗಳನ್ನು ತೆಗೆದು ಹಾಕಿದ ನಂತರ ಬಂದಿರುವುದೇ >>ಹೊಸಗನ್ನಡ. ನಾವೀಗ ಹೊಸಗನ್ನಡ ಯುಗದಲ್ಲಿದ್ದೇವೆ.

ಮತ್ತೆ ಬುಡವಿಲ್ಲದ ಮಾತು. ಇವೆಲ್ಲ ನಾವು ದಿನಬಳಕೆಯಲ್ಲಿ ಬಳಸುವ ಒರೆಗಳು.

ನೆಱೆ, 'ಹೇೞ್','ಅದಱಿಂದ",'ಹೊಗೞು'.

ಹಳೆಗನ್ನಡಿವಿಲ್ಲದೆ ಹೊಸಗನ್ನಡ ಬಂತೆ. ಅಪ್ಪ-ಅಮ್ಮ ಇಲ್ಲದೆ ಮಗು ಹುಟ್ಟುವುದೆ? ಬೀಜವಿಲ್ಲದೆ ಮರವಾಗುವುದೆ?

ನಿಮ್ಮಲ್ಲಿರುವ ಜೀನ್(genes) ನಿಮ್ಮ ತಂದೆ,ಅಜ್ಜರಿಂದ ಬಂದಿದ್ದು ತಿಳಿದಿರಲಿ.

Harisha - ಹರೀಶ said...

ಹಳೆಗನ್ನಡ ಪದಗಳು ಇಲ್ಲ ಎಂದು ನಾನು ಹೇಳಿಲ್ಲ. ೞ, ಱ ಅಕ್ಷರಗಳಿಲ್ಲ ಎಂದಿದ್ದೇನೆ.

ಹಳೆಗನ್ನಡ ಬಳಕೆ ಏಕೆ ಕಡಿಮೆಯಾಯಿತು, ಆ ಅಕ್ಷರಗಳನ್ನು ಹೊಸಗನ್ನಡದಲ್ಲಿ ಏಕೆ ತೆಗೆಯಲಾಯಿತು ಎಂಬುದು ಇತಿಹಾಸ. ಈಗ ಇರುವುದು ಹೊಸಗನ್ನಡ. ಇದರಲ್ಲಿ ಈಗ ನಾವು ಅನೇಕ ಸಂಸ್ಕೃತ ಪದಗಳನ್ನು ಉಪಯೋಗಿಸುತ್ತಿದ್ದೇವೆ. ಅವುಗಳನ್ನು ಬರೆಯಲು ಮಹಾಪ್ರಾಣಾಕ್ಷರಗಳು ಬೇಕು. ಕೇವಲ ಮೂಲ ಕನ್ನಡದ ಪದಗಳನ್ನು ಬಳಸಿ ಮಾತನಾಡಲು ಕನ್ನಡಿಗರೆಲ್ಲರೂ ಪಂಡಿತರಲ್ಲವಲ್ಲ.

Anonymous said...

೧೦೦೦ ವರುಸಗಳ ಹಿಂದೆ ನಮ್ಮ ಕನ್ನಡ ನಾಡಿನ ಬುಡಕಟ್ಟಿನ ಮಂದಿ ಹೇಗೆ ನುಡಿಯುತ್ತಿದ್ದರೋ ಹಾಗೆ ನುಡಿಯುವುದರ ಬದಲು ೨೦೦೦ ವರುಸಗಳ ಹಿಂದೆ ಯಾವುದೊ ಬುಡಕಟ್ಟು ಆಪ್ಗಾನಿಸ್ತಾನದಲ್ಲಿ ಆಡುತ್ತಿದೆ ಸಕ್ಕದವೆಂಬ ನುಡಿಯನ್ನು, ನಾವು ಅವರ ಉಲಿಯುವ ಹಾಗೆ ಯಾಕೆ ಉಲಿಯಬೇಕು,ಬರೆಯಬೇಕು. ??

ಸಕ್ಕದ ಸತ್ತು ಹೋಗಿದೆ. ಈಗ ಕನ್ನಡ ಮಾತಿನಂತೆ ನಾವು, ನಮ್ಮ ಬರಹ ಇರಬೇಕು. ಮಾತಿನಲ್ಲಿ ಮಾಪಿರಾಣ ಇಲ್ಲ.
ಸಕ್ಕದವೆಂಬ ಸಿಗರೇಟ್ ಚಟದಿಂದ ಹೊರಬರೋಣ. ಸಕ್ಕದ ಪದಗಳನ್ನು ಬೇಕಾದಾಗ ಬಳಸೋಣ ಆದರೆ ಅವು ನಮ್ಮ ಕನ್ನಡದ ಸೊಗಡನ್ನು ಕೆಡಿಸದಿರಲಿ. ಹಾಗಾಗಬೇಕಾದರೆ ನಮಗೆ ಮಾಪಿರಾಣ ಬೇಡ.

Harisha - ಹರೀಶ said...

ಮಾಪಿರಾಣ ಅಂದರೆ ಮಹಾಪ್ರಾಣ ಎಂದೇ?

ಸಂಸ್ಕೃತ ಈಗ ಉಪಯೋಗದಲ್ಲಿರಬಹುದು. ಆದರೆ ಅದರ ಪದಗಳು ಕನ್ನಡ, ಹಿಂದಿ, ತಮಿಳು, ತೆಲುಗು, ಅಷ್ಟೇ ಏಕೆ, ಆಂಗ್ಲದ ಪದಗಳಿಗೂ ಬುನಾದಿಯಾಗಿವೆ. ಕನ್ನಡ ಪದಗಳನ್ನು ಆದಷ್ಟೂ ಬಳಸೋಣ. ಅದಕ್ಕೆ ಯಾರದ್ದೂ ವಿರೋಧವಿಲ್ಲ. ಹಾಗೆಂದು ಇತರ ಭಾಷೆಗಳನ್ನು ಧಿಕ್ಕರಿಸಬೇಕೆಂದಿಲ್ಲವಲ್ಲ. ಎಲ್ಲರೂ ಮುಂದುವರಿಯುವ ಹಾದಿಯಲ್ಲಿದ್ದಾರೆ; ನೀವೇಕೆ ಮತ್ತೆ ಶಿಲಾಯುಗಕ್ಕೆ ಹೋಗುವ ದಾರಿ ತೋರಿಸುತ್ತಿದ್ದೀರಿ?

ಅಷ್ಟಕ್ಕೂ ಅಫ್ಘಾನಿಸ್ತಾನ ೨೦೦೦ ವರ್ಷಗಳ ಅಖಂಡ ಭಾರತದ ಭಾಗವಾಗಿರಲಿಲ್ಲವೇ; ಗಾಂಧಾರ ಎಂದೆನಿಸಿಕೊಂದಿರಲಿಲ್ಲವೇ?

ಇನ್ನೊಂದು ಮಾತು.. ನಮ್ಮ ನಾಡಗೀತೆಯಾ ಮೊದಲ ಸಾಲು: "ಜೈ ಭಾರತ ಜನನಿಯ ತನುಜಾತೆ, ಜಯ ಹೇ ಕರ್ನಾಟಕ ಮಾತೆ" - ಇದರಲ್ಲಿ ಯಾವುದು ಕನ್ನಡ ಪದ?

Anonymous said...

ಅದೇ ಬ್ಯಾಡ ಅಂತ ಹೇಳಿದ್ದು. ಸಕ್ಕದ ತೊತ್ತು(ದಾಸ್ಯ) ನಮಗೆ ಬೇಕಾಗಿಲ್ಲ.

ಪಿ.ವಿ.ನಾರಾಯಣ (ಇವರು ಯಾರು ಅಂತ ಗೊತ್ತಿಲ್ಲ ಅಂದ್ರೆ ತಿಳ್ಕೊಳೆ)ರವರು ಸರಕಾರಕ್ಕೆ ಒಂದು ಓಲೆಯನ್ನು ಬರೆದಿದ್ದರು.
ಅದರಲ್ಲಿ ಅವರು
'ಬಾರಿಸು ಕನ್ನಡ ಡಿಂಡಿಮವ' ಇದು ನಮ್ಮ ಕನ್ನಡ ನಾಡವಾಡು ಆಗಬೇಕೆಂದು.

ಯಾರೊ ತಪ್ಪಾಗಿ 'ಜೈ..." ನಾಡವಾಡು ಮಾಡಿದರೆ ಅದನ್ನ ನಾವು ಒಪ್ಪಿಕೊಳ್ಳಬೇಕಾಗಿಲ್ಲ.

ಸಕ್ಕದದ ನುಡಿಗಳಾದ ಹಿಂದಿ,ಪಂಜಾಬಿ,ಬಂಗಾಳಿ ಗಳು ನಮ್ಮ ಕನ್ನಡ ಪದಗಳನ್ನು ಬಳಸುತ್ತಿದ್ದಾರಾ? ನಾವ್ಯಾಕೆ ಅವರ ಪದಗಳನ್ನು ಬಳಸಬೇಕು.
ಪಂಜಾಬಿಗಳೆ(Indo_aryan) 'ಕೃಪ' 'ಕಿರ್ಪ' ಮಾಡಿಕೊಂಡಿದ್ದಾರೆ. ತೆನ್ನುಡಿಗರಾದ ನಾವು ಯಾಕೆ 'ಕೃಪ' ಅಂತ ಬರೆಯಬೇಕು. ನಾವು ಉಲಿಯುವುದು ಕ್ರುಪ ಅಂತಾನೆ. ಹಾಗೆ ಬರೆದರೆ ನಮ್ಮ ಕನ್ನಡದ ಸೊಗಡು ಉಳಿಯುವುದು.

ಆಪ್ಗಾನಿಸ್ತಾನದ ನುಡಿಯ ಬಗ್ಗೆ ಹೆಮ್ಮೆ ತೋರುವ ನೀವು ನಮ್ಮ ಹಳೆಗನ್ನಡಕ್ಕೆ ಯಾಕೆ ಒಲವು ತೋರುತ್ತಿಲ್ಲ. ಹೆಚ್ಚು ಹೆಚ್ಚು ಅಕ್ಕರಗಳು ಕನ್ನಡಕ್ಕೆ ಬೇಕು ಅನ್ನುವ ನೀವು ನಮ್ಮದೇ ಆದ ಱ್, ೞ್ ಬ್ಯಾಡ, ಅದು ಬಿಟ್ಟು ಹೋಗಿದೆ ಅನ್ನುವಿರಲ್ಲ?? ಆದರೂ ೨೦೦೦ ವರುಸಗಳ ಹಿಂದೆ ಇದ್ದ ಸಕ್ಕದ ಪದಗಳನ್ನು ಬೇಕು ಎನ್ನುವಿರಲ್ಲಾ?

ಇದು ನಿಮ್ಮ ಇಬ್ಬಂದಿತನವನ್ನು ತೋರುವುದಿಲ್ಲವೆ? :)

Harisha - ಹರೀಶ said...

ಯಾರೋ ಪಂಜಾಬಿಗಳು "ಕೃಪ" ವನ್ನು ಕುರೂಪ ಮಾಡಿದರೆಂದು ನಾವೂ ಮಾಡಬೇಕೆ?

ಕೆಲವು ನಾಲಗೆ ಹೊರಳದವರು ಮಹಾಪ್ರಾಣ ಉಚ್ಚರಿಸಲಾರರು ಎಂಬ ಕಾರಣಕ್ಕೆ ಅಕ್ಷರವನ್ನೇ ತೆಗೆದುಬಿಟ್ಟರೆ ಭಾಷೆ ಉದ್ಧಾರವಾಗಿಬಿಡುತ್ತದೆಯೇ? ಸಂಸ್ಕೃತ ಈಗಾಗಲೇ ಬಳಕೆಯಲ್ಲಿ ಇದೆ. ಅದನ್ನು ತೆಗೆಯುವುದು ಅಸಾಧ್ಯ. ಮರಾಠಿಗರು ನಮ್ಮಲ್ಲಿರುವ ಅಕ್ಷರಗಳನ್ನೇ ಉಪಯೋಗಿಸುತ್ತಿಲ್ಲವೇ? ಅವರಲ್ಲಿ ನಮಗಿಂತ ಹೆಚ್ಚು ಮಹಾಪ್ರಾಣ ಬಳಕೆಯಲ್ಲಿದೆ. ಅವರಲ್ಲೂ ನಾಲಗೆ ಹೊರಳದವರಿದ್ದಾರೆ. ಹಾಗೆಂದು ಅವರೂ ಮಹಾಪ್ರಾಣ ಬೇಡ ಎಂದು ತಗಾದೆ ತೆಗೆದು ಕುಳಿತಿದ್ದಾರೆಯೇ? ನಾವಿಲ್ಲಿ ಅಕ್ಷರ ತೆಗೆಯಲು ಜಗಳವಾಡುತ್ತಿರುವಷ್ಟರಲ್ಲಿ ಅವರು ಬೆಳಗಾವಿಯನ್ನು ಕರ್ನಾಟಕದಿಂದ ತೆಗೆದಿರುತ್ತಾರೆ.

ನುಡಿಯುವಂತೆಯೇ ಬರೆಯುವ ಭಾಷೆ ಸಂಸ್ಕೃತವೊಂದೇ. ಗಂಗಾ ಎಂಬುದನ್ನು ಅವರು गंगा ಎಂದು ಬರೆಯುವುದಿಲ್ಲ, ಬದಲಾಗಿ गङ्गा ಎಂದೇ ಬರೆಯುತ್ತಾರೆ. ಈ ವಿಚಾರ ನಿಮಗೆ ಚೆನ್ನಾಗಿ ತಿಳಿದಿದೆ. "ನುಡಿಯುವಂತೆಯೇ ಬರೆಯುವ ಭಾಷೆ"ಯಾಗಿ ಕನ್ನಡವೂ ಸಂಸ್ಕೃತದ ಸಾಲಿಗೆ ಸೇರಬೇಕೆಂಬುದು ನಿಮ್ಮ ಆಸೆಯೇ?

ಆಂಗ್ಲದಲ್ಲಿ colonel, champagne, lieutenant, chauvinism ಎಂದೆಲ್ಲ ವಿಚಿತ್ರವಾಗಿ ಬರೆಯುವುದರ ಬದಲು ಅವರೂ karnal, shampane, leftinent, shavanism ಮುಂತಾಗಿ ಬರೆಯಬಹುದಿತ್ತಲ್ಲ? ಅಷ್ಟು ಕಷ್ಟವಿದ್ದರೂ ನಾವೆಲ್ಲ ಕಲಿತಿಲ್ಲವೇ, ಕಲಿಯುತ್ತಿಲ್ಲವೇ? ಕೆಳವರ್ಗದವರಿಗೆ ಸ್ಪೆಲ್ಲಿಂಗ್ ನಲ್ಲಿಯೂ ಮೀಸಲಾತಿ ಬೇಕು ಎಂಬ ವಾದಕ್ಕೆ ನಾವಿಳಿದಿರುವುದು ವಿಷಾದನೀಯ.

ಜನರಿಗೆ ಸರಿಯಾದ ಉಚ್ಚಾರಣೆ ಕಲಿಸಬೇಕು. ಅದನ್ನು ಬಿಟ್ಟು ಕುಣಿಯಲು ಬಾರದವಳು ನೆಲ ಡೊಂಕು ಅಂದ ಹಾಗಾಯ್ತು ನಿಮ್ಮ ಕಥೆ...

Anonymous said...

>>ನುಡಿಯುವಂತೆಯೇ ಬರೆಯುವ ಭಾಷೆ ಸಂಸ್ಕೃತವೊಂದೇ.

ಯಾರು ಹೇಳಿದ್ದು. ತಮಿಳು, ಉರ್ದು, ಹಿಂದಿ ಇವೆಲ್ಲ ನುಡಿದಂತೆ ಬರೆಯುವು ನುಡಿಗಳು. ಅವೆಲ್ಲ ಇನ್ನು ಇವೆ. ಕನ್ನಡಕ್ಕಿಂತ ಚೆನ್ನಾಗೆ ಇವೆ.

ಈಗ american english ನೋಡಿ.

I am going to go to cinema ಅಂತ ಅನ್ನಲ್ಲ ಅವರು
I am gonna go to cinema ಅಂತಾರೆ. ಹಾಗೆ ಬರೀತಾರೆ ಕೂಡ.

ಹೀಗೆ ಹಲವು ಅಮೆರಿಕನ್ ಇಂಗಲೀಸನಲ್ಲೇ ಇವೆ. ಅದು ಕನ್ನಡಕ್ಕಿಂತ ಹೆಚ್ಚು ಬಳಕೆಯಲ್ಲಿದೆ. ಹೆಚ್ಚು ಮಂದಿ ಹೀಗೆ ಮಾತಾಡುತ್ತಾರೆ

Anonymous said...

ಮರಾಟಿ ಸಕ್ಕದ/ಪಾಗದ ದಿಂದ ಬಂದ ನುಡಿ, ಕನ್ನಡ ತೆನ್ನುಡಿ/ದ್ರಾವಿಡ ನುಡಿ.

ನಿಮ್ಮ ಮರಾಟಿ -ಕನ್ನಡ ಹೋಲಿಕೆ ಸರಿಯಿಲ್ಲ. ಅವು ಬೇರೆ ನುಡಿಕೂಟಕ್ಕೆ ಸೇರಿದ ನುಡಿಗಳು

Anonymous said...

ಹರೀಶ,
ನೀವು ಹೇಳಿದ್ದು

>>ಯಾರೋ ಪಂಜಾಬಿಗಳು "ಕೃಪ" ವನ್ನು ಕುರೂಪ >>ಮಾಡಿದರೆಂದು ನಾವೂ ಮಾಡಬೇಕೆ?
[anonymous] ಯಾರೊ ಪಂಜಾಬಿ ಅಲ್ಲ. ಪಂಜಾಬಿಗೆ ತಾಯಿ ಸಕ್ಕದ. ಪಂಜಾಬಿ ನುಡಿಯುವವರೆ ಸಕ್ಕದ ಪದಗಳನ್ನು ಸರಿಯಾಗಿ ಹೇಳುತ್ತಿಲ್ಲ. ಪಂಜಾಬಿ ಬೇಕರಣ ಸಕ್ಕದದ ಬೇಕರಣಕ್ಕೆ ಹೋಲುತ್ತದೆ.

>>ಸಂಸ್ಕೃತ ಈಗಾಗಲೇ ಬಳಕೆಯಲ್ಲಿ ಇದೆ. ಅದನ್ನು >>ತೆಗೆಯುವುದು ಅಸಾಧ್ಯ.
[anonymous] ಇದು ತಪ್ಪು ತಿಳುವಳಿಕೆ. ಹೆಚ್ಚು ಕನ್ನಡಿಗರ ಮಾತಿನಲ್ಲಿ ಕನ್ನಡವೆ. ಕೆಲವು ಸಕ್ಕದ/ಮರಾಟಿ ಪರಿಸರದಲ್ಲ್ಲಿ ಬೆಳೆದವರು ಹೆಚ್ಚು ಸಕ್ಕದ/ಮರಾಟಿ ಪದಗಳನ್ನು ಮಾತನಾಡುತ್ತಾರೆ. ಇವರ ಅಂಕೆ ತೀರ ಕಡಿಮೆ.


>> ಮರಾಠಿಗರು ನಮ್ಮಲ್ಲಿರುವ ಅಕ್ಷರಗಳನ್ನೇ ಉಪಯೋಗಿಸುತ್ತಿಲ್ಲವೇ?
[anonymous] ಹೌದು. ಬಳಸುತ್ತಿದ್ದಾರೆ ಆದರೆ ಅವರ ನಾಲಿಗೆಗೆ ಹೊಂದುವ ರೀತಿ ಮಾರ್ಪಾಟು ಮಾಡಿಕೊಂಡು ಬಳಸುತ್ತಿದ್ದಾರೆ.
ಮಾದರಿ : ದೊಂಬಿವಿಲಿ ( ಕನ್ನಡ -ದೊಂಬವಳ್ಳಿ)
ಶೋಲಾಪುರ್ ( ಕನ್ನಡ -ಸೊನ್ನಲಾಪುರ)
ಕಾನಡಿ (ಕನ್ನಡ - ಕನ್ನಡ)

ಹೀಗೆ ನಾವು ಸಕ್ಕದಪದಗಳನ್ನು ಬಳಸುವಾಗ ನಮ್ಮ ಮಂದಿಯ ಉಲಿಕೆಗೆ ತಕ್ಕಂತೆ ಮಾರ್ಪಾಟು ಮಾಡಿಕೊಂಡ್ ಬರೀಬೇಕು.

Harisha - ಹರೀಶ said...

American English ನಂತಹ ಬದಲಾವಣೆ ನಮ್ಮಲ್ಲೂ ಇದೆ:

going to - gonna
ಹೋಗುತ್ತೇನೆ = ಹೋಗ್ತೇನೆ
ಹೋಗುತ್ತಿದ್ದೇನೆ = ಹೋಗ್ತಿದೀನಿ

ನಾನು ಹೇಳಿದ್ದು ಪದಗಳ ಸ್ಪೆಲ್ಲಿಂಗ್ ಬಗ್ಗೆ.

***

ನಾನು ಮರಾಠಿ - ಕನ್ನಡ ಪದಗಳ ಮೂಲದ ಬಗ್ಗೆ, ಅವುಗಳು ಬಳಸುವ ಪದಗಳ ಬಗ್ಗೆ ಮಾತನಾಡುತ್ತಿಲ್ಲ.

ಅವುಗಳಲ್ಲಿರುವ ಮಹಾಪ್ರಾಣದ ಬಗ್ಗೆ, ಆ ಭಾಷೆ ಮಾತನಾಡುವ ಜನರು ಅವುಗಳನ್ನು ಸರಿಯಾಗಿ ಉಚ್ಚರಿಸುವ ಬಗ್ಗೆ ಹೇಳಿದ್ದೇನೆ.

ಕನ್ನಡಿಗರು ದಡ್ದರೆ? ಅವರಿಗೆ ಮಹಾಪ್ರಾಣ ಉಚ್ಚರಿಸುವಷ್ಟು ಯೋಗ್ಯತೆಯಿಲ್ಲವೇ?

***

>> ಪಂಜಾಬಿ ನುಡಿಯುವವರೆ ಸಕ್ಕದ ಪದಗಳನ್ನು ಸರಿಯಾಗಿ ಹೇಳುತ್ತಿಲ್ಲ.

ಹಾಗಾಗಿಯೇ ಅವರ ಜಾಣತನ ಜಗಜ್ಜಾಹೀರಾಗಿ ಅವರು ಎಲ್ಲೆಡೆ ನಗೆಪಾಟಲಿಗೀಡಾಗಿರುವುದು, ಸರ್ದಾರ್ಜೀ ಜೋಕುಗಳು ನಲಿದಾಡುತ್ತಿರುವುದು.

>> ಸಕ್ಕದ/ಮರಾಟಿ ಪರಿಸರದಲ್ಲ್ಲಿ ಬೆಳೆದವರು ಹೆಚ್ಚು ಸಕ್ಕದ/ಮರಾಟಿ ಪದಗಳನ್ನು ಮಾತನಾಡುತ್ತಾರೆ.

ಸಮಸ್ಯೆಯೆಂದರೆ, ಈಗ ಅಚ್ಚ ಕನ್ನಡ ವಾತಾವರಣ ಹುಡುಕಿದರೂ ಸಿಗುವುದಿಲ್ಲ. ಹಾಗಾಗಿ ಎಲ್ಲರೂ ನೀವು ಹೇಳಿದಂತೆ ಸಂಸ್ಕೃತ/ಮರಾಠಿ/ತೆಲುಗು/ಇಂಗ್ಲಿಷ್/ತಮಿಳು/ಮಲಯಾಳಂ/ಹಿಂದಿ ಭಾಷೆಗಳ ಪ್ರಭಾವಕ್ಕೊಳಗಾಗಿಯೇ ಬೆಳೆಯುತ್ತಿದ್ದಾರೆ. ಅಚ್ಚ ಕನ್ನಡ ಈಗ ಮಾತನಾಡಲು ಸಿಗುವುದು ಕೇವಲ ಧಾರವಾಡ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ. ಉಳಿದೆಲ್ಲೆಡೆ ಇತರ ಭಾಷೆಗಳು ಕನ್ನಡವನ್ನು ಆವರಿಸಿಕೊಂಡಿವೆ. ಅನ್ಯಭಾಷೆಗಳ ಬಳಕೆ ಬೇಡ ಎಂದು ಅವರಿಗೆ ಅಚ್ಚ ಕನ್ನಡದ ಪದಗಳನ್ನು ಹೇರಲು ಹೋದರೆ ಅವರಿಗೆ ಕನ್ನಡದ ಮೇಲೆ ಅಸಡ್ಡೆ ಮೂಡುತ್ತದೆಯೇ ಹೊರತು ಅಭಿಮಾನವಲ್ಲ.

>> ನಾವು ಸಕ್ಕದಪದಗಳನ್ನು ಬಳಸುವಾಗ ನಮ್ಮ ಮಂದಿಯ ಉಲಿಕೆಗೆ ತಕ್ಕಂತೆ ಮಾರ್ಪಾಟು ಮಾಡಿಕೊಂಡ್ ಬರೀಬೇಕು.

ಕರ್ನಾಟಕದಲ್ಲಿ ಕನ್ನಡವನ್ನು ಹಲವು ಹದಿನೆಂಟು ರೀತಿಯಲ್ಲಿ ಮಾತನಾಡುತ್ತಾರೆ. ಯಾವುದನ್ನು ನೀವು ಮಾನಕ (standard) ಎಂದು ಪರಿಗಣಿಸುತ್ತೀರಿ? ಬರವಣಿಗೆಗೆ ತಕ್ಕಂತೆ ಉಚ್ಚಾರವಿರಬೇಕು, ಉಚ್ಚಾರಕ್ಕೆ ತಕ್ಕಂತೆ ಬರವಣಿಗೆಯಲ್ಲ.

Anonymous said...

ಮೊದಲು ಬಂದಿದ್ದು ಮಾತು. ಬರವಣಿಗೆ ತೀರ ಇತ್ತೀಚಿನದು ಮಾತಿಗೆ ಹೋಲಿಸಿದರೆ,

ಆದ್ದರಿಂದ ಮಾತಿನಂತೆ ಬರಹ, ಬರಹದಂತೆ ಮಾತಲ್ಲ. ನಮ್ಮ ಮಾತಿಗೆ ಬರಹವನ್ನು ನಾವು ಕಂಡುಕೊಂಡಿದ್ದು. ಬರಹ ಬರೆದು ಆಮೇಲೆ ಮಾತಲ್ಲ. ಇದು ತುಂಬ ತಳಪಾಯದ ತಿಳುವಳಿಕೆ.

ನೀವು ಹೆಂಗೆ ಮಾತನಾಡುವಿರೊ (ಹದಿನೆಂಟ್ ತರ ಇರಲಿ) ಹಾಗೆ ಬರೆಯಿರಿ. ಬೇರೆಯವರಿಗೆ ಅರಿತ ಆಗುತ್ತೆ. ಕವಿರಾಜಮಾರ್ಗದ ಸಿರಿವಿಜಯನೇ ಅದಕ್ಕೆ 'ಕನ್ನಡಂಗಳ್' ಅಂತ ಹೇಳಿದ್ದಾನೆ. ಸಕ್ಕದ ತುಂಬಿದ ಈಗಿನ ಬರಹಗನ್ನಡವೇ ಕನ್ನಡ ಅಲ್ಲ. ನಾವು ನಮ್ಮ ಸೊಗಡಿರುವ ಹಲವು ಕನ್ನಡಂಗಳನ್ನ ಉಳಿಸಿ ಬೆಳೆಸಬೇಕಾಗಿದೆ. ಬರಹಕ್ಕೆ ಹೆಚ್ಚು ಒತ್ತು ಸಿಗುತ್ತಿರುವ ಈ ಕಾಲದಲ್ಲಿ ನಾವು ನಮ್ಮ ಕನ್ನಡಂಗಳನ್ನ ಉಳಿಸದಿದ್ದರೆ ಅವುಗಳು ಮುಂದೆ ಇಲ್ಲವಾಗಬಹುದು.

ಹೋಗ್ತೇನೆ, ವೊಯ್ತಿನಿ ಅಂತ ಬರಹಗನ್ನಡದಲ್ಲಿ ಬರೆಯಕ್ಕಾಗಲ್ಲ. ಆವಾಗ ಕೀಳಾಗಿ ಕಾಣ್ತಾರೆ. 'ಹೋಗುತ್ತೇನೆ' ಅಂತ ಬರೆದರೆ ಈಗ ಬರಹಗನ್ನಡದಲ್ಲಿ ಬೆಲೆ. ಇದು ತೊಲಗಬೇಕು.

Harisha - ಹರೀಶ said...

ನೀವು ಭಾಷೆಯನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೀರೋ, ಬೆಳೆಸಲು ಪ್ರಯತ್ನಿಸುತ್ತಿದ್ದೀರೋ ತಿಳಿಯುತ್ತಿಲ್ಲ.

ನನ್ನ ಕಲ್ಕತ್ತಾದ ಗೆಳೆಯನೊಬ್ಬನಿಗೆ ಕನ್ನಡ ಹೇಳಿಕೊಡುತ್ತೇನೆ ಎಂದು ಕೆಲವು ಪದಗಳನ್ನು ಹೇಳಿಕೊಟ್ಟೆ. ಅವನು ಬೆಂಗಳೂರಿನಲ್ಲೇ ಓದಿದವನಾದ್ದರಿಂದ ಕೆಲವು ಮೂಲಭೂತ ಪದಗಳನ್ನು ಬಲ್ಲವನಾಗಿದ್ದ. ನಾನು "ಹೋಗುತ್ತೇನೆ" ಎಂದು ಹೇಳಿಕೊಟ್ಟರೆ "ಹೋಗ್ತೀನಿ" ಎಂದು ಹೇಳುತ್ತಿದ್ದ. ಇಂಥವರಿಗೆ ಭಾಷೆ ಕಲಿಸಲು ನೀವು ಒಂದೊಂದು ದಿನ ಒಂದೊಂದು ಕನ್ನಡವನ್ನು ಹೇಳಿಕೊಟ್ಟರೆ (ಹೋಗ್ತೀನಿ, ಹೋಯ್ತೆ, ಹೋಗ್ತೆ, ಪೋತೆ, ಹೋಕೀನಿ...) ಕಲಿಯುತ್ತಾರೆಯೇ? ಹಾಗಾಗಿ ಮಾತೇ ಮೊದಲು ಬಂದಿದ್ದು ನಿಜವಾದರೂ ಒಂದು ರೀತಿಯ ಮಾನಕ ಬರವಣಿಗೆಯಲ್ಲಿ ಬೇಕು. ಅದನ್ನು ಕನ್ನಡ ಬಲ್ಲವರು ಹೇಗೆ ಬಳಸುತ್ತಾರೋ ಅದು ಅವರಿಗೆ ಬಿಟ್ಟಿದ್ದು.

ಇದೇ ಹಣೆಬರಹ ಮಲಯಾಳಂನದ್ದು ಕೂಡ. ದಕ್ಷಿಣ ಕೇರಳದ ಜನರು ಮಾತನಾಡುವ ಎಷ್ಟೋ ಪದಗಳು ಅರ್ಥವಾಗದ ಉತ್ತರ ಕೇರಳದ ಜನರಿದ್ದಾರೆ ಎಂದು ಕೇಳಿದ್ದೇನೆ. ಆದರೆ ಈ ರೀತಿಯ ಪ್ರಾಂತ್ಯವಾರು ಬದಲಾವಣೆಗಳು ಹಿಂದಿ, ತೆಲುಗು, ತಮಿಳಿನಲ್ಲಿ ಕಡಿಮೆ. ಹಾಗಾಗಿ ಅವು ಬಹು ಬೇಗ ಹಬ್ಬುತ್ತಿವೆ.

ಅತಿ ಕಡಿಮೆ ಅಕ್ಷರಗಲಿದ್ದರೆ ಲಾಭ ಎನ್ನುವುದಾದರೆ ದ್ವಿಮಾನ ಪದ್ಧತಿಯ ಲಿಪಿ (binary system) ಉಪಯೋಗಿಸಬಹುದಿತ್ತಲ್ಲ? ಹಾಗಾದರೆ ಮನುಷ್ಯರಿಗೂ ಯಂತ್ರಗಳಿಗೂ ವ್ಯತ್ಯಾಸವೇನು ಉಳಿಯಿತು?

ನಮ್ಮನ್ನು ನಾವೇ ಬುದ್ಧಿ ಹೆಚ್ಚು ಇರುವ ಪ್ರಾಣಿಗಳು ಎಂದು ಕರೆದುಕೊಳ್ಳುತ್ತೇವೆ. ೧೭ ಅಕ್ಷರ ಕಲಿಯುವುದು ಕಬ್ಬಿಣದ ಕಡಲೆಯೇ?

sunaath said...

ನಮ್ಮ ಮಾತಿನಂತೆಯೇ ನಾವು ಬರಿಯಬೇಕೆಂದರೆ:-
ಕೆಲವರು ಅರಸಿಕೆರೆಗೆ ಹರಸಿಕೆರೆ ಎಂದೂ, ಹಾಸನಕ್ಕೆ ಆಸನ ಎಂದೂ ಹೇಳುತ್ತಾರೆ. ಕತೆ,ಕಾದಂಬರಿಗಳಲ್ಲಿ ಇಂತಹ ಆಡು ಮಾತನ್ನು ಬಳಸುವದು ಸರಿಯಾದೀತು. ಆದರೆ ಬಸ್ ಅಥವಾ ರೇಲವೆ ನಿಲ್ದಾಣಗಳಲ್ಲಿ, ಪಠ್ಯಪುಸ್ತಕಗಳಲ್ಲಿ ಈ ತರಹ ಬರೆಯುವವರನ್ನು ಹುಚ್ಚಾಸ್ಪತ್ರೆಗೆ ಕಳಿಸಬೇಕಾಗುತ್ತದೆ.

Harisha - ಹರೀಶ said...

ಅನಾಮಿಕರೆ, ಸುನಾಥರು ಸರಿಯಾಗಿ ಹೇಳಿದ್ದಾರೆ. ಬಹುತೇಕ ಜನರ ಬಾಯಿಯಲ್ಲಿ ಉಚ್ಚಾರ ಈ ರೀತಿ ಇರುತ್ತದೆ:

ಅ ಆ - ಹ ಹಾ
ಇ ಈ - ಯಿ ಯೀ
ಉ ಊ - ವು ವೂ
ಎ ಏ - ಯೆ ಯೇ
ಒ ಓ - ವೊ ವೋ
ಅಂ - ಅಮ್

ಹಾಗಾಗಿ ಸ್ವರಾಕ್ಷರಗಳಿಗೆ ಸಂಜ್ಞೆಗಳೇ ಬೇಡ ಎನ್ನುವ ಹೊಸ ವಾದವನ್ನೂ ನೀವು ಮುಂದಿಡಬಹುದಲ್ಲ? ನಿಮಗೂ, ಶಂಕರ ಭಟ್ಟರಿಗೂ ಇದು ಹೊಳೆದಿಲ್ಲ ಎನಿಸುತ್ತದೆ. "ಕನ್ನಡವನ್ನು ಮತ್ತೆ/ಇನ್ನಷ್ಟು ಸರಿಪಡಿಸೋಣ" ಎನ್ನುವ ಪುಸ್ತಕ ಬರೆದು ಕನ್ನಡ ೨.೦ ಎಂದು ಹೊಸ ಆವೃತ್ತಿ ಬಿಡಲಡ್ಡಿಯಿಲ್ಲ.

ಇದು ಹೇಗೆ ನಿಮಗೆ ಅಸಂಬದ್ಧ (ನಿಮ್ಮ/ಶಂಕರ ಭಟ್ಟರ "ಸರಿಪಡಿಸಿದ" ಕನ್ನಡದಲ್ಲೂ ಈ ಸ್ವರಾಕ್ಷರಗಳು ಸ್ಥಾನ ಪಡೆದಿವೆ, ಆದ್ದರಿಂದ ಹಾಗೆಂದು ಅಂದುಕೊಂಡಿದ್ದೇನೆ) ಎನಿಸುತ್ತದೆಯೋ, ಹಾಗೆಯೇ ನನಗೂ, ನಿಮ್ಮ ವಾದವನ್ನು ವಿರೋಧಿಸುತ್ತಿರುವ ಎಲ್ಲರಿಗೂ ಋ ಬದಲು ರು, ಐ ಬದಲು ಅಯ್, ಆ ಬದಲು ಅವ್ ಎಂದು ಬರೆಯುವುದೂ, ಉಚ್ಚಾರಣೆ ಸರಿಯಿಲ್ಲದ ಮಾತ್ರಕ್ಕೆ ಮಹಾಪ್ರಾಣಗಳನ್ನು ಬಿಡುವುದೂ ಅಸಂಬದ್ಧ ಎಂದು ಕಾಣುತ್ತದೆ.

ಇನ್ನೂ ನಿಮಗೆ ಉಚ್ಚಾರದ ಅವಾಂತರ ಗೊತ್ತಾಗಬೇಕೆಂದರೆ ಇಲ್ಲಿ ನೋಡಿ.

ನಮ್ಮ ಗುರುಗಳು ಉಚ್ಚಾರಣೆಯ ಮಹತ್ವ ತಿಳಿಸುವಾಗ ಹೇಳುತ್ತಿದ್ದ ಮಾತು ನೆನಪಾಗುತ್ತದೆ... ಭರತ ಖಂಡ ಭಾರತ ಭೂಮಿ ನಿಮ್ಮ ಪ್ರಕಾರ ಬರತ ಕಂಡ ಬಾರತ ಬೂಮಿ! ಕರ್ಮಕಾಂಡ!!

sunaath said...

ಹರೀಶ,
ತುಂಬಾ ಚೆನ್ನಾಗಿ ಹೇಳಿದ್ದೀರಿ.
ಖಂಡಿತವಾಗಿಯೂ ’ಕನ್ನಡ ಬರಹ-೨’ ಬರಲೇ ಬೇಕು.
ಕನ್ನಡಕ್ಕೆ ಕೇವಲ ಹದಿನೆಂಟೇ ಅಕ್ಷರಗಳು ಸಾಕು. ಕನ್ನಡವನ್ನು ಸರಳ ಮಾಡಿದಷ್ಟೂ ಜನಪ್ರಿಯವಾಗುವದು!

ನಿಮ್ಮ linkಗೆ ಹೋಗಿ, ಅಲ್ಲಿಯ ಸಂಭಾಷಣೆಯನ್ನು ಹಾಗು ಟೀಕೆ, ಟಿಪ್ಪಣಿಗಳನ್ನು ಓದಿದೆ. ಒಟ್ಟೆ ಉಣ್ಣಾಗುವಸ್ಟು ನಗೆ ಬಂದಿತು.

Anonymous said...

ಮೊದಲೇ ಹೇಳಿದಂತೆ ನಿಮಗೆ ಕನ್ನಡ ಗೊತ್ತಿಲ್ಲ.

ನಾವು 'ಅಮ್ಮ' ಅನ್ನುತ್ತೇವ್ ಹೊರತು 'ಹಮ್ಮ' ಅನ್ನಲ್ಲ. ಹಾಗೆ ಉಲಿಯುವವರ್ ಅಮೆರಿಕದಲ್ಲಿರಬೋದು. ಕನ್ನಡ ನಾಡಿನಲ್ಲಿಲ್ಲ.

ನಾವು 'ಇವನು/ಇಂವ" ಅನ್ನುತ್ತೇವೆ ಹೊರತು 'ಯಿವನು' ಅನ್ನಲ್ಲ.

ಎಲ್ಲರೂ ನಿಮ್ಮನ್ನ ಕೇಳ್ಕಂಡ್ ಹೆಂಗೆ ಮಾತಾಡಬೇಕು ಅನ್ನುವುದನ್ನ ಕಲಿಯಲ್ಲ

ಆಡುನುಡಿ ಅಂತ ಇದೆ ನೀವು ಒಪ್ಕೋತೀರ ಅಲ್ವ. ಅಂದರೆ ಈ ಆಡುನುಡಿ ನಮ್ಮ 'ಕಿವಿ'ಗೆ ಯಾವ ತೊಂದರೆಯನ್ನು, ಗೊಂದಲವನ್ನು ಉಂಟುಮಾಡುವುದಿಲ್ಲ. ಹಾಗಾದರೆ 'ಕಣ್ಣಿ'ಗೆ ಯಾಕೆ ತೊಂದರೆ, ಗೊಂದಲ?

ಇದು ನನ್ನ basic ಕೇಳ್ಮೆ. ಕಣ್ಣಿಗೆ ಒಂತರ, ಕಿವಿಗೆ ಒಂತರ ಯಾಕೆ? ಕಿವಿಗೆ ಬೀಳುವುದನ್ನ ಕಣ್ಣಿಗೆ ಕಾಣಿಸಿ

ಅಶ್ಟೆ, ಸಿಗೋಣ

Anonymous said...

ಅನಾಮಿಕರೆ,
ನೀವು ಹೇಳುವಂತೆ, ಕಿವಿಗೆ ಬಿದ್ದದ್ದೆ ಕಣ್ಣಿಗೂ ಬೀಳಬೇಕು ಎನ್ನುವದಾದರೆ, 'ಅರಸಿಕೆರೆ' ರೇಲುನಿಲ್ದಾಣಕ್ಕೆ 'ಹರಸಿಕೆರೆ' ಎಂದು ಬೋರ್ಡ ಹಾಕಬೇಕಾಗುತ್ತದೆ. ಅದರಂತೆ 'ಹಾಸನ' ನಿಲ್ದಾಣಕ್ಕೆ 'ಆಸನ' ಎನ್ನುವ ಬೋರ್ಡು ಹಾಕಬೇಕಾಗುತ್ತದೆ.
-Patrama

Anonymous said...

>>ನೀವು ಹೇಳುವಂತೆ, ಕಿವಿಗೆ ಬಿದ್ದದ್ದೆ ಕಣ್ಣಿಗೂ ಬೀಳಬೇಕು >>ಎನ್ನುವದಾದರೆ, 'ಅರಸಿಕೆರೆ' >>ರೇಲುನಿಲ್ದಾಣಕ್ಕೆ 'ಹರಸಿಕೆರೆ' ಎಂದು .

ಇದು ಸುಳ್ಳು . ತೆಂಕು-ಕನ್ನಡ ನಾಡಿನಲ್ಲಿ 'ಹ'ಕಾರ ಬಿದ್ದುವೋಗಿದೆ. (ಶಂಕರಬಟ್ಟರು 'ಕನ್ನಡ ನುಡಿ ನಡೆದು ಬಂದ ದಾರಿ' ಹೊತ್ತಿಗೆ ನೋಡಿ).
ಅರಸಿಕೆರೆನಾ 'ಹರಸಿಕೆರೆ' ಅಂತ ಯಾರು ಯೋಳಲ್ಲ.

'ಹ್' ಕಾರ ಇಲ್ದೆ enguru.blogspot.com ಬರೆಪುಗಳನ್ನ ಬರೀತಾ ಇದ್ದಾರೆ ನೋಡಿ. ಅವ್ರ ಬರೆಪು ನೋಡಿ.

Harisha - ಹರೀಶ said...

ಅನಾಮಿಕರೆ, ನಾನು ಇಲ್ಲಿ ಬರೆದಿರುವುದು ಕಲ್ಪನೆ ಮಾಡಿ ಅಲ್ಲ:

http://baala-doni.blogspot.com/2008/04/blog-post.html

ಕಟು ಸತ್ಯ ಅರಗಿಸಿಕೊಲ್ಲಕ್ಕೆ ಆಗಲ್ಲ ಅಂದ್ರೆ ಬಿಡಿ, ಸುಮ್ಮನೆ ಹಾಗಿಲ್ಲ ಹೀಗಿಲ್ಲ ಅಂತ ಯಾಕೆ ಹೇಳ್ತೀರಿ?

Harisha - ಹರೀಶ said...

>> ನಾವು 'ಇವನು/ಇಂವ" ಅನ್ನುತ್ತೇವೆ ಹೊರತು 'ಯಿವನು' ಅನ್ನಲ್ಲ.

ನಾವು ಕೂಡ, "ಭಾಷೆ" ಅಂತೀವೆ ಹೊರತು "ಬಾಶೆ" ಅನ್ನಲ್ಲ. "ಸುನಾಥ" ಅಂತೀವೆ ಹೊರತು "ಸುನಾತ" ಅನ್ನಲ್ಲ. "ಮರಾಠಿ" ಅಂತೀವೆ ಹೊರತು "ಮರಾಟಿ" ಅನ್ನಲ್ಲ.

ಇಷ್ಟು ದಿನ ಏನೋ ಗೊತ್ತಿದ್ದೋ/ಗೊತ್ತಿಲ್ಲದೆಯೋ ತಪ್ಪು ಮಾತನಾಡಿದ್ದೀರಿ. ಇನ್ನಾದರೂ ಸರಿಯಾಗಿ ಉಚ್ಚರಿಸಲು ಕಲಿಯಿರಿ.

>> ಎಲ್ಲರೂ ನಿಮ್ಮನ್ನ ಕೇಳ್ಕಂಡ್ ಹೆಂಗೆ ಮಾತಾಡಬೇಕು ಅನ್ನುವುದನ್ನ ಕಲಿಯಲ್ಲ

ಎಲ್ಲರೂ ನಿಮ್ಮನ್ನ/ಶಂಕರ ಭಟ್ಟರನ್ನ ಕೇಳ್ಕಂಡ್ ಹೆಂಗೆ ಮಾತಾಡಬೇಕು ಅನ್ನುವುದನ್ನ ಕಲಿಯಲ್ಲ

ಸುನಿಲ್ ಜಯಪ್ರಕಾಶ್ said...

ಈ ಚರ್ಚೆಗೆ ನೇರವಾಗಿ ನಂಟಾಗದಿದ್ದರೂ, ಯಾವ ನೆಲೆಯಲ್ಲಿ ಮಹಾಪ್ರಾಣಗಳ ಬಗ್ಗೆ ಕನ್ನಡ ಸಾರಸ್ವತ ಲೋಕದಲ್ಲಿ ಈ ಹೊತ್ತಿನಲ್ಲಿ ಚರ್ಚೆಯಾಗುತ್ತಿದೆ ಎಂಬುದನ್ನು ಈ ಕೆಳಗಿನ ಎಳೆಯನ್ನು ನೋಡಬಹುದು.
ಸರಳಗನ್ನಡ

@ಎಲ್ಲರಿಗೂ, (ಮುಖ್ಯವಾಗಿ ಭಾವುಕವಾಗಿಯೇ ಇಲ್ಲಿಯ ತನಕ ಪ್ರತಿಕ್ರಿಯಿಸಿರುವವರಿಗೆ),
ಗೆಳೆಯರೆ, ನೋಡಿ, ಮಹಾಪ್ರಾಣಗಳು ಬೇಡ, ಅಂದ್ರೆ, ಇನ್ನುಮುಂದೆ "ಭಾಷೆ"ಯನ್ನು "ಬಾಶೆ"ಯಾಗಿ ಹೇಳಿ ಅಂತಲ್ಲ. ಆದರೆ ಮಹಾಪ್ರಾಣಗಳಿರುವ "ಭಾಷೆ"ಗೆ ಬದಲಾಗಿ ಬೇರೆ ಆಲ್ಟರ್ನೇಟೀವ್ ಇದ್ಯಾ ಅಂತ ಹುಡುಕುವುದು(ಅನ್ವೇಷಿಸುವುದಲ್ಲ). ಹಾಗೆ ನೋಡಿದರೆ, "ಭಾಷೆ" ಎನ್ನುವುದಕ್ಕೆ ಬದಲಾಗಿ "ನುಡಿ" ಎಂಬ ಸರಳ ಕನ್ನಡ ಪದ ಇದೆ. ಇದನ್ನು ಶಿಷ್ಟರಾದ ನಾವು ನೀವು ಅರ್ಥಮಾಡಿಕೊಳ್ಳಬೇಕು. ಸುಮ್ಮನೆ ಮಹಾಪ್ರಾಣ ಹೊರಟುಹೋಗತ್ತೆ, "ಅಯ್ಯೋ, ಏನಪ್ಪಾ, ಆ ಶಂಕರ ಭಟ್ಟನಿಗೆ ತಲೆನೆಟ್ಟಗಿಲ್ಲ" ಅಂತ ಭಾವುಕವಾಗಿ ಚರ್ಚಿಸುವುದಲ್ಲ.
@ಹರೀಶ್,
ನೋಡಿ, ಈಗ ಸುನಾಥರು, ಶಂಕರ ಭಟ್ಟರ ಪುಸ್ತಕಗಳನ್ನು ಓದಿ ಅವರಿಗೆ ಇಷ್ಟವಾಗದ ವಿಷಯವನ್ನು ಚರ್ಚಿಸುತ್ತಿದ್ದಾರೆ. ಆದರೆ ಹರೀಶರೇ, ನೀವು, ಶಂಕರ ಭಟ್ಟರ ಪುಸ್ತಕಗಳನ್ನೂ ಓದಿಲ್ಲ, ಹೋಗಲಿ, ಶಂಕರ ಭಟ್ಟರು ಯಾರು ಎಂಬುದೂ ನಿಮಗೆ ತಿಳಿದಿಲ್ಲ. ಸುನಾಥರು ಪ್ರಸ್ತಾಪಿಸಿದ ಅಂಶಗಳನ್ನಷ್ಟೇ ಇಟ್ಟುಕೊಂಡು ನೀವು ಚರ್ಚಿಸುತ್ತಿದ್ದೀರಾ. ನೀವೂ ಏಕೆ ಸುನಾಥರಂತೆ, ಮೊದಲು ಶಂಕರ ಭಟ್ಟರ ಪುಸ್ತಕಗಳನ್ನು ಓದಿ, ನಂತರ ಅವರು ಮಂಡಿಸಿರುವ ವಿಷಯಗಳ ಅಧಿಕಾರಯುತ ಚರ್ಚೆಯನ್ನು ಮಂಡಿಸಬಾರದು. ಸುನಾಥರಿಗೆ ಒಪ್ಪಿಗೆಯಾಗದ ವಿಷಯಗಳ ಹಾಗೆ, ಒಪ್ಪಿಗೆಯಾದ ವಿಷಯಗಳೂ, ಅತ್ವಾ ಸುನಾಥರಿಗೆ ಅರ್ಥವಾಗದ ವಿಷಯಗಳೂ ಆ ಪುಸ್ತಕದಲ್ಲಿ ಇರಬಹುದು ಎಂಬುದರ ಬಗ್ಗೆ ನೀವು ಏಕೆ ಯೋಚಿಸಿಲ್ಲ.

@ಎಲ್ಲರಿಗೂ, ಅದೆಲ್ಲ ಇರಲಿ, ಶಂಕರ ಭಟ್ಟರು ಎಲ್ಲಿಯೂ ಕನ್ನಡ ಹೀಗೆಯೇ ಇರಬೇಕು ಅಂತ ಹೇಳಿಲ್ಲ. "ಹೀಗೆ ಇದ್ದರೂ ಚೆನ್ನ" ಎಂದು ಆಧಾರಸಮೇತ ತೋರಿಸಿಕೊಡಲು ಪ್ರಯತ್ನಿಸಿದ್ದಾರೆ. ತೋರಿಸಿಕೊಡುವಲ್ಲಿ ತಕ್ಕಮಟ್ಟಿಗೆ ಯಶಸ್ವಿಯಾಗಿದ್ದಾರೆ ಕೂಡ. (ಮೇಲೆ ನಾನು ನೀಡಿದ ಕೊಂಡಿ ನೋಡಿ, ತಿಳಿಯತ್ತೆ, ಆಮೇಲೆ ಇದಕ್ಕೆ ಪ್ರತಿಕ್ರಿಯಿಸಿ).

ಅವರ ಪುಸ್ತಕಗಳನ್ನು ಓದದಿದ್ದರೂ, ಒಮ್ಮೆ ಇಂಗ್ಲೀಷಿನಲ್ಲಿಯೇ ಗೂಗಲ್ ಮಾಡಿ ನೋಡಿ, ಶಂಕರ ಭಟ್ಟರು ಯಾರು, ಅವರು ಯಾವ ಯಾವ ಭಾಷೆಗಳಲ್ಲಿ, ಪ್ರಬುದ್ಧ ಪ್ರಬಂಧಗಳನ್ನು ಮಂಡಿಸಿದ್ದಾರೆ ಎಂಬುದು ತಿಳಿಯುತ್ತದೆ. books.google.com

ಸುನಿಲ್ ಜಯಪ್ರಕಾಶ್ said...

@ಎಲ್ಲರಿಗೂ (ಮುಖ್ಯವಾಗಿ ಹರೀಶ್),

>> ಶಂಕರ ಭಟ್ಟರನ್ನ ಕೇಳ್ಕಂಡ್ ಹೆಂಗೆ ಮಾತಾಡಬೇಕು ಅನ್ನುವುದನ್ನ ಕಲಿಯಲ್ಲ.

ಶಾಸ್ತ್ರೀಯವಾದ ಈ ವಿಷಯ ಮಾತುಕತೆಯಲ್ಲಿ, ಶಂಕರ ಭಟ್ಟರನ್ನು ಹೀಗೆ ವೈಯಕ್ತಿಕ ಮಟ್ಟಕ್ಕೆ ಇಳಿಸಿಕೊಂಡು ಚರ್ಚಿಸುತ್ತಿರುವುದು ಒಂಚೂರೂ ಸರಿಯಿಲ್ಲ. ಇದು ನನ್ನ ಪ್ರಾಮಾಣಿಕೆ ಅನಿಸಿಕೆ.

Harisha - ಹರೀಶ said...

joey, ಸರಿಯಾಗಿ ಹೇಳಿದ್ದೀರಿ. "ನುಡಿ" ಎಂದು ಬಳಸಲಿ, ಬೇಡ ಅಂದವರಾರು? ಆದರೆ ಅವರಿಗೆ ನುಡಿ ಎಂಬ ಪದ ಹೊಳೆಯಲಿಲ್ಲ ಎಂದ ಮೇಲೆ "ಭಾಷೆ" ಎಂದು ಸರಿಯಾಗಿ ಉಪಯೋಗಿಸಲಿ. "ಬಾಶೆ" ಎಂದು ಹೇಳಿ ಅದನ್ನು ಹಾಳುಗೆಡಹುವುದು ಬೇಡ.

ಶಂಕರ ಭಟ್ಟರ ಮೇಲೆ ನನಗೆ ಯಾವ ದ್ವೇಷವೂ ಇಲ್ಲ. ಇದನ್ನು ನಾನು ಮೇಲೆಯೇ ಹೇಳಿದ್ದೇನೆ.

ಸುನಿಲ್ ಜಯಪ್ರಕಾಶ್ said...

ಹರೀಶರು ಹೇಳಿದ್ದು,
>>"ಭಾಷೆ" ಎಂದು ಸರಿಯಾಗಿ ಉಪಯೋಗಿಸಲಿ. "ಬಾಶೆ" ಎಂದು ಹೇಳಿ ಅದನ್ನು ಹಾಳುಗೆಡಹುವುದು ಬೇಡ.

ನೋಡಿ, ನೀವು ಮತ್ತೆ ಬೇಗ ತೀರ್ಮಾನ ತೊಗೊಳ್ತಾ ಇದ್ದೀರಾ. ನಾನು ನಿಮ್ಮ ಬತ್ತಳಿಕೆಯ ಒಂದು ಬಳಕೆಯನ್ನೇ ಉದಾಹರಣೆಯಾಗಿ ತೊಗೊಂಡು ಮೂರು ಪ್ರಶ್ನೆಯನ್ನು ಕೇಳ್ತೀನಿ. ಇದಕ್ಕೆ ಪ್ರಾಮಾಣಿಕ ಉತ್ತರ ಕೊಡಿ. ಭಾವುಕವಾಗಿ, ಕನ್ನಡದಿಂದ ಏನೋ ಕಳ್ದೋಯ್ತು ಎಂಬ ಉದ್ವೇಗದಿಂದ ಉತ್ತರಿಸಬೇಡಿ, ದಯವಿಟ್ಟು.

೧. ಈಗ ನೋಡಿ ನೀವು, ಕುರ್ಚಿಯನ್ನು "ಖುರ್ಸಿ" ಅಂತೀರೋ "ಕುರ್ಚಿ" ಅಂತೀರೋ ? Maza ಎನ್ನುವುದನ್ನು "ಮಜ" ಅಂತ ನಾವು ಬಳಸಲ್ವೇ ? ಇಂತಿರುವಾಗ, ಭಾಷೆಯನ್ನು "ಬಾಶೆ" ಅಂತ ಬರೆಯಬೇಡಿ, ಅಂತ ಹೇಳೋಕ್ಕೆ ನಾವು ನೀವು ಯಾರು ? ಭಾಷೆಯನ್ನು ಭಾಷೆಯಾಗಿಯೇ ಹೇಳುಬೇಕು ಅಂತ ಇದ್ದರೆ, ಕುರ್ಚಿಯನ್ನು ಖುರ್ಸಿಯಂತಲೇ ಹೇಳೋಕ್ಕೆ ನೀವು ತಯಾರಾ ?. ಮತ್ತೊಮ್ಮೆ, ಉದ್ವೇಗ ಬೇಡ. ಯೋಚಿಸಿ ಉತ್ತರ ಕೊಡಿ.
೨. ನಿಮಗೆ "ಭಾಷೆ"ಯನ್ನು ಭಾಷೆ ಅಂತಲೇ ಬರೆಯಬೇಕು ಎನ್ನುವ ಮನಸ್ಥಿತಿಯಿದ್ದರೆ, ನಿಜವಾಗಿ ನೋಡಿದರೆ, "ಭಾಷಾ" ಎಂದು ಬರೆಯಿರಿ. ಸಂಸ್ಕೃತದ "ಭಾಷಾ"ವನ್ನು ಕನ್ನಡದಲ್ಲಿ "ಭಾಷೆ" ಅಂತ ಬರೆದು ಸಂಸ್ಕೃತವನ್ನು ಯಾಕೆ ಹಾಳುಮಾಡ್ತೀರಿ ಅಂತ ನಾನು ಕೇಳಿದರೆ ನಿಮ್ಮ ಉತ್ತರ ಏನು ?
೩. ಅಷ್ಟಕ್ಕೂ ಮಹಾಪ್ರಾಣಗಳು ಬೇಕು ಎನ್ನುವವರೂ ಕೂಡ "ಭಾಷೆ"ಯನ್ನು "ಭಾಷೆ" ಅಂತ ಉಚ್ಚರಿಸಲ್ಲ, ಬದಲಾಗಿ "ಭಾಶೆ" ಅಂತಾರೆ. ನಿಮಗೆ ಶ, ಷಗಳ ನಡುವೆ ವ್ಯತ್ಯಾಸ ತಿಳಿದಿರಬಹುದು. ನಿಮಗೆ "ಭಾಷೆ" ಬೇಕು ಎಂದಾದರೆ, ಕಷ್ಟಪಟ್ಟಾದರೂ, "ಭಾಷೆ" ಅಂತ ನಾಲಗೆ ಹೊರಳಿಸಿ ಹೇಳಿ, ಮುಖ್ಯವಾಗಿ ನಿಮ್ಮ ಹತ್ತಿರದವರಿಂದ ಹೇಳಿಸಿ ನೋಡೋಣ. ಉದ್ವೇಗದಲ್ಲಿ "ನಾನು ಭಾಷೆ ಅಂತಾನೇ ಹೇಳ್ತೀನಿ, ಅದಕ್ಕೇನೀಗ" ಎನ್ನಬಹುದು. ಆದರೆ ಪ್ರಯತ್ನವಿಲ್ಲದೆ, ದಿನಗಟ್ಟಲೆಯಲ್ಲಿ ನಾವು, ನೀವು ಎಲ್ರೂ "ಶ"ವನ್ನೇ ಬಳಸೋದು.

ಕನ್ನಡದ ಸೊಗಡಿಗೆ ಹೊಂದುವಂತೆ ನಾವು (ಹಿಂದಿನ ಕನ್ನಡ ಕವಿಗಳು, ಈಗಿನ ಪಂಡಿತರೂ, ಎಲ್ಲರೂ) ಎಷ್ಟೋ ಸಂಸ್ಕೃತ ಪದಗಳನ್ನು, ಉರ್ದು ಪದಗಳನ್ನು ಒಗ್ಗಿಸಿಕೊಂಡಿದ್ದೇವೆ ? ಇಂತಿರುವಾಗ ನಮ್ಮದಲ್ಲದ ಪದಗಳನ್ನು ನಮ್ಮ ಸೊಗಡಿಗೆ ಹೊಂದಿಸಿಕೊಂಡು ಬರೆದವರನ್ನು ಕೀಳುಗಣ್ಣಿನಿಂದ ಏಕೆ ನೋಡಬೇಕು ? ಕನ್ನಡ ಪಂಡಿತರು ಕೂಡ ಬೇರೆ ಬೇರೆ ಕಡೆ ಎಷ್ಟೋ ಮಹಾಪ್ರಾಣಗಳನ್ನು ಉಲಿಯುತ್ತಿಲ್ಲ (ಖುರ್ಸಿ->ಕುರ್ಚಿ, ಒಂದು ಸಣ್ಣ ಉದಾಹರಣೆ)

"ದೇವೇಗೌಡರ ಆಸನ ..." ಮುಂತಾದ ಕುಹಕಗಳು ಶಾಸ್ತ್ರೀಯ ವಿಷಯದಲ್ಲಿ ಚರ್ಚಿತವಾಗುವುದು ಈ ಒಂದು ಚರ್ಚೆಯ ಘನತೆಗೆ ಅಪಮಾನ.

Harisha - ಹರೀಶ said...

joey, ಒಳ್ಳೆ ವಿಷಯ ಹೇಳಿದ್ದೀರಿ. ಕುರ್ಚಿ ಎಂಬುದಕ್ಕೆ ಅಚ್ಚ ಕನ್ನಡ ಪದ ಯಾವುದೂ ಇಲ್ಲ. ಹಾಗಾಗಿ ಅದನ್ನು ಕನ್ನಡಕ್ಕೆ ಇಳಿಸಲಾಗಿದೆ. ಆದರೆ ಭಾಷೆ ಎಂಬ ವಿಷಯದಲ್ಲಿ ಹೀಗಲ್ಲ, ನುಡಿ ಎನ್ನಬಹುದು.

ಹಾಗೆಯೇ, ಧನ ಎಂಬುದಕ್ಕೆ ಹಣ ಎಂದು ಸಮಾನಾರ್ಥಕ ಪದಗಳನ್ನು ಉಪಯೋಗಿಸೋಣ, ಬೇಡ ಎಂದವರಾರು? ಅದನ್ನು ಬಿಟ್ಟು "ಧನ"ವನ್ನು "ದನ" ಮಾಡಬಾರದು ಎಂಬುದು ನನ್ನ ಮಾತಿನ ತಿರುಳು.

sunaath said...

joey,
ಸಭ್ಯತೆಯ ಮಿತಿಯೊಳಗೆ ಚರ್ಚಿಸೋಣ ಎನ್ನುವ ನಿಮ್ಮ ಸಲಹೆಗೆ ಧನ್ಯವಾದಗಳು.

ಈಗ ನಮ್ಮ ಚರ್ಚೆ ಮಹಾಪ್ರಾಣಗಳನ್ನು ಕನ್ನಡದ ಅಕ್ಷರಮಾಲೆಯಲ್ಲಿ ಇಟ್ಟುಕೊಳ್ಳಬೇಕೊ ಅಥವಾ ತೆಗೆದುಹಾಕಬೇಕೊ ಎನ್ನುವ ಅಂಶದ ಮೇಲೆ ಕೇಂದ್ರಿತವಾಗಿದೆ.

ಮಾಯ್ಸ ಅವರು ಮಹಾಪ್ರಾಣಗಳನ್ನು ತೆಗೆದು ಹಾಕಲು ಕೊಡುವ
ಕಾರಣವೆಂದರೆ, ಮಹಾಪ್ರಾಣಗಳು ಮೂಲಕನ್ನಡದಲ್ಲಿ ಇಲ್ಲ ಹಾಗು ಸೋಲಿಗರು, ಜೇನುಕುರುಬರು ಮೊದಲಾದ ಮೂಲವರ್ಗದವರ ಸೊಲ್ಲಿನಲ್ಲಿ ಮಹಾಪ್ರಾಣಗಳು ಇಲ್ಲ etc.

ಮೂಲಕನ್ನಡದಲ್ಲಿ ಇರಲಿಕ್ಕಿಲ್ಲ, ಆದರೆ ಕನ್ನಡ ಬೆಳೆದಿದೆ, ಬೆಳೆಯುತ್ತಲೆ ಇದೆ; ಮಹಾಪ್ರಾಣಗಳನ್ನು ಅಕ್ಷರಮಾಲೆಯಿಂದ ಕಿತ್ತೆಸೆಯುವದರಿಂದ ನಾವು ತಪ್ಪು ಮಾಡುತ್ತೇವೆ; ನಮ್ಮ ಈ ಹುಚ್ಚು ಕೃತ್ಯಕ್ಕಾಗಿ ನಮ್ಮ ಮುಂದಿನ ಪೀಳಿಗೆಯವರುsuffer
ಆಗುತ್ತಾರೆ. ಹಾಗೆ ಮಾಡುವ ಹಕ್ಕು ನಮಗಿಲ್ಲ ಎಂದು ನನ್ನ ಅನಿಸಿಕೆ. ಎರಡನೆಯದಾಗಿ ಒಂದು ಕಾಲದಲ್ಲಿ ಮೂಲಕನ್ನಡಿಗರು ಮೈಗೆ ತೊಪ್ಪಲನ್ನು ಸುತ್ತಿಕೊಳ್ಳುತ್ತಿದ್ದರು ಅಥವಾ ಹತ್ತಿ ಬಟ್ಟೆಯೆ ನಮಗೆ ಸಹಜವಾದದ್ದು ಎನ್ನುವ ತರ್ಕದ ಮೂಲಕ ಈಗ ನಾವು ಧರಿಸುತ್ತಿರುವ ಪಾಲಿಸ್ಟರ ಬಟ್ಟೆಗಳನ್ನು ಕಿತ್ತೆಸೆಯಬಹುದೆ? ಈಗಲೂ ಸಹ ಸೋಲಿಗರು ಅಥವಾ ಜೇನುಕುರುಬರು ಸಾದಾ ಬಟ್ಟೆಯನ್ನೇ ಧರಿಸುತ್ತಿರಬಹುದು? ಹಾಗಂತ ಎಲ್ಲರೂ ಹಾಗೆ ಮಾಡಬಹುದೆ?

ಅಲ್ಲದೆ, ಅನೇಕ ಕನ್ನಡಿಗರು ಮಹಾಪ್ರಾಣಗಳನ್ನು ಸರಿಯಾಗಿ ಉಚ್ಚರಿಸುತ್ತಾರೆ. ಅದು ಕೇವಲ ಅವರ ಕಲ್ಪನೆ ಎಂದು ಶಂಕರ ಭಟ್ಟರು ತಮ್ಮ ಪುಸ್ತಕ (ಕನ್ನಡ ಬರಹವನ್ನು ಸರಿಪಡಿಸೋಣ)ದಲ್ಲಿ ಬರೆದಿದ್ದಾರೆ. ಇದು absolutely presumptive ಹೇಳಿಕೆ. ಹಳೆಯ ಮೈಸೂರು ಪ್ರದೇಶದಲ್ಲಿ ಹೇಗೊ ನನಗೆ ಗೊತ್ತಿಲ್ಲ, ಅದರೆ ಉತ್ತರ ಕರ್ನಾಟಕದಲ್ಲಿ ಮಹಾಪ್ರಾಣವು very much in force. ನಮ್ಮ ಮಾಜಿ ಮಂತ್ರಿ ಖರ್ಗೆ ಸಾಹೇಬರ ಬಳಿಗೆ ಹೋಗಿ
ಅವರನ್ನು 'ಕರ್ರಗೆ ಸಾಹೆಬರೆ'ಎಂದು ಕರೆದು ನೋಡಿರಿ. ಅಥವಾ
ರಾಠೋಡ ಸಾಹೇಬರಿಗೆ ರಾಟೋಡ ಎಂದು ಕರೆದು ನೋಡಿರಿ. ಅವರ ಪ್ರತಿಕ್ರಿಯೆಯು ಮಹಾಪ್ರಾಣಾತ್ಮಕವಾಗಿ ಇರುವದರಲ್ಲಿ ಸಂಶಯವಿಲ್ಲ.

ಒಟ್ಟಿನಲ್ಲಿ ಏನು? ಮಹಾಪ್ರಾಣವು ಕರ್ನಾಟಕದಲ್ಲಿ ಇದೆ. ಅದರ ಸಂಜ್ಞೆಗಳನ್ನು ತೆಗೆಯುವ ಮೊದಲು ಅದರ ಇರುವಿಕೆಯ ಬಗೆಗೆ realistic statistical study ಮಾಡಿರಿ.

ಶಂಕರ ಭಟ್ಟರು ದೊಡ್ಡ ವಿದ್ವಾಂಸರು ಸರಿ, ಆದರೆ verify
ಮಾಡದೆ presumptive ನಿರ್ಣಯಗಳನ್ನು ಬರೆಯಬಾರದು.

Unknown said...

ಉಪಯೋಗಿಸಿದ "ಭ್ರಮೆ" ಪದದ ಬದಲು ಬೆಮೆ, ಮೆಳ್ಪಡೆ ಎಂದೆಲ್ಲಾ ಉಪಯೋಗಿಸಿದರೆ "ಮೇಲ್ವರ್ಗ" "ಕೆಳವರ್ಗ" ಎರಡಕ್ಕೂ ತಿಳಿಯದೆ ಅನರ್ಥವಾಗುತ್ತದೆ.....
ಅಯ್ಯೋ ಅರೀಶಪ್ಪ ಒಸಿ ಅಚ್ಚಕನ್ನಡದ ಒಳಹೊಕ್ಕು ನೋಡಪ್ಪ. ನಿನಗೆ ಗೊತ್ತಿರುವುದು ಸಕ್ಕದ ಭ್ರಮೆಗೆ ಬೆಮೆ ಅಂತ ಅಷ್ಟೆಯ.
ಇಲ್ನೋಡಪ ಒಸಿ ಸುಮ್ಮನೆ ಸಕ್ಕವೇ ದೊಡ್ಡದು ಅನ್ನೋ ತಳವೆಳಗಿನಲ್ಲಿ ಕೊಳೆವ ಜೊಂಡಾಗಿ ಬಾವಿ ಕಪ್ಪೆ ಆಗ್ತಿಯಲ್ಲ. ಏಸೊಂದು ಒರೆ ಕನ್ನಡದಲ್ಲಿ ಇದ್ದಾವೆ ರೆಪ್ಪೆ ಅರಳಿಸಿ ನೋಡಪ್ಪ.
ಭ್ರಮೆ---> ತಳವೆಳಗು, ವಿಡಾಯ, ವಿಕಳ, ಮೆಳ್ಪಡೆ, ಮರವೆ, ಬೊಂಕು, ಬಿಸಿಲುಗುದುರೆ, ಪೊರೆ. ಈಸು ಸಾಕಲ್ಲವೆ?
ಇವೆಲ್ಲ ಭ್ರಮೆಗೆ ಬದಲಾಗಿ ನಮ್ಮ ಕನ್ನಡದ ಒಡಲಲ್ಲಿ ಅಡಗಿರೋ ಒರೆ ನೋಡಪ್ಪ.
ಇವನ್ನು ಬಳಸಿದರೆ ಈ ಒರೆಗಳು ಕೊಡುವ ತಿಳುವಳಿಕೆ ಭ್ರಮೆ ಅಂತನೇ ಕಣೋ. ಬಳಸಿ ನೋಡಪ್ಪ. ಬಳಸದಲೇ ಅದಾಗುತ್ತೆ ಇದಾಗುತ್ತೆ ಆಗಾಗುತ್ತೆ ಈಗಾಗುತ್ತೆ ಅಂದರೆ ಯ್ಯಾಂಗಪ್ಪ. ಕೊನೆಯಗೆ ಅಚ್ಚ ಕನ್ನಡ ಅನ್ನೋ ನನ್ನಂತರಿಗೆ, ಶಂಕ್ರಣ್ಣನಿಗೆ ತಿಳಿದೇ ತಿಳಿಯುತ್ತೆ. ನಿಮ್ಮ "ಮೇಲ್ವರ್ಗ" "ಕೆಳವರ್ಗ" ಎರಡಕ್ಕೂ ತಿಳಿಯದೆ ಅನರ್ಥವಾಗುತ್ತದೆ. ಈ ಮಾತು ಸರಿ ಐತೇನಪ್ಪ? ಸಂಕ್ರಣ್ಣನ ಮೇಲ್ವರ್ಗ ಅಂದ್ರೆ ಎರ್ರಾಬಿರಿ ಸಕ್ಕದ ಒರೆ ಬಳಸೋರೋಪ್ಪ. ನೀನು ತಿಳಿಕೊಂಡಿರೊ ಮೇಲ್ವರ್ಗ ಕೆಳವರ್ಗ ಜಾತಿದೇನೋ ಅನಿಸುತ್ತೆ ನನಗ್ಯಾಕೋ. ಅಂಗಿಲ್ಲ ಅಂದ್ರೆ ಬಿಡು ವೈನಾತು..ತಪ್ಪು ತಿಳಿಬ್ಯಾಡಪ ಇಸಾರ ಮಾಡು... ಅಚ್ಚ ಕನ್ನಡ ಬಳಸಿದರೆ "ಮೇಲ್ವರ್ಗ" "ಕೆಳವರ್ಗ"ಕ್ಕೆ ಯಾಕೆ ಅನರ್ಥವಾಗುತ್ತೋ ನನಗಂತು ತಿಳಿವಲ್ದಪ್ಪ.
ನೀನು ಕನ್ನಡದ ಕಂದ ಅಲ್ಲೇನು? ಮತ್ತೇ ಕನ್ನಡ ಬಳಸೋಕೆ ಯಾಕೆ ನಿಕ್ಕಾರದಲ್ಲಿ ಉಚ್ಚೆ ಒಯ್ಯಕೊಂಡೋರ್ತರ ಆಡ್ತಿಯ? ಕನ್ನಡದ ಕಂದರಾಗಿ ಕನ್ನಡನ ಉಳಿಸಿಕೊಳ್ಳ ಬೇಕುತಾನೆ? ನಾವು ಉಳಿಸಿಕೊಳ್ಲಿಲ್ಲ ಅಂದ್ರೆ ಮರಾಟಿ, ತಮಿಳು, ತೆಲಿಗಿನೋರು ಬಂದು ಉಳ್ತಾರೇನು? ಸಕ್ಕದ "ಭ್ರಮೆ" ಒರೆಯ ಬದಲು -----> ತಳವೆಳಗು, ವಿಡಾಯ, ವಿಕಳ, ಮೆಳ್ಪಡೆ, ಮರವೆ, ಬೊಂಕು, ಬಿಸಿಲುಗುದುರೆ, ಪೊರೆ ಬಳಸುತ ನೀನು ಹಿಗ್ಗಿ ಈರೆಕಾಯಿಯಾಗಿ ನಲಿಬೇಕೋ.
ಕೀಳರಿಮೆ ಇರಬಾರ್ದಪ್ಪ. ನಮ್ಮಲ್ಲಿ ಸರಿಯಾದ ಒರೆ ಇಲ್ಲ ಅಂದರೆ ಯ್ಯಾಂಗಪ್ಪ ಸಂದ ಇರುತ್ತೆ. ನಮ್ಮಲ್ಲಿ ಈಗ ಬಳಸೋ ಎಲ್ಲಾ ಸಕ್ಕದ ಪದಕ್ಕೂ ಕನ್ನಡದ ಒರೆ ಇದಾವೊ. ಇಲ್ಲಾಂದ್ರೆ ಅರ್ರಿಂದ ಇಸ್ಕೋಳೋಣ. ನಮ್ಮದು ಮೊದಲು ಉಳಿಸ್ಕೋಳ್ಳೋಣ ಆಮೇಲೆ ಬೇರೇರ್ ಬಗ್ಗೆ ನೋಡೋಣಪ್ಪ. ಅದು ಬಿಟ್ಟು ದೆವ್ವ ಮೈಮೇಲೆ ಬಂದೋರ ತರ ಏನೇನೋ ಮಾತಾಡ್ತಿಯಲ್ಲಪ್ಪ. ಜಪಾನಿನ ಅಕ್ಕರಗಳ ಬಗ್ಗೆ ಸುಮ್ಸುಮ್ನೆ ಏನೇನೋ ಮಾತಾಡ್ತಿಯಲ್ಲ. ತಿಳ್ಕೋಂಡು ಮಾತಾಡಕಪ್ಪ. ಬಾಯಿಗೆ ಬಂದಂತೆ ಮಾತಾಡಿದ್ರೆ ನಿನ್ನಂಗೂ ಬೇರೇರು ಮಾತ್ನಾಡ್ ಬೇಕಾಗುತ್ತೆ ನೋಡು.

"ಅಚ್ಚಕನ್ನಡ" ನನಗೆ ಅದೊಂದೇ ದಿಟ..

Unknown said...

ದಿಟವಾಗಿ ಹೇಳಿ ಶಂಕರಣ್ಣನ ಹೊತ್ತಿಗೆ 'ಕನ್ನಡ ಬರಹವನ್ನು ಸರಿಪಡಿಸೋಣ' ನೀವು ಓದಿದ್ದೀರ? ಓದಿದ್ದರೆ ನೀವು ಈ ರೀತಿ ಆಡ್ತಿರಲಿಲ್ಲ. ಇಲ್ಲವೆ ಓದಿದ್ದರೂ ನಿಮ್ಮ ತಲೆಯಲ್ಲಿ ಸೇರಿರೋ ಸಕ್ಕದ ಬೂತ ಅವರ ಕನ್ನಡ ಪರವಾದವನ್ನು ತಿಳಿಯದಂತೆ ಮಾಡಿದೆ. ನೀವು ಇಲ್ಲಿ ವಾದಕ್ಕೆ ತೆಗೆದುಕೊಂಡಿರೋ ಎಲ್ಲಾ ವಿಚಾರವನ್ನೂ ಅವರು ತರ್ಕಬದ್ದವಾಗಿ ವಿವರಿಸಿದ್ದಾರೆ. ಜೊತೆಗೆ ನಿಮ್ಮಂತ ಬಾಸಾ ಪಂಡಿತರ ಬಾಯಿಬಡುಕುತನದ ಬಗ್ಗೆ ಮೊದಲೇ ಹೇಳಿಬಿಟ್ಟಿದ್ದಾರೆ. ಅವರು ತಮ್ಮ ಹೊತ್ತಿಗೆಯಲ್ಲಿ ಕನ್ನಡದ ಪರವಾಗಿ ಬರೆದಿರುವುದಲ್ಲಿ ಎಲ್ಲಿಯೂ ತೊಡರಿಲ್ಲ. ಪುಂಕಾನು ಪುಂಕವಾಗಿ ಎಲ್ಲವನ್ನೂ ಬಿಡಿಸಿ ಬಿಡಿಸಿ ಹೇಳಿದ್ದಾರೆ. ಕುರುಡುಒಲವು ಈಗೆ ಇರುತ್ತೆ ಬಿಡಿ. ಒಡೆದ ಸೋರೆ ಈಗೆ ಬೊಕ್, ಬೊಕ್ ಅಂತ ಹೊಡ್ಕೊಂತಿರುತ್ತೆ.
ಕನ್ನಾಡ ಕನ್ನಡಿಗರೆ ಶಂಕರ ಬಟ್ಟರ " ಕನ್ನಡ ಬರಹ ಸರಿಪಡಿಸೋಣ" ಹೊತ್ತಿಗೆಯನ್ನು ತಪ್ಪದೇ ಓದಿ. ಕನ್ನಡವನ್ನು ಸಕ್ಕದ ಬಲೆಯಿಂದ ಬಿಡಿಸೋಣ ಬನ್ನಿ.

Unknown said...
This comment has been removed by the author.
Anonymous said...

@ ಹರೀಶ..........
"ಭಾಷೆ" ಎಂದು ಸರಿಯಾಗಿ ಉಪಯೋಗಿಸಲಿ. "ಬಾಶೆ" ಎಂದು ಹೇಳಿ ಅದನ್ನು ಹಾಳುಗೆಡಹುವುದು ಬೇಡ.

ಒಂದು ದಿಟ ಮಾತು ಹೇಳುತ್ತೇನೆ ಕೇಳು. ಒಪ್ಪಿಕೊಳ್ಳುವ ಎದೆಗಾರಿಕೆ ಇರಲಿ. ಕನ್ನಾಡು ಎಶ್ಟುಮಂದಿ "ಭಾಷೆ" ಎಂದು ಉಲಿಯುತ್ತಾರೆ ಲೆಕ್ಕಹಾಕು. ಸಕ್ಕ ಬಲ್ಲವರು ಅಂದರೆ ತತಾಕತಿತ ಪುರೋಹಿತರು, ಅರ್ಚಕರು, ಮತ್ತು ಅವರ ಒಡನಾಟಕ್ಕೆ ಬಂದ ಕೆಲವೇ ಜನ ಮಾತ್ರ "ಭಾಷೆ" ಎಂದು ಉಲಿಯುತ್ತಾರೆ ಅದೂ ಕೂಡ ಸರಿಯಾಗಿ ಅಲ್ಲ ಅನ್ನುವುದು ನೆನಪಿರಲಿ. ಮಿಕ್ಕಿದವರು ಅಂದರೆ ಕನ್ನಾಡಿನ ನೂರಕ್ಕೆ 90ಕ್ಕಿಂತ ಹೆಚ್ಚು ಜನ "ಬಾಸೆ", ಇಲ್ಲ "ಬಾಶೆ" ಅಂತನೇ ಉಲಿಯುವುದು.
ನಿನಗೆ ಕೇಳಬೇಕೆಂದರೆ ಕನ್ನಾಡಿನ ಯಾವುದೇ ಹಳ್ಳಿಗೆ ಹೋಗಿ ಸಕ್ಕದ ಒಡನಾಟ ಇಲ್ಲದವರತ್ತಿರ ಮಾತಡಿ ನೋಡಿ. ಮಾತು ಹೇಗೆ ಉಲಿಯುತ್ತಾರೋ ಹಾಗೆ ಬರಹ ಬದಲಾಗ ಬೇಕು. ಬರಹಕ್ಕೆ ತಕ್ಕಂತೆ ಮಾತಿರಬೇಕೆನ್ನುವುದು ಗೊಡ್ಡುತನ ಅಶ್ಟೆ. ಹಾಗೇನಾದರು ಆದರೆ ಆ ಬಾಸೆ ಚಟ್ಟ ಏರಿದಂತೆ. ಇದಕ್ಕೆ ಸಾಕ್ಶಿ ಸಕ್ಕ. ನಮ್ಮ ಬಾಶೆ ಒಳನೆಗಳ್ಚು (ರಚನೆ) ಹೇಗಿದೆಯೋ ಹಾಗೆ ನಮ್ಮ ಪದಗಳು ಇರಬೇಕು. ಆ ಒಳನೆಗಳ್ಚು ಆಡುವ ಮಾತಿನಿಂದ ಬಂದಿರುತ್ತದೆ. ಅಂತ ನುಡಿಯಲ್ಲಿ ಗೊಂದಲಗಳುಂಟಾಗದೆ ಆ ನುಡಿ ಬದುಕಿರುತ್ತವೆ. ಯಾವ ನುಡಿಯು ಮೇಲಲ್ಲ ಯಾವುದು ಕೀಳಲ್ಲ. ಸಕ್ಕ ಹೆಚ್ಚು ಎಂಬ ನಿಮ್ಮ ಕೀಳರಿಮೆ, ಇಲ್ಲ ಸಕ್ಕದ ಮೇಲಿರುವ ಕುರುಡುಒಲವು ನಿಮ್ಮ ಈ ನಿಲುವಿಗೆ ಕಾರಣ.

Anonymous said...

@@@@@ ಸುನಾತ ಮಾಸ್ತರೇ,

ದಾರವಾಡದ ಜನಕ್ಕೆ "ಮೇಷ್ಟ್ರೇ" ಅನ್ನೋಕೆ ಬರದಿದದ್ದಕ್ಕನೆ "ಮಾಸ್ತರೇ" ಅನ್ನೋದು. "ಸಾರ್" ಅನ್ನೋದಕ್ಕೆ ಬದಲು "ಸರೇ" ಇಲ್ಲ "ಸಾರು" ಅನ್ನೋದು. "ಹೊರಳಿ(ಮರಳಿ) ಬರೋ ನೀನು" ಅನ್ನೋ ಮಾತು "ಹೊಳ್ಳಿ ಬಾ ನೀ" ಆಗಿರೋದು. ಅದೇ ನುಡಿಯು ಬದುಕಿ ಬಾಳುತ್ತಿರುವುದನ್ನು, ಬೆಳೆಯುತ್ತಿರುವುದನ್ನು ತೋರಿಸುತ್ತೆ. ಈ ಬದಲಾವಣೆ ಕನ್ನಡಕ್ಕೆ ಸೀಮಿತವಾಗಿರಬೇಕನ್ರಿ ಸಾರೇ.. ಎರಡು ಸಾವಿರ ಏಡಿ(ವರ್ಷ)ಗಿಂತಲೂ ವಯಸ್ಸಾಗಿರೋ ಸಕ್ಕವನ್ನು ಇನ್ನೂ ಬದಲಾಗಲಿಕ್ಕೆ ಬಿಡಲ್ಲ ಅಂತಿರಲ್ಲ ನಿಮ್ಮ ನಿಲುವು ತಪ್ಪಿಲ್ಲೇದ್ರಿ? ಇಂತ ಕೆಟ್ ಗೊಡ್ಡುತನಕ್ಕೆ ಸಿಕ್ಕೇ ನೋಡು ಸಕ್ಕ, ಜನರ ಬಾಯಿಂದ ದೂರಾಗಿದ್ದು. ಕಣ್ಣು ಬಿಟ್ಟು ಲೋಕಾನ ನೋಡ್ರಿ. ಬಾವಿಯಲ್ಲಿ ಬಿದ್ದು ಒದ್ದಾಡಬೇಡ್ರಿ. ಅದನ್ನೇ ಸಂಕ್ರಣ್ಣ ತಮ್ಮ "ಕನ್ನಡ ಬರಹ ಬದಲಾಹಿಸೋಣ" ಹೊತ್ತಿಗೆಯಲ್ಲಿ ಬಿಡಿಸಿ ಬಿಡಿಸಿ ಹೇಳ್ಯಾರೆ ನೋಡ್ರಿ. ಮಾತಿಗೂ ಬರಹಕ್ಕೂ ಬಾಳ ಯತ್ಯಾಸ ಇರಬಾರದು ಅಂತ. ಅಂಗೇನಾದ್ರು ಆತಂದ್ರೆ ಸಕ್ಕದ ಗನೀನೂ ಕನ್ನಡಕ್ಕೆ ಆಗುತ್ತೆ ಅಂತ. ನೊಡಿ ಇನ್ನೋಮ್ಮೆ ಹೊತ್ತಿಗೆ ಓದಿ ಇಚಾರ ಮಾಡಿ. ಓದಕೇ ಆಗಲ್ಲ ಇಚಾರನೇ ಮಾಡಲ್ಲ ಅಂದ್ರೆ ಸಕ್ಕದ ಚರಣ ಸೇವೆ ಮಾಡುತ್ತ ಕೂತಿರ್ರಿ. ಅಟೊತ್ತಿಗೆ ಕನ್ನಡ ಆಟು ಕುಡಿದೋಗಿರುತ್ತೆ.ನಿಂತ ನೀರುಗೀರು ಅಂತ ಮಾತಾಡಿರಿ ಅಲ್ಲ ಸಕ್ಕದ ಒರೆ ಮಾತಿಗೆ ತಕ್ಕಹಾಗೆ ಬದಲಾಹಿಸೋ ಮಾತಾಡಿದ್ರೆ ಇಟೊಂದು ರಣ ರಂಪ ಯಾಕೆ ಮಡ್ತಿರಿ? ನಿಮ್ಮ ಮಾತಲ್ಲಿ ನಿಯತ್ತು ಐತೇನು? ಸಕ್ಕದ ನುಡಿ ಬದಲಾಗದೇ ಇರಲಿ ಈ ಮಾತೇ ನಿಂತ ನೀರನ್ನು ತೋರಿಸುತ್ತೆ. ಮತ್ತೆ ಸಿಗೋಣ ಮಾಸ್ತರೇ. "ಸರ್ವೇ ಜನೋ ಸುಕಿನೋ ಭವಂತು" ಸಕ್ಕ ಕಿವಿಗೆ ಬಿತ್ತಲ್ಲ ನಲಿವಾತೇನ್ ನಿಮಗೆ ಈಗ..ಓಂ.. ಶಾಂತಿ ಶಾಂತಿ ಶಾಂತಿ.... ಸಕ್ಕ ನಮಗೂ ಬರುತ್ತೆ ಹೂಂ....."ಎಲ್ಲರಿಗೂ ಲೇಸಾಗಲಿ" ಇದು ನೋಡು ಕನ್ನಡ.ಸರ್ವೇ ಜನೋ ಸುಕಿನೋ ಭವಂತು".."ಎಲ್ಲರಿಗೂ ಲೇಸಾಗಲಿ" ಎರಡು ಮಾತಿಗೂ ಇರುವ ತಿಳಿವು ಒಂದೇ ನೊಡ್ರಿಯಪ್ಪ......"ಎಲ್ಲರಿಗೂ ಲೇಸಾಗಲಿ" ಇದನ್ನ ನಮ್ಮ ಕನ್ನಡ ಜನ ಸಲೀಸಾಗಿ ಉಲಿತಾರೆ ಈ ಮಾತು ದಿಟ ಐತಿಲ್ಲ ಮಾಸ್ತರೇ.....ನನ್ನಿ
ಕನ್ನಡವೇ ಎನ್ನ ಬದುಕು.

Anantha Krishna said...

ಹೞಗನ್ನಡದಲ್ಲಿ ಬೞಕೆಯಾಗುತ್ತಿದ್ದ ರ ಮತ್ತು ಱಕಾರದ ಶಬ್ದಗಳಲ್ಲಿ ಅರ್ಥವ್ಯತ್ಯಾಸ ಬಹಳವೇ ಇವೆ.
ಉದಾಹರಣೆಗೆ ಮುರಿ=ಬಗ್ಗು, ಬಾಗು, ಬಗ್ಗಿಸು
ಮೈಮುರಿದು ದುಡಿಯಬೇಕು
ಮುಱಿ=ತುಂಡಾಗು, ಬಿಲ್ಲು ಮುರಿಯುವಾಗ(ಬಗ್ಗಿಸುವಾಗ) ಮುಱಿದುಹೋಯ್ತು=ತುಂಡಾಯ್ತು (ಮುಱಿ=ತುಂಡಾಗು)
ರಸವನ್ನು ಅರಿದು(ಅರೆದು) ಕುಡಿ. ಅರಿ=ಚಚ್ಚು, ಒತ್ತು, ಹೊಡೆ
ಚೆನ್ನಾಗಿ ಅಱಿತು ಮಾತಾಡು ಅಱಿ=ತಿಳಿ
ಹಾಗೆಯೆ ಹೊೞೆಯಲ್ಲಿ ಬಾಳೆ ಸಿಗುತ್ತದೆ. (ಬಾಳೆ=ಒಂದು ಜಾತಿ ಮೀನು)
ಬಾೞೆಹಣ್ಣು ಸಿಹಿಯಾಗಿರುತ್ತದೆ.
ಬಾೞು=ಬದುಕು, ಬಾಳ್=ಕತ್ತಿ.

Chekkere Blog said...

ಶಂಕರ ಭಟ್ಟರು ಕನ್ನಡ ಭಾಷೆಯ ರಚನೆ ಮತ್ತು ಬಳಕೆಯ ಬಗ್ಗೆ ಹೇಳುತ್ತಿರುವ ವಿಚಾರಗಳನ್ನು ನಾವು ಚೆನ್ನಾಗಿ ತಿಳಿದುಕೊಳ್ಳಬೇಕಾದರೆ , ಆಡು ಭಾಷೆ ಮತ್ತು ಬರಹದ ಭಾಷೆಯ ರಾಚನಿಕ ಲಕ್ಷಣಗಳ ಬಗ್ಗೆ ಸ್ವಲ್ಪ ಮಟ್ಟಿನ ಮಾಹಿತಿಯನ್ನಾದರೂ ತಿಳಿದಿರಲೇಬೇಕು . ಏಕೆಂದರೆ ಭಾಷೆಯ ಬಗ್ಗೆ ಭಾವನಾತ್ಮಕವಾಗಿ ಪ್ರತಿಕ್ರಿಯಿಸುವುದು ಒಂದು ಬಗೆಯಾದರೆ , ವೈಜ್ಞಾನಿಕವಾಗಿ ವಿಶ್ಲೇಷಣೆ ಮಾಡುವುದು ಮತ್ತೊಂದು ಬಗೆಯಾಗುತ್ತದೆ . ಇಲ್ಲಿ ಬಂದಿರುವ ಬಹುತೇಕ ಪ್ರತಿಕ್ರಿಯೆಗಳು ಭಾವನಾತ್ಮಕ ನೆಲೆಯಲ್ಲಿವೆ . ಭಾಷಾವಿಜ್ಞಾನದಲ್ಲಿ ನುಡಿ ಸಾಮಗ್ರಿಗಳಾದ " ಮಾತಿನ ಧ್ವನಿ- ಪದ -ಪ್ರತ್ಯಯ - ವಾಕ್ಯ - ಅರ್ಥ "ಗಳ ಬಗ್ಗೆ ಇರುವ ವಿಚಾರಗಳನ್ನು ನಾವೆಲ್ಲರೂ ಮೊದಲು ಚೆನ್ನಾಗಿ ತಿಳಿದುಕೊಳ್ಳಬೇಕಾದ ಅಗತ್ಯವಿದೆ . ಸಿ.ಪಿ .ನಾಗರಾಜ , ಬೆಂಗಳೂರು.

KANNADIGA JAI said...

KANNADAKKE BEKIRODU SARALA GANNADA SAMSKRUTHA KANNADA BEDA, NIVU THILISIRUVA PADAGALU KANNADADINDA TAMILIGE HODA PADAGALI

sunaath said...

KANNADIGA JAI, ಧನ್ಯವಾದಗಳು.